Connect with us

ಸಿನಿ ಸುದ್ದಿ

ಹಿಟ್ಲರನ ಸರ್ವಾಧಿಕಾರದ ವಿರುದ್ಧ ‘ಚಾರ್ಲಿ ಚಾಪ್ಲಿನ್’ ಭಾಷಣ

Published

on

“ಕ್ಷಮಿಸಿ! ನಾನು ಸರ್ವಾಧಿಕಾರಿಯಾಗಲು ಬಯಸಲಾರೆ, ಅದು ನನ್ನ ಕೆಲಸವೂ ಅಲ್ಲ. ನಾನು ಯಾರನ್ನೂ ಕೂಡಾ ಗೆಲ್ಲಲು ಅಥವಾ ಆಳಲು ಬಯಸುವುದಿಲ್ಲ. ಸಾಧ್ಯವಾದರೆ ನಾವು ಯಹೂದಿ, ನಾಝಿ, ಕರಿಯರು, ಬಿಳಿಯರು ಹೀಗೆ ಎಲ್ಲರಿಗೂ ಸಹಾಯ ಮಾಡುವಂತಾಗಬೇಕು. ಎಲ್ಲರೂ ಪರಸ್ಪರ ಸಹಾಯ ಮಾಡಿಕೊಳ್ಳಬೇಕು. ಮನುಷ್ಯರೆಂದರೆ ಹಾಗೆ. ನಾವು ಪರಸ್ಪರ ಸಂತೋಷದಿಂದ ಬದುಕಬೇಕೇ ಹೊರತು ಇತರರ ದುಃಖಕ್ಕಾಗಿ ಅಲ್ಲ. ಯಾರನ್ನೂ ದ್ವೇಷಿಸಲೇ ಕೂಡದು. ಈ ಭೂಮಿಯಲ್ಲಿ ಎಲ್ಲರಿಗೂ ಜಾಗವಿದೆ. ಮತ್ತೆ ಈ ಭೂಮಿಯು ಎಲ್ಲರ ಅಗತ್ಯಗಳನ್ನೂ ಪೂರೈಸುವಷ್ಟು ಸಮೃದ್ಧವಾಗಿದೆ. ಜೀವನದ ಹಾದಿ ಸುಂದರವೂ ಮುಕ್ತವೂ ಆಗಿರಲು ಸಾಧ್ಯ. ಆದರೆ ನಾವು ಆ ಹಾದಿಯನ್ನೇ ಕಳೆದುಕೊಂಡಿದ್ದೇವೆ.

ಸ್ವಾರ್ಥವು ಮನುಷ್ಯನ ಆತ್ಮವನ್ನೇ ಕಲುಷಿತಗೊಳಿಸಿದೆ, ಜಗತ್ತನ್ನು ದ್ವೇಷವೆಂಬ ಬೇಲಿಯಿಂದ ಬಂಧಿಸಿದೆ, ದುಃಖ ಮತ್ತು ರಕ್ತಪಾತದೆಡೆಗೆ ಸಾಗಿಸುತ್ತಿದೆ. ನಾವು ವೇಗವನ್ನು ಅಭಿವೃದ್ಧಿಪಡಿಸಿದ್ದೇವೆ. ಆದರೆ ನಮ್ಮನ್ನು ನಾವು ಬಂಧಿಸಿದ್ದೇವೆ. ನಮ್ಮನ್ನು ಮುಕ್ತಗೊಳಿಸಿರುವ ಯಂತ್ರಗಳು ನಮ್ಮನ್ನು ಆಸೆಯ ಕೂಪದಲ್ಲಿರಿಸಿವೆ. ಜ್ಞಾನವು ನಮ್ಮನ್ನು ಸಿನಿಕರನ್ನಾಗಿಸಿದೆ. ನಮ್ಮ ಜಾಣ್ಮೆಯು ಕಠಿಣವೂ ನಿರ್ದಯಿಯೂ ಆಗಿದೆ. ನಾವು ತುಂಬಾ ಯೋಚಿಸುತ್ತೇವೆ ಆದರೆ ಕಡಿಮೆ ಪ್ರೀತಿಸುತ್ತೇವೆ.
ಯಂತ್ರಗಳಿಗಿಂತ ನಮಗೆ ಹೆಚ್ಚು ಮಾನವೀಯತೆಯ ಅಗತ್ಯವಿದೆ. ಜಾಣ್ಮೆಗಿಂತ ಹೆಚ್ಚು ದಯೆ , ಸಭ್ಯತೆಯ ಅವಶ್ಯಕತೆಯಿದೆ. ಈ ಗುಣಗಳಿಲ್ಲದೆ ಹೋದರೆ, ಬದುಕು ಹಿಂಸಾಮಯವಾಗುವುದು ಮತ್ತು ವಿನಾಶವಾಗುವುದು.

