ದಿನದ ಸುದ್ದಿ
ದಾವಣಗೆರೆ ಡಿಸಿಸಿ ಬ್ಯಾಂಕ್ ನೇಮಕಾತಿ ಗೋಲ್ ಮಾಲ್: ಸಿಎಂಗೆ ಮಾಜಿ ಶಾಸಕ ಶಿವಶಂಕರ್ ಪತ್ರ

ಎನ್. ಆರ್.ಗೋವರ್ಧನ, ದಾವಣಗೆರೆ:
ದಾವಣಗೆರೆ ಡಿಸಿಸಿಬಿಯಲ್ಲಿ ಖಾಲಿ 31 ಹುದ್ದೆಗಳಿಗೆ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮವಾಗಿದ್ದು, ಸರ್ಕಾರ ಕೂಡಲೇ ಅದಕ್ಕೆ ತಡೆ ನೀಡಬೇಕು ಎಂದು ಹರಿಹರ ಕ್ಷೇತ್ರದ ಮಾಜಿ ಶಾಸಕ ಎಚ್.ಎಸ್.ಶಿವಕುಮಾರ್ ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ದಾವಣಗೆರೆ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ನೇಮಕಾತಿ ನಡೆದಿದ್ದು, ಅರ್ಹರಿಗೆ ಅನ್ಯಾಯವಾಗಿದೆ. ಕೇವಲ 10 ದಿನದೊಳಗೆ ನೇಮಕಾತಿ ಪ್ರಕ್ರಿಯೆ ಮುಗಿಸಲಾಗಿದೆ. ಪ್ರತಿ ಹುದ್ದೆಗೆ ಲಕ್ಷಾಂತರ ರೂಪಾಯಿ ಲಂಚ ಪಡೆದ ಆರೋಪ ಕೇಳಿ ಬರುತ್ತಿವೆ.
ಮಾಜಿ ಶಾಸಕ ಎಚ್.ಎಸ್.ಶಿವಕುಮಾರ್ ಅವರು ಬರೆದ ಪತ್ರದಲ್ಲಿ ಏನಿದೆ:
- 1. ಸರ್ಕಾರಿ ಮತ್ತು ಸಹಕಾರಿ ಇಲಾಖೆಯ ನಿಯಮ ಉಲ್ಲಂಘನೆ ಮಾಡಲಾಗಿದೆ. ಬ್ಯಾಂಕಿನ ನೌಕರರ ನೇಮಕಾತಿ ಸಂಬಂಧಿಸಿದಂತೆ ಆಡಳಿತ ಮಂಡಳಿ ಸಭೆ ನಡೆಸದೇ ವಿಷಯ ಮಂಡಿಸದೇ ಬೇರೆ ಹೆಚ್ಚುವರಿ ವಿಷಯದಲ್ಲಿ ತೀರ್ಮಾನ ತೆಗೆದುಕೊಂಡು ಸಹಕಾರ ಸಂಘಗಳ ನಿಯಮ 14 (ಇ) ಯನ್ನು ಉಲ್ಲಂಘಿಸಲಾಗಿದೆ. ಇಂತಹ ವಿಷಯವನ್ನು ಮುಖ್ಯ ವಿಷಯದಲ್ಲಿ ಮಂಡಿಸಿಬೇಕಾಗುತ್ತದೆ.
2. ಸಹಕಾರ ಸಂಘಗಳ ನಿಬಂಧಕರು ಸದರಿ ಆಡಳಿತ ಮಂಡಳಿ ನಡವಳಿಕೆಗಳನ್ನು ಗಮನಿಸದೇ ಕಡತ ಪರಿಶೀಲನ ಮಾಡದೇ ಏಕಾಏಕಿ ಅನುಮತಿ ನೀಡಲಾಗಿದೆ. - 3. ಸಹಕಾರ ಸಂಘಗಳ ನಿಬಂಧಕರು ಸದರಿ ನಿಯೋಜಿತಗೊಂಡಿರುವ ಸಿಇಒ ಇರುವುದಿಲ್ಲ. ಬ್ಯಾಂಕಿನ ಆಡಳಿತ ಮಂಡಳಿಯವರು ಬ್ಯಾಂಕಿನ ಸಿಬ್ಬಂದಿಗೆ ಪ್ರಭಾರ ವಹಿಸಿ ಮನಬಂದಂತೆ ಆಡಳಿತ ನಡೆಸುತ್ತಿದ್ದು, ನಿಯಮ ಉಲ್ಲಂಘಿಸಿದ್ದಾರೆ.
