ದಿನದ ಸುದ್ದಿ
ಪಾಕ್ ಗುಂಡಿನ ದಾಳಿಗೆ ನಾಲ್ವರು ಯೋಧರ ಬಲಿ


ದಿನದ ಸುದ್ದಿ
ದಾವಣಗೆರೆ | ನಗರದ ಬಾರ್ & ರೆಸ್ಟೋರೆಂಟ್ಗಳ ಮೇಲೆ ತಂಬಾಕು ನಿಯಂತ್ರಣ ಅಧಿಕಾರಿಗಳ ದಾಳಿ

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದ ಅಬಕಾರಿ ಇಲಾಖೆಯ ವಲಯ-01 ರ ಸಹಯೋಗದೊಂದಿಗೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸರ್ವೇಕ್ಷಣಾಧಿಕಾರಿ ಹಾಗೂ ಕಾರ್ಯಕ್ರಮಾಧಿಕಾರಿಂ ಡಾ.ರಾಘವನ್.ಜಿ.ಡಿ ಅವರನ್ನು ಒಳಗೊಂಡ ತಂಡ ಫೆ.25 ರಂದು ಬಾರ್ & ರೆಸ್ಟೋರೆಂಟ್ಗಳ ಮೇಲೆ ದಾಳಿ ನಡೆಸಿ, ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದೆ.
30 ಕ್ಕಿಂತ ಹೆಚ್ಚು ಆಸನಗಳಿರುವ ಬಾರ್ & ರೆಸ್ಟೋರೆಂಟ್ಗಳಲ್ಲಿ ‘ನಿರ್ಧಿಷ್ಠ ಧೂಮಪಾನ ವಲಯವನ್ನು ಸ್ಥಾಪಿಸುವುದು ಹಾಗೂ ಬಾರ್ಗಳ ವ್ಯಾಪ್ತಿಯಲ್ಲಿ ಟೇಬಲ್ಗಳ ಮೇಲೆ ಬೆಂಕಿಪೊಟ್ಟಣ, ಲೈಟರ್, ಆ್ಯಶ್ಸ್ಟ್ರೇ ಮತ್ತು ಸಪ್ಲೇಯರ್ಸ ವತಿಯಿಂದ ಯಾವುದೇ ಸಿಗರೇಟು ಒದಗಿಸದಂತೆ ಮಾಲೀಕರು ಜವಾಬ್ದಾರಿಯಿಂದ ಎಚ್ಚರಿಕೆ ವಹಿಸಬೇಕು ಅಲ್ಲದೆ ಎಲ್ಲಾ ರೆಸ್ಟೋರೆಂಟ್ಗಳಲ್ಲಿರುವ ಕೆಲಸಗಾರರು ಕಡ್ಡಾಯವಾಗಿ ಪ್ರತಿ 15 ದಿನಕ್ಕೊಮ್ಮೆ ಕೋವಿಡ್-19 ಪರೀಕ್ಷೆಯನ್ನು ಮಾಡಿಸಬೇಕೆಂದು ಸೂಚಿಸಿದರು.
ಇದನ್ನೂ ಓದಿ |“ರೈತರ ಹಿತ ಕಾಯಲು ಸರ್ಕಾರ ಮಧ್ಯ ಪ್ರವೇಶಿಸುವ ಅತ್ಯಗತ್ಯ” ಕಾರ್ಯಗಾರ
ಕೋಟ್ಪಾ ಸೆಕ್ಷನ್-4 ರ ಅಡಿಯಲ್ಲಿ ನಿಯಮ ಉಲ್ಲಂಘನೆಯ 23 ಪ್ರಕರಣಗಳಿಗೆ ರೂ. 2300, ಸೆಕ್ಷನ್-6ಎ ಅಡಿಯಲ್ಲಿ 2 ಪ್ರಕರಣಕ್ಕೆ ರೂ. 200 ಸೇರಿದಂತೆ ಒಟ್ಟು 25 ಪ್ರಕರಣಗಳಿಗೆ 2500 ರೂ ದಂಡ ವಸೂಲಾಗಿದೆ ಎಂದರು.
