Connect with us

ರಾಜಕೀಯ

ಹಾರು ತಿಹುದು ಏರು ತಿಹುದು ನೋಡು ಬಂಡಾಯದ ಬಾವುಟ

Published

on

ಸುದ್ದಿದಿನವಿಶೇಷ: ರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆ ಪ್ರಮುಖವಾದ ಜಿಲ್ಲೆ. ಇಲ್ಲಿನ ಜಿದ್ದಾ ಜಿದ್ದಿನ ಚುನಾವಣೆ ಈ ಬಾರಿ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿಯವರೆಗು ಜಿಲ್ಲೆಯ 8ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 116 ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಮಲ ಪಾಳೆಯಕ್ಕೆ ತೆಂಗಿನಕಾಯಿ ಸೆಡ್ಡು ಹೊಡೆದು ನಿಂತಿತ್ತು. ಆದರೆ ಈ ಬಾರಿಯು ಕೂಡ ಬಿಜೆಪಿ ಟಿಕೇಟ್ ವಂಚಿತ ಅಭ್ಯರ್ಥಿಗಳು ಪತ್ಯೇಕವಾಗಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.ಕಳೆದ ಬಾರಿ ಕೆಜೆಪಿಯ ಹೊಡೆತ ದಿಂದ ತನ್ನ ಅಸ್ತಿತ್ವವನ್ನು ಕಳೆದಕೊಂಡ ಬಿಜೆಪಿ ಈ ಬಾರಿ ಜಿಲ್ಲೆಯಲ್ಲಿ ಕಮಲ ಅರಳಿಸಲು ಸಜ್ಜಾಗಿತ್ತು, ಆದರೆ, ಒಂದೆ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ಜೋರಾಗಿದ್ದ ಹಿನ್ನಲೆಯಲ್ಲಿ, ಟಿಕೇಟ್ ಕೈ ತಪ್ಪಿದವರು, ಬಂಡಾಯದ ಬಾವುಟವನ್ನು ಹಾರಿಸಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರ ಪ್ರಮುಖ ಕ್ಷೇತ್ರವಾಗಿದೆ. ಆದರೆ ಮಾಯಕೊಂಡ ಕ್ಷೇತ್ರದಲ್ಲಿ ಈ ಬಾರಿ ಮಾಯದಾಟ ಶುರುವಾಗಿದೆ.ಕಮಲದ ಮಾಜಿ ಶಾಸಕ ಬಸವರಾಜ್ ನಾಯ್ಕ ಕೂಡ ಶತಾಯಗತಾಯ ಬಿಜೆಪಿಯಿಂದ ನಿಲ್ಲಲು ಯತ್ನಿಸಿದರು ಆದರೆ ಕೊನೆ ಗಳಿಗೆಯಲ್ಲಿ ಪ್ರೊ.ಲಿಂಗಪ್ಪನವರ ಹೆಸರು ಅಂತಿಮವಾದ ಬಳಿಕ, ಜೆಡಿಯು ಸೇರಿ ಕಮಲಕ್ಕೆ ಬಾಣ ಬಿಟ್ಟಿದ್ದಾರೆ. ಈ ನಡೆಯು ಕೂಡ ಒಂದು ಕಡೆ ಕಮಲಕ್ಕೆ ಮುಳ್ಳಾಗುವುದರಲ್ಲಿ ಸಂಶಯವಿಲ್ಲ .‌ಇನ್ನು ಇದೇ ಕ್ಷೇತ್ರದ ಮತ್ತೊಬ್ಬ ಪ್ರಮುಖರಲ್ಲಿ ಎಚ್.ಆನಂದಪ್ಪ ಕೂಡ ಟಿಕೇಟ್ ಪಡೆಯಲು ಪ್ರಯತ್ನ ಮಾಡಿದರು. ಆದರೆ ಅಧಿಕೃತವಾಗಿ ಲಿಂಗಪ್ಪನವರಿಗೆ ಘೋಷಣೆ ಯಾದ ಬಳಿಕ ಆನಂದಪ್ಪ ನವರು ಬಂಡಾಯದ ಕಹಳೆ ಮೊಳಗಿಸಿದ್ದಾರೆ.‌ಇನ್ನು ಒಂದೇ‌ ಕ್ಷೇತ್ರದಲ್ಲಿ , ಒಂದೇ ಪಕ್ಷದ ವಿರುದ್ಧ ಇಬ್ಬರು ಅಭ್ಯರ್ಥಿಗಳು ಬಂಡಾಯ ಸಿಡಿಸಿದ್ದಾರೆ.‌ಇದರಿಂದಾಗಿ ಈ ಬಾರಿ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇಬ್ಬರ ಜಗಳದಿಂದ ಮೂರನೆ ಅವರಿಗೆ ಲಾಭವಾಗುಬಂತೆ ಇಲ್ಲಿನ‌ ಜೆಡಿಎಸ್ ಅಭ್ಯರ್ಥಿ ಗೆ ವರ ವಾಗುವುದೆ ಕಾದು ನೋಡಬೇಕಿದೆ.

ಇನ್ನು ಜಿಲ್ಲೆಯ ಪ್ರಮುಖ ಕ್ಷೇತ್ರವಾದ ಹರಪನಹಳ್ಳಿ ಯಲ್ಲು ಬಿಜೆಪಿಯ ಬಂಡಾಯದ ಹಾರಟ ಕಡಿಮೆಯಿಲ್ಲ. ಯಡಿಯೂರಪ್ಪ ಮತ್ತು ಶ್ರೀರಾಮುಲು ಆಪ್ತರಾಗಿದ್ದ ಎನ್ .ಕೊಟ್ರೇಶ್ ಬಿಜೆಪಿಯ ಅಭ್ಯರ್ಥಿ ಯಾಗುವುದು ಕಚಿತವೆಂದಿತ್ತು ಆದರೆ ಕೊನೆ ಕ್ಷಣದಲ್ಲಿ ಕರುಣಾಕರ ರೆಡ್ಡಿಗೆ ಟಿಕೇಟ್ ಘೋಷಣೆ ಮಾಡಿದರು. ಇದರಿಂದಾಗಿ ನನಗೆ ಯಡಿಯೂರಪ್ಪ, ರಾಮುಲು ಮೋಸ ಮಾಡಿದರು ಎಂದು ಕಮಲ ಬಿಟ್ಟು ತೆನೆ ಹೊತ್ತುಕೊಂಡಿದ್ದಾರೆ. ಕಡೆಯ ಕ್ಷಣದಲ್ಲಿ ಜೆಡಿಎಸ್ ಸೇರಿದ ಕೊಟ್ರೇಶ್ ಬಿಜೆಪಿಯ ವಿರುದ್ದ ನೇರವಾಗಿ ಬಂಡಾಯದ ಬಿಸಿ ಅಲೆಯನ್ನು ನಿರ್ಮಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಕೂಡ ಬಂಡಾಯದ ಹೊಗೆ ಕಾಣಿಸುತ್ತಿದೆ.
ಬಿ ಫಾರಂ ಸಿಗುವುದಕ್ಕೂ ಮುಂಚೆಯೇ ಬಿಜೆಪಿಯ ಅಭ್ಯರ್ಥಿ ಎಂದು ಯಶವಂತರಾವ್ ಜಾಧವ್ ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಕಮಲದ ಅಧಿಕೃತ ಅಭ್ಯರ್ಥಿ ಯಾಗಿಯೇ ಘೊಷಿತಗೊಂಡರು. ಇನ್ನು ಇದೆ ಕ್ಷೇತ್ರದಿಂದಲೆ ಎಚ್. ಎಸ್. ನಾಗರಾಜು ಕೂಡ ಕಮಲ ಪಾಳಯದಲ್ಲಿ ಟಿಕೇಟ್ ಆಕಾಂಕ್ಷಿಯಾಗಿದ್ದರು ಆದರೆ ಯಶವಂತರಾವ್ ಜಾದವ್ ಗೆ ಟಿಕೇಟ್ ನೀಡಿದ ಪರಿಣಾಮ ಪ್ರತ್ಯೇಕವಾಗಿ ಕಮಲಕ್ಕೆ ಬಂಡಾಯದ ಅಭ್ಯರ್ಥಿ ಯಾಗಿ ಕಣಕ್ಕಿಳಿದ್ದಿದ್ದಾರೆ. ಒಟ್ಟಾರೆಯಾಗಿ ಜಾತಿ ಸಮೀಕರಣ ಸೇರಿದಂತೆ ನಾನಾ ಕಾರಣಗಳಿಂದಾಗಿ ಬಿಜೆಪಿಗೆ ಬಂಡಾಯದ ಕಾವು ಜೋರಾಗಿಯೆ ತಟ್ಟಲಿದೆ‌ . ಕಳೆದ ಬಾರಿ ತನ್ನ ಗರ್ಭದಲ್ಲಿಯೇ ಹುಟ್ಟಿದ ಕೆಜೆಪಿಯಿಂದ ಗಟ್ಟಿ ತೆಂಗಿನಕಾಯಿಯಿಂದ ತನ್ನ ನೆಲೆಯನ್ನೆ ಕಳೆದುಕೊಂಡಿತು. ಈ ಬಾರಿಯ ಬಂಡಾಯದ ಅಲೆಯಿಂದ ಬಿಜೆಪಿ ಚೇತರಿಸಿಕೊಳ್ಳುವುದು ಕಷ್ಟದಂತೆ ಕಾಣಿಸುತ್ತಿದೆ…

ಇನ್ನು ಬಂಡಾಯದ ಬಾವುಟ ಕೇವಲ ಕಮಲ ಪಾಳಯದಲ್ಲು ಅಲ್ಲದೆ ಕೈ ಪಾಳಯದಲ್ಲೂ ಸದ್ದು ಮಾಡುತ್ತಿದೆ. ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಂದ ವರದಿಯನ್ನು ಅನುಸರಿಸಿ ಹಾಲಿ ಶಾಸಕ ರಾಜೇಶ್ ಗೆ ಟಿಕೇಟ್ ಮಿಸ್ಸಾಗಿತ್ತು. ಅಧಿಕೃತ ವಾಗಿ ಪುಷ್ಪಾ ಲಕ್ಷಣಸ್ವಾಮಿ ಎಂಬುವರಿಗೆ ಟಿಕೇಟ್ ಘೋಷಣೆ ಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಲಾಭಿ ನಡೆಸಿದ ಎಚ್. ಪಿ. ರಾಜೇಶ್ ರವರು ಕೈ ನಾಯಕರ ಜೊತೆ ಕಸರತ್ತು ನಡೆಸಿ ಕೊನೆಗೂ ಬಿ ಫಾರಂ ತರುವಲ್ಲಿ ಯಶಸ್ವಿಯಾದರು. ಆದರೆ ಕಾಂಗ್ರೆಸ್ ನ ಜಗಳೂರು ಅಭ್ಯರ್ಥಿ ಯೆಂದೇ ಪಕ್ಷದಿಂದ‌ ಘೋಷಣೆ ಯಾದರು ಕೂಡ ಟಿಕೇಟ್ ನೀಡಲಿಲ್ಲವೆಂಬುದಾಗಿ ನೊಂದ ಪುಷ್ಪಾ ಲಕ್ಷ್ಮಣಸ್ವಾಮಿ ಕಾಂಗ್ರೆಸ್ ವಿರುದ್ಧ ಬಂಡಾಯದ ಕೈ ಬೀಸಿದ್ದಾರೆ. ಶತಾಯಗತಾಯ ಕಾಂಗ್ರೆಸ್ ನನ್ನು ಸೋಲಿಸಲೇ ಬೇಕೆಂದು ಪಣ ತೊಟ್ಟಿದ್ದಾರೆ.

ಜಿಲ್ಲೆಯಲ್ಲಿ ಎಂದೂ ಇಲ್ಲದ ಇಂತಹ ಬಂಡಾಯದ ಅಲೆಗಳ ಮಧ್ಯೆ ಯಾರು ತಮ್ಮ ಪಟ ಹಾರಿಸುವರೋ , ಜಿಲ್ಲೆಯಲ್ಲಿ ಬದಲಾವಣೆ ತರುವರೋ ಕಾದು ನೋಡಬೇಕಿದೆ‌‌.

ವಿದ್ಯಾರ್ಥಿಮಿತ್ರಕಿರಣ್    ಪತ್ರಕರ್ತ,ಮಾಗಡಿ

 

 

 

 

 

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ರಾಜಕೀಯ

ರಾಜ್ಯದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ; ನಾಳೆ ಮಧ್ಯಾಹ್ನ ಪ್ರಮಾಣವಚನ ಸ್ವೀಕಾರ

Published

on

ಸುದ್ದಿದಿನ, ಬೆಂಗಳೂರು : ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದು, ಅಧಿಕೃತ ಘೋಷಣೆ ಮಾಡಲಾಗಿದೆ.

