Connect with us

ಲೈಫ್ ಸ್ಟೈಲ್

ಎಣ್ಣೆ ತ್ವಚೆಗೆ ಬೇಡ ಬೇಸಿಗೆಯ ಧಗೆ

Published

on

ಬೇಸಗೆಯ ಧಗೆ ಏರುತ್ತಿದೆ. ಎಣ್ಣೆ ತ್ವಚೆಯವರಿಗಂತೂ ಹೇಳತೀರದ ಹಿಂಸೆ, ಸಾಮಾನ್ಯ ಮತ್ತು ಶುಷ್ಕ ತ್ವಚೆಯವರಿಗಂತೂ ಹೇಳತೀರದ ಹಿಂಸೆ, ಸಾಮಾನ್ಯ ಮತ್ತು ಶಷ್ಕ ತ್ವಚೆಯ ಮಹಿಳೆಯರಿಗೆ ಹೋಲಿಸಿದರೆ, ಎಣ್ಣೆ ತ್ವಚೆಯುಳ್ಳ ಮಹಿಳೆಯರ ಮುಖ ಸುಕ್ಕು ಗಟ್ಟುವುದು ಕಡಿಮೆ. ಇದು ಎಣ್ಣೆ ತ್ವಚೆಯವರಿಗೆ ಇರುವವರಿಗೆ ವರದಾನ.ಆದರೆ ಬೇಶಿಗೆಕಾಲದಲ್ಲಿ ಮಾತ್ರ ಮೇಕಪ್ ಮಾಡಿದರೆ ಅದು ಮುಖದ ಮೇಲೆ ಇರುವುದು ಕೆಲವೇ ಕ್ಷಣಗಳು ಮಾತ್ರ.

ಸಭೆ ಸಮಾರಂಭಗಳಿಗೆ ಹೋಗುವುದಕ್ಕೆ ಇವರು ಹೆಚ್ಚಿಗೆ ಮುಜುಗರ ಪಡುತ್ತಾರೆ. ತಾವು ಆಕರ್ಷಕವಾಗಿ ಕಾಣುವುದಿಲ್ಲ ಎಂಬ ಕೊರಗು ಅವರದ್ದು ಹಾಗಿದ್ದರೆ ಎಣ್ಣೆ ತ್ವಚೆಯವರು ಆಕರ್ಷಕವಾಗಿ ಕಾಣಲು ಈ ಸಲಹೆಗಳನ್ನು ಪಾಲಿಸ ಬಹುದು.

ಸಲಹೆಗಳು

  • ಎಣ್ಣೆ ತ್ವಚೆಯುಳ್ಳವರು ಮುಖವನ್ನು ಎಷ್ಟೇ ಬಾರಿ ತೊಳೆದಿದ್ದರೂ ಮೇಕಪ್ ಮಾಡುವ ಸ್ವಲ್ಪ ಮೊದಲು ಇನ್ನೊಮ್ಮೆ ಮುಖ ತೊಳೆದು ಕೊಳ್ಳುವುದು ಉತ್ತಮ. ಮುಖ ತೊಳೆಯುವ ಸಂದರ್ಭದಲ್ಲಿ ಸ್ಕ್ರಬ್ಬರ್ ಬಳಸಿದರೆ ಹೆಚ್ಚು ಪರಿಣಾಮಕಾರಿ. ಇದು ಮುಖದಲ್ಲಿನ ಎಣ್ಣೆ ಅಂಶ ಹೀರಿಕೊಳ್ಳುತ್ತದೆ.
  • ಮುಖದಲ್ಲಿ ಎಣ್ಣೆ ಅಂಶ ಇದೆ ಎಂದು ಪದೇ ಪದೇ ಮುಖ ತೊಳೆಯುತ್ತಾ ಇರಬೇಡಿ. 3-4 ಬಾರಿ ಮುಖ ತೊಳೆಯಬಹುದು. ಇದರಿಂದ ತ್ವಚೆಯ ಆರೋಗ್ಯ ಚೆನ್ನಾಗಿ ಇರುತ್ತದೆ. ಆದರೆ ಇದಕ್ಕಿಂತ ಹೆಚ್ಚಿನ ಬಾರಿ ಮುಖ ತೊಳೆಯುತ್ತಿದ್ದರೆ ಅದು ತ್ವಚೆಯಲ್ಲಿನ ತೈಲ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಜಿಡ್ಡಿನಂಶದಿಂದ ತ್ವಚೆಯನ್ನು ರಕ್ಷಿಸಲು ಬ್ಲೋಟಿಂಗ್ ಪೇಪರ್ ಕೂಡ ಬಳಸ ಬಹುದು.
  • ಮುಖ ಒರೆಸಿಕೊಂಡ ನಂತರ ಸಂಪೂರ್ಣ ಮುಖದ ಮೇಲೆ ಐಸ್ನಿಂದ ಕೈಯಾಡಿಸಿ. ಅದನ್ನು ಹಾಗೆಯೇ ಒಣಗಲು ಬಿಡಿ. ನಂತರ ಮೇಕಪ್ ಮಾಡಿ. ಇದರಿಂದ ಮುಖದಲ್ಲಿರುವ ಎಣ್ಣೆ ಅಂಶ ಕಾಣವುದಿಲ್ಲ. ಜೊತೆಗೆ ಮೇಕಪ್ ಕೂಡ ತುಂಬಾ ಸಮಯ ಉಳಿಯುತ್ತದೆ.
  • ಮುಖದಲ್ಲಿ ಧೂಳು ಇದ್ದರೆ ಉಳಿದ ತ್ವಚೆಯವರಿಗಿಂತ ಎಣ್ಣೆ ತ್ವಚೆ ಇರುವವರಲ್ಲಿ ರಂದ್ರಗಳು ಅಧಿಕ ಪ್ರಮಾಣದಲ್ಲಿ ಉಂಟಾಗುತ್ತದೆ.ಇದರಿಂದ ದಿನವೂ ಕ್ಲೆನ್ಸಿಂಗ್    ಮಾಡುವುದು ಉತ್ತಮ, ಇದರಿಂಧ ರಂದ್ರಗಳು ಚಿಕ್ಕದಾಗುತ್ತವೆ.ಅದೇ ರೀತಿ ದಿನವೂ ಒಂದು ನಿಮಿಷ ಐಸ್‍ಕ್ಯೂಬ್‍ನಿಂದ ಮಸಾಜ್ ಮಾಡಿದರೆ ಮುಖದ ತ್ವಚೆ ಬಿಗಿದುಕೊಂಡು ರಂಧ್ರಗಳು ಮುಚ್ಚಿಕೊಳ್ಳುತ್ತವೆ.
  • ಅಡುಗೆ ಸೋಡಾವನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ರಂಧ್ರಗಳು ಕಮ್ಮಿಯಾಗುತ್ತವೆ. ಅಡುಗೆ ಸೋಡಾವನ್ನು ಬಿಸಿನೀರು ಹಾಕಿ ಮಿಕ್ಸ್ ಮಾಡಿ ಇದನ್ನು ಮುಖಕ್ಕೆ ವೃತ್ತಾಕಾರವಾಗಿ ಹಚ್ಚಿ 30 ಸೆಕೆಂಡ್ ಇಟ್ಟು ಮುಖ ತೊಳೆಯಬೇಕು. ಇದನ್ನು ರಾತ್ರಿ ಮಲಗುವ ಮುನ್ನ ಮಾಡಿ, ಈ ರೀತಿ ಮಾಡುವುದರಿಂದಲು ಮುಖದ ರಂಧ್ರಗಳು ಎದ್ದು ಕಾಣದಂದೆ ತ್ವಚೆ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಆದರೆ ಸೂಕ್ಷ್ಮ ತ್ವಚೆ ಆಗಿದ್ದರೆ ಇದನ್ನು ಮಾಡಲು ಹೋಗಬೇಡಿ.

ಲೈಫ್ ಸ್ಟೈಲ್

ರೆಸಿಪಿ | ಖರ್ಜೂರದ ಹೋಳಿಗೆ ಮಾಡೋದು ಹೇಗೆ ಗೊತ್ತಾ..?

Published

on

ಬೇಕಾಗುವ ಪದಾರ್ಥಗಳು

  • ಖರ್ಜೂರ : ಅರ್ಧ ಕೆ.ಜಿ.
  • ಸಕ್ಕರೆ : ಅರ್ಧ ಲೋಟ
  • ಗಸಗಸೆ : ಸ್ವಲ್ಪ
  • ಯಾಲಕ್ಕಿ : ಸ್ವಲ್ಪ
  • ಹುರಿಗಡಲೆಹಿಟ್ಟು : 1-2 ಸೌಟು
  • ಮೈದಾ : 2 ಲೋಟ
  • ರವೆ : ಅರ್ಧ ಲೋಟ
  • ಅಕ್ಕಿ ಹಿಟ್ಟು : ಸ್ವಲ್ಪ
  • ತುಪ್ಪ : ಸ್ವಲ್ಪ
  • ಉಪ್ಪು : ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಖರ್ಜೂರದ ತುಂಬು, ಬೀಜ ತೆಗೆದು ಸ್ವಚ್ಚಗೊಳಿಸಿಕೊಂಡ
ಒರಳಲ್ಲಿ ರುಬ್ಬಬೇಕು. ಖರ್ಜೂರ ಸಣ್ಣಗಾದ ಮೇಲೆ ಹುರಿದ ಗಸಗಸೆ, ಯಾಲಕ್ಕಿ, ಸಕ್ಕರೆ, ಹುರಿಗಡಲೆಹಿಟ್ಟು ಹಾಕಿ ರುಬ್ಬಿ ಹೂರಣವನ್ನು ಸಿದ್ಧಗೊಳಿಸಬೇಕು. ಹೋಳಿಗೆ ಹಿಟ್ಟಿನಂತೆ ಮೇಲೆ ಹೇಳಿದ ಪ್ರಮಾಣ ಹಿಟ್ಟನ್ನು ನಾದಿ ಕಣಕವನ್ನು ಸಿದ್ಧಗೊಳಿಸಬೇಕು. ಸ್ವಲ್ಪ ದಪ್ಪ ಲಟ್ಟಿಸಿ, ಅಂಗೈ ಅಗಲ ಹೋಳಿಗೆ ಲಟ್ಟಿಸಿ ಬೇಯಿಸಬೇಕು. ಬೇಯಿಸುವಾಗ ತುಪ್ಪ ಹಚ್ಚಬೇಕು. ಈ ಹೋಳಿಗೆ 8-10 ದಿನ ಇಟ್ಟರೂ ಕೆಡುವುದಿಲ್ಲ. ಇದು ಪೌಷ್ಟಿಕ ಆಹಾರವಾಗಿದ್ದು, ಖರ್ಜೂರದಲ್ಲಿ ಜೀವಸತ್ವ ಹೆಚ್ಚಾಗಿರುವುದು.

