Connect with us

ದಿನದ ಸುದ್ದಿ

ಇಸ್ರೇಲಿ ಬೇಹುಗಾರಿಕೆ ಸಾಧನವನ್ನು ಬಳಸಿದವರು ಯಾರು?

Published

on

ವಾಟ್ಸ್ ಆಪ್ ಸರಕಾರಕ್ಕೆ ನೀಡಿರುವ ತನ್ನ ಖಾತೆಗಳ ಹ್ಯಾಕ್ ಆಗಿರುವ ಹೆಸರುಗಳಲ್ಲಿ ಭೀಮ-ಕೋರೆಗಾಂವ್ ವಿಷಯದಲ್ಲಿ ಆಪಾದಿತರಾಗಿರುವವರು ಮತ್ತು ಅವರ ರಕ್ಷಣೆಗೆ ನಿಂತಿರುವ ವಕೀಲರಲ್ಲಿ ಹಲವರ ಹೆಸರುಗಳು ಇವೆ. ಆದ್ದರಿಂದ ಇವೆರಡರ ನಡುವಿನ ಸಂಬಂಧ ಸಾಕಷ್ಟು ಸ್ಪಷ್ಟವಾಗಿದೆ.. ಇವೆಲ್ಲವೂ ಸರಕಾರವೇ ತನ್ನನ್ನು ಟೀಕಿಸುವವರ ಖಾತೆಗಳನ್ನು ಸೀಳಲು ಇಸ್ರೇಲೀ ಬೇಹುಗಾರಿಕೆ ಸಾಧನವನ್ನು ಬಳಸುವಲ್ಲಿ ಶಾಮೀಲಾಗಿದೆ ಎಂಬ ಸಂದೇಹಗಳನ್ನು ದೃಢಪಡಿಸುತ್ತವೆ. ಈ ಇಡೀ ಕೊಳಕು ವ್ಯವಹಾರದ ಆಮೂಲಾಗ್ರ ತನಿಖೆ ನಡೆಯಬೇಕು.

  • ಪೀಪಲ್ಸ್ ಡೆಮಾಕ್ರಸಿ ಸಂಪಾದಕೀಯ, ನವಂಬರ್ 10

ವಿವಿಧ ಕಾರ್ಯಕರ್ತರು, ಪತ್ರಕರ್ತರು ಮತ್ತು ರಾಜಕಾರಣಿಗಳ ವಾಟ್ಸ್ ಆಪ್ ಖಾತೆಗಳನ್ನು ಇಸ್ರೇಲಿ ಕಂಪನಿ ಪೆಗಸಸ್ ನ ಬೇಹುಗಾರಿಕೆ ಸಾಧನವನ್ನು ಬಳಸಿ ಸೀಳಿರುವ(ಹ್ಯಾಕ್ ಮಾಡಿರುವ) ಸುದ್ದಿ ಕಳವಳಕಾರಿ ಮತ್ತು ಖಂಡನೀಯ. ಇದು ಹೇಗಾಯಿತು, ಖಾಸಗಿತ್ವದ ಉಲ್ಲಂಘನೆ ಹೇಗೆ ಸಂಭವಿಸಿತು, ಇದಕ್ಕೆ ಯಾರು ಹೊಣೆ ಎಂಬುದಕ್ಕೆ ವಿವರಣೆ ನೀಡಬೇಕಾಗಿದೆ. ಸರಕಾರ ಯಾವುದೇ ವಿವರಣೆಯನ್ನು ಕೊಟ್ಟಿಲ್ಲವಾದರೂ, ಇದರಲ್ಲಿ, ಈ ಬೇಹುಗಾರಿಕೆಯಲ್ಲಿ ಸರಕಾರದ ಶಾಮೀಲಿನತ್ತ ಬೊಟ್ಟು ಮಾಡುವ ಹೆಚ್ಚಿನ ತಥ್ಯಗಳು ಸಾರ್ವಜನಿಕಗೊಂಡಿವೆ.

ಸರಕಾರ, ಈ ಸುದ್ದಿ ಹೊರಬಂದಾಗ, ಹಲವಾರು ಭಾರತೀಯರ ಖಾಸಗಿತ್ವದ ಉಲ್ಲಂಘನೆಯ ಬಗ್ಗೆ ವಾಟ್ಸ್ ಆಪ್ ಯಾವುದೇ ಸರಕಾರೀ ಸಂಸ್ಥೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಹೇಳಿತು. ಆದರೆ ತಾವು ದಸ್ತಾವೇಜುಗಳೊಂದಿಗೆ ಈ ಮಾಹಿತಿಯನ್ನು ನೀಡಿ, ವಾಸ್ತವವಾಗಿ, ಖಾಸಗಿತ್ವದ ಉಲ್ಲಂಘನೆಯಾಗಬಹುದು ಎಂದು ಭಾರತ ಸರಕಾರವನ್ನು ಎಚ್ಚರಿಸಿದ್ದೆವು ಎಂದು ವಾಟ್ಸ್ ಆಪ್ ನವರು ಪ್ರತ್ಯುತ್ತರ ನೀಡಿದರು. ಮೇ ತಿಂಗಳಲ್ಲಿ ಮತ್ತು ನಂತರ ಮತ್ತೆ ಸಪ್ಟಂಬರಿನಲ್ಲಿ ಈ ಎಚ್ಚರಿಕೆಯನ್ನು ನೀಡಿರುವುದಾಗಿ ಅವರು ಹೇಳಿದ್ದಾರೆ. ಸರಕಾರದ ಹೇಳಿಕೆಗೆ ಉತ್ತರವಾಗಿ ವಾಟ್ಸ್ ಆಪ್ ಮೇ ತಿಂಗಳಲ್ಲಿ ಕಳಿಸಿದ ಟಿಪ್ಪಣಿ ಮತ್ತು ಸಪ್ಟಂಬರ್‌ನಲ್ಲಿ ಕಳಿಸಿದ ಪತ್ರವನ್ನು ಲಗತ್ತಿಸಿತ್ತು.

ನಂತರ, ಸರಕಾರ ಇದನ್ನು ದೃಢ ಪಡಿಸಿತು, 121 ಭಾರತೀಯರನ್ನು ಪೆಗಸಸ್ ಬೇಹುಗಾರಿಕೆ ಸಾಧನ ಗುರಿ ಮಾಡಿರುವ ಮಾಹಿತಿಯನ್ನು ಸಪ್ಟಂಬರ್ ನಲ್ಲಿ ಪಡೆದಿರುವುದಾಗಿ ಹೇಳಿತು, ಆದರೆ ಮಾಹಿತಿ ತಂತ್ರಜ್ಞಾನ ಮಂತ್ರಾಲಯದ ಪ್ರಕಾರ ಈ ಪತ್ರ ಬಹಳ ಅಸ್ಪಷ್ಟವಾಗಿತ್ತು.

ವಾಟ್ಸ್ ಆಪ್ ಸರಕಾರದೊಂದಿಗೆ ಹಂಚಿಕೊಂಡ ಮಾಹಿತಿಯ ವಿವರಗಳನ್ನು ನೀಡಿರುವುದು, ಈ ಬೇಹುಗಾರಿಕೆಗೆ ಗುರಿಯಾದ ಜನಗಳ ಹೆಸರುಗಳೆಲ್ಲ ಸರಕಾರ ಮತ್ತು ಅದರ ಧೋರಣೆಗಳ ಟೀಕಾಕಾರರಾಗಿರುವ ಸುಪರಿಚಿತ ಕಾರ್ಯಕರ್ತರು ಮತ್ತು ಪತ್ರಕರ್ತರದ್ದಾಗಿರುವುದು, ಈ ಬಗ್ಗೆ ತಮಗೆ ಗೊತ್ತಿರಲಿಲ್ಲ ಎಂದು ನಟಿಸುವ ಸರಕಾರದ ಅಸಮರ್ಪಕ ಮತ್ತು ಕುಂಟು ನೆವವೊಡ್ಡುವ ಪ್ರಯತ್ನಗಳು-ಇವೆಲ್ಲವೂ ಸರಕಾರವೇ ತನ್ನನ್ನು ಟೀಕಿಸುವವರ ಖಾತೆಗಳನ್ನು ಸೀಳಲು ಇಸ್ರೇಲೀ ಬೇಹುಗಾರಿಕೆ ಸಾಧನವನ್ನು ಬಳಸುವಲ್ಲಿ ಶಾಮೀಲಾಗಿದೆ ಎಂಬ ಸಂದೇಹಗಳನ್ನು ದೃಢಪಡಿಸುತ್ತವೆ. ವಾಟ್ಸ್ ಆಪ್ ಸರಕಾರಕ್ಕೆ ನೀಡಿರುವ ಹೆಸರುಗಳಲ್ಲಿ ಭೀಮ-ಕೋರೆಗಾಂವ್ ವಿಷಯದಲ್ಲಿ ಆಪಾದಿತರಾಗಿರುವವರು ಮತ್ತು ಅವರ ರಕ್ಷಣೆಗೆ ನಿಂತಿರುವ ವಕೀಲರಲ್ಲಿ ಹಲವರ ಹೆಸರುಗಳು ಇವೆ. ಆದ್ದರಿಂದ ಇವೆರಡರ ನಡುವಿನ ಸಂಬಂಧ ಸಾಕಷ್ಟು ಸ್ಪಷ್ಟವಾಗಿದೆ.

ತನ್ನ ಬೇಹುಗಾರಿಕೆ ತಂತ್ರಜ್ಞಾನವನ್ನು ಸರಕಾರಗಳಿಗೆ ಮತ್ತು ಸರಕಾರೀ ಏಜೆನ್ಸಿಗಳಿಗೆ ಮಾತ್ರ ನೀಡುವುದು ಎಂದು ಅದನ್ನು ಉತ್ಪಾದಿಸಿದ ಎನ್ ಎಸ್ ಒ ಕಂಪನಿ ಹೇಳಿಕೆ ನೀಡಿದೆ. ಈ ಬೇಹುಗಾರಿಕೆ ತಂತ್ರಜ್ಞಾನ ವಿಪರೀತ ವೆಚ್ಚದಾಯಕವಾಗಿದ್ದು ಯಾವುದೇ ಖಾಸಗಿ ಸಂಸ್ಥೆಗೆ ಇದರ ವೆಚ್ಚ ಭರಿಸುವುದು ಸಾಧ್ಯವಿಲ್ಲ ಎಂಬುದನ್ನೂ ಇಲ್ಲಿ ಗಮನಿಸಬಹುದು.

ಈ ಇಡೀ ಕೊಳಕು ವ್ಯವಹಾರದ ಆಮೂಲಾಗ್ರ ತನಿಖೆ ನಡೆಯಬೇಕು. ಸರಕಾರೀ ಏಜೆನ್ಸಿಗಳು ಯಾವುದಾದರೂ ಈ ಕಾನೂನುಬಾಹಿರ ಕೃತ್ಯಕ್ಕೆ ಕಾರಣರಾಗಿದ್ದರೆ, ಅದಕ್ಕೆ ಹೊಣೆಗಾರರಾದವರನ್ನು ಶಿಕ್ಷಿಸಬೇಕು. ಈ ಪ್ರಕರಣ ಸಾಮಾನ್ಯ ನಾಗರಿಕರ ಹಕ್ಕುಗಳು ಮತ್ತು ಖಾಸಗಿತ್ವವನ್ನು ಕಾಪಾಡಿಕೊಳುವ್ಳ ಒಂದು ಸಮಗ್ರ ಮಾಹಿತಿ ರಕ್ಷಣಾ ಕಾಯ್ದೆಯನ್ನು ತರಬೇಕಾದ ತುರ್ತನ್ನು ಎತ್ತಿತೋರಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಿಎಸ್​​ವೈ ರಾಜೀನಾಮೆ ಘೋಷಣೆ..!

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಬೆಂಗಳೂರು : ಸರ್ಕಾರದ ಎರಡು ವರ್ಷಗಳ ಸಾಧನಾ ಕಾರ್ಯಕ್ರಮದ ಭಾಷಣದಲ್ಲಿ ಭಾವುಕರಾಗಿ ಸಿಎಂ ಬಿಎಸ್​​ವೈ ಕಣ್ಣೀರು ಹಾಕಿದರು.

ಸಂಘದ ಕಾರ್ಯಕರ್ತನಾಗಿ ನಂತರ ಆರೆಸ್ಸೆಸ್ ಪ್ರಚಾರಕನಾಗಿ ಬಳಿಕ ರಾಜಕೀಯ ಜೀವನ ಪ್ರವೇಶಿಸಿ ಸಂದರ್ಭದಿಂದ ಹಿಡಿದು ತಮ್ಮ ಈಗಿನ ರಾಜಕೀಯದವರೆಗೂ ತಮ್ಮ ಹೋರಾಟಗಳನ್ನ ಅವರು ಮೆಲುಕು ಹಾಕಿದರು. ಭಾಷಣದ ಮಧ್ಯೆ ಅವರು ಗದ್ಗದಿತರಾಗಿ ಕಣ್ಣೀರು ಹಾಕಿದರು. ಕೊನೆಯಲ್ಲಿ ಗದ್ಗದಿತರಾಗಿ ಊಟದ ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಕಣ್ಣೀರು ಹಾಕಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹಿರಿಯ ನಟಿ ಜಯಂತಿ ಇನ್ನಿಲ್ಲ

Published

on

ಸುದ್ದಿದಿನ, ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ (76) ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕನ್ನಡ, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ 6 ಭಾಷೆಗಳಲ್ಲಿ ನಟಿಸಿದ್ದಾರೆ. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದರು. ಜಯಂತಿ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೊಟ್ಟೆ ಖರೀದಿಯಲ್ಲಿ ಅವ್ಯವಹಾರ ; ಕಾಣದ ಕೈಗಳು ಕೆಲಸ ಮಾಡುತ್ತಿವೆ : ಸಚಿವೆ ಶಶಿಕಲಾ ಜೊಲ್ಲೆ

Published

on

ಸುದ್ದಿದಿನ, ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದ್ದು, ವಯಕ್ತಿಕವಾಗಿ ನನ್ನ ತೇಜೊವಧೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೊಟ್ಟೆ ಖರೀದಿಗೆ ಇದುವರೆಗೂ ಯಾವದೇ ಟೆಂಡರ್ ಕರೆದಿಲ್ಲ. ಅಲ್ಲದೇ ಟೆಂಡರ್ ನೀಡಲು ನಾನು ವಯಕ್ತಿಕವಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ.

ನಮ್ಮ ಬಿಜೆಪಿ ಪಕ್ಷದ ಶಾಸಕರಾದ ಪರಣ್ಣ ಮುನವಳ್ಳಿಯವರು ತಮ್ಮ ಸಂಬಂಧಿಕರು ಎಂದು ಕರೆದುಕೊಂಡು ಬಂದಾಗ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದೇನೆ. ಇದರಲ್ಲಿ ಯಾವುದೇ ಹಣಕಾಸಿನ ವ್ಯವಹಾರದ ಕುರಿತು ನಾನು ಮಾತನಾಡಿಲ್ಲ.

ಆದರೆ, ಒಬ್ಬ ಮಹಿಳೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ರಾಜಕೀಯದಲ್ಲಿ ನನ್ನದೇ ಆದ ತತ್ವ ಸಿದ್ದಾಂತ ನಂಬಿಕೊಂಡು ಕೆಲಸ ಮಾಡುತ್ತಿರುವ ನನ್ನ ಏಳಿಗೆಯನ್ನು ಸಹಿಸದವರು, ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಅನುಮಾನ
ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending