Connect with us

ದಿನದ ಸುದ್ದಿ

ರೈತ ಹೋರಾಟವೆಂಬ ಸಾಗರ ; ಇದು ಬರೀ ಪಂಜಾಬಿನದ್ದಲ್ಲ, ಇಡೀ ದೇಶದ ಹೋರಾಟ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಬೆಂಗಳೂರು: “ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ” ಎಂಬುದು ನಮ್ಮ ನಡುವಿನ ಖ್ಯಾತ ನಾಣ್ನುಡಿ. ಆದರೆ, ನಮ್ಮನ್ನು ಆಳುವ ಪ್ರಭುತ್ವ ಈ ನಾಣ್ನುಡಿಯನ್ನು ಮರೆತು ಇದೀಗ ರೈತರಿಗೆ ದ್ರೋಹವೆಸಗಲು ಮುಂದಾಗಿದೆ. ಕೃಷಿಯನ್ನು ಕಾರ್ಪೋರೇಟ್ಗೊಳಿಸಲಾಗುತ್ತಿದೆ. ಪರಿಣಾಮ ವಿಶ್ವ ಪರಂಪರೆಯಲ್ಲಿ ರೈತರ ನಾಡು ಎಂದೇ ಖ್ಯಾತವಾಗಿರುವ ಭಾರತ ರೈತರ ಹಕ್ಕಿನ ಕಾರಣಕ್ಕೆ ಹಿಂದೆಂದೂ ಕಾರಣ ಐತಿಹಾಸಿಕ ಹೋರಾಟವೊಂದಕ್ಕೆ ಸಾಕ್ಷಿಯಾಗಿದೆ. ಹೊಸ ದಶಕವೊಂದು ರೈತ ಹೋರಾಟದೊಂದಿಗೆ ಉದಯಿಸಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ಅಕ್ಷರಶಃ ರೈತರ ಪಾಲಿನ ಮರಣ ಶಾಸನ ಎಂಬುದು ರೈತರ ಆರೋಪ. ಹೀಗಾಗಿ ಈ ಕಾನೂನನ್ನು ಹಿಂಪಡೆಯಬೇಕು ಎಂದು ರೈತ ಸಮುದಾಯ ಕಳೆದ ಒಂದು ವರ್ಷದಿಂದ ಹೋರಾಟ ನಡೆಸುತ್ತಿದೆ. ಆದರೆ, ಈ ರೈತ ಹೋರಾಟ ತೀವ್ರತೆಯನ್ನು ಕಂಡಿದ್ದು ಕಳೆದ ವರ್ಷದ ನವೆಂಬರ್ ಅಂತ್ಯದಲ್ಲೇ. ರಾಷ್ಟ್ರ ರಾಜಧಾನಿಗೆ ಹತ್ತಿರದಲ್ಲೇ ಇರುವ ಪಂಜಾಬ್-ಹರಿಯಾಣ ರೈತರು ರಾಜಧಾನಿಗೆ ಲಗ್ಗೆ ಹಾಕಿ, ಇದೀಗ ದೆಹಲಿಯ ಹೊರವಲಯದಲ್ಲಿ ಬೀಡು ಬಿಟ್ಟಿದ್ದಾರೆ. ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ.

ಹಾಗಾದರೆ ಇದು ಕೇವಲ ಪಂಜಾಬ್ ಮತ್ತು ಹರಿಯಾಣ ರೈತರ ಹೋರಾಟವೇ? ಈ ಹೋರಾಟಕ್ಕೆ ಬೇರೆ ರಾಜ್ಯದ ರೈತರ ಬೆಂಬಲ ಇಲ್ಲವೇ? ಎಂಬುದು ಪ್ರಶ್ನೆ. ಅಸಲಿಗೆ ಕೊರೋನಾ ಕಾರಣಕ್ಕೆ ದೇಶದ ನಾನಾ ಮೂಲೆಗಳಿಂದ ದೆಹಲಿಗೆ ತೆರಳಲಾಗದ ರೈತರು ತಮ್ಮ ರಾಜ್ಯದಲ್ಲೇ ಹಲವೆಡೆ ಉಗ್ರ ಹೋರಾಟಗಳನ್ನು ನಡೆಸುತ್ತಲೇ ಇದ್ದಾರೆ. ಆದರೆ, ಇದು ಕೇವಲ ಪಂಜಾಬ್ ಹರಿಯಾಣ ರೈತರ ಹೋರಾಟವಷ್ಟೇ ಹೊರತು, ಇಡೀ ಭಾರತದ ಹೋರಾಟವಲ್ಲ ಎಂದು ಬಿಂಬಿಸುವಲ್ಲಿ ನಮ್ಮ ದೇಶದ ಮುಖ್ಯವಾಹಿನಿ ಮಾಧ್ಯಮಗಳು ಸಾಕಷ್ಟು ಶ್ರಮವಹಿಸಿವೆ. ಇದು ಮಾಧ್ಯಮಗಳು ರೈತರಿಗೆ ಎಸಗಿದ ದ್ರೋಹ ಎನ್ನಲು ಅಡ್ಡಿಯಿಲ್ಲ.

