ದಿನದ ಸುದ್ದಿ
‘ಪತ್ರಕರ್ತ ಬುಖಾರಿ ಹಂತಕ’ ಓದಿದ್ದು ಬೆಂಗಳೂರಲ್ಲಿ
ಸುದ್ದಿದಿನ ಡೆಸ್ಕ್: ರೈಸಿಂಗ್ ಕಾಶ್ಮೀರ್ ಪತ್ರಿಕೆಯಸಂಪಾದಕ ಸುಜಾತ್ ಬುಖಾರಿ ಹತ್ಯೆ ನಡೆಸಿದ ಲಷ್ಕರ್ ಇ ತಯ್ಬಾ ಉಗ್ರಗಾಮಿ ಸಜ್ಜದ್ ಗುಲ್ ಎಂಬ ಆರೋಪಿ ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ಮುಗಿಸಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನೆಲೆಸಿರುವ ಗುಲ್, ಐದು ಕಾಶ್ಮೀರದ ನಿವಾಸಿ. ಲಷ್ಕರ್ ಇ ತಯ್ಬಾ ಸಂಘಟನೆಯ ಮುಖ್ಯಸ್ಥ ಹಫೀಸ್ ಸಯೀದ್ ಆದೇಶದ ಮೇಲೆ ಗುಲ್, ಪಾಕ್ನಿಂದ ಕಾಶ್ಮೀರಕ್ಕೆ ಬಂದು ಹತ್ಯೆ ಸಂಚು ರೂಪಿಸಿ ಅದರಲ್ಲಿ ಭಾಗಿಯಾಗಿದ್ದಾನೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಐದು ವರ್ಷಗಳಹಿಂದೆ ಗುಲ್ನನ್ನು ಬಂಧಿಸಲಾಗಿತ್ತು. ನಂತರ ಆತ ಅಲ್ಲಿಂದ ಪಾಕಿಸ್ತಾನಕ್ಕೆ ಪರಾರಿಯಾಗಿ ಲಷ್ಕರ್ ಇ ತಯ್ಬಾ ಸಂಘಟನೆ ಸೇರಿಕೊಂಡು, ಅಲ್ಲಿನ ತರಬೇತಿ ಮುಗಿಸಿದ್ದ ಎಂದು ಪೊಲೀಸ್ ತನಿಖೆಗಳು ತಿಳಿಸಿವೆ.
ರಂಜಾನ್ ಮಾಸದಲ್ಲಿ ಕೇಂದ್ರ ಸರಕಾರವು ಕದನ ವಿರಾಮ ಘೋಷಿಸಿದ ಹಿನ್ನೆಲೆಲ್ಲಿ ರೈಸಿಂಗ್ ಸ್ಟಾರ್ ಸಂಪಾದಕ ಬುಖಾರಿ ಅವರು ವಿರೋಧಿಸಿದ್ದರು. ಲಷ್ಕರ್ ಇ ತಯ್ಬಾ ಸಂಘಟನೆಯ ವಿರುದ್ಧ ಯಾವಾಗಲೂ ಬರೆಯುತ್ತಿದ್ದ ಬುಖಾರಿ ಅವರು ಎಲ್ಇಟಿಯ ಹಿಟ್ಲಿಸ್ಟ್ ನಲ್ಲಿದ್ದರು ಎಂದು ತಿಳಿದುಬಂದಿದೆ.
