ದಿನದ ಸುದ್ದಿ
ದೇಶಾದ್ಯಂತ ಈವರೆಗೆ 187ಕೋಟಿ 46 ಲಕ್ಷ ಕೋವಿಡ್ ಲಸಿಕೆ ಡೋಸ್ ನೀಡಿಕೆ : ಕೇಂದ್ರ ಆರೋಗ್ಯ ಸಚಿವಾಲಯ
ಸುದ್ದಿದಿನ ಡೆಸ್ಕ್ : ರಾಷ್ಟ್ರೀಯ ಲಸಿಕೆ ಅಭಿಯಾನದಡಿ ದೇಶಾದ್ಯಂತ ಈವರೆಗೆ ಸುಮಾರು 187 ಕೋಟಿ 46ಲಕ್ಷ ಕೋವಿಡ್ ಲಸಿಕೆ ಡೋಸ್ಗಳನ್ನು ನೀಡಲಾಗಿದೆ. ನಿನ್ನೆ ಒಂದೇ ದಿನ ಸುಮಾರು 19ಲಕ್ಷ 13ಸಾವಿರಕ್ಕೂ ಅಧಿಕ ಲಸಿಕೆಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ 19ಕೋಟಿ 91 ಲಕ್ಷ ಲಸಿಕೆ ಡೋಸ್ಗಳು ಬಾಕಿ ಉಳಿದಿದ್ದು, ಫಲಾನುಭವಿಗಳಿಗೆ ನೀಡಲು ಈ ಲಸಿಕೆಗಳನ್ನು ಬಳಸಲು ಲಭ್ಯವಿವೆ ಎಂದು ಹೇಳಿದೆ.
ಕಳೆದ 24ಗಂಟೆಗಳಲ್ಲಿ ಒಟ್ಟು 2 ಸಾವಿರದ 527ಕೋವಿಡ್ ಹೊಸ ಪ್ರಕರಣಗಳು ದೇಶಾದ್ಯಂತ ದಾಖಲಾಗಿವೆ. ಭಾರತದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 15 ಸಾವಿರದ 79ರಷ್ಟಿದೆ. ಚೇತರಿಕೆಯ ಪ್ರಮಾಣ ಪ್ರಸ್ತುತ 98.75ರಷ್ಟಿದ್ದು, ಕಳೆದ 24ಗಂಟೆಗಳಲ್ಲಿ ಒಂದು ಸಾವಿರದ 656ಕೋವಿಡ್ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಕಳೆದ 24ಗಂಟೆಗಳಲ್ಲಿ 33 ಮಂದಿ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ಅಂಕಿ-ಅಂಶ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243