ರಾಜಧಾನಿಯ ಖಾಸಗಿ ಹೋಟೆಲ್ ವೊಂದರಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬೊಮ್ಮಾಯಿ ಅವರ ಹೆಸರನ್ನು ನಾಯಕ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ಪ್ರಸ್ತಾಪಿಸಿದ್ದು, ಗೋವಿಂದ ಕಾರಜೋಳ ಅವರು ಅನುಮೋದಿಸಿದ್ದಾರೆ. ನಾಳೆ ಮಧ್ಯಾಹ್ನ 3:30ಕ್ಕೆ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಬಸವರಾಜ್ ಬೊಮ್ಮಾಯಿ 2008 ರಲ್ಲಿ ಬಿಜೆಪಿಗೆ ಸೇರಿದ್ದ ಅವರು, ಅಂದಿನಿಂದ ಪಕ್ಷದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಲೆ ಬಂದಿದ್ದಾರೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಅವರು ಟಾಟಾ ಸಮೂಹದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.

ಬಿಜೆಪಿಯ ಈ ಹಿಂದಿನ ಆಡಳಿತದಲ್ಲಿ ಒಟ್ಟು ಐದು ವರ್ಷ ಜಲಸಂಪನ್ಮೂಲ ಸಚಿವರಾಗಿಯು ಅವರು ಸೇವೆ ಸಲ್ಲಿಸಿದ್ದರು. ಬೊಮ್ಮಾಯಿ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನಿಂದ ಎರಡು ಬಾರಿ ಎಂಎಲ್‌ಸಿ ಮತ್ತು ಮೂರು ಬಾರಿ ಶಾಸಕರಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಎಸ್​​ವೈ ರಾಜೀನಾಮೆ ಘೋಷಣೆ..!

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಬೆಂಗಳೂರು : ಸರ್ಕಾರದ ಎರಡು ವರ್ಷಗಳ ಸಾಧನಾ ಕಾರ್ಯಕ್ರಮದ ಭಾಷಣದಲ್ಲಿ ಭಾವುಕರಾಗಿ ಸಿಎಂ ಬಿಎಸ್​​ವೈ ಕಣ್ಣೀರು ಹಾಕಿದರು.

ಸಂಘದ ಕಾರ್ಯಕರ್ತನಾಗಿ ನಂತರ ಆರೆಸ್ಸೆಸ್ ಪ್ರಚಾರಕನಾಗಿ ಬಳಿಕ ರಾಜಕೀಯ ಜೀವನ ಪ್ರವೇಶಿಸಿ ಸಂದರ್ಭದಿಂದ ಹಿಡಿದು ತಮ್ಮ ಈಗಿನ ರಾಜಕೀಯದವರೆಗೂ ತಮ್ಮ ಹೋರಾಟಗಳನ್ನ ಅವರು ಮೆಲುಕು ಹಾಕಿದರು. ಭಾಷಣದ ಮಧ್ಯೆ ಅವರು ಗದ್ಗದಿತರಾಗಿ ಕಣ್ಣೀರು ಹಾಕಿದರು. ಕೊನೆಯಲ್ಲಿ ಗದ್ಗದಿತರಾಗಿ ಊಟದ ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಕಣ್ಣೀರು ಹಾಕಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೊಟ್ಟೆ ಖರೀದಿಯಲ್ಲಿ ಅವ್ಯವಹಾರ ; ಕಾಣದ ಕೈಗಳು ಕೆಲಸ ಮಾಡುತ್ತಿವೆ : ಸಚಿವೆ ಶಶಿಕಲಾ ಜೊಲ್ಲೆ

Published

on

ಸುದ್ದಿದಿನ, ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದ್ದು, ವಯಕ್ತಿಕವಾಗಿ ನನ್ನ ತೇಜೊವಧೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೊಟ್ಟೆ ಖರೀದಿಗೆ ಇದುವರೆಗೂ ಯಾವದೇ ಟೆಂಡರ್ ಕರೆದಿಲ್ಲ. ಅಲ್ಲದೇ ಟೆಂಡರ್ ನೀಡಲು ನಾನು ವಯಕ್ತಿಕವಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ.

ನಮ್ಮ ಬಿಜೆಪಿ ಪಕ್ಷದ ಶಾಸಕರಾದ ಪರಣ್ಣ ಮುನವಳ್ಳಿಯವರು ತಮ್ಮ ಸಂಬಂಧಿಕರು ಎಂದು ಕರೆದುಕೊಂಡು ಬಂದಾಗ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದೇನೆ. ಇದರಲ್ಲಿ ಯಾವುದೇ ಹಣಕಾಸಿನ ವ್ಯವಹಾರದ ಕುರಿತು ನಾನು ಮಾತನಾಡಿಲ್ಲ.

ಆದರೆ, ಒಬ್ಬ ಮಹಿಳೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ರಾಜಕೀಯದಲ್ಲಿ ನನ್ನದೇ ಆದ ತತ್ವ ಸಿದ್ದಾಂತ ನಂಬಿಕೊಂಡು ಕೆಲಸ ಮಾಡುತ್ತಿರುವ ನನ್ನ ಏಳಿಗೆಯನ್ನು ಸಹಿಸದವರು, ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಅನುಮಾನ
ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ನಿತ್ಯ ಭವಿಷ್ಯ1 hour ago

ಈ ರಾಶಿಯವರಿಗೆ ಸದ್ಯದಲ್ಲಿ ಗುಡ್ ನ್ಯೂಸ್ ದೀರ್ಘಕಾಲದ ಹಣಕಾಸಿನ, ಮದುವೆ, ಸಂತಾನ ಮತ್ತು ಆರೋಗ್ಯದ ಸಮಸ್ಯೆ ನಿವಾರಣೆ! ಶನಿವಾರ ರಾಶಿ ಭವಿಷ್ಯ-ಜುಲೈ-31,2021

ಸೂರ್ಯೋದಯ: 06:03 AM, 06:45 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ಗ್ರೀಷ್ಮ ಋತು, ದಕ್ಷಿಣಾಯಣ, ಕೃಷ್ಣ...

ನಿತ್ಯ ಭವಿಷ್ಯ1 day ago

ಈ ರಾಶಿಯವರಿಗೆ ಮಕ್ಕಳ ಭವಿಷ್ಯದ ಚಿಂತೆ ಮಾಡುವಿರಿ! ಸಾಲ ಶೀಘ್ರವಾಗಿ ಸಿಗಲಿದೆ! ಉದ್ಯೋಗಸ್ಥರಿಗೆ ಪ್ರಮೋಷನ್ ಜೊತೆಗೆ ವರ್ಗಾವಣೆ ಭಾಗ್ಯ! ಶುಕ್ರವಾರ ರಾಶಿ ಭವಿಷ್ಯ-ಜುಲೈ-30,2021

ಸೂರ್ಯೋದಯ: 06:03 AM, ಸೂರ್ಯಸ್ತ: 06:46 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ದಕ್ಷಿಣಾಯಣ, ಗ್ರೀಷ್ಮ ಋತು,...

ನಿತ್ಯ ಭವಿಷ್ಯ2 days ago

ಗುರು ರಾಘವೇಂದ್ರ ಸ್ವಾಮಿ ಪ್ರಾರ್ಥಿಸುತ್ತಾ ಇಂದಿನ ರಾಶಿ ಭವಿಷ್ಯ.. ಗುರುವಾರ ರಾಶಿ ಭವಿಷ್ಯ-ಜುಲೈ-29,2021

ಸೂರ್ಯೋದಯ: 06:02 AM, ಸೂರ್ಯಸ್ತ: 06:46 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ದಕ್ಷಿಣಾಯಣ, ಗ್ರೀಷ್ಮ ಋತು,...

ನಿತ್ಯ ಭವಿಷ್ಯ3 days ago

ಈ ರಾಶಿಯವರಿಗೆ ಗುಡ್ ನ್ಯೂಸ್, ಮಂಗಳಕಾರ್ಯ, ಹೊಸ ಮನೆ ಕಟ್ಟಡ ,ಇನ್ಮುಂದೆ ಬಯಸಿದ್ದೆಲ್ಲ ಸಿಗುವುದು ಮತ್ತು ಮುಟ್ಟಿದ್ದೆಲ್ಲ ಬಂಗಾರ!ಬುಧವಾರ ರಾಶಿ ಭವಿಷ್ಯ-ಜುಲೈ-28,2021

ಸೂರ್ಯೋದಯ: 06:02 AM, ಸೂರ್ಯಸ್ತ: 06:46 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ದಕ್ಷಿಣಾಯಣ, ಗ್ರೀಷ್ಮ ಋತು,...

ರಾಜಕೀಯ4 days ago

ರಾಜ್ಯದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ; ನಾಳೆ ಮಧ್ಯಾಹ್ನ ಪ್ರಮಾಣವಚನ ಸ್ವೀಕಾರ

ಸುದ್ದಿದಿನ, ಬೆಂಗಳೂರು : ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದು, ಅಧಿಕೃತ ಘೋಷಣೆ ಮಾಡಲಾಗಿದೆ. ರಾಜಧಾನಿಯ...

ದಿನದ ಸುದ್ದಿ4 days ago

ದಾವಣಗೆರೆ | ಆ.14 ರಂದು ಬೃಹತ್ ಲೋಕ್ ಆದಾಲತ್ ; ರಾಜಿ ಸಂಧಾನ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಸದಾವಕಾಶ : ಕೆ.ಬಿ. ಗೀತಾ

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಆ. 14 ರಂದು ಬೃಹತ್ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಪಕ್ಷಗಾರರು ರಾಜಿ ಅಥವಾ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭವಾಗಿ, ಶೀಘ್ರವಾಗಿ ಯಾವುದೇ...

ನಿತ್ಯ ಭವಿಷ್ಯ4 days ago

ರಾಶಿಯವರಿಗೆ ಈ ವಾರಾಂತ್ಯದಲ್ಲಿ ಉದ್ಯೋಗ ಪ್ರಾಪ್ತಿ, ಧನಪ್ರಾಪ್ತಿ, ಸಂತಾನದ ಸಿಹಿಸುದ್ದಿ, ವಿದೇಶ ಪ್ರವಾಸ ಯಶಸ್ವಿ… ಮಂಗಳವಾರ ರಾಶಿ ಭವಿಷ್ಯ-ಜುಲೈ-27,2021

ಸೂರ್ಯೋದಯ: 06:02 AM, ಸೂರ್ಯಸ್ತ: 06:46 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ದಕ್ಷಿಣಾಯಣ, ಗ್ರೀಷ್ಮ ಋತು,...

ದಿನದ ಸುದ್ದಿ5 days ago

ದಾವಣಗೆರೆ | ಜೋಗ ಜಲಪಾತ ವೀಕ್ಷಣೆಗೆ ವಿಶೇಷ ಸಾರಿಗೆ ಬಸ್

ಸುದ್ದಿದಿನ,ದಾವಣಗೆರೆ : ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ಸಾರ್ವಜನಿಕರು ವೀಕ್ಷಿಸುವಂತಾಗಲು ದಾವಣಗೆರೆ ವಿಭಾಗದ ದಾವಣಗೆರೆ ಮತ್ತು ಹರಿಹರದಿಂದ ಜೋಗ್‍ಫಾಲ್ಸ್‍ಗೆ ರಾಜಹಂಸ ಸಾರಿಗೆ ವಿಶೇಷ ಪ್ಯಾಕೇಜ್ ಸೇವೆ ಆ....

ದಿನದ ಸುದ್ದಿ5 days ago

ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾ ಪ್ರಕರಣಗಳು

ಸುದ್ದಿದಿನ, ಬೆಂಗಳೂರು : ರಾಜ್ಯದಲ್ಲಿ ಸೋಮವಾರ 1,606 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 31 ಜನ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 467 ಹೊಸ...

ದಿನದ ಸುದ್ದಿ5 days ago

ಬಿಎಸ್​​ವೈ ರಾಜೀನಾಮೆ ಘೋಷಣೆ..!

ಸುದ್ದಿದಿನ, ಬೆಂಗಳೂರು : ಸರ್ಕಾರದ ಎರಡು ವರ್ಷಗಳ ಸಾಧನಾ ಕಾರ್ಯಕ್ರಮದ ಭಾಷಣದಲ್ಲಿ ಭಾವುಕರಾಗಿ ಸಿಎಂ ಬಿಎಸ್​​ವೈ ಕಣ್ಣೀರು ಹಾಕಿದರು. ಸಂಘದ ಕಾರ್ಯಕರ್ತನಾಗಿ ನಂತರ ಆರೆಸ್ಸೆಸ್ ಪ್ರಚಾರಕನಾಗಿ ಬಳಿಕ...

Trending