ಇದನ್ನೂ ಓದಿ : ನರದೌರ್ಬಲ್ಯ ನಿವಾರಣೆಗೆ ಬೆಳ್ಳುಳ್ಳಿ ಬಳಸಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ನರದೌರ್ಬಲ್ಯ ನಿವಾರಣೆಗೆ ಬೆಳ್ಳುಳ್ಳಿ ಬಳಸಿ

Published

on

100 ಗ್ರಾಂ ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು

  • ಸಾರಜನಕ : 3.5 ಗ್ರಾಂ
  • ಪಿಷ್ಠ : 28.3 ಗ್ರಾಂ
  • ಮೇದಸ್ಸು : 0.5 ಗ್ರಾಂ
  • ಸುಣ್ಣ : 28 ಮಿಲಿಗ್ರಾಂ
  • ರಂಜಕ : 310 ಮಿಲಿಗ್ರಾಂ
  • ಕಬ್ಬಿಣ : 1.8 ಮಿಲಿಗ್ರಾಂ
  • ನಿಯಾಸಿನ್ : 0.4 ಮಿಲಿಗ್ರಾಂ
  • ಸಿ’ ಜೀವಸತ್ವ : 14 ಮಿಲಿಗ್ರಾಂ

ಬೆಳ್ಳುಳ್ಳಿಯಿಂದ ತಯಾರಿಸಬಹುದಾದ ಅಡುಗೆಗಳು

1. ಬೆಳ್ಳುಳ್ಳಿ ಮೆಣಸಿನಸಾರು

3. ಬೆಳ್ಳುಳ್ಳಿ ಚಟ್ಟಿಪುಡಿ.

2. ಬೆಳ್ಳುಳ್ಳಿ ಬಜ್ಜಿ

ಇದನ್ನೂ ಓದಿ | ಏನಿದು ? ಗಡಿಮಾರಿ..!

ಬೆಳ್ಳುಳ್ಳಿಯಲ್ಲಿರುವ ಔಷಧೀಯ ಗುಣಗಳು

1. ಬೆಳ್ಳುಳ್ಳಿಯನ್ನು ಆಹಾರದ ಜೊತೆ ಸೇವಿಸುವುದರಿಂದ ಹಸಿವು ಹೆಚ್ಚಾಗುತ್ತದೆ ನರದೌರ್ಬಲ್ಯ ನಿವಾರಣೆಯಾಗುತ್ತದೆ.

2. ಶೀತಕಾಲದಲ್ಲಿ ಉಂಟಾಗುವ ಕಿವಿ ನೋವಿಗೆ ಬೆಳ್ಳುಳ್ಳಿ ಹಾಕಿ ಕಾಯಿಸಿದ

3. ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ಕಿವಿಗೆ ಹಾಕುವುದರಿಂದ ನೋವು ಶಮನವಾಗುತ್ತದೆ. 3. ಸುಟ್ಟ ಬೆಳ್ಳುಳ್ಳಿಯ ಎರಡು ತೊಳೆಗಳನ್ನು ಮಕ್ಕಳಿಗೆ ತಿನ್ನಿಸುವುದರಿಂದ ಜಂತು ಹುಳುಗಳು ಸಾಯುತ್ತವೆ.

4. ಎರಡು ಬೆಳ್ಳುಳ್ಳಿ ತೊಳೆಗಳ ಜೊತೆಗೆ ಐದಾರು ತುಳಸಿ ಎಲೆಗಳನ್ನು ಬೆರೆಸಿ ಅರೆದು ಹಚ್ಚುವುದರಿಂದ ಹುಳುಕಡ್ಡಿ ನಿವಾರಣೆಯಾಗುತ್ತದೆ.

5. ಬೆಳ್ಳುಳ್ಳಿಯೊಡನೆ ಹರಳೆಣ್ಣೆಯನ್ನು ಹಾಕಿ ಕಾಯಿಸಿ ನಂತರ ಆರಿಸಿ ನೋವಿರುವ ಭಾಗಗಳಿಗೆ ಉಜ್ಜುವುದರಿಂದ ಊತ ಮತ್ತು ನೋವು ಕಡಿಮೆಯಾಗುತ್ತದೆ.

6. ಬಾಣಂತಿಯರ ಆಹಾರದ ಜೊತೆ ಬೆಳ್ಳುಳ್ಳಿಯನ್ನು ಬಳಸುವುದರಿಂದ ಶೀತದ ಬಾಧೆ ತಟ್ಟುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಏನಿದು ? ಗಡಿಮಾರಿ..!

Published

on

  • ಡಾ.ಎನ್.ಬಿ.ಶ್ರೀಧರ್,ಶಿವಮೊಗ್ಗ

ಈಗ ಸ್ವಲ್ಪ ದಿನಗಳ ಹಿಂದೆ ಶಿವಮೊಗ್ಗದಿಂದ ಸಾಗರಕ್ಕೆ ಕಾರ್ಯನಿಮಿತ್ತ ಹೋಗುವಾಗ ರಸ್ತೆಯ ಬದಿಯಲ್ಲಿ ಒಂದು ಮರದ ಗಾಡಿ, ಅದಕ್ಕೆ ಎಳೆಯಲು ಎರಡು ಮರದ ರೆಂಬೆಗಳು, ಅದರ ಮೇಲೊಂದು ದೇವರ ದೇವತೆಯ ಮೂರ್ತಿ, ಅದರ ಕೈಲೊಂದು ಖಡ್ಗ, ಹಿಂದುಗಡೆ ಕಸಬರಿಗಳ ಮತ್ತು ಕಸದ ರಾಶಿ ಕಂಡೆ. ಕೆಲವೊಮ್ಮೆ ಗಂಡು ಮತ್ತು ಹೆಣ್ಣು ಇರುವ ಜೋಡಿ ಮೂರ್ತಿಗಳೂ ಸಹ ಕಂಡು ಬಂದವು.

