Connect with us

ದಿನದ ಸುದ್ದಿ

ಪೆಪ್ಸಿ ಕಂಪನಿಯಿಂದ ಇಂದಿರಾ ನೋಯಿ ನಿರ್ಗಮನ

Published

on

೧೨ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಭಾರತದ ಮಹಿಳೆ

ಸುದ್ದಿದಿನ ಡೆಸ್ಕ್: ಭಾರತ ಮೂಲದ ಇಂದಿರಾ ನೋಯಿ ಅಮೆರಿಕದ ದೈತ್ಯ ಆಹಾರ ಉತ್ಪನ್ನಗಳ ತಯಾರಕ ಪೆಪ್ಸಿಕೋ ಕಂಪನಿ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ಹುದ್ದೆಯಿಂದ 12 ವರ್ಷಗಳ ನಂತರ ನಿರ್ಗಮನಗೊಳ್ಳಲಿದ್ದಾರೆ. 62 ವರ್ಷದ ಇಂದಿರಾ ನೋಯಿ ಅಕ್ಟೋಬರ್ 3ರಂದು ಕಂಪನಿ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಕಂಪನಿಯೊಂದಿಗಿನ 24 ಸಂಬಂಧ ಅಂತ್ಯವಾಗಲಿದೆ. ಆದರೆ, 2019ರ ವರೆಗೆ ಚೇರ್ಮನ್ ಆಗಿ ಮುಂದುವರಿಯಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ನೋಯಿ ನಿರ್ಗಮನದಿಂದ ತೆರವಾದ ಸಿಇಒ ಹುದ್ದೆಗೆ ಬಾರ್ಸಿಲೋನಾ ಮೂಲದ ಅಧ್ಯಕ್ಷ ರಾಮನ್ ಲಗುವರ್ಟಾ ಅವರನ್ನು ಆಡಳಿತ ಮಂಡಳಿ ಆಯ್ಕೆ ಮಾಡಿದ್ದು, ನೋಯಿ ನಂತರದಲ್ಲಿ ಕಂಪನಿಯನ್ನು ಸಮರ್ಥವಾಗಿ ನಡೆಸಿಕೊಂಡು ಹೋಗಬಲ್ಲ ಸಾಮರ್ಥ್ಯ, ದಕ್ಷತೆ ಲಗುವರ್ಟಾ ಅವರಿಗಿದೆ ಎಂದು ಆಡಳಿತ ನಿರ್ಧರಿಸಿದೆ. ಇಂದಿರಾ ನೋಯಿ ನಿರ್ಗಮನ ಹೊರತುಪಡಿಸಿ ಕಂಪನಿ ನಾಯಕರ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

Advertisement
Click to comment

Leave a Reply

Your email address will not be published. Required fields are marked *

ದಿನದ ಸುದ್ದಿ

ವಿದ್ಯುತ್ ಬಿಲ್ ಪಾವತಿ ವಂಚನೆ ಬಗ್ಗೆ ಜಾಗೃತಿ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬೆ.ವಿ.ಕಂ.ನ ಸಿಬ್ಬಂದಿಯೆಂದು ಹೇಳಿಕೊಂಡು ವಿದ್ಯುತ್ ಬಿಲ್ ಪಾವತಿಸುವುದಾಗಿ ಹಣ ಕೇಳಿ ಪಡೆದು ಬಿಲ್ ಪಾವತಿಸದೇ ವಂಚನೆ ಮಾಡಿರುವ ಕೆಲವು ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿರುತ್ತವೆ. ಈ ನಿಟ್ಟಿನಲ್ಲಿ ವಿದ್ಯುತ್ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಕೆಳಕಂಡ ಕೆಲವು ಸೂಚನೆಗಳನ್ನು ಪಾಲಿಸಲು ಕೋರಲಾಗಿದೆ.

ವಿದ್ಯುತ್ ಬಿಲ್ಲನ್ನು ಬೆ.ವಿ.ಕಂ ನ ಅಧಿಕೃತ ಕೌಂಟರ್‍ಗಳಲ್ಲಿಯೇ ಪಾವತಿಸಬೇಕು. ಬೆ.ವಿ.ಕಂ. ನಿಂದ ಕೆಲಸ ನಿರ್ವಹಣೆಗಾಗಿ ಸಿಬ್ಬಂದಿ ತಮ್ಮಲ್ಲಿಗೆ ಬಂದಾಗ ಗುರುತಿನ ಚೀಟಿಯನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು.

ವಿದ್ಯುತ್ ಬಿಲ್ಲನ್ನು ಆನ್‍ಲೈನ್‍ನಲ್ಲಿ ಪಾವತಿಸುವುದರ ಮೂಲಕ ಈ ತರಹದ ವಂಚನೆಗಳನ್ನು ತಪ್ಪಿಸಬಹುದು. ಪೇ-ಟಿಎಮ್, ಗೂಗಲ್ ಪೇ ಹಾಗೂ ಬೆವಿಕಂ.ನ “ಬೆಸ್ಕಾಂ ಮಿತ್ರ” ಆ್ಯಪ್ ನ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಕ್ಷೇಮಕರ.

ಯಾರಾದರೂ ಅನುಮಾನಾಸ್ಪದವಾಗಿ ವರ್ತಸಿದಲ್ಲಿ ಕೂಡಲೇ ಬೆ.ವಿ.ಕಂ ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 08912-250210 ಹಾಗೂ ಮೊಬೈಲ್ ನಂ. 9483549210 ಗೆ ತಿಳಿಸಬೇಕೆಂದು ಬೆಸ್ಕಾಂ ನಗರ ಉಪ ವಿಭಾಗ-1 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರಪ್ಪ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಿಯಾಯಿತಿ ದರದಲ್ಲಿ ಲಿಡಕರ್ ಉತ್ಪನ್ನಗಳ ಮಾರಾಟ

Published

on

ಸುದ್ದಿದಿನ,ದಾವಣಗೆರೆ : ನಗರದ ಲಿಡಕರ್ ಮಾರಾಟ ಮಳಿಗೆಯಲ್ಲಿ ವಾರ್ಷಿಕ ತೀರುವಳಿ ಪ್ರಯುಕ್ತ ಮಾ.05 ರಿಂದ 21 ರವರೆಗೆ ಚರ್ಮದ ಉತ್ಪನ್ನಗಳ ಮೇಲೆ ಶೇ.20 ರಿಯಾಯಿತಿ ಮಾರಾಟ ಇರುತ್ತದೆ.

ನಗರದ ಎ.ವಿ.ಕೆ ಕಾಲೇಜು ರಸ್ತೆಯಲ್ಲಿರುವ ಲಿಡ್‍ಕರ್ ಮಳಿಗೆಯಲ್ಲಿ ಚರ್ಮದ ಉತ್ಪನ್ನಗಳ ಮೇಲೆ ಶೇ20% ರಷ್ಟು ರಿಯಾಯಿತಿ ಮಾರಾಟವಿದ್ದು, ಚರ್ಮದ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್, ಮಹಿಳೆಯರ ಪರ್ಸ್, ವ್ಯಾನಟಿ ಬ್ಯಾಗ್ ಲಭ್ಯವಿರುತ್ತದೆ. ಗ್ರ್ರಾಹಕರು ಈ ರಿಯಾಯಿತಿ ದರದ ಸದುಪಯೋಗ ಪಡೆದುಕೊಳ್ಳಬಹುದೆಂದು ಲಿಡಕರ್ ಲೆದರ್ ಎಂಪೋರಿಯಂ ದಾವಣಗೆರೆ ಜಯರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸ್ಮಾಟ್‍ಸಿಟಿ ಯೋಜನೆ : ಸಲಹೆ-ಅಹವಾಲು ಸಲ್ಲಿಸಲು ವಾಟ್ಸಾಪ್ ಸಂಖ್ಯೆ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಕೈಗೊಂಡಿರುವ ಕಾಮಗಾರಿಗಳ ಕುರಿತು ಸಾರ್ವಜನಿಕರು ಸಲಹೆ ಹಾಗೂ ಅಹವಾಲುಗಳನ್ನು ಸಲ್ಲಿಸಲು ಇಚ್ಚಿಸಿದ್ದಲ್ಲಿ ಅಂತಹವರಿಗೆ ಮುಕ್ತ ಅವಕಾಶ ಕಲ್ಪಿಸುವ ಉದ್ದೇಶದೊಂದಿಗೆ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ವಾಟ್ಸಾಪ್ ಸಂಖ್ಯೆ 9141930830 ಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಪ್ರಕಟಿಸಲಾಗಿದೆ.