ಆದರೆ, ಹರಿವ ನದಿಗೆ ನೂರಾರು ತೊರೆ ಎಂಬಂತೆ ದೆಹಲಿ ರೈತ ಹೋರಾಟಕ್ಕೆ ಇಡೀ ದೇಶದ ರೈತರು ಸ್ಪಂದಿಸಿದ್ದಾರೆ. ತಾವಿದ್ದಲ್ಲಿಂದಲೇ ತಮ್ಮ ದನಿಗೂಡಿಸಿದ್ದಾರೆ ಎಂಬುದೇ ಕಟುವಾಸ್ತವ. ಹಾಗಾದರೆ, ಕಳೆದ ಎರಡು ತಿಂಗಳಲ್ಲಿ ದೆಹಲಿ ರೈತರ ಹೋರಾಟವನ್ನು ಬೆಂಬಲಿಸಿ ಭಾರತದಲ್ಲಿ ಯಾವ ಯಾವ ರಾಜ್ಯದಲ್ಲಿ ರೈತರು ಹೋರಾಟ ನಡೆಸಿದ್ದಾರೆ? ಹೋರಾಟದ ತೀವ್ರತೆ ಏನು? ಈ ಹೋರಾಟವನ್ನು ತಡೆಯಲು ಅಲ್ಲಿನ ಸರ್ಕಾರಗಳು ಕೈಗೊಂಡ ಕ್ರಮ ಏನು? ಎಂಬ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ದ್ರಾವಿಡ ನಾಡಿನಲ್ಲಿ ಮೊಳಗಿತ್ತು ರೈತ ಕಹಳೆ

ಕೇಂದ್ರ ಸರ್ಕಾರದ ಕೃಷಿ ಕಾನೂನನ್ನು ವಿರೋಧಿಸಿ ಪಂಜಾಬ್ ಹಾಗೂ ಹರಿಯಾಣ ರೈತರು ದೆಹಲಿ ಕಡೆ ಮುಖ ಮಾಡುತ್ತಿದ್ದಂತೆಯೇ ತಮಿಳುನಾಡಿನಲ್ಲೂ ರೈತರು ಹೋರಾಟದ ಕಣಕ್ಕೆ ಧುಮುಕಿದ್ದರು.

ನವೆಂಬರ್ ಅಂತ್ಯದಲ್ಲಿ ರೈತರು ದೆಹಲಿ ಕಡೆಗೆ ಹೊರಡುತ್ತಿದ್ದಂತೆ ತಮಿಳುನಾಡಿನ ಪ್ರಬಲ ವಿರೋಧ ಪಕ್ಷವಾದ ಡಿಎಂಕೆ ಕಳೆದ ವರ್ಷ ಡಿಸೆಂಬರ್ 05 ರಂದು ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ “ಅನ್ನದಾತನಿಗಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ” ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ತಮಿಳುನಾಡಿನ ಎಲ್ಲಾ 36 ರೈತ ಸಂಘಟನೆಗಳೂ ಬೆಂಬಲಿಸಿದ್ದವು. ಅಲ್ಲದೆ, ಸಾವಿರಾರು ರೈತರು ಹಾಗೂ ಡಿಎಂಕೆ ಕಾರ್ಯಕರ್ತರು ಈ ಹೋರಾಟದಲ್ಲಿ ಪಾಲ್ಗೊಂಡು ಒಂದು ದಿನ ಉಪವಾಸ ಆಚರಿಸುವ ಮೂಲಕ ಗಾಂಧಿ ಮಾರ್ಗದಲ್ಲಿ ಹೋರಾಟದ ಕಿಚ್ಚು ಹಚ್ಚಿಸಿದ್ದರು.

