Connect with us

ಬಹಿರಂಗ

ಕುರುಡು ಕಾಂಚಾಣ ನೀನೊಮ್ಮೆ ಕಣ್ತೆರದು ನೋಡು..‌

Published

on

ವತ್ತು ರಜೆ ಮೇಲೆ‌ ಬೆಂಗಳೂರಿಗೆ  ಹೋಗಿದ್ದೆ , IPL match ನಡಿತಿತ್ತು‌.. ಅವತ್ತಿನ್ match ಯಾರ್ ಗೆಲ್ತಾರೆ ಅಂತಾ  ನಮ್ ಹುಡುಗರು ಕೇಳುದ್ರು , ನಾನು ನನ್ idea ಮೇಲೆ ಅಡ್ಡೇಟ್ ಮೇಲೆ ಗುಡ್ಡೇಟ್ ಹಾಕ್ದಂಗೆ ಒಂದ್ team ಹೆಸರು ಹೇಳ್ದೆ… ನನ್ ಅದೃಷ್ಟಾನೋ,

ಏನೋ !  ಅವತ್ತಿನ್ match ನಲ್ಲಿ ಅದೇ team ವಿನ್ ಆಯ್ತು… So ಅದೇ ಸಾಕಾಯ್ತು ನನ್ friends ಗೆ ಬೆಟ್ಟಿಂಗ್ ನಲ್ಲಿ ಬಂದಿದ್ದ ದುಡ್ನಲ್ಲಿ ಫುಲ್ ಪಾರ್ಟಿ ಮಾಡಕ್ಕೆ decide ಮಾಡುದ್ರು …. ಅದೇ‌ time ನಲ್ಲಿ ನನ್ friend ಮಾವ ನಾನೇಳಿದ ಮಾತನ್ನೆ ನಂಬ್ಕೊಂಡು ಎಣ್ಣೆ ನಶೆನಲ್ಲಿ ಬೆಟ್ಟಿಂಗ್ ಹಾಕಿದ್ರಂತೆ… ಅವ್ರಗೂ ಲಾಟರಿ ಹೊಡ್ದಿತ್ತು… ಬಾ ಮಗಾ ನಿಂಗೆ ಬೆಂಗಳೂರು ಸ್ವರ್ಗ ತೋರುಸ್ತೀನಿ ಅಂತಾ ಕರ್ಕೊಂಡೋದ್ರು…

ರಾತ್ರಿ 9ಗಂಟೇಲಿ Car ಅತ್ಕೊಂಡೆ , ನೈಸ್ road ಜಂಕ್ಷನ್ ಇಂದ city ಆಚೆ ಹೋಗಿದ್ ಮಾತ್ರ ಗೊತ್ತು, ಮಿಕ್ಕಿದ್ address ನಂಗೆ ಗೊತ್ತಿಲ್ಲ…

Car ಇಂದ ಕೆಳಗೆ ಇಳಿತ್ತಿಂದಂಗೆ ದೊಡ್ಡ building ಕಾಣಿಸ್ತು  .‌… May be ಅದು ಬೆಂಗಳೂರಿನ ದೊಡ್ಡ ಪಬ್ ಅನ್ನೊದ್ ನಂಗ್ ಗೊತ್ತಾಯ್ತು…

Buildings‌ ಸುತ್ತ ಕಾಂಪೌಂಡ್ .. ಗೇಟ್ ಅಲ್ಲಿ ಇಬ್ರು ಅಜಾನುಬಾಹುಗಳ ತರ ಇರೋ watchman ಗಳು… ಒಂದ್ ಕಡೆ ಪಾರ್ಕಿಂಗು ಇನ್ನೊಂದ್ ಕಡೆ striking…
ದೊಡ್ಡದಾದ ಬಾಗಿಲು entry ಅಂತಾ sign board ಬೇರೆ ನೇತಾಡ್ತಾ  ಇತ್ತು… ಅಲ್ಲಿಬ್ಬು ದಾಂಡಿಗ್ರು black t shirts .. ಅದ್ರಲ್ಲಿ t shirts ಯಾವುದು ಅವರ ಬಾಡಿ ಯಾವುದು ಒಂದು ಗೊತ್ತಾಗ್ತಿರ್ಲಿಲ್ಲ ‌ಆ ರೇಂಜಲ್ಲಿದ್ರು…

ಒಳಗಡೆ entry ನಲ್ಲಿ ಸಣ್ಣಾ ಪುಟ್ಟ chekingsಊ…. ಅವ್ರು ಏನೋ ತೋರ್ಸಿದ್ರು ಜೊತೆಲಿ ನನ್ನು ಬಿಟ್ಟರೂ… ಒಳಗೋದೆ ಫುಲ್  ಬ್ಲೂ ಕಲರ್ lights.. ಜೊತೆಗೆ ಅರ್ಥ ಆಗ್ದಲೆ ಇರೋ ಯಾವುದೋ ಇಂಗ್ಲೀಷಿನಾ ಸಾಂಗು… ಏನು ಕೇಳ್ಸಕ್ಕಿಲ್ಲ ಆದ್ರಲ್ಲಿರೋ music’s ಮಾತ್ರ ಕಿವಿಗೆ ಬೀಳ್ತಿತ್ತು…

ಅಲ್ಲೊಂದ್ ಸೋಪಾ ಮೇಲೆ ಕೂತ್ಕೊಂಡೆ‌.. ಏನಾದ್ರು order ಮಾಡು ಅಂತಾ ಹೇಳಿದ್ರು… ನಾನು badam drink ಅಂದೇ… ನಕ್ಕಿದ್ರು‌..!!
ನಾನ್‌ ಕುಡ್ಯದು ಅದೇ ಸಾರ್ ಅಂದೆ‌…
ಪಕ್ಕದ್ table ನಲ್ಲಿ‌ ಒಬ್ಳು ಕುಡಿತಿದ್ಲು… ಅವಳನ್ನ ನೋಡು ಅಂದ್ರು ..ನೀರಿನ್ ಥರ ಇತ್ತು transparent ಗ್ಲಾಸ್ ನಲ್ಲಿ‌ ಕುಡಿತಿದ್ಲು… ನಾನು ಬಿಡಿ ಸಾರ್ sprite ಕುಡಿತಾವ್ಳೆ ಅವಳನ್ಯಾಕೆ‌ ನಾನ್ ನೋಡ್ಲಿ‌.. ಅಂದೆ.. ! ಅದಕ್ಕೆ ಅವರು ಅಂದ್ರು ಮಗು ನೀನ್ ಕಲಿಯದು ಬೇಜಾನ್ ಇದೆ ಅದು white rum ಅಂದ್ರು…

ನನಗೆ ನಾನೆ ಒಂತರ ಜುಗುಪ್ಸೆ ಅನ್ನಿಸ್ತಿತ್ತು… ಪಬ್ಬು ಅಂದಮೇಲೆ‌‌ ಇದೆಲ್ಲಾ ಮಾಮುಲಿ , ಇನ್ನು ಇದೆ ನೋಡದು ಅಂದ್ರು… ನಾನು ಅದೇನ್ ಗನಾಂಧಾರಿ ಕಾರ್ಯ ಅಂತಾ ..‌ರಾಮನಿಗಾಗಿ ಕಾದ ಶಬರಿಯಂತೆ ಕಾಯ್ತ ಇದ್ದೆ!!!!

ಅವಳು ತನ್ನ‌ ಮೈ ಮಾಟದಿಂದ ಅಲ್ಲಿದ್ದವರ ಕತ್ತಲೆಯನ್ನು  ಕದ್ದ ಪೋರಿ… ಬರೀ‌ ಕತ್ತಲೆಯನ್ನೇ ಅಲ್ಲಾ..? . ಅವರ ಇಡೀ ಖಜಾನೆಯನ್ನೆ ಕದಿಯಲು ಬಂದಿರುವ ಮಾಯಾವಿ ನಾರಿ ಅಂತಾ ಆಗ್ಲೆ ಗೊತ್ತಾಗಿದ್ದು…!!!‌

Background ನಲ್ಲಿ English song play ಆಗ್ತಿತ್ತು ಅದಕ್ಕೆ ತಕ್ಕನಾಗಿ ಈಕೆ dance ಮಾಡ್ತಿದ್ಲು..ಇನ್ನು ಜಾಸ್ತಿ‌ಅಂದ್ರೆ ಅಲ್ಲಿಸ್ದ table ಅತ್ರನು ಬಂದು dance ಹಾಡೋಳು ಆಗ ಅಲ್ಲಿದ್ದವರು ಒಂದ್ ಕೈನಲ್ಲಿ‌ scotch , ಇನ್ಮೊಂದ್‌ಕೈನಲ್ಲಿ ಅವಳ‌‌ ಮೇಲೆ ನೋಟಿನ‌ ಕಂತೆಯನ್ನೇ ತೆಗೆದು ಎಸಿತಿದ್ರು… 50,100, 500… ನೋಟುಗಳು ಅವಳ‌‌ ಮೇಲೆ ಬಿಸಾಕ್ತಿದ್ರು.. ಅವಳತ್ರ ಹೋಗಿ ಅವಳ ಮೇಲೆ‌ ಚೆಲ್ಲಾಡ್ತಿದ್ರು ,ಆಕೆ‌ಏನಾದ್ರು ಇವತ ಜೊತೆ dance ಮಾಡಕ್ಕೆ ಅಂತಾ ಬಂದ್ರೆ ಅದಕ್ಕೂಡ extra charges applicable, ಅವಳ‌‌‌ ಮೇಲೆ ಆ ಉರಿಯೋ ದಿಡ್ಡಿನ ಮಳೆನ  ಅವಳ assistant ಬಂದು ಆ ದುಡ್ಡನ್ನ collect ,ಮಾಡ್ಕೊತ್ತಿದ್ದ…. ಆವಾಗ ಅನ್ಸಿತ್ತು ಈ ಬಡ್ಡಿ ಮಕ್ಕಳಿಗೆ ದುಡ್ಡಿನ ಮೇಲೆ‌ ಎಷ್ಟು ಸೊಕ್ಕಿದೆ ಅಂತಾ… ಅಲ್ಲಿನ ಕ್ಷಣಿಕ ಸುಖಕ್ಕೋಷ್ಕರ ದುಡ್ಡಿನ‌ಕಂತೆನೆ ಹಂಗೆ ಎಸೆಯೋರು ಯಾಕ್ ಹಿಂಗೆ ಯೋಚನೇನೆ ಮಾಡಲ್ಲಾ,‌ ಅಂತಾ…. ??

ಇವತ್ತು  ಎಷ್ಟೋ ಬಡ ಮಕ್ಕಳು ಶಿಕ್ಷಣ ದಿಂದ ವಂಚಿತರಾಗತ್ತಿದ್ದಾರೆ, ನಮ್ಮ ಭಾರತದಲ್ಲಿ 60 ಲಕ್ಷಕ್ಕೂ ಹೆಚ್ಚಿನ  ಮಕ್ಕಳು ಇವತ್ತು ಶಿಕ್ಷಣ ಪಡಿಲಾರದೆ ಅನಕ್ಷರಸ್ಥರಾಗೆ ಉಳಿತಿದ್ದಾರೆ.. 59% ಹೆಣ್ಣು ಮಕ್ಕಳು ಅವಿದ್ಯಾವಂತರಾಗೆ ಉಳಿದಿದ್ದಾರೆ.

ಇವತ್ತಿನ ದಿನದಲ್ಲಿ‌ ಒಂದೊಂದು ತುತ್ತು ಅನ್ನಕ್ಕೋಸ್ಕರ ಅಲೆಯುತ್ತಿದ್ದಾರೆ, 38% ಜನ ತುತ್ತು ಅನ್ನವಿಲ್ಲದೆ ಸಾಯ್ತ ಇದಾರೆ,  ಅಂತೋರಿಗಾದ್ರು ದಾನ ಅಂತಾ ಮಾಡುದ್ರೆ ! , ಎಷ್ಟೋ ಕುಟುಂಬಗಳು ಜೀವನ‌ಮಾಡ್ತವೆ . …

ಅಲ್ಲಿರೋರ್ಗೆ ಯಾವಗಪ್ಪ ಹಿಂಗೆ ಅನ್ನಿಸೋದು ಅನ್ನಿಸ್ತಿತ್ತು…‌

ನಾನು ಕೂಡ ಒಂದು ಮದ್ಯದ ವರ್ಗದ ಕುಟುಂಬದಲ್ಲಿ ಹುಟ್ಟಿ ಬಂದೋನು . ನನ್ನ ತಂದೆ ತಾಯಿ ಆಗಿನ‌ ಕಾಲದಲ್ಲಿ‌ ನಮ್ಮನ ಕೂಲಿ ನಾಲಿ  ಮಾಡಿ ಸಾಕಿದ್ರು.. ಬೆಳೆಸಿದ್ರು… ಒದಿಸಿದ್ದರು..ಆದ್ರೆ ಇವತ್ತು ಎಷ್ಟೋ ಜನಕ್ಕೆ ತಂದೆ ತಾಯಿ ಪ್ರೀತಿ ನೇ ಸಿಕ್ಕಿಲ್ಲಾ…ಅಂತಾ ಮಕ್ಕಳಿಗಾದ್ರು ಅವರು ಯಾರದೋ ಮೇಲೆ ದುಡ್ಡನ್ನು ಚೆಲ್ಲುವ ಬದಲು ಅಂತವರ ಶಿಕ್ಷಣಕ್ಕೆ ವ್ಯಯಿಸಿದರೆ… ಈ ದೇಶದ ಚಿತ್ರಣವೇ ಬದಲಾಗು‌ವಂತೆ ಸಾಗುತ್ತೆ‌…

