ದಿನದ ಸುದ್ದಿ
ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ನೂರು ಉಗ್ರಗಾಮಿಗಳು ಹತ : ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್
ಸುದ್ದಿದಿನಡೆಸ್ಕ್:ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರ ಪ್ರದೇಶದ 9 ಉಗ್ರಗಾಮಿ ಅಡಗುತಾಣಗಳ ಮೇಲೆ ನಡೆಸಲಾದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ನೂರು ಉಗ್ರಗಾಮಿಗಳು ಹತರಾಗಿದ್ದಾರೆ.
ಭಾರತೀಯ ಸೇನೆಯ ಸೈನಿಕ ಕಾರ್ಯಾಚರಣೆ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ನವದೆಹಲಿಯಲ್ಲಿ ಈ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಐಸಿ814 ವಿಮಾನ ಅಪಹರಣ ಹಾಗೂ ಪುಲ್ವಾಮ ಸ್ಫೋಟದಲ್ಲಿ ಶಾಮೀಲಾಗಿದ್ದ ಉಗ್ರಗಾಮಿಗಳಾದ ಯೂಸುಫ್ ಅಜರ್, ಅಬ್ದುಲ್ ಮಲ್ಲಿಕ್, ರಾಉಫ್ ಮತ್ತು ಮುದಸಿರ್ ಅಹಮದ್ ಇವರನ್ನು ಗುರಿಯಾಗಿಟ್ಟುಕೊಂಡು ಈ ಕಾರ್ಯಾಚರಣೆ ನಡೆಸಲಾಗಿತ್ತು.
ಉಗ್ರಗಾಮಿಗಳು ಹಾಗೂ ಭಯೋತ್ಪಾದನೆಯ ಸಂಚುಕೋರರನ್ನು ಮತ್ತು ಅವರ ಭಯೋತ್ಪಾದನಾ ಮೂಲಸೌಕರ್ಯಗಳನ್ನೇ ಗುರಿಯಾಗಿಟ್ಟುಕೊಂಡು ಆಪರೇಷನ್ ಸಿಂದೂರ್ ಪರಿಕಲ್ಪಿಸಲಾಗಿತ್ತು. ಈ ಕಾರ್ಯಾಚರಣೆಯನ್ನು ಅಂತ್ಯಂತ ಕರಾರುವಕ್ಕಾಗಿ ಉಗ್ರಗಾಮಿಗಳ ಶಿಬಿರ ಹಾಗೂ ತರಬೇತಿ ತಾಣಗಳ ಮೇಲೆ ಗುರುತಿಸಿ ಮಾಡಲಾಗಿದೆ ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243