ಅಲ್ಲಿಂದ ಈವರೆಗೆ ತಮಿಳುನಾಡಿನಲ್ಲಿ ಪ್ರತಿದಿನ ಒಂದಲ್ಲಾ ಒಂದು ಜಿಲ್ಲೆಯಲ್ಲಿ ರೈತರು ಕೇಂದ್ರ ಸರ್ಕಾರವನ್ನು ವಿರೋಧಿಸಿ ನಿರಂತರವಾಗಿ ಹೋರಾಟವನ್ನು ನಡೆಸುತ್ತಲೇ ಇದ್ದಾರೆ. ಈ ಹೋರಾಟಗಳಲ್ಲೇ ಹೆಚ್ಚು ಗಮನ ಸೆಳೆದ ಹೋರಾಟವೆಂದರೆ ಡಿಸೆಂಬರ್ 11ರಂದು ರೈತರ ರಾಜಭವನ ಮುತ್ತಿಗೆ ಚಳುವಳಿ, ಡಿಸೆಂಬರ್ 15 ರಂದು ತಂಜಾವೂರು ಜಿಲ್ಲೆಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ರ‍್ಯಾಲಿ ಮತ್ತು ರೈಲ್ ರೋಖೋ ಚಳುವಳಿ.

ತಮಿಳುನಾಡಿನ 22 ಜಿಲ್ಲೆಗಳ ರೈತರು ಒಟ್ಟಾಗಿ ಡಿಸೆಂಬರ್ 11 ರಂದು ಚೆನ್ನೈನಲ್ಲಿರುವ ರಾಜಭವನಕ್ಕೆ ಮುತ್ತಿಗೆ ಹಾಕಿದ್ದರೆ, ಡಿಸೆಂಬರ್ 15 ರಂದು ತಂಜಾವೂರಿನ ಕಾವೇರಿ ಡೆಲ್ಟಾ ಭಾಗದಲ್ಲಿ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಿದ್ದರು. ಈ ರ್ಯಾಲಿಗೆ ಪೊಲೀಸರಿಂದ ಅನುಮತಿಯನ್ನೂ ಪಡೆಯಲಾಗಿತ್ತು. ಆದರೆ, ದಿಢೀರೆಂದಯ ಮಾರ್ಗ ಮಧ್ಯೆ ರ್ಯಾಲಿಯನ್ನು ತಡೆಯಲಾಗಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಒಂದಿಡೀ ದಿನ ತಂಜಾವೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿಯನ್ನೇ ತಡೆದು ಪ್ರತಿಭಟಿಸಿದ್ದರು. ಅಲ್ಲದೆ, ಕೃಷಿ ಕಾನೂನನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈಲ್ ರೋಖೋ ಚಳುವಳಿಯನ್ನೂ ನಡೆಸಿದ್ದರು.

ಇದೇ ವೇಳೆ ತಮಿಳುನಾಡಿನ ರೈತ ಸಂರಕ್ಷಣಾ ಸಂಘದ ರೈತರ ಒಂದು ತಂಡ ದೆಹಲಿಗೆ ತೆರಳಿ ರೈತ ಹೋರಾಟದಲ್ಲಿ ಭಾಗವಹಿಸಿದ್ದರೆ, ಮತ್ತೊಂದೆಡೆ ತಮಿಳುನಾಡಿನ ತಿರುನಲ್ವೇಲಿ, ನಾಗಪಟ್ಟಣಂ ಜಿಲ್ಲೆಗಳಲ್ಲಿ ರೈತರು ನೇಗಿಲು ಹಿಡಿದು ಕೇಂದ್ರದ ವಿರುದ್ಧ ಹೋರಾಟ ನಡೆಸಿದ್ದರು. ಈ ವೇಳೆ ರೈತರ ಮೇಲೆ ಲಾಠಿ ಚಾರ್ಚ್ ಮಾಡಲಾಗಿತ್ತು. ಅಲ್ಲದೆ, 62 ಜನರನ್ನು ಒತ್ತಾಯಪೂರ್ವಕವಾಗಿ ಬಂಧಿಸಿ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು ಎಂಬುದು ಉಲ್ಲೇಖಾರ್ಹ.

ಮಹಾರಾಷ್ಟ್ರದ 21 ಜಿಲ್ಲೆಯಿಂದ ಮುಂಬೈಗೆ ಭೋರ್ಗರೆದ ರೈತರ ದಂಡು

ದೆಹಲಿ ರೈತ ಹೋರಾಟ ಮತ್ತು ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಟ್ರ್ಯಾಕ್ಟರ್ ರ್ಯಾಲಿಯನ್ನು ಬೆಂಬಲಿಸಿ ಮಹಾರಾಷ್ಟ್ರದ ರೈತರು ಸಹ ಜನವರಿ 26 ರಂದು ಮುಂಬೈ ಮಹಾನಗರದಲ್ಲಿ ರ್ಯಾಲಿ ನಡೆಸಲು ಮುಂದಾಗಿದ್ದಾರೆ. ಈ ಮೂಲಕ ಕೇಂದ್ರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಲು ವೇದಿಕೆ ಸಿದ್ದಪಡಿಸಿದ್ದಾರೆ.

ಇದರ ಭಾಗವಾಗಿ ಮಹಾರಾಷ್ಟ್ರದ 21 ಜಿಲ್ಲೆಗಳ ಲಕ್ಷಾಂತರ ರೈತರು ಕಳೆದ ಜನವರಿ 23 ರಂದು ನಾಸಿಕ್ನಿಂದ ಮುಂಬೈಗೆ ಪಾದಯಾತ್ರೆ ಹೊರಟಿದ್ದಾರೆ. ಈ ಯಾತ್ರೆ ಸೋಮವಾರ (ಜನವರಿ 25) ಮುಂಬೈ ಪ್ರವೇಶಿಸಲಿದೆ. ಅಲ್ಲದೆ, ಹೆಸರಾಂತ ಆಜಾದ್ ಮೈದಾನದಲ್ಲಿ ಮಹಾರಾಷ್ಟ್ರದ ಲಕ್ಷಾಂತರ ರೈತರು ಜಮಾಯಿಸಲಿದ್ದು, ದೆಹಲಿಯಲ್ಲಿ ಹೋರಾಟ ನಿರತ ರೈತರಿಗೆ ಬಲ ತುಂಬಲಿದ್ದಾರೆ. ಈ ಹೋರಾಟದಲ್ಲಿ ಎನ್ಸಿಪಿ ಹಿರಿಯ ನಾಯಕ ಶರದ್ ಪವಾರ್ ಸಹ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಕೃಷಿ ಕಾಯ್ದೆಯನ್ನು ವಿರೋಧಿಸಿ ಈ ಪ್ರಮಾಣ ಸಂಖ್ಯೆಯಲ್ಲಿ ರೈತರು ಮುಂಬೈಗೆ ಲಗ್ಗೆ ಇಡುತ್ತಿರುವ ಕುರಿತು ದೇಶದ ಯಾವ ಸುದ್ದಿ ಮಾಧ್ಯಮಗಳೂ ಸಹ ಒಂದೈದು ನಿಮಿಷವೂ ಸಹ ಸುದ್ದಿ ಮಾಡದೆ ಇರುವುದು ದುರಂತವೇ ಸರಿ!

ಮಧ್ಯಪ್ರದೇಶದಲ್ಲಿ ರೈತರ ರ್ಯಾಲಿ ವಿರುದ್ಧ ಜಲಫಿರಂಗಿ ಬಳಸಿದ್ದ ಸರ್ಕಾರ

ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಬೆಂಬಲಿಸಿ ಮಧ್ಯಪ್ರದೇಶದ ಭೂಪಾಲ್ನಲ್ಲಿ ಕಾಂಗ್ರೆಸ್ ಪಕ್ಷ ಎರಡು ವಾರಗಳ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಿತ್ತು. ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಈ ಹೋರಾಟದ ನೇತೃತ್ವವಹಿಸಿದ್ದರು.

ಜನವರಿ 23 ರಂ ಮಧ್ಯಾಹ್ನ ನೂರಾರು ಕಾಂಗ್ರೆಸ್ ಕಾರ್ಯಕರ್ತರು ನಗರದ ಜವಾಹರ್ ಚೌಕ್ ಪ್ರದೇಶದಲ್ಲಿ ಒಟ್ಟುಗೂಡಿದ್ದರು. ಅಲ್ಲದೆ ರಾಜಭವನಕ್ಕೆ ಮುತ್ತಿಗೆ ಹಾಕಲು ಯೋಜಿಸಲಾಗಿತ್ತು. ಆದರೆ, ಪೊಲೀಸರು ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಪರಿಣಾಮ ರೈತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಾಜಭವನವನ್ನು ಸಮೀಪಿಸುತ್ತಿದ್ದಂತೆ, ಅವರನ್ನು ನಿಯಂತ್ರಿಸಲು ಸಾಧ್ಯವಾಗದ ಪೊಲೀಸರು ಹೋರಾಟಗಾರರ ಮೇಲೆ ಅಶ್ರವಾಯು ದಾಳಿ, ಜಲಫಿರಂಗಿ ದಾಳಿ ನಡೆಸಿದ್ದಾರೆ.