ನಾನು ಇಂಜಿನಿಯರಿಂಗ್ ಮಾಡ್ವಾಗ್ಲು ಕೂಡ ಬಸ್ ಪಾಸ್ ತಗೋಳಕ್ಕೆ , ಮತ್ತೆ  exam fee ಕಟ್ಟಕ್ಕು ನನ್ ಅತ್ರಾ ದುಡ್ ಇರ್ಲಿಲ್ಲ , ಅವಾಗ ಯಾರೋ ಒಬ್ಬ ಪುಣ್ಯಾತ್ಮನನ್ನು ಕೇಳಿದೆ… ಯಾಕಂದ್ರೆ ಅವಾಗ ನಾನು ಕರ್ನಾಟಕದ‌ ಒಂದು ಪ್ರತಿಷ್ಟಿತ ಕನ್ನಡ ಪರ ಸಂಘಟನೆಯ ವಿದ್ಯಾರ್ಥಿ ಸಂಘದ ಅದ್ಯಕ್ಷ ನಾಗಿದ್ದೆ,..ನಾನು ಯಾವುದೇ ಆಸೆ ಆಕಾಂಕ್ಷೆಗಳನ್ನು ‌ಇಟ್ಕೊಳ್ದೆ ಪ್ರಾಮಾಣಿಕ ವಾಗಿ ವಿದ್ಯಾರ್ಥಿಗಳ ಪರವಾಗಿ‌ , ಕನ್ನಡದ ಪರವಾಗಿ ಹೋರಾಟ‌ಮಾಡ್ತದ್ದೆ..ಆದ್ರೆ ಆ ಪುಣ್ಯಾತ್ಮ ನಾನು ಬಸ್ ಪಾಸಿಗೆ ಹಣ ಕೇಳಿದ್ದಾಗ ಇಲ್ಲಾ ಅಂದೋರು…ಪಬ್  ನಲ್ಲಿ‌ ಬಾರ್ ನಲ್ಲಿ ಹುಡುಗಿಯರ ಮೇಲೆ ದುಡ್ಡು ಸುರಿತೀವಿ ಅಂತಾ ಬಡಾಯಿ ಬಿಡ್ತಿದ್ರು..‌..ಸಿಕ್ಕಿದವರ ಜೊತೆ ಎಣ್ಣೆ ಹೊಡ್ಕೊಂಡು ಎಂಜಾಯ್ ಮಾಡ್ತಿದ್ರು ಆದ್ರೆ ಬಸ್ ಪಾಸಿಗೂ ದುಡ್ಡಿಲ್ದೆ ಪ್ರಾಮಾಣಿಕತೆ ಇಂದ ಇದ್ದೊರ್ಗೆ ಬಗಣಿ ಗೂಟ ಇಟ್ರು…

ನಾನ್ ಯಾಕ್ ಈ ಮಾತನ್ನ ನಿಮ್ಮಗಳ ಮುಂದೆ ಹೇಳ್ತಿದ್ದೀನಿ ಅಂದ್ರೆ , ದುಡ್ಡು ಒಬ್ಬ ವೇಶ್ಯೆ ಕೂಡ ಸಂಪಾದನೆ ಮಾಡ್ತಾಳೆ ಆದ್ರೆ ಅಂತವರಿಗೇನೆ ಕಾಳಜಿ ಅನ್ನೋದು ಇರುತ್ತೆ‌‌‌… ಅದೇ ಥರ ನೀವುಗಳು  ಕೂಡ ನಿಮ್ಮ ಕ್ಷಣಿಕ‌‌ ಸುಖಕ್ಕಾಗಿ ಕಾಸನ್ನು ಬಿಸಾಕಿ ಎಸೆಯೋ ಬದಲು, ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳೋ ಬದಲು , ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುವ ಮೂಲಕ, ಇನ್ನೊಬ್ಬರ ಮನದಲ್ಲಿ ಖಾಯಂ ಆಗಿ ನೆಲೆಸೋ ಮೂಲಕ ಸಂತಸ ಕಾಣಿ‌‌…

.ನಾನು ನಿಮ್ಮ‌ ವ್ಯಯಕ್ತಿಕ ಜೀವನದ ಬಗ್ಗೆ ಮಾತಾಡ್ತಿಲ್ಲ ಆದ್ರೆ ಅದರ‌ಬದಲು ಕೂಡ ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಕೈ ಜೋಡಿಸಿ. ಬಡ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ದಾತರಾಗಿ‌ ಆಶಾಕಿರಣಗಳಾಗಿ..

ಯಾಕಂದ್ರೆ ಹಿಂದೆ ಶ್ರೀ ವಿಶ್ವೇಶ್ವರಯ್ಯ ಬೀದಿ ದೀಪದ ಬೆಳಕಲ್ಲಿ ಓದಿ ಅಸಾಮಾನ್ಯ ಇಂಜಿನಿಯರ್ ಆಗಿ ಇಂದು ನಮ್ಮೆಲ್ಲರ masterpiece ಆದ್ರು‌.  ಆದ್ರೆ ಇವತ್ತು ಅದೇ ಥರ ಬೀದಿ ದೀಪದ ಕೆಳಗೆ ಕೂತು ಓದು ಅನ್ನೊದಿಕ್ಕೆ ಹಾಗಲ್ಲ…

ವಿದ್ಯಾರ್ಥಿ ಮಿತ್ರ ಡಾ. ಅಬ್ದುಲ್ ಕಲಾಂ ಅವರು ಕೂಡ ಅವರ ಬಾಲ್ಯದಲ್ಲಿ ಬೀದಿ ಬೀದಿಯಲ್ಲಿ ಪೇಪರ್ ಹಾಕೊಂಡು, ಓದಿ , ವಿಜ್ಞಾನಿಯಾಗಿ , ರಾಷ್ಟ್ರಪತಿಯಾಗಿ , ಅಲ್ಲದೆ ಒಬ್ಬ ಮಹಾನ್ ಪುರುಷ ಆಗಿ ಇವತ್ತು ನಮ್ಗೆಲ್ಲರಿಗೂ inspiration ಆಗಿದ್ದರೆ.. ಅಗಂತಾ ಇವಾಗ ನೀವು ಪೇಪರ್ ಹಾಕೊಂಡು ಓದಿ ಅಂತಾ ಹೇಳಕ್ಕೆ ಆಗಲ್ಲ…

ಲೆಕ್ಕಕ್ಕೆ ತಗೋಂಡ್ರೆ ಒಬ್ಬರಲ್ಲಾ‌ ಸಾವಿರಾರು ಜನ ಸಿಕ್ತಾರೆ…‌ಆದ್ರೆ ಅಂದಿನ‌ ಪರಿಸ್ಥಿತಿನೇ‌ ಬೇರೆ ಇಂದಿನ್ ದುಸ್ಥಿತಿನೇ ಬೇರೆ , ಹಾಗಾಗಿ ನಾನು ಹೇಳೋದು ದುಂದು ವೆಚ್ಚಕ್ಕೆ ಅವಕಾಶ ಕೊಡೋ ಬದಲು , ಇನ್ನೊಬ್ಬರ ನಾಳಿನ ಶಿಕ್ಷಣ ಕ್ಕಾಗಿ ಸಹಾಯ ಮಾಡಿ ಅನ್ನೋದೆ ನನ್ನೊಬ್ನನ‌ ಮಾತಲ್ಲ… ಸಕಲರ‌ಮಾತು…

ಇದು ಕೇವಲ ಬರೀ ಪಬ್ ಒಂದರಲ್ಲೆ ಮಾಡೋ ಕೆಲಸವಲ್ಲ… ಯಾವುದೋ ಕುದುರೆ ಬಾಲಕ್ಕೆ ಜೂಜು‌ಕಟ್ಟಿ ಸೋಲುವ ಬದಲು,  ಕಂಡೋರ್ ಜೊತೆ ಪಾರ್ಟಿ ಮಾಡಿ ಕುಡ್ಕೊಂಡು ಬೀಳೋ ಬದಲು , ಇದರಿಂದಲು ಕೂಡ ಸ್ವಲ್ಪ ಸ್ವಲ್ಪವೇ ದಾನದ ಮೂಲಕ ನಾಲ್ಕು ‌ಮಕ್ಕಳ ಅಕ್ಷರದಾತ ನಾಗಬಹುದು… ಅದಕ್ಕಾಗಿ ಇನ್ನ ಮೇಲಾದ್ರು ದಯಮಾಡಿ ದುಂದು ವ್ಯಯ ಮಾಡುವ ಬದಲು ಸಮಾಜಮುಖಿಯಾಗಿ ಇರಿ…ನಿಮ್ ನಿಮ್ ಲೈಪು ನೀವು ಎಂಜಾಯ ಮಾಡಿ ಆದ್ರೆ ನಿಮ್ ಆ ‌ಒಂದು ಕಾಸಿನ‌ ದಾನದಿಂದ ಇನ್ನೊಬ್ಬನ ಮುಖದಲ್ಲಿ ಅರಳೋ ಮಂದಾಹಾಸವಾಗಿ… ನಾಳಿನ‌ ಬಲಿ಼ಷ್ಠ ಭಾರತವಾಗಿ…

ದಾನಕಿಂತ ಶ್ರೇಷ್ಠ ದಾನ ವಿದ್ಯಾದಾನ…

ಬಹಿರಂಗ

ತ್ರಿವರ್ಣ ಧ್ವಜ ಎಂಬ ಸುಳ್ಳು ಸೃಷ್ಟಿ..!

Published

on

  •  ಡಾ.ವಡ್ಡಗೆರೆ ನಾಗರಾಜಯ್ಯ

ಭಾರತದ ರಾಷ್ಟ್ರ ಧ್ವಜದಲ್ಲಿ ಕೇಸರಿ – ಬಿಳಿ – ಹಸಿರು 3 ಬಣ್ಣಗಳಿವೆ. ಆದುದರಿಂದ ಅದನ್ನು ತ್ರಿವರ್ಣ ಧ್ವಜ ಅಥವಾ ತಿರಂಗ ಎಂದು ಕರೆಯಲಾಗುತ್ತದೆ” ಎಂದು ನಮಗೆ ಶಾಲೆಯಲ್ಲಿ ಹೇಳಿಕೊಟ್ಟಿದ್ದರು. ನಾವು ಅದನ್ನೇ ಕಂಠಪಾಠ ಮಾಡಿ ಒಪ್ಪಿಸುತ್ತಾ ಬಂದಿದ್ದೇವೆ. ರಾಷ್ಟ್ರಧ್ವಜದ ನಡುವೆ ಚಕ್ರದ ಚಿತ್ರವಿದ್ದು ಅದು ನೀಲಿ ಬಣ್ಣದಲ್ಲಿದೆ. ಈಗ ರಾಷ್ಟ್ರ ಧ್ವಜದಲ್ಲಿ ನೀಲಿ ಬಣ್ಣವೂ ಸೇರಿದಂತೆ ಒಟ್ಟಾರೆ 4 ಬಣ್ಣಗಳಾದವು.

ಧ್ವಜದ ಮಧ್ಯದಲ್ಲಿ ನೀಲಿ ಬಣ್ಣದಲ್ಲಿ ಶೋಭಿಸುತ್ತಿರುವುದು ಭಾರತ ದೇಶದ ಮೊದಲ ರಾಷ್ಟ್ರಧರ್ಮವಾದ ಬೌದ್ಧಧರ್ಮದ ಅಶೋಕನ “ಧಮ್ಮಚಕ್ರ”ವೋ ಅಥವಾ ಗಾಂಧಿ ತಾತನು ಸ್ವಾವಲಂಬನೆಯ ಗುರುತಾಗಿ ಪ್ರತಿಪಾದಿಸಿದ ಚರಕದ ಚಕ್ರವೋ? ಹೀಗೊಂದು ಪ್ರಶ್ನೆ ಉದ್ಭವವಾಗುತ್ತದೆ.

ಇದು ಧಮ್ಮಚಕ್ರವಾಗಿದ್ದ ಪಕ್ಷದಲ್ಲಿ ಅಶೋಕ ಚಕ್ರವರ್ತಿ ಮತ್ತು ಡಾ.ಅಂಬೇಡ್ಕರ್ ಅಪ್ಪಿಕೊಂಡ ಬುದ್ಧಗುರುವಿನ ಧಮ್ಮದ ಲಾಂಛನವಾಗಿ ಮತ್ತು ಈ ನಾಡಿನ ಮೂಲನಿವಾಸಿಗಳ ದ್ರಾವಿಡರ ಸಂಕೇತವಾಗಿ ನೀಲಿಯನ್ನು ಗುರುತಿಸಲಾಗಿದೆ. ದ್ರಾವಿಡ ಮೂಲದ ಬುದ್ಧತ್ವವನ್ನು ಪ್ರಜ್ಞೆಯಿಂದ ದೂರವಿಡಲು ಬಯಸುವ ಆರ್ಯಸಂತಾನ ಮನಸ್ಸುಗಳು ಮೊದಲಿಗೆ ಅಕ್ಷರ ಕಲಿತು ಅವರ ರಾಜಕೀಯ ಒಳಸಂಚಿನ ಅಜೆಂಡಾದ ಪ್ರಕಾರ ನೀಲಿಯನ್ನು ಕೈಬಿಟ್ಟು ಕೇವಲ ಕೇಸರಿ – ಬಿಳಿ – ಹಸಿರು 3 ಬಣ್ಣಗಳನ್ನು ಮಾತ್ರ ಉಲ್ಲೇಖಿಸತೊಡಗಿದರೆ?

“ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿದ ಚರಕವು” ಎಂದು ಬಾವುಟದಲ್ಲಿರುವ ಚಕ್ರವನ್ನು ಗಾಂಧಿತಾತನ ಚರಕದ ಚಕ್ರವೆಂದು ನಮ್ಮನ್ನು ನಂಬಿಸಲಾಗಿದೆ. ಹಾಗೂ ಚಕ್ರವನ್ನು ಚಿತ್ರಿಸಲು ಬಳಸಲಾಗಿರುವ ನೀಲಿ ಬಣ್ಣವನ್ನು ಉಲ್ಲೇಖಿಸದೆ ಕೈಬಿಡಲಾಗಿದೆ. ಹಾಗಿದ್ದರೆ ಇದನ್ನು ಪ್ರಶ್ನಿಸದೆ ಮಗುಮ್ಮಾಗಿ ಒಪ್ಪಿಕೊಂಡಿರುವ ನಾವು, ಸತ್ಯವನ್ನು ಸುಳ್ಳುಮಾಡಲು ಪ್ರಯತ್ನಿಸುವ ಜನರ ಸಂಚಿಗೆ ಒಳಗಾಗಿದ್ದೇವೆ ಅನ್ನಿಸುತ್ತಿದೆ.

ಚಲನಶೀಲತೆಯ ಪ್ರತೀಕವಾದ ಅಶೋಕ ಚಕ್ರವನ್ನು ಸಾರನಾಥದ ಸ್ಥೂಪಸ್ತಂಭ ಶಾಸನದಿಂದ ಆರಿಸಿಕೊಂಡು ನಮ್ಮ ರಾಷ್ಟ್ರೀಯ ಚಿಹ್ನೆಗಳ ಕೇಂದ್ರನೆಲೆಯ ಲಾಂಛನವನ್ನಾಗಿ ಪ್ರತಿಷ್ಠಾಪಿಸಲಾಗಿದೆ.

ಧಮ್ಮಚಕ್ರ ಪ್ರವರ್ತನ’ ದುಃಖವನ್ನು ನೀಗುವುದಾಗಿದೆ. ಅರ್ಥಾತ್ ಶೋಕವನ್ನು ‘ಅ’-ಶೋಕ ಆಗುವಂತೆ ನಮ್ಮ ನಡೆಗಳನ್ನು ಪ್ರಜ್ಞೆಯಿಂದ ಉದ್ದೀಪಿಸುವುದು! ಶೋಕ ಇಲ್ಲದ್ದೇ ಅಶೋಕ!

ಶೋಕ ಅಳಿಯುವ ಬುದ್ಧಭಾರತ ನಿರ್ಮಾಣದ ಘನವಾದ ಧ್ಯೇಯದಿಂದಲೇ ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನದಲ್ಲಿಯೂ, ಭಾರತದ ಬಾವುಟದಲ್ಲಿಯೂ ಅಶೋಕ ಚಕ್ರ ಅಥವಾ ಧಮ್ಮಚಕ್ರವನ್ನು ಅಳವಡಿಸಿದ್ದಾರೆ.

ನಮ್ಮ ಬಾವುಟದಲ್ಲಿ 4 ಬಣ್ಣಗಳು ಕಣ್ಣಿಗೆ ಕಂಡರೂ ತಿರಂಗ ಎಂದು ಹೇಳುತ್ತಿರುವುದರ ಹಿಂದಿರುವ ಒಳ‌ಮರ್ಮವೇನು? ನೀಲಿ ಬಣ್ಣಕ್ಕೂ ಘನತೆಯಿದೆ, ರಾಷ್ಟ್ರಧ್ವಜದಲ್ಲಿ ನೀಲಿ ಬಣ್ಣಕ್ಕೂ ಗೌರವದ ಸ್ಥಾನವಿದೆ ಎಂದು ತಿಳಿಸೋಣ. ಇನ್ನು ಮುಂದೆ ಭಾರತದ ರಾಷ್ಟ್ರ ಧ್ವಜದಲ್ಲಿ ನೀಲಿ- ಕೇಸರಿ – ಬಿಳಿ – ಹಸಿರು 4 ಬಣ್ಣಗಳಿವೆ ಎಂಬ ಸತ್ಯವನ್ನು ಪ್ರತಿಪಾದಿಸೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಅಂಬೇಡ್ಕರ್ ವಾದ ಭಾರತದ ಸಮಸ್ಯೆಗಳಿಗೆ ಉತ್ತರ ; ಅದೇ ಎತ್ತರ

Published

on


ಪರಶುರಾಮ್.ಎ ರವರ ಹೊಸ ಪುಸ್ತಕ ” ವಿದ್ಯಾರ್ಥಿ ಯುವಜನರಿಗಾಗಿ ಅಂಬೇಡ್ಕರ್ ವಾದ ” ಬಿಡುಗಡೆಗೆ ಸಿದ್ದಗೊಂಡಿದ್ದು, ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು ಈ ಪುಸ್ತಕಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗೆ.


  • ಪೂಜ್ಯ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿಗಳು
    ಶ್ರೀ ಉರಿಲಿಂಗ ಪೆದ್ದೀಶ್ವರ ಮಠ
    ಮೈಸೂರು

ಅಂಬೇಡ್ಕರ್ ವಾದ ಎಂಬುದು ಭಾರತದ ಎಲ್ಲಾ ಸಮಸ್ಯೆಗಳಿಗೆ ಉತ್ತರ. ಹಾಗೂ ಅದೇ ಎತ್ತರ.” ಭಾರತೀಯರ ಹಾಗೂ ಭಾರತದ ವಿಮೋಚನೆ ಇರುವುದೇ ಅಂಬೇಡ್ಕರ್ ವಾದದಲ್ಲಿ.

ಹೀಗಾಗಿ ಸಹೋದರ ಪರಶುರಾಮ್. ಎ ರವರು ಹೊರತರುತ್ತಿರುವ, “ವಿದ್ಯಾರ್ಥಿ- ಯುವಜನರಿಗಾಗಿ ಅಂಬೇಡ್ಕರ್ ವಾದ” ಪುಸ್ತಕವು ಕೇವಲ ಪದಗಳ ಪುಂಜವಲ್ಲ. ಅದು ‘ಅಧಿಕಾರ ಹೀನರನ್ನು ಅಧಿಕಾರಕ್ಕೆ ಏರಿಸುವುದೇ ಅಂಬೇಡ್ಕರ್ ವಾದ’ ಎಂದು ಕಟು ಸತ್ಯವನ್ನು ಸಮಸ್ತ ಶೋಷಿತ ವರ್ಗಕ್ಕೆ ರವಾನಿಸಿದ್ದಾರೆ.

ಶೋಷಿತರ ಸಮಸ್ಯೆಯು ರಾಜಕೀಯ ಸಮಸ್ಯೆಯಾಗಿದೆ ಎಂಬ ನಿಜದ ನಿಲುವನ್ನು ತಿಳಿಸುತ್ತಾ, ಅಧಿಕಾರ ಹೀನತೆಯೇ ಅಸ್ಪೃಶ್ಯತೆ ಎಂಬ ಸತ್ಯವನ್ನು ದಮನಿತರಿಗೆ ತಿಳಿ ಹೇಳಿದ ವಿಷಯವನ್ನು ಇಲ್ಲಿ ಸೂಕ್ಷ್ಮವಾಗಿ ಲೇಖಕರು ಎತ್ತಿ ಹಿಡಿದಿದ್ದಾರೆ. ಇಂದು ಅಂಬೇಡ್ಕರ್ ವಾದಿಗಳು, ಅವಕಾಶವಾದಿಗಳಾಗಿ ನಮ್ಮ ನೊಂದ ಸಮಾಜವನ್ನು ಮತ್ತೆ ಹಿಂದಕ್ಕೆ ತಳ್ಳುತ್ತಿದ್ದಾರೆ. ಹಾಗೂ ಸಾಧಕರಾಗಬೇಕಿದ್ದ ನಾವುಗಳು, ಸಮಯ ಸಾಧಕರಾಗುತ್ತಿದ್ದೇವೆ.

ಇದು ಅತ್ಯಂತ ಅಪಾಯದ ಕಾಲ ನಮ್ಮ ಪಾಲಿಗೆ ಬಂದು ಬಿಟ್ಟಿದೆ. ಈ ಕಾರಣಕ್ಕಾಗಿ ನಮಗೆ ಅಂಬೇಡ್ಕರ್ ವಾದ ಭಾರತದ ನಿಜವಾದ ಮುಖವನ್ನು ನಮಗೆ ಪರಿಚಯಿಸುತ್ತದೆ. ‘ಸಮಗ್ರ ಭಾರತವೆಂದರೆ ಅದು ಬೇರೆನೂ ಅಲ್ಲ. ಅದೇ ಅಂಬೇಡ್ಕರ್ ವಾದ‌’. ಜಗತ್ತು ಅಂಬೇಡ್ಕರ್ ವಾದದ ಕಡೆ ಮುಖ ಮಾಡಿದರೆ, ಈ ನತದೃಷ್ಠ ಭಾರತೀಯರು ಜಾತಿವಾದದ ಕಡೆ ಮುಖ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರವರು: “ಭಾರತದಲ್ಲಿ ಮನುಷ್ಯರು ಜೀವಂತವಿಲ್ಲ. ಜಾತಿಗಳು ಜೀವಂತವಿದೆ” ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.

ಕೊರಳಿನಿಂದ ಅಂಬೇಡ್ಕರ್ ವಾದವನ್ನು ಹೇಳುವುದು ಬೇರೆ. ಕರುಳಿನಿಂದ ಅಂಬೇಡ್ಕರ್ ವಾದವನ್ನು ಹೇಳುವುದೇ ಬೇರೆ. ಹೀಗಾಗೀ ನಮ್ಮ ಸಾಹಿತಿ ಪರಶುರಾಮ್ ಕರುಳಿನ ಅಂಬೇಡ್ಕರ್ ವಾದವನ್ನು ನಮಗೆ ತಿಳಿಸಿ ಕೊಟ್ಟಿದ್ದಾರೆ. ದಲಿತರ ಧ್ವನಿ ಪ್ರೊ.ಬಿ.ಕೃಷ್ಣಪ್ಪ ಹಾಗೂ ನಮ್ಮ ಮಹಾನ್ ವಿಮೋಚಕ ದಾದಾಸಾಹೇಬ್ ಕಾನ್ಷಿರಾಮ್ ಜೀಯವರ ಬಗ್ಗೆ ಒಳಗೊಂಡಂತೆ ಅದ್ಭುತವಾದ ನಿಖರತೆಯ ವಿಷಯಗಳನ್ನು ವಿದ್ಯಾರ್ಥಿ ಹಾಗೂ ಯುವಜನತೆಗೆ ತಿಳಿಸಿದ್ದಾರೆ. ಮುಂದೆಯೂ ಇವರ ಸಾಹಿತ್ಯ ಪ್ರಬುದ್ಧ ಭಾರತದ ಕಡೆಗೆ ದಾರಿ ದೀಪವಾಗಿರಲಿ, ಮತ್ತಷ್ಟು ಸಾಹಿತ್ಯ ಇವರಿಂದ ಹೊರಬರಲಿ ಎಂದು ಶುಭ ಕೋರುತ್ತೇನೆ.

“ಭವತು ಸಬ್ಬ ಮಂಗಳಂ”

(ಪುಸ್ತಕಗಳಿಗೆ ಸಂಪರ್ಕಿಸಿ: ಬುದ್ದ ಬುಕ್ ಹೌಸ್
ವಿದ್ಯಾರ್ಥಿ ಯುವಜನರಿಗಾಗಿ ಅಂಬೇಡ್ಕರ್ ವಾದ
ಬೆಲೆ: 80ರೂ
ಫೋನ್ ನಂಬರ್: 7406155272 / 8050807463)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಅಧಿಕಾರದ ಉನ್ನತ ಸ್ಥಾನದಲ್ಲಿರುವವರಿಂದ ಈ ತೆರನಾದ ಮತಧಾರ್ಮಿಕ ಪಕ್ಷಪಾತದ ನಡವಳಿಕೆ ಸರಿಯೇ..?

Published

on

  • ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು

ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪವಿರುವ ಕಳಂಜ ಗ್ರಾಮದಲ್ಲಿ ಜುಲೈ 20, 2022ರಂದು ಬಿ. ಮಸೂದ್‌ ಎಂಬ 18 ವರ್ಷದ ಯುವಕನ ಮೇಲೆ ಗುಂಪು ಹಲ್ಲೆ ಮಾಡಲಾಯಿತು.  ಆತ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಜುಲೈ 21 ರಂದು ಅಸುನೀಗಿದ.

ಆ ಸಮಯದಲ್ಲಿ ಆಸ್ಪತ್ರೆಯ ಮುಂದೆ ಜಮಾಯಿಸಿದ್ದ ದೊಡ್ಡ ಗುಂಪು, ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಮೃತನ ಕುಟುಂಬಕ್ಕೆ ಪರಿಹಾರ ಹಣವನ್ನು ನೀಡುವ ಭರವಸೆಯನ್ನು ಕೊಟ್ಟರೆ ಮಾತ್ರ ಹೆಣವನ್ನು ಸಾಗಿಸಲಾಗುವುದು ಎಂದು ಪಟ್ಟು ಹಿಡಿದರು.  ತಹಶೀಲದಾರರು ಭರವಸೆ ನೀಡಿದ ತರುವಾಯ ಅಂತ್ಯ ಕ್ರಿಯೆಗಳನ್ನು ಜರುಗಿಸಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಯಿತು. ಈ ಕೇಸಿಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಲಾಯಿತು.

ಇದೇ ತಿಂಗಳ 26ರಂದು ಸುಳ್ಯ ಸಮೀಪದ ಬೆಳ್ಳಾರೆ ಗ್ರಾಮದಲ್ಲಿ 32 ವರ್ಷದ, ಬಿಜೆಪಿ ಯುವಮೋರ್ಚಾದ ನಾಯಕ ಪ್ರವೀಣ್ ನನ್ನು ಬೈಕ್‌ ಸವಾರರು ಹತ್ಯೆ ಮಾಡಿದರು. ಈ ವಿಚಾರದಲ್ಲಿ ಮೂರು ಮಂದಿಯನ್ನು ದಸ್ತಗಿರಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಬಿಜೆಪಿ ಯುವಮೋರ್ಚಾದ ಅನೇಕ ನಾಯಕರು ಮತ್ತು ಕಾರ್ಯಕರ್ತರು ರಾಜೀನಾಮೆಯನ್ನು ನೀಡಿದರು. ದೊಡ್ಡಬಳ್ಳಾಪುರದಲ್ಲಿ ಒಂದು ವರ್ಷದ ಬೊಮ್ಮಾಯಿ ಆಡಳಿತದ ಜನೋತ್ಸವ ಕಾರ್ಯಕ್ರಮವನ್ನು ಸಹ ರದ್ದು ಮಾಡಲಾಯಿತು.*

ಮುಖ್ಯ ಮಂತ್ರಿ ಬೊಮ್ಮಾಯಿ ಜುಲೈ 28ರಂದು ಕೆಲವು ಬಿಜೆಪಿ ರೊಡನೆ ಬೆಳ್ಳಾರೆಯಲ್ಲಿರುವ ಮೃತ ಪ್ರವೀಣನ ಕುಟಂಬದ ನಿವಾಸಕ್ಕೆ ಭೇಟಿ ನೀಡಿದರು. ಸರ್ಕಾರದ ವತಿಯಿಂದ ರೂ 25 ಲಕ್ಷ ಪರಿಹಾರದ ಚೆಕ್ ನ್ನು , ಬಿಜೆಪಿ ಪಕ್ಷದಿಂದ ಇದೇ ಮೊತ್ತವನ್ನು ನೀಡಲಾಯಿತು. ಸಚಿವರಾಗಿರುವ ಅಶ್ವತ್ಥನಾರಾಯಣ ರೂ10 ಲಕ್ಷ ಮತ್ತು ಅಂಗಾರ ಕೂಡ*ಆರ್ಥಿಕವಾಗಿ ಸ್ಪಂದಿಸಿದ್ದಾರೆ. ಇದೇ ಸಂದರ್ಭದಲ್ಲಿ, ಬೊಮ್ಮಾಯಿ ಪ್ರವೀಣನ ಕೊಲೆಯನ್ನು ಒಂದು ಭಯೋತ್ಪಾದನೆಯ ಕೃತ್ಯವೆಂದು ಬಣ್ಣಿಸಿ, ಅವಶ್ಯವಿದ್ದರೇ ಉತ್ತರ ಪ್ರದೇಶದ ಯೋಗಿ ಆಡಳಿತದ ಮಾದರಿಯನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳಿದರು.

ಆದರೆ ಬೊಮ್ಮಾಯಿಯವರು  ಅದೇ ಸ್ಥಳದಲ್ಲಿರುವ, ಹತನಾದ ಮಸೂದನ ಮನೆಗೆ ಭೇಟಿ ನೀಡಲಿಲ್ಲ(ಆತನ ಮನೆಗೆ ಆಡಳಿತರೂಢ ಪಕ್ಷದ ಯಾವ ನಾಯಕರು, ಶಾಸಕರು, ಮಂತ್ರಿಗಳು ಭೇಟಿ ನೀಡಿಲ್ಲ ಎನ್ನುತ್ತದೆ ಮಾಧ್ಯಮದ ಮಾಹಿತಿ) ; ಚಕಾರವೂ ಎತ್ತಲಿಲ್ಲ. ಮುಖ್ಯಮಂತ್ರಿ ಅಲ್ಲಿದ್ದಾಗಲೇ ಸುರತ್ಕಲ್ ನಲ್ಲಿ ಫಾಸಿಲ್ ಎಂಬ ಯುವಕನ ಹತ್ಯೆಯಾಗಿದೆ. ಮಂಗಳೂರಿನಲ್ಲಿದ್ದರೂ ಫಾಸಿಲ್ ಸೇಪರ್ಡೆಗೊಂಡಿದ್ದ ಆಸ್ಪತ್ರೆಗೆ ನಮ್ಮ ಸಿಎಂ ಭೇಟಿ ಮಾಡಲಿಲ್ಲ.

