Connect with us

ದಿನದ ಸುದ್ದಿ

ಮೇ 31 ರವರೆಗಿನ ಲಾಕ್‍ಡೌನ್ ಮಾರ್ಗಸೂಚಿಗಳು : ಮಿಸ್ ಮಾಡ್ದೆ ಓದಿ

Published

on

ಸುದ್ದಿದಿನ,ದಾವಣಗೆರೆ: ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಲಾಕ್‍ಡೌನ್ ಕುರಿತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಈ ಕೆಳಗಿನಂತೆ ಆದೇಶ ಹೊರಡಿಸಿದ್ದಾರೆ.

ಈ ಮಾರ್ಗಸೂಚಿಗಳನ್ನು ಎಲ್ಲಾ ಇಲಾಖೆಗಳಿಗೆ, ಪೊಲೀಸ್ ವರಿಷ್ಟಾಧಿಕಾರಿಗಳಿಗೆ, ಸ್ಥಳೀಯ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳು, ಆಯುಕ್ತರು, ಮಹಾನಗರಪಾಲಿಕೆ ಮತ್ತು ಇತರೆ ಇಲಾಖೆ ಮುಖ್ಯಸ್ಥರು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಈ ಮೂಲಕ ಆದೇಶಿಸಲಾಗಿದೆ. ಈ ಮಾರ್ಗಸೂಚಿಗಳು ಮೇ.31 ರವರೆಗೆ ಜಾರಿಯಲ್ಲಿರುತ್ತದೆ.

1. ಚಟುವಟಿಕೆಗಳು ನಿಷೇಧ

ವೈದ್ಯಕೀಯ ಸೇವೆಗಳು, ಏರ್ ಆಂಬುಲೆನ್ಸ್, ಭದ್ರತಾ ಉದ್ದೇಶಗಳು ಹಾಗೂ ಕೇಂದ್ರಿಯ ಗೃಹ ಮಂತ್ರಾಲಯದಿಂದ ಅನುಮತಿಸಲಾದ ಉದ್ದೇಶಗಳನ್ನು ಹೊರತುಪಡಿಸಿ, ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣ ವಿಮಾನಯಾನ.

ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ/ತರಬೇತಿ/ಕೋಚಿಂಗ್ ಸಂಸ್ಥೆಗಳು ಇತ್ಯಾದಿಗಳು ಮುಚ್ಚಲ್ಪಡುತ್ತವೆ. ಆನ್‍ಲೈನ್/ದೂರ ಶಿಕ್ಷಣ ಕಲಿಕೆಗೆ ಅನುಮತಿಸಲಾಗಿದೆ ಮತ್ತು ಪ್ರೋತ್ಸಾಹಿಸುವುದು.

ಆರೋಗ್ಯ/ಪೊಲೀಸ್/ಸರ್ಕಾರಿ ಅಧಿಕಾರಿಗಳು/ಆರೋಗ್ಯ ಪಾಲನೆ ಕಾರ್ಯಕರ್ತರು, ಪ್ರವಾಸಿಗರನ್ನು ಒಳಗೊಂಡಂತೆ, ಸಿಲುಕಿಕೊಂಡಿರುವ ವ್ಯಕ್ತಿಗಳು ತಂಗಿದ್ದ ಮನೆಗಳನ್ನು ಹೊರತುಪಡಿಸಿ ಕ್ವಾರಂಟೈನ್ ಸೌಲಭ್ಯಕ್ಕಾಗಿ, ಬಸ್ ಡಿಪೋ, ರೈಲ್ವೆ ಸ್ಟೇಷನ್ ಮತ್ತು ವಿಮಾನ ನಿಲ್ದಾಣಗಳಲ್ಲಿ ನಡೆಸುವ ಕ್ಯಾಂಟೀನ್‍ಗಳನ್ನು ಹೊರತುಪಡಿಸಿ, ಹೋಟೆಲ್‍ಗಳು/ರೆಸ್ಟೋರೆಂಟ್‍ಗಳು ಹಾಗೂ ಇತರೆ ಅತಿಥ್ಯ ಸೇವೆಗಳನ್ನು ನಿಷೇಧಿಸಿದೆ.

ಆಹಾರ ಪದಾರ್ಥಗಳು/ಪಾರ್ಸೆಲ್‍ಗಳನ್ನು ಮನೆ ವಿತರಣೆಗಾಗಿ ರೆಸ್ಟೋರೆಂಟ್‍ಗಳ ಅಡಿಗೆ ಮನೆಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ.

ಎಲ್ಲಾ ಸಿನಿಮಾ ಮಂದಿರಗಳು, ಶಾಪಿಂಗ್ ಮಾಲ್‍ಗಳು, ಜಿಮ್‍ಗಳು, ಈಜುಕೊಳಗಳು, ಮನರಂಜನಾ ಪಾರ್ಕ್‍ಗಳು, ಬಾರ್‍ಗಳು ಮತ್ತು ಆಡಿಟೋರಿಯಂಗಳು, ಸಮಾವೇಶ ಮಂದಿರಗಳು ಮತ್ತು ಇಂತಹ ಇತರೆ ಸ್ಥಳಗಳು, ಕ್ರೀಡಾ ಸಂಕೀರ್ಣಗಳು ಮತ್ತು ಸ್ಟೇಡಿಯಂಗಳನ್ನು ತೆರೆಯಲು ಅನುಮತಿಸಲಾಗಿದೆ. ಆದರೆ ಪ್ರೇಕ್ಷಕರಿಗೆ ಅನುಮತಿ ಇರುವುದಿಲ್ಲ.

ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳು, ಇತರೆ ಗುಂಪುಗೂಡುವಿಕೆ, ದೊಡ್ಡ ಸಭೆಗಳು, ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜನೀಯ ಸ್ಥಳಗಳನ್ನು ಸಾರ್ವಜನಕರಿಗೆ ಮುಚ್ಚತಕ್ಕದ್ದು, ಧಾರ್ಮಿಕ ಸಭೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.

2. ಕಂಟೈನ್‍ಮೆಂಟ್ ವಲಯಗಳನ್ನು ಹೊರತುಪಡಿಸಿ, ಅನುಮತಿ

ಪ್ರಯಾಣಿಕರ ವಾಹನಗಳು ಮತ್ತು ಬಸ್ಸುಗಳ ಅಂತರ-ರಾಜ್ಯ, ಚಲನೆ, ರಾಜ್ಯಗಳ ಪರಸ್ಪರ ಒಪ್ಪಿಗೆಯೊಂದಿಗೆ ಅನುಮತಿಸಿದೆ. ಕೆಎಸ್‍ಆರ್‍ಟಿಸಿ/ಎನ್‍ಇಕೆಆರ್‍ಟಿಸಿ/ಎನ್‍ಡಬ್ಲ್ಯೂಕೆಆರ್‍ಟಿಸಿ ಬಸ್‍ಗಳ ಅಂತರ ರಾಜ್ಯ ಸಂಚಾರಕ್ಕೆ ಮುಂಚಿತವಾಗಿ ಸಂಬಂಧಿಸಿದ ರಾಜ್ಯಗಳ ಒಪ್ಪಿಗೆಯನ್ನು ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಅನುಮತಿ ಪಡೆಯತಕ್ಕದ್ದು.

ರಾಜ್ಯಾದ್ಯಂತ ಪ್ರವಾಸಿ ವಾಹನಗಳು, ರೈಲುಗಳು ಮತ್ತು ಬಸ್‍ಗಳು ಒಳಗೊಂಡಂತೆ ಸಾರಿಗೆ ಬಸ್ ಸೇವೆ, ಮಫೋಸಿಲ್ ಬಸ್ ಸರ್ವೀಸ್ ಮತ್ತು ಖಾಸಗಿ ಬಸ್‍ಗಳ ಸಾಮಾಜಿಕ ಅಂತರ ಕ್ರಮಗಳನ್ನು ಕೈಗೊಂಡು ಸಂಚರಿಸಲು ಅನುಮತಿಸಿದೆ. ಜನರ ಮತ್ತು ವಾಹನದ ಅಂತರ ಜಿಲ್ಲಾ ಸಂಚಾರಕ್ಕೆ ಯಾವುದೇ ಪಾಸ್ ಅಗತ್ಯವಿಲ್ಲ.

ವ್ಯಕ್ತಿಗಳ ಚಲನೆಗಾಗಿ ಪ್ರಾಮಾಣಿತ ಕಾರ್ಯಾಚರಣಾ ವಿಧಾನದ (ಎಸ್‍ಒಪಿ) ಅನುಬಂಧ-1 ರಲ್ಲಿ ಉಲ್ಲೇಖಿಸಿರುವಂತೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಲಾಗಿದೆ.

ಟ್ಯಾಕ್ಸಿಗಳ (ಚಾಲಕ ಮತ್ತು ಗರಿಷ್ಠ ಇಬ್ಬರು ಪ್ರಯಾಣಿಕರು) ಆಟೊ ರಿಕ್ಷಾಗಳು (ಚಾಲಕ ಮತ್ತು ಇಬ್ಬರು ಪ್ರಯಾಣಿಕರು) ಮತ್ತು ಮ್ಯಾಕ್ಸಿ ಕ್ಯಾಬ್‍ಗಳು, ಸಂಗ್ರಹಕಾರ ಸೇವೆಗಳನ್ನು ಸಾಮಾಜಿಕ ಅಂತರ ಕ್ರಮಗಳನ್ನು ಕೈಗೊಂಡು ಸಂಚರಿಸಲು ಅನುಮತಿಸಿದೆ. ಕ್ಷೌರ ಅಂಗಡಿಗಳು, ಸ್ಪಾ ಮತ್ತು ಸಲೂನ್‍ಗಳು ಸೇರಿದಂತೆ ಎಲ್ಲಾ ಅಂಗಡಿಗಳು ಕಾರ್ಯ ನಿರ್ವಹಿಸಿ ಅನುಮತಿಸಿದೆ.

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಗಳ ಇಲಾಖೆಯಿಂದ ಹೊರಡಿಸಲಾಗುವ ಪ್ರಾಮಾಣಿತ ಕಾರ್ಯಾಚರಣ ವಿಧಾನದ ಪ್ರಕಾರ ಕ್ಷೌರ ಅಂಗಡಿಗಳು, ಸ್ಪಾಗಳು ಮತ್ತು ಸಲೂನ್‍ಗಳು ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ. ಈ ಮಾರ್ಗಸೂಚಿಗಳು ಮತ್ತು ರಾಷ್ಟ್ರೀಯ ನಿರ್ದೇಶನಗಳಿಗೆ (ಅನುಬಂಧ-2) ಒಳಪಟ್ಟ ನಿರ್ದಿಷ್ಟ ಸಮಯಗಳ ನಡುವೆ ಸರ್ಕಾರಿ, ಪುರಸಭೆಯ ಉದ್ಯಾನಗಳು ಸಾರ್ವಜನಿಕರಿಗಾಗಿ ತೆರೆದಿರುತ್ತದೆ.

3. ಕೋವಿಡ್-19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು

ಕೋವಿಡ್-19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು, ಅನುಬಂಧ-2ರಲ್ಲಿ ನಿರ್ದಿಷ್ಟಪಡಿಸಿದಂತೆ ಜಿಲ್ಲೆಯಾದ್ಯಂತ ಅನುಸರಿಸುವುದು.

4. ಕಂಟೈನ್‍ಮೆಂಟ್, ಬಫರ್, ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳು

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಮಾರ್ಗಸೂಚಿಗಳನ್ನು ಗಣೆನೆಗೆ ತೆಗೆದುಕೊಂಡು ಕಂಟೈನ್ಮೆಂಟ್ ವಲಯಗಳು ಮತ್ತು ಬಫರ್ ವಲಯಗಳನ್ನು ಜಿಲ್ಲೆಯ ಪ್ರಾಧಿಕಾರಿಗಳು ಗುರುತಿಸುತ್ತವೆ.

ಕಂಟೈನ್ಮೆಂಟ್ ವಲಯಗಳಲ್ಲಿ ಅಗತ್ಯ ಚಟುವಟಿಕೆಗಳನ್ನು ಮಾತ್ರ ಅನುಮತಿಸಲಾಗಿದೆ. ವೈದ್ಯಕೀಯ ತುರ್ತುಸ್ಥಿತಿಗಳನ್ನು ಹೊರತುಪಡಿಸಿ ಮತ್ತು ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆಯನ್ನು ಕಾಪಾಡಿಕೊಳ್ಳಲು ಈ ವಲಯಗಳಲ್ಲಿ ಅಥವಾ ಹೊರಗೆ ಜನರ ಚಲನೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಪರಿಧಿಯ ನಿಯಂತ್ರಣ ಇರುತ್ತದೆ. ಮೇಲಿನ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊರಡಿಸಿರುವ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಳ್ಳುವುದು.

ಕಂಟೈನ್ಮೆಂಟ್ ವಲಯಗಳಲ್ಲಿ ಅಗತ್ಯವಿರುವಂತೆ ತೀವ್ರವಾದ ಸಂಪರ್ಕ ಪತ್ತೆ ಹಚ್ಚುವಿಕೆ, ಮನೆ-ಮನೆಗೆ ಕಣ್ಗಾವಲು ಮತ್ತು ಇತರೆ ವೈದ್ಯಕೀಯ ಸೇವೆಗಳು ಇರುತ್ತವೆ.

ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಉತ್ತಮ ಮೇಲ್ವಿಚಾರಣೆಗಾಗಿ ಮಾತ್ರ ತಾಲ್ಲೂಕು/ವಾರ್ಡ್‍ಗಳನ್ನು ಕೆಂಪು, ಕಿತ್ತಳೆ, ಮತ್ತು ಹಸಿರು ಬಣ್ಣಗಳಾಗಿ ವರ್ಗೀಕರಿಸುತ್ತದೆ. ಈ ಮಾರ್ಗಸೂಚಿಗಳ ಅಡಿಯಲ್ಲಿ ಅನುಮತಿಸಲಾದ ಚಟುವಟಿಕೆಗಳಿಗೆ ಯಾವುದೇ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುವ ಉದ್ದೇಶದಿಂದ ಈ ವಲಯಗಳ ವರ್ಗೀಕರಣವನ್ನು ಉಲ್ಲೇಖಿಸುವಂತಿಲ್ಲ.

5. ಕಫ್ರ್ಯೂ

ಪ್ರತಿದಿನ ರಾತ್ರಿ 7 ರಿಂದ ಬೆಳಿಗ್ಗೆ 7 ರವರೆಗೆ ಎಲ್ಲಾ ಚಟುವಟಿಕೆಗಳ ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸತಕ್ಕದ್ದು. ಭಾನುವಾರದಂದು ಹೆಚ್ಚುವರಿಯಾಗಿ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಸಹ ಎಲ್ಲಾ ಅವಶ್ಯಕವಲ್ಲದ ಚಟುವಟಿಕೆಗಳ ವ್ಯಕ್ತಿಗಳ ಸಂಚಾರವನ್ನು ನಿಷೇಧಿಸಿದೆ (ಭಾನುವಾರದಂದು ಪೂರ್ಣ ದಿನದ ಲಾಡ್‍ಡೌನ್ ಇರುತ್ತದೆ) ಈ ಉದ್ದೇಶಕ್ಕಾಗಿ ಜಾರಿ ಮಾಡಲಾಗಿರುವ ಸಿ.ಆರ್.ಪಿ.ಸಿ ಸೆಕ್ಷನ್ 144 ರಡಿಯಲ್ಲಿ ನಿಷೇಧಾಜ್ಞೆ ಆದೇಶ (ಕಫ್ರ್ಯೂ)ವನ್ನು ಕಟ್ಟುನಿಟ್ಟಿನ ಅನುಪಾಲನೆಯನ್ನು ಖಾತರಿಪಡಿಸತಕ್ಕದ್ದು.

6. ದುರ್ಬಲ ವ್ಯಕ್ತಿಗಳ ರಕ್ಷಣೆ

ಅಗತ್ಯ ಮತ್ತು ಆರೋಗ್ಯ ಉದ್ದೇಶಗಳನ್ನು ಹೊರತುಪಡಿಸಿ, 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತುತ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಇರತಕ್ಕದ್ದು

7. ಅನುಮತಿ

ನಿರ್ದಿಷ್ಟವಾಗ ನಿಷೇಧಿಸಲಾಗಿರುವ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳನ್ನು ಅನುಮತಿಸಲಾಗಿದೆ. ಆದಾಗ್ಯೂ ಕಂಟೈನ್‍ಮೆಂಟ್ ವಲಯಗಳಲ್ಲಿ ಮೇಲಿನ ಪ್ಯಾರಾ 5(2) ರಲ್ಲಿ ಉಲ್ಲೇಖಿಸಿರುವಂತೆ ಅಗತ್ಯ ಚಟುವಟಿಕೆಗಳನ್ನು ಮಾತ್ರ ಅನುಮತಿಸಲಾಗಿದೆ.

ಇದಲ್ಲದೇ ಸರ್ಕಾರ ಆದೇಶಧ ಮೇರೆಗೆ ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ ವಿವಿಧ ವಲಯಗಳಲ್ಲಿ ಕೆಲವು ಇತರೆ ಚಟುವಟಿಕೆಗಳನ್ನು ನಿಷೇಧಿಸಬಹುದು ಅಥವಾ ಅಗತ್ಯವೆಂದು ಪರಿಗಣಿಸುವಂತಹ ನಿರ್ಬಂಧಗಳನ್ನು ವಿಧಿಸಬಹುದು.

8. ಆರೋಗ್ಯ ಸೇತು ಬಳಕೆ

ಆರೋಗ್ಯ ಸೇತು ಸೋಂಕಿನ ಸಂಭವನೀಯ ಅಪಾಯವನ್ನು ಮೊದಲೇ ಗುರುತಿಸಲು ಅನುವು ಮಾಡಿಕೊಡುತ್ತದೆ ಮತ್ತು ಇದರಿಂದ ವ್ಯಕ್ತಿಗಳು ಮತ್ತು ಸಮುದಾಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ.

ಕಚೇರಿಯ ಮತ್ತು ಕೆಲಸದ ಸ್ಥಳಗಳಲ್ಲಿ ಸುರಕ್ಷತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಉದ್ಯೋಗದಾತರು ಮತ್ತಮ ಪ್ರಯತ್ನದ ಆಧಾರದ ಮೇಲೆ ಆರೋಗ್ಯ ಸೇತು ಆಪ್‍ನ್ನು ಎಲ್ಲಾ ಉದ್ಯೋಗಿಗಳು ಮೊಬೈಲ್ ಪೋನ್‍ಗಳ ಹೊಂದಾಣಿಕೆಯನ್ನು ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಹೊಂದಾಣಿಕೆಯ ಮೊಬೈಲ್ ಫೋನ್‍ಗಳಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್‍ನ್ನು ಸ್ಥಾಪಿಸಲು ಮತ್ತು ಅಪ್ಲಿಕೇಶನ್‍ನಲ್ಲಿ ನಿಯಮಿತವಾಗಿ ಅವರ ಆರೋಗ್ಯ ಸ್ಥಿತಿಯನ್ನು ನವೀಕರಿಸಲು ಜಿಲ್ಲಾ ಮತ್ತು ಮಹಾನಗರಪಾಲಿಕೆ/ಪುರಸಭೆ ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡುವುದು. ಅಪಾಯದಲ್ಲಿರುವ ವ್ಯಕ್ತಿಗಳಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ನೀಡಲು ಇದು ಅನುಕೂಲವಾಗಲಿದೆ.

09. ನಿರ್ದೇಶನಗಳು

ಕೆಲವು ಸಂದರ್ಭಗಳಲ್ಲಿ ವ್ಯಕ್ತಿಗಳು ಮತ್ತು ಸರಕುಗಳ ಚಲನೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ನಿರ್ದೇಶನಗಳು.

ಯಾವುದೇ ನಿರ್ಬಂಧವಿಲ್ಲದೆ ವೈದ್ಯಕೀಯ ವೃತ್ತಿಪರರು, ದಾದಿಯರು ಮತ್ತು ಪ್ಯಾರಾ ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಸಿಬ್ಬಂದಿ ಮತ್ತು ಆಂಬುಲೆನ್ಸ್ ಅಂತರ-ರಾಜ್ಯ ಮತ್ತು ರಾಜ್ಯದೊಳಗಿನ ಚಲನೆಯನ್ನು ಅನುಮತಿಸಲಾಗಿರುತ್ತದೆ.

ಖಾಲಿ ಟ್ರಕ್‍ಗಳನ್ನು ಒಳಗೊಂಡಂತೆ ಅಂತರ್-ರಾಜ್ಯ ಸರಕು ಸಾಗಾಣಿಕೆಗೆ ಎಲ್ಲಾ ತಾಲ್ಲೂಕುಗಳು ಅನುಮತಿಸತಕ್ಕದ್ದು.

ನೆರೆಯ ರಾಷ್ಟ್ರಗಳೊಂದಿಗೆ ಒಪ್ಪಂದಗಳ ಅಡಿಯಲ್ಲಿ ಭೂ-ಗಡಿ ವ್ಯಾಪಾರಕ್ಕಾಗಿ ಸರಕು ಸಾಗಣೆಯನ್ನು ಯಾವುದೇ ತಾಲ್ಲೂಕುಗಳು ತಡೆಯಬಾರದು.

10. ಮಾರ್ಗಸೂಚಿ

ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು.

ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಹೊರಡಿಸಲಾದ ಈ ಮಾರ್ಗಸೂಚಿಗಳನ್ನು ಸ್ಥಳೀಯ ಆಡಳಿತಗಳು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸಬಾರದು.

ಎಲ್ಲಾ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳು ಮೇಲಿನ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ನಿಯಂತ್ರಣ ಕ್ರಮಗಳನ್ನು ಅನುಷ್ಟಾನಗೊಳಿಸುವ ಸಲುವಾಗಿ ಈಗಾಗಲೇ ದಿನಾಂಕ: 25.03.2020 ರಂದು ನೇಮಿಸಲಾಗಿರುವ ಆಯಾ ಸ್ಥಳೀಯ ಅಧಿಕಾರ ವ್ಯಾಪ್ತಿಯಲ್ಲಿ ಮಾರ್ಗಸೂಚಿಯ ಸಮಗ್ರ ಅನುಷ್ಟಾನಕ್ಕೆ ಜವಾಬ್ದಾರರಾಗಿರುತ್ತಾರೆ.

11. ದಂಡನೀಯ ಉಪಬಂಧಗಳು

ಕೋವಿಡ್-19 ನಿರ್ವಹಣೆಯ ಲಾಕ್‍ಡೌನ್ ಕ್ರಮಗಳನ್ನು ರಾಷ್ಟ್ರೀಯ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 51 ರಿಂದ 60 ರ ಉಪಬಂಧಗಳು, ಅಲ್ಲದೇ, ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರ ಅಡಿಯಲ್ಲಿನ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ದ ಕ್ರಮ ಜರುಗಿಸಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲೆಯಲ್ಲಿ 640 ಜನರಿಗೆ ಕೊರೋನಾ ಪಾಸಿಟಿವ್ : 141 ಮಂದಿ ಬಿಡುಗಡೆ

Published

on

ಸುದ್ದಿದಿನ,ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಭಾನುವಾರದ ವರದಿಯಲ್ಲಿ 640 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 20,730 ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 263, ಚಳ್ಳಕೆರೆ 35, ಹಿರಿಯೂರು 85, ಹೊಳಲ್ಕೆರೆ 55, ಹೊಸದುರ್ಗ 96, ಮೊಳಕಾಲ್ಮುರು ತಾಲ್ಲೂಕಿನಲ್ಲಿ 79 ಪ್ರಕರಣ ಸೇರಿದಂತೆ ಒಟ್ಟು 640 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಭಾನುವಾರ 141 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಭಾನುವಾರ ಒಟ್ಟು 2410 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ.  ವರದಿಯಲ್ಲಿ 640 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಸೋಂಕಿತರ ಸಂಖ್ಯೆ 20,730ಕ್ಕೆ ಏರಿಕೆಯಾಗಿದೆ. ಕೋವಿಡ್‍ನಿಂದ ಇಂದು 4 ಮಂದಿ ಮೃತರಾಗಿದ್ದು ಇದುವರೆಗೆ ಒಟ್ಟು 112 ಜನ ಮೃತಪಟ್ಟಿದ್ದಾರೆ.

ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ಮೈಸೂರು ಕಾಗದ ಕಾರ್ಖಾನೆ ನಿಯಮಿತ (ಎಂ.ಪಿ.ಎಂ)

ಸೋಂಕಿತರ ಪೈಕಿ ಈಗಾಗಲೆ 17,704 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 2,914 ಸಕ್ರಿಯ ಪ್ರಕರಣಗಳು ಇವೆ. ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 1,67,835 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ.

ಈವರೆಗೆ 4,50,077 ಜನರ ಮಾದರಿ ಸಂಗ್ರಹಿಸಲಾಗಿದ್ದು, 4,27,384 ಜನರ ವರದಿ ನೆಗೆಟೀವ್ ಬಂದಿದೆ, ಉಳಿದ 1210 ಜನರ ವರದಿ ಬರುವುದು ಬಾಕಿ ಇದೆ. 753 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕøತಗೊಂಡಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಂಗನಾಥ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೊರೋನಾ ಎಫೆಕ್ಟ್ | ಯುವಕನಿಗೆ ಬ್ಲಾಕ್ ಫಂಗಸ್ ; ಚಿಕಿತ್ಸೆಗೆ ಸರ್ಕಾರದ ಸಹಾಯ ಬೇಡಿದ ಕುಟುಂಬಸ್ಥರು

Published

on

ಸುದ್ದಿದಿನ,ಬೆಳಗಾವಿ: ಕೊರೋನಾ ರೋಗದ ಪರಿಣಾಮ ಬೆಳಗಾವಿಯಲ್ಲಿ ಬ್ಲ್ಯಾಕ್ ಫಂಗಸ್ ಭೀತಿ ಎದುರಾಗಿದ್ದು, ಬ್ಲ್ಯಾಕ್ ಫಂಗಸ್‌ನಿಂದ 30 ವರ್ಷದ ಯುವಕನೊಬ್ಬ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ಆನಂದ ಕುಲಾಲಿ ಎಂಬ ಯುವಕ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.ಯುವಕ ಆನಂದ ಕುಲಾಲಿ
ಅಥಣಿ ತಾಲೂಕು ಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಮೇ 5ರಂದು ಕೊರೋನ ಟೆಸ್ಟ್ ಮಾಡಿಸಿದ್ದು, ಮೇ 7ರಂದು ಕೊರೊನಾ ಪಾಸಿಟಿವ್ ಎಂದು ರಿಪೋರ್ಟ್ ಬಂದಿತ್ತು.

ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿಯೇ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಆನಂದ ಕುಲಾಲಿಯನ್ನು ಹುಕ್ಕೇರಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಯಿತು. ನಂತರ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ವೈದ್ಯರು ಅಡ್ಮಿಟ್ ಆಗುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮೇ 10ರಂದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಯುವಕ ಆನಂದ ಕುಲಾಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ.

ಇದನ್ನೂ ಓದಿ | ದಾವಣಗೆರೆ | ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ; ಇಂದಿನ ಬೆಲೆ ಎಷ್ಟು ಗೊತ್ತಾ..?