ಒಂದಲ್ಲ ಎರಡಲ್ಲ.. ಶಿವಮೊಗ್ಗದಿಂದ ಸಾಗರದವರೆಗಿನ ರಸ್ತೆಯಲ್ಲೆ ಮೂರು ನಾಲ್ಕು ಈ ತರದ ಪ್ರತಿಕೃತಿಗಳು ಕಂಡು ಬರುತ್ತವೆ. ಬಹಳ ವರ್ಷಗಳಿಂದಲೂ ಇದು ಬಹಳ ಸಹಜವಾಗಿ ಕಂಡು ಬರುವ ಈ ದೃಶ್ಯ ಶಿವಮೊಗ್ಗ-ಹೊಸನಗರ, ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿಯೂ ಕಂಡು ಬರುವುದು ಸಾಮಾನ್ಯ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಆಚರಣೆ ಉತ್ತರ ಕರ್ನಾಟಕದಲ್ಲಿ ಕಾಣಸಿಗದು.

ಏನಿದರ ಅರ್ಥ ? ಅಂತ ನೋಡಲು ಹೋದಾಗ ಇದರ ಹೆಸರು “ಗಡಿಮಾರಿ” ಎಂದು ತಿಳಿದು ಬಂದಿತು. ಊರಲ್ಲಿ ಯಾವುದಾದರೂ ಸೋಂಕು ರೋಗ ಕಂಡು ಬಂದರೆ ಅಥವಾ ಇತರ ದುರ್ಘಟನೆಗಳು ನಡೆದರೆ ಆ ಘಟನೆಗೆ ಕಾರಣವಾದ ದುಷ್ಟ ಶಕ್ತಿಯನ್ನು ಊರ ಗಡಿ ದಾಟಿಸಲು ಈ ಪದ್ಧತಿ ಇದೆ ಎಂದು ಹಲವು ಹಿರಿಯರು ಹೇಳಿದರು.

ಈ ಬಗ್ಗೆ ಸದ್ಯದ ಯುವಕರಿಗೆ ಇರುವ ಮಾಹಿತಿ ಅಷ್ಟಕ್ಕಷ್ಟೇ. ಒಂದು ಊರಿನ ಗಡಿ ದಾಟಿಸುವಾಗ ಆ ಮೂರ್ತಿಯ ಜೊತೆಗೆ ಊರಲ್ಲಿರುವ ಕಸ, ಕಡ್ಡಿ ಇತ್ಯಾದಿಗಳನ್ನು ಹೇರಿಕೊಂಡು ಮತ್ತೊಂದು ಊರಿನ ಗಡಿಯ ಹತ್ತಿರ ಬಂದರೆ ಅವರ ಕೆಲಸ ಮುಗಿದಂತೆ.

ಮರದಿಂದ ತಯಾರಿಸಿದ ಬೊಂಬೆಗೆ ಕೆಂಪು, ಬಿಳಿ ಹಳದಿ ಮತ್ತು ಕಪ್ಪು ಬಣ್ಣ ಬಳಿದು ಅದನ್ನು ಚಿಕ್ಕ ಮರದ ಕೈಗಾಡಿಯಲ್ಲಿ ಕುಳ್ಳಿರಿಸಿ ಬೊಂಬೆಯ ಕುತ್ತಿಗೆಗೆ ಹೂವಿನ ಹಾರ ಹಾಕಿ ಪೂಜೆ ಮಾಡುತ್ತಾರೆ. ನಂತರ ಬೊಂಬೆಗೆ ಊದುಬತ್ತಿ ಇಟ್ಟು, ಆರತಿ ಬೆಳಗಿ ಊರಿನ ಜನರೆಲ್ಲ ಮಾರಿಯನ್ನು ಕೈಗಾಡಿಯ ಮುಖೇನ ದೂಡಿಕೊಂಡು ಬಂದು ತಮ್ಮ ಗ್ರಾಮದ ಗಡಿ ದಾಟಿಸಿ ಬಿಡುವುದು ಸಂಪ್ರದಾಯ.

ಕೆಲವೊಮ್ಮೆ ಮುಂದಿನ ಊರಿಗೆ ಒಯ್ಯದಿದ್ದರೆ, ಇದು ಇಟ್ಟಲ್ಲೇ ಕೊಳೆತು ಅಥವಾ ಗೆದ್ದಲು ಹಿಡಿದು ಮಣ್ಣು ಸೇರಲು ಹಲವಾರು ವರ್ಷಗಳು ಬೇಕಾಗುತ್ತವೆ. ಹೀಗಾಗಿ ಸಾಗರ, ತೀರ್ಥಹಳ್ಳಿಯ ರಸ್ತೆಯ ಇಕ್ಕೆಲಗಳಲ್ಲಿ ಇಂಥ ನೂರಾರು ಬೀದಿ ದೇವರು ಯಾವಾಗಲೂ ಕಂಡುಬರುತ್ತವೆ.

ರಾಜ್ಯದ ನಾನಾ ಭಾಗಗಳಲ್ಲಿ ನಾನಾ ರೀತಿಯ ಆಚರಣೆ, ನಂಬಿಕೆ ಈಗಲೂ ಜೀವಂತ. ಈ ನಂಬಿಕೆ ಅನ್ನುವುದು ಹಾಗೆ. ಅದು ಎಲ್ಲಿ, ಹೇಗೆ ಹುಟ್ಟಿಕೊಳ್ಳುತ್ತದೆಯೋ ಗೊತ್ತಿಲ್ಲ. ಅದು ಸಂಪ್ರದಾಯ ಅಥವಾ ಆಚರಣೆ ರೂಪದಲ್ಲಿ ಅವತರಿಸುತ್ತದೆ. ಇಂಥದ್ದೇ ಭಕ್ತಿಯ ಈ ಗಡಿ ಮಾರಿ ದೇವರು!!

ಈ ಗಡಿಮಾರಿಯ ಉಗಮಕ್ಕೆ ತರಹೆವಾರಿ ಕಥೆಗಳಿದ್ದರೂ ಯಾರೂ ಅಷ್ಟು ನಿಖರವಾದ ಮಾಹಿತಿ ನೀಡಲಿಲ್ಲ. ಸಾಗರ ಮತ್ತು ತೀರ್ಥಹಳ್ಳಿಯ ಹಳೆಯ ತಲೆಮಾರಿನ ರೈತರ ಪ್ರಕಾರ, ಇದು ಊರಿನ ಮಾರಿ ದೇವತೆಯಂತೆ. ಪ್ರತೀ ವರ್ಷ ಮಳೆಗಾಲಕ್ಕೂ ಮುನ್ನ ಹಳ್ಳಿಯ ಜನರು ಖಾಯಿಲೆ, ಕೋಟಲೆ, ಕಷ್ಟ-ನಷ್ಟ, ಬಡತನ, ದಾರಿದ್ರ್ಯಡಕ್ಕೆ ಈಡಾಗುತ್ತಿದ್ದರಂತೆ. ಹಸುಗಳು ಖಾಯಿಲೆ ಬೀಳುತ್ತಿದ್ದವಂತೆ.

ಇದನ್ನೂ ಓದಿ | ದಾವಣಗೆರೆ | ಫೆ.24 ರಂದು ಮಹಾನಗರಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ

ಇದಕ್ಕೆಲ್ಲ ಊರ ಮಾರಿಯ ಮುನಿಸೇ ಕಾರಣ ಎಂದುಕೊಂಡ ಹಳ್ಳಿಗರು ಊರಿನ ಮಾರಿಯನ್ನು ಊರಿನ ಗಡಿ ದಾಟಿಸಿ ಬರಲು ಇಂಥ ಆಚರಣೆಯನ್ನು ಶುರುವಿಟ್ಟುಕೊಂಡರಂತೆ. ಇನ್ನು ಹಲವಾರು ಅಂತೆ ಕಂತೆಗಳ ಬೊಂತೆಯೇ ಈ ನಂಬಿಕೆಯ ಹಿಂದಿವೆ.

ಅವರವರ ನಂಬಿಕೆಯಂತೆ ಪೂಜೆಗೊಂಡ ಈ “ಗಡಿಮಾರಿ” ಯನ್ನು ಊರು ದಾಟಿಸುವ ಪದ್ಧತಿಯೇ ವಿಶಿಷ್ಟ. ವಿವಿಧ ವಾಧ್ಯಗಳು, ಕೆಲವೊಮ್ಮೆ ಡೊಲ್ಲು, ತಮಟೆ ಮೆರವಣಿಗೆಯೊಂದಿಗೆ ಹೊರಟ ಮಂದಿ, ಗಡಿಮಾರಿಯನ್ನು ತಮ್ಮ ಊರಿನ ಗಡಿದಾಟಿಸಿ, ಮುಂದಿನ ಊರಿನ ಗಡಿಗೆ ಸೇರಿಸುತ್ತಾರೆ. ಹೀಗೆ ಗಡಿಮಾರಿ ಸಾಗಿ ಹೋದಂತೆ, ಹಿಂದೆ ದಾರಿಯುದ್ದಕ್ಕೂ, ಹಳೇ ಪೊರಕೆ, ಮೊರ, ಚಾಪೆ, ತಟ್ಟಿ, ಬುಟ್ಟಿ, ಒಡೆದ ಮಡಿಕೆ-ಕುಡಿಕೆ, ಹಳೆಯ ಬಟ್ಟೆಗಳನ್ನು ಎಸೆಯುತ್ತ ಹೋಗುತ್ತಾರೆ.

ಸ್ವಲ್ಪ ದಿನಗಳ ನಂತರ ತಮ್ಮ ಗಡಿಯಲ್ಲಿ ಕುಳಿತ ಈ ಗಡಿಮಾರಿಯನ್ನು ಮತ್ತೊಂದು ಗ್ರಾಮದ ಜನರು ತಮ್ಮ ಊರಿನಲ್ಲಿ ಸಂಗ್ರಹವಾದ ಹಳೆಯ ವಸ್ತುಗಳನ್ನು ಸೇರಿಸಿ ತಮ್ಮ ಊರಿಗೆ ಬಂದ ಗಡಿಮಾರಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ತಮ್ಮ ಮುಂದಿನ ಊರಿನ ಎಲ್ಲೆಗೆ ದಾಟಿಸುತ್ತಾರೆ.

ಹೀಗೆ ಎಲ್ಲೆಯಿಂದ ಎಲ್ಲೆಗೆ ಸಂಚಾರಿಸುತ್ತ ಹೋಗುವ ಗಡಿಮಾರಿಯನ್ನು ಕೊನೆಗೆ ಯಾವುದಾದರೊಂದು ನೀರಿರುವ ಜಾಗದಲ್ಲಿ ವಿಸರ್ಜಿಸುತ್ತಾರೆ. ಪ್ರತಿ ಊರಲ್ಲಿ ಕಾಯಿಲೆ ಕಸಾಲೆ ಕಷ್ಟ ಇದ್ದಾಗ ಈ “ಗಡಿಮಾರಿ” ದೇವರನ್ನು ತಯಾರಿಸಿ ಅವರ ಊರಿನ ಗಡಿ ದಾಟಿಸುತ್ತಾರೆ. ಅದಕ್ಕಾಗಿಯೇ ಹಲವಾರು ಗಡಿಮಾರಿಗಳು ನಮಗೆ ರಸ್ತೆಯ ಗುಂಟ ಕಾಣಲು ಸಿಗುವುದು.

ಪ್ರತಿಯೊಂದು ಆಚರಣೆಗೂ ಅದರದೇ ಆದ ಹಿನ್ನೆಲೆ ಇರುತ್ತದೆ. ಗಡಿಮಾರಿಯನ್ನು ಗಡಿಪಾರು ಮಾಡುವ ವಿಶಿಷ್ಟ ಆಚರಣೆಯ ಕಾರಣದಿಂದ, ಗ್ರಾಮವನ್ನು ಶುದ್ಧೀಕರಿಸುವ ಕ್ರಿಯೆ ಮೊದಲಾಗಿ, ಜನರು ತಮ್ಮ ಮನೆಯಲ್ಲಿರುವ ಹಳೆಯ ಸಾಮಾನುಗಳನ್ನು ಹೊರಗೆ ಹಾಕುವುದರಿಂದ, ಊರೆಲ್ಲ ಸ್ವಚ್ಛವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಕಡಿಮೆಯಾಗುವುದೆಂಬುದು ಇದರ ಹಿಂದಿನ ಗೂಢ ಮರ್ಮವಿರಬಹುದೇನೋ..!

ಈಗಲೂ ಅಲ್ಲಿ ಇಲ್ಲಿ ಇಂಥ ಆಚರಣೆಗಳು, ನಂಬಿಕೆಗಳು, ಆರಾಧನೆಗಳು ಇದ್ದರೂ, ಅಂದಿನ ಆರಾಧನಾ ವಿಧಾನಗಳಲ್ಲಿ ಜನಪದರಿಗಿದ್ದ ತನ್ಮಯತೆ, ಸಮರ್ಪಣಾ ಭಾವಗಳನ್ನು ಪ್ರಸ್ತುತ ಕಾಣಲು ಸಾಧ್ಯವಿಲ್ಲ. ಕೆಲವೊಮ್ಮೆ ರಸ್ತೆಯಲ್ಲಿ ಹೋಗುತ್ತಿರುವ ವಾಹನ ಸವಾರನ್ನು ಅಡ್ಡಗಟ್ಟಿ ಒತ್ತಾಯದಿಂದ ಹಣ ವಸೂಲಿ ಮಾಡಿ “ಎಣ್ಣೆ” ಹಾಕುವ ವಸೂಲಿ ದಂಧೆಯಾಗಿಯೂ ಗೋಚರಿಸುತ್ತದೆ.

ಇನ್ನು ಕೆಲವು ವರ್ಷ ಕಳೆದರೆ ಈ ಗಡಿಮಾರಿಗಳು ಗಡಿ ದಾಟಿದರೂ ಆಶ್ಚರ್ಯವಿಲ್ಲ!‌ ಈ ಗಡಿಮಾರಿಯನ್ನು ಊರಿಂದ ಹೊರಗಟ್ಟುವ ದಿನ ಊರಿನ ಗಡಿಯಲ್ಲಿ ಕೋಳಿಯನ್ನು ಬಲಿಕೊಡುವ ಸಂಪ್ರದಾಯವೂ ಚಾಲ್ತಿಯಲ್ಲಿದೆ. ಇಲ್ಲಿ ಬಲಿ ನೀಡಿದ ಕೋಳಿಗಳನ್ನು ಹಳ್ಳಿಗರು ತಂತಮ್ಮ ಮನೆಗೆ ಕೊಂಡೊಯ್ದು ಹಬ್ಬದ ಅಡುಗೆ ಮಾಡಿ ಸವಿಯುತ್ತಾರೆ.

ಗಡಿಮಾರಿ ಓಡಿಸುವ ದಿನ ಮನೆಗೆ ನೆಂಟರಿಷ್ಟರು, ಬಂಧು ಬಳಗ ಬರುವ ವಾಡಿಕೆಯೂ ಇಡೀ ಊರಿನಲ್ಲಿ ಇದೊಂಥರಾ ಜಾತ್ರೆಯ ವಾತಾವರಣ ಸಷ್ಟಿಸುತ್ತದೆ. ಇದೊಂದು ಹಳ್ಳಿ ಜನರ ದುಗುಡ ನಿವಾರಣೆಯ ದಾರಿಯಾಗಿದೆ ಎಂದರು ಸಹ ಆಶ್ಚರ್ಯವಿಲ್ಲ..!

ಈ ಗಡಿಮಾರಿ ದೇವರು ಘಟ್ಟದ ಮೇಲಿನವರ ನಂಬಿಕೆಯಾದರೂ ಬೊಂಬೆ ತಯಾರಿಯಲ್ಲಿ ಕಲಾವಿದನ ಕೈಚಳಕ ಗಮನ ಸೆಳೆಯದೇ ಇರದು. ಬೊಂಬೆ ಕೆತ್ತನೆಯಲ್ಲಿ ನೈಪುಣ್ಯ ತೋರಿಸುವ ಕಲಾವಿದ, ಅದರ ಮುಖ, ಹುಬ್ಬು, ಕಣ್ಣು, ತುಟಿ, ಗಾಂಭೀರ್ಯ ಎಲ್ಲವನ್ನೂ ಚಿತ್ರಿಸಿದ ಚಂದಕ್ಕೆ ಬೆರಗಾಗಲೇಬೇಕು. ತಲೆತಲಾಂತರಗಳು ಉರುಳಿದರೂ ಇಂದಿಗೂ ಬೀದಿ ದೇವರು ಅದರದ್ದೇ ಆದ ಗತ್ತು-ಗೈರತ್ತುಗಳಿಂದ ಮಲೆನಾಡಿನ ಜನರ ಆರಾಧ್ಯ ದೇವತೆಯಾಗಿ ಉಳಿದಿದೆ.

ಇತ್ತೀಚೆಗೆ ಈ ಮೂರ್ತಿಗಳನ್ನು ತಯಾರಿಸುವವರು ಸಿಗದೇ, ಪೂರ್ತಿ ಕಸುಬು ಬಾರದವರು ತಯಾರಿಸುವುದರಿಂದ ಇವು ವಿಕಾರವಾಗಿ ಭೂತದಂತೆ ಕಾಣಿಸುವುದೂ ಇದೆ.
ಅದರಲ್ಲೂ ಪಶುಗಳಲ್ಲಿ ಸಾಮಾನ್ಯವಾಗಿ ಬರುವ ಕಾಲುಬಾಯಿ ಜ್ವರವೆಂಬ ವೈರಾಣು ಕಾಯಿಲೆ ಬಂದಾಗ ಈ ರೀತಿ ಗಡಿಮಾರಿಗಳು ಊರಿಂದ ಊರಿನ ಗಡಿಯಲ್ಲಿ ಕಂಡು ಬರುವುದು ಸಾಮಾನ್ಯ.

ಇದೊಂದು ಗ್ರಾಮೀಣ ಜನರ ಮನಸ್ಸಿನ ದುಗುಡ ತುಮುಲವನ್ನು ಹಗುರಗೊಳಿಸಲು ಇರುವ ಸಂಪ್ರದಾಯ ಹಾಗೇ ಇರಲಿ ಎಂದು ಸ್ವೀಕರಿಸಬೇಕೋ ಅಥವಾ ರೋಗಗಳನ್ನು ನಿಯಂತ್ರಿಸಲು ಉತ್ತಮ ಲಸಿಕೆಗಳು, ಉತ್ತಮ ತಂತ್ರಜ್ಞಾನವಿರುವ ಈ ಆಧುನಿಕ ಯುಗದಲ್ಲಿ ಇಂತಹ ಆಚರಣೆ ಎಷ್ಟರ ಮಟ್ಟಿಗೆ ಸರಿ ?! ಇದು ಮೌಢ್ಯವಲ್ಲವೇ? ಎಂಬ ಪ್ರಶ್ನೆಗಳಿಗೆಲ್ಲಾ ಓದುಗರೇ ಉತ್ತರಿಸಬೇಕು.!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ27 mins ago

ದಾವಣಗೆರೆ | ವಯೋಶ್ರೇಷ್ಟ ಸಮ್ಮಾನ್-2021 ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ನವದೆಹಲಿ ಇವರು 2021-22ನೇ ಸಾಲಿನಲ್ಲಿ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಂದ/ಸಂಸ್ಥೆಗಳಿಂದ...

ದಿನದ ಸುದ್ದಿ40 mins ago

ಪರವಾನಗಿ ಹೊಂದಿದ ಮಾರಾಟಗಾರರಿಂದ ಮಾತ್ರ ತಂಬಾಕು ಮಾರಾಟವಾಗಬೇಕು : ಎನ್ಎಲ್ಎಸ್ಐಯು ವರದಿ

ಸುದ್ದಿದಿನ,ಬೆಂಗಳೂರು: ತಂಬಾಕು ಉತ್ಪನ್ನಗಳ ಮಾರಾಟ ಮಾಡಲು ಎಲ್ಲ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು ಪರವಾನಗಿ ಹೊಂದಿರಬೇಕು. ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವ ಎಲ್ಲ ಆವರಣಗಳಲ್ಲಿ...

ದಿನದ ಸುದ್ದಿ2 hours ago

ದಾವಣಗೆರೆ ಜಿ.ಪಂ ಸಾಮಾನ್ಯ ಸಭೆ | ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸುವಂತೆ ಸದಸ್ಯರ ಒತ್ತಾಯ

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳವನ್ನು ಖರೀದಿಸುವಂತೆ ಹಾಗೂ ಪಡಿತರ ವಿತರಣೆಯಲ್ಲಿ(ಪಿಡಿಎಸ್) ಮೆಕ್ಕಜೋಳವನ್ನು ಸೇರ್ಪಡೆಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಜಿಲ್ಲಾ...

ದಿನದ ಸುದ್ದಿ11 hours ago

ಕೃಷಿ ಸಿಂಚಾಯಿ ಯೋಜನೆ | ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: 2020-21ನೇ ಸಾಲಿನ ಕೇಂದ್ರ ಪುರಸ್ಕøತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಮಿತ ಬಳಕೆಗಾಗಿ ಹನಿ ನೀರಾವರಿ ಅಳವಡಿಸಲು...

ದಿನದ ಸುದ್ದಿ11 hours ago

Breaking | ಕೇರಳ ರೈಲು ಪ್ರಯಾಣಿಕರಿಂದ 100 ಕ್ಕೂ ಹೆಚ್ಚು ಜೆಲೆಟಿನ್ ಸ್ಟಿಕ್‌ಗಳು, 350 ಡಿಟೋನೇಟರ್‌ಗಳನ್ನು ವಶಕ್ಕೆ ಪಡೆದ ಪೊಲೀಸ್

ಸುದ್ದಿದಿನ ಡೆಸ್ಕ್ : ಕೇರಳದ ಕೋಜಿಕ್ಕೋಡ್ ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರಿಂದ 100 ಕ್ಕೂ ಹೆಚ್ಚು ಜೆಲೆಟಿನ್ ಸ್ಟಿಕ್‌ಗಳು ಮತ್ತು 350 ಡಿಟೋನೇಟರ್‌ಗಳನ್ನು ಹಾಗೂ ಹೆಚ್ಚಿನ ಸಂಖ್ಯೆಯ...

ಲೈಫ್ ಸ್ಟೈಲ್12 hours ago

ರೆಸಿಪಿ | ಖರ್ಜೂರದ ಹೋಳಿಗೆ ಮಾಡೋದು ಹೇಗೆ ಗೊತ್ತಾ..?

ಬೇಕಾಗುವ ಪದಾರ್ಥಗಳು ಖರ್ಜೂರ : ಅರ್ಧ ಕೆ.ಜಿ. ಸಕ್ಕರೆ : ಅರ್ಧ ಲೋಟ ಗಸಗಸೆ : ಸ್ವಲ್ಪ ಯಾಲಕ್ಕಿ : ಸ್ವಲ್ಪ ಹುರಿಗಡಲೆಹಿಟ್ಟು : 1-2 ಸೌಟು...

ಕ್ರೀಡೆ23 hours ago

ರಾಜ್ಯದ ಕ್ರೀಡಾ ವಿಜ್ಞಾನ ಸಂಸ್ಥೆಯಿಂದ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ

ಸುದ್ದಿದಿನ,ದಾವಣಗೆರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಮಾರ್ಚ್ 2021ನೇ ಮಾಹೆಯಲ್ಲಿ ರಾಜ್ಯದ ಕ್ರೀಡಾ ವಿಜ್ಞಾನ ಸಂಸ್ಥೆಯಿಂದ (Sports Science) 8 ರಿಂದ 13...

ಕ್ರೀಡೆ23 hours ago

ಅತಿ ಕಡಿಮೆ ಪಂದ್ಯ ; 400 ವಿಕೆಟ್ : ದಾಖಲೆ ಬರೆದ ಸ್ಪಿನ್ನರ್‌ ಆರ್‌ ಅಶ್ವಿನ್‌

ಸುದ್ದಿದಿನ,ಅಹಮದಾಬಾದ್‌: ಟೀಂ ಇಂಡಿಯಾದ ಸ್ಪಿನ್ನರ್‌ ಆರ್‌ ಅಶ್ವಿನ್‌ ಅವರು ಅತಿ ಕಡಿಮೆ ಪಂದ್ಯಗಳಲ್ಲಿ 400 ವಿಕೆಟ್‌ಗಳನ್ನು ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಭಾರತದ ಪರ ಹೊಸ...

ದಿನದ ಸುದ್ದಿ1 day ago

ಕಲ್ಲು ಕ್ವಾರಿ ವಿರುದ್ದ ಎಫ್‍ಐಆರ್ ದಾಖಲು | ಕಲ್ಲುಗಣಿ ಮತ್ತು ಕ್ರಷರ್ ಘಟಕಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸದಿದ್ದರೆ ಕ್ರಮ : ಡಿಸಿ ಮಹಾಂತೇಶ ಬೀಳಗಿ ಎಚ್ಚರಿಕೆ

ಸುದ್ದಿದಿನ,ದಾವಣಗೆರೆ : ಕಲ್ಲು ಗಣಿ ಮತ್ತು ಕ್ರಷರ್ ಘಟಕಗಳು 15 ದಿನಗಳ ಒಳಗಾಗಿ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಹಾಗೂ ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಬೇಕು....

ದಿನದ ಸುದ್ದಿ1 day ago

ಡಿಜಿಟಲ್ ಮಾಧ್ಯಮದಿಂದ ಲಾಭದಷ್ಟೇ ಅಪಾಯವೂ ಇದೆ : ಪಿಟಿಐ ಸುದ್ದಿ ಸಂಸ್ಥೆ ಪ್ರತಿನಿಧಿ ಎ. ಲಕ್ಷ್ಮೀದೇವಿ

ಸುದ್ದಿದಿನ,ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ ಗುರುವಾರ ಏರ್ಪಡಿಸಿದ್ದ ಮಾಧ್ಯಮ ಮಂಥನ ಕಾರ್ಯಕ್ರಮದಲ್ಲಿ ಪಿಟಿಐ ಸುದ್ದಿಸಂಸ್ಥೆಯ ನವದೆಹಲಿಯ ವಿಶೇಷ ಪ್ರತಿನಿಧಿ...

Trending