ದಿನದ ಸುದ್ದಿ

ದಾವಣಗೆರೆ | ಮಂಗಳವಾರ 12 ಹೊಸ ಕೊರೋನಾ ಪಾಸಿಟಿವ್ ಕೇಸ್ : ಆ್ಯಟ್ಟೀವ್ ಕೇಸ್ 77

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಮಂಗಳವಾರ 12 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 6 ಜನರು ಗುಜರಾತ್‍ನ ಅಹಮದಾಬಾದ್‍ಗೆ ಹೋಗಿ ಬಂದ ಹಿನ್ನೆಲೆ ಹೊಂದಿದ್ದರೆ, ಇನ್ನು 6 ಜನರು ಜಾಲಿನಗರ ಕಂಟೈನ್‍ಮೆಂಟ್ ಝೋನ್‍ಗೊಳಪಡುವ ಸಂಪರ್ಕಿತರಾಗಿದ್ದಾರೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು ಅವರು ರೋಗಿ ಸಂಖ್ಯೆ 915 ರಿಂದ 920 ರವರೆಗೆ ಆರು ಜನರು ಗುಜರಾತ್‍ನ ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದು, ಒಟ್ಟು 7 ಜನರು ಅಹಮದಾಬಾದ್‍ನಿಂದ ಹೊನ್ನಾಳಿ ತಾಲ್ಲೂಕಿನ ಹುಣಸಘಟ್ಟಕ್ಕೆ ಹೋಗುತ್ತಿದ್ದರು. ಅವರನ್ನು ಅಲ್ಲಿ ತಲುಪುತ್ತಿದ್ದಂತೆಯೇ ದಾವಣಗೆರೆ ಕರೆ ತಂದು ಕ್ವಾರಂಟೈನ್ ಮಾಡಲಾಗಿದೆ. ಏಳರಲ್ಲಿ ಆರು ಪಾಸಿಟಿವ್ ಬಂದಿದ್ದು ಒಬ್ಬರ ಫಲಿತಾಂಶ ಬಾಕಿ ಇದೆ ಎಂದರು.

ರೋಗಿ ಸಂಖ್ಯೆ 914 ರೋಗಿ ಸಂಖ್ಯೆ 696 ರ ಸಂಪರ್ಕ ಹೊಂದಿರುವವರು. ರೋಗಿ ಸಂಖ್ಯೆ 921 ಮತ್ತು 922 ರೋಗಿ ಸಂಖ್ಯೆ 695 ರ ಸಂಪರ್ಕ ಹೊಂದಿರುವವರು. ರೋಗಿ ಸಂಖ್ಯೆ 923 ರಿಂದ ರೋಗಿ ಸಂಖ್ಯೆ 925 ರೋಗಿ ಸಂಖ್ಯೆ 696 ರ ಸಂಪರ್ಕ ಹೊಂದಿರುವವರಾಗಿದ್ದು ಈ ಆರು ಜನರು ಜಾಲಿನಗರಕ್ಕೆ ಕಂಟೈನ್‍ಮೆಂಟ್ ಝೋನ್ ವ್ಯಾಪ್ತಿಯವರಾಗಿದ್ದಾರೆ ಈ ಎಲ್ಲ ರೋಗಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳ ಪತ್ತೆ ಕಾರ್ಯ ಈ ಕೂಡಲೇ ಆರಂಭಿಸಲಾಗುವುದು.

ಮಂಗಳವಾರ ಒಟ್ಟು 154 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಹಾಗೂ 120 ಸ್ಯಾಂಪಲ್ ಈಗ ಸಂಗ್ರಹಿಸಿ ಕಳುಹಿಸಲು ಸಿದ್ದವಾಗಿದ್ದು ಬುಧವಾರ ಕಳುಹಿಸಲಾಗುವುದು. ಇಂದು 134 ನೆಗೆಟಿವ್ ವರದಿ ಬಂದಿದ್ದು, ಒಟ್ಟು 461 ವರದಿ ಬರುವುದು ಬಾಕಿ ಇದೆ. ಪ್ರಸ್ತುತ ಜಿಲ್ಲೆಯಲ್ಲಿ 77 ಸಕ್ರಿಯ ಪ್ರಕರಣಗಳಿವೆ ಎಂದರು.


ಕೋವಿಡ್19: 2020ರ 11ಮೇ ಸಂಜೆ 5 ಗಂಟೆಯಿಂದ 12 ಮೇ ಬೆಳಗ್ಗೆ 12 ಗಂಟೆ ಒಳಗಿನ ವರದಿ

  • ಒಟ್ಟು ಪ್ರಕರಣಗಳು: 83
  • ಮೃತಪಟ್ಟವರು: 04
  • ಗುಣಮುಖರಾದವರು: 02
  • ಹೊಸ ಪ್ರಕರಣಗಳು: 12
  • ಆ್ಯಕ್ಟಿವ್ ಕೇಸ್: 77
  • ವರದಿ ಬಾಕಿ : 461

ಒಟ್ಟು 22 ಜನರ 14 ದಿನಗಳ ಚಿಕಿತ್ಸೆ ಮುಗಿದಿದ್ದು ಇವರ ಮೊದಲನೇ ಸ್ಯಾಂಪಲ್ ಕಳುಹಿಸಲಾಗಿದೆ. ಇನ್ನು 24 ಗಂಟೆಯಲ್ಲಿ ಮತ್ತೊಂದು ಬಾರಿ ಪರೀಕ್ಷೆಗೆ ಸ್ಯಾಂಪಲ್ ಕಳುಹಿಸಲಾಗುವುದು ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version