ವಿಮಾನ ಮತ್ತು ರೇಡಿಯೋಗಳು ನಮ್ಮನ್ನು ಹತ್ತಿರಕ್ಕೆ ತಂದಿವೆ. ಈ ಸಂಶೋಧನೆಗಳ ತಥ್ಯವೇ ಮನುಷ್ಯನ ಒಳ್ಳೆಯತನವನ್ನು ಕೂಗಿ ಹೇಳುತ್ತಿವೆ, ನಮ್ಮೆಲ್ಲರ ಸಹೋದರೆತೆಗಾಗಿ, ಒಗ್ಗಟ್ಟಿಗಾಗಿ ಮೊರೆಯಿಡುತ್ತಿದೆ. ಈಗಲೂ ಸಹ ನನ್ನ ಧ್ವನಿಯು ಮಿಲಿಯಗಟ್ಟಲೆ ಜನರನ್ನು ತಲುಪುತ್ತಿದೆ. ನಿರ್ಗತಿಕ ಗಂಡಸರು, ಹೆಂಗಸರು, ಪುಟ್ಟ ಪುಟ್ಟ ಮಕ್ಕಳು – ವ್ಯವಸ್ಥೆಯ ಬಲಿ ಪಶುಗಳು, ಮುಗ್ಧ ಜನರನ್ನು ಚಿತ್ರಹಿಂಸೆ ನೀಡಿ ಬಂಧನದಲ್ಲಿರಿಸುವ ವ್ಯವಸ್ಥೆ!

ಯಾರಿಗೆ ನನ್ನ ಮಾತುಗಳು ಕೇಳಿಸುತ್ತಿವೆಯೋ
ಕೇಳಿರಿ. ಧೃತಿಗೆಡದಿರಿ
ನಮ್ಮ ಮೇಲಿರುವ ಈ ವಿಷಾದ ಸ್ವಾರ್ಥ ಸಾಗುತ್ತಿರುವ ಈ ಹೊತ್ತು
ಮಾನವ ಪ್ರಗತಿಯ ಬಗ್ಗೆ ಭಯ ಪಟ್ಟ ಮನುಷ್ಯರ ಕಹಿ ಭಾವನೆಗಳಿವು

ಮಾನವ ದ್ವೇಷವು ಕೊನೆಗೊಳ್ಳಲಿದೆ.
ಸರ್ವಾಧಿಕಾರಿಯ ಅಂತ್ಯವಾಗಲಿದೆ
ಜನರ ಕೈಗಳಿಂದ ಕಿತ್ತುಕೊಂಡ ಅಧಿಕಾರವು
ಮರಳಿ ಜನರ ಕೈಗಳಿಗೆ ಮರಳಲಿದೆ
ಎಲ್ಲಿಯವರೆಗೆ ಮನುಷ್ಯರು ಸಾಯುತ್ತಿರುವರೋ
ಸ್ವಾತಂತ್ರ್ಯವೆಂದೂ ನಾಶವಾಗದು…

ಸೈನಿಕರೇ! ನಿಮ್ಮತನವನ್ನು ದುಷ್ಟರಿಗೆ ಬಿಟ್ಟು ಕೊಡದಿರಿ. ನಿಮ್ಮನ್ನು ಶೋಷಿಸುವವರಿಗೆ
ನಿಮ್ಮನ್ನು ದಾಸ್ಯಕ್ಕೆ ದೂಡಿದವರಿಗೆ
ನಿಮ್ಮ ಬದುಕುಗಳನ್ನು ನಿಯಂತ್ರಿಸುವವರಿಗೆ
ನೀವು ಯಾವುದನ್ನು ಯೋಚಿಸಬೇಕು
ಯಾವುದನ್ನು ಪ್ರೀತಿಸಬೇಕು
ನಿಮ್ಮನ್ನು ದುಡಿಸಿದವರಿಗೆ
ನಿಮ್ಮನ್ನು ಪಶುಗಳಂತೆ ನಡೆಸಿಕೊಂಡವರಿಗೆ
ನಿಮ್ಮನ್ನು ಫಿರಂಗಿಗಳ ಮದ್ದಾಗಿ ಬಳಸಿದವರಿಗೆ
ಮನುಷ್ಯರಲ್ಲದವರಿಗೆ
ನಿಮ್ಮತನವನ್ನು ಬಿಟ್ಟು ಕೊಡದಿರಿ

ಯಾಂತ್ರಿಕ ಮನುಷ್ಯರಿಗೆ
ಯಾಂತ್ರಿಕ ಮನಸ್ಸುಗಳಿಗೆ
ಯಾಂತ್ರಿಕ ಹೃದಯಗಳಿಗೆ
ನೀವು ಯಂತ್ರಗಳಲ್ಲ!
ನೀವು ದನಗಳಲ್ಲ!!
ನೀವು ಮನುಷ್ಯರು!!
ನಿಮ್ಮ ಹೃದಯದಲ್ಲಿ ಮಾನವತೆಯ ಪ್ರೇಮವಿದೆ!
ನೀವು ದ್ವೇಷಿಸಲಾರಿರಿ!
ಕೇವಲ ಪ್ರೀತಿಸಲ್ಪಡವನು ಮಾತ್ರ ದ್ವೇಷಿಸುತ್ತಾನೆ.
ಪ್ರೀತಿಸಲ್ಪಡದ ಅಸಹಜ ವ್ಯಕ್ತಿ!!
ಸೈನಿಕರೆ! ದಾಸ್ಯಕ್ಕಾಗಿ ಹೋರಾಡಬೇಡಿ!
ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿ!
ಸಂತ ಲೂಕ ನ 17 ನೆಯ ಅಧ್ಯಾಯದಲ್ಲಿ ಹೀಗಿದೆ
” ದೇವರ ಸಾಮ್ರಾಜ್ಯವು ಮಾನವನ ಹೃದಯದಲ್ಲಿದೆ”
ಒಬ್ಬನ ಹೃದಯದಲ್ಲಲ್ಲ
ಯಾವುದೋ ಗುಂಪಿನ ಹೃದಯದಲ್ಲಲ್ಲ
ಎಲ್ಲರ ಹೃದಯದಲ್ಲಿಯೂ..

ನಿಮ್ಮ ಹೃದಯದಲ್ಲಿಯೂ
ನಿಮ್ಮಲ್ಲಿ ಶಕ್ತಿಯಿದೆ
ಯಂತ್ರಗಳನ್ನು ತಯಾರಿಸುವ ಶಕ್ತಿ
ಸಂತೋಷಗಳನ್ನು ತಯಾರಿಸುವ ಶಕ್ತಿ
ಈ ಬದುಕನ್ನು ಮುಕ್ತವೂ ಸುಂದರವೂ ಆಗಿಸುವ ಶಕ್ತಿ ನಿಮಗಿದೆ.
ಈ ಬದುಕನ್ನೊಂದು ಅದ್ಭುತ ಸಾಹಸವನ್ನಾಗಿಸಿ.

ಆಮೇಲೆ – ಪ್ರಜಾ ಪ್ರಭುತ್ವದ ಹೆಸರಿನಲ್ಲಿ
ಆ ಶಕ್ತಿಯನ್ನು ಬಳಸೋಣ
ಒಗ್ಗಟ್ಟಾಗೋಣ
ಹೊಸ ವಿಶ್ವಕ್ಕಾಗಿ ಹೋರಾಡೋಣ.

ಸಭ್ಯ ಜಗತ್ತಿಗಾಗಿ…
ಎಲ್ಲಾ ಜನರಿಗೆ ಉದ್ಯೋಗ ನೀಡುವ
ಯುವ ಜನರಿಗೆ ಭವಿಷ್ಯವನ್ನೂ
ವೃದ್ಧರಿಗೆ ರಕ್ಷಣೆಯನ್ನೂ ನೀಡುವ ಆ ಜಗತ್ತಿಗೋಸ್ಕರ!
ಈ ಸುಳ್ಳು ಆಶ್ವಾಸನೆಗಳ ಮೂಲಕವೇ ಭೃಷ್ಟರು ಅಧಿಕಾರಕ್ಕೆ ಬಂದಿದ್ದಾರೆ. ಅದು ಸುಳ್ಳು! ಅವರು ಆ ಆಶ್ವಾಸನೆಗಳನ್ನು ಈಡೇರಿಸಲಾರರು. ಎಂದೆಂದಿಗೂ!!

ಸರ್ವಾಧಿಕಾರಿಯು ತನ್ನನ್ನು ತಾನು ಮುಕ್ತಗೊಳಿಸಿ ಜನರನ್ನು ಗುಲಾಮರನ್ನಾಗಿಸುತ್ತಾನೆ. ನಾವು ಆ ಆಶ್ವಾಸನೆಗಳಿಗೋಸ್ಕರ ಹೋರಾಡೋಣ.
ಮುಕ್ತ ಜಗತ್ತಿಗೋಸ್ಕರ!
ರಾಷ್ಟ್ರಬಂಧಗಳ ವಿಮುಕ್ತಿಗೋಸ್ಕರ!!
ಸ್ವಾರ್ಥ, ದ್ವೇಷ, ಅಸಹನೆಗಳ ಅಳಿವಿಗೋಸ್ಕರ!!
ವೈಚಾರಿಕ ಜಗತ್ತಿಗಾಗಿ ಹೋರಾಡೋಣ
ಎಲ್ಲಿ ವಿಜ್ಞಾನ ಮತ್ತು ಅಭಿವೃದ್ಧಿಯು ಎಲ್ಲಾ ಮನುಷ್ಯರ ಸಂತೋಷದೆಡೆಗೆ ಸಾಗಿಸುವುದೋ ಆ ಜಗತ್ತಿಗಾಗಿ
ಸಂಗಾತಿಗಳೇ ! ಪ್ರಜಾಪ್ರಭುತ್ವದ ಹೆಸರಿನಲ್ಲಿ ! ನಾವೆಲ್ಲರೂ ಒಂದಾಗೋಣ!

ಚಾರ್ಲಿ ಚಾಪ್ಲಿನ್ ನಟಿಸಿದ ‘ದ ಗ್ರೇಟ್ ಡಿಕ್ಟೇಟರ್’ ನ ಭಾಷಣ

-ಅನುವಾದ: ಪುನೀತ್ ಅಪ್ಪು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ರಾಜಕೀಯ

ಮಸ್ಕಿ ಬಿಜೆಪಿ ಅಭ್ಯರ್ಥಿ ಪರ ಇಂದು ಸಿಂಗರ್ ಮಂಗ್ಲಿ ಪ್ರಚಾರ

Published

on

ಸುದ್ದಿದಿನ,ರಾಯಚೂರು: ರಾಬರ್ಟ್ ಸಿನೆಮಾ ‘ಕಣ್ಣೆ ಅದಿರಿಂದಿ’ ಹಾಡಿನ ಮೂಲಕ ಭಾರೀ ಸದ್ದು ಮಾಡಿದ ಗಾಯಕಿ ಮಂಗ್ಲಿ ಮಸ್ಕಿ ಉಪ ಚುನಾವಣಾ ಅಖಾಡದಲ್ಲಿ ಮಂಗಳವಾರ ಬಿಜೆಪಿ ಪರವಾಗಿ ಪ್ರಚಾರ ಮಾಡಲಿದ್ದಾರೆ.