ಕಾಮಗಾರಿಗಳ ಕುರಿತು ಸೂಕ್ತ ಸಲಹೆಗಳನ್ನು ನೀಡುವುದರ ಮುಖೇನ ಈ ವಾಟ್ಸಾಪ್ ಸಂಖ್ಯೆಯನ್ನು ಸದ್ಬಳಕೆ ಮಾಡಿಕೊಂಡು ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ7 mins ago

ವಿದ್ಯುತ್ ಬಿಲ್ ಪಾವತಿ ವಂಚನೆ ಬಗ್ಗೆ ಜಾಗೃತಿ

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬೆ.ವಿ.ಕಂ.ನ ಸಿಬ್ಬಂದಿಯೆಂದು ಹೇಳಿಕೊಂಡು ವಿದ್ಯುತ್ ಬಿಲ್ ಪಾವತಿಸುವುದಾಗಿ ಹಣ ಕೇಳಿ ಪಡೆದು ಬಿಲ್ ಪಾವತಿಸದೇ ವಂಚನೆ ಮಾಡಿರುವ ಕೆಲವು...

ದಿನದ ಸುದ್ದಿ12 mins ago

ರಿಯಾಯಿತಿ ದರದಲ್ಲಿ ಲಿಡಕರ್ ಉತ್ಪನ್ನಗಳ ಮಾರಾಟ

ಸುದ್ದಿದಿನ,ದಾವಣಗೆರೆ : ನಗರದ ಲಿಡಕರ್ ಮಾರಾಟ ಮಳಿಗೆಯಲ್ಲಿ ವಾರ್ಷಿಕ ತೀರುವಳಿ ಪ್ರಯುಕ್ತ ಮಾ.05 ರಿಂದ 21 ರವರೆಗೆ ಚರ್ಮದ ಉತ್ಪನ್ನಗಳ ಮೇಲೆ ಶೇ.20 ರಿಯಾಯಿತಿ ಮಾರಾಟ ಇರುತ್ತದೆ....

ದಿನದ ಸುದ್ದಿ17 mins ago

ಸ್ಮಾಟ್‍ಸಿಟಿ ಯೋಜನೆ : ಸಲಹೆ-ಅಹವಾಲು ಸಲ್ಲಿಸಲು ವಾಟ್ಸಾಪ್ ಸಂಖ್ಯೆ

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಕೈಗೊಂಡಿರುವ ಕಾಮಗಾರಿಗಳ ಕುರಿತು ಸಾರ್ವಜನಿಕರು ಸಲಹೆ ಹಾಗೂ ಅಹವಾಲುಗಳನ್ನು ಸಲ್ಲಿಸಲು ಇಚ್ಚಿಸಿದ್ದಲ್ಲಿ ಅಂತಹವರಿಗೆ ಮುಕ್ತ...

ದಿನದ ಸುದ್ದಿ25 mins ago

ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಆತ್ಮವಿಶ್ವಾಸ ಮೂಡಿಸಲು ನೇರ ಫೋನ್ ಇನ್ ಕಾರ್ಯಕ್ರಮ

ಸುದ್ದಿದಿನ,ದಾವಣಗೆರೆ : ಜೂನ್ 2021 ರ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಆತ್ಮವಿಶ್ವಾಸ ಮೂಡಿಸುವುದು ಹಾಗೂ ಗೊಂದಲಗಳನ್ನು ನಿವಾರಿಸಲು ಜಿಲ್ಲಾ...

ದಿನದ ಸುದ್ದಿ14 hours ago

ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಇನ್ನಿಲ್ಲ

ಸುದ್ದಿದಿನ,ಬೆಂಗಳೂರು : ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ, ಜನಪ್ರಿಯ ಪ್ರಾಧ್ಯಾಪಕ, ಏಟ್ಸ್, ಎಲಿಯಟ್, ಷೇಕ್ಸ್ ಪಿಯರ್ ಕಾವ್ಯಗಳನ್ನು ಅನನ್ಯವಾಗಿ ಕನ್ನಡಕ್ಕೆ ತಂದ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ (85)...

ಸಿನಿ ಸುದ್ದಿ14 hours ago

ಕನ್ನಡವನ್ನ ಕಿತ್ತುಕೊಳ್ಳೋ ಧೈರ್ಯ ಯಾರಿಗಿದೆ..? ಕನ್ನಡ ಉಳಿಸಿ ಅನ್ನಬೇಡಿ, ಕನ್ನಡ ಬೆಳೆಸಿ ಎನ್ನಿ : ಕನ್ನಡ ಪರ ಹೋರಾಟಗಾರರಿಗೆ ಕಿಚ್ಚನ ಸಲಹೆ

ಸುದ್ದಿದಿನ, ಬೆಂಗಳೂರು : ಸಂಘಟನೆಯವರ ಹಿಂದೆ ನೂರಾರು ಜನ ಬರ್ತೀರಾ, ಆದರೆ ನಮ್ಮಂಥ ಕಲಾವಿದರಿಗೆ ಅಭಿಮಾನಿಗಳಷ್ಟೇ. ಅವರು ರಾಜ್ಯದ ಮೂಲೆಗಳಲ್ಲಿ ಇರ್ತಾರೆ. ನೀವು ನಮ್ಮನ್ನೆನ್ನಾದ್ರೂ ಹೊಡೆಯೋಕೆ ಬಂದ್ರೆ...

ನಿತ್ಯ ಭವಿಷ್ಯ17 hours ago

ಜನ್ಮ ಕುಂಡಲಿಯಲ್ಲಿ ಈ ಗ್ರಹಗಳು ಇದ್ದರೆ ಆಗರ್ಭ ಶ್ರೀಮಂತರು : ಧನ ಯೋಗ ಪ್ರಾಪ್ತಿ

ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ. ಶ್ರೀ ಸೋಮಶೇಖರ್ B.Sc Mob.No.9353488403 ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು. ಇವರು ಜನ್ಮ ಜಾತಕ,...

ನಿತ್ಯ ಭವಿಷ್ಯ17 hours ago

ಶನಿವಾರದ ರಾಶಿ ಭವಿಷ್ಯ 

ಸೂರ್ಯೋದಯ: 06:31 AM, ಸೂರ್ಯಸ್ತ: 06:27 PM ಶಾರ್ವರೀ ನಾಮ ಸಂವತ್ಸರ ಮಾಘ ಮಾಸ ಶಿಶಿರ ಋತು ಉತ್ತರಾಯಣ, ಕೃಷ್ಣ ಪಕ್ಷ, ತಿಥಿ: ಅಷ್ಟಮೀ ( 18:10...

ದಿನದ ಸುದ್ದಿ24 hours ago

ಸಾರ್ವಜನಿಕರ ಸಮಸ್ಯೆಗಳ ಸ್ಪಂದನೆಗೆ ಡಿಜಿಟಲ್ ಮೊರೆ ಹೋದ ಪಾಲಿಕೆ : ವಾಟ್ಸ್ ಆ್ಯಪ್ ನಂಬರ್ ಪೋಸ್ಟರ್ ಬಿಡುಗಡೆ ಮಾಡಿದ ಮೇಯರ್ ಎಸ್.ಟಿ.ವೀರೇಶ್

ಸುದ್ದಿದಿನ,ದಾವಣಗೆರೆ : ಗ್ರಾಹಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು ಮಹಾನಗರಪಾಲಿಕೆ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದು, ಗ್ರಾಹಕರು ತಮ್ಮ ಸಮಸ್ಯೆಗಳನ್ನು ತಕ್ಷಣವೇ ತಿಳಿಸಲು ವಾಟ್ಸ್‍ಆ್ಯಪ್ ನಂಬರ್‍ನ್ನು ನೀಡಲಾಗಿದೆ....

ದಿನದ ಸುದ್ದಿ1 day ago

ಪಡಿತರ ಚೀಟಿದಾರರು ಕೂಡಲೇ ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಮಾಡಿಸಿಕೊಳ್ಳಿ

ಸುದ್ದಿದಿನ,ದಾವಣಗೆರೆ : ಇ-ಕೆವೈಸಿ ಆಧಾರ್ ಬಯೋ ದೃಢೀಕರಣ ಮಾಡಿಸದ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ಕೂಡಲೇ ಭೇಟಿ ನೀಡಿ ಇ-ಕೆವೈಸಿ ಆಧಾರ್ ಬಯೋ ದೃಢೀಕರಣ...

Trending