ಪೊಲೀಸರ ಬಲ ಪ್ರಯೋಗದ ಮೂಲಕ ಮಧ್ಯಪ್ರದೇಶದಲ್ಲಿ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಲಾಗಿತ್ತು. ಆದರೂ, ಸಹ ಇಂದಿಗೂ ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಪ್ರತಿನಿತ್ಯ ರೈತರು ಹೋರಾಟವನ್ನು ಮುಂದುವರೆಸುತ್ತಲೇ ಇದ್ದಾರೆ.

ಕಲ್ಕತ್ತಾದ ರಾಜಭವನಕ್ಕೆ 40 ಸಾವಿರ ಜನ ಮೆರವಣಿಗೆ

ಕೇಂದ್ರ ಸರ್ಕಾರ ಕೃಷಿ ಕಾನೂನನ್ನು ಜಾರಿಗೆ ತರುತ್ತಿದ್ದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕಾನೂನನ್ನು ಬಹಿರಂಗವಾಗಿ ಟೀಕಿಸಿದ್ದರು. ಅಲ್ಲದೆ ಅಲ್ಲಿನ ವಿಧಾನಸಭೆಯಲ್ಲಿ ಈ ಕಾನೂನುಗಳ ವಿರುದ್ಧ ನಿರ್ಣಯವನ್ನು ಮಂಡಿಸಿದ್ದರು. ಆದರೆ, ದೆಹಲಿ ರೈತ ಹೋರಾಟಕ್ಕೆ ಬಲ ತುಂಬಲು ಮುಂದಾಗಿದ್ದ ಬಂಗಾಳದ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಡಿಸೆಂಬರ್ 17 ರಂದು ಸುಮಾರು 40,000 ರೈತ ಹೋರಾಟಗಾರರ ಜೊತೆಗೆ ಕಲ್ಕತ್ತಾದ ರಾಜಭವನಕ್ಕೆ ಮೆರವಣಿಗೆ ಆಯೋಜಿಸಿತ್ತು. ಅಲ್ಲದೆ, ಜಿಲ್ಲಾವಾರು ಹೋರಾಟಗಳು ಪ್ರತಿನಿತ್ಯ ನಡೆಯುತ್ತಲೇ ಇದೆ.

ಈ ಹೋರಾಟವನ್ನು ಬಂಗಾಳದ ಇತಿಹಾಸದಲ್ಲಿ ನಡೆದ ಅತಿದೊಡ್ಡ ಹೋರಾಟ ಎಂದು ಬಣ್ಣಿಸಲಾಗುತ್ತಿದೆ. ಈ ಮೂಲಕ ರೈತರ ಪ್ರತಿಭಟನೆಯು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಸಂಘಟಕರು ತಿಳಿಸಿದ್ದರು.

ಕೇರಳದಲ್ಲೂ ರೈತ ಕಹಳೆ

ದೆಹಲಿಯ ಸಿಂಗು ಗಡಿಯಲ್ಲಿ ರೈತ ಹೋರಾಟ ಕಾವು ಪಡೆಯುತ್ತಿದ್ದಂತೆ ಕೇರಳದ ರೈತರು ಸಹ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದರು. ತಿರುವನಂತಪುರಂನಲ್ಲಿ ಜಂಟಿ ರೈತ ಪರಿಷತ್ ಆಯೋಜಿಸಿದ್ದ ಅನಿರ್ದಿಷ್ಟ ಪ್ರತಿಭಟನೆ ಇಂದಿಗೂ ಸಹ ಮುಂದುವರೆದಿದೆ. ಈ ಪ್ರತಿಭಟನೆಯಲ್ಲಿ 600 ರೈತ ಸಂಘಗಳು ಪಾಲ್ಗೊಂಡಿವೆ. ಅಲ್ಲದೆ ಸ್ವತಃ ಕೇರಳ ಸರ್ಕಾರ ಅಲ್ಲಿನ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ನೀತಿಗಳ ವಿರುದ್ಧ ನಿರ್ಣಯ ಜಾರಿಗೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಆಂಧ್ರ ತೆಲಂಗಾಣದಲ್ಲೂ ಹೋರಾಟಕ್ಕಿಳಿದ ರೈತರು