ದಾಳಿಯಲ್ಲಿ ಅಬಕಾರಿ ನಿರೀಕ್ಷಕ ವಿನೋದ್.ಬಿ ಕಾಳಪ್ಪಗೋಳ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತ ದೇವರಾಜ್.ಕೆ.ಪಿ, ಅಬಕಾರಿ ಇಲಾಖೆಯ ಸಬ್ಇನ್ಸ್ಪೆಕ್ಟರ್ ಶಂಕರಪ್ಪ, ಕಾನ್ಸ್ಟೇಬಲ್ ಶಿವರಾಜ್ ಪಾಟೀಲ್ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
“ರೈತರ ಹಿತ ಕಾಯಲು ಸರ್ಕಾರ ಮಧ್ಯ ಪ್ರವೇಶಿಸುವ ಅತ್ಯಗತ್ಯ” ಕಾರ್ಯಗಾರ

ಸುದ್ದಿದಿನ,ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಸರ್ಕಾರದ ಸಮರ್ಥ ಮಧ್ಯ ಪ್ರವೇಶವೂ ಅಗತ್ಯ. ಇದನ್ನು ರಾಜ್ಯದ ವಿವಿಧ ಭಾಗಗಳ ರೈತರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಇಂದು ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಒಂದು ದಿನದ ತಾಂತ್ರಿಕ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಪೃತ್ವಿ ಪ್ರತಿಷ್ಠಾನ, ಮಳೆ ಆಶ್ರಿತ ಕೃಷಿ ಪುನರುಜ್ಜೀವನ ಜಾಲ ಹಾಗೂ ಪರ್ಯಾಯ ಕಾನೂನು ವೇದಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ “ರೈತರ ಹಿತ ರಕ್ಷಣೆಗೆ ಸರ್ಕಾರದ ಮಧ್ಯ ಪ್ರವೇಶ ಅತ್ಯಗತ್ಯ” ಕಾರ್ಯಗಾರದಲ್ಲಿ ಕೃಷಿ ಆರ್ಥಿಕ ತಜ್ಞರಾದ ಡಾ. ಪ್ರಕಾಶ್ ಕಮ್ಮರಡಿ, ಕಾನೂನು ತಜ್ಞ ವಿನಯ್ ಶ್ರೀನಿವಾಸ್, ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ಡಾ. ಗ್ರೇಸಿ ಸಿ.ಪಿ ಹಾಗೂ ರೈತ ಮುಖಂಡರಾದ ಕುರಬೂರು ಶಾಂತಕುಮಾರ್ ಮುಂತಾದವರು ಕಳೆದ ದಶಕಗಳಲ್ಲಿ ಕೃಷಿ ಕ್ಷೇತ್ರದಲ್ಲಾದ ಏರಿಳಿತಗಳು ಹಾಗೂ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಿದರು.
ಇದನ್ನೂ ಓದಿ | ಫೆ.28ಕ್ಕೆ ಎಫ್ ಡಿ ಎ ಪರೀಕ್ಷೆ | ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿ
ಮೊದಲಿಗೆ ಕಾರ್ಯಗಾರದ ಪ್ರಸ್ತಾವನೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಟಿ. ಎನ್ ಪ್ರಕಾಶ್ ಕಮ್ಮರಡಿ. ಬೆಳೆಗೆ ಬೆಂಬಲ ಬೆಲೆಯನ್ನು ಕಾನೂನಿನ ಮೂಲಕ ಖಾತ್ರಿಗೊಳಿಸಬೇಕು. ಅವತ್ತಿನ ಕಾಲಕ್ಕೆ ಬೆಳೆ ಬೆಳಡಯುವುದು ಮಾತ್ರ ರೈತನ ಕೆಲಸವಾಗಿತ್ತು. ಮಾರುಕಟ್ಟೆಯ ಜವಾಬ್ದಾರಿಯನ್ನು ಸರ್ಕಾರ ನೋಡಿಕೊಳ್ಳುತ್ತಿತ್ತು. ಆಗ ಕಾಫಿ ಬೋರ್ಡ್, ಟೀ ಬೋರ್ಡ್ ಗಳು ಸಮೃದ್ಧವಾಗಿ, ಸಮರ್ಥವಾಗಿದ್ದವು. ಆದರೆ ಈಗ ಕೃಷಿಯಲ್ಲಿ ಸರ್ಕಾರದ ಮಧ್ಯ ಪ್ರವೇಶವಿಲ್ಲದೆ ಈ ಎಲ್ಲ ನಿಗಮಗಳು ದುರ್ಬಲವಾಗಿವೆ. ರೈತರ ವಿಚಾರದಲ್ಲಿ ತನ್ನ ಜವಾಬ್ದಾರಿಗಳಿಂದ ಜಾರಿಕೊಳ್ಳುವ ಸಲುವಾಗಿ ಸರ್ಕಾರ ಈ ಕಾಯ್ದೆಗಳನ್ನು ತರಲು ಹೊರಟಿದೆ ಎಂದರು.
ಇನ್ನು ತೋಟಗಾರಿಕಾ ಬೆಳೆಗಳು ಸೇರಿದಂತೆ ಇತರ ಪ್ರಮುಖ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂಬುದರ ಬಗ್ಗೆ ಮಾತನಾಡಿದ ತಜ್ಞರು. ಕನಿಷ್ಟ ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ ನೀಡಿ ಲಾಭದಾಯಕ ಧಾರಣೆ ಖಾತರಿಗೊಳಿಸುವುದು ಕೂಡ ಅಗತ್ಯ ಎಂದು ಅಭಿಪ್ರಾಯ ಪಟ್ಟರು.
ಬೆಂಬಲ ಬೆಲೆಯನ್ನು ಕಾನೂನಿನ ವ್ಯಾಪ್ತಿಗೆ ತರುವಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯತೆ ಏರ್ಪಡಬೇಕು ಎಂಬ ಬಗ್ಗೆಯೂ ಚರ್ಚಿಸಲಾಯಿತು.
Courtesy : Mass Media Foundation, New Delhi
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆ.28ಕ್ಕೆ ಎಫ್ ಡಿ ಎ ಪರೀಕ್ಷೆ | ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ ಜಾರಿ

ಸುದ್ದಿದಿನ,ಶಿವಮೊಗ್ಗ : ಕರ್ನಾಟಕ ಲೋಕಸೇವಾ ಆಯೋಗವು 2019ನೇ ಸಲಿನ ಸಹಾಯಕರು, ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಫೆಬ್ರವರಿ 28ರಂದು ಜಿಲ್ಲೆ 27ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿದೆ.
ಸದರಿ ಪರೀಕ್ಷೆಗಳನ್ನು ಪಾರದರ್ಶಕವಾಗಿ, ಯಾವುದೇ ಅವ್ಯವಹಾರಗಳಿಗೆ, ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ, ಮುಂಜಾಗ್ರತಾ ಕ್ರಮಗಳನ್ನು ವಹಿಸಲು ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸುತ್ತ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಫೆಬ್ರವರಿ 28ರಂದು ಬೆಳಿಗ್ಗೆ 7.30ರಿಂದ ಸಂಜೆ 5.30ರವರೆಗೆ ಭಾರತೀಯ ದಂಡಸಂಹಿತೆ 144ರನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲಿನ 200ಮೀ. ಪ್ರದೇಶದ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ನಿಷೇಧಿತ ಪ್ರದೇಶದಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲ ಪ್ರದೇಶದಲ್ಲಿ ಐದು ಮತ್ತು ಐದಕ್ಕಿಂತ ಹೆಚ್ಚಿನ ಜನ ಸೇರುವುದನ್ನು ನಿಷೇಧಿಸಲಾಗಿದೆ.
ಕೇಂದ್ರಗಳ ಸುತ್ತಮುತ್ತಲ ಟೈಪಿಂಗ್, ಝೆರಾಕ್ಸ್ ಹಾಗೂ ಫ್ಯಾಕ್ಸ್ ಅಂಗಡಿಗಳು ತೆರೆದಿರುವುದನ್ನು ಪ್ರತಿಬಂಧಿಸಲಾಗಿದೆ. ಅಲ್ಲದೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್7 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ಕ್ರೀಡೆ7 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್6 days ago
ವೀರ್ಯಾಣು ಬಲವೃದ್ಧಿಗೆ ಇಲ್ಲಿವೆ ಉಪಾಯಗಳು..!
-
ಲೈಫ್ ಸ್ಟೈಲ್7 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ
-
ಭಾವ ಭೈರಾಗಿ7 days ago
ಕವಿತೆ | ಅವಳು
-
ಅಂತರಂಗ6 days ago
ಅನಾಥರನ್ನಾಗಿಸದ ಅಂತಿಮ ಸಂಗಾತಿ
-
ದಿನದ ಸುದ್ದಿ6 days ago
ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ
-
ರಾಜಕೀಯ6 days ago
ಜನರನ್ನು ಕಷ್ಟಕ್ಕೆ ದೂಡಿ ಮೋದಿ ಸರ್ಕಾರ ಲಾಭಗಳಿಸುತ್ತಿದೆ : ಸೋನಿಯಾ ಗಾಂಧಿ ಕಿಡಿ