- 4. ಸದರಿ ವಿಷಯಗಳನ್ನು ತೀರ್ಮಾನಿಸುವ ಸಭೆಗಳಿಗೆ ಸತತವಾಗಿ ಸರ್ಕಾರದ ಪರವಾಗಿ ಸಹಕಾರ ಸಂಘದ ಉಪನಿಬಂಧಕರು ಗೈರಾಗಿದ್ದಾರೆ.
- 5. ಸಹಕಾರ ಸಂಘದ ನಿಯಮ 18(ಅ) ನಿಯಮದಂತೆ ನೇಮಕಾತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಹುದ್ದೆ ನೀಡಬೇಕು. ಆದರೆ ಕಡಿಮೆ ಅಂಕ ಪಡೆದವರಿಗೆ ನೀಡಲಾಗಿದೆ.
ಹೀಗೆ ಪತ್ರದಲ್ಲಿ ಹಲವು ಅಂಶಗಳನ್ನು ಪಟ್ಟಿ ಮಾಡಿರುವ ಮಾಜಿ ಶಾಸಕ ಎಚ್.ಎಸ್.ಶಿವಕುಮಾರ್ ಈ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶೀಘ್ರ ನೇಮಕಕ್ಕೆ ಚುನಾವಣೆ ಕಾರಣ
ದಿಢೀರನೆ ನೇಮಕಾತಿ ಪ್ರಕ್ರಿಯೆ ಕೈಗೊಂಡಿರುವುದಕ್ಕೆ ಸಹಕಾರ ಸಂಘದ ಎಕ್ಸಿಕ್ಯುಟಿವ್ ಸಮಿತಿ ಚುನಾವಣೆ ನಡೆಯಲಿದೆಯಂತೆ. ಐದು ವರ್ಷಗಳ ಹಿಂದೆ ಆಯ್ಕೆಯಾದ ಸಮಿತಿ ಅವಧಿ ಮುಕ್ತಾಯವಾಗುತ್ತಿದ್ದು, ಚುನಾವಣೆ ನಡೆಸಲು ರಾಜ್ಯ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಅಕ್ರಮದ ಕುರಿತು ಸುದ್ದಿದಿನ ಬೆಳಕು
ದಾವಣಗೆರೆ ಡಿಸಿಸಿಬಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಕುರಿತು ಕೆಲ ಆಕಾಂಕ್ಷಿಗಳು ಆರೋಪಿಸಿದ್ದರು. ಇದರ ಜಾಡುಹಿಡಿದು ಸುದ್ದಿದಿನ ಮೊದಲಿಗೆ ವರದಿ ಪ್ರಕಟಿಸಿತ್ತು. ಆ ನಂತರ ಕೆಲವರು ಅಕ್ರಮ ನಡೆದಿರುವ ಕುರಿತು ದೂರವಾಣಿ ಮೂಲಕ ಆರೋಪಿಸಿದ್ದಾರೆ. ಅಂಗವಿಕಲರೊಬ್ಬರು ಪ್ರಕರಣದ ತನಿಖೆಗೆ ಪಿಎಎಲ್ ಹಾಕಿದ್ದಾರೆ.
ಇದನ್ನು ಓದಿ: ದಾವಣಗೆರೆ ಡಿಸಿಸಿ ಬ್ಯಾಂಕ್ ನೇಮಕಾತಿ ಅಕ್ರಮ..?
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ರೋಟರಿ ಆಶ್ರಯದಲ್ಲಿ ನೋಟು-ನಾಣ್ಯಗಳ “ಅಪೂರ್ವ ಸಂಗ್ರಹ” ಪ್ರದರ್ಶನ : ಭಾನುವಾರ ಕಡೆ ದಿನ

ಸುದ್ದಿದಿನ,ದಾವಣಗೆರೆ : ನೋಟುಗಳು – ನಾಣ್ಯಗಳು, ಇಂದಿನ ಕಾಲದ – ಹಿಂದಿನ ಕಾಲದ, ದೇಶದ – ವಿದೇಶದ ಅಪೂರ್ವ ಸಂಗ್ರಹವನ್ನು ನೋಡುವ ಅಪರೂಪದ ಅವಕಾಶ ನಗರದ ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಒದಗಲಿದೆ.
ದಾವಣಗೆರೆ ರೋಟರಿ ಸಂಸ್ಥೆ ಬರುವ ಶನಿವಾರ ಮಾರ್ಚ್ 6 ಮತ್ತು ಭಾನುವಾರ ಮಾ.7ರಂದು ಎಂ.ಸಿ.ಸಿ ಎ ಬ್ಲಾಕಿನಲ್ಲಿರುವ ದಾವಣಗೆರೆ ಹರಿಹರ-ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಈ ಪ್ರದರ್ಶನವನ್ನು ಏರ್ಪಡಿಸಲಿದೆ.
ಬೆಳಗಾವಿಯ ಈರಪ್ಪ ಗುರುಲಿಂಗ ಪರಮಶೆಟ್ಟಿ ಕಳೆದ ಐದು ದಶಕಗಳಿಂದ ಸಂಗ್ರಹಿಸಿರುವ ಅಪರೂಪದ ನೋಟುಗಳು-ನಾಣ್ಯಗಳು ದೇಶದ ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಪ್ರದರ್ಶನಗಳನ್ನು ಕಂಡಿವೆ. ಬ್ರಿಟೀಷ್ ಆಡಳಿತದ, ಮರಾಠಾ, ಪೇಶ್ವೇ, ಮೊಘಲರು ನಿಜಾಮರ ಹಾಗೂ ಟಿಪ್ಪು ಆಡಳಿತದ ನಾಣ್ಯಗಳ ಪ್ರದರ್ಶನ ವಿಶೇಷವಾದದ್ದು.
ಒಂದರಿಂದ ಸಾವಿರ ರೂಗಳ ಹಳೆಯ ಬೆಳ್ಳಿಯ ನಾಣ್ಯಗಳು ಇಲ್ಲಿ ಕಾಣ ಸಿಗುತ್ತವೆ. ಒಂದೇ ಮೌಲ್ಯದ ನೂರ ಐವತ್ತಕ್ಕೂ ಹೆಚ್ಚು ವಿವಿಧ ನೋಟುಗಳ ನೋಟ ಅಪರೂಪದ ಆಕರ್ಷಣೆಯಾಗಲಿದೆ.ಇವರ ಸಂಗ್ರಹ “ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್”ನಲ್ಲಿ 1997ರಿಂದ ಸತತವಾಗಿ ಮೂರು ವರ್ಷಗಳ ಕಾಲ ನಮೂದಿಸಲ್ಪಟ್ಟಿದೆ.
ಮಾರ್ಚ್ ಆರು ಶನಿವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ದಾವಣಗೆರೆಯ ಪ್ರಥಮ ಪೌರರಾದ ಎಸ್.ಟಿ. ವೀರೇಶ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಆರ್.ಟಿ. ಮೃತ್ಯುಂಜಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ, ಡಿಡಿಪಿಐ ಪರಮೇಶ್ವರಪ್ಪ ತಹಶೀಲ್ದಾರ್ ಗಿರೀಶ್ ಮುಂತಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಅಪರೂಪದ ನೋಟು-ನಾಣ್ಯಗಳ ಪ್ರದರ್ಶನ ಮಾರ್ಚ್ ಆರು ಮತ್ತು ಏಳರ ಬೆಳಿಗ್ಗೆ 9ರಿಂದ ಸಂಜೆ 7ರ ವರೆಗೆ ನಡೆಯಲಿದ್ದು ಎಲ್ಲರಿಗೂ ಉಚಿತ ಪ್ರವೇಶವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕುಂದುವಾಡ ಕೆರೆ ಅಭಿವೃದ್ದಿ ಕಾಮಗಾರಿ

ಸುದ್ದಿದಿನ,ದಾವಣಗೆರೆ : ದಾವಣಗೆರೆ ಮಹಾನಗರಪಾಲಿಕೆ ಮಾಲೀಕತ್ವದಲ್ಲಿರುವ ಕುಂದುವಾಡ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ದಾವಣಗೆರೆ ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲಾಗಿದ್ದು, ಕೆರೆಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿರುತ್ತದೆ. 1.2 ಕಿ.ಮೀ ಏರಿಯನ್ನು ಎತ್ತರಿಸಿ ಗಟ್ಟಿಗೊಳಿಸಲಾಗಿದ್ದು, ಕಲ್ಲುಗಳ ಹೊದಿಕೆಯ ಕೆಲಸವು ಪ್ರಗತಿಯಲ್ಲಿದೆ.
ಉಳಿದಂತೆ 3.7 ಕಿ.ಮೀ ನಲ್ಲಿ ಮುಳ್ಳು ಗಂಟೆ ಪೊದೆ ಮತ್ತು ಹಳೆಯ ಕಲ್ಲುಗಳ ಹೊದಿಕೆಯ ತೆರವುಗೊಳಿಸುವ ಕಾರ್ಯ ಚಾಲ್ತಿಯಲ್ಲಿರುತ್ತದೆ ಎಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಮಲ್ಲಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯುತ್ ಬಿಲ್ ಪಾವತಿ ವಂಚನೆ ಬಗ್ಗೆ ಜಾಗೃತಿ

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬೆ.ವಿ.ಕಂ.ನ ಸಿಬ್ಬಂದಿಯೆಂದು ಹೇಳಿಕೊಂಡು ವಿದ್ಯುತ್ ಬಿಲ್ ಪಾವತಿಸುವುದಾಗಿ ಹಣ ಕೇಳಿ ಪಡೆದು ಬಿಲ್ ಪಾವತಿಸದೇ ವಂಚನೆ ಮಾಡಿರುವ ಕೆಲವು ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿರುತ್ತವೆ. ಈ ನಿಟ್ಟಿನಲ್ಲಿ ವಿದ್ಯುತ್ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಕೆಳಕಂಡ ಕೆಲವು ಸೂಚನೆಗಳನ್ನು ಪಾಲಿಸಲು ಕೋರಲಾಗಿದೆ.
ವಿದ್ಯುತ್ ಬಿಲ್ಲನ್ನು ಬೆ.ವಿ.ಕಂ ನ ಅಧಿಕೃತ ಕೌಂಟರ್ಗಳಲ್ಲಿಯೇ ಪಾವತಿಸಬೇಕು. ಬೆ.ವಿ.ಕಂ. ನಿಂದ ಕೆಲಸ ನಿರ್ವಹಣೆಗಾಗಿ ಸಿಬ್ಬಂದಿ ತಮ್ಮಲ್ಲಿಗೆ ಬಂದಾಗ ಗುರುತಿನ ಚೀಟಿಯನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು.
ವಿದ್ಯುತ್ ಬಿಲ್ಲನ್ನು ಆನ್ಲೈನ್ನಲ್ಲಿ ಪಾವತಿಸುವುದರ ಮೂಲಕ ಈ ತರಹದ ವಂಚನೆಗಳನ್ನು ತಪ್ಪಿಸಬಹುದು. ಪೇ-ಟಿಎಮ್, ಗೂಗಲ್ ಪೇ ಹಾಗೂ ಬೆವಿಕಂ.ನ “ಬೆಸ್ಕಾಂ ಮಿತ್ರ” ಆ್ಯಪ್ ನ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಕ್ಷೇಮಕರ.
ಯಾರಾದರೂ ಅನುಮಾನಾಸ್ಪದವಾಗಿ ವರ್ತಸಿದಲ್ಲಿ ಕೂಡಲೇ ಬೆ.ವಿ.ಕಂ ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 08912-250210 ಹಾಗೂ ಮೊಬೈಲ್ ನಂ. 9483549210 ಗೆ ತಿಳಿಸಬೇಕೆಂದು ಬೆಸ್ಕಾಂ ನಗರ ಉಪ ವಿಭಾಗ-1 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರಪ್ಪ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಸಿನಿ ಸುದ್ದಿ7 days ago
ರಾಬರ್ಟ್ ನ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ : ಬೇಬಿ ಡಾನ್ಸ್ ವಿಡಿಯೋ ನೀವೂ ನೋಡಿ..!
-
ಭಾವ ಭೈರಾಗಿ7 days ago
ಕವಿತೆ | ಕಾಮಧೇನು
-
ದಿನದ ಸುದ್ದಿ6 days ago
‘ಅನುಗ್ರಹ’ ಯೋಜನೆ ರಾಜ್ಯದಲ್ಲಿ ಮರುಜಾರಿಗೊಳಿಸದಿದ್ದರೆ ವಿಧಾನಸಭೆಯಲ್ಲಿ ಹೋರಾಟ : ಸಿದ್ದರಾಮಯ್ಯ ಎಚ್ಚರಿಕೆ
-
ನಿತ್ಯ ಭವಿಷ್ಯ6 days ago
ಸೋಮವಾರ ರಾಶಿ ಭವಿಷ್ಯ : ಕರೆ ಮಾಡಿ ಕಷ್ಟಗಳನ್ನು ಪರಿಹರಿಸಿಕೊಳ್ಳಿ
-
ನಿತ್ಯ ಭವಿಷ್ಯ6 days ago
ಮೂಲಾ ನಕ್ಷತ್ರದಲ್ಲಿ ಜನಿಸಿದರೆ ಅದರ ಮಹತ್ವ ಹಾಗೂ ಅದರ ಮಾಹಿತಿ..!
-
ದಿನದ ಸುದ್ದಿ7 days ago
ಹಾವೇರಿ | ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
-
ನಿತ್ಯ ಭವಿಷ್ಯ5 days ago
ಈ ಯೋಗ ಇದ್ದರೆ ಖಂಡಿತ ದೊಡ್ಡ ರಾಜಕಾರಣಿ, ಸಮಾಜ ಸೇವಕ, ಜಿಲ್ಲಾಧಿಕಾರಿ(IAS),IPS, ಸಾಹಿತಿಗಳು, ಗಾಯಕರು, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗುವ ಸಂಭವ
-
ಬಹಿರಂಗ5 days ago
ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