Connect with us

ದಿನದ ಸುದ್ದಿ

ಶ್ವಾನಗಳ ಕೌಶಲ್ಯದಿಂದ ಕೋವಿಡ್-19 ರೋಗಿಯ ಪತ್ತೆ : ನಡೆಯುತ್ತಿದೆ ಸಂಶೋಧನೆ

Published

on

 • ಡಾ. ಕಮಲೇಶ್ ಕುಮಾರ್ ಕೆ ಎಸ್, ಪಶುವೈದ್ಯಾಧಿಕಾರಿಗಳು, ಶಿವಮೊಗ್ಗ

ಮ್ಮ ಸಂಚರಣೆಗೆ ನಾವು ದೃಷ್ಟಿಯ ಮೇಲೆ ಹೇಗೆ ಅವಲಂಬಿತರಾಗಿರುತ್ತೇವೆಯೋ ಹಾಗೆಯೇ ಶ್ವಾನಗಳು ದೃಷ್ಟಿಯ ಜೊತೆಗೆ ಮುಖ್ಯವಾಗಿ ಅವುಗಳ ಮೂಗಿನ ಗ್ರಾಹಕಗಳ (receptors) ಮೇಲೆ ಹೆಚ್ಚು ಅವಲಂಬಿತವಾಗಿರುತ್ತವೆ. ಪ್ರಸ್ತುತ ಪ್ರಪಂಚದಾದ್ಯಂತ ಇರುವ ಸಾಕು ನಾಯಿಗಳು ತೋಳದಿಂದ ಉಗಮಗೊಂಡಿವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಕಾಡು ಪ್ರಾಣಿಗಳಾದ ತೋಳಗಳು ಸಾಮಾನ್ಯವಾಗಿ ತಮ್ಮ ನೈಸರ್ಗಿಕ ವಾಸನೆ ಗ್ರಹಿಕೆ (natural scent detection) ಕೌಶಲ್ಯದಿಂದ ಇನ್ನೊಂದು ಪ್ರಾಣಿಯನ್ನು, ತಮ್ಮ ಪ್ರದೇಶವನ್ನು ಅಥವ ಬೇಟೆಯನ್ನು ಹುಡುಕುತ್ತ ಜೀವನ ಸಾಗಿಸುತ್ತವೆ. ಇದೇ ಸಾಮರ್ಥ್ಯವು ಶ್ವಾನಗಳಿಗು ತಳೀಯವಾಗಿ (genetically) ಬಂದಿದೆ ಹಾಗೂ ನಮ್ಮ ಹಿರಿಯರು ಇದನ್ನೇ ಬಳಸಿಕೊಂಡು ತಮ್ಮ ಸಂರಕ್ಷಣೆ, ಪ್ರಾಣಿ ಬೇಟೆ ಮತ್ತು ಕುರಿಹಿಂಡು ಕಾಯುವ ಕಾವಲಿಗಾಗಿ ಬಳಸಿದ್ದಾರೆ.

ಸಾಮಾನ್ಯವಾಗಿ ಸಾಕುಪ್ರಾಣಿಯನ್ನಾಗಿ ಸಾಕುವ ಶ್ವಾನಗಳು ಬುದ್ಧಿವಂತಿಕೆ, ನೆನಪಿನ ಶಕ್ತಿ, ವಿಧೇಯತೆ, ಆಟವಾಡುವ, ಗಮನಿಸುವ ಹಾಗೂ ಪ್ರೇರಣೆ ನೀಡುವ ನೈಪುಣ್ಯತೆಯನ್ನು ಹೊಂದಿರುವುದು ನಮ್ಮೆಲ್ಲರಿಗು ತಿಳಿದಿರುವ ಸಂಗತಿ. ಇದೆಲ್ಲದಕ್ಕೂ ಮಿಗಿಲಾಗಿ ಶ್ವಾನಗಳಿಗೆ ವಾಸನೆ ಗ್ರಹಿಸುವ ಶಕ್ತಿ ಅತ್ಯಧಿಕವಾಗಿ ಇರುತ್ತದೆ. ಅವು ಮಾನವನಿಗಿಂತ ಸುಮಾರು 10,000 ದಿಂದ 1,00,000 ಪಟ್ಟು ಹೆಚ್ಚು ವಾಸನೆಯನ್ನು ಗ್ರಹಿಸುವ ಶಕ್ತಿ ಹೊಂದಿರುತ್ತವೆ ಎಂದು ವಿಜ್ಞಾನಿಗಳು ನಿರೂಪಿಸಿದ್ದಾರೆ.

