ರಾಜಕೀಯ
ಬಿಜೆಪಿಯವರಂತೆ ಸದನದಲ್ಲಿ ಕೂತು ಬ್ಲೂ ಪಿಲ್ಮ್ ನೋಡೋಕಾಗುತ್ತಾ | ಎಸ್.ಎಲ್.ಭೈರೇಗೌಡ ವ್ಯಂಗ್ಯ

ಸುದ್ದಿದಿನ,ಚಿಕ್ಕಮಗಳೂರು | ರೈತನ ಮಗ ನಾಟಿ ಮಾಡ್ದೆ, ಕ್ಲಬ್ ನಲ್ಲಿ ಡ್ಯಾನ್ಸ್ ಮಾಡೋಕಾಗುತ್ತಾ, ಇಲ್ಲ ಬಿಜೆಪಿಯವರಂತೆ ಸದನದಲ್ಲಿ ಕೂತು ಬ್ಲೂ ಫಿಲ್ಮಂ ನೋಡೋಕಾಗುತ್ತಾ,ಬಿಜೆಪಿಯವ್ರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿದ್ದಾರೆ ಎಂದು ಈಶ್ವರಪ್ಪಗೆ ಚಿಕ್ಕಮಗಳೂರಿನಲ್ಲಿ ತಿರುಗೇಟು ನೀಡಿದರು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಧರ್ಮೇಗೌಡ.
ನಾವು ಎಷ್ಟೇ ಒಳ್ಳೆ ಕೆಲಸ ಮಾಡಿದ್ರು ಬಿಜೆಪಿಯವ್ರಿಗೆ ಚೆಂದ ಕಾಣಲ್ಲ.ನಮ್ಮ ಬಗ್ಗೆ ಪ್ರತಿನಿತ್ಯ ಮಾತನಾಡದಿದ್ರೆ ಬಿಜೆಪಿಯವರಿಗೆ ಸಮಾಧಾನ ಆಗಲ್ಲ.ನಾವು ಕೂತ್ರು ನಿಂತ್ರು ಅವರು ಮಾತನಾಡೋದನ್ನು ನಿಲ್ಲುಸುತ್ತಿಲ್ಲ.
ನಮ್ಮ ಬಗ್ಗೆ ಮಾತನಾಡದಿದ್ರೆ ತಿಂದ ಅನ್ನ ಮೈಗೆ ಹತ್ತಲ್ಲ.ನಾವು ಏನೇ ಮಾಡಿದ್ರು ಅವ್ರು ಮಾತಾಡ್ಬೇಕು, ಮಾತಾಡ್ತಾರೆ,ಸತ್ಯ ಏನೆಂಬುದು ಜನರಿಗೆ ಗೊತ್ತು ಎಂದು ಬಿಜೆಪಿ ವಿರುದ್ದವಾಗ್ದಾಳಿ ನಡೆಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ರಾಜಕೀಯ
ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ : ಮೇಯರ್ ಆಗಿ ಎಸ್.ಟಿ.ವೀರೇಶ್, ಉಪಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್

ಸುದ್ದಿದಿನ,ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ – ಉಪಮೇಯರ್ ಚುನಾವಣೆಯತಲ್ಲಿ ಬಿಜೆಪಿಯು ಭರ್ಜರಿ ಗೆಲುವು ಪಡೆಯಿತು. ಮೇಯರ್ ಆಗಿ ಬಿಜೆಪಿಯ ಎಸ್.ಟಿ. ವೀರೇಶ್ ಹಾಗೂ ಉಪ ಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾದರು.
29 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯು ದಾವಣಗೆರೆ ಪಾಲಿಕೆ ಅಧಿಕಾರ ಹಿಡಿದಿದ್ದು, ಕಾಂಗ್ರೆಸ್ 22 ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ | ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
ಸುದ್ದಿದಿನ.ಕಾಂ|ವಾಟ್ಸಾಪ್|9980346243
ರಾಜಕೀಯ
ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು

ಸುದ್ದಿದಿನ, ದಾವಣಗೆರೆ : ಕಾಂಗ್ರೆಸ್ ನ ಹಿರಿಯ ಮುಖಂಡ ಶಾಸಕ ಶಾಮನೂರು ಶಿವಶಂಕರಪ್ಪ ಗೈರು ಹಾಜರಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕರ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಮತದಾನ ನಡೆಯಿತು.
ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಎಸ್. ಟಿ. ವೀರೇಶ್, ಕಾಂಗ್ರೆಸ್ ನಿಂದ ಗಡಿಗುಡಾಳ್ ಮಂಜುನಾಥ್ ಅವರು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಶಿಲ್ಪ ಜಯಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿಯಿಂದ ಸಂಸದ ಜಿ ಎಂ ಸಿದ್ದೇಶ್ವರ್ , ಸಚಿವ ಆರ್ ಶಂಕರ್, ಚಿದಾನಂದಗೌಡ ಸೇರಿದಂತೆ ಬಿಜೆಪಿ ಪಕ್ಷದ 29 ಸದಸ್ಯರು ಇದ್ದರು. ಕಾಂಗ್ರೆಸ್ ನ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮೂವರು ಎಂ ಎಲ್ ಸಿ ಗಳಾದ ಕೆಸಿ ಕೊಂಡಯ್ಯ, ರಘು ಆಚಾರ್ , ಯುಬಿ ವೆಂಕಟೇಶ್ ಗೈರಾಗಿದ್ದರು. ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಸೇರಿದಂತೆ ಮಹಾನಗರ ಪಾಲಿಕೆ 22 ಸದಸ್ಯರು ಹಾಜರಿದ್ದರು.
ಶಾಸಕ ಶಾಮನೂರು ಶಿವಶಂಕರಪ್ಪ ಆಪ್ತರಾಗಿದ್ದ ಶಿವಕುಮಾರ್ ದೇವರಮನಿ ಮಂಗಳವಾರ (ಫೆ.23) ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವುದು ಖಚಿತವಾಗಿತ್ತು. ಇದರ ನಡುವೆ ಬೆಳಗ್ಗೆ ಕಾಂಗ್ರೆಸ್ ಹಿರಿಯ ಮುಖಂಡರ ಅನುಪಸ್ಥಿತಿಯಲ್ಲಿ ಚುನಾವಣೆ ನೆಡೆದಿದ್ದರಿಂದ ಬಿಜೆಪಿಗೆ ಗೆಲುವು ಸುಲಭವಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ರಾಜಕೀಯ
ಗುಜರಾತ್ | ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ಸುದ್ದಿದಿನ,ಗಾಂಧಿನಗರ: ಗುಜರಾತ್ ನಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಭರ್ಜರಿ ಸಾಧನೆ ಮಾಡಿದ್ದು, ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿದೆ. ಮೊದಲ ಪ್ರಯತ್ನದಲ್ಲೇ ಆಮ್ ಆದ್ಮಿ ಪಕ್ಷವು ಉತ್ತಮ ಸಾಧನೆ ಮಾಡಿದೆ.
6ಮಹಾನಗರ ಪಾಲಿಕೆಗಳ ಒಟ್ಟು 576 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 449 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಅಹಮಾದಾಬಾದ್, ಸೂರತ್, ವಡೋದರ, ರಾಜ್ಕೋಟ್, ಜಾಮ್ನಗರ, ಭಾವಾನಗರ ಪಾಲಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.
6 ಮಹಾನಗರ ಪಾಲಿಕೆಗಳ ಒಟ್ಟು 576 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 449 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಅಹಮಾದಾಬಾದ್, ಸೂರತ್, ವಡೋದರ, ರಾಜ್ಕೋಟ್, ಜಾಮ್ನಗರ, ಭಾವಾನಗರ ಪಾಲಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.
ಇದನ್ನೂ ಓದಿ | ಕೊರೋನಾ ಹೊಸ ಅಲೆ ಹೆಚ್ಚಳ | ಔರಂಗಾಬಾದ್ ನಲ್ಲಿ ಲಾಕ್ ಡೌನ್ ಘೋಷಣೆ
ಕಾಂಗ್ರೆಸ್ ಕೇವಲ 44 ಕ್ಷೇತ್ರಗಳನ್ನು ಗೆದ್ದುಕೊಂಡರೆ, 470 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆಪ್ 27 ಸ್ಥಾನಗಳನ್ನು ಗೆದ್ದುಕೊಂಡಿದೆ. ಸೂರತ್ನಲ್ಲಿ ಕಾಂಗ್ರೆಸ್ ಪಕ್ಷವನ್ನು ಮೂರನೇ ಸ್ಥಾನಕ್ಕೆ ಆಪ್ ತಳ್ಳಿದೆ. ಹೀನಾಯ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ರಾಜ್ಕೋಟ್, ಸೂರತ್, ಭಾವಾನಗರದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ ಗೆಲುವು ನನ್ನ ಪಾಲಿಗೆ ವಿಶೇಷವಾಗಿದೆ. ಅಭಿವೃದ್ಧಿಗೆ ಜನ ಮತ ಹಾಕಿದ್ದಾರೆ. 2 ದಶಕಗಳಿಂದ ಜನ ನಮ್ಮ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಗೆಲುವಿಗೆ ಕಾರಣರಾದ ಬಿಜೆಪಿಯ ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Thank you Gujarat!
Results of municipal elections across the state clearly show the unwavering faith people have towards politics of development and good governance.
Grateful to the people of the state for trusting BJP yet again.
Always an honour to serve Gujarat.
— Narendra Modi (@narendramodi) February 23, 2021
I would like to appreciate the efforts of each and every Karyakarta of @BJP4Gujarat, who reached out to people and elaborated on our Party’s vision for the state. The Gujarat government’s pro-people policies have positively impacted the entire state.
— Narendra Modi (@narendramodi) February 23, 2021
Today’s win across Gujarat is very special. For a party that is serving in a state for over two decades to record such a phenomenal win is noteworthy. It is heartening to see widespread support from all sections of society, particularly the youth of Gujarat towards BJP.
— Narendra Modi (@narendramodi) February 23, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ಅಂತರಂಗ5 days ago
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!
-
ದಿನದ ಸುದ್ದಿ5 days ago
ಬಡವರನ್ನು ಸಬಲೀಕರಣಗೊಳಿಸಲು ಉಚಿತ ಅನಿಲ ಸಂಪರ್ಕ ನೀಡಿದ್ದೇವೆ : ಪ್ರಧಾನಿ ಮೋದಿ
-
ಭಾವ ಭೈರಾಗಿ5 days ago
ಕರುಣಾಳು ಅವನು, ಅವನು ನನ್ನವನು..!
-
ದಿನದ ಸುದ್ದಿ4 days ago
ದಿಶಾ ಕೇಸ್ | ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ..! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು..!
-
ಅಂತರಂಗ7 days ago
ಸ್ಫೂರ್ತಿ ಚೇತನ ; ಈ ಗುರುಚೇತನ ಡಾ. ಜಿ ಎಂ ಗಣೇಶ್
-
ಲೈಫ್ ಸ್ಟೈಲ್4 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ಕ್ರೀಡೆ4 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್4 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