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ರೈತರನ್ನು ಮತ್ತಷ್ಟು ಶೋಷಿಸುತ್ತವೆ ಮತ್ತು ದೇಶದ ಆಹಾರ ಭದ್ರತೆಗೆ ಧಕ್ಕೆ ತರುವ ಕಪ್ಪು ಕಾನೂನುಗಳು ಎಂದು ವಿರೋಧಿಸಿರುವ ಆಂಧ್ರಪ್ರದೇಶದ “ಅಖಿಲಾ ರೈತ ಪೋರಾಟ ಸಮನ್ವಯ ಸಮಿತಿ” ಮುಂದಾಳತ್ವದಲ್ಲಿ ಆಂಧ್ರಪ್ರದೇಶದಲ್ಲೂ ರೈತ ಹೋರಾಟ ನಡೆಯುತ್ತಲೇ ಇದೆ.

ಕಳೆದ ವಾರ ಮಾಜಿ ಸಚಿವ ವಡ್ಡೆ ಶೋಭನದೀಶ್ವರ್ ರಾವ್ ನೇತೃತ್ವದಲ್ಲಿ ಕೇಂದ್ರದ ವಿರುದ್ಧ ಹೋರಾಟ ಆಯೋಜಿಸಲಾಗಿತ್ತು. ವೈ.ಕೇಶವ ರಾವ್, ಎಂ.ಸೂರ್ಯನಾರಾಯಣ, ವಿ.ಶ್ರೀನಿವಾಸ ರಾವ್, ಸಿ.ಎಚ್. ಬಾಬು ರಾವ್, ರವುಲಾ ವೆಂಕಯ್ಯ, ಯಲಮಂದ ರಾವ್, ಪಿ.ಜಮಲಯ, ವಿ.ವೆಂಕಟೇಶ್ವರಲು ಸೇರಿದಂತೆ ಆಂಧ್ರದ ಪ್ರಮುಖ ನಾಯಕರು ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಆದರೆ, ಈ ಹೋರಾಟದಲ್ಲಿ ಉದ್ವಿಗ್ನತೆ ಉಂಟಾದ ಪರಿಣಾಮ ಈ ಎಲ್ಲಾ ಹೋರಾಟಗಾರರನ್ನು ಬಂಧಿಸಲಾಗಿತ್ತು.

ಇದೇ ವೇಳೆ ತೆಲಂಗಾಣದ ರೈತರೂ ಸಹ ಒಗ್ಗಟ್ಟನ್ನು ಪ್ರದರ್ಶಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಹೈದ್ರಾಬಾದ್ಗೆ ಆಗಮಿಸಿದ್ದ ರೈತರು ಹಾಗೂ ರೈತ ಮಹಿಳೆಯರು ದೊಡ್ಡ ಮಟ್ಟದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ್ದರು. ಅಲ್ಲದೆ, ಕಳೆದ ಎರಡು ತಿಂಗಳಲ್ಲಿ ಹಲವಾರು ಜಿಲ್ಲೆಗಳು ಹೋರಾಟಕ್ಕೆ ಸಾಕ್ಷಿಯಾಗಿವೆ.

ಬಿಜೆಪಿಗರಿಗೆ ನಿಷೇಧ ಹೇರಿದ ಉತ್ತರಪ್ರದೇಶ-ಹರಿಯಾಣ ಗ್ರಾಮಗಳು

ಕೇಂದ್ರದ ಕೃಷಿ ಕಾಯ್ದೆಯ ವಿರುದ್ದ ಪಂಜಾಬ್ ಮತ್ತು ಹರಿಯಾಣದಲ್ಲಿನ ಹೋರಾಟ ತಾರಕಕ್ಕೇರಿದೆ. ದೇಶದಾದ್ಯಂತ ವಿವಿಧೆಡೆ ಹೋರಾಟಗಳು ನಡೆಯುತ್ತಲೇ ಇದೆ. ಆದರೆ, ಇಡೀ ದೇಶದ ಹೋರಾಟ ಒಂದು ಬಗೆಯದ್ದಾದರೆ, ಹರಿಯಾಣದ 60 ಗ್ರಾಮಗಳು ಹಾಗೂ ಉತ್ತರ ಪ್ರದೇಶದ ಕೆಲ ಗ್ರಾಮಗಳ ಹೋರಾಟ ವಿಭಿನ್ನ ರೀತಿಯಲ್ಲಿ ಸಾಗಿದೆ.

ದೇಶದ ರೈತರು ದೆಹಲಿಯಲ್ಲಿ ತಮ್ಮ ಹೋರಾಟವನ್ನು ಆರಂಭಿಸುತ್ತಿದ್ದಂತೆ ಹರಿಯಾಣ ಹಾಗೂ ಉತ್ತರಪ್ರದೇಶದ ಅನೇಕ ಹಳ್ಳಿಗಳ ಜನ ತಮ್ಮ ಗ್ರಾಮಗಳಿಗೆ ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿ ಹಾಗೂ ಜೆಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಪ್ರವೇಶವನ್ನೇ ನಿಷೇಧಿಸಿದ್ದಾರೆ.

ರೈತ ವಿರೋಧಿ ಕಾನೂನನ್ನು ವಿರೋಧಿಸಿ ರಾಷ್ಟ್ರದಾದ್ಯಂತದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ರಾಜ್ಯದ ಅನೇಕ ಗ್ರಾಮಗಳ ನಿವಾಸಿಗಳು ಬಿಜೆಪಿ-ಜೆಜೆಪಿಯ ಸಚಿವರು ಮತ್ತು ಶಾಸಕರನ್ನು ಬಹಿಷ್ಕರಿಸಿ ನಿರ್ಣಯಗಳನ್ನು ಅಂಗೀಕರಿಸಿದ್ದಾರೆ.

ಈ ಬಗ್ಗೆ ರೈತರು ಗ್ರಾಮದ ವಿವಿಧ ಪ್ರವೇಶ ಕೇಂದ್ರಗಳಲ್ಲಿ ಹೋರ್ಡಿಂಗ್ಗಳನ್ನು ಹಾಕಿದ್ದು, ಬಿಜೆಪಿ ಮತ್ತು ಜೆಜೆಪಿ ನಾಯಕರು ಹಾಗೂ ಕಾರ್ಯಕರ್ತರು ಗ್ರಾಮಕ್ಕೆ ಪ್ರವೇಶಿಸಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ಭಾಗಶಃ ಬಾರತ ಇತಿಹಾಸದಲ್ಲಿ ಗ್ರಾಮದ ಪ್ರವೇಶದ್ವಾರವೊಂದರಲ್ಲಿ ಹೀಗೊಂದು ಬೋರ್ಡಿಂಗ್ ಹಾಕಿದ್ದ ಇತಿಹಾಸ ಈ ಹಿಂದೆಯೂ ಇಲ್ಲ, ಮುಂದೆಯೂ ಇರಲಿಕ್ಕಿಲ್ಲವೇನೋ? ಆದರೆ, ಈ ಎಲ್ಲಾ ಸಂಗತಿಗಳು ನಮಗೆ ನೀಡುವ ಒಂದೇ ಒಂದು ಸಂದೇಶವಿಷ್ಟೆ. ಇದು ಕೇವಲ ಪಂಜಾಬ್-ಹರಿಯಾಣ ರೈತರ ಹೋರಾಟವಷ್ಟೇ ಅಲ್ಲ. ಬದಲಿಗೆ ಇದು ಇಡೀ ದೇಶದ ರೈತ ಸಮುದಾಯದ ಹೋರಾಟ ಎಂಬುದೇ ಆಗಿದೆ.

ಪಂಜಾಬ್ ಹೋರಾಟವಲ್ಲ…ಇಡೀ ಬಾರತದ ರೈತ ಹೋರಾಟವೆನ್ನಿ..!

“ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ” ಎಂಬುದು ನಮ್ಮ ನಡುವಿನ ಖ್ಯಾತ ನಾಣ್ನುಡಿ. ಆದರೆ, ನಮ್ಮನ್ನು ಆಳುವ ಪ್ರಭುತ್ವ ಈ ನಾಣ್ನುಡಿಯನ್ನು ಮರೆತು ಇದೀಗ ರೈತರಿಗೆ ದ್ರೋಹವೆಸಗಲು ಮುಂದಾಗಿದೆ. ಕೃಷಿಯನ್ನು ಕಾರ್ಪೋರೇಟ್ಗೊಳಿಸಲಾಗುತ್ತಿದೆ. ಪರಿಣಾಮ ವಿಶ್ವ ಪರಂಪರೆಯಲ್ಲಿ ರೈತರ ನಾಡು ಎಂದೇ ಖ್ಯಾತವಾಗಿರುವ ಭಾರತ ರೈತರ ಹಕ್ಕಿನ ಕಾರಣಕ್ಕೆ ಹಿಂದೆಂದೂ ಕಾರಣ ಐತಿಹಾಸಿಕ ಹೋರಾಟವೊಂದಕ್ಕೆ ಸಾಕ್ಷಿಯಾಗಿದೆ. ಹೊಸ ದಶಕವೊಂದು ರೈತ ಹೋರಾಟದೊಂದಿಗೆ ಉದಯಿಸಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ಅಕ್ಷರಶಃ ರೈತರ ಪಾಲಿನ ಮರಣ ಶಾಸನ ಎಂಬುದು ರೈತರ ಆರೋಪ. ಹೀಗಾಗಿ ಈ ಕಾನೂನನ್ನು ಹಿಂಪಡೆಯಬೇಕು ಎಂದು ರೈತ ಸಮುದಾಯ ಕಳೆದ ಒಂದು ವರ್ಷದಿಂದ ಹೋರಾಟ ನಡೆಸುತ್ತಿದೆ. ಆದರೆ, ಈ ರೈತ ಹೋರಾಟ ತೀವ್ರತೆಯನ್ನು ಕಂಡಿದ್ದು ಕಳೆದ ವರ್ಷದ ನವೆಂಬರ್ ಅಂತ್ಯದಲ್ಲೇ. ರಾಷ್ಟ್ರ ರಾಜಧಾನಿಗೆ ಹತ್ತಿರದಲ್ಲೇ ಇರುವ ಪಂಜಾಬ್-ಹರಿಯಾಣ ರೈತರು ರಾಜಧಾನಿಗೆ ಲಗ್ಗೆ ಹಾಕಿ, ಇದೀಗ ದೆಹಲಿಯ ಹೊರವಲಯದಲ್ಲಿ ಬೀಡು ಬಿಟ್ಟಿದ್ದಾರೆ. ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ.

ಹಾಗಾದರೆ ಇದು ಕೇವಲ ಪಂಜಾಬ್ ಮತ್ತು ಹರಿಯಾಣ ರೈತರ ಹೋರಾಟವೇ? ಈ ಹೋರಾಟಕ್ಕೆ ಬೇರೆ ರಾಜ್ಯದ ರೈತರ ಬೆಂಬಲ ಇಲ್ಲವೇ? ಎಂಬುದು ಪ್ರಶ್ನೆ. ಅಸಲಿಗೆ ಕೊರೋನಾ ಕಾರಣಕ್ಕೆ ದೇಶದ ನಾನಾ ಮೂಲೆಗಳಿಂದ ದೆಹಲಿಗೆ ತೆರಳಲಾಗದ ರೈತರು ತಮ್ಮ ರಾಜ್ಯದಲ್ಲೇ ಹಲವೆಡೆ ಉಗ್ರ ಹೋರಾಟಗಳನ್ನು ನಡೆಸುತ್ತಲೇ ಇದ್ದಾರೆ. ಆದರೆ, ಇದು ಕೇವಲ ಪಂಜಾಬ್ ಹರಿಯಾಣ ರೈತರ ಹೋರಾಟವಷ್ಟೇ ಹೊರತು, ಇಡೀ ಭಾರತದ ಹೋರಾಟವಲ್ಲ ಎಂದು ಬಿಂಬಿಸುವಲ್ಲಿ ನಮ್ಮ ದೇಶದ ಮುಖ್ಯವಾಹಿನಿ ಮಾಧ್ಯಮಗಳು ಸಾಕಷ್ಟು ಶ್ರಮವಹಿಸಿವೆ. ಇದು ಮಾಧ್ಯಮಗಳು ರೈತರಿಗೆ ಎಸಗಿದ ದ್ರೋಹ ಎನ್ನಲು ಅಡ್ಡಿಯಿಲ್ಲ.

ಕೃಪೆ : mass media foundation, Delhi

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending