Connect with us

ದಿನದ ಸುದ್ದಿ

ದಾವಣಗೆರೆ | 1437 ಫಲಿತಾಂಶ ಬಾಕಿ : 84 ಆ್ಯಕ್ಟೀವ್ ಕೇಸ್

Published

on

ಸುದ್ದಿದಿನ,ದಾವಣಗೆರೆ : ಒಂದು ಹೊಸ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಸೋಮವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ರೋಗಿ ಸಂಖ್ಯೆ 1186 ಇವರಿ ಹೊನ್ನಾಳಿ ಮೂಲದ 24 ವರ್ಷದ ಯುವಕ ಆಗಿದ್ದು ಇವರು ಮಹಾರಾಷ್ಟ್ರದ ಲಾತೂರ್‍ನಲ್ಲಿ ಕೃಷಿ ಕಾರ್ಮಿಕರಾಗಿ ಹಾಗೂ ಸೊಲ್ಲಾಪುರದಲ್ಲಿ ಒಂದೂವರೆ ತಿಂಗಳು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಮೈಸೂರು ಮತ್ತು ಹೊಸನಗರದ ಸಹೋದ್ಯೋಗಿಗಳೊಂದಿಗೆ ಹರಿಹರಕ್ಕೆ ಬಂದಿದ್ದು, ಅಂದೇ ಹರಿಹರದ ಆರೋಗ್ಯಾಧಿಕಾರಿಗಳು ಅವರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿ ಮೇ 11 ರಂದು ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

ಭಾನುವಾರ ಮಧ್ಯರಾತ್ರಿ ಹೊತ್ತಿಗೆ ಅವರ ಫಲಿತಾಂಶ ಪಾಸಿಟಿವ್ ಎಲಂದು ಬಂದಿದ್ದು ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೋಗಿ ಬಂದಿರುವ ಪ್ರವಾಹ ಹಿನ್ನೆಲೆ ಹೊಂದಿದ್ದಾರೆ. ಇವರನ್ನು ಹರಿಹರದಲ್ಲಿ ಈಗಾಗಲೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿದ್ದು, ಇದೀಗ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ರೋಗಿಯ 6 ಪ್ರಾಥಮಿಕ ಮತ್ತು 8 ದ್ವಿತೀಯ ಸಂಪರ್ಕ ಗುರುತಿಸಿ ಇವರ ಸ್ಯಾಂಪಲ್‍ಗಳನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 84 ಸಕ್ರಿಯ ಪ್ರಕರಣಗಳಿದ್ದು, 1437 ಮಾದರಿಗಳ ಫಲಿತಾಂಶ ಬಾಕಿ ಇದೆ. ಇಂದು 401 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸೋಮವಾರ ತಡರಾತ್ರಿವರೆಗೆ 900 ರಿಂದ 1000 ವರದಿಗಳ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿ ಡಾ.ರಾಘವನ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

1ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆಗೆ ವಿದ್ಯುತ್ ಪೂರೈಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರಿಂದ ಚಾಲನೆ

Published

on

ಸುದ್ದಿದಿನ,ಬಳ್ಳಾರಿ : ಜಿಂದಾಲ್ ಎದುರುಗಡೆ ನಿರ್ಮಿಸಲಾಗಿರುವ 1ಸಾವಿರ ಆಕ್ಸಿಜನ್ ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆಗೆ ನಿರಂತರ ವಿದ್ಯುತ್ ಪೂರೈಕೆಗೆ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ಸೋಮವಾರ ಚಾಲನೆ ನೀಡಿದರು.

1ಸಾವಿರ ಆಕ್ಸಿಜನ್ ಬೆಡ್ ಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಪರಿವರ್ತಕಗಳ ಬಳಿಯ ಯಂತ್ರಗಳಿಗೆ ಸಚಿವ ಆನಂದಸಿಂಗ್ ಅವರು ಪೂಜೆ ಸಲ್ಲಿಸಿ ಬಟನ್ ಒತ್ತುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಮ್ಸ್ ನಿವೃತ್ತ ನಿರ್ದೇಶಕ ಡಾ.ದೇವಾನಂದ್, ತಾತ್ಕಾಲಿಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ಜಿಂದಾಲ್ ಸಿಬ್ಬಂದಿ ಇದ್ದರು.

