ದಿನದ ಸುದ್ದಿ
ಕಿಚ್ಚ ಸುದೀಪ್ ಜನ್ಮದಿನ: ಇಲ್ಲಿವೆ ನೋಡಿ ಅಪರೂಪದ ಚಿತ್ರಗಳು !

ಸುದ್ದಿದಿನ ವಿಶೇಷ: ಕನ್ನಡದ ಖ್ಯಾತ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸೆ.2ರ ಭಾನುವಾರ 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸುದೀಪ್ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದರು ಬರುತ್ತಿವೆ.
2000ರಲ್ಲಿ ತೆರೆಕಂಡ ಸ್ಪರ್ಶ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಕನ್ನಡ ಚಿತ್ರಲೋಕ ಪ್ರವೇಶಿಸಿದ ಕಿಚ್ಚ ಸುದೀಪ್ ಇಂದು ರಾಷ್ಟ್ರಮಟ್ಟದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
Read also: ಕಿಚ್ಚನ ಹುಟ್ಟುಹಬ್ಬಕ್ಕೆ ‘ಕೊಟಿಗೊಬ್ಬ3’ ಟೀಸರ್ ರಿಲೀಸ್ ಆಯ್ತು ; ವಿಡಿಯೋ ನೋಡಿ..!
ಅವರ ಅಭಿನಯವೇ ಅವರಿಗೆ ಇಂದು ಎತ್ತರದ ಸ್ಥಾನ ಕಲ್ಪಿಸಿದೆ ಎಂದರೆ ತಪ್ಪಿಲ್ಲ. ಸುದೀಪ್ ನಟನಾಗಿ ಕನ್ನಡ, ತೆಲೆಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದಾರೆ. ಅವರ ನಡೆಸಿಕೊಡುತ್ತಿರುವ ಬಿಗ್ ಬಾಸ್ ಮೂಲಕ ತಮ್ಮ ನಿರೂಪಣೆ ಸಾಮಾಥ್ರ್ಯ ತೋರಿಸಿದ್ದಾರೆ. ಸದ್ಯ ಸುದೀಪ್ ಅವರ ಪಾಲಿಗೆ ಅಂತಾರಾಷ್ಟ್ರೀಮಟ್ಟದಲ್ಲಿ ಕೋಟ್ಯಂತರ ಅಭಿಮಾನಿಗಳು ಸೃಷ್ಟಿಯಾಗಿದ್ದು, ಅವರನ್ನ ದೈವದಂತೆ ಪೂಜಿಸುವ ಉದಾಹರಣೆ ಇವೆ.
ಕಿಚ್ಚ ಸುದೀಪ್ ಅಭಿನಯದ ಮೊದಲ ಚಿತ್ರಗಳು
ಸುದೀಪ್ ತಮ್ಮ ಚಲನಚಿತ್ರ ವೃತ್ತಿಜೀವನವನ್ನು 1997ರಲ್ಲಿ ತಾಯವ್ವ ಆರಂಭಿಸಿದರು. ನಂತರ ಅವರು ಸುನೀಲ್ ಕುಮಾರ್ ದೇಸಾಯಿ ನಿರ್ದೇಶಿಸಿದ ಪ್ರತ್ಯಾರ್ಥ ಸಿನಿಮಾದಲ್ಲಿ ಪೋಷಕ ಪಾತ್ರ ನಿರ್ವಹಿಸಿದರು. ಅವರು ಹುಚ್ಚ ಸಿನಿಮಾದಲ್ಲಿ ನಟಿಸಿದ ಉತ್ತಮ ಅಭಿನಯಕ್ಕೆ ದೇಶ ಮಟ್ಟದಲ್ಲಿ ಪ್ರಶಂಸೆಗಳು ಕೇಳಿಬಂದವು. 2008 ರಲ್ಲಿ ರಾಮಗೋಪಾಲ್ ವರ್ಮ ನಿರ್ದೇಶನದ ಫೂಂಕ್ ಚಿತ್ರದ ಮೂಲಕ ಸುದೀಪ್ ಬಾಲಿವುಡ್ ಚೊಚ್ಚಲ ಪ್ರವೇಶ ಮಾಡಿದರು. ನಂತರ ರಾನ್, ಫೂಂಕ್ 2 ಮತ್ತು ರಾಕ್ಷ ಚರಿತ್ರಾ ದಲ್ಲಿ ನಟಿಸಿದ್ದಾರೆ.
ನೀವು ಈವರೆಗೆ ನೋಡಿದ ಕಿಚ್ಚ ಸುದೀಪ್ ಅವರ ಅಪರೂಪದ ಚಿತ್ರಗಳು
ಸುದೀಪ್ ಮೊದಲು ಸಿನಿಮಾ ರಂಗ ಪ್ರವೇಶಿಸಿದಾಗ ಮುಗ್ದ ಮೊಗದ ಹುಡುಗನಂತೆ ಗಮನ ಸೆಳೆಯುತ್ತಿದ್ದರು. ಅವರ ಸಿನಿಮಾ ಪಯಣ ಆರಂಭದಲ್ಲಿನ ಕೆಲ ಚಿತ್ರಗಳು ಇಲ್ಲಿವೆ ಲಿಂಕ್ ಕ್ಲಿಕ್ ಮಾಡಿ. ಕಿಚ್ಚ ಸುದೀಪ್ ಅವರ ಚಿತ್ರಗಳು.

ದಿನದ ಸುದ್ದಿ
‘ಅನುಗ್ರಹ’ ಯೋಜನೆ ರಾಜ್ಯದಲ್ಲಿ ಮರುಜಾರಿಗೊಳಿಸದಿದ್ದರೆ ವಿಧಾನಸಭೆಯಲ್ಲಿ ಹೋರಾಟ : ಸಿದ್ದರಾಮಯ್ಯ ಎಚ್ಚರಿಕೆ

ಸುದ್ದಿದಿನ ಡೆಸ್ಕ್ : ಕುರಿ, ಮೇಕೆಗಳು ಆಕಸ್ಮಿಕವಾಗಿ ಸತ್ತರೆ ಐದು ಸಾವಿರ ರೂ.ಗಳ ಪರಿಹಾರ ನೀಡುವ “ಅನುಗ್ರಹ” ಯೋಜನೆಯನ್ನು ರಾಜ್ಯ ಬಿಜೆಪಿ ಸರ್ಕಾರ ಮರು ಜಾರಿಗೊಳಿಸಿದ್ದರೆ ವಿಧಾನಸಭೆಯಲ್ಲಿ ಹೋರಾಟ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಕುರಿಗಳನ್ನು ಕಾಡಿನಲ್ಲಿ ಮೇಯಿಸಲು ಹಾಗೂ ಅವುಗಳಿಗೆ ಕಾಯಿಲೆ ಕಾಣಿಸಿಕೊಂಡಾಗ ಕಡ್ಡಾಯವಾಗಿ ಚಿಕಿತ್ಸೆ ಮತ್ತು ಔಷಧ ನೀಡಲು ಅವಕಾಶ ಕಲ್ಪಿಸಿದ್ದು ನಮ್ಮ ಸರ್ಕಾರ. ಇದರ ಜೊತೆಗೆ ಕುರಿ ಮತ್ತು ಮೇಕೆ ಸಾಕಣೆದಾರರ ಮಹಾ ಮಂಡಳ ರಚನೆಯಾಗಿದ್ದೂ ನಮ್ಮ ಸರ್ಕಾರದ ಅವಧಿಯಲ್ಲಿ ಎಂದರು.
ಇದನ್ನೂ ಓದಿ | ಅಧಿಕಾರಿಗಳ ನಿರ್ಲಕ್ಷ್ಯ; ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲೇ ಓಪನ್ ಆಗಿದೆ ಡ್ರೈನೇಜ್ , ಆಪಾಯ ಕಟ್ಟಿಟ್ಟ ಬುತ್ತಿ..!
ಕುರಿ, ಮೇಕೆ, ದನ ಮತ್ತು ಎಮ್ಮೆಗಳು ಸಾವಿಗೀಡಾದಾಗ ಅದರ ಮಾಲೀಕರಿಗೆ ನೆರವಾಗುವ ದೃಷ್ಟಿಯಿಂದ ನಾನು ಮುಖ್ಯಮಂತ್ರಿಯಾಗಿದ್ದಾಗ ಅನುಗ್ರಹ ಯೋಜನೆ ಜಾರಿಗೆ ತಂದಿದ್ದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎರಡು ವರ್ಷದಿಂದ ಯೋಜನೆ ಸ್ಥಗಿತಗೊಳಿಸಿದೆ ಹಾಗೂ ರೂ.30 ಕೋಟಿ ಬಾಕಿಯನ್ನೂ ಪಾವತಿ ಮಾಡಿಲ್ಲ ಎಂದು ಕಿಡಿಕಾರಿದರು.
ಕುರಿ ಸಾಕಾಣಿಕೆ ಈಗ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ತೋಟದಲ್ಲಿ 500 ಕುರಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಕುರಿ ಸಾಕಣೆ ಎಂಬುದು ಬದುಕಿಗೆ ಒಂದು ದಾರಿ.
ಒಂದು ಕುರಿಗೆ ಹತ್ತರಿಂದ ಇಪ್ಪತ್ತು ಸಾವಿರ ರೂ.ಗಳ ಬೆಲೆಯಿದೆ. ಆ ಕುರಿ ಸತ್ತರೆ ಕುರಿಗಾರರ ಬದುಕಿನ ದಾರಿಯೇ ಮುಚ್ಚಿಹೋಗುತ್ತದೆ. ಹಾಗಾಗಿ ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪರಿಹಾರದ ಮೊತ್ತವನ್ನು ಹತ್ತು ಸಾವಿರ ರೂ.ಗಳಿಗೆ ಏರಿಕೆ ಮಾಡುತ್ತೇವೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೆಹಲಿ ಗಡಿಗಳು ಯುದ್ಧದ ಗಡಿಗಳಾಗಿ ಪರಿವರ್ತನೆಯಾಗಿವೆ : ಸಿರಿಮನೆ ನಾಗರಾಜು

ಸುದ್ದಿದಿನ,ದೆಹಲಿ: ‘ಭಾರತದ ಇತಿಹಾಸದಲ್ಲಿ ಹಿಂದೆದೂ ನಡೆಯದ ಸುಧೀರ್ಘ ಹೋರಾಟ ಇದಾಗಿದೆ. ದೀರ್ಘಕಾಲ ಅಂದರೆ ವರ್ಷಗಟ್ಟಲೆ ಹೋರಾಟ ನಡೆಸಲು ರೈತರು ತಯಾರಿ ನಡೆಸಿದ್ದಾರೆ. ಒಕ್ಕೂಟ ಸರ್ಕಾರ ಇಡೀ ದೇಶದ ಜನತೆ ಮೇಲೆ ಯುದ್ಧ ಸಾರಿದೆ. ಸರ್ಕಾರ ಗಡಿ ರಕ್ಷಣಾ ಪಡೆಗಳನ್ನು ನಿಲ್ಲಿಸಿದ್ದಾರೆ. ರೈತರು ಹೋರಾಟ ನಡೆಸುತ್ತಿರುವ ಗಡಿಗಳು ಯುದ್ಧದ ಗಡಿಗಳಾಗಿ ಪರಿವರ್ತನೆಯಾಗಿದೆ’ ಎಂದು ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಸಿರಿಮನೆ ನಾಗರಾಜು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಭಾಗವಹಿಸಿ ಹಲವು ದಿನಗಳ ಕಾಲ ಹೋರಾಟದಲ್ಲಿ ತೊಡಗಿಕೊಂಡಿದ್ದ ರಾಜ್ಯದ ಯುವ ಹೋರಾಟಗಾರ ತಂಡ ಇಂದು ರೈತ ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ, ರೈತ ಹೋರಾಟಕ್ಕೆ ಜಯವಾಗಲಿ ಘೋಷಣೆ ಕೂಗುತ್ತಾ ಬೆಂಗಳೂರಿಗೆ ಬಂದಿಳಿದರು.
‘ಉತ್ತರ ಪ್ರದೇಶಗಳ ಹಳ್ಳಿ ಹಳ್ಳಿ ಗಳಲ್ಲಿ ಕಿಸಾನ್ ಮಹಾಪಂಚಾಯತ್ಗಳು ನಡೆಯುತ್ತಿವೆ. ಕರ್ನಾಟಕದಲ್ಲಿಯೂ ಕಿಸಾನ್ ಮಹಾಪಂಚಾಯತ್ಗಳು ನಡೆಯುತ್ತಿದ್ದು, ರೈತ ಮುಖಂಡರು ಕರ್ನಾಟಕಕ್ಕೂ ಬರಲಿದ್ದಾರೆ. ಸಂಯುಕ್ತ ರೈತ ಹೋರಾಟ ಸಮಿತಿಯಿಂದ ಕರ್ನಾಟಕದಲ್ಲಿ ತಾಲ್ಲೂಕು ಮಟ್ಟದಲ್ಲಿ ಕಿಸಾನ್ ಪಂಚಾಯತ್ಗಳು ನಡೆಯಲಿವೆ’ ಎಂದರು.
ಇದನ್ನೂ ಓದಿ | ಅಧಿಕಾರಿಗಳ ನಿರ್ಲಕ್ಷ್ಯ; ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲೇ ಓಪನ್ ಆಗಿದೆ ಡ್ರೈನೇಜ್ , ಆಪಾಯ ಕಟ್ಟಿಟ್ಟ ಬುತ್ತಿ..!
ಯುವ ಹೋರಾಟಗಾರ ಸಂತೋಷ್ ಮಾತನಾಡಿ, ’ದೆಹಲಿ ಗಡಿಗಳಲ್ಲಿ ಲಕ್ಷಾಂತರ ರೈತರು ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಹೋರಾಟ ನಡೆಯುತ್ತಲಿರುವ 4 ಗಡಿಗಳಿಗೂ ನಾವು ಭೇಟಿ ಕೊಟ್ಟಿದ್ದೇವೆ. ಪಂಜಾಬ್ ಮತ್ತು ಹರಿಯಾಣ ರಾಜ್ಯದ ರೈತರಿಗೆ ನಾವು ನಿಜಕ್ಕೂ ಧನ್ಯವಾದ ಹೇಳಬೇಕು.
ಏಕೆಂದರೆ ಕೃಷಿ ಕಾಯ್ದೆಗಳು ರೈತ ಸಮುದಾಯಕ್ಕೆ ಹೇಗೆ ಮಾರಕವಾಗಲಿವೆ ಎಂಬುದರ ಬಗ್ಗೆ ಸ್ಪಷ್ಟ ಅರಿವಿಟ್ಟುಕೊಂಡು ಅವರು ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟ ದೇಶದ ಮೂಲೆ ಮೂಲೆಗೂ ತಲುಪಬೇಕು. ಬೆಳೆಗೆ ಕನಿಷ್ಠ ಬೆಂಬಲ ಸಿಗಬೇಕು ಎಂಬುದು ರೈತರ ಒಕ್ಕೊರಲ ಬೇಡಿಕೆಯಾಗಿದೆ. ರೈತ ಹೋರಾಟದಲ್ಲಿ ಯುವ ಜನತೆ ಭಾಗಿಯಾಗುವ ಅಗತ್ಯವಿದೆ’ ಎಂದರು.
ಕೊಡಗಿನ ಯುವ ಹೋರಾಟಗಾರ್ತಿ ಕಾವೇರಿ ಮಾತನಾಡಿ, ‘ಭಾರತೀಯರಾದ ನಾವು ಕರಾಳ ದಿನಗಳಲ್ಲಿ ಬುದುಕು ದೂಡುತ್ತಿದ್ದೇವೆ.. ಇಂತಹ ಸಂದರ್ಭದಲ್ಲಿ ಎಲ್ಲೆಡೆಯೂ ಆತಂಕ ಮನೆ ಮಾಡಿದೆ. ಭಾರತದ ಭವಿಷ್ಯ ಎತ್ತ ಸಾಗುತ್ತಿದೆ ಎಂಬ ಭಯ ಎಲ್ಲರಲ್ಲೂ ಇತ್ತು. ಆದರೆ, ಈಗ ಆಡಳಿತರೂಢ ಸರ್ಕಾರದ ಮೇಲಿನ ಕಿಚ್ಚು ದೇಶದ ತುಂಬೆಲ್ಲ ಹಬ್ಬುತ್ತಿದೆ. ಸದ್ಯ ಭಾರತದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದೆ. ಈ ಹೋರಾಟಕ್ಕೆ ರೈತರು ಮಾತ್ರವಲ್ಲ ನಾವೆಲ್ಲರೂ ಕೈಜೋಡಿಸಬೇಕು’ ಎಂದರು.
ಕಳೆದ ಮೂರು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ತೆಲಂಗಾಣ ರಾಜ್ಯಗಳ ವಿವಿಧ ಸಂಘಟನೆಗಳ ಹೋರಾಟಗಾರರ ‘ದಕ್ಷಿಣ ಭಾರತ ನಿಯೋಗ’ ಭಾಗವಹಿಸಿತ್ತು. ಕರ್ನಾಟಕದಿಂದ ಕರ್ನಾಟಕ ಜನಶಕ್ತಿ, ಕರ್ನಾಟಕ ಶ್ರಮಿಕ ಶಕ್ತಿ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಸುಮಾರು 60ಕ್ಕೂ ಹೆಚ್ಚು ಹೋರಾಟಗಾರರು ಒಂಬತ್ತು ದಿನಗಳ ಕಾಲ ಹೋರಾಟದಲ್ಲಿ ಭಾಗವಹಿಸಿದ್ದರು.
ಕೃಪೆ: ಮಾಸ್ ಮೀಡಿಯಾ ಫೌಂಡೇಶನ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಧಿಕಾರಿಗಳ ನಿರ್ಲಕ್ಷ್ಯ; ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲೇ ಓಪನ್ ಆಗಿದೆ ಡ್ರೈನೇಜ್ , ಆಪಾಯ ಕಟ್ಟಿಟ್ಟ ಬುತ್ತಿ..!

ಸುದ್ದಿದಿನ, ದಾವಣಗೆರೆ : ದಾವಣಗೆರೆ ಮಹಾನಗರಪಾಲಿಕೆ ಆವರಣದಲ್ಲಿ ಡ್ರೈನೆಜ್ ಓಪನ್ ಆಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ನಗರಪಾಲಿಕೆಯ ಆವರಣದಲ್ಲಿನ ಕ್ಯಾಂಟೀನ್ ಮುಂದಿರುವ ಡ್ರೈನೇಜ್ ಸುಮಾರು ದಿನಗಳಿಂದ ಓಪನ್ ಆಗಿದೆ. ಆವರಣವು ಜನ ಸಮೂಹದಿಂದ ನಿತ್ಯವೂ ಕೂಡಿರುತ್ತದೆ. ಕ್ಯಾಂಟೀನ್ ಬರುವ ಜನರೂ ಕೂಡ ಹೆಚ್ಚಾಗಿಯೇ ಇರುತ್ತಾರೆ. “ಸುಮಾರು ಒಂದು ವಾರದಿಂದ ಈ ಗುಂಡಿ ಓಪನ್ ಆಗಿದ್ದು ಆಯತಪ್ಪಿ ಯಾರಾದರೂ ಬಿದ್ದರೆ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ” ಎನ್ನುತ್ತಿದ್ದಾರೆ ಸಾರ್ವಜನಿಕರು.
ಮಹಾನಗರ ಸಭೆಯ ಆವರಣದಲ್ಲೇ ಡ್ರೈನೇಜ್ ಓಪನ್ ಆಗಿದ್ದು, ಸರಿಪಡಿಸಲು ಅಧಿಕಾರಿಗಳು ನಿರ್ಲಕ್ಷವಹಿಸಿದ್ದು, ಇನ್ನು ನಗರದ ಇಂತಹ ಹಲವು ಸಮಸ್ಯೆಗಳನ್ನು ಪರಿಹರಿಸಲು ಎಷ್ಟು ದಿನ ಕಾಯ ಬೇಕು..? ಎಂದು ಸಾರ್ವಜನಿಕರಾದ ಮಹೇಶ್ ಎಂಬುವವರು ‘ಸುದ್ದಿದಿನ’ದ ಮುಂದೆ ಪ್ರಸ್ತಾಪಿಸಿದರು.
- ಓಪನ್ ಆಗಿರುವ ಡ್ರೈನೇಜ್ ಅನ್ನು ಶೀಘ್ರದಲ್ಲೇ ಮುಚ್ಚಿಸಲು ಕ್ರಮ ತೆಗೆದುಕೊಳ್ಳುತ್ತೇವೆ.
| ವಿಶ್ವನಾಥ್ ಪಿ ಮುದ್ದಜ್ಜಿ ,ಕಮೀಷನರ್, ಮಹಾನಗರ ಪಾಲಿಕೆ, ದಾವಣಗೆರೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್6 days ago
ಏನಿದು ? ಗಡಿಮಾರಿ..!
-
ದಿನದ ಸುದ್ದಿ6 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ರಾಜಕೀಯ5 days ago
ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
-
ದಿನದ ಸುದ್ದಿ7 days ago
ಚನ್ನಗಿರಿ | ಲಂಚ ಸ್ವೀಕರಿಸಿದ್ದ ಗ್ರಾಮ ಲೆಕ್ಕಾಧಿಕಾರಿಗೆ 2 ವರ್ಷ ಜೈಲು
-
ದಿನದ ಸುದ್ದಿ7 days ago
ಉತ್ತರ ಪ್ರದೇಶ ಬಜೆಟ್ 2021-22 | ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2,000 ಕೋಟಿ ಹಣ ; ಉದ್ಯೋಗಾವಕಾಶ ಹೆಚ್ಚಿಸಲು ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ
-
ಬಹಿರಂಗ6 days ago
ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್’
-
ನೆಲದನಿ6 days ago
ರೈತ ಹೋರಾಟಗಾರ `ಸಹಜಾನಂದ ಸರಸ್ವತಿ’
-
ರಾಜಕೀಯ4 days ago
ದೇವರಮನೆ ಶಿವಕುಮಾರ್ ಬಿಜೆಪಿ ಸೇರ್ಪಡೆ | ನಾವು ಯಾರಿಗೂ ಆಮಿಷ ಒಡ್ಡಿಲ್ಲ : ಸಂಸದ ಜಿಎಂ ಸಿದ್ದೇಶ್ವರ್