ಬುಖಾರಿ ಅವರನ್ನು ಕೊಲ್ಲಲು ಬಂದಿದ್ದ ಗುಲ್, ಬೆಂಗಳೂರಿನಲ್ಲೇ ಓದಿ, ತಾಂತ್ರಿಕ ಕೋರ್ಸ್ವೊಂದಕ್ಕೆ ಸೇರಿ ಪರಿಣಿತನೂ ಆಗಿದ್ದ ಎಂದು ತಿಳಿದುಬಂದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಕೆಂಗಾಪುರ | ಮಾ.12 ರಂದು ಶ್ರೀ ರಾಮಲಿಂಗೇಶ್ವರ ಮಹಾ ಸ್ವಾಮಿಯವರ 45 ನೇ ಮುಳ್ಳುಗದ್ದಿಗೆ ; ಉಚಿತ ಸಾಮೂಹಿಕ ವಿವಾಹ ಮಹೋತ್ಸವ

ಸುದ್ದಿದಿನ, ಚನ್ನಗಿರಿ : ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ರಾಮಲಿಂಗೇಶ್ವರ ಮಹಾ ಸ್ವಾಮಿಯವರ 45 ನೇ ಮುಳ್ಳು ಗದ್ದಿಗೆ ಮಹೋತ್ಸವವು ಸುಕ್ಷೇತ್ರ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ ಮಾ.12 ರಂದು ನಡೆಯಲಿದೆ.
ಇದನ್ನೂ ಓದಿ | ದಾವಣಗೆರೆ | ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾಸಮಿತಿಯಿಂದ ಪಾದಯಾತ್ರೆ ಆರಂಭ
ಈ ಮಹೋತ್ಸವದಲ್ಲಿ ಕುಂಭಾಭಿಷೇಕ ಮತ್ತು 101 ಉಚಿತ ಸಾಮೂಹಿಕ ವಿವಾಹವು ಜರುಗಲಿದ್ದು ವಧು-ವರರಿಗೆ ತಾಳಿ-ಬಟ್ಟೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಶ್ರೀ ಮಠದ ಆಡಳಿತ ಮಂಡಳಿಯವರು ಹಾಗೂ ಶ್ರೀಮಠದ ವಿದ್ಯಾಸಂಸ್ಥೆಯ ಪಿಯು ವಿಭಾಗದ ಪ್ರಾಂಶುಪಾಲರಾದ ಟಿ.ಎಂ.ದಾದಾಪೀರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾಸಮಿತಿಯಿಂದ ಪಾದಯಾತ್ರೆ ಆರಂಭ

ಸುದ್ದಿದಿನ,ದಾವಣಗೆರೆ: ನಗರದ ಮಟ್ಟಿಕಲ್ಲು ಬಸವೇಶ್ವರ ದೇವಸ್ಥಾನದಿಂದ ಮಂಗಳವಾರ ಬೆಳಗ್ಗೆ 7.30 ಕ್ಕೆ 80 ಭಕ್ತಾದಿಗಳು ಪಾದಯಾತ್ರೆ ಆರಂಭಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾ ಸಮಿತಿವತಿಯಿಂದ ಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 9ನೇವರ್ಷದ ಪಾದಯಾತ್ರೆಯನ್ನು ಮಟ್ಟಿಕಲ್ಲು ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಾವಣಗೆರೆ ನಗರಪಾಲಿಕೆ ಮಾಜಿ ಸದಸ್ಯರಾದ ಶ್ರೀ ರಮೇಶ್ ನಾಯ್ಕರವರು ಚಾಲನೆ ನೀಡಿದರು.