ಇದನ್ನೂ ಓದಿ | ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ; ಸಮರ್ಪಕ ವಿತರಣೆಗೆ ಕ್ರಮ ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ; ಸಮರ್ಪಕ ವಿತರಣೆಗೆ ಕ್ರಮ ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Published

on

ಸುದ್ದಿದಿನ,ಧಾರವಾಡ: ಭಾರತ ಸರ್ಕಾರದ ವಿದೇಶಾಂಗ ಮಂತ್ರಾಲಯ ಮತ್ತು ವಾಣಿಜ್ಯ ಮಂತ್ರಾಲಯದಿಂದ ಬೇರೆ ಬೇರೆ ರಾಷ್ಟ್ರಗಳ ಜೊತೆ ಭಾರತದ ಉತ್ತಮ ಸಂಬಂಧ ಹೊಂದಿರುವದರಿಂದ ಮತ್ತು ಜಾಗತೀಕ ಟೆಂಡರ ಮೂಲಕ ಆಕ್ಸಿಜನ್ ಆಮದು ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಲ್ಹಾದ ಜೋಶಿ ಹೇಳಿದರು.

ಅವರು ಇಂದು (ಮೇ.17) ಬೆಳಿಗ್ಗೆ ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಪ್ರಾಕ್ಸಿಯರ್ (praxair) ಆಕ್ಸಿಜನ್ ಮರುಪೂರ್ಣ (ರೀಪಿಲ್ಲಿಂಗ್) ಘಟಕ್ಕೆ ಭೇಟಿ ನೀಡಿ, ಘಟಕದಿಂದ ಟ್ಯಾಂಕರ್‍ಗೆ ಆಕ್ಸಿಜನ್ ತುಂಬುವ ಕಾರ್ಯ ಪರೀಶಿಲಿಸಿದ ನಂತರ ಮಾತನಾಡಿದರು.

ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೆ ಒಪ್ಪಂದವಾಗಿತ್ತು. ಅದನ್ನು ಧಾರವಾಡದಲ್ಲಿ ಸಂಗ್ರಹಿಸಿ, ಧಾರವಾಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಇಲ್ಲಿಂದ ವ್ಯವಸ್ಥಿತವಾಗಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಅದರಂತೆ ಈಗಾಲೇ 50 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ.

ಈ ಆಕ್ಸಿಜನ್ ನನ್ನು ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟ, ವಿಜಯಪುರ ಜಿಲ್ಲೆಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಲು ಜಿಲ್ಲಾಡಳಿತ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಇನ್ನೂಳಿದ 25 ಮೆಟ್ರಿಕ್ ಟನ್ ಆಕ್ಸಿಜನ್ ಎರಡು ದಿನಗಳಲ್ಲಿ ಪೂರೈಕೆಯಾಗಲಿದೆ.

ಕುವೈತ್ ರಾಷ್ಟ್ರದಿಂದ ಬಂದಿರುವ ಆಕ್ಸಿಜನ್ ವಿಶೇಷವಾಗಿ ಈ ಭಾಗಕ್ಕೆ ಕಳುಹಿಸಲು ಸಹಕರಿಸಿದ ಭಾರತ ಸರ್ಕಾರದ ಪ್ರಧಾನ ಮಂತ್ರಿ, ವಿದೇಶಾಂಗ ಹಾಗೂ ವಾಣಿಜ್ಯ ಮಂತ್ರಿಗಳಿಗೆ ಸಚಿವರು ಧನ್ಯವಾದ ಹೇಳಿದರು.

ಪೂವಾರ್ಂಚಲದಿಂದ ಹೆಚ್ಚುವರಿಯಾಗಿ 2 ಟ್ಯಾಂಕರ್ ಆಕ್ಸಿಜನ್ ಬಂದಿದ್ದು, ಓರಿಸ್ಸಾದಿಂದ ಒಂದು ಆಕ್ಸಿಜನ್ ಟ್ಯಾಂಕರ್ ಬರಲಿದೆ. ಇವೆಲ್ಲವೂಗಳನ್ನು ಒಟ್ಟುಗೂಡಿಸಿ, ಜಿಲ್ಲೆಗೆ ದಿನನಿತ್ಯ ಬೇಕಾಗುವ ಆಕ್ಸಿಜನ್‍ನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ | ನವಿಲೇಹಾಳ್ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಕೊರೋನ ನಿರ್ವಹಣಾ ಪಡೆ ಸಭೆ ; ಜನ ಜಾಗೃತಿ

ಈ ಎಲ್ಲ ವ್ಯವಸ್ಥೆಯ ಮಧ್ಯೆಯೂ ಸಾರ್ವಜನಿಕರು ಜಾಗೃತರಾಗಿದ್ದು, ಕೋವಿಡ್ ಸಾಂಕ್ರಾಮಿಕ ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಸೂಕ್ತ ಸಲಹೆ, ಚಿಕಿತ್ಸೆ ಪಡೆಯಬೇಕು. ಕೋವಿಡ್ -19ರ ಬಗ್ಗೆ ಭಯ ಪಡದೆ ಎಚ್ಚರವಹಿಸಿ. ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಆಕ್ಸಿಜನ್ ತಂಡದ ನೊಡಲ್ ಅಧಿಕಾರಿಗಳಾದ ಆಹಾರ ಇಲಾಖೆ ಜಂಟಿ ನಿರ್ದೇಶಕ ವಿನಾಯಕ ಪಾಲನಕರ, ಡಿಯುಡಿಸಿ ಯೋಜನಾ ನಿರ್ದೇಶಕ ರುದ್ರೇಶ, ಜಿಲ್ಲಾ ಸಹಾಯಕ ಔಷಧಿಗಳ ನಿಯಂತ್ರಕ ಮಲ್ಲಿಕಾರ್ಜುನ ಕೆ.ಎಸ್, ಡಿವೈಎಸ್ ಪಿ ಮಲ್ಲಿಕಾರ್ಜುನ ಬಿ.ಸಂಕದ, ಇತರು ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನವಿಲೇಹಾಳ್ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಕೊರೋನ ನಿರ್ವಹಣಾ ಪಡೆ ಸಭೆ ; ಜನ ಜಾಗೃತಿ

Published

on

ಸುದ್ದಿದಿನ, ದಾವಣಗೆರೆ-ಚನ್ನಗಿರಿ : ಕೊರೋನಾ ಪಾಸಿಟಿವ್ ಪ್ರಕರಣಗಳು ಗ್ರಾಮಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ನವಿಲೆಹಾಳ್ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಕೊರೋನ ನಿರ್ವಹಣಾ ಪಡೆ ಸಭೆ ನೆಡೆಸಲಾಯಿತು.

ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಚರ್ಚಿಸಲಾಯಿತು. ಸಭೆಯ ನಂತರ ನವಿಲೆಹಾಳ್ ಮತ್ತು ದೊಡ್ಡಘಟ್ಟ ಗ್ರಾಮದಲ್ಲಿ ಜನಜಾಗೃತಿ ಮೂಡಿಸಲಾಯಿತು.

ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ : ಅಚ್ಚಕನ್ಯೆ ಜಲಪಾತ 

ಜನ ಜಾಗೃತಿ

ಈ ವೇಳೆ ಅಂಗನವಾಡಿ ಶಿಕ್ಷಕಿಯರು, ಆಶಾಕಾರ್ಯಕರ್ತೆಯರು ಹಾಗೂ ಗ್ರಾಮಪಂಚಾಯತಿ ಅಧ್ಯಕ್ಷೆ ಶಬ್ನಮ್, ಉಪಾಧ್ಯಕ್ಷೆ ಈರಮಾಂಬಾ, ಪಿಡಿಓ ಚಂದನ್ ಕುಮಾರ್, ಅರೋಗ್ಯ ಸಹಾಯಕಿ ಗಂಗಮ್ಮ,ಗ್ರಾ.ಪಂ ಸದಸ್ಯರರಾದ ದೇವರಾಜ್, ವಿಜಯ್ ಕುಮಾರ್, ಮಂಜುನಾಥ್.ಕೆ, ಶಿವರಾಜ್ , ಅನ್ವರ್ ಸಭೆಯಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending