/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಚಿತ್ರದುರ್ಗ : 12 ಅಡಿ ಅಗಲದ ಕನ್ನಡ ಬಾವುಟ ಮೆರವಣಿಗೆ

Published

on

ಸುದ್ದಿದಿನ,ಚಿತ್ರದುರ್ಗ : ಕನ್ನಡ ನಾಡಿನ ನುಡಿಹಬ್ಬವಾದ ಕರ್ನಾಟಕ ರಾಜ್ಯೋತ್ಸವವನ್ನು ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳಿಗ್ಗೆ 8-30ಕ್ಕೆ ಕನ್ನಡ ಧ್ವಜಾರೋಹಣ ಮತ್ತು ನಾಡಗೀತೆಯೊಂದಿಗೆ ಪ್ರಾರಂಭವಾಗಿ ಡೊಳ್ಳು, ಹುಲಿವೇಷ, ಕುಣಿತದೊಂದಿಗೆ 500 ಮೀಟರ್ ಉದ್ದ 12 ಅಗಲದ ಕನ್ನಡ ಬಾವುಟದ ಮೆರವಣಿಗೆಯನ್ನು ಮೆಡಿಕಲ್ ಕಾಲೇಜು (ಎಸ್.ಜೆ.ಎಂ.) ಕ್ಯಾಂಪಸ್ ಆವರಣದಲ್ಲಿ ನಡೆಸಲಾಯಿತು.

ಧ್ವಜಾರೋಹಣವನ್ನು ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿಗಳಾದ ಡಾ. ಈ.ಚಿತ್ರಶೇಖರ್ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಶಾಂತ್, ಮತ್ತು ಡಾ. ನಾರಾಯಣ ಮೂರ್ತಿ ಯವರು ನಡೆಸಿಕೊಟ್ಟರು.
ನಂತರದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ, ಶರೀರ ರಚನಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎಂ.ಮಹೇಶ್ ರವರು ಕನ್ನಡ ರಾಜ್ಯೋತ್ಸವದ ಶುಭಾಷಯಗಳನ್ನು ಕೋರುತ್ತಾ ರಾಜ್ಯೋತ್ಸವವು ನಡೆದು ಬಂದ ದಾರಿಯನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಈ. ಚಿತ್ರಶೇಖರ್ ರವರು ಮಾತನಾಡಿ “ನಭತೋ ನಭವಿಷ್ಯತಿ”ಎನ್ನುವ ಹಾಗೆ ಆಚರಿಸುತ್ತಿರುವ ಕಾರ್ಯಕ್ರಮವನ್ನು ಶ್ಲಾಘಿಸಿದರಲ್ಲದೆ, ಯುಧಿಷ್ಟಿರ ಮತ್ತು ಯಕ್ಷಕೊಳದ ಉದಾಹರಣೆಯನ್ನು ನೀಡಿ ತಾವು ಕೂಡ ಇಂತಹ ಅದ್ಭುತ ಕಾರ್ಯಕ್ರಮದ ಆಯೋಜನೆಯನ್ನು ನೋಡಿ ಮೂಕವಿಸ್ಮಿತನಾದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕದ ಎಲ್ಲೆ ಜಿಲ್ಲೆಗಳ ಪ್ರಮುಖ ಸಾಹಿತಿಗಳು ಹಾಗು ಐತಿಹಾಸಿಕ ಘಟನಾವಳಿಗಳ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಡಾ.ಜಿ.ಎಂ. ಮಹೇಶ್ ಮತ್ತು ಡಾ. ಈ. ಚಿತ್ರಶೇಖರ್ ರವರನ್ನು ಸನ್ಮಾನಿಸಲಾಯಿತು. ನಂತರ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾಲೇಜಿನ ಎಲ್ಲಾ ನೌಕರವರ್ಗದವರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version