ರಾಜಕೀಯ
ಸಿದ್ದು ವಿದೇಶ ಪ್ರಯಾಣ: ರಾಜ್ಯ ರಾಜಕೀಯದಲ್ಲಿ ತಳಮಳ

ಸುದ್ದಿದಿನ ಡೆಸ್ಕ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸು ಎಷ್ಟು ಎಂಬುದು ಹಲವು ಬಾರಿ ಸಾಬೀತಾಗಿದೆ. ಅವರ ಪ್ರತಿಯೊಂದು ನಡೆಯೂ ರಾಜಕೀಯದ ತಿರುವಿಗೆ ಕಾರಣವಾಗುತ್ತಿವೆ.
ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕುಟುಂಬದ ಜೊತೆ 13 ದಿನಗಳ ಕಾಲ ವಿದೇಶ ಪ್ರಯಾಣ ಬೆಳೆಸಲಿದ್ದಾರೆ. ಸಿದ್ದು ವಿಶ್ರಾಂತಿ ಕಾರಣಕ್ಕೆ ವಿದೇಶಿ ಪ್ರಯಾಣ ತೆರಳುತ್ತಿದ್ದರೂ ರಾಜ್ಯ ರಾಜಕೀಯದಲ್ಲಿ ತಳಮಳ ಶುರುವಾಗಿದೆ.
ಹೌದು, ಸಚಿವ ಸಂಪುಟ ವಿಸ್ತರಣೆ ಕಸರತ್ತು ಆರಂಭವಾಗಿದ್ದು, ಈಗಾಗಲೇ ಲಾಬಿಗಳು ಶುರುವಾಗಿವೆ. ಇಂತಹ ಸಂದರ್ಭದಲ್ಲಿ ಪ್ರಭಾವಿ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿದೇಶಿ ಪ್ರಯಾಣ ತೆರಳುತ್ತಿರುವುದು ಶಾಸಕರಲ್ಲಿ ಆತಂಕ ಮೂಡಿಸಿದೆ.
ಜತೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಹಲವರಿಗೆ ಮತ್ತೆ ಯಾವ ಸಮಸ್ಯೆ ಎದುರಾಗುತ್ತೋ ಎಂಬ ಆತಂಕ ಎದುರಾಗಿದೆ. ಇನ್ನು ಸಿದ್ದರಾಮಯ್ಯ ಅವರು ಕುಟುಂಬದ ಜತೆ ವಿದೇಶ ಪ್ರಯಾಣ ಬೆಳಸಲಿದ್ದಾರೆ ಎಂದು ಹೇಳಲಾಗಿದ್ದರೂ ಕೆಲವು ಶಾಸಕರು ಕೂಡ ಹೋಗಲಿದ್ದಾರೆ ಎಂಬ ವದಂತಿ ಹಬ್ಬಿದೆ. ಇದರಿಂದ ಮತ್ಯಾಯ ರಾಜಕೀಯ ತಿರುವು ಪಡೆದುಕೊಳ್ಳುತ್ತೆದೆಯೋ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಎದ್ದಿದೆ.
ಯಡಿಯೂರಪ್ಪ ಆರೋಪ ಮುಂದುವರಿಕೆ !
ಇನ್ನು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪ ಮುಂದುವರಿಸಿದ್ದಾರೆ. ರಾಜ್ಯ ಸಮ್ಮಿಶ್ರ ಸರ್ಕಾರದ ಕಚ್ಚಾಟಗಳು ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ದಾರಾವಾಹಿಯಂತೆ ಬಿತ್ತರವಾಗುತ್ತಿವೆ ಎಂದು ಆಪಾದಿಸಿದ್ದಾರೆ.

ದಿನದ ಸುದ್ದಿ
ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇಂದು ರಾತ್ರಿಯಿಂದ ಕರ್ಫ್ಯೂ ಜಾರಿ

ಸುದ್ದಿದಿನ ಡೆಸ್ಕ್ : ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇಂದು ರಾತ್ರಿ 8 ಗಂಟೆಯಿಂದ ನಾಳೆ ಬೆಳಗಿನಜಾವ 5 ಗಂಟೆಯವರೆಗು ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಅಧ್ಯಕ್ಷರ ಮಾಧ್ಯಮ ವಿಭಾಗ ತಿಳಿಸಿದೆ.
ಇದಕ್ಕೂ ಮುನ್ನ ಅಧಿಕಾರಿಗಳು ವೈಶಾಖ ಬುದ್ಧ ಪೂರ್ಣಿಮಾ ಅಂಗವಾಗಿ ರಾಷ್ಟ್ರಾದ್ಯಂತ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿದ್ದ ಕರ್ಫ್ಯೂ ತೆರವುಗೊಳಿಸಲಾಗಿದೆ ಎಂದು ಪ್ರಕಟಿಸಿದ್ದರು. ಎರಡು ದಿನಗಳ ರಜೆ ಘೋಷಿಸಿದ್ದ ಸರ್ಕಾರ, ಕರ್ಫ್ಯೂವನ್ನು ದಿನದ ಮಟ್ಟಿಗೆ ತೆರವುಗೊಳಿಸಿತ್ತು.
ಆದರೆ ಮತ್ತೆ ಯಾವಾಗ ಜಾರಿ ಮಾಡಲಾಗುವುದು ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ಮೇ ೯ರಂದು ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಕನಿಷ್ಠ 9 ಮಂದಿ ಮೃತಪಟ್ಟಿದ್ದರು ಹಾಗೂ ನೂರಾರು ಜನರು ಗಾಯಗೊಂಡಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಅದೇ ದಿನ ಕರ್ಫ್ಯೂ ಜಾರಿಗೊಳಿಸಲಾಗಿತ್ತು.
ಪಡಿತರ ಪೆಟ್ರೋಲ್ಗಾಗಿ ಮೋಟಾರ್ ವಾಹನ ಚಾಲಕರು ಪೆಟ್ರೋಲ್ ಬಂಕ್ಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ತುರ್ತು ಪರಿಸ್ಥಿತಿ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಶಸ್ತ್ರಧಾರಿ ಯೋಧರು ಪ್ರಮುಖ ಬೀದಿಗಳಲ್ಲಿ ಗಸ್ತು ತಿರುಗುತ್ತಿದ್ದರು. ಹಿಂದೆಂದೂ ಕಾಣದಂತಹ ಆರ್ಥಿಕ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಗೊಟಬಾಯ ರಾಜಪಕ್ಸ ರಾಜಿನಾಮೆ ನೀಡಬೇಕೆಂದು ಬೌದ್ಧ ಧರ್ಮದ ಅನುಯಾಯಿಗಳು ಹೆಚ್ಚಾಗಿರುವ ದ್ವೀಪ ರಾಷ್ಟ್ರದಲ್ಲಿ ಕಳೆದ ಕೆಲವು ವಾರಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತ-ನೇಪಾಳ ನಡುವೆ ಆರು ಪ್ರಮುಖ ಒಪ್ಪಂದಗಳಿಗೆ ಅಂಕಿತ

ಸುದ್ದಿದಿನ ಡೆಸ್ಕ್ : ಭಾರತ ಮತ್ತು ನೇಪಾಳ ಇಂದು ಆರು ಮಹತ್ವದ ಒಡಂಬಡಿಕೆಗಳು ಮತ್ತು ಒಪ್ಪಂದಗಳಿಗೆ ಸಹಿ ಹಾಕಿ, ವಿನಿಮಯ ಮಾಡಿಕೊಂಡಿವೆ.
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು ಮತ್ತು ಲುಂಬಿನಿ ಬೌದ್ಧ ವಿಶ್ವವಿದ್ಯಾಲಯದಲ್ಲಿ ಬೌದ್ಧ ಧರ್ಮದ ಕುರಿತು ಅಧ್ಯಯನ ನಡೆಸಲು ಡಾ. ಅಂಬೇಡ್ಕರ್ ಪೀಠ ಸ್ಥಾಪನೆ ಹಾಗೂ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು ಮತ್ತು ಕಠ್ಮಂಡು ವಿಶ್ವವಿದ್ಯಾಲಯದಲ್ಲಿ ಭಾರತೀಯ ಅಧ್ಯಯನಗಳ ಕುರಿತು ಐಸಿಸಿಆರ್ ಪೀಠ ಸ್ಥಾಪನೆ ಸೇರಿದಂತೆ ಆರು ಒಡಂಬಡಿಕೆಗಳಿಗೆ ಅಂಕಿತ ಹಾಕಲಾಗಿದೆ.
ಸ್ನಾತಕೋತ್ತರ ಮಟ್ಟದಲ್ಲಿ ಜಂಟಿ ಪದವಿ ಕಾರ್ಯಕ್ರಮಕ್ಕಾಗಿ ಕಠ್ಮಂಡು ವಿಶ್ವವಿದ್ಯಾಲಯ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ ನಡುವೆ ಒಪ್ಪಂದ ಪತ್ರಕ್ಕೆ ಉಭಯ ದೇಶಗಳು ಸಹಿ ಹಾಕಿವೆ. ಅರುಣ್ ೪ ಯೋಜನೆ ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ಎಸ್ಜೆವಿಎನ್ ಕಂಪನಿ ಮತ್ತು ನೇಪಾಳ ವಿದ್ಯುತ್ ಪ್ರಾಧಿಕಾರದ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರ ನಡುವೆ ದ್ವಿಪಕ್ಷೀಯ ಮಾತುಕತೆ ನಂತರ ಒಡಂಬಡಿಕೆಗಳು ಮತ್ತು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇದಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ, ವೈಶಾಖ ಬುದ್ಧ ಪೂರ್ಣಿಮಾ ಅಂಗವಾಗಿ ನೇಪಾಳದ ಲುಂಬಿನಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸಕ್ತ ಸಂದರ್ಭದಲ್ಲಿ ಜಗತ್ತಿನಲ್ಲಿ ಎದುರಾಗಿರುವ ಪರಿಸ್ಥಿತಿ ನಡುವೆ ಇಡೀ ಮಾನವ ಕುಲದ ಒಳಿತಿಗಾಗಿ ಭಾರತ ಮತ್ತು ನೇಪಾಳ ನಡುವಿನ ಮಿತ್ರತ್ವ ಮತ್ತು ನಿಕಟ ಬಾಂಧವ್ಯ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.
ಬುದ್ಧನ ಆದರ್ಶಗಳೊಂದಿಗೆ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ನೇಪಾಳದ ಸಂಬಂಧ ಸಹಕಾರಿಯಾಗಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ನೇಪಾಳದಲ್ಲಿ ಲುಂಬಿನಿ ವಸ್ತುಸಂಗ್ರಹಾಲಯ ನಿರ್ಮಾಣ ಮಾಡುತ್ತಿರುವುದು ಭಾರತ ಮತ್ತು ನೇಪಾಳದ ಸಹಕಾರಕ್ಕೆ ಉದಾಹರಣೆಯಾಗಿದೆ. ಲುಂಬಿನಿ ಬೌದ್ಧ ವಿಶ್ವವಿದ್ಯಾಲಯದಲ್ಲಿ ಬೌದ್ಧ ಧರ್ಮದ ಕುರಿತು ಅಧ್ಯಯನ ನಡೆಸಲು ಡಾ. ಅಂಬೇಡ್ಕರ್ ಪೀಠ ಸ್ಥಾಪನೆಗೆ ಎರಡೂ ದೇಶಗಳು ತೀರ್ಮಾನಿಸಿವೆ.
ಬುದ್ಧನ ಉಪದೇಶಗಳನ್ನು ಜಗತ್ತಿನಾದ್ಯಂತ ಪ್ರಚಾರ ಮಾಡುವಲ್ಲಿ ಭಾರತ ಮತ್ತು ನೇಪಾಳದ ಯುವಕರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ವಿಶ್ವಾಸವನ್ನು ನರೇಂದ್ರ ಮೋದಿ ವ್ಯಕ್ತಪಡಿಸಿದರು.
ನೇಪಾಳಕ್ಕೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಸಂಜೆ ಖುಷಿನಗರಕ್ಕೆ ವಾಪಸ್ಸಾದರು. ಇದಕ್ಕೂ ಮುನ್ನ ಅವರು ನೇಪಾಳದಲ್ಲಿ ಮಹಾ ಪರಿನಿರ್ವಾಣ ಮಂದಿರದಲ್ಲಿ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ’ಚಿವರ್ ದನ್’ ಸಾಂಪ್ರದಾಯಿಕ ವಿಧಿಗಳನ್ನು ನಿರ್ವಹಿಸಿದರು. ಖುಷಿನಗರ ತಲುಪಿರುವ ನರೇಂದ್ರ ಮೋದಿ ಅವರು, ಅಲ್ಲಿಂದ ಲಖನೌಗೆ ಪ್ರಯಾಣ ಬೆಳೆಸಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
Today’s meeting with PM @SherBDeuba was excellent. We discussed the full range of relations between India and Nepal. Key MoUs were signed which will diversify and deepen cooperation. pic.twitter.com/UzchwOqCZp
— Narendra Modi (@narendramodi) May 16, 2022
Prayed at the Mahaparinirvana Stupa in Kushinagar. Our Government is making numerous efforts to boost infrastructure in Kushinagar so that more tourists and pilgrims can come here. pic.twitter.com/lWWFq8HCqs
— Narendra Modi (@narendramodi) May 16, 2022
My Nepal visit on Buddha Purnima has been a special one. I would like to thank PM @SherBDeuba, the wonderful people and Government of Nepal for the affection. https://t.co/6gWUidwftR
— Narendra Modi (@narendramodi) May 16, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಮಾಜಿ ಸಚಿವ ಎಚ್ ಎಂ ರೇವಣ್ಣ ನೇತೃತ್ವದಲ್ಲಿ ಕುರುಬ ಸಮಾಜದ ಪೂರ್ವಭಾವಿ ಸಭೆ

ಸುದ್ದಿದಿನ,ದಾವಣಗೆರೆ : ಕುರುಬ ಸಮಾಜದ ಇತಿಹಾಸ ಕುರಿತು ಒಂದು ದಿನದ ಚಿಂತನ ಮಂಥನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ಪೂರ್ವಭಾವಿ ಸಭೆಯನ್ನು ಮಾಜಿ ಸಚಿವ ಎಚ್ ಎಂ ರೇವಣ್ಣ ನೇತೃತ್ವದಲ್ಲಿ ನಡೆಯಿತು.
ದಾವಣಗೆರೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ನಡೆದ ಕುರುಬ ಸಮುದಾಯದ ಮುಖಂಡರ ಸಭೆ ನಡೆಸಿ ಮಾತನಾಡಿದ ಮಾಜಿ ಸಚಿವ ಹೆಚ್ ಎಂ ರೇವಣ್ಣ, ಕುರುಬ ಸಮಾಜದ ಇತಿಹಾಸ, ಸಂಪ್ರದಾಯ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಮಾಜದವರು ನಡೆದುಕೊಂಡು ಬಂದ ದಾರಿ ಕುರಿತ ಕುರುಬರ ಸಾಂಸ್ಕೃತಿಕ ಗ್ರಂಥಗಳನ್ನು ಕುರುಬರ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಮತ್ತು ದಾವಣಗೆರೆ ಕುರುಬ ಸಮಾಜದ ಎಲ್ಲಾ ಸಂಘಟನೆಗಳು ಸಂಯುಕ್ತಾಶ್ರಯದಲ್ಲಿ ದಾವಣಗೆರೆ ನಗರದಲ್ಲಿ ಬಿಡುಗಡೆ ಕಾರ್ಯಕ್ರಮವನ್ನು ಜೂನ್ 10 ಮತ್ತು 11 ರಂದು ಅಥವಾ 24 ಅಥವಾ 25 ರಂದು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಪುಸ್ತಕ ಪ್ರತಿಯೊಬ್ಬ ಕುರುಬ ಸಮಾಜದವರಿಗೆ ತಲುಪುವ ಅವಶ್ಯಕತೆ ಇದೆ. ಈ ಪುಸ್ತಕ ಹಲವು ಸಂಶೋಧಕರ ಶ್ರಮದಿಂದ ಹೊರ ಬಂದಿದೆ. ಇದರಲ್ಲಿ ಸಮಾಜದ ಇತಿಹಾಸ ಪುರುಷರ ಹಾಗೂ ಸಮಾಜದ ಮುಖಂಡರು ಕುರಿತು ಕೂಡ ಮಾಹಿತಿ ಇದೆ. ದಾವಣಗೆರೆ ಜಿಲ್ಲೆಯಲ್ಲಿ ನಡೆದ ಕುರುಬ ಸಮಾಜದ ಐತಿಹಾಸಿಕ ಸಭೆಗಳಿಂದ ರಾಜ್ಯ ಮಟ್ಟದಲ್ಲಿ ಸಮಾಜದ ಮಠ ಆಗಿದೆ, ಸಮಾಜದ ಮುಖಂಡರಾದ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೂ ಹೀಗೆ ದಾವಣಗೆರೆಯಲ್ಲಿ ನಡೆದ ಹಲವು ಕಾರ್ಯಕ್ರಮಗಳು ರಾಜ್ಯದ ಇತಿಹಾಸ ಪುಟ ಸೇರಿವೆ ಎಂದು ನೆನಪಿಸಿದ ಮಾಜಿ ಸಚಿವ ರೇವಣ್ಣ ಈ ಕಾರ್ಯಕ್ರಮದ ಜೊತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶ ಕಳವಳಕಾರಿಯಾಗಿದೆ.
ಈ ಮೀಸಲಾತಿ ಕುರಿತು ಅಂದು ಮಧ್ಯಾಹ್ನ 2 ಗಂಟೆಯಿಂದ ವಿಚಾರ ಸಂಕೀರ್ಣ ಏರ್ಪಡಿಸಲಾಗುವುದು ಈ ಕಾರ್ಯಾಗಾರದಲ್ಲಿ ನಾಡಿನ ವಿಚಾರವಾದಿಗಳು ಭಾಗವಹಿಸುವರು ಈ ಕಾರ್ಯಕ್ರಮದಲ್ಲಿ ವಿದ್ಯಾವಂತರು ವಿಚಾರವಂತವರು ಭಾಗವಹಿಸ ಬೇಕೆಂದರು. ಇದೇ ಸಂಧರ್ಭದಲ್ಲಿ ಮಾತನಾಡಿದ ಹರಿಹರ ಶಾಸಕ ಎಸ್ ರಾಮಪ್ಪ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಾಜದ ಯುವಕರು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಹಿರಿಯ ಮುಖಂಡ ಬಿ ಎಂ ಸತೀಶ್, ಸಮಾಜದಲ್ಲಿ ಯಾವುದೇ ಶುಭ ಕಾರ್ಯವಾದರೆ ಕುರುಬರಿಂದ ಉದ್ಘಾಟನೆ ಮಾಡಿಸುತ್ತಾರೆ, ಕಾರಣ ಸಮಾಜ ನಡೆದುಕೊಂಡು ಬಂದ ದಾರಿ ಇಂತಹ ವಿಷಯಗಳ ಕುರಿತು ತಿಳಿದುಕೊಳ್ಳುವ ಅವಶ್ಯಕತೆ ಇವತ್ತಿನ ಯುವಕರಿಗೆ ಇದೆ ಎಂದ ಅವರು, ಸ್ಥಳೀಯ ಸಾಹಿತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಮತ್ತು ಪ್ರಸ್ತುತ ಎದುರಾಗಿರುವ ಮೀಸಲಾತಿ ಸಮಸ್ಯೆ ಕುರಿತು ಚರ್ಚೆ ಮಾಡುವ ಅವಶ್ಯಕತೆ ಇದೆ ಎಂದ ಅವರು ಸಮಾಜದ ಏಳಿಗೆಗೆ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮಗಳನ್ನು ವಿವರಿಸಿದರು.
ಇದೆ ವೇಳೆ ಸಭೆಯಲ್ಲಿ ನಡೆಯಲಿರುವ ವಿಚಾರ ಸಂಕೀರ್ಣ ಕಾರ್ಯಕ್ರಮಕ್ಕೆ ಸಮಿತಿ ರಚನೆ ಮಾಡಲಾಯಿತು. ಸಮಿತಿಯ ಗೌರವಧ್ಯಕ್ಷರಾಗಿ ಶಾಸಕ ಎಸ್ ರಾಮಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಮಾಜದ ಹಿರಿಯ ಮುಖಂಡ ಬಿ ಎಂ ಸತೀಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಸ್ ಎಸ್ ಗಿರೀಶ್. ಕಾರ್ಯಾಧ್ಯಕ್ಷರಾಗಿ ಪ್ರೊ. ಯಲ್ಲಪ್ಪ. ಹದಡಿ ಜೆ ಸಿ ನಿಂಗಪ್ಪ. ಉಪಾಧ್ಯಕ್ಷರಾಗಿ ದೇವೇಂದ್ರಪ್ಪ ಕುಣೆಬೆಳಕೆರೆ, ನಂದಿಗಾವಿ ಶ್ರೀನಿವಾಸ್ , ಬಳ್ಳಾರಿ ಷಣ್ಮುಖಪ್ಪ. ಮಾಜಿ ಮೆಯರ್ ಗೋಣೆಪ್ಪ, ರಾಜನಹಳ್ಳಿ ಶಿವಕುಮಾರ್. ಹಾಲೇಕಲ್ ಅರವಿಂದ, ಇಟ್ಟಿಗುಡಿ ಮಂಜುನಾಥ್, ಲಿಂಗರಾಜ್.
ಖಜಾಂಚಿಯಾಗಿ ಡಿ ಡಿ ಹಾಲೇಶಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಬಿ ಬಿ ಮಲ್ಲೇಶಪ್ಪ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪ್ರಸನ್ನ ಬೆಳೆಕೆರೆ. ವಿನಯ್ ಜೋಗಪ್ಪನವರ್ ಆಯ್ಕೆಯಾಗಿದ್ದು ಇನ್ನೂ ಉಳಿದ ಪದಾಧಿಕಾರಿಗಳನ್ನು ಮುಂದಿನ ಸಭೆಯಲ್ಲಿ ಸಮಾಜದ ಎಲ್ಲಾ ಸಂಘಟನೆಗಳಿಂದ ಆಯ್ಕೆ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರದೇಶ ಕುರುಬ ಸಂಘದ ನಿರ್ದೇಶಕರಾದ ಪಿ ರಾಜಕುಮಾರ್, ರೇವಣ್ಣ.
ಜಿಲ್ಲಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕುಂಬಳೂರು ವಿರೂಪಾಕ್ಷಪ್ಪ, ಅಡಾಣಿ ಸಿದ್ದಪ್ಪ, ಪಿ ಗಂಗಾಧರ್. ವಕೀಲರಾದ ವಸಂತಕುಮಾರ್, ಹದಡಿ ಮಾಹಾಂತೇಶ್, ಹಾಗೂ ಕನಕ ನೌಕರರ ಸಂಘದ ಪದಾಧಿಕಾರಿಗಳಾದ ಗಣೇಶ್ ದಳವಾಯಿ, ಎಸ್ ಎಚ್ ಗುರುಮೂರ್ತಿ. ರಂಗನಾಥ್, ಬೀರೇಂದ್ರ. ಕುಬೇಂದ್ರ. ಸೇರಿದಂತೆ ಸಮಾಜದ ಇತರೆ ಮುಖಂಡರು ಭಾಗವಹಿಸಿದ್ದರು. ಸಭೆ ಆರಂಭದಲ್ಲಿ ಇತ್ತೀಚಿಗೆ ನಿಧನ ಹೊಂದಿದ ದಿವಂಗತ ಚನ್ನಯ್ಯ ಒಡೆಯರ್ ಪತ್ನಿ ಹಾಲಮ್ಮನವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಸಿನಿ ಸುದ್ದಿ7 days ago
ವಿದ್ಯುತ್ ಶಾಕ್ ನಿಂದ ಜೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿನಾರಾಯಣ್ ಸಾವು
-
ದಿನದ ಸುದ್ದಿ7 days ago
ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ : ಆಯೋಗದಿಂದ ವೇಳಾಪಟ್ಟಿ ಪ್ರಕಟ
-
ನಿತ್ಯ ಭವಿಷ್ಯ7 days ago
ಈ ರಾಶಿಯ ನವದಂಪತಿಗಳಿಗೆ ಘರ್ಷಣೆ ಸಾಧ್ಯತೆ! ಈ ರಾಶಿಯ ಉದ್ಯೋಗಿಗಳು ಎದುರಾಳಿಯ ಪಿತೂರಿಗಳು ಎದುರಿಸಬೇಕಾಗುವುದು! ಬುಧವಾರ ರಾಶಿ ಭವಿಷ್ಯ-ಮೇ-11,2022
-
ದಿನದ ಸುದ್ದಿ6 days ago
ಸಮೀಕ್ಷೆ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ರೂಪಿಸಿ ; ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅವಕಾಶ ಕೊಡಿ : ಸಿಎಂ ಬೊಮ್ಮಾಯಿ ಗೆ ಸಿದ್ದರಾಮಯ್ಯ ಆಗ್ರಹ
-
ದಿನದ ಸುದ್ದಿ6 days ago
ದಾವಣಗೆರೆ | ಮತದಾರರ ಪಟ್ಟಿ ಪರಿಷ್ಕರಣೆಗೆ ಮನೆ-ಮನೆ ಭೇಟಿ
-
ದಿನದ ಸುದ್ದಿ6 days ago
ಶ್ರೀಲಂಕಾ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಭಾರತಕ್ಕೆ ಪಲಾಯನ ಕುರಿತ ವರದಿ ನಿರಾಧಾರ : ಕೊಲಂಬೊದ ಭಾರತೀಯ ರಾಯಭಾರಿ ಕಚೇರಿ ಸ್ಪಷ್ಟನೆ
-
ದಿನದ ಸುದ್ದಿ6 days ago
15 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ; ಆದೇಶ ಪಾಲಿಸಲು ಕ್ರಮ : ಸಿಎಂ ಬೊಮ್ಮಾಯಿ
-
ದಿನದ ಸುದ್ದಿ7 days ago
ಅತ್ಯುನ್ನತ ಸಾಧನೆ ಮೆರೆದ ಸೇನಾಪಡೆ ಅಧಿಕಾರಿಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಶೌರ್ಯ ಪದಕ ಪ್ರದಾನ