ದಿನದ ಸುದ್ದಿ
ನಕ್ಸಲ್ ದಾಳಿ : ಸ್ಪೋಟದಲ್ಲಿ 15 ಕಮಾಂಡೋಗಳು ಹುತಾತ್ಮ
ಸುದ್ದಿದಿನ,ಮಹಾರಾಷ್ಟ್ರ : ಮಹಾರಾಷ್ಟ್ರದ ಗಾಡ್ಚಿರೋಲಿಯಲ್ಲಿ ಗುರುವಾರ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. 16 ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನದ ಮೇಲೆ ನಕ್ಸಲರು ಐಇಡಿ ಸ್ಫೋಟಿಸಿದ್ದು, 15 ಕಮಾಂಡೋಗಳು ಹುತಾತ್ಮರಾಗಿದ್ದಾರೆ. ದಾಳಿ ಸ್ಥಳದಲ್ಲಿ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿಯಾಗಿದೆ.
ಕಳೆದ 24 ಗಂಟೆಯಲ್ಲಿ ನಕ್ಸಲರು ನಡೆಸಿರೋ ಎರಡನೇ ಕುಕೃತ್ಯ ಇದಾಗಿದೆ. ಇದಕ್ಕೂ ಮುನ್ನ ಕುರ್ಕೇಡಾದ ಹದ್ದಾರಿ ನಿರ್ಮಾಣ ಸ್ಥಳದಲ್ಲಿ ಸುಮಾರು 27 ಸರ್ಕಾರಿ ವಾಹನಗಳಿಗೆ ನಕ್ಸಲರು ಬೆಂಕಿ ಇಟ್ಟಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243