ಅದರಲ್ಲೂ ಬೇಟೆಯಾಡುವ ಜಾತಿಗೆ ಸೇರಿದ ಶ್ವಾನಗಳು ಹೆಚ್ಚು ವಾಸನೆಯನ್ನು ಗ್ರಹಿಸುತ್ತವೆ. ಮನುಷ್ಯರಿಗೆ ಹೋಲಿಸಿದರೆ, ನಮಲ್ಲಿ 6 ಮಿಲಿಯನ್ ನಷ್ಟು ಇರುವ ವಾಸನೆ ಕಂಡು ಹಿಡಿಯುವ ಗ್ರಾಹಕಗಳು ಶ್ವಾನಗಳಲ್ಲಿ 300 ಮಿಲಿಯನ್ ನಷ್ಟು ಇರುತ್ತವೆ. ಅವುಗಳ ಮೂಗಿನ ಹಾಗು ಮೆದುಳಿನ (hemispheric specific brain) ರಚನೆಯು ಬಹಳಷ್ಟು ವಿಶೇಷ ಹಾಗು ವೈವಿಧ್ಯವಾಗಿರುತ್ತದೆ.

ಪ್ರಪಂಚದಾದ್ಯಂತ ಅತ್ಯುತ್ತಮವಾದ ವಾಸನೆ ಗ್ರಹಿಕೆ ಕೌಶಲ್ಯ ಹೊಂದಿರುವ ಹತ್ತು ತಳಿಯ ಶ್ವಾನಗಳು ಹೀಗಿವೆ.

 1. ಬ್ಲಡ್ ಹೌನ್ಡ್ (Blood hound)
 2. ಬಾಸೆಟ್ ಹೌನ್ಡ್ (Basset hound)
 3. ಬೀಗಲ್ (Beagle)
 4. ಜರ್ಮನ್ ಶಫರ್ಡ್ (German Shephered)
 5. ಲ್ಯಾಬ್ರೆಡರ್ ರಿಟ್ರೆವರ್ (Labrador Retriever
 6. ಬೆಲ್ಜಿಯನ್ ಮಲಿನೋಯ್ಸ್ (Belgian Malinois)
 7. ಬ್ಲ್ಯೂಟಿಕ್ ಕೂನ್ ಹೌನ್ಡ್ (Blue tick Coonhound)
 8. ಬ್ಲಾಕ್ ಅಂಡ್ ಟಾನ್ ಕೂನ್ ಹೌನ್ಡ್ (Black & tan coonhound)
 9. ಗೋಲ್ಡನ್ ರಿಟ್ರೆವರ್ (Golden Retriever)
 10. ಡಾಶ್ ಹೌನ್ಡ್ (Dachshund)

ಈ ಬೇಟೆ ತಳಿಗಳೆಲ್ಲವು ನುರಿತ ತರಬೇತುದಾರರಿಂದ ತರಬೇತಿ ಪಡೆದ ನಂತರ ಸೈನ್ಯ, ಪೊಲೀಸ್ ಇಲಾಖೆ ಹಾಗು ಬಾಂಬ್ ನಿಷ್ಕ್ರಿಯ ದಳ ಹಾಗೂ ವಿವಿಧ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ಇರುವಿಕೆಯನ್ನು ಸಾವಿರಾರು ಉದಾಹರಣೆಗಳಿಂದ ತೋರಿಸಿವೆ. ಆದರೂ ಇದಕ್ಕೆ ಮಿಗಿಲಾಗಿ ವೈದ್ಯಕೀಯ ಕ್ಷೇತ್ರದಲ್ಲಿ ರೋಗ ಪತ್ತೆ ಹಚ್ಚುವಲ್ಲಿ ನೆರವು ನೀಡುವಲ್ಲಿ ಶ್ವಾನಗಳ ಪಾಲು ಅಪಾರ.

1980 ರಲ್ಲೇ ಕ್ಯಾನ್ಸರ್ ರೋಗವನ್ನು (ಶ್ವಾಶಕೋಶ ಹಾಗು ಸ್ಥನ ಕ್ಯಾನ್ಸರ್) 97% ನಷ್ಟು ನಿಖರತೆಯಿಂದ ಕಂಡುಹಿಡಿಯುವಲ್ಲಿ ಶ್ವಾನಗಳು ಯಶಸ್ವಿಯಾಗಿವೆ. ಮೆದುಳು ಮತ್ತು ನರಮಂಡಲಕ್ಕೆ ಸಂಬಂದಿಸಿದ ರೋಗವಾದ ಪಾರ್ಕಿನ್ಸನ್ (Parkinson) ರೋಗ, ಮಲೇರಿಯಾ (Malaria) ಹಾಗೂ ಇತರೆ ರೋಗಗಳನ್ನು ತಮ್ಮ ಚಾಣಾಕ್ಷತನದಿಂದ ಕಂಡುಹಿಡಿದಿವೆ. ಮುಖ್ಯವಾಗಿ ಶ್ವಾನಗಳು ಸೇವಿಸುವ ಆಹಾರ, ಹೊಟ್ಟೆ ಹಾಗೂ ಕರುಳಿನಲ್ಲಿನ ಸೂಕ್ಷ್ಮಾಣು ಜೀವಿಗಳು, ದೇಹದ ಸ್ಥಿತಿ ಹಾಗೂ ವೈದ್ಯಕೀಯ ಆರೈಕೆ ಅವುಗಳ ಈ ಕೌಶಲ್ಯದ ಮೇಲೆ ಪರಿಣಾಮ ಬೀರುತ್ತವೆ.

ಇಂಗ್ಲೆಂಡಿನಲ್ಲಿ ಈ ಕೌಶಲ್ಯಗಳುಳ್ಳ ಶ್ವಾನಗಳನ್ನು ಯಾವುದೇ ಲಕ್ಷಣಗಳಿಲ್ಲದ ಕೊರೊನ ವೈರಸ್ ಪೀಡಿತ ವ್ಯಕ್ತಿಯನ್ನು ಮೊದಲ ಹಂತದಲ್ಲಿ ಪತ್ತೆಹಚ್ಚುವಲ್ಲಿ ಬಳಸಲು ಸಂಶೋಧನೆ ನಡೆಯುತ್ತಿದೆ. ಉಸಿರಾಟ, ಉಗುಳು, ರಕ್ತ ಹಾಗೂ ಮೂತ್ರದಲ್ಲಿರುವ ಆವಿಯಾಗುವ ಸಾವಯವ ಸಂಯುಕ್ತಗಳನ್ನು (volatile organic compounds) ಬಳಸಿಕೊಂಡು ವಾಸನೆ ಮುದ್ರೆ (odour imprinting) ಮಾಡುತ್ತಿದ್ದಾರೆ. ಈ ರೀತಿ ಮುದ್ರೆಯಾದ ನಂತರ ಶ್ವಾನಗಳು ರೋಗ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಬಹುದು.

ಇನ್ಫಲೂಎಂಜಾ (Influenza) ರೋಗದಲ್ಲಿ ಉಸಿರಾಟದ ವಾಸನೆ ಇರುವ ರೀತಿಯಲ್ಲಿ ಕೊರೊನ ವೈರಸ್ ಪೀಡಿತರಿಗೂ ಇದ್ದಲ್ಲಿ ಅವರನ್ನು ಕಂಡುಹಿಡಿಯುವುದು ಸುಲಭವಾಗಬಹುದು ಎಂಬ ಅಭಿಪ್ರಾಯ ವಿಜ್ಞಾನಿಗಳದು. ಇಷ್ಟೆಲ್ಲಾ ಆದರೆ ಕೇವಲ ಆಸ್ಪತ್ರೆ ಅಲ್ಲದೆ ಸೂಕ್ಷ್ಮ ಪ್ರದೇಶಗಳಾದ ವಿಮಾನ ನಿಲ್ದಾಣ, ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಶ್ವಾನಗಳು ಕಾರ್ಯನಿರ್ವಹಿಸಬಹುದಾಗಿದೆ. ಇದು ಎಷ್ಟರಮಟ್ಟಿಗೆ ಉಪಯೋಗವಾಗುವುದೊ ಎಂದು ಕಾದು ನೋಡಬೇಕಿದೆ.

(ಡಾ. ಕಮಲೇಶ್ ಕುಮಾರ್ ಕೆ ಎಸ್,
ಪಶುವೈದ್ಯಾಧಿಕಾರಿಗಳು
ಪಶುಚಿಕಿತ್ಸಾಲಯ, ಮತ್ತೂರು,
ಶಿವಮೊಗ್ಗ
ಈ ಮೇಲ್ : [email protected]
ಫೋನ್ : 9164282969)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

1ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆಗೆ ವಿದ್ಯುತ್ ಪೂರೈಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರಿಂದ ಚಾಲನೆ

Published

on

ಸುದ್ದಿದಿನ,ಬಳ್ಳಾರಿ : ಜಿಂದಾಲ್ ಎದುರುಗಡೆ ನಿರ್ಮಿಸಲಾಗಿರುವ 1ಸಾವಿರ ಆಕ್ಸಿಜನ್ ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆಗೆ ನಿರಂತರ ವಿದ್ಯುತ್ ಪೂರೈಕೆಗೆ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಸೋಮವಾರ ಚಾಲನೆ ನೀಡಿದರು.

1ಸಾವಿರ ಆಕ್ಸಿಜನ್ ಬೆಡ್ ಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಪರಿವರ್ತಕಗಳ ಬಳಿಯ ಯಂತ್ರಗಳಿಗೆ ಸಚಿವ ಆನಂದಸಿಂಗ್ ಅವರು ಪೂಜೆ ಸಲ್ಲಿಸಿ ಬಟನ್ ಒತ್ತುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಮ್ಸ್ ನಿವೃತ್ತ ನಿರ್ದೇಶಕ ಡಾ.ದೇವಾನಂದ್, ತಾತ್ಕಾಲಿಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ಜಿಂದಾಲ್ ಸಿಬ್ಬಂದಿ ಇದ್ದರು.

ಇದನ್ನೂ ಓದಿ | ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ; ಸಮರ್ಪಕ ವಿತರಣೆಗೆ ಕ್ರಮ ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ; ಸಮರ್ಪಕ ವಿತರಣೆಗೆ ಕ್ರಮ ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Published

on

ಸುದ್ದಿದಿನ,ಧಾರವಾಡ: ಭಾರತ ಸರ್ಕಾರದ ವಿದೇಶಾಂಗ ಮಂತ್ರಾಲಯ ಮತ್ತು ವಾಣಿಜ್ಯ ಮಂತ್ರಾಲಯದಿಂದ ಬೇರೆ ಬೇರೆ ರಾಷ್ಟ್ರಗಳ ಜೊತೆ ಭಾರತದ ಉತ್ತಮ ಸಂಬಂಧ ಹೊಂದಿರುವದರಿಂದ ಮತ್ತು ಜಾಗತೀಕ ಟೆಂಡರ ಮೂಲಕ ಆಕ್ಸಿಜನ್ ಆಮದು ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಲ್ಹಾದ ಜೋಶಿ ಹೇಳಿದರು.

ಅವರು ಇಂದು (ಮೇ.17) ಬೆಳಿಗ್ಗೆ ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಪ್ರಾಕ್ಸಿಯರ್ (praxair) ಆಕ್ಸಿಜನ್ ಮರುಪೂರ್ಣ (ರೀಪಿಲ್ಲಿಂಗ್) ಘಟಕ್ಕೆ ಭೇಟಿ ನೀಡಿ, ಘಟಕದಿಂದ ಟ್ಯಾಂಕರ್‍ಗೆ ಆಕ್ಸಿಜನ್ ತುಂಬುವ ಕಾರ್ಯ ಪರೀಶಿಲಿಸಿದ ನಂತರ ಮಾತನಾಡಿದರು.

ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೆ ಒಪ್ಪಂದವಾಗಿತ್ತು. ಅದನ್ನು ಧಾರವಾಡದಲ್ಲಿ ಸಂಗ್ರಹಿಸಿ, ಧಾರವಾಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಇಲ್ಲಿಂದ ವ್ಯವಸ್ಥಿತವಾಗಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಅದರಂತೆ ಈಗಾಲೇ 50 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ.

ಈ ಆಕ್ಸಿಜನ್ ನನ್ನು ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟ, ವಿಜಯಪುರ ಜಿಲ್ಲೆಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಇನ್ನೂಳಿದ 25 ಮೆಟ್ರಿಕ್ ಟನ್ ಆಕ್ಸಿಜನ್ ಎರಡು ದಿನಗಳಲ್ಲಿ ಪೂರೈಕೆಯಾಗಲಿದೆ.

ಕುವೈತ್ ರಾಷ್ಟ್ರದಿಂದ ಬಂದಿರುವ ಆಕ್ಸಿಜನ್ ವಿಶೇಷವಾಗಿ ಈ ಭಾಗಕ್ಕೆ ಕಳುಹಿಸಲು ಸಹಕರಿಸಿದ ಭಾರತ ಸರ್ಕಾರದ ಪ್ರಧಾನ ಮಂತ್ರಿ, ವಿದೇಶಾಂಗ ಹಾಗೂ ವಾಣಿಜ್ಯ ಮಂತ್ರಿಗಳಿಗೆ ಸಚಿವರು ಧನ್ಯವಾದ ಹೇಳಿದರು.

ಪೂವಾರ್ಂಚಲದಿಂದ ಹೆಚ್ಚುವರಿಯಾಗಿ 2 ಟ್ಯಾಂಕರ್ ಆಕ್ಸಿಜನ್ ಬಂದಿದ್ದು, ಓರಿಸ್ಸಾದಿಂದ ಒಂದು ಆಕ್ಸಿಜನ್ ಟ್ಯಾಂಕರ್ ಬರಲಿದೆ. ಇವೆಲ್ಲವೂಗಳನ್ನು ಒಟ್ಟುಗೂಡಿಸಿ, ಜಿಲ್ಲೆಗೆ ದಿನನಿತ್ಯ ಬೇಕಾಗುವ ಆಕ್ಸಿಜನ್‍ನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ | ನವಿಲೇಹಾಳ್ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಕೊರೋನ ನಿರ್ವಹಣಾ ಪಡೆ ಸಭೆ ; ಜನ ಜಾಗೃತಿ

ಈ ಎಲ್ಲ ವ್ಯವಸ್ಥೆಯ ಮಧ್ಯೆಯೂ ಸಾರ್ವಜನಿಕರು ಜಾಗೃತರಾಗಿದ್ದು, ಕೋವಿಡ್ ಸಾಂಕ್ರಾಮಿಕ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಸೂಕ್ತ ಸಲಹೆ, ಚಿಕಿತ್ಸೆ ಪಡೆಯಬೇಕು. ಕೋವಿಡ್ -19ರ ಬಗ್ಗೆ ಭಯ ಪಡದೆ ಎಚ್ಚರವಹಿಸಿ. ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಆಕ್ಸಿಜನ್ ತಂಡದ ನೊಡಲ್ ಅಧಿಕಾರಿಗಳಾದ ಆಹಾರ ಇಲಾಖೆ ಜಂಟಿ ನಿರ್ದೇಶಕ ವಿನಾಯಕ ಪಾಲನಕರ, ಡಿಯುಡಿಸಿ ಯೋಜನಾ ನಿರ್ದೇಶಕ ರುದ್ರೇಶ, ಜಿಲ್ಲಾ ಸಹಾಯಕ ಔಷಧಿಗಳ ನಿಯಂತ್ರಕ ಮಲ್ಲಿಕಾರ್ಜುನ ಕೆ.ಎಸ್, ಡಿವೈಎಸ್ ಪಿ ಮಲ್ಲಿಕಾರ್ಜುನ ಬಿ.ಸಂಕದ, ಇತರು ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನವಿಲೇಹಾಳ್ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಕೊರೋನ ನಿರ್ವಹಣಾ ಪಡೆ ಸಭೆ ; ಜನ ಜಾಗೃತಿ

Published

on

ಸುದ್ದಿದಿನ, ದಾವಣಗೆರೆ-ಚನ್ನಗಿರಿ : ಕೊರೋನಾ ಪಾಸಿಟಿವ್ ಪ್ರಕರಣಗಳು ಗ್ರಾಮಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ನವಿಲೆಹಾಳ್ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಕೊರೋನ ನಿರ್ವಹಣಾ ಪಡೆ ಸಭೆ ನೆಡೆಸಲಾಯಿತು.

ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಚರ್ಚಿಸಲಾಯಿತು. ಸಭೆಯ ನಂತರ ನವಿಲೆಹಾಳ್ ಮತ್ತು ದೊಡ್ಡಘಟ್ಟ ಗ್ರಾಮದಲ್ಲಿ ಜನಜಾಗೃತಿ ಮೂಡಿಸಲಾಯಿತು.

ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ಅಚ್ಚಕನ್ಯೆ ಜಲಪಾತ 

ಜನ ಜಾಗೃತಿ

ಈ ವೇಳೆ ಅಂಗನವಾಡಿ ಶಿಕ್ಷಕಿಯರು, ಆಶಾಕಾರ್ಯಕರ್ತೆಯರು ಹಾಗೂ ಗ್ರಾಮಪಂಚಾಯತಿ ಅಧ್ಯಕ್ಷೆ ಶಬ್ನಮ್, ಉಪಾಧ್ಯಕ್ಷೆ ಈರಮಾಂಬಾ, ಪಿಡಿಓ ಚಂದನ್ ಕುಮಾರ್, ಅರೋಗ್ಯ ಸಹಾಯಕಿ ಗಂಗಮ್ಮ,ಗ್ರಾ.ಪಂ ಸದಸ್ಯರರಾದ ದೇವರಾಜ್, ವಿಜಯ್ ಕುಮಾರ್, ಮಂಜುನಾಥ್.ಕೆ, ಶಿವರಾಜ್ , ಅನ್ವರ್ ಸಭೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending