Connect with us

ದಿನದ ಸುದ್ದಿ

‘ಅಭಿನಂದನ್’ ಕ್ಷೇಮವಾಗಿ ಮರಳಿ ಬರಲಿ

Published

on

ನಮ್ಮ ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಕೈಯಲ್ಲಿದ್ದಾರೆ. ಹಾಲಿವುಡ್ಡಿನ ಒರಟು ಹೀರೋನಂಥಾ ಅಭಿನಂದನ್ ಕಂಡಾಗ ಅಭಿಮಾನ ಉಕ್ಕುತ್ತದೆ. ಇಂಥ ಸಂದರ್ಭ ಬಿಟ್ಟರೆ ಇವರೆಲ್ಲಾ ಅನಾಮಿಕರಾಗಿ ಸೇವೆ ಮುಗಿಸಿ ಮರಳುವವರೇ. ಈ ಸಂದರ್ಭ ಬಿಟ್ಟರೆ ನಮ್ಮ ಮಾಧ್ಯಮಗಳಿಗೆ ಡ್ಯೂಪ್ ಬಳಸಿ ಹೀರೋಯಿಸಂ ತೋರುವವರೇ ಹೀರೋಗಳು. ಭಕ್ತರಿಗೋ, ಕಡ್ಡಾಯ ಅವರವರ ನಾಯಕರು. ಈ ಆಷಾಡಭೂತಿತನ ಗೊತ್ತಿದ್ದರೂ ನಟಿಸುತ್ತಾ ಬಂದಿದ್ದೇವೆ ನಾವು.

ಈಗ ಅಭಿನಂದನ್ ಕ್ಷೇಮವಾಗಿ ಮರಳಿಬರಲಿ ಎಂದು ಹಾರೈಸಬೇಕು. ಆದರೆ ಸ್ವಲ್ಪ ರಾಜತಾಂತ್ರಿಕ ಒಳ ಸಂವಾದದ ಮೂಲಕ ಬಗೆಹರಿಯಬಹುದಾಗಿದ್ದ ಪ್ರಕರಣ ಇದು ಕಗ್ಗಂಟಾಗುವ ಸೂಚನೆಗಳಿವೆ. ಕಳೆದ ಎರಡು ದಿನಗಳಿಂದ ಭಾಜಪದ ಭಕ್ತರು ಮತ್ತು ಮಾಧ್ಯಮ ಯುದ್ಧೋನ್ಮಾದದ ತೀಟೆಯಲ್ಲಿ ಹರಿಬಿಟ್ಟ ಮಾತು ಮತ್ತು ವಿವರಗಳನ್ನು ನೋಡಿದರೆ ಇದು ಯಾಕೆ ಕಗ್ಗಂಟಾಗಲಿದೆ ಎಂದು ಗೊತ್ತಾದೀತು.

ನನಗೆ ಗೊತ್ತಿರುವ ಲೋಕ ಜ್ಞಾನದ ಪ್ರಕಾರ ಅಭಿನಂದನ್ ಪ್ರಕರಣವನ್ನು ಯುದ್ಧ ಕೈದಿ ಎಂದು ಸುತಾರಾಂ ಪಾಕ್ ಬಿಡಿ ಮೋದಿಯೂ ಒಪ್ಪಿಕೊಳ್ಳದೇ ಜಾರಿಕೊಳ್ಳಬಹುದು. ಯಾಕೆಂದರೆ ಇದು ಅಧಿಕೃತ ಯುದ್ಧ ಎಂದು ಭಾರತ ಘೋಷಿಸಿಲ್ಲ! ಇದನ್ನು ರಾಜತಾಂತ್ರಿಕ ಪರಿಭಾಷೆಯಲ್ಲಿ Intrusion ನುಸುಳುವಿಕೆ ಎನ್ನುತ್ತಾರೆ. ದೋಣಿ, ನಾವೆಗಳಲ್ಲಿ ಇದು ಸಾಮಾನ್ಯ. ಇದನ್ನು ಆಕಸ್ಮಿಕ ನುಸುಳುವಿಕೆ ಎನ್ನುತ್ತಾರೆ. ವಿಮಾನಗಳ ಸಂದರ್ಭದಲ್ಲೂ ಹೀಗೇ ನೋಡಲಾಗುತ್ತಿದೆ.

ನಾವಿಕರು ಯಾ ಪೈಲೆಟ್, ಸಿಬ್ಬಂದಿಗಳನ್ನು ವಶಕ್ಕೆ ಪಡೆದ ಮೇಲೆ ಅವರ ದೇಶದ ರಾಜತಾಂತ್ರಿಕ ಹೇಳಿಕೆ ಮತ್ತು ಒತ್ತಡದ ಮೂಲಕ ಬಂಧಿ ಮಾಡಿದ ದೇಶ ಬಿಡುಗಡೆ ಮಾಡಿರುವ ಉದಾಹರಣೆಗಳು ಯಥೇಚ್ಛ. ಆದರೆ ಈ ಸಂದರ್ಭದಲ್ಲಿ ಮೋದಿ ಪಡೆ ಮತ್ತು ಮಾಧ್ಯಮಗಳು ಟಾಂಟಾಂ ಹೊಡೆದ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ಸೋಲು ಮತ್ತು ಅವಮಾನವನ್ನು ಮುಚ್ಚಿಡಲು ಈ ಧೀರನನ್ನು ದಾಳದಂತೆ ಬಳಸಿಕೊಳ್ಳುವ ಸಾಧ್ಯತೆಯೇ ಹೆಚ್ಚು.

So, good to see the #IAF officer being treated with respect. Hope he's returned back home to his family soon.#ProudOfOurArmedForces #SayNotoWar #Abhinandan

Posted by The Logical Pakistani on Wednesday, 27 February 2019

ನಮ್ಮ ವೈಮಾನಿಕ ಧಾಳಿ ಕೂಡಾ ಮುಸುಕಿನ ಏಟಿನಂತೆ ಗೌಪ್ಯವಾಗಿ ಇದ್ದಿದ್ದರೆ ಪಾಕಿಸ್ತಾನವೂ ಮುಖ ಒರೆಸಿಕೊಂಡು ಹುಳ್ಳಗೆ ವರ್ತಿಸುತ್ತಾ ತೆಪ್ಪಗಿರುತ್ತಿತ್ತು. ಆದರೆ ಈಗ ? ಧೀರ ಸುಪುತ್ರ ಅಭಿನಂದನ್ ಅವರನ್ನು ಪಾಕಿಸ್ತಾನ ಚೌಕಾಸಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಅದಕ್ಕೆ ಮೋದಿ ಪ್ರತಿಕ್ರಿಯೆ ಏನು? ನಾವು ಈಗ ಹಾಕುತ್ತಿರುವ public pressure ಕೆಲಸ ಮಾಡುತ್ತೆ. ಇಲ್ಲವೆಂದಲ್ಲ. ನಾಳೆ ಅಭಿನಂದನ್ ಬಿಡುಗಡೆಯಾಗಿ ಬರುತ್ತಾರೆ. ಆದರೆ ಇದು ಅಗ್ಗದ ಲಾಭಕ್ಕೆ air strikeನ್ನು ಬಳಸಿಕೊಂಡಿರುವ ಬಗ್ಗೆ ಮಾದ್ಯಮಗಳಿಗೂ ಭಕ್ತ ಪಡೆಗೂ, ಭಾಜಪದ ಚಿಲ್ಲರೆ ಮನೋಭಾವದ ರಾಜಕಾರಣಿಗಳಿಗೂ ಗೊತ್ತಾಗಬೇಕು.

ನಮ್ಮನ್ನು ಕಾಯುವ ನಮ್ಮ ಸೈನ್ಯ ಪಡೆಯ ಸುಪುತ್ರರ ಕಾರ್ಯಾಚರಣೆಯ ತಂತ್ರಗಾರಿಕೆ, ವೃತ್ತಿಪರತೆ ಟಾಂಟಾಂ ಹೊಡೆಯುವ ಸರಕಾಗಬಾರದು. ನಮ್ಮ ಕೃತಜ್ಞತೆ, ಗೌರವ ತೋರಲು ಇನ್ನೂ ನೂರಾರು ವಿಧಾನಗಳಿವೆ.
ಮತ್ತೊಮ್ಮೆ ಅಭಿನಂದನ್ ಕ್ಷೇಮವಾಗಿ ಮರಳಿ ಬರಲಿ ಎಂದು ಹಾರೈಸುತ್ತಾ ಗಂಭಿರವಾಗಿ ವರ್ತಿಸುವ ಬುದ್ಧಿಯನ್ನು ಮಾದ್ಯಮಗಳಿಗೂ ಸ್ಕ್ರೂ ಬಿದ್ದ ಭಕ್ತ ಪಡೆಗೂ ಆ ಸರ್ವ ಶಕ್ತ ದೇವರು ಕೊಡಲಿ ಎಂದು ಪ್ರಾರ್ಥನೆ.

ಸುರೇಶ್‌ ಕಂಜರ್ಪಣೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ದಾವಣಗೆರೆ | ಜೋಗ ಜಲಪಾತ ವೀಕ್ಷಣೆಗೆ ವಿಶೇಷ ಸಾರಿಗೆ ಬಸ್

Published

on

ಸುದ್ದಿದಿನ,ದಾವಣಗೆರೆ : ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ಸಾರ್ವಜನಿಕರು ವೀಕ್ಷಿಸುವಂತಾಗಲು ದಾವಣಗೆರೆ ವಿಭಾಗದ ದಾವಣಗೆರೆ ಮತ್ತು ಹರಿಹರದಿಂದ ಜೋಗ್‍ಫಾಲ್ಸ್‍ಗೆ ರಾಜಹಂಸ ಸಾರಿಗೆ ವಿಶೇಷ ಪ್ಯಾಕೇಜ್ ಸೇವೆ ಆ. 01 ರಿಂದ ವಾರದ ಎಲ್ಲಾ ದಿನಗಳಂದು ಇರುತ್ತದೆ.

ಭಾನುವರದಂದು ಮಾತ್ರ ಈ ಸೇವೆ ಪ್ರಾರಂಭಿಸಲಾಗಿತ್ತು. ಆಧರೆ ಈ ಪ್ಯಾಕೇಜ್ ಪ್ರಯಾಣಕ್ಕೆ ಸಾರ್ವಜನಿಕ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಬಂದ ಕಾರಣ ಆ.01 ರಿಂದ ವಾರದ ಎಲ್ಲಾ ದಿನಗಳಂದು ಬಸ್ ಕಾರ್ಯಚರಣೆ ನಡೆಸಲು ಉದ್ದೇಶಿಸಲಾಗಿದೆ.

ದಾವಣಗೆರೆಯಿಂದ ಬೆಳಿಗ್ಗೆ 07 ಕ್ಕೆ ಹೊರಟು, ಹರಿಹರ 7-30, ಶಿರಸಿ- ಬೆ. 10.30 ಕ್ಕೆ ತಲುಪುತ್ತದೆ. 12 ಕ್ಕೆ ಶಿರಸಿಯಿಂದ ಹೊರಟು ಮಧ್ಯಾಹ್ನ 1.30 ಕ್ಕೆ ಜೋಗವನ್ನು ತಲುಪುತ್ತದೆ. ಸಂಜೆ 4.30 ಕ್ಕೆ ಜೋಗದಿಂದ ಹೊರಟು ರಾತ್ರಿ 8 ಗಂಟೆಗೆ ದಾವಣಗೆರೆಯನ್ನು ತಲುಪುತ್ತದೆ. ಪ್ರಯಾಣ ದರ ರೂ 500 (ಹೋಗಿ ಬರುವ 2 ಬದಿ ಸೇರಿ) ಮಕ್ಕಳಿಗೆ ರೂ.375 (2 ಬದಿಯಿಂದ) ಹರಿಹರದಿಂದ ಹೊರಡುವ ಪ್ರಯಾಣಿಕರಿಗೆ ದರ ರೂ. 475 (2 ಬದಿ) ಮಕ್ಕಳಿಗೆ ರೂ 350 ಆಗಿರುತ್ತದೆ.

ಮುಂಗಡ ಬುಕ್ಕಿಂಗ್ ಕೌಂಟರ್‍ಗಳಲ್ಲಿ ಬುಕ್ಕಿಂಗ್ www.ksrtc.in ಮಾಡಲು ಸೌಕರ್ಯ ಕಲ್ಪಿಸಲಾಗಿದೆ ಎಂದು ದಾವಣಗೆರೆ ಕ.ರಾ.ರ.ಸಾ. ನಿಗಮ. ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾ ಪ್ರಕರಣಗಳು

Published

on

ಸುದ್ದಿದಿನ, ಬೆಂಗಳೂರು : ರಾಜ್ಯದಲ್ಲಿ ಸೋಮವಾರ 1,606 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 31 ಜನ ಸೋಂಕಿಗೆ ಬಲಿಯಾಗಿದ್ದಾರೆ.

ಈ ಪೈಕಿ ಬೆಂಗಳೂರಿನಲ್ಲಿ 467 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಸೋಂಕಿಗೆ ಬಲಿಯಾಗಿದ್ದಾರೆಂದು ರಾಜ್ಯ ಆರೋಗ್ಯ ಇಲಾಖೆ ಇಂದು ಮಾಹಿತಿ ನೀಡಿದೆ. ಈವರೆಗೆ 28,36.678 ಮಂದಿ ಚೇತರಿಸಿಕೊಂಡಿದ್ದು, 23,057 ಮಂದಿ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದಲ್ಲಿ 36,405 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಎಸ್​​ವೈ ರಾಜೀನಾಮೆ ಘೋಷಣೆ..!

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಬೆಂಗಳೂರು : ಸರ್ಕಾರದ ಎರಡು ವರ್ಷಗಳ ಸಾಧನಾ ಕಾರ್ಯಕ್ರಮದ ಭಾಷಣದಲ್ಲಿ ಭಾವುಕರಾಗಿ ಸಿಎಂ ಬಿಎಸ್​​ವೈ ಕಣ್ಣೀರು ಹಾಕಿದರು.

ಸಂಘದ ಕಾರ್ಯಕರ್ತನಾಗಿ ನಂತರ ಆರೆಸ್ಸೆಸ್ ಪ್ರಚಾರಕನಾಗಿ ಬಳಿಕ ರಾಜಕೀಯ ಜೀವನ ಪ್ರವೇಶಿಸಿ ಸಂದರ್ಭದಿಂದ ಹಿಡಿದು ತಮ್ಮ ಈಗಿನ ರಾಜಕೀಯದವರೆಗೂ ತಮ್ಮ ಹೋರಾಟಗಳನ್ನ ಅವರು ಮೆಲುಕು ಹಾಕಿದರು. ಭಾಷಣದ ಮಧ್ಯೆ ಅವರು ಗದ್ಗದಿತರಾಗಿ ಕಣ್ಣೀರು ಹಾಕಿದರು. ಕೊನೆಯಲ್ಲಿ ಗದ್ಗದಿತರಾಗಿ ಊಟದ ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಕಣ್ಣೀರು ಹಾಕಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ8 hours ago

ದಾವಣಗೆರೆ | ಜೋಗ ಜಲಪಾತ ವೀಕ್ಷಣೆಗೆ ವಿಶೇಷ ಸಾರಿಗೆ ಬಸ್

ಸುದ್ದಿದಿನ,ದಾವಣಗೆರೆ : ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ಸಾರ್ವಜನಿಕರು ವೀಕ್ಷಿಸುವಂತಾಗಲು ದಾವಣಗೆರೆ ವಿಭಾಗದ ದಾವಣಗೆರೆ ಮತ್ತು ಹರಿಹರದಿಂದ ಜೋಗ್‍ಫಾಲ್ಸ್‍ಗೆ ರಾಜಹಂಸ ಸಾರಿಗೆ ವಿಶೇಷ ಪ್ಯಾಕೇಜ್ ಸೇವೆ ಆ....

ದಿನದ ಸುದ್ದಿ9 hours ago

ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾ ಪ್ರಕರಣಗಳು

ಸುದ್ದಿದಿನ, ಬೆಂಗಳೂರು : ರಾಜ್ಯದಲ್ಲಿ ಸೋಮವಾರ 1,606 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 31 ಜನ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 467 ಹೊಸ...

ದಿನದ ಸುದ್ದಿ17 hours ago

ಬಿಎಸ್​​ವೈ ರಾಜೀನಾಮೆ ಘೋಷಣೆ..!

ಸುದ್ದಿದಿನ, ಬೆಂಗಳೂರು : ಸರ್ಕಾರದ ಎರಡು ವರ್ಷಗಳ ಸಾಧನಾ ಕಾರ್ಯಕ್ರಮದ ಭಾಷಣದಲ್ಲಿ ಭಾವುಕರಾಗಿ ಸಿಎಂ ಬಿಎಸ್​​ವೈ ಕಣ್ಣೀರು ಹಾಕಿದರು. ಸಂಘದ ಕಾರ್ಯಕರ್ತನಾಗಿ ನಂತರ ಆರೆಸ್ಸೆಸ್ ಪ್ರಚಾರಕನಾಗಿ ಬಳಿಕ...

ದಿನದ ಸುದ್ದಿ20 hours ago

ಹಿರಿಯ ನಟಿ ಜಯಂತಿ ಇನ್ನಿಲ್ಲ

ಸುದ್ದಿದಿನ, ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ (76) ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಇಂದು ಬೆಂಗಳೂರಿನ ಖಾಸಗಿ...

ಬಹಿರಂಗ21 hours ago

ಡಾನಿಷ್ ಸಿದ್ದಿಖಿ- ಅಸಹಿಷ್ಣುತೆಗೆ ಮತ್ತೊಂದು ಬಲಿ

ನಾ ದಿವಾಕರ ಆಫ್ಘಾನಿಸ್ತಾನದ ಬಂಡುಕೋರರ ದಾಳಿಗೆ ಬಲಿಯಾದ ಭಾರತದ ಪತ್ರಿಕಾ ಛಾಯಾಗ್ರಾಹಕ ಡಾನಿಷ್ ಸಿದ್ದಿಖಿ ( 1983-2021 ) ಬಹುಶಃ ಜಗತ್ತಿನಾದ್ಯಂತ ಹೆಚ್ಚಾಗುತ್ತಿರುವ ಬಲಪಂಥೀಯ ಮತಾಂಧತೆ, ಅಸಹಿಷ್ಣುತೆ...

ದಿನದ ಸುದ್ದಿ21 hours ago

ಮೊಟ್ಟೆ ಖರೀದಿಯಲ್ಲಿ ಅವ್ಯವಹಾರ ; ಕಾಣದ ಕೈಗಳು ಕೆಲಸ ಮಾಡುತ್ತಿವೆ : ಸಚಿವೆ ಶಶಿಕಲಾ ಜೊಲ್ಲೆ

ಸುದ್ದಿದಿನ, ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದ್ದು, ವಯಕ್ತಿಕವಾಗಿ...

ನಿತ್ಯ ಭವಿಷ್ಯ21 hours ago

ಈ ರಾಶಿಯವರಿಗೆ ವಿದೇಶದಲ್ಲಿ ನೆಲೆಸಿರುವ ಮಕ್ಕಳಿಂದ ಶುಭ ಸಮಾಚಾರ! ವಾಹನ ಭೂಮಿ ನಿವೇಶನ ಖರೀದಿ ಸುಯೋಗ! ಪಿತ್ರಾರ್ಜಿತ ಆಸ್ತಿ ಲಾಭ! ಸೋಮವಾರ ರಾಶಿ ಭವಿಷ್ಯ-ಜುಲೈ-26,2021

ಸೂರ್ಯೋದಯ: 06:02 AM, ಸೂರ್ಯಸ್ತ: 06:47 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ಗ್ರೀಷ್ಮ ಋತು, ದಕ್ಷಿಣಾಯಣ,ಶುಕ್ಲ...

ನಿತ್ಯ ಭವಿಷ್ಯ2 days ago

ಈ ಎಲ್ಲಾ ರಾಶಿಯವರು ಬ್ರಾಹ್ಮಣರಿಗೆ ವಸ್ತ್ರದಾನದಿಂದ ಶುಭಫಲ ಪಡೆಯಿರಿ! ಮದುವೆ ಮಾತುಕತೆ ಮರುಚಾಲನೆ! ಪದವೀಧರರಿಗೆ ಉದ್ಯೋಗ ಪ್ರಾಪ್ತಿ! ಭಾನುವಾರ ರಾಶಿ ಭವಿಷ್ಯ-ಜುಲೈ-25,2021

ಸೂರ್ಯೋದಯ: 06:02 AM, ಸೂರ್ಯಸ್ತ: 06:47 PM ಪ್ಲವ ನಾಮ ಸಂವತ್ಸರ ಆಷಾಢ ಮಾಸ, ಗ್ರೀಷ್ಮ ಋತು, ದಕ್ಷಿಣಾಯಣ, ಶುಕ್ಲ ಪಕ್ಷ, ತಿಥಿ: ಬಿದಿಗೆ ( 28:04...

ನಿತ್ಯ ಭವಿಷ್ಯ3 days ago

ಈ ರಾಶಿಯವರು ನೂತನ ಮನೆ ಕಟ್ಟಲು ಪ್ರಯತ್ನಿಸುತ್ತೀರಿ! ಅದೃಷ್ಟದ ಸಮಯ ಬಂದಿದೆ! ನಿಂತ ಕಾರ್ಯಗಳು ಮರುಚಾಲನೆ! ಶನಿವಾರ ರಾಶಿ ಭವಿಷ್ಯ-ಜುಲೈ-24,2021

ಗುರು ಪೂರ್ಣಿಮಾ ಸೂರ್ಯೋದಯ: 06:01 AM, ಸೂರ್ಯಸ್ತ: 06:47 PM ಪ್ಲವ ನಾಮ ಸಂವತ್ಸರ ಆಷಾಢ ಮಾಸ, ದಕ್ಷಿಣಾಯಣ, ಗ್ರೀಷ್ಮ ಋತು, ಶುಕ್ಲ ಪಕ್ಷ, ತಿಥಿ: ಹುಣ್ಣಿಮೆ...

ದಿನದ ಸುದ್ದಿ3 days ago

ಗ್ರಾಮ ಪಂಚಾಯತಿಗಳಲ್ಲಿ ಪಕ್ಷ ರಾಜಕೀಯ ಬೇಡ : ಸಚಿವ ಕೆ.ಎಸ್. ಈಶ್ವರಪ್ಪ

ಸುದ್ದಿದಿನ,ದಾವಣಗೆರೆ :ಕೋವಿಡ್ ಸಂಕಷ್ಟ ಕಾಲದಲ್ಲಿ ನಗರಗಳಿಂದ ಗ್ರಾಮಗಳಿಗೆ ಮರಳಿದ ಅನೇಕ ಯುವಕರಿಗೆ ಗ್ರಾಮೀಣ ಉದ್ಯೋಗಖಾತ್ರಿ ನರೇಗಾ ಯೋಜನೆ ಸ್ಥಳೀಯವಾಗಿ ಕೆಲಸ ನೀಡುವ ಮೂಲಕ ಆರ್ಥಿಕ ನೆರವು ನೀಡುವುದರ...

Trending