ಬಳಿಕ ಯುವಕ ಆನಂದ ಕುಲಾಲಿಯ ಮುಖವು ಬಾವು ಬರುತ್ತಿದ್ದು ಇಎನ್‌ಟಿ ಸ್ಪೆಷಲಿಸ್ಟ್ ಬಳಿ ತೆರಳಿ ಚೆಕಪ್ ಮಾಡಿಸಿ ಸಲಹೆಯನ್ನು ನೀಡಲಾಗಿತ್ತು. ಬಳಿಕ ಮಹಾರಾಷ್ಟ್ರದ ಮೀರಜ್ ಖಾಸಗಿ ಆಸ್ಪತ್ರೆಗೆ ಯುವಕ ಆನಂದ ಕುಲಾಲಿ
ಅಡ್ಮಿಟ್ ಆದನು. ಆಗ ಖಾಸಗಿ ಆಸ್ಪತ್ರೆಯ ವೈದ್ಯರು ಯುವಕನಿಗೆ ಬ್ಲ್ಯಾಕ್ ಫಂಗಸ್ ಆಗಿದೆ ಎಂದು ತಿಳಿಸಿದ್ದಾರೆ.

ಬ್ಲಾಕ್ ಫಂಗಸ್

ಯುವಕ ಆನಂದ ಕುಲಾಲಿ ಕೊರೋನಾದಿಂದ ಗುಣಮುಖ ಆದ ಬಳಿಕ ಸರ್ಜರಿ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಯುವಕನ ಕುಟುಂಬಸ್ಥರು ರಾಜ್ಯ ಸರ್ಕಾರವು ತಮ್ಮ ನೆರವಿಗೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ; ಇಂದಿನ ಬೆಲೆ ಎಷ್ಟು ಗೊತ್ತಾ..?

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ದಾವಣಗೆರೆ : ದಾವಣಗೆರೆಯಲ್ಲಿ ಪೆಟ್ರೋಲ್ ಬೆಲೆ ರೂ. ಪ್ರತಿ ಲೀಟರ್‌ಗೆ 97.35 ರೂ. ಆಗಿದೆ. ಭಾನುವಾರ ಮೇ 16 ರಂದು ಮತ್ತು 25 ಪೈಸೆಯನ್ನು ಹೆಚ್ಚಿಸಲಾಗಿದೆ. ಪೆಟ್ರೋಲ್ ಬೆಲೆ ಕರ್ನಾಟಕ ರಾಜ್ಯ ತೆರಿಗೆಯನ್ನು ಒಳಗೊಂಡಿದೆ.

ಡೀಸೆಲ್‌ ಬೆಲೆ

ದಾವಣಗೆರೆ (ಕರ್ನಾಟಕ) ದಲ್ಲಿ ಇಂದು ಡೀಸೆಲ್ ಬೆಲೆ ರೂ. ಲೀಟರ್‌ಗೆ 89.99 ರೂ. ಆಗಿದೆ. ಶನಿವಾರ ಮೇ 15 ರಂದು 63 ಪೈಸೆ ಹೆಚ್ಚಾಗಿದೆ. ಕಳೆದ 10 ದಿನಗಳಲ್ಲಿ ದಾವಷಗೆರೆಯಲ್ಲಿ ಡೀಸೆಲ್ ಬೆಲೆ 88.06 ರಿಂದ 89.99 ರೂಗಳ ನಡುವೆ ಏರಿಳಿತವಾಗಿದೆ. ನೀವು ಇಂದು ಕರ್ನಾಟಕದ ಇತರ ನಗರಗಳಲ್ಲಿ ಡೀಸೆಲ್ ದರ ಮತ್ತು ಹಿಂದಿನ ದಿನಕ್ಕೆ ಹೋಲಿಸಿದರೆ ಬೆಲೆಗಳಲ್ಲಿನ ಬದಲಾವಣೆಯನ್ನು ಸಹ ಪರಿಶೀಲಿಸಬಹುದು. ಡೀಸೆಲ್ ಬೆಲೆ ಕರ್ನಾಟಕ ರಾಜ್ಯ ತೆರಿಗೆಯನ್ನು ಒಳಗೊಂಡಿದೆ.

ಇದನ್ನೂ ಓದಿ |ಕೊರೋನಾ | ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending