ದಿನದ ಸುದ್ದಿ
ರೇಪಿಸ್ಟ್ ಸ್ವಾಮೀಜಿ ಮಠಕ್ಕೆ ಆಪ್ತೆ ಜತೆ ಬಂದಿದ್ರಾ ಮಾಜಿ ಸಿಎಂ?

ಸುದ್ದಿದಿನ ಡೆಸ್ಕ್: ಅತ್ಯಾಚಾರ ಆರೋಪ ಎದುರಿಸುತ್ತಿರುವ ಪಾಂಡವಪುರದ ಚಂದ್ರೆ ಗ್ರಾಮದ ಸಮೀಪವಿರುವ ಶ್ರೀ ಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ತ್ರಿಧಾಮ ಮಠದ ವಿದ್ಯಾಹಂಸ ಭಾರತೀ ಸ್ವಾಮೀಜಿ ಈಗ ಮಾತನಾಡುವರ ಬಾಯಲ್ಲಿ ಆಹಾರ ವಾಗಿದ್ದಾರೆ.
ಒಂದು ಪ್ರಭಾವಿ ಸಮುದಾಯಕ್ಕೆ ಸೇರಿದ ಕಾರಣ ಈ ಸುದ್ದಿ ಬಹುತೇಕ ಪತ್ರಿಕೆಗಳು ಹಾಗೂ ಮಾಧ್ಯಮಗಳಲ್ಲಿ ವರದಿಯಾಗುತ್ತಿಲ್ಲ.
ಚಂದ್ರೆ ಗ್ರಾಮದ ಸುಮರು 50 ಎಕರೆ ಪ್ರದೇಶದಲ್ಲಿ ಮಠ ಕಟ್ಟಿಕೊಂಡು ತನ್ನದೇ ಸಾಮ್ರಾಜ್ಯ ನಡೆಸುತ್ತಿರುವ ಈ ಸ್ವಾಮೀಜಿ ಸನ್ನಿಧಾನಕ್ಕೆ ಮಾಜಿ ಮುಖ್ಯಮಂತ್ರಿಯೊಬ್ಬರು ಹಾಗೂ ಅವರಿಗೆ ಆಪ್ತರಾಗಿದ್ದ ಸಂಸದೆಯೊಬ್ಬರು ತಡರಾತ್ರಿಯಲ್ಲಿ ಭೇಟಿ ನೀಡುತ್ತಿದ್ದರು ಎಂದು ಊರಿನವರು ಹೇಳುತ್ತಿದ್ದಾರೆ. ಧಾರಾವಾಹಿ ನಟಿಯರು, ಸಿನಿಮಾ ನಟಿಯರು, ಪತ್ರಕರ್ತರೂ ಕೂಡ ಭೇಟಿ ನೀಡುತ್ತಲೇ ಇರುತ್ತಾರೆ. ಮಾಧ್ಯಮಗಳು ಹಾಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಮಠಕ್ಕೆ ನಾಯಿಗಳೇ ಕಾವಲುಗಾರರು ಎಂದು ಚಂದ್ರ ಗ್ರಾಮದ ಜನ ಹೇಳುತ್ತಾರೆ.
ಮೈಸೂರಿನ ಪತ್ರಕರ್ತ ರಾಜೇಶ್ ಬೋರೆ ಎಂಬುವರೇ ತಮ್ಮ ಪತ್ನಿ ಮೇಲೆ ಸ್ವಾಮೀಜಿ ಅತ್ಯಾಚಾರ ಎಸಗಲು ಕುಮ್ಮಕ್ಕು ನೀಡಿದರು ಎಂದು ತಿಳಿದುಬಂದಿದೆ. ಇಷ್ಟೆಲ್ಲ ತನ್ನ ಕಣ್ಮುಂದೆಯೇ ನಡೆಯುತ್ತಿದ್ದರೂ, ಸುಮ್ಮನಿದ್ದ ಬೋರೆ ಈ ಸ್ವಾಮೀಜಿಯ ಪರಮ ಭಕ್ತ. ತನಗಿದ್ದ ವೈವಾಹಿಕ ಸಮಸ್ಯೆ ಹಾಗೂ ಹಣಕಾಸಿನ ತೊಂದರೆ ಸ್ವಾಮೀಜಿ ಪೂಜೆಯಿಂದ ಸರಿಹೋಗುತ್ತದೆ ಎಂದು ಈತ ನಂಬಿದ್ದನಂತೆ.
ಅಂದಹಾಗೆ ವಿದ್ಯಾಹಂಸ ಸ್ವಾಮೀಜಿಯ ಮೂಲ ಹೆಸರು ರಘುರಾಂ ಭಟ್. ಚಿತ್ರದುರ್ಗದ ರಂಗಯ್ಯನ ಬಾಗಿಲು ಬಳಿ ಇರುವ ವಾಸವಿ ಶಾಲೆ ಹತ್ತಿರ ಮನೆ. ಅಪ್ಪ ಪೊಲೀಸ್. ಕುಡಿತದ ದಾಸನಾಗಿದ್ದ ಅಪ್ಪ ತೀರಿಹೋದ ನಂತರ ದೊಡ್ಡಣ್ಣನಿಗೆ ಕೆಲಸ ಸಿಕ್ಕಿತು. ಎರಡನೇಯವ ರಘುರಾಂ ಆಧ್ಯಾತ್ಮದ ದಾರಿ ಹಿಡಿದು ಉಡುಪಿಯ ಪಾಲುಮಾರು ಮಠ ಸೇರಿದ. ಅಲ್ಲಿಂದ ಹೊರಬಂದು ತಾನೇ ಒಂದು ಮಠ ಸ್ಥಾಪಿಸುವ ನಿರ್ಧಾರಕ್ಕೆ ಬಂದ. ಮೈಸೂರಿನಲ್ಲಿ ಒಂದು ಹುಡುಗಿಯನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನೂ ಹೊಂದಿರುವ ಈತ, ಆಕೆಯಿಂದ ವಿಚ್ಛೇದನ ಪಡೆದು ಪ್ರಭಾವಿಗಳ ನೆರವಿನಿಂದ ಪಾಂಡವಪುರದ ಚಂದ್ರೆ ಗ್ರಾಮದ ಬಳಿ ಮಠ ಕಟ್ಟಿದ ಎಂದು ತಿಳಿದುಬಂದಿದೆ.
ಹೊಡೆದಿದ್ದರು
ಚಿತ್ರದುರ್ಗದಲ್ಲಿರುವಾಗಲೇ ಈತ ಪೂಜೆ ಹೆಸರಿನಲ್ಲಿ ಅರ್ಧ ರಾತ್ರಿಯಲ್ಲಿ ಭಕ್ತರ ಮನೆ ಬಾಗಿಲು ತಟ್ಟುತ್ತಿದ್ದ. ಹೀಗೆ ಭಕ್ತರೊಬ್ಬರ ಮನೆ ಬಾಗಿಲು ತಟ್ಟಿ ಅವರ ಕೈ ಹಿಡಿದು ಎಳೆದ ಕಾರಣ ಆತನಿಗೆ ಹೊಡೆದು ಹೊರಕಳಿಸಲಾಗಿತ್ತು ಎನ್ನಲಾಗಿದೆ.
ಕೈ ನಾಯಕನ ಪತ್ನಿ ಜತೆ ಅಸಭ್ಯ ವರ್ತನೆ
ಮೈಸೂರಿನಲ್ಲಿ ಚಾರ್ತುರ್ಮಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿ ಕಾಂಗ್ರೆಸ್ ನಾಯಕರೊಬ್ಬರ ಮನೆಯಲ್ಲಿ ಪೂಜೆ ಮಾಡುವ ನೆಪದಲ್ಲಿ ಅವರ ಪತ್ನಿ ಜತೆ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ. ನನ್ನನ್ನು ತಬ್ಬಿಕೊಂಡರೆ ನಿನಗೆ ಶಕ್ತಿ ಬರುತ್ತದೆ ಎಂದು ಹೇಳಿದ್ದ ಸ್ವಾಮೀಜಿಗೆ ಬೈದು ಹೊರಗೆ ಕಳುಹಿಸಿದ್ದರು ಎನ್ನಲಾಗಿದೆ.
ಬೇಕಾದಾಗ ಲಿಂಗ ಬದಲಾಯಿಸುತ್ತಾನಂತೆ
ವಿದ್ಯಾಹಂಸ ಸ್ವಾಮೀಜಿ ತನಗೆ ಬೇಕಾದಾಗ ಲಿಂಗ ಬದಲಾಯಿಸಿ ಗಂಡು/ಹೆಣ್ಣಿನ ಅವತಾರ ತಾಳುತ್ತಾನಂತೆ. ಹೆಣ್ಣಾದಾಗ ಆತನ ದೇಹದ ಆಕಾರಗಳೂ ಬದಲಾಗುತ್ತವೆಯಂತೆ. ಅಲ್ಲದೇ ಹೆಣ್ಣನಂತೆ ನಡೆಯುವುದು, ಮಾತನಾಡುವುದನ್ನೂ ಮಾಡುತ್ತಾನಂತೆ. ಹಾಗಾಗಿ ಅರ್ಧ ನಾರೀಶ್ವರ ರೂಪ ಸ್ವಾಮೀಜಿ ಎಂದೂ ಇವನನ್ನು ಕರೆಯುತ್ತಾರೆ.
ಶಾಸಕ ರಾಮ್ದಾಸ್ಗೂ ನಂಬಿಕೆ ದ್ರೋಹ
ಈ ಸ್ವಾಮೀಜಿಯಲ್ಲಿ ದೈವಿಕ ಶಕ್ತಿ ಇದೆ ಎಂದು ನಂಬಿ ಶಾಸಕ ರಾಮದಾಸ್, ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿಟಿ ಪ್ರಕಾಶ್ ಸೇರಿದಂತೆ ಹಲವರು ಮೈಸೂರಿನಲ್ಲಿ ಚಾತುರ್ಮಾಸ ಪೂಜೆ ನಡೆಸಲು ಆಹ್ವಾನಿಸಿದ್ದರು. ಈಗ ಅತ್ಯಾಚಾರದ ವಿಷಯದಲ್ಲಿ ಸಿಕ್ಕು ಅವರೆಲ್ಲರ ನಂಬಿಕೆಗೂ ಸ್ವಾಮೀಜಿ ದ್ರೋಹ ಬಗೆದಿದ್ದಾರೆ.
ಬಟ್ಟೆ ಬಿಚ್ಚಿ ಬೆಂಕಿಗೆ ಹಾಕಿದ್ದ
ಪತ್ರಕರ್ತ ಬೋರೆ ಮನೆಗೆ ತಡರಾತ್ರಿ ಬಂದ ಸ್ವಾಮೀಜಿ ಬಾಗಿಲು ತಟ್ಟಿದ್ದಾನೆ. ಪತಿ ಬಂದಿರಬೇಕು ಎಂದು ಬಾಗಿಲು ತೆಗೆದಾಗ ಕಂಡಿದ್ದು ಸ್ವಾಮೀಜಿ ಹಾಗೂ ಅವನ ಪಟಾಲಂ.
ಸ್ವಾಮೀಜಿಗೆ ಸಹಕರಿಸುವಂತೆ ಪತಿ ಹೇಳಿದ್ದರಿಂದ ಜತೆಗಿದ್ದ ಅವರ ಪತ್ನಿಯನ್ನು ತಬ್ಬಿಕೊಳ್ಳಲು ಸ್ವಾಮೀಜಿ ಯತ್ನಿಸಿದ. ಬಿಡಿಸಿಕೊಂಡಾಗ ಕೋಪಗೊಂಡ ಸ್ವಾಮೀಜಿ ಆಕೆಯ ಬಟ್ಟೆ ಬಿಚ್ಚಿ ಬೆಂಕಿಗೆ ಹಾಕಿದ್ದ. ಚಾಕು ತೋರಿಸಿ ಕೊಲ್ಲುವುದಾಗಿಯೂ ಹೆದರಿಸಿದ. ದರದರನೆ ಕಾರಿನೊಳಗೆ ಎಳೆದುಕೊಂಡು ತನ್ನ ತೊಡೆ ಮೇಲೆ ಕುಳಿತುಕೊಳ್ಳುವಂತೆ ಹೇಳಿದ. ಅದಕ್ಕೆ ಒಪ್ಪದಿದ್ದಾಗ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಎಂದು ಸಂತ್ರಸ್ತ ಮಹಿಳೆಯು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