ಮುಖ್ಯಮಂತ್ರಿಯವರು ಸುಳ್ಯಕ್ಕೆ ಭೇಟಿ ನೀಡಿದಾಗ ಮಸೂದನ ಕುಟುಂಬಕ್ಕೆ ನೇರವಾಗಿ ಪರಿಹಾರವನ್ನು ನೀಡಬಹುದಿತ್ತಲ್ಲವೇ? ಸರ್ಕಾರದ ಹಣವೆಂದರೇ ಅದು ಜನತೆಯ ಹಣವಲ್ಲವೇ? ತಮಗೆ ಇಷ್ಟ ಬಂದಂತೆ ಸರ್ಕಾರದ ಹಣವನ್ನು ದಯಪಾಲಿಸುವ ಹಕ್ಕಿದೆಯೇ? ಇಂತಹ ನಡೆಗಳು ಅಮಾನವೀಯವಲ್ಲವೇ? ಅವರು ಅಲಂಕರಿಸಿರುವ ಘನಸ್ಥಾನಕ್ಕೆ ತಕ್ಕುದಾಗಿದವೆಯೇ? ಅವರಿಗೆ ಮಸೂದನ ಸಂಸಾರದ ಆರ್ತನಾದ ಕೇಳಿಸಲಿಲ್ಲವೇ? ಆತನ ಕೊಲೆಯೂ ಕೊಲೆಯಲ್ಲವೇ?  ಮಸೂದನ ಹತ್ಯೆ ಭಯೋತ್ಪಾದನಾ ಕ್ರಿಯೆಯಡಿ ಬರುವುದಿಲ್ಲವೇ? ನಮ್ಮ ಇಡೀ ರಾಜ್ಯದ ಮುಖ್ಯ ಮಂತ್ರಿಯಾಗಿರುವ ಬೊಮ್ಮಾಯಿಯವರ ಇಂತಹ ನಡೆಗಳಲ್ಲಿ ಮತಧಾರ್ಮಿಕ ಪಕ್ಷಪಾತವಿಲ್ಲವೇ?

ಅವರು ಬಿಜೆಪಿ ಪಕ್ಷದವರಿಗೆ, ಅದರ ಹಿಂಬಾಲಕರಿಗೆ ಮಾತ್ರ ಮುಖ್ಯಮಂತ್ರಿಯಾಗಿರುವರೇ? ಮತಧರ್ಮ ನಿರಪೇಕ್ಷತೆಯನ್ನು ಸಾರುವ ನಮ್ಮ ಸಂವಿಧಾನದಡಿ ಪದಗ್ರಹಣವನ್ನು ಮಾಡಿರುವ ಶ್ರೀಯುತರ ಇಂತಹ ನಿರ್ಧಾರಗಳು ಅಸಂವಿಧಾನಿಕವಲ್ಲವೇ? ಮುಂಬರುವ ಆಡಳಿತಗಾರರಿಗೆ ಅವರು ಯಾವ ಮಾದರಿಯನ್ನು ಬಿಡುತ್ತಿದ್ದಾರೆ? ಇದು ನಮ್ಮ ರಾಜ್ಯದಲ್ಲಿ ಆತಂಕಕಾರಿಯಾಗುತ್ತಿರುವ ಮತಧಾರ್ಮಿಕ ವೈಷಮ್ಯ ಹಾಗೂ ಅಸಹಿಷ್ಣುತೆಗೆ ಇಂಬು ನೀಡುವುದಿಲ್ಲವೇ?  ಈ ತೆರನಾದ ನಡವಳಿಕೆ ಜನತೆಗೆ ಯಾವ ಸಂದೇಶವನ್ನು ರವಾನಿಸುತ್ತದೆ?

ಇಂತಹ ಅನೇಕ ಪ್ರಶ್ನೆಗಳು ಪ್ರಜ್ಞಾವಂತ ನಾಗರಿಕರಲ್ಲಿ ಜನ್ಮತಳೆದರೇ, ಅವು ಸಹಜವೇ ಸರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ನಿತ್ಯ ಭವಿಷ್ಯ19 hours ago

ಸೋಮವಾರ ರಾಶಿ ಭವಿಷ್ಯ -ಸೆಪ್ಟೆಂಬರ್-26,2022 : ಈ ರಾಶಿಯವರ ಮದುವೆ ಬಗ್ಗೆ ಚಿಂತಿಸಬೇಡಿ ಮತ್ತು ಈ ರಾಶಿಯವರ ಆದಾಯ ದ್ವಿಗುಣ ವಾಗಲಿದೆ

ಈ ರಾಶಿಯವರ ಮದುವೆ ಬಗ್ಗೆ ಚಿಂತಿಸಬೇಡಿ ಮತ್ತು ಈ ರಾಶಿಯವರ ಆದಾಯ ದ್ವಿಗುಣ ವಾಗಲಿದೆ, ಸೋಮವಾರ ರಾಶಿ ಭವಿಷ್ಯ -ಸೆಪ್ಟೆಂಬರ್-26,2022 ನವರಾತ್ರಿ ಆರಂಭ ಶುಭ ದಿವಸ (ಘಟಸ್ಥಾಪನೆ...

ನಿತ್ಯ ಭವಿಷ್ಯ2 days ago

ಭಾನುವಾರ ರಾಶಿ ಭವಿಷ್ಯ -ಸೆಪ್ಟೆಂಬರ್-25,2022 : ಈ ರಾಶಿಯವರು ಗಂಡನ ಏಳ್ಗೆಗಾಗಿ ಸದಾ ಪ್ರಾರ್ಥಿಸುತ್ತಾರೆ!

ಈ ರಾಶಿಯವರು ಗಂಡನ ಏಳ್ಗೆಗಾಗಿ ಸದಾ ಪ್ರಾರ್ಥಿಸುತ್ತಾರೆ! ಭಾನುವಾರ ರಾಶಿ ಭವಿಷ್ಯ -ಸೆಪ್ಟೆಂಬರ್-25,2022 ಸರ್ವಪಿತೃ ಅಮವಾಸೆ ಸೂರ್ಯೋದಯ: 06:05 ಏಎಂ, ಸೂರ್ಯಾಸ್ತ : 06:10 ಪಿಎಂ ಶಾಲಿವಾಹನ...

ನಿತ್ಯ ಭವಿಷ್ಯ3 days ago

ಶನಿವಾರ ರಾಶಿ ಭವಿಷ್ಯ -ಸೆಪ್ಟೆಂಬರ್-24,2022 :ಈ ರಾಶಿಯವರಿಗೆ ಅಧಿಕಾರ ಮತ್ತು ಸಂಪತ್ತು ತಾನಾಗಿಯೇ ಸಿಗಲಿದೆ!

ಈ ರಾಶಿಯವರಿಗೆ ಅಧಿಕಾರ ಮತ್ತು ಸಂಪತ್ತು ತಾನಾಗಿಯೇ ಸಿಗಲಿದೆ! ಶನಿವಾರ ರಾಶಿ ಭವಿಷ್ಯ -ಸೆಪ್ಟೆಂಬರ್-24,2022 ಸೂರ್ಯೋದಯ: 06:05 ಏಎಂ, ಸೂರ್ಯಾಸ್ತ : 06:11 ಪಿಎಂ ಶಾಲಿವಾಹನ ಶಕೆ1944,...

ನಿತ್ಯ ಭವಿಷ್ಯ4 days ago

ಶುಕ್ರವಾರ- ರಾಶಿ ಭವಿಷ್ಯ ಸೆಪ್ಟೆಂಬರ್-23,2022 : ಈ ರಾಶಿಯವರಿಗೆ ಆಸ್ತಿ ಖರೀದಿ ಯೋಗ ಕೂಡಿ ಬರಲಿದೆ..

ಈ ರಾಶಿಯವರಿಗೆ ಆಸ್ತಿ ಖರೀದಿ ಯೋಗ ಕೂಡಿ ಬರಲಿದೆ.. ಶುಕ್ರವಾರ- ರಾಶಿ ಭವಿಷ್ಯ ಸೆಪ್ಟೆಂಬರ್-23,2022 ಸೂರ್ಯೋದಯ: 06:05 ಏಎಂ, ಸೂರ್ಯಾಸ್ತ : 06:12 ಪಿಎಂ ಶಾಲಿವಾಹನ ಶಕೆ1944,...

ನಿತ್ಯ ಭವಿಷ್ಯ5 days ago

ಗುರುವಾರ- ರಾಶಿ ಭವಿಷ್ಯ ಸೆಪ್ಟೆಂಬರ್-22,2022 : ಈ ರಾಶಿಯವರು ಪ್ರೀತಿ ಮತ್ತು ನಂಬಿಕೆಗೆ ಅರ್ಹರು!

ಈ ರಾಶಿಯವರು ಪ್ರೀತಿ ಮತ್ತು ನಂಬಿಕೆಗೆ ಅರ್ಹರು! ಗುರುವಾರ- ರಾಶಿ ಭವಿಷ್ಯ ಸೆಪ್ಟೆಂಬರ್-22,2022 ಸೂರ್ಯೋದಯ: 06:05 ಏಎಂ, ಸೂರ್ಯಾಸ್ತ : 06:13 ಪಿಎಂ ಶಾಲಿವಾಹನ ಶಕೆ1944, ಶುಭಕೃತ...

ನಿತ್ಯ ಭವಿಷ್ಯ6 days ago

ಬುಧವಾರ- ರಾಶಿ ಭವಿಷ್ಯ ಸೆಪ್ಟೆಂಬರ್-21,2022 : ಈ ರಾಶಿಯವರಿಗೆ ಮಹಾ ಪಂಚ ಪುರುಷ ಯೋಗದಿಂದ ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯ!

ಈ ರಾಶಿಯವರಿಗೆ ಮಹಾ ಪಂಚ ಪುರುಷ ಯೋಗದಿಂದ ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯ! ಬುಧವಾರ- ರಾಶಿ ಭವಿಷ್ಯ ಸೆಪ್ಟೆಂಬರ್-21,2022 ಇಂದಿರಾ ಏಕಾದಶಿ ಸೂರ್ಯೋದಯ: 06:05 ಏಎಂ, ಸೂರ್ಯಾಸ್ತ :...

ನಿತ್ಯ ಭವಿಷ್ಯ7 days ago

ಮಂಗಳವಾರ ರಾಶಿ ಭವಿಷ್ಯ -ಸೆಪ್ಟೆಂಬರ್-20,2022 : ಈ ರಾಶಿಯವರು ಒಳ್ಳೆಯ ದಿನಕ್ಕೋಸ್ಕರ ಕಾಯುತ್ತಿದ್ದೀರಾ ಅಲ್ವಾ?

ಈ ರಾಶಿಯವರು ಒಳ್ಳೆಯ ದಿನಕ್ಕೋಸ್ಕರ ಕಾಯುತ್ತಿದ್ದೀರಾ ಅಲ್ವಾ? ಮಂಗಳವಾರ ರಾಶಿ ಭವಿಷ್ಯ -ಸೆಪ್ಟೆಂಬರ್-20,2022 ಸೂರ್ಯೋದಯ: 06:05 ಏಎಂ, ಸೂರ್ಯಾಸ್ತ : 06:14 ಪಿಎಂ ಶಾಲಿವಾಹನ ಶಕೆ1944, ಶುಭಕೃತ...

ನಿತ್ಯ ಭವಿಷ್ಯ1 week ago

ಸೋಮವಾರ- ರಾಶಿ ಭವಿಷ್ಯ ಸೆಪ್ಟೆಂಬರ್-19,2022 : ಈ ರಾಶಿಯವರ ಮದುವೆ ವಿಳಂಬವೇಕೆ?

ಈ ರಾಶಿಯವರ ಮದುವೆ ವಿಳಂಬವೇಕೆ? ಸೋಮವಾರ- ರಾಶಿ ಭವಿಷ್ಯ ಸೆಪ್ಟೆಂಬರ್-19,2022 ಸೂರ್ಯೋದಯ: 06:05 ಏಎಂ, ಸೂರ್ಯಾಸ್ತ : 06:15 ಪಿಎಂ ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ,...

ದಿನದ ಸುದ್ದಿ1 week ago

ಉದ್ಯೋಗವಂಚಿತ ಯುವಜನತೆಯಿಂದ ಸೆ.19 ರಂದು ಫ್ರೀಡಂ ಪಾರ್ಕ್ ನಲ್ಲಿ ‘ಬೃಹತ್ ಪ್ರತಿಭಟನೆ’ : ಭವ್ಯ ನರಸಿಂಹಮೂರ್ತಿ ಕರೆ

ಸುದ್ದಿದಿನ,ಬೆಂಗಳೂರು : ಸೆಪ್ಟೆಂಬರ್ 19 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ವಂಚಿತರಾದನಾವು ನಮ್ಮ ಕರ್ನಾಟಕ ಸ್ಟೇಟ್ ಎಕ್ಸಾಮಿನೇಶನ್ ಆಸ್ಪಿರನ್ಟ್ಸ್ ಅಸೋಸಿಯೇಷನ್ ನಿಂದ ಬೆಂಗಳೂರು ನಗರದ ಫ್ರೀಡಂ...

ನಿತ್ಯ ಭವಿಷ್ಯ1 week ago

ಶನಿವಾರ- ರಾಶಿ ಭವಿಷ್ಯ ಸೆಪ್ಟೆಂಬರ್-17,2022 : ಈ ರಾಶಿಯವರ ಜೊತೆ ಮದುವೆಯಾದರೆ, ಲಕ್ಷ್ಮಿ ಮನೆಯಲ್ಲಿ ಸದಾ ನೆಲೆಸುತ್ತಾಳೆ!

ಈ ರಾಶಿಯವರ ಜೊತೆ ಮದುವೆಯಾದರೆ, ಲಕ್ಷ್ಮಿ ಮನೆಯಲ್ಲಿ ಸದಾ ನೆಲೆಸುತ್ತಾಳೆ! ಶನಿವಾರ- ರಾಶಿ ಭವಿಷ್ಯ ಸೆಪ್ಟೆಂಬರ್-17,2022 ವಿಶ್ವಕರ್ಮ ಪೂಜಾ,ಕನ್ಯಾ ಸಂಕ್ರಾಂತಿ ಸೂರ್ಯೋದಯ: 06:04 ಏಎಂ, ಸೂರ್ಯಾಸ್ತ :...

Trending