Connect with us

ರಾಜಕೀಯ

ಮಹಾರಾಷ್ಟ್ರದ ಹೀನಾಯ ಸೋಲಿನಲ್ಲಿ ಬಟ್ಟಬಯಲಾದ ಬಿಜೆಪಿ-ಆರೆಸ್ಸೆಸ್

Published

on

  • ಈ ಸ್ವಯಂ-ದೋಷಾರೋಪಣೆಯ ಪ್ರಾಜೆಕ್ಟಿನಲ್ಲಿ ಮೂವರು ಉನ್ನತ ಸಂವಿಧಾನಿಕ ವ್ಯಕ್ತಿಗಳು ಕಂಡುಬಂದರು- ರಾಜ್ಯಪಾಲರು, ಭಾರತದ ಪ್ರಧಾನ ಮಂತ್ರಿಗಳು ಮತ್ತು ಭಾರತದ ರಾಷ್ಟ್ರಪತಿಗಳು. ಇಂತಹ ಪ್ರಜಾಪ್ರಭುತ್ವ-ವಿರೋಧಿ ಯೋಜನೆಯನ್ನು ದಕ್ಕಿಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಬಿಜೆಪಿಗೆ ಬಂದದ್ದಾದರೂ ಹೇಗೆ? ಕಳೆದ ವರ್ಷ ಕರ್ನಾಟಕದಲ್ಲಿ ಆದ ಮುಖಭಂಗದಿಂದಲೂ ಬಿಜೆಪಿಯಾಗಲೀ, ಅದರ ಅಧ್ಯಕ್ಷ ಅಮಿತ್ ಷಾರಾಗಲೀ ಬುದ್ಧಿ ಕಲಿಯಲಿಲ್ಲ. ಇನ್ನಷ್ಟು ದೊಡ್ಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಗೃಹಮಂತ್ರಿಯಾದದ್ದು ಈ ಚಾಣಕ್ಯ ಇನ್ನಷ್ಟು ಭಂಡತನದಿಂದ ಹೊಲಸು ಉಪಾಯಗಳನ್ನು ಮಾಡಲು ಧೈರ್ಯ ತುಂಬಿತಷ್ಟೇ. ಈ ಕೊಬ್ಬಿನ ಫಲಿತಾಂಶ ದೇಶದ ಮುಂದಿದೆ. ಮಹಾರಾಷ್ಟ್ರದ ಕುತಂತ್ರಗಳು ಬಿಜೆಪಿಯ ಮತ್ತು ಅದಕ್ಕೆ ನೇತೃತ್ವ ನೀಡಿರುವ ಆರೆಸ್ಸೆಸ್ ಮುಖಂಡರುಗಳ ಪ್ರಜಾಪ್ರಭುತ್ವ-ವಿರೋಧಿ ಮತ್ತು ಸರ್ವಾಧಿಕಾರಶಾಹೀ ಚಾರಿತ್ರ್ಯದ ಬಗ್ಗೆ ಭಾರತದ ಜನತೆಯ ಕಣ್ಣು ತೆರೆಸಬೇಕು.

ಪ್ರಕಾಶ ಕಾರಟ್

ಡ್ನವೀಸ್ ಸರಕಾರದ ಮೂರು ದಿನದ ಕೌತುಕ ಈಗ ಮಾಯವಾಗಿರುವುದರಿಂದ ಈ ಇಡೀ ಹೊಲಸು ಪ್ರಕರಣದಿಂದ ಏನೇನೆಲ್ಲ ಪಾಟಗಳನ್ನು ಕಲಿಯಬಹುದು ಎಂದು ಹಿಂದಿರುಗಿ ನೋಡಬಹುದಾಗಿದೆ.

ನವಂಬರ್ 23ರ ರಾತ್ರಿ ಮತ್ತು 24ರ ಮುಂಜಾನೆ ನಡೆದದ್ದು ಸಂವಿಧಾನ ಮತ್ತು ಪ್ರಜಾಪ್ರಬುತ್ವ ನೀತಿಗಳ ಮೇಲೆ ಒಂದು ನಾಚಿಕೆಗೆಟ್ಟ ಪ್ರಹಾರ. ಮನಸ್ಸನ್ನು ಘಾಸಿಗೊಳಿಸುವ ಸಂಗತಿಯೆಂದರೆ ಈ ಸ್ವಯಂ-ದೋಷಾರೋಪಣೆಯ ಪ್ರಾಜೆಕ್ಟಿನಲ್ಲಿ ಮೂವರು ಉನ್ನತ ಸಂವಿಧಾನಿಕ ವ್ಯಕ್ತಿಗಳು ಕಂಡುಬಂದರು- ರಾಜ್ಯಪಾಲರು, ಭಾರತದ ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳು. ಇವರೆಲ್ಲರೂ ಸಂವಿಧಾನಿಕ ವಿಧಿವಿಧಾನಗಳನ್ನು ಅನುಸರಿಸುವ ಬದಲು ಬಿಜೆಪಿಯ ಆಣತಿಯಂತೆ ಮತ್ತು ಆಳುವ ಪಕ್ಷದ ಹಿತ ಸಾಧಿಸಲು ಕೆಲಸ ಮಾಡಿದರು.

ದೇವೇಂದ್ರ ಫಡ್ನವೀಸರಿಗೆ, ಎನ್‌ಸಿಪಿ ಶಾಸಕಾಂಗ ಪಕ್ಷದ ಮುಖಂಡರಾದ ಅಜಿತ್ ಪವಾರ್ ಕೊಟ್ಟ ಒಂದು ಬೋಗಸ್ ಪತ್ರದ ಆಧಾರದಲ್ಲಿ ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಸ್ವೀಕಾರ ಮಾಡಿಸಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ತನ್ನ ಪಕ್ಷದ ಆಶಯವನ್ನು ಈಡೇರಿಸಲು ತನ್ನ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡರು. ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆಯಲು ಮಧ್ಯರಾತ್ರಿಯಲ್ಲಿ ಅವರು ಶಿಫಾರಸು ಮಾಡಿದ ರೀತಿ ಇದನ್ನು ಮತ್ತಷ್ಟು ಗಹನಗೊಳಿಸಿತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂಜಾನೆ 5.47ಕ್ಕೆ ಸಂಪುಟ ಮಂಜೂರಾತಿ ಇಲ್ಲದೆ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆಯಲು ಒಪ್ಪಿಗೆಯನ್ನು ಪಡೆದರು. ಇದಕ್ಕಾಗಿ ಅವರು ಭಾರತ ಸರಕಾರ (ವ್ಯವಹಾರ ನಡಾವಳಿ) ನಿಯಮಗಳಲ್ಲಿ, ತುರ್ತು ಸಂದರ್ಭಗಳಲ್ಲಿ ಬಳಸಲೆಂದು ಇರುವ ಅವಕಾಶವನ್ನು ಬಳಸಿಕೊಂಡರು. ಪ್ರಧಾನ ಮಂತ್ರಿಗಳು ಈ ಮಧ್ಯರಾತ್ರಿಯ ರಾಜಕೀಯ ಕ್ಷಿಪ್ರಕ್ರಾಂತಿಯನ್ನು ನಡೆಸಲು ಈ ನಿಯಮವನ್ನು ಬಳಸಲೂ ಹೇಸಲಿಲ್ಲ.

ಅಂತಿಮವಾಗಿ, ಭಾರತದ ರಾಷ್ಟ್ರಪತಿಗಳು ವಿಧಿ ವಿಧಾನಗಳನ್ನು ಸರಿಯಾಗಿ ಅನುಸರಿಸಲಾಗಿದೆಯೇ ಎಂದು ಸ್ವತಃ ಖಾತ್ರಿಪಡಿಸಿಕೊಳ್ಳದೆಯೇ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆಯುವ ಆದೇಶಕ್ಕೆ ಸಹಿ ಹಾಕಿದರು.

ಇವನ್ನೆಲ್ಲ ಮಾಡಿದ್ದು ಸ್ಪಷ್ಟ ಬಹುಮತ ಪಡೆದಿರುವ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರುವ ಅವಕಾಶವನ್ನು ಮೊದಲೇ ಮೊಟಕುಗೊಳಿಸುವುದಕ್ಕಾಗಿ.