ಬಿಜೆಪಿಯು ಗಾಯಕಿ ಮಂಗ್ಲಿ ಅವರನ್ನ ಪ್ರಚಾರಕ್ಕೆ ಆಹ್ವಾನಿಸಿದ್ದು, ಇಂದು ಮಸ್ಕಿ ಕೆಲ ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಮತಯಾಚಿಸಲಿದ್ದಾರೆ. ಆದರೆ ಚುನಾವಣಾ ಅಭ್ಯರ್ಥಿ ಪ್ರತಾಪ್‌ ಗೌಡ ಪಾಟೀಲರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.

ಚುನಾವಣಾ ಅಭ್ಯರ್ಥಿ, ಪ್ರತಾಪ್‌ ಗೌಡ ಪಾಟೀಲ

ಇದೇ 17 ರಂದು ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೂರು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಭರ್ಜರಿ ರಣತಂತ್ರವನ್ನು ಹೂಡಿದ್ದಾರೆ.

ಇದನ್ನೂ ಓದಿ | ಕವಿತೆ | ಅವಳು ಮಸಣ ಕಾಯುವ ಪಾರ್ವತಿ..! -ಪದ್ಮಶ್ರೀ ಗೋವಿಂದರಾಜು,ಭದ್ರಾವತಿ

ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಿಎಂ ಯಡಿಯೂರಪ್ಪ ಅವರು, ಕಾಂಗ್ರೆಸ್ ನೆಲಸವಾಗುವುದು ನಿಶ್ಚಿತ. 3 ಕ್ಷೇತ್ರಗಳಲ್ಲೂ ದೊಡ್ಡ ಮತಗಳ ಅಂತರದಲ್ಲಿ ನಾವೇ ಗೆಲ್ಲುತ್ತೇವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಇತ್ತ ಮೂರು ಪಕ್ಷಗಳ ಮತಯಾಚನೆಯ ಕಾವು ಏರುತ್ತಲೇ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತಮಿಳು ನಟ ವಿಜಯ್ ಸೈಕಲ್ ನಲ್ಲಿ ಬಂದು ಓಟ್ ಮಾಡಿದ್ದೇಕೆ..? ನಟನ ಆಪ್ತರು ಹೇಳಿದ್ದೇನು ಗೊತ್ತಾ..?

Published

on

ಸುದ್ದಿದಿನ,ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಮಂಗಳವಾರ ನಡೆಯಿತು. ನಟ, ಸೂಪರ್ ಸ್ಟಾರ್ ಇಳಯ ದಳಪತಿ ವಿಜಯ್ ಸೈಕಲ್‍ನಲ್ಲಿ ಮತಗಟ್ಟೆಗೆ ಬಂದು ವೋಟ್ ಹಾಕಿದ್ದು, ನಟ ವಿಜಯ್ ಗೆ‌ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಟ ಇಳಯದಳಪತಿ ವಿಜಯ್ ಅವರು ಸೈಕಲ್‍ನಲ್ಲಿ ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್ ಇಂಟರ್ ನ್ಯಾಷನಲ್ ಪ್ರೀ ಸ್ಕೂಲ್ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳು ನಟ ವಿಜಯ್ ಅವರ ಜೊತೆಯಲ್ಲಿ ಸೆಲ್ಫೀ, ಫೋಟೋ ಮತ್ತು ವೀಡಿಯೋವನ್ನು ಕ್ಲಿಕ್ಕಿಸಿಕೊಂಡರು. ಈ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಮಂಗಳವಾರ ಸಖತ್ ವೈರಲ್ ಆಗಿದ್ದಾವೆ.

ನಟ ವಿಜಯ್ ಅಭಿಮಾನಿಗಳು ರಸ್ತೆ ಮಧ್ಯದಲ್ಲಿ ಅವರನ್ನು ಸುತ್ತವರಿದ ಕಾರಣ ಅವರು ಮತಗಟ್ಟೆಗೆ ಸೈಕಲ್ ನಲ್ಲಿ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ನಂತರ ನಟ ವಿಜಯ್ ತಮ್ಮ ಸಿಬ್ಬಂದಿಯವರ ದ್ವಿಚಕ್ರವಾಹನದಲ್ಲಿ ಹಿಂದೆ ಕುಳಿತು ಮತಗಟ್ಟೆಗೆ ಹೋದರು. ಮತಗಟ್ಟೆಯ ಬಳಿ ಹಲವಾರು ಅಭಿಮಾನಿಗಳು ನಟ ವಿಜಯ್ ನೋಡಲು ನೆರೆದಿದ್ದರು. ನೆರೆದಿದ್ದವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಚ್‌ ಕೂಡ ಮಾಡಬೇಕಾಯಿತು.

ಇಳಯ ದಳಪತಿ ವಿಜಯ್ ಅವರು ಮಾಸ್ಕ್ ಧರಿಸಿಕೊಂಡು ಸೈಕಲ್‌ನಲ್ಲಿ ಮತಗಟ್ಟೆಗೆ ಬಂದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದರು. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಲು ವಿಜಯ್ ಸೈಕಲ್‌ನಲ್ಲಿ ಬಂದಿದ್ದಾರೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಬಾರೀ ಚರ್ಚೆ ನಡೆಯಿತು.

ಸೈಕಲ್ ನಟ ವಿಜಯ್ ಬಂದಿದ್ದೇಕೆ..?

ಕಾರ್ ಪಾರ್ಕಿಂಗ್ ಸಮಸ್ಯೆಯನ್ನು ತಪ್ಪಿಸಲು ನಟ ವಿಜಯ್ ಅವರು ಸೈಕಲ್ ನಲ್ಲಿ ಬಂದು ಮತ ಚಲಾಯಿಸಿದರು. ಆದರೆ ಮತಗಟ್ಟೆ ಇರುವ ಕಿರಿದಾದ ಬೀದಿಯಲ್ಲಿ ಪಾರ್ಕಿಂಗ್ ತೊಂದರೆ ತಪ್ಪಿಸಲು ವಿಜಯ್ ಸೈಕಲ್ ನಲ್ಲಿ ಬಂದರು ಎಂದು ಅವರ ಪಿ ಆರ್ ಓ ಸ್ಪಷ್ಟಪಡಿಸಿದ್ದಾರೆ.

“ತಲಪತಿ ವಿಜಯ್ ಅವರು ಕಾರನ್ನು ಬಳಸುವ ಬದಲು ಸೈಕಲ್‌ನಲ್ಲಿ ಹೋಗಲು ನಿರ್ಧರಿಸಿದರು ಏಕೆಂದರೆ ಮತದಾನ ಕೇಂದ್ರವು ಅವರ ನಿವಾಸದ ಪಕ್ಕದಲ್ಲಿಯೇ ಇತ್ತು ಮತ್ತು ಕಾರಿನಲ್ಲಿ ಹೋಗುವುದರಿಂದ ರಸ್ತೆಯಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಬಹುದು. ಇದರ ಹಿಂದೆ ಬೇರೆ ಯಾವುದೇ ಉದ್ದೇಶವಿರಲಿಲ್ಲ!” – ರಿಯಾಜ್ ಕೆ ಅಹ್ಮದ್ ಟ್ವೀಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಕಿಚ್ಚ ಸುದೀಪ..!

Published

on

ಸುದ್ದಿದಿನ,ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನ ಭೇಟಿಯಾದರು. ಕೇವಲ ಇದೊಂದು ಅನೌಪಚಾರಿಕ ಭೇಟಿ ಎನ್ನಲಾಗಿದ್ದು, ಇತ್ತೀಚೆಗೆ, ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸಿದ ಸಂಭ್ರಮಾಚರಣೆ ವೇಳೆ ಸಿಎಂ ಯಡಿಯೂರಪ್ಪ ಸುದೀಪ್‌ ಅವರನ್ನು ಸನ್ಮಾನಿಸಿದ್ದರು.

ಇದನ್ನೂ ಓದಿ | ಕುಸ್ತಿಪಟು ರಿತಿಕಾ ಫೋಗಟ್ ಆತ್ಮಹತ್ಯೆಗೆ ಶರಣು

ಈ ಹಿನ್ನೆಲೆ ಇಂದು (ಗುರುವಾರ) ಕಿಚ್ಚ ಸ್ವತಃ ಯಡಿಯೂರಪ್ಪ ಅವರ ಮನೆಗೆ ಬಂದು ಅಭಿನಂದನೆ ತಿಳಿಸಿ, ಕೆಲ ಕಾಲ ಮಾತುಕತೆ ನಡೆಸಿದ ಅವರು ಸಿಎಂ ಬಿಎಸ್‌ ಯಡಿಯೂರಪ್ಪಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು. ಈ ವೇಳೆ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಬಿಎಸ್‌ವೈ ಪುತ್ರ ಬಿ.ವೈ ವಿಜಯೇಂದ್ರ ಅವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ16 hours ago

ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ-ಇತರೆ ಸೌಲಭ್ಯ ಅರ್ಜಿ ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ :2020-21 ನೇ ಸಾಲಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ...

ದಿನದ ಸುದ್ದಿ18 hours ago

ಹಳೇ‌ ಕುಂದುವಾಡ ಮನಾ ಯುವ ಬ್ರಿಗೇಡ್, ಜರವೇ ನಾಲ್ಕನೇ ವಾರ್ಷಿಕೋತ್ಸವ | ಯುವಕರ ಸಮಾಜ ಮುಖಿ‌ ಕೆಲಸಗಳು ಉತ್ತಮ‌ ನಾಯಕತ್ವಕ್ಕೆ ಬುನಾದಿ : ಮೇಯರ್ ಎಸ್.ಟಿ.ವೀರೇಶ್

ಸುದ್ದಿದಿನ,ದಾವಣಗೆರೆ : ಯುವಕರು ಸಮಾಜ ಮುಖಿ‌ ಕೆಲಸದಲ್ಲಿ ತೊಡಗಿಸಿಕೊಂಡರೆ ಉತ್ತಮ‌ ನಾಯಕರು ಆಗಲು ಅದು ಬುನಾದಿ ಆಗುತ್ತದೆ ಎಂದು ಮೇಯರ್ ಎಸ್ ಟಿ ವೀರೇಶ್ ತಿಳಿಸಿದರು. ನಗರದ...

ನಿತ್ಯ ಭವಿಷ್ಯ19 hours ago

ಮದುವೆಯಾಗಲು ಯಾವ ಗ್ರಹಗಳು ಚೆನ್ನಾಗಿರಬೇಕು? ಎಂಬುದರ ಎಂಬುವುದರ ಬಗ್ಗೆ ಮಾಹಿತಿ

  ಸೋಮಶೇಖರ್B.Sc ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಸಾಮಾನ್ಯವಾಗಿ ವಿವಾಹದ ಮೊದಲು ಜಾತಕ...

ನಿತ್ಯ ಭವಿಷ್ಯ19 hours ago

ಈ ರಾಶಿಯವರಿಗೆ ವಿದೇಶಕ್ಕೆ ಹೋಗುವ ಕನಸು ಮತ್ತು ಕಂಕಣಬಲ ಕನಸು ನನಸಾಗಲಿದೆ..! ಮಂಗಳವಾರ ರಾಶಿ ಭವಿಷ್ಯ-ಏಪ್ರಿಲ್-20,2021

ಸೂರ್ಯೋದಯ: 06:03 AM, ಸೂರ್ಯಸ್ತ: 06:31 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಚೈತ್ರ ಮಾಸ, ಉತ್ತರಾಯಣ, ವಸಂತಋತು, ಶುಕ್ಲ...

ದಿನದ ಸುದ್ದಿ2 days ago

ನಿಘಂಟು ತಜ್ಞ ಫ್ರೊ.ಜಿ.ವೆಂಕಟಸುಬ್ಬಯ್ಯ ನಿಧನ

ಸುದ್ದಿದಿನ, ಬೆಂಗಳೂರು : ನಾಡಿನ ಖ್ಯಾತ ಸಂಶೋದಕ, ನಿಘಂಟು ತಜ್ಞ ಫ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸೋಮವಾರ ರಾತ್ರಿ 1.15 ರ ವೇಳೆಗೆ ತಮ್ಮ ವಯೋ ಸಹಜ ಕಾರಣಗಳಿಂದ 108...

ದಿನದ ಸುದ್ದಿ2 days ago

ಮತ್ತೆ ಬಂದರೂ ಅದೇ ಕೊರೋನ, ನಾವು ಹೆದರದಿರೋಣ

ಡಾ॥ ಶ್ರೀನಿವಾಸ ಕಕ್ಕಿಲ್ಲಾಯ,ಡಾ॥ ಬಾಲಸರಸ್ವತಿ, ಮಂಗಳೂರು ನಮ್ಮ ರಾಜ್ಯದ ಕೆಲವು ಭಾಗಗಳೂ ಸೇರಿದಂತೆ ದೇಶದ ಹಲವೆಡೆ ಕೊರೋನ ಸೋಂಕು ಮತ್ತೆ ಹರಡುತ್ತಿದೆ. ಅದಕ್ಕೆ ಸಂಭಾವ್ಯ ಕಾರಣಗಳು, ಪರಿಹಾರಗಳು...

ದಿನದ ಸುದ್ದಿ3 days ago

ಡೀಲರ್ಶಿಪ್‍ಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ಮಂಗಳೂರು ರೆಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ ಭಾರತ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ರಿಟೇಲ್...

ದಿನದ ಸುದ್ದಿ3 days ago

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಿಲ್ಲಾ ಕಚೇರಿ ವತಿಯಿಂದ 2019-20ನೇ ಸಾಲಿನ ವಿಶೇಷ ಕೇಂದ್ರಿಯ ನೆರವಿನಡಿ (ಎಸ್‍ಸಿಎ ಯಿಂದ ಎಸ್‍ಸಿಎಸ್‍ಪಿ) ಜಿಲ್ಲೆಯ ಪರಿಶಿಷ್ಟ ಜಾತಿಯ ನಿರುದ್ಯೋಗ...

ದಿನದ ಸುದ್ದಿ3 days ago

ಸಾಮಾಜಿಕ ಸಂವರ್ಧನೆಗೆ ಸಾಹಿತ್ಯಿಕ ಚರ್ಚೆ ಅವಶ್ಯ : ಹಿರಿಯ ಸಾಹಿತಿ ಡಾ. ಎಂ. ಜಿ. ಈಶ್ವರಪ್ಪ

ಸುದ್ದಿದಿನ,ದಾವಣಗೆರೆ : ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸಾಹಿತ್ಯದ ಕೊಡುಗೆ ಅಪಾರ. ಹಾಗಾಗಿ ಹೊಸತನದ ಹುಟ್ಟಿಗೆ ಮತ್ತು ಸಾಮಾಜಿಕ ಸಂವರ್ಧನೆಗೆ ಆಗಾಗ್ಗೆ ಆರೋಗ್ಯಕರ ಸಾಹಿತ್ಯಿಕ ಚರ್ಚೆ ನಡೆಯುತ್ತಿರಬೇಕು...

ನಿತ್ಯ ಭವಿಷ್ಯ3 days ago

ಈ ರಾಶಿಯವರಿಗೆ ಸಂಜೆಯೊಳಗೆ ಒಂದು ಖುಷಿ ಸಂದೇಶ! ಭಾನುವಾರ- ರಾಶಿ ಭವಿಷ್ಯ ಏಪ್ರಿಲ್-18,2021

ಸೂರ್ಯೋದಯ: 06:04 AM, ಸೂರ್ಯಸ್ತ: 06:31 PM ಸ್ವಸ್ಥ ಶ್ರೀ ಮನೃಪ ಶಾಲಿವಾನ ಶಕೆ1943, ಸಂವತ್ 2077 ಪ್ಲವ ನಾಮ ಸಂವತ್ಸರ ಚೈತ್ರ ಮಾಸ, ವಸಂತಋತು, ಉತ್ತರಾಯಣ,...

Trending