ಭಾವ ಭೈರಾಗಿ
ಕ್ರಾಂತಿ ಪಕ್ಕದ ಮನೆಯಲ್ಲಾದರೆ ಮಾತ್ರ ಚೆಂದ

ಇದು ಸಾಮಾನ್ಯವಾಗಿ ಬಹುತೇಕರಿಗೆ ಇರುವಂತಹಾ ಖಾಯಿಲೆ. ಬದಲಾವಣೆ ಎಂದರೆ ಎಲ್ಲರಿಗೂ ಇಷ್ಟ. ಹೌದು ಜಗತ್ತು ಬದಲಾಗಬೇಕು. ಸಮಾಜದ ಉದ್ದಾರ ಮಾಡಲು ಮಹಾತ್ಮರು ಜನ್ಮತಾಳಬೇಕು. ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಮುಂದಿನ ಪೀಳಿಗೆಗಾಗಿ ಏನಾದರೂ ಕೊಡಬಲ್ಲ ಧೀಮಂತ ವ್ಯಕ್ತಿಗಳು ನಮಗೆ ಅವಶ್ಯವಾಗಿ ಬೇಕು. ಮತ್ತೊಮ್ಮೆ ನಮ್ಮ ದೇಶದಲ್ಲಿ ಗಾಂಧಿ, ಅಂಬೇಡ್ಕರ್ ಹುಟ್ಟಬೇಕು. ಬುದ್ದ ಬಸವರು ಜನ್ಮತಾಳಬೇಕು. ಮದರ್ ಥೆರೆಸಾರಂತೆ ಸಮಾಜಕ್ಕಾಗಿ ಬದುಕುವವರು ಬೇಕು. ವಿವೇಕಾನಂದರಂತೆ ದೇಶದ, ಸಮಾಜದ ಉದ್ದಾರಕ್ಕಾಗಿ ಸರ್ವಸ್ವವನ್ನೂ ನೀಬಲ್ಲವರು ಬೇಕು. ಇವರೆಲ್ಲ ಮತ್ತೆ ಮತ್ತೆ ಹುಟ್ಟಿಬರಬೇಕು ಆದರೆ ನಮ್ಮ ಮನೆಯಲ್ಲಲ್ಲ, ಪಕ್ಕದ ಮನೆಯಲ್ಲೋ ಅಥವಾ ಮತ್ಯಾರದೋ ಮನೆಯಲ್ಲಿ ಹುಟ್ಟಿಬಂದರೆ ಒಳಿತು.
ಇದು ನಮ್ಮ ತಪ್ಪಲ್ಲ ಬಿಡಿ ನಮ್ಮಲ್ಲಿ ಬಹುತೇಕರು ಬೆಳೆದು ಬಂದ ವಾತಾವರಣವೇ ಹಾಗಿರುತ್ತದೆ. ಹೆಚ್ಚಿನ ತಂದೆ ತಾಯಿಗಳು ಮಕ್ಕಳಿಗೆ ಹೇಳಿಕೊಟ್ಟಿರುವ ಒಂದೇ ಪಾಠವೆಂದರೆ ಊರಿನ ಉಸಾಬರಿ ನಿನಗ್ಯಾಕಪ್ಪ, ಊರ ದನಾ ಕಾಯ್ದು ದೊಡ್ಡ ಬೋರಾ ಎನಿಸಿಕೊಳ್ಳೋದು ಬೇಡ ಸುಮ್ಮನಿರು. ಯಾಕಂದ್ರೆ ಅವರಪ್ಪ ಅಮ್ಮ ಅವರಿಗೆ ಹೇಳಿಕೊಟ್ಟಿರುವುದೂ ಇದನ್ನೇ ಅಲ್ವಾ,,, ಹಾಗಾದರೆ ಹೀಗೆ ಹೇಳಿಕೊಟ್ಟವರೆಲ್ಲ ಕೆಟ್ಟವರಾ ಅಂದರೆ ಅಲ್ಲ. ಅದು ಅವರವರ ವ್ಯಾಪ್ತಿಗೆ ಸಂಬಂದಿಸಿದ ವಿಷಯ. ಒಂದು ಪುಟ್ಟ ಹಳ್ಳಿಯಲ್ಲಿ ಎಲೆಮರೆ ಕಾಯಿಯಂತೆ ಬದುಕಿದ ಅವ್ವ ಅಪ್ಪನಿಗೆ ನಾವು ಇದುವರೆಗೂ ನಾಲ್ಕುಜನರ ಬಾಯಿಗೆ ಸಿಕ್ಕಿಲ್ಲ. ಯಾರೂ ನಮ್ಮ ಬಗ್ಗೆ ಬೆರಳು ಮಾಡಿ ತೋರಿಸಿಲ್ಲ ಎಂಬುದೇ ಹೆಗ್ಗಳಿಕೆಯಾಗಿರುತ್ತದೆ. ಅದು ಅವರ ತಪ್ಪೂ ಅಲ್ಲ. ಆದರೆ ಅವರು ಹೇಳಿದಂತೆಯೇ ಬೆಳದ ಮಗು ಯಾರನ್ನೂ ಪ್ರಶ್ನಿಸುವುದು ಅಸಾಧ್ಯ. ಅದು ತನ್ನನ್ನು ತಾನು ಬಂಧಿಸಿಕೊಂಡುಬಿಡುತ್ತದೆ. ಮತ್ತೊಂದು ರೀತಿಯ ತಂದೆ ತಾಯಂದಿರಿದ್ದಾರೆ ಅವರು ಮಕ್ಕಳು ಹುಟ್ಟಿರುವುದೇ ಕೆಲಸ ಪಡೆದು ಹಣ ಗಳಿಸುವುದಕ್ಕೆ ಎಂದು ನಂಬಿರುತ್ತಾರೆ, ತಮ್ಮ ಮಕ್ಕಳಿಗೂ ಅದನ್ನೇ ತುಂಬುತ್ತಾರೆ. ನೀನು ಮನುಷ್ಯನಾಗಬೇಕು , ನಾಲ್ಕು ಜನರ ಬದುಕಿಗೆ ದಾರಿದೀಪವಾಗಬೇಕು ಸಂತನಾಗಬೇಕು, ತತ್ವಜ್ನಾನಿಯಾಗಬೇಕು, ನೂರುಜನರಿಗೆ ಕೆಲಸ ನೀಡುವವನಾಗಬೇಕು, ಸಮಾಜ ಸುಧಾರಕನಾಗಬೇಕು, ಸಂಗೀತಗಾರನಾಗಬೇಕು, ನೃತ್ಯಪಟು,ನಾಟಕಕಾರ, ಕಲಾವಿದನಾಗಬೇಕು ಎಂದು ಹೇಳಿರುವ ತಾಯಂದಿರು ವಿರಳಾತಿವಿರಳವೇ ಸರಿ.
ನನ್ನ ಎರಡು ವರ್ಷದ ಮಗನಿಗೆ ಮೊಬೈಲ್ ನಲ್ಲಿ ಎ ಟು ಝೆಡ್ ಗೊತ್ತು. ಆರನೇಕ್ಲಾಸಿನ ನನ್ನ ಮಗ ಈಗಲೇ ಬೈಕ್ ಕೇಳ್ತಾನೆ. ಯಾಕೆ ಕೇಳ್ತೀರಾ ಸಾರ್ ಎಲ್ಲದರಲ್ಲೂ ನೈಂಟಿ ಸ್ಕೋರ್ ಮಾಡ್ತಾನೆ ಅಂತೆಲ್ಲ ಸಂತಸ ಪಡುವ ಹೆತ್ತವರು ಮಗ ಸಮಾಜದ ಬಗ್ಗೆ ಚಿಂತೆ ಮಾಡ್ತಾನೆ. ದೊಡ್ಡವರ ಬಗ್ಗೆ ಕೇಳಿ ತಿಳಿದುಕೊಳ್ತಾನೆ, ಓದಿನ ಆಚೆಗೂ ಯಾವುದರಲ್ಲೋ ಆಸಕ್ತಿ ಹೊಂದಿದ್ದಾನೆ ಅನ್ನೋ ಯಾವ ಹೆಮ್ಮೆಯೂ ಹೆಮ್ಮೆ ಪಡಲ್ಲ. ಇಂಥವರ ಕೈಲಿ ಬೆಳದ ಮಗು ಗುಮಾಸ್ತನೋ, ಸಂಬಳಕ್ಕೆ ಕಾಯುವ ಉದ್ಯೋಗಿಯೋ ಆಗುವುದು ಬಿಟ್ಟು ಮತ್ತೇನಾಗಲು ಸಾಧ್ಯ.
