ದಿನದ ಸುದ್ದಿ
ಅತಿ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ: ಬಿಜೆಪಿ ಟೀಕಿಸಿದ ಹೊರಟ್ಟಿ

ಕಲಬುರಗಿ: ಅತಿ ಹೆಚ್ಚು ಊಟ ಮಾಡಿದರೆ ವಾಂತಿ ಆಗುತ್ತದೆ. ಇದು ಬಿಜೆಪಿಗೆ ಬೇಕಾ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಪ್ರಶ್ನಿಸಿದ್ದಾರೆ. ಪಕ್ಷಾಂತರ ಮಾಡುವುದು ಸರಿಯಲ್ಲ. ಆದರೆ ನಮ್ಮವರ ತಪ್ಪಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಗೆ ಹೋಗುವವರಿಗೆ ಈಗ ಅಲ್ಲಿ ಗೌರವ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಒಂದೇ ಅಲ. ಎಲ್ಲ ಪಕ್ಷದಲ್ಲೂ ಈ ಅಸಮಧಾನ ಇದ್ದೆ ಇರುತ್ತದೆ. ಆದರೆ, ಬಿಜೆಪಿಯಲ್ಲಿ ಹೈಕಮಾಂಡ್ ಬಲಿಷ್ಠವಾಗಿರುವುದಕ್ಕೆ ಎಲ್ಲರೂ ಸುಮ್ಮನಿದ್ದಾರೆ. ಕಾಂಗ್ರೆಸ್, ಜೆಡಿಎಸ್’ನಲ್ಲಿ ಹಾಗೆ ಇದ್ದಿದ್ದರೆ ಏನು ಬೇಕಾದರೂ ಆಗಬಹುದಿತ್ತು. ಬೇರೆ ಪಕ್ಷ ಆಗಿದ್ದರೆ ಗಲಾಟೆ ಆಗುತ್ತಿತ್ತು. ಆದರೆ, ಬಿಜೆಪಿಯಲ್ಲಿ ಅನಿವಾರ್ಯವಾಗಿ ಸುಮ್ಮನಿದ್ದಾರೆ. ಕಸ ಹೊಡೆದವರು ಮಂತ್ರಿ ಆಗದೆ ಹೋದರೆ ನೋವು ಆಗುತ್ತದೆ ಎಂದು ಹೇಳಿದ್ದಾರೆ..
ದಿನದ ಸುದ್ದಿ
ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ 25 ರೂ ಹೆಚ್ಚಳ ; ಇತಿಹಾಸದಲ್ಲೇ ಮೊದಲ ಸಲ ಒಂದೇ ತಿಂಗಳಲ್ಲಿ ಮೂರನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆಯಾಗಿದ್ದು..!

ಸುದ್ದಿದಿನ, ನವದೆಹಲಿ : ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಮತ್ತೆ ಪೆಟ್ರೋಲಿಯಂ ಗ್ಯಾಸ್ (ಎಲ್ಪಿಜಿ) ಸಿಲಿಂಡರ್ (14.2 ಕೆಜಿ) ಬೆಲೆಯನ್ನು ಗುರುವಾರದಿಂದ ಪ್ರತಿ ಸಿಲಿಂಡರ್ಗೆ 25 ರೂ.ಗೆ ಹೆಚ್ಚಿಸಿವೆ. ಫೆಬ್ರವರಿ ತಿಂಗಳಲ್ಲೇ ಮೂರನೇ ಸಲ ಬೆಲೆ ಏರಿಸಲಾಗಿದೆ . ಅಡುಗೆ ಅನಿಲ ಸಿಲಿಂಡರ್ಗೆ ಈಗ ದೆಹಲಿಯಲ್ಲಿ 794 ರೂ. ಆಗಿದ್ದು ಫೆಬ್ರವರಿಯಲ್ಲಿ ಒಟ್ಟು ಒಂದು ಸಿಲಿಂಡರ್ಗೆ 100 ರೂ. ಹೆಚ್ಚಾದಂತಾಗಿದೆ.
ಇದಕ್ಕೂ ಮುನ್ನ ಫೆಬ್ರವರಿ-04 -14 ನೇ ತಾರೀಖಿನಂದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿತ್ತು. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಡುಗೆ ಅನಿಲದ ಬೆಲೆಯನ್ನು ತಿಂಗಳಲ್ಲಿ ಮೂರು ಬಾರಿ ಹೆಚ್ಚಿಸಲಾಗಿದೆ. ಡಿಸೆಂಬರ್ನಿಂದ ಅಡುಗೆ ಅನಿಲ ಬೆಲೆ ಪ್ರತಿ ಸಿಲಿಂಡರ್ಗೆ 200 ರೂ.ಗಳಷ್ಟು ಹೆಚ್ಚಿಸಲಾಗಿದೆ.
ಇದನ್ನೂ ಓದಿ | ಇಂದು ರಾತ್ರಿ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡುಗಡೆ : ಸಾರ್ವಜನಿಕರಿಗೆ ಎಚ್ಚರಿಕೆ
ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಸರ್ಕಾರಿ ತೈಲ ಕಂಪನಿಗಳು ನಿರ್ಧರಿಸುತ್ತವೆ. ಇದನ್ನು ನವೆಂಬರ್ 2020 ರವರೆಗೆ ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತಿತ್ತು. ಆದಾಗ್ಯೂ, ಡಿಸೆಂಬರ್ನಲ್ಲಿ ಒಎಂಸಿಯು ಎರಡು ಬಾರಿ ಬೆಲೆಯನ್ನು ಹೆಚ್ಚಿಸಿದೆ. ಎಲ್ಪಿಜಿ ಬೆಲೆ ಅಂತರರಾಷ್ಟ್ರೀಯ ಇಂಧನ ದರಗಳು ಮತ್ತು ಯುಎಸ್ ಡಾಲರ್-ರೂಪಾಯಿ ವಿನಿಮಯ ದರಗಳಂತಹ ಅಂಶಗಳನ್ನು ಅವಲಂಬಿಸಿರುತ್ತದೆ. ಈ ಅಂಶಗಳ ಆಧಾರದ ಮೇಲೆ ಬೆಲೆಗಳು ಹೆಚ್ಚಾಗುತ್ತಲೇ ಇರುತ್ತವೆ.
ಅದರಂತೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆ ಕಂಡಿರುವ ಈ ಸಮಯದಲ್ಲಿ ಎಲ್ಪಿಜಿಯ ಬೆಲೆಯೂ ಏರಿಕೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ರಾತ್ರಿ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡುಗಡೆ : ಸಾರ್ವಜನಿಕರಿಗೆ ಎಚ್ಚರಿಕೆ

ಸುದ್ದಿದಿನ,ದಾವಣಗೆರೆ: ಬಳ್ಳಾರಿ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕು, ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪ್ರಸಕ್ತ ವಾರ್ಷಿಕ ಕಾರ್ಣಿಕೋತ್ಸವ ಜರುಗುವ ಪ್ರಯುಕ್ತ ಭದ್ರಾ ಜಲಾಶಯದಿಂದ ಫೆ.25 ರಂದು ರಾತ್ರಿ 10:30 ಕ್ಕೆ ತುಂಗಾಭದ್ರಾ ನದಿಗೆ ಅವಶ್ಯಕತೆಗೆ ಅನುಗುಣವಾಗಿ ನೀರನ್ನು ಹರಿಸಲಾಗುವುದು.
ನದಿಗೆ ನೀರು ಹರಿಸುವ ಕಾರಣ, ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ದನಕರುಗಳನ್ನು ನದಿಗೆ ಇಳಿಸುವುದಾಗಲೀ ಇತ್ಯಾದಿ ಚಟುವಟಿಕೆಗಾಗಿ ನದಿ ಪಾತ್ರದಲ್ಲಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈ ಅವಧಿಯಲ್ಲಿ ರೈತಬಾಂಧವರು ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್ಸೆಟ್ಗಳಿಂದ ನೀರೆತ್ತುವುದನ್ನೂ ಸಹ ನಿಷೇಧಿಸಲಾಗಿದೆ ಎಂದು ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ ಹಾಗೂ ಅಧೀಕ್ಷಕ ಅಭಿಯಂತರ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿಕಲಚೇತನರ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಕೆ : ಕೊನೆಯ ದಿನಾಂಕ ವಿಸ್ತರಣೆ

ಸುದ್ದಿದಿನ,ಕಲಬುರಗಿ: ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಚೇರಿಯಿಂದ 2020-21ನೇ ಸಾಲಿಗಾಗಿ ವಿಕಲಚೇತನರ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ಹಾಗೂ ಶುಲ್ಕ ಮರುಪಾವತಿ ಯೋಜನೆಯಡಿ ಅರ್ಹ ವಿಕಲಚೇತನರ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2021ರ ಮಾರ್ಚ್ 5 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 2021ರ ಫೆಬ್ರವರಿ 19 ರಂದು ನಿಗದಿಪಡಿಸಲಾಗಿತ್ತು, ಆದರೆ ಈಗ ಶಾಲಾ-ಕಾಲೇಜುಗಳು ತಡವಾಗಿ ಪ್ರಾರಂಭಿಸಿರುವ ಹಿನ್ನೆಲೆ ಹಾಗೂ ಈ ಯೋಜನೆಯಡಿ ಹೆಚ್ಚಿನ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಈ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ಇದನ್ನೂ ಓದಿ | ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ : ಮೇಯರ್ ಆಗಿ ಎಸ್.ಟಿ.ವೀರೇಶ್, ಉಪಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಅಥವಾ ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಸಬಲೀಕರಣ ಕಚೇರಿಯಲ್ಲಿ ಸಲ್ಲಿಸಬೇಕು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08472-235222, ಕಲಬುರಗಿ ತಾಲೂಕು ಪಂಚಾಯತ ಕಚೇರಿಯ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಮ್.ಆರ್.ಡಬ್ಲ್ಯೂ) ಮೊಬೈಲ್ ಸಂಖ್ಯೆ 9972079714, ಅಫಜಲಪೂರ-9448808141, ಆಳಂದ-9483054495, ಜೇವರ್ಗಿ-9741875881, ಚಿತ್ತಾಪೂರ-9845204328, ಚಿಂಚೋಳಿ-9880671171, ಸೇಡಂ-9902417925 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ಅಂತರಂಗ5 days ago
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!
-
ದಿನದ ಸುದ್ದಿ5 days ago
ಬಡವರನ್ನು ಸಬಲೀಕರಣಗೊಳಿಸಲು ಉಚಿತ ಅನಿಲ ಸಂಪರ್ಕ ನೀಡಿದ್ದೇವೆ : ಪ್ರಧಾನಿ ಮೋದಿ
-
ಭಾವ ಭೈರಾಗಿ5 days ago
ಕರುಣಾಳು ಅವನು, ಅವನು ನನ್ನವನು..!
-
ದಿನದ ಸುದ್ದಿ5 days ago
ದಿಶಾ ಕೇಸ್ | ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ..! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು..!
-
ಲೈಫ್ ಸ್ಟೈಲ್4 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ಕ್ರೀಡೆ4 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್4 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ
-
ಭಾವ ಭೈರಾಗಿ4 days ago
ಕವಿತೆ | ಅವಳು