ದಿನದ ಸುದ್ದಿ
ವಂಶವಾಹಿ ರೋಗಗಳ ತಡೆಯಲು ಗರ್ಭಿಣಿಯರಿಗೆ ಜೆನೆಟಿಕ್ ಸ್ಕ್ರೀನಿಂಗ್ ಕಡ್ಡಾಯ; ಹೊಸ ಯೋಜನೆ ಜಾರಿಗೆ ಕೇಂದ್ರ ಚಿಂತನೆ

ಸುದ್ದಿದಿನ ಡೆಸ್ಕ್: ವಂಶವಾಹಿ ರೋಗಗಳ ನಿಯಂತ್ರಣ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆಯು ಯೋಜನಾ ಕರಡು ಪ್ರತಿ ರಚಿಸಿದ್ದು, ಗರ್ಭಿಣಿಯರು ಜೆನೆಟಿಕ್ ಪರೀಕ್ಷೆಗೊಳಗಾಗುವುದು ಕಡ್ಡಾಯಗೊಳಿಸುವ ಚಿಂತನೆ ನಡೆಸಿದ್ದು, ಈ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು 30 ಕಾಲಾವಕಾಶ ನೀಡಿದೆ. ಥಲಸ್ಸೆಮಿಯಾ ಮತ್ತು ಸಿಕ್ಕಲ್ ಸೆಲ್ ಅನಿಮಿಯಾ ರೋಗಗಳ ಹತೋಟಿ ಮಾಡಲು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ನೀಡಲು ಮುಂದಾಗಿದೆ.
ಈ ಯೋಜನೆಯು ವಂಶವಾಹಿ ಕಾಯಿಲೆಗಳಿಗೆ ತುತ್ತಾದ ಬಡ ಕುಟುಂಬಗಳಿಗೆ ರೋಗಗಳಿಗೆ ಔಷಧ ಸೇರಿ ಉಚಿತ ಚಿಕಿತ್ಸೆ ನೀಡುವ ಉದ್ದೇಶ ಹೊಂದಿದೆ. ಮೇಕ್ ಇನ್ ಇಂಡಿಯಾ ಸಹಯೋಗದಲ್ಲಿ ಕೈಗೊಳ್ಳುತ್ತಿರುವ ಯೋಜನೆಗೆ ಪೂರಕವಾದ ಸಾಧನ ಸಲಕರಣೆಗಳನ್ನು ಉತ್ಪಾದಿಸಲು ಉತ್ತೇಜನ ನೀಡಲಾಗುತ್ತಿದೆ. ಚಿಕಿತ್ಸಾ ವೆಚ್ಚದ ಮೇಲೆ ವಿಧಿಸುವ ಜಿಎಸ್ಟಿ, ಕಸ್ಟಮ್ ಡ್ಯೂಟಿಗೆ ವಿನಾಯಿತಿ ನೀಡಿದೆ. ದೇಶಾದ್ಯಂತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನೂ ಈ ಪರೀಕ್ಷೆಗೊಳಪಡಿಸಲು ಚಿಂತನೆ ನಡೆಸಿದೆ.
ಸರ್ಕಾರ ಈಗ ಸಿದ್ಧಪಡಿಸಿರುವ ಕರಡು ಪ್ರತಿ ಪ್ರಕಾರ ಭಾರತದಲ್ಲಿ 3.6ರಿಂದ 3.9 ಕೋಟಿ ಥಲಸ್ಸೆಮಿಯಾ ವಾಹಕರಿದ್ದಾರೆ. ಪ್ರತಿ ವರ್ಷವೂ 10,000ರಿಂದ 15,000 ಮಕ್ಕಳು ಥಲೆಸ್ಸೆಮಿಯಾಕ್ಕೆ ತುತ್ತಾಗುತ್ತಿದ್ದಾರೆ. 25,00,000 ಮಂದಿ ಸಿಕಲ್ ಸೆಲ್ ವಾಹಕರಿದ್ದು, 1,25,000 ರೋಗಿಗಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಚಿಕಿತ್ಸಾ ಕೇಂದ್ರ ಆರಂಭಿಸಲು ಉದ್ದೇಶಿಸಿದ್ದು, ಇವುಗಳಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒದಗಿಸಿ ಥಲೆಸ್ಸೆಮಿಯಾ, ಸಿಕಲ್ ಸೆಲ್ ಅನೆಮಿಯಾ ರೋಗಿಗಳಿಗೆ ಸಮಗ್ರ ಚಿಕಿತ್ಸೆ ನೀಡುವ ಚಿಂತನೆ ಹೊಂದಿದೆ. ಬೋನ್ ಮ್ಯಾರೋ ಟ್ರಾನ್ಸಪ್ಲಾಂಟ್ ಘಟಕ ಮತ್ತು ಪ್ರಸವಪೂರ್ವ ರೋಗನಿರ್ಣಯ ಕೇಂದ್ರ ಆರಂಭಿಸಲಿದೆ. ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆ, ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ತರಬೇತಿ, ಶಿಕ್ಷಣ ನೀಡಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಕೆಂಗಾಪುರ | ಮಾ.12 ರಂದು ಶ್ರೀ ರಾಮಲಿಂಗೇಶ್ವರ ಮಹಾ ಸ್ವಾಮಿಯವರ 45 ನೇ ಮುಳ್ಳುಗದ್ದಿಗೆ ; ಉಚಿತ ಸಾಮೂಹಿಕ ವಿವಾಹ ಮಹೋತ್ಸವ

ಸುದ್ದಿದಿನ, ಚನ್ನಗಿರಿ : ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ರಾಮಲಿಂಗೇಶ್ವರ ಮಹಾ ಸ್ವಾಮಿಯವರ 45 ನೇ ಮುಳ್ಳು ಗದ್ದಿಗೆ ಮಹೋತ್ಸವವು ಸುಕ್ಷೇತ್ರ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ ಮಾ.12 ರಂದು ನಡೆಯಲಿದೆ.
ಇದನ್ನೂ ಓದಿ | ದಾವಣಗೆರೆ | ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾಸಮಿತಿಯಿಂದ ಪಾದಯಾತ್ರೆ ಆರಂಭ
ಈ ಮಹೋತ್ಸವದಲ್ಲಿ ಕುಂಭಾಭಿಷೇಕ ಮತ್ತು 101 ಉಚಿತ ಸಾಮೂಹಿಕ ವಿವಾಹವು ಜರುಗಲಿದ್ದು ವಧು-ವರರಿಗೆ ತಾಳಿ-ಬಟ್ಟೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಶ್ರೀ ಮಠದ ಆಡಳಿತ ಮಂಡಳಿಯವರು ಹಾಗೂ ಶ್ರೀಮಠದ ವಿದ್ಯಾಸಂಸ್ಥೆಯ ಪಿಯು ವಿಭಾಗದ ಪ್ರಾಂಶುಪಾಲರಾದ ಟಿ.ಎಂ.ದಾದಾಪೀರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾಸಮಿತಿಯಿಂದ ಪಾದಯಾತ್ರೆ ಆರಂಭ

ಸುದ್ದಿದಿನ,ದಾವಣಗೆರೆ: ನಗರದ ಮಟ್ಟಿಕಲ್ಲು ಬಸವೇಶ್ವರ ದೇವಸ್ಥಾನದಿಂದ ಮಂಗಳವಾರ ಬೆಳಗ್ಗೆ 7.30 ಕ್ಕೆ 80 ಭಕ್ತಾದಿಗಳು ಪಾದಯಾತ್ರೆ ಆರಂಭಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾ ಸಮಿತಿವತಿಯಿಂದ ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 9ನೇವರ್ಷದ ಪಾದಯಾತ್ರೆಯನ್ನು ಮಟ್ಟಿಕಲ್ಲು ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಾವಣಗೆರೆ ನಗರಪಾಲಿಕೆ ಮಾಜಿ ಸದಸ್ಯರಾದ ಶ್ರೀ ರಮೇಶ್ ನಾಯ್ಕರವರು ಚಾಲನೆ ನೀಡಿದರು.
ಚನ್ನಗಿರಿ | ಕುಡಿಯುವ ನೀರಿಗೆ ರೂ.5.47 ಕೋಟಿ ಹಣ ಮಂಜೂರು: ಸಚಿವ ಭೈರತಿ ಬಸವರಾಜ್
ಪಾದಯಾತ್ರಿಗಳು ಬಾಡ, ಸಂತೇಬೆನ್ನೂರು, ಚನ್ನಗಿರಿ, ಅಜ್ಜಂಪುರ, ಕಡೂರು, ಕೊಟ್ಟಿಗೆಹಾರ, ಉಜಿರೆ ಮಾರ್ಗವಾಗಿ ಮಾರ್ಚ್ 10ನೆ ತಾರೀಖಿನಂದು ಧರ್ಮಸ್ಥಳ ತಲುಪುವರು ಈ ಪಾದಯಾತ್ರೆಗೆ ದಾವಣಗೆರೆ ಮತ್ತು ಹರಿಹರದ ಸುಮಾರು 80 ಜನ ಭಕ್ತಾದಿಗಳು ಪಾದಯಾತ್ರಿ ಸೇವಾ ಸಮಿತಿಯ ರಾಜನಾಯ್ಕ, ಶಿವಾಜಿ, ಎ.ಬಿ.ಚಂದ್ರಪ್ಪ, ವೇಣುಗೋಪಾಲ್, ಕೃಷ್ಣ, ಅರುಣ್ ಹಿರೇಮಠ ಮುಂತಾದವರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಇಂದು ಬಿಐಎಸ್ ನಿಂದ ಕಾರ್ಯಾಗಾರ

ಸುದ್ದಿದಿನ,ದಾವಣಗೆರೆ : ಮಾ.02 ರಂದು ಬೆಳಿಗ್ಗೆ 10.30 ಕ್ಕೆ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್, ಪಿ.ಬಿ.ರೋಡ್ ದಾವಣಗೆರೆ ಇಲ್ಲಿ ಭಾರತೀಯ ಗುಣಮಟ್ಟ ಮಾನದಂಡ ಸಂಸ್ಥೆ(ಬಿಐಎಸ್), ಕೇಂದ್ರ ಸರ್ಕಾರದ ಕಚೇರಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ, ದಾವಣಗೆರೆ ಇವರ ಸಂಯೋಜನೆಯೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ | ಚನ್ನಗಿರಿ | ಕುಡಿಯುವ ನೀರಿಗೆ ರೂ.5.47 ಕೋಟಿ ಹಣ ಮಂಜೂರು: ಸಚಿವ ಭೈರತಿ ಬಸವರಾಜ್
ಕಾರ್ಯಕ್ರಮದ ಉದ್ಘಾಟನೆಯನ್ನು ಲೋಕಸಭಾ ಸದಸ್ಯರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರುಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಜಯಪ್ರಕಾಶ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ರಾಜಕೀಯ6 days ago
ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
-
ರಾಜಕೀಯ6 days ago
ದೇವರಮನೆ ಶಿವಕುಮಾರ್ ಬಿಜೆಪಿ ಸೇರ್ಪಡೆ | ನಾವು ಯಾರಿಗೂ ಆಮಿಷ ಒಡ್ಡಿಲ್ಲ : ಸಂಸದ ಜಿಎಂ ಸಿದ್ದೇಶ್ವರ್
-
ರಾಜಕೀಯ6 days ago
ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ : ಮೇಯರ್ ಆಗಿ ಎಸ್.ಟಿ.ವೀರೇಶ್, ಉಪಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್
-
ಲೈಫ್ ಸ್ಟೈಲ್7 days ago
ನರದೌರ್ಬಲ್ಯ ನಿವಾರಣೆಗೆ ಬೆಳ್ಳುಳ್ಳಿ ಬಳಸಿ
-
ರಾಜಕೀಯ7 days ago
ಗುಜರಾತ್ | ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
-
ಬಹಿರಂಗ5 days ago
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು..!
-
ಸಿನಿ ಸುದ್ದಿ7 days ago
ಪೊಗರು ವಿವಾದ ಅಂತ್ಯ | ಸೀನ್ ಕಟ್ ; ಶುಭಹಾರೈಸಿದ ಬ್ರಾಹ್ಮಣ ಸಮುದಾಯ
-
ಕ್ರೀಡೆ5 days ago
ಅತಿ ಕಡಿಮೆ ಪಂದ್ಯ ; 400 ವಿಕೆಟ್ : ದಾಖಲೆ ಬರೆದ ಸ್ಪಿನ್ನರ್ ಆರ್ ಅಶ್ವಿನ್