ಆದರೆ ಇದೆಲ್ಲ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಎಷ್ಟರ ಮಟ್ಟಿನ ಪ್ರಹಾರ ಮಾಡಲಾಗಿದೆ ಎಂಬುದನ್ನು ವಿವರಿಸುವುದಿಲ್ಲ. ಈ ಪ್ರಜಾಪ್ರಭುತ್ವ-ವಿರೋಧಿ ಯೋಜನೆಯನ್ನು ದಕ್ಕಿಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಬಿಜೆಪಿಗೆ ಬಂದದ್ದಾದರೂ ಹೇಗೆ? ಅದು ದುರಹಂಕಾರದ ಆತ್ಮವಿಶ್ವಾಸ. ಏಕೆಂದರೆ ತನ್ನ ಹಣಬಲವನ್ನು ಮುಂದಿಟ್ಟುಕೊಂಡು ಮತ್ತು ಭ್ರಷ್ಟಾಚಾರದ ಹೂಟವನ್ನು ಬಳಸಿ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷಾಂತರ ಮಾಡಿಸಬಹುದೆಂಬ ಪೂರ್ಣ ವಿಶ್ವಾಸ ಅದಕ್ಕೆ ಇತ್ತು.

ಈ ಮಹಾರಾಷ್ಟ್ರ ಪ್ರಕರಣ ಬಿಜೆಪಿ ರಾಜಕೀಯ ವಿಧೇಯತೆಗಳನ್ನು ಚಿತಾಯಿಸಲು ಭಾರೀ ಕುಳಗಳಿಂದ ಪಡೆದ ಹಣವನ್ನು ಮತ್ತು ಪ್ರಭುತ್ವದ ಸಂಸ್ಥೆಗಳ ಮೂಲಕ ಭೀತಿ ಹುಟ್ಟಿಸುವುದನ್ನು ಎಷ್ಟರ ಮಟ್ಟಿಗೆ ಬಳಸುತ್ತದೆ ಎಂಬುದನ್ನು ಪ್ರಕಟಪಡಿಸಿದೆ. ಅಜಿತ್ ಪವಾರ್ ಪಕ್ಷಾಂತರ ಇದಕ್ಕೆ ಕಣ್ಣುಕುಕ್ಕುವಂತಹ ರುಜುವಾತು. ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾ ಸ್ವೀಕಾರದ 48ಗಂಟೆಗಳ ನಂತರ ಅವರ ವಿರುದ್ಧ ಇದ್ದ ನೀರಾವರಿ ಹಗರಣದ ಒಂಭತ್ತು ಪ್ರಕರಣಗಳಲ್ಲಿ ಆರೋಪಗಳನ್ನು ಭ್ರಷ್ಟಾಚಾರ ನಿಗ್ರಹ ಕಚೇರಿ (ಎಸಿಬಿ) ಕೈಬಿಟ್ಟಿತು. ಈ ಹಿಂದೆ ಒಬ್ಬ ಪ್ರತಿಪಕ್ಷದ ಶಾಸಕನಾಗಿ ದೇವೇಂದ್ರ ಫಡ್ನವೀಸ್ ಈ 70,000 ರೂ.ಗಳ ಹಗರಣದಲ್ಲಿ ಪವಾರ್ ಕೇಂದ್ರವ್ಯಕ್ತಿ ಎಂದು ಆಪಾದಿಸಿದ್ದರು. ಬಿಜೆಪಿ ಪಕ್ಷಾಂತರ ಮಾಡುವ ಪ್ರತಿಯೊಬ್ಬ ಎನ್‌ಸಿಪಿ ಶಾಸಕರಿಗೆ ಅಪಾರ ಮೊತ್ತ ತೆರಲು ಸಿದ್ಧವಾಗಿತ್ತು ಎಂದು ವರದಿಯಾಗಿದೆ.

ಬಿಜೆಪಿ ಕಳೆದ ವರ್ಷ ಕರ್ನಾಟಕದಲ್ಲಿ ಇಂತಹುದೇ ಒಂದು ಹಿನ್ನಡೆಯನ್ನು ಅನುಭವಿಸಿತ್ತು. ರಾಜ್ಯಪಾಲರು ಯೆಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಬೋಧಿಸುವಂತೆ ಅದು ಮಾಡಿತ್ತು. ಆದರೆ ಅವರು 24ಗಂಟೆಗಳೊಳಗೆ ಸದನದಲ್ಲಿ ಬಲಪರೀಕ್ಷೆ ನಡೆಸಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿದಾಗ ರಾಜೀನಾಮೆ ನೀಡಬೇಕಾಯಿತು.

ಆದರೆ ಬಿಜೆಪಿಯಾಗಲೀ, ಅದರ ಅಧ್ಯಕ್ಷ ಅಮಿತ್ ಷಾರಾಗಲೀ ಇದರಿಂದ ಬುದ್ಧಿ ಕಲಿಯಲಿಲ್ಲ ಎಂಬುದು ಸ್ವಯಂವೇದ್ಯ. ಇನ್ನಷ್ಟು ದೊಡ್ಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಗೃಹಮಂತ್ರಿಯಾದದ್ದು ಈ ಚಾಣಕ್ಯ ಇನ್ನಷ್ಟು ಭಂಡತನದಿಂದ ಹೊಲಸು ಉಪಾಯಗಳನ್ನು ಮಾಡಲು ಧೈರ್ಯ ತುಂಬಿತಷ್ಟೇ. ಆದರೆ ಈ ಕೊಬ್ಬಿನ ಫಲಿತಾಂಶ-ಒಂದು ಅವಮಾನಕಾರೀ ಪರಾಭವ.

ಮರುದಿನವೇ ಸದನದಲ್ಲಿ ಬಲಪರೀಕ್ಷೆ ನಡೆಯಬೇಕು ಎಂಬ ಸುಪ್ರಿಂ ಕೋರ್ಟಿನ ಆದೇಶ ಅಸಂವಿಧಾನಿಕ ಮತ್ತು ಅಪ್ರಾತಿನಿಧಿಕ ಸರಕಾರದ ಗುಳ್ಳೆಯನ್ನು ಚುಚ್ಚಿತು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಹಿತದೃಷ್ಟಿಯಿಂದ ನ್ಯಾಯಾಲಯ ಈ ಇಡೀ ಪ್ರಕರಣವನ್ನು ಪರೀಕ್ಷಿಸಬೇಕು ಮತ್ತು ಇದಕ್ಕೆ ಹೊಣೆಗಾರರಾದ ಅಪರಾಧಿಗಳನ್ನು ಬೊಟ್ಟುಮಾಡಿ ತೋರಬೇಕು.

ಭಾರತದ ಜನತೆಗೆ ಮಹಾರಾಷ್ಟ್ರದ ಕುತಂತ್ರಗಳು ಬಿಜೆಪಿಯ ಮತ್ತು ಅದಕ್ಕೆ ನೇತೃತ್ವ ನೀಡಿರುವ ಆರೆಸ್ಸೆಸ್ ಮುಖಂಡರುಗಳ ಪ್ರಜಾಪ್ರಭುತ್ವ-ವಿರೋಧಿ ಮತ್ತು ಸರ್ವಾಧಿಕಾರಶಾಹೀ ಚಾರಿತ್ರ್ಯದ ನಿಜಸ್ವರೂಪ ಕಣ್ಣು ತೆರೆಸಬೇಕು.

ಉದ್ಧವ್ ಥಾಕ್ರೆ ನೇತೃತ್ವದ ಹೊಸ ಸರಕಾರ ಈ ಮೂರು ಪಕ್ಷಗಳ ಮೈತ್ರಿಕೂಟ ನಿರ್ಧರಿಸಿರುವ ಕನಿಷ್ಟ ಸಾಮಾನ್ಯ ಕಾರ್ಯಕ್ರಮದ ಪ್ರಕಾರ ಕೆಲಸ ಮಾಡಬೆಕು. ಮಹಾರಾಷ್ಟ್ರದ ಜನತೆ ಈ ಸರಕಾರದಿಂದ ಅದನ್ನು ನಿರೀಕ್ಷಿಸುತ್ತಾರೆ. ಈ ಸರಕಾರದ ಅಂಗಪಕ್ಷಗಳು ಸೈದ್ಧಾಂತಿಕವಾಗಿ ವಿರುದ್ಧವಾದ ಕಣ್ಣೋಟಗಳನ್ನು ಹೊಂದಿರುವುದರಿಂದ ಇದು ಮತ್ತಷ್ಟು ಮಹತ್ವದ್ದಾಗುತ್ತದೆ.

(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ

Published

on

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್‌ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್‌ರಾಮ್ ಅನುಯಾಯಿಗಳು ಭಾಗವಹಿಸಿದ್ದರು.

ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ಚುನಾವಣಾ ಆಯೋಗ ಸಮಾವೇಶ

Published

on

ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.

ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending