ದಿನದ ಸುದ್ದಿ

ಕಳೆದ ಮೇ ತಿಂಗಳಲ್ಲಿ ಒಟ್ಟು 1.40 ಲಕ್ಷ ಕೋಟಿ ಜಿಎಸ್‌ಟಿ ಆದಾಯ ಸಂಗ್ರಹ

Published

on

ಸುದ್ದಿದಿನ ಡೆಸ್ಕ್ : ಕಳೆದ ಮೇ ತಿಂಗಳಲ್ಲಿ ಒಟ್ಟು 1.40ಲಕ್ಷ ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ- ಜಿಎಸ್‌ಟಿ ಆದಾಯವನ್ನು ಸಂಗ್ರಹಿಸಲಾಗಿದೆ.

ಇದರಲ್ಲಿ ಸಿಜಿಎಸ್‌ಟಿ 25 ಸಾವಿರದ 036 ಕೋಟಿ ರೂಪಾಯಿ, ಎಸ್‌ಜಿಎಸ್‌ಟಿ 32ಸಾವಿರದ 001ಕೋಟಿ ರೂಪಾಯಿ, ಐಜಿಎಸ್‌ಟಿ 73ಸಾವಿರದ 345ಕೋಟಿ ರೂಪಾಯಿ ಮತ್ತು ಸೆಸ್ 10,502ಕೋಟಿ ರೂಪಾಯಿ ಸೇರಿದೆ.

ಸರ್ಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ27,924 ಕೋಟಿ ರೂಪಾಯಿ ಮತ್ತು ಎಸ್‌ಜಿಎಸ್‌ಟಿಗೆ 23,123 ಕೋಟಿ ರೂ. ಇತ್ಯರ್ಥಪಡಿಸಿದೆ. ಹೆಚ್ಚುವರಿಯಾಗಿ, ಕೇಂದ್ರ ಸರ್ಕಾರವು ಮೇ 31ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 86 ಸಾವಿರದ 912 ಕೋಟಿ ರೂ. ಜಿ ಎಸ್ ಟಿ ಪರಿಹಾರವನ್ನು ಬಿಡುಗಡೆ ಮಾಡಿದೆ.

ಮೇ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳ 97ಸಾವಿರ 821 ಕೋಟಿ ರೂಪಾಯಿಗಳ ಜಿ ಎಸ್ ಟಿ ಆದಾಯಕ್ಕಿಂತ ಶೇ.44 ರಷ್ಟು ಹೆಚ್ಚಾಗಿದೆ. ಜಿಎಸ್‌ಟಿ ಪ್ರಾರಂಭವಾದ ನಂತರ ನಾಲ್ಕನೇ ಬಾರಿಗೆ ಮಾಸಿಕ ಜಿಎಸ್‌ಟಿ ಸಂಗ್ರಹವು 1ಕೋಟಿ 40 ಲಕ್ಷ ಕೋಟಿ ರೂಪಾಯಿ ಗಡಿ ದಾಟಿದೆ.

ಮೇ ತಿಂಗಳಿನಲ್ಲಿಯೂ ಸಹ ಒಟ್ಟು ಜಿಎಸ್‌ಟಿ ಆದಾಯವು 1.40 ಲಕ್ಷ ಕೋಟಿ ರೂಪಾಯಿ ಗಡಿ ದಾಟಿರುವುದು ಉತ್ತೇಜನಕಾರಿಯಾಗಿದೆ. ಏಪ್ರಿಲ್ ನಲ್ಲಿ ಒಟ್ಟು ಇ-ವೇ ಬಿಲ್‌ಗಳ ಸಂಖ್ಯೆ 7.4 ಕೋಟಿಯಾಗಿದೆ, ಇದು ಕಳೆದ ಮಾರ್ಚ್ ನಲ್ಲಿ ಸೃಷ್ಟಿಯಾದ 7.7 ಕೋಟಿ ಇ-ವೇ ಬಿಲ್‌ಗಳಿಗಿಂತ ಶೇ.4 ರಷ್ಟು ಕಡಿಮೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version