Connect with us

ದಿನದ ಸುದ್ದಿ

ಕೆಲವು ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ‘ವಿದ್ಯಾರ್ಥಿ ಪಾಸ್’ ಗಳಿಗೆ ಮಾನ್ಯತೆ ಇಲ್ಲವೆ..?

Published

on

ಸುದ್ದಿದಿನ, ವಿಜಯಪುರ: ಇಂಡಿ ತಾ‌ಲ್ಲೂಕಿನ ಹೀರೆರೂಗಿ, ಬೊಳೆಗಾವಂ, ತಡವ್ಲಗಾ, ಗುಂಡುತಾಂಡಾ, ಅಥರ್ಗಾ, ನಾಗಠಾಣ, ಹಾಗೂ ಅಲೀಯಾಬಾದದ ವಿದ್ಯಾರ್ಥಿಗಳು, ಜೀಲ್ಲಾ ಮಟ್ಟದಲ್ಲಿ ಉನ್ನತ ಗುಣಮಟ್ಟದ ವಿದ್ಯಾಭ್ಯಾಸ ಮಾಡಬೇಕೆಂದು ಬಯಸುವವರು ಪ್ರತಿದಿನದ ರೊದನೆ ಅನುಭವಿಸುವಂತಾಗಿದೆ.

ನಮ್ಮ ಘನ ಸರ್ಕಾರ ವಿದ್ಯಾರ್ಥಿಗಳಿಗಾಗಿಯೆ ವಿಶೇಷ ಕ್ರಮಗಳನ್ನು ಜಾರಿಗೆಗೊಳ್ಳಿಸುತ್ತಿದೆ. ವಿದ್ಯಾರ್ಥಿಗಳು ದೂರದ ಶಾಲಾ-ಕಾಲೇಜಿಗೆ ಹೋಗಿ ತಮ್ಮ ಶಿಕ್ಷಣವನ್ನು ಮುಂದುವರಿಬೇಕೆಂದು ಕಡಿಮೆ ದರದಲ್ಲಿ ವಿದ್ಯಾರ್ಥಿಪಾಸ್ ಗಳನ್ನು ಕಲ್ಪಿಸ ಬೇಕೆಂದು ಆದೇಶ ನೀಡಿದೆ, ವಿದ್ಯಾರ್ಥಿ ಪಾಸ್ ಎಲ್ಲ ಬಸ್ ಗಳಲ್ಲಿ ಅನುಮತಿ ಇದೆ ಎಂದು ಹೇಳಿದೆ. ಆದರೆ ಇಂಡಿ ವಿಜಯಪುರ ಮಾರ್ಗವಾಗಿ ಸಂಚರಿಸುವ ಏಷ್ಟೊ ಬಸ್ಗಳಲ್ಲಿ ವಿದ್ಯಾರ್ಥಿ ಪಾಸ್ ಗಳಿಗೆ ಅನುಮತಿ ಇಲ್ಲ.

ಯಾಕೆಂದರೆ ಬಸ್ ಗಳಲ್ಲಿ ಭೀಮಾ ಸಾರಿಗೆ (ವಿದ್ಯಾರ್ಥಿಗಳ ಪಾಸಿಗೆ ಅನುಮತಿ ಇಲ್ಲ) ಎನ್ನುವ ನಾಮಫಲಕಗಳೆ ರಾರಾಜಿಸುತ್ತಿವೆ. ಇದರ ವಿಷಯವಾಗಿ ಬಸ್ ನಿರ್ವಾಹರನ್ನು ವಿಚಾರಿಸಿದರೆ ಕೇಲವರು ಎಲ್ಲಾ ಬಸ್ ಗಳಲ್ಲಿವು ವಿದ್ಯಾರ್ಥಿಪಾಸ್ ಗ‍ಳಿಗೆ ಅನುಮತಿ ಇವೆ ಅಂದರೆ, ಇನ್ನೂ ಕೇಲವರು ವ್ಯಂಗ್ಯವಾಗಿ ಮಾತನಾಡಿ, ಅಸಭ್ಯವಾಗಿ ವರ್ತಿಸುತ್ತಾರೆ, ಸ್ವತಃ ಚಕರ್ ಹೇಳಿರುವ ಹೇಳಿಕೆ ಇದು. ತೆರಿಗೆ ಕಟ್ಟಬೇಕು ಆದ ಕಾರಣ ಭೀಮಾ ಸಾರಿಗೆ ನಾಮ‍ಫಲಕಗಳನ್ನು ಹಾಕಿದ್ದೇವೆ ಅಂದರು.

ಅದಕ್ಕೆ ವಿದ್ಯಾರ್ಥಿಗಳು 103,ಮತ್ತು105 ಎರಡೆ ಬಸ್ ಗಳಿಗೆ ಮಾತ್ರ ಪಾಸ್ ಅನುಮತಿ ಇಲ್ಲ ಅಂತ ಗೋತ್ತು, ಆದರು ಬೇರೆ ಬಸ್ ಗಳಿಗೆ ಭೀಮಾ ಸಾರಿಗೆ ಎಂಬ ನಾಮಫಲಕಗಳು ಯಾಕೆ ಅಂತ ವಿದ್ಯಾರ್ಥಿಗಳು ಪ್ರಶ್ನೇ ಮಾಡಿದರೆ, ಅದಕ್ಕೆ ನೀವು ವಿದ್ಯಾರ್ಥಿಗಳು ಓದುವದನ್ನು ಮೋದಲು ಮಾಡಿ ಅದನ್ನು ಬಿಟ್ಟು ಬೇರೆ ಕೆಲಸ ಮಾಡ ಬೇಡಿ, ನಮ್ಮ ಕೆಲಸ ನಮಗೆ ತಿಳಿದಿದೆ ನೀವು ಹೇಳುವ ಅವಶ್ಯಕತೆ ಇಲ್ಲ ಎಂದು ವ್ಯಂಗ್ಯವಾಗಿ ಚಕರ್ ಮಾತನಾಡಿದರು.

ಚಕರ್ ಹೀಗೆ ಮಾತನಾಡಿದರು ಅಂತ ಕೇಂದ್ರ ಬಸ್ ನಿಲ್ದಾಣದ ಅಧೀಕಾರಿಯಾದ ಬಿಸ್ನಾಳರಿಗೆ ತಿಳಿಸಿದರೆ, ವಿದ್ಯಾರ್ಥಿ ಪಾಸ್ ಗಳು ಎಲ್ಲ ಬಸ್ ಗ‍ಳಿಗು ಅನುಮತಿ ಇದೆ, ಯಾರು ಅನುಮತಿ ಇಲ್ಲ ಅನ್ನುವರೋ ಅವರನ್ನು ಬಸ್ ನ ಜೋತೆಗೆ ಕರೆದುಕೊಂಡು ಹೋಗಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿರಿ ಎಂದು ಅವರು ಹೇಳುತ್ತಾರೆ. ದೂರು ದಾಖಲಿಸುವುದು ದೊಡ್ಡಸ್ಥೀಕೆ ಅಲ್ಲ. ಅದರಲ್ಲು ಹಳ್ಳಿಯ ಜನರು ಕೇಸು, ಕೋರ್ಟುಗಳಿಗೆಲ್ಲ ಭಯಪಡುತ್ತಾರೆ. ಆದ ಕಾರಣ ಯಾರು ಏನು ಹೇಳುತ್ತಿಲ್ಲ. ವಿದ್ಯಾರ್ಥಿಗಳು ಕೇಳಿದರೆ ವ್ಯಂಗ್ಯವಾಗಿ, ಅಸಬ್ಯವಾಗಿ ವರ್ತಿಸುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳು ಬೇಸತ್ತಿದ್ದಾರೆ.

ಪ್ರತಿ ದಿನವು 9ಗಂಟೆಗೆಲ್ಲ ಶಾಲಾ-ಕಾಲೇಜಿನಲ್ಲಿ ಇ‍ರಬೇಕು, ಇಲ್ಲವಾದರೆ ಶಾಲೆ-ಕಾಲೇಜುಗಳಲ್ಲಿ ಗುರುಗಳ ಕಡೆಯಿಂದ ಬೈಯಿಸಿಕೊಳ್ಳ ಬೇಕು, ಅವರು ಕೋಡುವ ಶಿಕ್ಷೆನಾ ಅನುಭವಿಸ ಬೇಕು.ಕೇಲವೊಂದು ದಿನ ಪರೀಕ್ಷೆಗಳು, ಶಾಲಾ-ಕಾಲೇಜುಗಳಲ್ಲಿ ಪ್ರಮುಖವಾದ ಕಾರ್ಯಕ್ರಮಗಳು, ಹಾಗೂ ವಿಶೇಷವಾದ ತರಗತಿಗಳು ಇರುತ್ತವೆ. ತಡವಾಗಿ ಹೋಗಬೇಕಾಗುತ್ತದೆ. ಹೀಗೆ ಮಾಡಿದರೆ ಅವುಗಳಿಂದ ಹಿಂದೆ ಉಳಿಯ ಬೇಕಾಗುತ್ತದೆ.

ಆದ ಕಾರಣ ನಮ್ಮ ವಿಜಯಪುರ ಜಿಲ್ಲೆಯ ಮಾನ್ಯ ಜೀಲ್ಲಾಧೀಕಾರಿಗಳು ವಿದ್ಯಾರ್ಥಿಗಳ ಮೇಲೆ ಪ್ರೀತಿ, ಕಾಳಜಿ, ಧಯೆ, ಕರುಣೆ ಇಟ್ಟು, ವಿದ್ಯಾರ್ಥಿಗಳಿಗೆ ತೋಂದರೆ, ಮೋಸ ಆಗದಂತೆ ಸರಿಯಾದ ರೀತಿಯಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳ ಬೇಕಾಗಿ ಕಳಕಳಿಯಿಂದ ಇಂಡಿ ತಾಲ್ಲೂಕು ಹಾಗೂ ಇಂಡಿ ತಾಲ್ಲೂಕಿನ ಹೀರೆರೂಗಿ, ಬೊಳೆಗಾವಂ, ತಡವ್ಲಗಾ, ಗುಂಡುತಾಂಡಾ, ಅಥರ್ಗಾ, ನಾಗಠಾಣ, ಹಾಗೂ ಅಲೀಯಾಬಾದ ಗ್ರಾಮದ ಮಾರ್ವಗವಾಗಿ ಸಂಚರಿಸುವ ಎಲ್ಲಾ ವಿದ್ಯಾರ್ಥಿಗಳು ಕೇಳಿಕೊಳ್ಳುತ್ತಿದ್ದಾರೆ.

ಹೇಳಿಕೆಗಳು

“ನಾನು ಅಥರ್ಗಾ ಗ್ರಾಮದ ವಿದ್ಯಾರ್ಥಿನಿ ನಾನು ಪಿ.ಯು.ಸಿಯಿಂದನು ಅಂದರೆ ಸತತವಾಗಿ 4ವರ್ಷಗಳಿಂದಾನು ಅಥರ್ಗಾ ವಿಜಯಪುರದ ಮಾರ್ಗವಾಗಿ ಸಂಚರಿಸುತ್ತಿದ್ದೆನೆ ಪ್ರತಿ ದಿನವು ಇದೆ ರೀತಿಯ ಗೋಳ್ಳಾಟ ನಡೆದಿದೆ. ಪ್ರತಿ ದಿನ ಬೆಳ್ಳಗೆ 6ರಿಂದ 7:30 ರ ವರೆಗೆ ಮಾತ್ರ ಬಿಡುವಿಲ್ಲದ ಹಾಗೆ ಭೀಮಾಸಾರಿಗೆ ನಾಮಫಲಕಗಳು ರಹಿತ ಬಸ್ ಗಳು ಸಂಚರಿಸುತ್ತವೆ. ಕೇಲವು ಬಾರಿ ಸ್ವಲ್ಪ ತಡಮಾಡಿದರೆ 7:30ರ ಬಸ್ ಹೋರಟು ಹೋಗಿರುತ್ತದೆ. ನಂತರ 7:30 ರಿಂ‍ದ 8:15 ವರೆಗೆ ಬಸ್ ಗಳಿಲ್ಲ. ಇದ್ದರು ಸತತವಾಗಿ 3 ಬಸ್ ಗಳು ಭೀಮಾ ಸಾರಿಗೆ ನಾಮಫಲಕಗಳೊಂದಿಗೆ ಬರುತ್ತವೆ. ಆದ್ದ ಕಾರಣ ಇದಕ್ಕೆ ಸಂಭಂದ ಪಟ್ಟ ಅಧೀಕಾರಿಗಳು ಅಥವಾ ಮಾನ್ಯ ಜೀಲ್ಲಾಧೀಕಾರಿಗಳು ಈ ಸಮಸ್ಯೆಯನ್ನು ಬಗೆ ಹರಿಸುತ್ತಾರೆ ಎಂದು ನಂಬಿದ್ದೇವೆ.

|ಅಥರ್ಗಾ ಗ್ರಾಮದ ನೊಂದ ವಿದ್ಯಾರ್ಥಿನಿ

“ನಮ್ಮ ಮಗಳು ಶಿಕ್ಷಣಕ್ಕಾಗಿ ಇಂಡಿಗೆ ಹೋಗುತ್ತಾಳೆ. ಕೇಲವು ದಿನಗಳ ಹಿಂದೆ ಶಾಲೆಯಿಂದ ಮರಳಿ ಬರುವಾಗ ಗೋತ್ತಿಲ್ಲದೆ ಭೀಮಾ ಸಾರಿಗೆ ಎರಿದ್ದಳು, ಎರುವಾಗ ಸುಮ್ಮನಿದ್ದ ನಿರ್ವಾಹಕ ರಸ್ತೆಯ ಮಧ್ಯದಲ್ಲಿ ಇಳಿಸಿದರು. ಆ ದಿನ ರಸ್ತೆ ಮಧ್ಯದಲ್ಲಿ ಇಳಿಸಿದಕ್ಕಾಗಿ ಮತ್ತೆ ನಡೆದು ಕೊಂ‍ಡು ಇಂಡಿಗೆ ಹೋಗಿ ಬೇರೆ ಬಸ್ ಹಿಡಿದು ಬರಬೇಕಾದರೆ ರಾತ್ರೆ 8:30 –ಕ್ಕೂ ಅಧಿಕ ಸಮಸವಾಗಿತ್ತು. ನಂತರ ಮರುದಿನ ಇಂಡಿ ಡೀಪುಗೆ ಹೋಗಿ ವಿಚಾರಣೆ ಮಾಡಿದೆವು. ಅಂದಿನಿಂದ ನಮ್ಮ ಮಗಳು ವಿದ್ಯಾರ್ಥಿಗಳ ನಿಲಯದಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.

  |ಅಥರ್ಗಾ ಗ್ರಾಮದ ಪೋಷಕರು

ಕಾಂಚನಾ. ಬಸವರಾಜ. ಪೂಜಾರಿ
ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ
ಪತ್ರಿಕೊಧ್ಯಮ ಮತ್ತು ಸಮೂಹ ಸಂವಹನ ವಿಭಾಗ
ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ತೊರವಿ, ವಿಜಯಪುರ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.

ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ

Published

on

ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. www.eci.gov.in/candidate-politicalparty ವೆಬ್‌ಸೈಟ್‌ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.

ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿತ್ತು.

ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್‌ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ

Published

on

ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.

ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.

ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ

ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ. ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು...

ದಿನದ ಸುದ್ದಿ1 day ago

ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ

ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. www.eci.gov.in/candidate-politicalparty...

ದಿನದ ಸುದ್ದಿ5 days ago

ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ

ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ...

ದಿನದ ಸುದ್ದಿ1 week ago

ದಾವಣಗೆರೆ ವಿವಿ ಘಟಿಕೋತ್ಸವ ; ಮೂವರಿಗೆ ಗೌರವ ಡಾಕ್ಟರೇಟ್

ಸುದ್ದಿದಿನ, ದಾವಣಗೆರೆ : ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಶಿವರಾಜ ಪಾಟೀಲ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ...

ದಿನದ ಸುದ್ದಿ1 week ago

ದಾವಣಗೆರೆ ವಿಶ್ವವಿದ್ಯಾಲಯ | 11ನೇ ಘಟಿಕೋತ್ಸವ :ದೀಪ್ತಿಗೆ ಐದು ; ಸಿಂಧುಬಾಯಿಗೆ ಮೂರು ಚಿನ್ನದ ಪದಕ

ಸುದ್ದಿದಿನ,ದಾವಣಗೆರೆ: ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು 14,357ವಿದ್ಯಾರ್ಥಿಗಳು ದಾವಣಗೆರೆ ವಿಶ್ವವಿದ್ಯಾಲಯದ ಹನ್ನೊಂದನೇ ಘಟಿಕೋತ್ಸವದಲ್ಲಿ ಪದವಿ ಪಡೆಯಲಿದ್ದಾರೆ. 45ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರೆ, 64 ಸಂಶೋಧನಾ ವಿದ್ಯಾರ್ಥಿಗಳು...

ದಿನದ ಸುದ್ದಿ1 week ago

ಪಿಎಚ್ ಡಿ ; ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವ ವಿದ್ಯಾನಿಲಯದಲ್ಲಿ ಪ್ರಸಕ್ತ ಸಾಲಿನ ಪಿಹೆಚ್‍ಡಿ ಸಂಶೋಧನಾ ಸ್ಥಾನಗಳಿಗೆ ಅರ್ಜಿಯನ್ನು ಸಲ್ಲಿಸಲು ಮಾ.19 ರವರೆಗೆ ಅವಧಿ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವ ವಿದ್ಯಾನಿಲಯದ ವೆಬ್‍ಸೈಟ್...

ದಿನದ ಸುದ್ದಿ1 week ago

ವಿಶ್ವ ಫ್ಲಂಬರ್ ದಿನಾಚರಣೆ

ಸುದ್ದಿದಿನ,ದಾವಣಗೆರೆ: ಜಿಲ್ಲಾ ಕಾವೇರಿ ಮಾತಾ ಪ್ಲಂಬರ್ಸ್ ಕಾರ್ಮಿಕರ ಸಂಘದಿಂದ ಸಂಘದ ಕಚೇರಿಯಲ್ಲಿ ವಿಶ್ವ ಪ್ಲಂಬರ್ ದಿನಾಚರಣೆ ಹಾಗೂ ವಿಶ್ವ ಜಲ ಸಂಗ್ರಹಣಾ ದಿನವನ್ನು ಸರಳವಾಗಿ ಆಚರಿಸಲಾಯಿತು. ಈ...

ದಿನದ ಸುದ್ದಿ1 week ago

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್

ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು...

ಕ್ರೀಡೆ1 week ago

ಲೋಕಸಭಾ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ : ಇತರೆ ಪ್ರಮುಖ ಸುದ್ದಿಗಳು

ಮದ್ಯಾಹ್ನದ ಸುದ್ದಿಮುಖ್ಯಾಂಶಗಳು ಮಹಿಳೆಯರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ನಾರಿಶಕ್ತಿಯ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ....

ದಿನದ ಸುದ್ದಿ1 week ago

ನರೇಂದ್ರ ಮೋದಿ ಹರಿಯಾಣದ ಗುರುಗ್ರಾಮಕ್ಕೆ ಭೇಟಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಸುದ್ದಿದಿನ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಗುರುಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ರಾಜ್ಯಗಳಿಗೆ ಸುಮಾರು ಒಂದು ಲಕ್ಷ...

Trending