ದಿನದ ಸುದ್ದಿ
ರಾಷ್ಟ್ರೀಯ ಶಿಕ್ಷಣ ಅರ್ಥವಾಗದ ಕಾಂಗ್ರೆಸ್ ಮೌನ
ಸುದ್ದಿದಿನ ದಾವಣಗೆರೆ ಕೇಂದ್ರ ಸರ್ಕಾರ ತರಲು ಹೊರಟಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಕಾಂಗ್ರಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ
ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೇಂದ್ರ ಸರ್ಕಾರ ತರಲು ಹೊರಟಿರುವ ಹೊಸ ಶಿಕ್ಷಣ ನೀತಿಯ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದ ಬರಗೂರರು, ಹೊಸ ಶಿಕ್ಷಣ ನೀತಿಯ ಕುರಿತು ಪರ-ವಿರೋಧ ತೆಗಳು ಚರ್ಚೆಗಳು ಆರಂಭವಾಗಿವೆ ಆದರೆ ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್ ಮೌನವಾಗಿದೆ ಈ ಮೌನ ಪ್ರಭುತ್ವ ಪ್ರಕ್ರಿಯೆಗೆ ಪೂರಕ ಅಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ,
ಕೆಲ ವಿಷಯಗಳಲ್ಲಿ ದೊಡ್ಡ ದನಿಯಲ್ಲಿ ಮಾತನಾಡುವ ಕಾಂಗ್ರೆಸ್ ಶಿಕ್ಷಣ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಲ್ಲಿ ಪಕ್ಷ ಪರಂಪರೆಗೆ ಅನುಗುಣವಾಗಿ ಉಪೇಕ್ಷೆ ತೋರುತ್ತಿದೆ ಎಂದು ವಿಷಾದಿಸಿದರು
ಸಂವಿಧಾನದ ಪ್ರಕಾರ ಶಿಕ್ಷಣವು ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡಕ್ಕೂ ಸಂಬಂಧಿಸಿದ್ದಾಗಿದೆ ಹೊಸ ನೀತಿಯನ್ನು ಒಕ್ಕೂಟದ ವ್ಯವಸ್ಥೆಯ ನೆಲೆಯಲ್ಲಿ ಒರೆಗಲ್ಲಿಗೆ ಹಚ್ಚಬೇಕಾಗಿದೆ, ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆ ಮತ್ತು ಸ್ವಾಭಿಮಾನ ಪ್ರಶ್ನೆಯೂ ಇದರಲ್ಲಿ ಅಡಗಿದೆ ಈ ವಿಷಯದಲ್ಲಿ ವಿರೋಧಪಕ್ಷ ಇಂದು ಪ್ರಶ್ನಿಸಬೇಕಾಗಿದೆ ಎಂದರು
ಇಂಥ ಸಂದರ್ಭಗಳಲ್ಲಿ ಎಡಪಕ್ಷಗಳು ಸೈದ್ಧಾಂತಿಕ ಸೈದ್ಧಾಂತಿಕವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತವೆ ಕಾಂಗ್ರೆಸ್ ಪಕ್ಷವು ಇಂಥ ವಿಷಯಗಳಿಗೆ ಆದ್ಯತೆ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಅಥವಾ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ
ಸುದ್ದಿದಿನ ದಾವಣಗೆರೆ, ವಾಟ್ಸಪ್: 8073105526