Connect with us

ಕ್ರೀಡೆ

ಇಂದಿನಿಂದ ‘ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಮ್’

Published

on

ಸುದ್ದಿದಿನ, ನ್ಯೂಯಾರ್ಕ್: ಸೋಮವಾರ ದಿಂದ ಇಲ್ಲಿನ ಬಿಲ್ಲಿ ಜೀನ್ ಕಿಂಗ್ ರಾಷ್ಟ್ರೀಯ ಟೆನಿಸ್ ಸೆಂಟರ್ ನಲ್ಲಿ ಈ ವರ್ಷಾಂತ್ಯದ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಟೆನಿಸ್ ಟೂರ್ನಿ ನಡೆಯಲಿದೆ.

ಪುರುಷರ ವಿಭಾಗದಲ್ಲಿ ಸರ್ಬಿಯಾದ ನೊವಾಕ್ ಜೋಕೊವಿಚ್, ಕ್ಲೇ ಕೋರ್ಟ್ ಕಿಂಗ್ ಸ್ಪೇನ್ ನ ರಾಫೆಲ್ ನಡಾಲ್, ಸ್ವಿಜರ್ ಲೆಂಡ್ ನ ರೋಜರ್ ಫೆಡರರ್ ಮತ್ತು ಬ್ರಿಟನ್ನಿನ ಆ್ಯಂಡಿ ಮರ್ರೆ ಪ್ರಮುಖ ಆಟಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸ್ಪೇನ್ ಗೂಳಿ ರಾಫಾ-ಜೋಕೊಗೆ ನೇರ ಫೈಟ್

ಕ್ಲೇ ಕೋರ್ಟ್ ಕಿಂಗ್ ಎನಿಸಿರುವ ರಾಫೆಲ್ ನಡಾಲ್ ಮತ್ತು ಸರ್ಬಿಯಾದ ನೊವಾಕ್ ಜೋಕೊವಿಚ್ ಗೆ ಯುಎಸ್ ಓಪನ್‌ನಲ್ಲಿ ನೇರ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.

ಫ್ರೆಂಚ್ ಓಪನ್ ಗೆದ್ದಿದ್ದ ನಡಾಲ್ ಈಗ ಯುಎಸ್ ಓಪನ್‌ನಲ್ಲಿ ಅದೇ ಪ್ರದರ್ಶನದ ಉತ್ಸಾಹಲ್ಲಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಪ್ರಭಾವಿ ಪ್ರದರ್ಶನ ದಿಂದ ಗಮನ ಸೆಳೆಯುತ್ತಿರುವ ಜೋಕೊ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದಾರೆ. ಇತ್ತೀಚೆಗಷ್ಟೇ ಜೋಕೊ, ಸಿನ್ಸಿನಾಟಿ ಟೆನಿಸ್ ಟೂರ್ನಿಯ ಫೈನಲ್ ನಲ್ಲಿ ಸ್ವಿಸ್ ನ ಫೆಡರರ್ ಎದುರು ಗೆಲುವು ಸಾಧಿಸಿ ಟ್ರೋಫಿ ಜಯಿಸಿದ್ದರು. ಅಲ್ಲದೇ ವಿಂಬಲ್ಡನ್ ಕೂಡ ಜೋಕೊ ಮುಡಿಗೇರಿಸಿಕೊಂಡಿದ್ದರು. ಇದೀಗ ಯುಎಸ್ ಓಪನ್ ಜಯಿಸುವ ಮೂಲಕ ಮತ್ತೆ ಅಗ್ರ ಶ್ರೇಯಾಂಕ ಪಡೆಯುವ ಇರಾದೆ ಜೋಕೊ ಅವರದ್ದಾಗಿದೆ.

ಪ್ರಮುಖ ಟೂರ್ನಿಯ ನಿರ್ಣಾಯಕ ಸುತ್ತಿನಲ್ಲಿ ಸೋಲುತ್ತಿರುವ ಫೆಡರರ್ ಗೆ ಟೆನಿಸ್ ನಿಂದ ನಿವೃತ್ತಿ ಪಡೆಯುವಂತೆ ಅಭಿಮಾನಿಗಳು ಸಲಹೆ ನೀಡಿದ್ದಾರೆ. ಆದರೆ ಫೆಡರರ್ ಯುಎಸ್ ಓಪನ್ ಗೆಲ್ಲುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಲು ಕಾಯುತ್ತಿದ್ದಾರೆ‌.

ಕಳೆದ ಜನವರಿಯಿಂದ ಇಲ್ಲಿಯವರೆಗೂ ಟೆನಿಸ್ ನಿಂದ ದೂರ ಉಳಿದಿರುವ ಆ್ಯಂಡಿ ಮರ್ರೆಗೆ ಇದು ಈ ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಆಗಿದೆ. ಹಾಗೆ ಕಳೆದ 8 ತಿಂಗಳಿಂದ ಗಾಯದ ಸಮಸ್ಯೆಯಿಂದ ದೂರ ಉಳಿದಿದ್ದ ಸ್ಟಾನಿಸ್ಲಸ್ ವಾವ್ರಿಂಕಾ ಕೂಡಾ ಈ ಬಾರಿಯ ಯುಎಸ್ ಓಪನ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೂ ಮಹಿಳಾ ವಿಭಾಗದಲ್ಲಿ ಸೆರೆನಾ ವಿಲಿಯಮ್ಸ್, ಸಿಮೊನಾ ಹಾಲೆಪ್, ಮರಿಯಾ ಶರಪೋವಾ, ಕರೋಲಿನಾ ವೋಜ್ನಿಯಾಕಿ, ಪ್ಲಿಸ್ಕೋವಾ, ಹಾಲಿ ಚಾಂಪಿಯನ್ ಅಮೆರಿಕದ ಸ್ಲೋನೆ ಸ್ಟೆಫನ್ಸ್ ಪ್ರಶಸ್ತಿ ರೇಸ್ ನಲ್ಲಿ ದ್ದಾರೆ.

ಈ ಬಾರಿ ಎಲ್ಲರ ಕಣ್ಣು ಸೆರೆನಾ ಮೇಲೆ ನೆಟ್ಟಿದೆ. ಏಕೆಂದರೆ ಸೆರೆನಾ ತಾಯಿಯಾದ ಬಳಿಕ 2 ನೇ ಗ್ರ್ಯಾಂಡ್ ಸ್ಲಾಮ್ ನಲ್ಲಿ ಆಡುತ್ತಿದ್ದಾರೆ. ಅಲ್ಲದೇ 6 ಬಾರಿ ಯುಎಸ್ ಓಪನ್ ಗೆದ್ದಿರುವ ಸೆರೆನಾ 7 ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. ಈ ಅಂಗಣದಲ್ಲಿ ಸೆರೆನಾ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. 23 ಗ್ರ್ಯಾಂಡ್ ಸ್ಲಾಮ್ ಗೆದ್ದಿರುವ ಸೆರೆನಾ ಈ ಬಾರಿ ಯುಎಸ್ ಓಪನ್ ಚಾಂಪಿಯನ್ ಆದರೆ, ದಾಖಲೆ ಗ್ರ್ಯಾಂಡ್ ಸ್ಲಾಮ್ ಗೆದ್ದ ಆಟಗಾರ್ತಿ ಎನಿಸಲಿದ್ದಾರೆ.

ಕ್ರೀಡೆ

ಖೇಲೋ ಇಂಡಿಯಾ ಯೋಜನೆಯಡಿ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಖೇಲೋ ಇಂಡಿಯಾ ಯೋಜನೆಯಡಿ ರಾಜ್ಯ ಉತ್ಕøಷ್ಟತಾ ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇಲೆ ಸ್ಪೋಟ್ರ್ಸ್ ಮಸ್ಸರ್, ಸ್ಪೋಟ್ರ್ಸ್ ನ್ಯೂರ್ಟೀಷಿನಿಸ್ಟ್ಸ್, ಯಂಗ್ ಪ್ರೊಫೆಷನಲ್ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಭಾರತ ಸರ್ಕಾರವು ಖೇಲೋ ಇಂಡಿಯಾ ಯೋಜನೆಯಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಇರುವ ಬೆಂಗಳೂರಿನ ಜಯಪ್ರಕಾಶ ನಾರಾಯಣ್ ರಾಷ್ಟ್ರೀಯ ಯುವ ಕೇಂದ್ರವನ್ನು ರಾಜ್ಯ ಉತ್ಕøಷ್ಟತಾ ಕೇಂದ್ರ ಎಂದು ಘೋಷಿಸಿ ಮಂಜೂರು ಮಾಡಿದ್ದು, ಈ ಕೇಂದ್ರಕ್ಕೆ ಖೇಲೋ ಇಂಡಿಯಾ ನಿಯಮಗಳನುಸಾರ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನಿಸಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ ದಾವಣಗೆರೆ ಇಲ್ಲಿ ಪಡೆದು, ಭರ್ತಿ ಮಾಡಿದ ನಮೂನೆಯನ್ನು ಅ.11 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08192-237480 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ರಾಜಸ್ಥಾನ ರಾಯಲ್ಸ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್‍ಗೆ 24 ಲಕ್ಷ ದಂಡ

Published

on

ಸುದ್ದಿದಿನ,ದುಬೈ: ಐಪಿಎಲ್ ನ ರಾಜಸ್ಥಾನ ರಾಯಲ್ಸ್ ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಅವರಿಗೆ 24 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ಮೇಲೆ ದಂಡವನ್ನು ಹೇರಲಾಗಿದೆ. 2ನೇ ಬಾರಿ ರಾಜಸ್ಥಾನ ತಂಡ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 24 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

ಸಂಜು ಸ್ಯಾಮ್ಸನ್ ಅಲ್ಲದೇ ಆಡಿದ 11 ಮಂದಿ ಆಟಗಾರರಿಗೂ ದಂಡ ವಿಧಿಸಲಾಗಿದೆ. ಪ್ರತಿಯೊಬ್ಬರಿಗೂ 6 ಲಕ್ಷ ಅಥವಾ ಪಂದ್ಯದ ವೈಯಕ್ತಿಕ ಶುಲ್ಕದ ಶೇ.25 ರಷ್ಟನ್ನು ದಂಡವಾಗಿ ಪಾವತಿಸಬೇಕು ಎಂದು ಐಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಕ್ರೀಡಾಪಟುಗಳಿಗೆ ಕೋವಿಡ್ ನಿರೋಧಕ ಲಸಿಕೆ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿರುವ 18 ರಿಂದ 44 ವರ್ಷದೊಳಗಿನ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗೆ ಕೋವಿಡ್-19 ನಿರೋಧಕ ಲಸಿಕೆಯನ್ನು ಆದ್ಯತೆಯ ಮೇರೆಗೆ ಒದಗಿಸಲು ಆದೇಶಿಸಲಾಗಿದ್ದು, ಕ್ರೀಡಾಪಟುಗಳು ಅಗತ್ಯ ದಾಖಲಾತಿಗಳೊಂದಿಗೆ ಜೂ.18 ರೊಳಗಾಗಿ ತಮ್ಮ ಹೆಸರನ್ನು ನೋಂದಾವಣಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಕೋವಿಡ್-19 ನಿರೋಧಕ ಲಸಿಕೆ ಹಾಕಿಸಿಕೊಳ್ಳಬಯಸುವ ಕ್ರೀಡಾಪಟುಗಳು ತಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಕ್ರೀಡಾ ಸಾಧನೆಯ ಪ್ರಮಾಣ ಪತ್ರಗಳೊಂದಿಗೆ ಜೂ.18 ರೊಳಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ಕಚೇರಿಗೆ ಹಾಜರಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಲಸಿಕೆ ನೀಡುವ ದಿನಾಂಕ ಮತ್ತು ಸ್ಥಳವನ್ನು ನಂತರ ತಿಳಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ನಿತ್ಯ ಭವಿಷ್ಯ18 hours ago

ಈ ರಾಶಿಯವರಿಗೆ ಸಿಹಿ ಸುದ್ದಿ ಗುತ್ತಿಗೆ ಆಧಾರಿತ ನೌಕರರಿಗೆ ಖಾಯಂ ಆಗುವ ಸೌಭಾಗ್ಯ! ಗಣಿಗಾರಿಕೆ, ಕಾಂಟ್ರಾಕ್ಟಉದ್ಯಮದಾರರಿಗೆ ವ್ಯಾಪಾರಸ್ಥರಿಗೆ ಉತ್ತಮ ಲಾಭ! ಶುಕ್ರವಾರ ರಾಶಿ ಭವಿಷ್ಯ-ಅಕ್ಟೋಬರ್-22,2021

  ಸೂರ್ಯೋದಯ: 06:09 AM, ಸೂರ್ಯಸ್ತ: 05:56 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಶ್ವಯುಜ ಮಾಸ, ದಕ್ಷಿಣಾಯಣ, ಗ್ರೀಷ್ಮ...

ನಿತ್ಯ ಭವಿಷ್ಯ2 days ago

ಈ ರಾಶಿಯವರು ಇಂದು ಸಂಗಾತಿ ಇಂದ ಪ್ರೀತಿ ಅನುಭವಿಸುವಿರಿ! ಸಹೋದರ ಕಡೆಯಿಂದ ಲಾಭ ಸಿಗುವ ಸಾಧ್ಯತೆ! ಗುಪ್ತ ಶತ್ರುಗಳಿಂದ ನಿಮ್ಮ ವ್ಯವಹಾರಗಳಲ್ಲಿ ತೊಡಕು! ಗುರುವಾರ ರಾಶಿ ಭವಿಷ್ಯ-ಅಕ್ಟೋಬರ್-21,2021

  ಸೂರ್ಯೋದಯ: 06:09 AM, ಸೂರ್ಯಸ್ತ: 05:56 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಶ್ವಯುಜ ಮಾಸ, ದಕ್ಷಿಣಾಯಣ, ಗ್ರೀಷ್ಮ...

ನಿತ್ಯ ಭವಿಷ್ಯ3 days ago

ಈ ರಾಶಿಯವರಿಗೆ ಗುಡ್ ನ್ಯೂಸ್ ಗಂಡ ಹೆಂಡತಿ ಮಧುರ ಕ್ಷಣಕ್ಕಾಗಿ ಕಾಯುತ್ತಿರುವಿರಿ! ಪ್ರೇಮಿಗಳ ಮನದ ಸ್ಮರಣೀಯ ನೆನಪುಗಳ ಕಾದಂಬರಿಯಾಗಿ ಹೊರಹೊಮ್ಮಲಿದೆ! ಬುಧವಾರ ರಾಶಿ ಭವಿಷ್ಯ-ಅಕ್ಟೋಬರ್-20,2021

ಮಹರ್ಷಿ ವಾಲ್ಮೀಕಿ ಜಯಂತಿ ಸೂರ್ಯೋದಯ: 06:09 AM, ಸೂರ್ಯಸ್ತ: 05:57 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಶ್ವಯುಜ ಮಾಸ,...

ನಿತ್ಯ ಭವಿಷ್ಯ4 days ago

ಈ ರಾಶಿಯವರು ಪಿತ್ರಾರ್ಜಿತ ಆಸ್ತಿಗಾಗಿ ಕಿರಿಕಿರಿ! ಇಂದು ನಿಮಗೆ ಅನಿರೀಕ್ಷಿತ ಉಡುಗೊರೆ! ವೈವಾಹಿಕ ಜೀವನ ಸುಖಮಯ! ಶೇರು ಮಾರುಕಟ್ಟೆ ಹೂಡಿಕೆ ಸದ್ಯಕ್ಕೆ ಬೇಡ! ಮಂಗಳವಾರ ರಾಶಿ ಭವಿಷ್ಯ-ಅಕ್ಟೋಬರ್-19,2021

  ಪೂಜಾ,ಶರದ ಪೂರ್ಣಿಮಾ ಸೂರ್ಯೋದಯ: 06:09 AM, ಸೂರ್ಯಾಸ್: 05:57 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಶ್ವಯುಜ ಮಾಸ,...

ನಿತ್ಯ ಭವಿಷ್ಯ5 days ago

ಈ ರಾಶಿಯವರಿಗೆ ಸಂಗಾತಿಯು ಬಯಸದೆ ಬಳಿಗೆ ಬರುವರು! ಈ ರಾಶಿಯವರು ತಮ್ಮ ಚಾಣಕ್ಷತನದಿಂದ ಪದವಿ ಪಡೆಯುವಿರಿ! ಈ ರಾಶಿಯವರ ಕಂಕಣಬಲ ಸಂಭವ! ಸೋಮವಾರ ರಾಶಿ ಭವಿಷ್ಯ-ಅಕ್ಟೋಬರ್-18,2021

ಸೂರ್ಯೋದಯ: 06:08 AM, ಸೂರ್ಯಸ್ತ: 05:58 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಶ್ವಯುಜ ಮಾಸ, ದಕ್ಷಿಣಾಯಣ, ಗ್ರೀಷ್ಮ ಋತು,...

ನಿತ್ಯ ಭವಿಷ್ಯ6 days ago

ಈ ರಾಶಿಯವರಿಗೆ ವಿಚ್ಛೇದನ ಸಾಧ್ಯತೆ! ಕುಟುಂಬದಲ್ಲಿಯೇ ವೈರಾಗ್ಯ ಎದುರಿಸುವಿರಿ! ಸಾಕಷ್ಟು ಪ್ರಯತ್ನದ ನಂತರ ಜಯ ಪಡೆಯಲಿದ್ದೀರಿ! ಭಾನುವಾರ-ಅಕ್ಟೋಬರ್-17,2021

  ತುಲಾ ಸಂಕ್ರಾಂತಿ ಸೂರ್ಯೋದಯ: 06:08 AM, ಸೂರ್ಯಾಸ್: 05:58 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಶ್ವಯುಜ ಮಾಸ,...

ನಿತ್ಯ ಭವಿಷ್ಯ7 days ago

ಈ ರಾಶಿಯವರಿಗೆ ಸಿಹಿ ಸುದ್ದಿ ಇನ್ಮುಂದೆ ಕಂಕಣಬಲ, ಸಂತಾನ, ವ್ಯಾಪಾರ ವೃದ್ಧಿ ,ವಿದೇಶ ಪ್ರಯಾಣ ಶೀಘ್ರ ಪ್ರಾಪ್ತಿರಸ್ತು! ಶನಿವಾರ ರಾಶಿ ಭವಿಷ್ಯ-ಅಕ್ಟೋಬರ್-16,2021

  ಪಾಶಾಂಕುಶಾ ಏಕಾದಶಿ ಸೂರ್ಯೋದಯ: 06:08 AM, ಸೂರ್ಯಸ್ತ: 05:59 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಶ್ವಯುಜ ಮಾಸ,...

ನಿತ್ಯ ಭವಿಷ್ಯ1 week ago

ಈ 12 ರಾಶಿಯವರ ಇಷ್ಟಪಟ್ಟವರ ಜೊತೆ ಮದುವೆ, ಯತ್ನಿಸಿದ ಕಾರ್ಯ ಸಫಲವಾಗಲು, ಹೊಸ ಉದ್ಯಮ ಪ್ರಾರಂಭ,ಶುಕ್ರವಾರ ರಾಶಿ ಭವಿಷ್ಯ-ಅಕ್ಟೋಬರ್-15,2021

  *ದಸರಾ , ವಿಜಯದಶಮಿ* ಸೂರ್ಯೋದಯ: 06:08 AM, ಸೂರ್ಯಸ್ತ: 05:59 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಶ್ವಯುಜ...

ರಾಜಕೀಯ1 week ago

ಕೇಂದ್ರ ಸರ್ಕಾರ: ನೈತಿಕ ಜವಾಬ್ದಾರಿ ಹೊತ್ತ ರಾಜೀನಾಮೆಗಳ ಸುತ್ತಮುತ್ತ..!

ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು ಆಗಸ್ಟ್ 1956ರಲ್ಲಿ ಆಂಧ್ರ ಪ್ರದೇಶದ ಮೆಹಬೂಬ್ ನಗರದಲ್ಲಿ ದೊಡ್ಡ ರೈಲು ಅಪಘಾತ ಜರುಗುತ್ತದೆ. 112 ಪ್ರಯಾಣಿಕರು ಅಸುನೀಗುತ್ತಾರೆ. ನೈತಿಕ ಜವಾಬ್ದಾರಿಯನ್ನು...

ನಿತ್ಯ ಭವಿಷ್ಯ1 week ago

ಗುರುವಾರ ರಾಶಿ ಭವಿಷ್ಯ-ಅಕ್ಟೋಬರ್-14,2021

ಇಂದಿನ ದಿನಾಂಕದ ಪಂಚಾಂಗ ಅನುಸಾರ ವೃಷಭ ರಾಶಿಯಲ್ಲಿ ರಾಹು ಇರುವನು, ಕನ್ಯಾ ರಾಶಿಯಲ್ಲಿ ಬುಧ ಮತ್ತು ಕುಜ ಇರುವರು, ವೃಶ್ಚಿಕ ರಾಶಿಯಲ್ಲಿ ಕೇತು ಮತ್ತು ಶುಕ್ರ ಇದ್ದಾರೆ,...

Trending