ಹಾಗಾದರೆ ಗುಮಾಸ್ತನಾಗುವುದು ಅಪರಾಧವೇ,,, ಖಂಡಿತ ಅಲ್ಲ. ಅದು ಜೀವನ ನಿರ್ವಹಣೆಗಾಗಿ ಮಾಡುವ ಒಂದು ಕಾಯಕ ಅಷ್ಟೆ , ಆದರೆ ಅದರಿಂದಾಚೆಗೂ ನಮಗೊಂದು ವ್ಯಕ್ತಿತ್ವವಿರುತ್ತದೆ, ಅದರಿಂದ ನಮ್ಮನ್ನು ಗುರುತಿಸುವಂತಾಗಬೇಕು . ನಾಳೆ ನಮ್ಮ ಮಗು ಅದರ ಉದ್ಯೋಗದಿಂದ ಅಷ್ಟೇ ಅಲ್ಲದೇ ಅದರಿಂದಾಚೆಗೂ ಏನಾದರೂ ಸಾಧಿಸಬೇಕು ಎಂದು ಹೆತ್ತವರು ಕನಸುಕಾಣುವಂತಾಗಬೇಕು. ಮೌಲ್ಯಯುತ ವ್ಯಕ್ತಿಯಾಗಲು ಸಹಕಾರಿಯಾಗುವಂತೆ ಮಕ್ಕಳಿಗೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಸಿಲಬಸ್ ಬಿಟ್ಟು ಮತ್ತೇನನ್ನು ಓದಿದರೂ ಅಪರಾಧ ಎನ್ನುವ ಶಿಕ್ಷಕರ ಮನೋಭಾವ ಬದಲಾಗಬೇಕಿದೆ.
ಪದೇ ಪದೇ ನನ್ನನ್ನು ಕಾಡುವ ಒಂದು ಪ್ರಶ್ನೆ ಎಂದರೆ ಜಗತ್ತಿನ ಎಲ್ಲ ಸಾಧಕರ ಬಗ್ಗೆಯೂ ನಾವು ಪಠ್ಯಪುಸ್ತಕದಲ್ಲಿ ಹೇಳಲು ಸಾಧ್ಯವಿಲ್ಲ ಅಂದ ಮಾತ್ರಕ್ಕೆ ಅವರ ಅಪಾರವಾದ ಸಾಧನೆ ನಮ್ಮ ಮಕ್ಕಳಿಗೆ ತಲುಪಲೇ ಬಾರದಾ? ಪಠ್ಯದಲ್ಲಿ ಸೇರಿಸಲಾಗದ ಅದೆಷ್ಟೋ ಮೌಲ್ಯಗಳು ಜೀವನಕ್ಕೆ ಅತ್ಯವಶ್ಯಕವಾಗಿವೆ, ಅವುಗಳನ್ನು ಮಕ್ಕಳು ತಿಳಿಯುವುದಾದರೂ ಹೇಗೆ. ಬೇಂದ್ರೆ ಬರೆದ ಒಂದೆರಡು ಪದ್ಯಗಳಷ್ಟೇ ಪಠ್ಯದಲ್ಲಿರಬಹುದು ಉಳಿದ ಸಾವಿರಾರು ಕವಿತೆಗಳು ಯಾರಿಗಾಗಿ? ಕುವೆಂಪು ಬರೆದ ಸಾವಿರ ಸಾವಿರ ಮೌಲ್ಯಗಳು ಜೀವನ ಸಂದೇಶಗಳು ಯಾರಿಗಾಗಿ? ಇದೆಲ್ಲವನ್ನೂ ನಮ್ಮ ಶಿಕ್ಷಕ ಮಿತ್ರರು ಅರ್ಥ ಮಾಡಿಕೊಳ್ಳಬೇಕು. ಎಲ್ಲೋ ಯಾರೋ ಸಾಧಿಸಿದ್ದನ್ನು ನೋಡಿ ಮಕ್ಕಳಿಗೆ ತೋರಿಸುವುದಕ್ಕಿಂತ ಅವರನ್ನೇ ಸಾಧಕರನ್ನಾಗಿ ಮಾಡುವತ್ತ ಗಮನ ಹರಿಸಬೇಕು. ಮಕ್ಕಳ ಅಂತರಾತ್ಮದ ತಲೆಗೆ ಹೊಡೆದು ಕೂರಿಸುವುದಕ್ಕಿಂತ ಅವರ ಇಷ್ಟದ ಕ್ಷೇತ್ರದಲ್ಲಿ ಅವರನ್ನು ಬೆಳೆಯಲು ಬಿಡಬೇಕು. ಉತ್ತಮರಾರನ್ನೋ ಹುಡುಕುವ ಬದಲು ನಾವೇ ಉತ್ತಮರಾಗಲು ಪ್ರಯತ್ನಿಸಬೇಕು.

ಭಾವ ಭೈರಾಗಿ
ಕವಿತೆ | ಕಾಮಧೇನು

- ಎಚ್.ಎಸ್. ಬಿಳಿಗಿರಿ
ನಿನ್ನ ಕಣ್ಣಲಿ ಮಿಂಚು, ನನ್ನ ಎದೆಯಲಿ ಸಿಡಿಲು!
ನಿನ್ನ ತುಟಿಯೊಳು ರೋಜ, ನನ್ನ ಎದೆಯಲಿ ಮುಳ್ಳು! ನಿನ್ನೆದೆಯೊಳಮೃತಪೂರಿತ ಕುಂಭ-ಅದ ಕಳ್ಳು
ನನಗೆ; ಕಣ್ಣಿಗೆ ತಂಪು, ಎದೆಗೂ ಉರಿ ಭುಗಿಭುಗಿಲು! ನಿನಗಿದೆಯೆ ತುಂಬಿದೆದೆ, ನನ್ನ ಎದೆಯೋ ತೆರವು!
ನಿನ್ನ ತನುವಿನ ಏರುತಗ್ಗುಗಳ ದಾರಿಯಲಿ
ಸುತ್ತಿ ಕುಲುಕಾಡಿ ಅತ್ತಿತ್ತ ತೇಂಕಾಡುತಲಿ
ಬಿದ್ದು ನೂರಾರು ಚೂರಗಳಾಯ್ತು ಮನ-ರಥವು!
ಬರಿ ಬೂದಿಗುರಿನೆನಪು ಕೆರಳಿ ಕಾಡಿದೆಯೇನು?
ಗೊದ್ದಗಳ ಗೂಡುಗಳ ಹೀರುತ್ತಿರುವುದೂ ಕರಡಿ?
ಎల్ల ಸೋಸುತ ಕಾಮವೊಂದ ನಿಲಿಸುವ ಜರಡಿ?
ಮಗುಚಿ ಕೆಳಗಡೆ ಬೀಳುತ್ತಿದೆಯೋ ಏರೋಪ್ಲೇನು?
ಎದೆಯ ತಲೆಗೂದಲೋಳು ಪಿಚಪಿಚನೆ ಹರಿವ ಹೇನು? ಗಡಿಗೆಗೆಚ್ಚಲ ಸೋರವ ಬಿಟ್ಟಿತೋ ಕಾಮ-ಧೇನು
(‘ಕಾಮಧೇನು’ ಕವಿತೆ ಕನ್ನಡದ ಸಾನೆಟ್ ಅಥವಾ ಸುನೀತ)
‘ಸಾನೆಟ್’ ಒಂದು ಟಿಪ್ಪಣಿ
ಕವಿತೆಯ ಈ ನಿರ್ದಿಷ್ಟ ಸ್ವರೂಪವು 13 ನೇ ಶತಮಾನದಲ್ಲಿ ಇಟಲಿಯಲ್ಲಿ ಹುಟ್ಟಿಕೊಂಡಿತು. ತನ್ನ 15 ಸಾನೆಟ್, ಮತ್ತು ನಂತರದ ಮುಖ್ಯ ಥೀಮ್ ಮತ್ತು ಇತರ ಹದಿನಾಲ್ಕನೇ ಕಲ್ಪನೆ. ಈ ಕಾರಣಕ್ಕಾಗಿ, ನಾವು ಕೊನೆಯಲ್ಲಿ ಕೆಲಸ ಪ್ರಾರಂಭಿಸಿದ್ದಾರೆ.
ಹದಿನೈದನೇ ಸುನೀತ ಪ್ರಮುಖ ಮೊದಲ ಎರಡು ಪ್ಯಾರಾಗಳನ್ನು, ಮತ್ತು ಸಂಪ್ರದಾಯದ ಪ್ರಕಾರ, ಮೊದಲ ಸುನೀತ ಅಗತ್ಯವಾಗಿ ಮೊದಲ ಸಾಲಿನ ಆರಂಭಿಸಲು ಮತ್ತು ಕೊನೆಯ ಎರಡನೇ ಕೊನೆಗೊಳ್ಳಬೇಕು. ಕಡಿಮೆ ಕುತೂಹಲಕಾರಿ ಕೆಲಸವಿತ್ತು-ಪದ್ಯ ಇತರ ಭಾಗಗಳು. ಹಿಂದಿನ ಇತರ ಹದಿಮೂರು ಸಾನೆಟ್ ಕೊನೆಯ ಸಾಲು ಅಗತ್ಯವಾಗಿ ಮುಂದಿನ ಮೊದಲ ಸಾಲು ಇರಬೇಕು.
ವಿಶ್ವದ ಸಾಹಿತ್ಯ ಇತಿಹಾಸದಲ್ಲೇ ರಷ್ಯಾದ ಕವಿಗಳ ಹೆಸರುಗಳು Vyacheslava Ivanova ಎಂದು ಮತ್ತು ವಾಲೆರಿ ಬ್ರ್ಯುಸೋವ್ ನೆನಪಿಡುವ. ಅವರು ಸಂಪೂರ್ಣವಾಗಿ ಏನು ಒಂದು ಸುನೀತ, ಆದ್ದರಿಂದ ಸಾನೆಟ್ ಕಿರೀಟ ಆಸಕ್ತಿಯನ್ನು ತೋರಿಸಲು ಗೊತ್ತು. ರಶಿಯಾದಲ್ಲಿ ಬರವಣಿಗೆಯ ಈ ಫಾರ್ಮ್ 18 ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಜೀನಿಯಸ್ ವ್ಯಾಲೇರಿಯ್ ಬ್ರ್ಯುಸೋವ್ ಈ ಪ್ರಕಾರದ ಬೋಧಕರಾಗಿದ್ದಾರೆ, ಮತ್ತು ಸ್ಥಾಪಿತ ಅಡಿಪಾಯ ಪಾಲಿಸಬೇಕೆಂದು. ಸಾನೆಟ್ ಮಾಲೆಯ ಇವರ ಕೊನೆಯ ಪದ್ಯ ( “ಡೂಮ್ ಸರಣಿ”) ಸಾಲುಗಳನ್ನು ಆರಂಭವಾಗುತ್ತದೆ:
“ಹದಿನಾಲ್ಕು ಅಗತ್ಯ ಹೇಳಿ
ಜೀವಂತವಾಗಿ ನೆಚ್ಚಿನ ನೆನಪುಗಳ ಹೆಸರುಗಳು! ”
ನೀವು ಸಂಯೋಜನೆಯ ಪ್ರಕಾರಕ್ಕೆ ಸ್ವಲ್ಪ ವಿಶ್ಲೇಷಣೆ ಖರ್ಚು ಮಾಡಬೇಕಾಗುತ್ತದೆ ಹೆಚ್ಚು ಅರ್ಥವಾಗುವ ಆಗಿತ್ತು. ಸಂಪ್ರದಾಯದಂತೆ ಮೊದಲ ಸುನೀತ ಅಂತಿಮ ನುಡಿಯು ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ – ಎರಡನೇ; ಮೂರನೇ ಸುನೀತ ಹಿಂದಿನದರ ಕೊನೆಯ ಸಾಲು, ಈ ಸಂದರ್ಭದಲ್ಲಿ ಪ್ರಾರಂಭವಾಗುತ್ತದೆ – “! ಜೀವಂತವಾಗಿ ನೆಚ್ಚಿನ ನೆನಪುಗಳ ಹೆಸರುಗಳು” ಇದು ವ್ಯಾಲೇರಿಯ್ ಬ್ರ್ಯುಸೋವ್ ಈ ಪ್ರಕಾರದಲ್ಲಿ ಪರಿಪೂರ್ಣತೆ ತಲುಪಿದ ವಾದ ಮಾಡಬಹುದು. ಇಲ್ಲಿಯವರೆಗೆ, 150 ಸಾಹಿತ್ಯ ಎಣಿಕೆ ದಂಡೆಗಳು ರಷ್ಯಾದ ಕವಿಗಳು ಸುನೀತಗಳನ್ನು ಮತ್ತು ಕಾವ್ಯದ ಪ್ರಪಂಚದಲ್ಲಿ ಸುಮಾರು 600 ಇವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಅವಳು

- ವಾಯ್.ಜೆ.ಮಹಿಬೂಬ
ಅವಳು ಬರೀ ಅವಳಲ್ಲ..!
ದಿನ ಬೆಳಗುವ ಬೆಳಕು-!
ಅವ ಬಯಸುವ ಬದುಕು
ಅವನಿಯೊಳಗಣ ಜನನಿ
ಭಾವದೊಳಗಿನ ಬಾಗಿನ
ಭಾನಿನಗಲದ ಭಕ್ತಿ..!
ಅವನ ಬಯಕೆಯ ಶಕ್ತಿ ..!
ಅವಳು ಬರೀ ಅವಳಲ್ಲ..!
ಬಾಳಿಗಂಟಿದ ಸಮತೆ
ಹಿತವನುಣಿಸುವ ಭಕ್ತೆ
ಮಿತವ ಬಯಸುವ ಶಾಂತೆ
ಅವನು ಆರಾದಿಸುವ ದಾತೆ
ಒಲವ ಉಳಿಸುವ ಕ್ಷಮತೆ
ಬಾಳ ದಂಡೆಯ ದೃಡತೆ..!
ಅವಳು ಬರೀ ಅವಳಲ್ಲ..!
ಕೋಪಗೊಳ್ಳುವ ಕೆಂಡ
ಎಲ್ಲಾ ತಿಳಿಯುವ ಹಂಡ
ಹಠವೂ ಮಾಡುವ ದಿಂಬ
ಕಾಡಿ ಕರೆಯುವ ಬೀಗು
ಮಾವಿನೊಳಗಿನ ಮಾಗು
ಚಂದನದ ಚೆಲುವು..!
ಅವಳು ಬರೀ ಅವಳಲ್ಲ
ಬರಹದೊಳಗಿನ ಭಾವ
ದೇವರೊಳಗಿನ ತ್ಯಾಗ
ನಿತ್ಯ ಬದುಕಿಸುವ ಆಸೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕರುಣಾಳು ಅವನು, ಅವನು ನನ್ನವನು..!

- ಸಿಂಚನ ಜಿ. ಏನ್, ಮೈಸೂರು
ಯಾರಿಟ್ಟ ಪ್ರೀತಿಯೋ, ಏನು ಇದರ ರೀತಿಯೋ ಎಂಬ ಮಾತಿನಂತೆ ಪ್ರೀತಿಯ ರೀತಿ -ನೀತಿಗಳ ತಿಳಿಯಲು ಇಡೀ ಬದುಕು ಸಾಲುವುದಿಲ್ಲ. ಆದರೂ ನನ್ನ ಮನದಲ್ಲಿ ಮಿಂಚಿದ ಪ್ರೇಮದ ಮಿಂಚೆ ಒಂದು ರೀತಿಯ ರೋಮಾಂಚನಕಾರಿ ಮೊದ ಮೊದಲಿಗೆ ” ಕ್ರಶ್ ” ಎಂದು ನಾಮಕರಣಗೊಂಡಿದ್ದು ತದ ನಂತರ ಆ ಕ್ರಶ್ ನಾ ಅಲ್ಲಿಗೆ ಬಿಡಲಾರದೆ ಮುಂದಿನ ಪೀಠಿಕೆ ಹಾಕಿ ನನ್ನ ಮನಸ್ಸು ಮುಂದೆ ಓಡುತಿತ್ತು.
ಹೂ ಮನಸ್ಸಿನಲ್ಲಿ ಪ್ರೇಮದ ಅರಮನೆಯ ಕಟ್ಟುವ ಛಲ ನನ್ನದು ಹೀಗಿರುವಾಗ ಸುಮ್ಮನೆ ಇರಲು ಮನಸ್ಸು ಬಿಡಬೇಕಲ್ಲ ಮನಸ್ಸು ನನ್ನನ್ನು ಮೋಸಗಾತಿಯಾಗಿ ಕಾಡುವುದಿಲ್ಲವೇ? ಅಷ್ಟಕ್ಕೂ ಅವನು ನನ್ನವನು ಪ್ರೀತಿ ಮಾಡಿದರು , ಪ್ರೀತಿ ಕೊಟ್ಟರು, ಪ್ರೀತಿ ಬಯಸಿದರು ಅದಕೆಲ್ಲ ಪ್ರತಿಧ್ವನಿ ಬರುತ್ತೆ ಯಾಕೆಂದರೆ ಅವನು ನನ್ನವನು.
ಕಣ್ಣು ತೆರೆದು ಅವನನ್ನು ಕಣ್ಣು ತುಂಬಿಸಿಕೊಳ್ಳುವ ಮುನ್ನವೇ ಮನದೊಳಗೆ ಮನೆ ಮಾಡಿದ ಅವನು ನನ್ನವನು, ಪ್ರೇಮ ಲೋಕವೇ ಹಾಗೆ ಕಲ್ಪನೆಯಲ್ಲಿಯೇ ಅರ್ಧ ಜೀವನ ಕಳೆದು ಬಿಡುತ್ತೆ . ಕಲ್ಪನೆಯ ಲೋಕಕ್ಕಿಂತ ನೈಜ್ಯವಾಗಿಯೇ ನನ್ನನು ಕಾಡಿಸಿ , ಪೀಡಿಸಿ ಪ್ರೀತಿ ಕೊಟ್ಟವನು ಅವನು ನನ್ನವನು, ನನ್ನೆಲ್ಲಾ ಪುಟ್ಟ ಆಸೆ ಈಡೇರಿಸುವ ಅವನು ನನಗೆ ಉತ್ತಮ ಗೆಳೆಯನಾದ.
ನನ್ನ ತುಂಟಾಟ ಸಹಿಸುವಾಗ ತಂದೆಯಾಗಿ ಸಲಹಿದ, ಅವನೆಲ್ಲ ಕಷ್ಟಗಳನ್ನು ಕೇಳುವ ನನ್ನೊಳಗೆ ಒಬ್ಬ ಅಮ್ಮ ಇರುತ್ತಿದ್ದಳು, ಅವನೆಲ್ಲ ದುಃಖಗಳಿಗೆ ಸ್ಪಂದಿಸುವಾಗ ಅವನಿಗೆ ಇಷ್ಟ ಆಗುವ ಗೆಳತಿ ನನ್ನೊಳಗೆ ಇರುತ್ತಿದ್ದಳು ಪ್ರೇಮ ಲೋಕದ ಪಾರಿವಾಳಗಳು ನಾವು , ನಿರ್ಭಯವಾಗಿದೆ ನಮ್ಮ ಲೋಕವು ಅವನು ನನ್ನವನು , ಅವನ ಹಠಕ್ಕೆ ಅವನ ಕೋಪಕ್ಕೆ ನಾನೇ ದೊಡ್ಡ ಅಭಿಮಾನಿ.
ಅವನಂತೆ ನನಗೂ ಮುನಿಸು ಕೂಡಲೇ ನನ್ನ ಮುದ್ದು ಮಗುವಾಗಿ ಬೇಡುತ್ತಿದ್ದನು . ಕಾಳಜಿ ತೋರ್ಪಡಿಸದೆ ಮುಚ್ಚಿಡುತ್ತಿದ್ದನ್ನು ಮನದಲ್ಲಿ, ಹುಡುಕಿಸುವ ಗುಂಗಿನಲ್ಲೆ ಕಾಡಿಸುತ್ತಿದ್ದನ್ನು ಅವನು ಏನೆ ಆಗಲಿ ಅವನು ನನ್ನವನು , ನನಗಾಗಿ ಬಂದವನು , ನನಗಾಗಿಯೆ ಬದುಕುವನು ಮೌನವಾಗಿಯೇ ಕಣ್ಣ ಸನ್ನೆಯಲ್ಲಿ ನನ್ನ ಮುದ್ದಾಡಿ ಮುತ್ತು ಇಡುವವನು.
ಪ್ರೇಮ ಲೋಕದ ಬಣ್ಣ ಬಣ್ಣದ ಬದುಕು ಹೇಳಿಕೊಟ್ಟವನು ನನ್ನ ಪ್ರತಿ ಪದಗಳ ಸ್ಫೂರ್ತಿದಾರನು ಅವನು ನನ್ನವನು ಗುಡ್ ಮಾರ್ನಿಂಗ್ ಸಂದೇಶದಿಂದ ಶುರುವಾಗಿ ಹುಷಾರು ಎಂಬ ಜೋಪಾನದ ತವಕದಲ್ಲಿ ನಿದ್ರೆಗೆ ಕಳುಹಿಸುತ್ತಿದ್ದನು ದಿನಕ್ಕೆರಡು ಬಾರಿ ಆದರೂ, ಕೆರಳಿಸಿ ಜಗಳ ಮಾಡುತ್ತಿದ್ದವನು ಒಂದೆರಡು ಮಾತುಗಳ ಕೆಟ್ಟದಾಗಿ ಆಡದೆ, ಮನ ನೋಯಿಸದೆ ಜೀವನವ ಸಂತೈಸುತ್ತ ನನ್ನೊಂದಿಗೆ ಹೆಜ್ಜೆ ಇಟ್ಟವನು ಅವನು ನನ್ನವನು.
ನನ್ನ ಪ್ರಪಂಚವೇ ಅವನು , ನಮ್ಮ ಲೋಕವೇ ಪುಣ್ಯದ ಪ್ರೇಮ ಲೋಕ , ವಿರಸ ಸರಸಗಳ ಸಮ್ಮಿಲನವೇ ನಮ್ಮ ನೂತನ ಶೈಲಿಯ ಪ್ರೀತಿ ಲವ್ ಯು ಎಂಬ ಪದದ ತಿದ್ದುಪಡಿ ನಮ್ಮಲಿಲ್ಲ ಈ ಪದವನ್ನು ಅರ್ಥೈಸುವ ಬಂಧನ ನಮ್ಮದು .
ಐ ವಾಂಟ್ ಯು ಎಂದು ಬೇಡುವುದಿಲ್ಲ ಬೇಕಾಗಿರುವ ಜೀವನ ಜೀವ ಇಬ್ಬರಿಗೂ ದೊರಕಿವೆ ನನ್ನ ಅದೆಷ್ಟೋ ಪತ್ರಗಳ ಮೀರಿ ಮೆರೆದ ಪದಗಳು ಇವು ಕಾರಣ ಅವನು ನನ್ನವನು.
ಬೈ ಸಿಂಪಲ್ ಸಿಂಚು ಹೂ ಮನಸಿಗರಿಗೆಲ್ಲ ಪ್ರೇಮಿಗಳ ದಿನದ ಶುಭಾಶಯಗಳು ನಿಮ್ಮ ಪ್ರೇಮ ಪಲ್ಲಕ್ಕಿಯಿಂದ ಬಿಡಿಸಿಕೊಂಡು ಪಕ್ಷಿಗಳು ಆದಷ್ಟು ಬೇಗ ಆಕಾಶದಲ್ಲಿ ಹಾರಾಡಿ ಎಂದು ಹಾರೈಸುವೆ… ಶುಭವಾಗಲಿ ಸ್ನೇಹಿತರೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ
-
ದಿನದ ಸುದ್ದಿ6 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ಲೈಫ್ ಸ್ಟೈಲ್6 days ago
ಏನಿದು ? ಗಡಿಮಾರಿ..!
-
ದಿನದ ಸುದ್ದಿ7 days ago
ಚನ್ನಗಿರಿ | ಲಂಚ ಸ್ವೀಕರಿಸಿದ್ದ ಗ್ರಾಮ ಲೆಕ್ಕಾಧಿಕಾರಿಗೆ 2 ವರ್ಷ ಜೈಲು
-
ರಾಜಕೀಯ5 days ago
ಶಾಸಕ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮೂವರು ಎಂ ಎಲ್ ಸಿ ಗಳು ಗೈರು : ಬಿಜೆಪಿಗೆ ಸುಲಭ ಗೆಲುವು
-
ದಿನದ ಸುದ್ದಿ7 days ago
ಉತ್ತರ ಪ್ರದೇಶ ಬಜೆಟ್ 2021-22 | ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2,000 ಕೋಟಿ ಹಣ ; ಉದ್ಯೋಗಾವಕಾಶ ಹೆಚ್ಚಿಸಲು ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ
-
ನೆಲದನಿ6 days ago
ರೈತ ಹೋರಾಟಗಾರ `ಸಹಜಾನಂದ ಸರಸ್ವತಿ’
-
ಬಹಿರಂಗ6 days ago
ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್’