ಚನ್ನಗಿರಿ | ಕುಡಿಯುವ ನೀರಿಗೆ ರೂ.5.47 ಕೋಟಿ ಹಣ ಮಂಜೂರು: ಸಚಿವ ಭೈರತಿ ಬಸವರಾಜ್
ಪಾದಯಾತ್ರಿಗಳು ಬಾಡ, ಸಂತೇಬೆನ್ನೂರು, ಚನ್ನಗಿರಿ, ಅಜ್ಜಂಪುರ, ಕಡೂರು, ಕೊಟ್ಟಿಗೆಹಾರ, ಉಜಿರೆ ಮಾರ್ಗವಾಗಿ ಮಾರ್ಚ್ 10ನೆ ತಾರೀಖಿನಂದು ಧರ್ಮಸ್ಥಳ ತಲುಪುವರು ಈ ಪಾದಯಾತ್ರೆಗೆ ದಾವಣಗೆರೆ ಮತ್ತು ಹರಿಹರದ ಸುಮಾರು 80 ಜನ ಭಕ್ತಾದಿಗಳು ಪಾದಯಾತ್ರಿ ಸೇವಾ ಸಮಿತಿಯ ರಾಜನಾಯ್ಕ, ಶಿವಾಜಿ, ಎ.ಬಿ.ಚಂದ್ರಪ್ಪ, ವೇಣುಗೋಪಾಲ್, ಕೃಷ್ಣ, ಅರುಣ್ ಹಿರೇಮಠ ಮುಂತಾದವರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಇಂದು ಬಿಐಎಸ್ ನಿಂದ ಕಾರ್ಯಾಗಾರ

ಸುದ್ದಿದಿನ,ದಾವಣಗೆರೆ : ಮಾ.02 ರಂದು ಬೆಳಿಗ್ಗೆ 10.30 ಕ್ಕೆ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್, ಪಿ.ಬಿ.ರೋಡ್ ದಾವಣಗೆರೆ ಇಲ್ಲಿ ಭಾರತೀಯ ಗುಣಮಟ್ಟ ಮಾನದಂಡ ಸಂಸ್ಥೆ(ಬಿಐಎಸ್), ಕೇಂದ್ರ ಸರ್ಕಾರದ ಕಚೇರಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ, ದಾವಣಗೆರೆ ಇವರ ಸಂಯೋಜನೆಯೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ | ಚನ್ನಗಿರಿ | ಕುಡಿಯುವ ನೀರಿಗೆ ರೂ.5.47 ಕೋಟಿ ಹಣ ಮಂಜೂರು: ಸಚಿವ ಭೈರತಿ ಬಸವರಾಜ್
ಕಾರ್ಯಕ್ರಮದ ಉದ್ಘಾಟನೆಯನ್ನು ಲೋಕಸಭಾ ಸದಸ್ಯರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರುಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಜಯಪ್ರಕಾಶ ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ರಾಜಕೀಯ6 days ago
ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
-
ರಾಜಕೀಯ6 days ago
ದೇವರಮನೆ ಶಿವಕುಮಾರ್ ಬಿಜೆಪಿ ಸೇರ್ಪಡೆ | ನಾವು ಯಾರಿಗೂ ಆಮಿಷ ಒಡ್ಡಿಲ್ಲ : ಸಂಸದ ಜಿಎಂ ಸಿದ್ದೇಶ್ವರ್
-
ರಾಜಕೀಯ6 days ago
ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ : ಮೇಯರ್ ಆಗಿ ಎಸ್.ಟಿ.ವೀರೇಶ್, ಉಪಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್
-
ಲೈಫ್ ಸ್ಟೈಲ್7 days ago
ನರದೌರ್ಬಲ್ಯ ನಿವಾರಣೆಗೆ ಬೆಳ್ಳುಳ್ಳಿ ಬಳಸಿ
-
ರಾಜಕೀಯ7 days ago
ಗುಜರಾತ್ | ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
-
ಬಹಿರಂಗ5 days ago
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು..!
-
ಸಿನಿ ಸುದ್ದಿ7 days ago
ಪೊಗರು ವಿವಾದ ಅಂತ್ಯ | ಸೀನ್ ಕಟ್ ; ಶುಭಹಾರೈಸಿದ ಬ್ರಾಹ್ಮಣ ಸಮುದಾಯ
-
ಕ್ರೀಡೆ5 days ago
ಅತಿ ಕಡಿಮೆ ಪಂದ್ಯ ; 400 ವಿಕೆಟ್ : ದಾಖಲೆ ಬರೆದ ಸ್ಪಿನ್ನರ್ ಆರ್ ಅಶ್ವಿನ್