ದಿನದ ಸುದ್ದಿ

20 ಲಕ್ಷ ಕೋಟಿ ಪ್ಯಾಕೇಜ್ : ಯಾರಿಗೆಲ್ಲಾ ವಿನಾಯಿತಿ ; ಆರ್ಥಿಕ ಬೆಂಬಲ ಘೋಷಿಸಿದ್ದಾರೆ ಗೊತ್ತಾ..!?

Published

on

ಸುದ್ದಿದಿನ, ಬೆಂಗಳೂರು : “ಪ್ರಧಾನಿ ಯವರು ಘೋಷಿಸಿದ್ದ 20ಲಕ್ಷ ಕೋಟಿ ರೂ. ಆತ್ಮನಿರ್ಭರ ಭಾರತ ಅಭಿಯಾನ ಪ್ಯಾಕೇಜ್ ವಿವರಗಳನ್ನು ಪ್ರಕಟಿಸಿರುವ ವಿತ್ತಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಅತಿಸಣ್ಣ,ಸಣ್ಣ,ಮಧ್ಯಮ ಕೈಗಾರಿಕೆಗಳಿಗೆ, ವಿದ್ಯುತ್ ಸರಬರಾಜು, ರಿಯಲ್ ಎಸ್ಟೇಟ್, ತೆರಿಗೆದಾರರಿಗೆ ಹಲವು ವಿನಾಯಿತಿ, ಆರ್ಥಿಕ ಬೆಂಬಲ ಘೋಷಿಸಿದ್ದಾರೆ.”

“ಹಂತಹಂತವಾಗಿ ವಲಯವಾರು ವಿವರಗಳನ್ನು ನೀಡಲಾಗುತ್ತಿದ್ದು, ಕೋವಿಡ್19 ಸಂಕಷ್ಟದ ಸವಾಲುಗಳನ್ನೆದುರಿಸಿ, ಒಟ್ಟು ಅರ್ಥವ್ಯವಸ್ಥೆಗೆ ಶಕ್ತಿ ತುಂಬಲು ಕೇಂದ್ರಸರ್ಕಾರ ವಿಸ್ತೃತ ಯೋಜನೆ ಹೊಂದಿದೆ. ಇದರಿಂದ ಸ್ವಾವಲಂಬಿ ರಾಷ್ಟ್ರನಿರ್ಮಾಣದ ಕಡೆಗೆ ನಾವು ಹೆಚ್ಚು ವಿಶ್ವಾಸ ಹಾಗು ಸಾಮರ್ಥ್ಯದಿಂದ ಮುನ್ನಡೆಯುವಂತಾಗಿದೆ” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version