ದಿನದ ಸುದ್ದಿ

ತಪ್ಪು ಮಾಹಿತಿ ಹರಡುತ್ತಿದ್ದ 16 ಯುಟ್ಯೂಬ್ ಚಾನೆಲ್‌ಗಳ ನಿರ್ಬಂಧ

Published

on

ಸುದ್ದಿದಿನ ಡೆಸ್ಕ್ : ದೇಶದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಹಾಗೂ ಸಾರ್ವಜನಿಕ ಆದೇಶಗಳ ಕುರಿತು ತಪ್ಪು ಮಾಹಿತಿ ಹರಡುತ್ತಿರುವ 16 ಯುಟ್ಯೂಬ್ ಚಾನೆಲ್‌ಗಳನ್ನು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ನಿರ್ಬಂಧಿಸಿದೆ.

ಮಾಹಿತಿ ತಂತ್ರಜ್ಞಾನ ನಿಯಮಗಳು-2021ರ ಪ್ರಕಾರ ಭಾರತೀಯ ಮೂಲದ 10 ಹಾಗೂ ಪಾಕಿಸ್ತಾನ ಮೂಲದ 6ಚಾನಲ್‌ಗಳನ್ನು ನಿರ್ಬಂದಿಸಲಾಗಿದೆ.

ದೇಶದಲ್ಲಿ ಕೋಮು ಸಂಬಂಧಿತ ಪ್ರಚೋದನೆಗಳು, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಹಾಗೂ ತಪ್ಪು ಮತ್ತು ಪರಿಶೀಲಿದ ಭಯ ಹುಟ್ಟಿಸುವ ಮಾಹಿತಿಗಳನ್ನು ಈ ಟ್ಯೂಬ್ ಚಾನೆಲ್‌ಗಳು ಹರಡುತ್ತಿವೆ ಎಂದು ಸಚಿವಾಲಯ ತಿಳಿಸಿದೆ.

ನಿರ್ಬಂಧಿತ ಚಾನಲ್‌ಗಳ ಪಟ್ಟಿಯಲ್ಲಿ ಭಾರತ ಮೂಲದ ಚಾನಲ್‌ಗಳಾದ ಸೈನಿ ಎದುಕೇಷನ್ ರಿಸರ್ಚ್ ಹಿಂದಿ ಮೇ ದೇಖೋ, ಆಜ್ ತೆ ನ್ಯೂಸ್, ಎಸ್‌ಬಿಬಿ ನ್ಯೂಸ್, ಡಿಫೆನ್ಸ್ ನ್ಯೂಸ್ 24/7, ತಹಫುಝ್-ಎ-ದೀನ್ ಸೇರಿವೆ. ಪಾಕಿಸ್ತಾನ ಮೂಲದ ಆಜ್ ತಕ್ ಪಾಕಿಸ್ತಾನ್, ಡಿಸ್ಕವರ್ ಪಾಯಿಂಟ್, ರಿಯಾಲಿಟಿ ಚೆಕ್ಸ್ ಕೈಸರ್ ಖಾನ್, ದಿ ವಾಯ್ಸ್ ಆಫ್ ಏಷ್ಯಾ ಮತ್ತು ಬೋಲ್ ಮೀಡಿಯಾ ಬೋಲ್ ಚಾನಲ್‌ಗಳು ಸೇರಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version