Connect with us

ದಿನದ ಸುದ್ದಿ

ಇಲ್ಲಿ ಸಿದ್ಧವಾಗೋ ರಾಷ್ಟ್ರಧ್ವಜ ದೆಲ್ಲೀಲಿ ಹಾರಾಡುತ್ತೆ; ಯಾವ ಊರದು, ನೋಡಿ ಇಲ್ಲಿದೆ ಮಾಹಿತಿ..!

Published

on

Our proudly Indian flag

ಸುದ್ದಿದಿನ ಡೆಸ್ಕ್
ದೇಶದ ಸಂಸತ್ತು ಭವನ, ರಾಷ್ಟ್ರಪತಿ ಭವನ, ಕೆಂಪುಕೋಟೆ ಸೇರಿ ಪ್ರಮುಖ ಸ್ಥಳಗಳಲ್ಲಿ ಹೆಮ್ಮೆಯಿಂದ ಹಾರಾಡುವ ರಾಷ್ಟ್ರಧ್ವಜ ಸಿದ್ಧ ಆಗೋದು ಎಲ್ಲಿ ಎಂಬುದು ಬಹುತೇಕರಿಗೆ ಮಾಹಿತಿ ಇರೋದಿಲ್ಲ. ಎಲ್ಲಿ ನಿರ್ಮಾಣ ಆಗುತ್ತೆ ಅನ್ನೋದು ಇಲ್ಲಿದೆ ನೋಡಿ.

ಉತ್ತರ ಕರ್ನಾಟಕದ ಹೆಬ್ಬಾಗಿಲು, ಗಂಡುಮೆಟ್ಟಿನ ನೆಲ ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ ತಯಾರಾಗುತ್ತದೆ. ದೇಶದ ಬಹುತೇಕ ಕಡೆ ರಾಷ್ಟ್ರಧ್ವಜ ಸಿದ್ಧವಾಗುತ್ತದೆ. ಆದರೆ, ಹುಬ್ಬಳ್ಳಿಯಲ್ಲಿ ತಯಾರಾಗುವ ಧ್ವಜ ಗುಣಮಟ್ಟದಾಗಿದ್ದು, ಬಿಐಎಸ್ (ಬ್ಯುರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಮಾನ್ಯತೆ ಪಡೆದ ಏಕೈಕ ಸಂಸ್ಥೆ ಇದಾಗಿದೆ. ದೇಶದ ಪ್ರಮುಖ ಸ್ಥಳಗಳಲ್ಲಿ ಹೆಮ್ಮೆಯಿಂದ ಹಾರಾಡುವ ರಾಷ್ಟ್ರಧ್ವಜ ತಯಾರಕ ಭೂಮಿ ಎಂಬುದು ಗರ್ವ ನಮ್ಮದು.

ಹುಬ್ಬಳ್ಳಿಯ ಧ್ವಜ ತಯಾರಿಕೆ ಘಟಕದಲ್ಲಿ 9 ವಿವಿಧ ಅಳತೆಯ ರಾಷ್ಟ್ರಧ್ವಜಗಳು ಸಿದ್ಧವಾಗುತ್ತವೆ. 170 ರೂಪಾರಿಯಿಂದ 17,800 ರೂ. ಮೌಲ್ಯದ ಧ್ವಜಗಳು ಮಾರಾಟಕ್ಕೆ ತಯಾರಾಗುತ್ತವೆ. ಈ ಧ್ವಜ ತಯಾರಿಸಲು ಬೇಕಾಗುವ ಕಚ್ಚಾ ವಸ್ತುಗಳು ಬಾಗಲಕೋಟೆಯಿಂದ ತರಿಸಿಕೊಳ್ಳಲಾಗುತ್ತದೆ. ಧ್ವಜದ ಬಣ್ಣ,ಅಶೋಕ ಚಕ್ರದ ಮುದ್ರಣ, ಕಟಿಂಗ್ ಟೇಲರಿಂಗ್ ಸೇರಿದಂತೆ ಧ್ವಜವನ್ನು ಸಂಪೂರ್ಣವಾಗಿ ಸಿದ್ಧಪಡಿಸಲಾಗುತ್ತದೆ. ನೂರಾರು ಜನರು ಈ ಕಾರ್ಯದಲ್ಲಿ ತೊಡಗಿದ್ದು, 30 ಜನ ನುರಿತ ಟೇಲರ್ ಗಳಿದ್ದಾರೆ.

Advertisement
Click to comment

Leave a Reply

Your email address will not be published.

ದಿನದ ಸುದ್ದಿ

ಉದ್ಯೋಗವಂಚಿತ ಯುವಜನತೆಯಿಂದ ಸೆ.19 ರಂದು ಫ್ರೀಡಂ ಪಾರ್ಕ್ ನಲ್ಲಿ ‘ಬೃಹತ್ ಪ್ರತಿಭಟನೆ’ : ಭವ್ಯ ನರಸಿಂಹಮೂರ್ತಿ ಕರೆ

Published

on

ಸುದ್ದಿದಿನ,ಬೆಂಗಳೂರು : ಸೆಪ್ಟೆಂಬರ್ 19 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ವಂಚಿತರಾದನಾವು ನಮ್ಮ ಕರ್ನಾಟಕ ಸ್ಟೇಟ್ ಎಕ್ಸಾಮಿನೇಶನ್ ಆಸ್ಪಿರನ್ಟ್ಸ್ ಅಸೋಸಿಯೇಷನ್ ನಿಂದ ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುತ್ತೇವೆ ಎಂದು ಹೋರಾಟಗಾರ್ತಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಯುವಜನತೆ ಸಹಸ್ರಾರು ಸಂಖ್ಯೆಯಲ್ಲಿ ಈ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿರುವ ಅವರು, ನಮ್ಮ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಖಾಲಿಯಿರುವ 2.5 ಲಕ್ಷಕ್ಕೂ ಹೆಚ್ಚಿನ ಸರ್ಕಾರಿ ಉದ್ಯೋಗವನ್ನು ಭರ್ತಿ ಮಾಡುವಲ್ಲಿ ವಿಫಲವಾಗಿದ್ದು ಈಗಾಗಲೇ ನಡೆದಿರುವ ಭರ್ತಿ ಪ್ರಕ್ರಿಯೆಗಳಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಉದ್ಯೋಗ ವಂಚಿತರಾದ ನಾವು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದಿದ್ದಾರೆ.

KPSC, KSP, KEA ಮತ್ತು KFD ನಡೆಸುವ ಪ್ರತಿಯೊಂದು ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಅಧಿಸೂಚನೆಯೊಂದಿಗೆ ಪ್ರಕಟಿಸಬೇಕು ಹಾಗೂ UPSC ಮಾದರಿಯಲ್ಲಿ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಡೆದ ಹಗರಣದ ವಿಚಾರಣೆಯನ್ನು ಶೀಘ್ರವಾಗಿ ಮುಗಿಸಿ 545 ಮತ್ತು 402 PSI ಅಧಿಸೂಚನೆಯ ಪರೀಕ್ಷೆಯನ್ನು ಅತಿ ಶೀಘ್ರದಲ್ಲಿ ನಡೆಸಬೇಕು. ಪೊಲೀಸ್‌ ಕಾಸ್ಟೇಬಲ್‌ ಪರೀಕ್ಷೆಗೆ ಅರ್ಹತಾ ವಯೋಮಿತಿಯನ್ನು ಹೆಚ್ಚಿಸಲು ಆಗ್ರಹಿಸುತ್ತೇವೆ ಎಂದಿದ್ದಾರೆ.

KEA ನಡೆಸಿದ KPTCL ಪರೀಕ್ಷೆಯ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೂ ರಾಜಸ್ಥಾನ ಮಾದರಿಯಲ್ಲಿ ಪರೀಕ್ಷಾ ಅಕ್ರಮದಲ್ಲಿ ಭಾಗವಹಿಸಿದವರಿಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಮಸೂದೆಯನ್ನು ಜಾರಿಗೆ ತರಬೇಕೆಂದು ಸರಕಾರಕ್ಕೆ ಆಗ್ರಹಿಸಿ ಪ್ರತಿಭಟಿಸಲಿದ್ದೇವೆ ಎಂದು ತಿಳಿಸಿದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆ-ಜೆಇಇ ಫಲಿತಾಂಶ ಪ್ರಕಟ ; ಆರ್.ಕೆ.ಶಿಶಿರ್ ಮೊದಲ ರ್‍ಯಾಂಕ್

Published

on

ಆರ್.ಕೆ.ಶಿಶಿರ್

ಸುದ್ದಿದಿನ ಡೆಸ್ಕ್ : ವೃತ್ತಿಪರ ಇಂಜಿನಿಯರಿಂಗ್ ಕೋರ್ಸ್‌ಗಳ ರಾಷ್ಟ್ರಮಟ್ಟದ ಜಂಟಿ ಪ್ರವೇಶ ಪರೀಕ್ಷೆ-ಜೆಇಇ (JEE) 2022ರ ಫಲಿತಾಂಶವನ್ನು ( Result ) ಇಂದು ಪ್ರಕಟಿಸಲಾಗಿದೆ.

ಆರ್.ಕೆ.ಶಿಶಿರ್ ಮೊದಲ ರ್‍ಯಾಂಕ್ ಪಡೆದ ವಿದ್ಯಾರ್ಥಿ ಎಂದು ಘೋಷಿಸಲಾಗಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ ಐಐಟಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಈ ವರ್ಷ ಒಟ್ಟು 40 ಸಾವಿರದ 712 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದು ಇದರಲ್ಲಿ 6 ಸಾವಿರದ 516 ವಿದ್ಯಾರ್ಥಿನಿಯರು ಸೇರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕ ವಿಧಾನಮಂಡಲದ ಅಧಿವೇಶನ ನಾಳೆಯಿಂದ ಆರಂಭ

Published

on

ಸುದ್ದಿದಿನ, ದಾವಣಗೆರೆ : ಕರ್ನಾಟಕ ವಿಧಾನಮಂಡಲ (Vidhana Mandala) ಅಧಿವೇಶನ (session) ನಾಳೆಯಿಂದ ಆರಂಭವಾಗಲಿದ್ದು, ಬರುವ 23ರವರೆಗೆ ಕಲಾಪ ನಡೆಯಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಉಂಟಾಗಿರುವ ಹಾನಿ ಸೇರಿ ಜ್ವಲಿಂತ ಸಮಸ್ಯೆಗಳ ಕುರಿತು ಸದನದಲ್ಲಿ ಪ್ರಮುಖವಾಗಿ ವಿಚಾರ ಚರ್ಚೆಗೆ ಬರುವ ಸಂಭವವಿದೆ.

ಕಳೆದ ಅಧಿವೇಶನದಿಂದ ಇದೂವರೆಗೆ ಅಗಲಿದ ಗಣ್ಯರಿಗೆ ಮೊದಲನೆ ದಿನ ಉಭಯ ಸದನಗಳಲ್ಲಿ ಸಂತಾಪ ನಿರ್ಣಯ ಮಂಡಿಸಿ ರಾಜಕೀಯ ಪಕ್ಷಗಳ ಮುಖಂಡರು ಗೌರವ ನಮನ ಸಲ್ಲಿಸುವ ಕಾರ್ಯಕ್ರಮವಿದೆ.

ವಿದಾನಸಭೆಯ ಕಲಾಪ ಪಟ್ಟಿಯ ಮಾಹಿತಿಯಂತೆ ಕಳೆದ ವಾರ ನಿಧನರಾದ ಸಚಿವ ಉಮೇಶ್ ಕತ್ತಿ ಸೇರಿದಂತೆ ಗಣ್ಯರಿಗೆ ಸಂತಾಪ ಸಲ್ಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಈ ಮಧ್ಯೆ ರಾಜಕೀಯ ಪಕ್ಷಗಳ ನಾಯಕರು ಸಭೆ ಸೇರಿ ಸದನದಲ್ಲಿ ಕೈಗೊಳ್ಳುವ ಕಾರ್ಯಗಳ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ ಎಂದು ರಾಜಕೀಯ ಪಕ್ಷಗಳ ವಕ್ತಾರರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending