ದಿನದ ಸುದ್ದಿ
ಚಿತ್ರದುರ್ಗ | ‘ಸೌಹಾರ್ದ ನಡಿಗೆ ಶರಣ ಸಂಸ್ಕೃತಿ ಕಡೆಗೆ’ ಕಾರ್ಯಕ್ರಮ

ಸುದ್ದಿದಿನ, ಚಿತ್ರದುರ್ಗ : ಶ್ರೀ ಮುರುಘಾಮಠದಲ್ಲಿರುವ ನಡೆಯುತ್ತಿರುವ ಶರಣ ಸಂಸ್ಕøತಿಯ ಉತ್ಸವ 2018ರ ಪ್ರಯುಕ್ತ “ಸೌಹಾರ್ದ ನಡಿಗೆ ಶರಣ ಸಂಸ್ಕøತಿ ಕಡೆಗೆ” ಕಾರ್ಯಕ್ರಮದೊಂದಿಗೆ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಆರಂಭವಾಯಿತು.
ಈ ಜಾಥಾವು ನಗರದ ಕನಕ ವೃತ್ರದಿಂದ, ಕೋಟೆಯ ಮುಂಬಾಗ, ಜೋಗಿಮಟ್ಟಿ ರಸ್ತೆ, ಪಟ್ಟದ ಪರಮೇಶ್ವರಿ ಶಾಲೆ, ಚಳ್ಳಕೆರೆ ಗೇಟ್, ಆರ್.ಟಿ.ಒ ಕಚೇರಿ ಹತ್ತಿರ, ರಾಷ್ಟ್ರೀಯ ಹೆದ್ದಾರಿ 13ರ ಗ್ರಾಮಾಂತರ ಪೋಲಿಸ್ಠಾಣೆ, ರೈಲ್ವೆಸ್ಟೇಷನ್, ಎಸ್.ಜೆ.ಎಮ್.ವಿದ್ಯಾರ್ಥಿ ನಿಲಯದ ಬಳಿ ಸಾಗಿತು. ನಗರದ ಪ್ರಮುಖರು, ರಾಜಕೀಯ ದುರೀಣರು, ಎಸ್.ಜೆ.ಎಮ್.ವಿದ್ಯಾಪೀಠದ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು, ನಾಗರೀಕರು ತಂಡೋಪತಂಡವಾಗಿ ವಿವಿಧೆಡೆಯಿಂದ ಆಗಮಿಸಿ ಚಿತ್ರದುರ್ಗದ ಗಾಂಧೀ ವೃತ್ತದಲ್ಲಿ ಸಮಾವೇಶಗೊಂಡು ಶ್ರೀ ಮಠದ ಅನುಭವ ಮಂಟಪಕ್ಕೆ ಬಂದು ಸಂಪನ್ನವಾಯಿತು.
ಪರಿವರ್ತನೆ ಜಗದ ನಿಯಮ, ಪರಿವರ್ತನೆಯಾಗದಿದ್ದಲ್ಲಿ ಕಾಲವೇ ಪರಿವರ್ತಿಸುತ್ತದೆ. ಮರುಕವಿಲ್ಲದ ಮಾನವನನಿಗಿಂತ ಮರದ ನೆರಳೆ ವಾಸಿ. ಸ್ವಪ್ರಯತ್ನದಿಂದ ಸಾಮಾನ್ಯನೂ ಸಮರ್ಥನಾಗಬಲ್ಲ. ಆಸಕ್ತಿಯಿಂದ ಜೀವನ ಅನಾವರಣ ನಿರಾಸಕ್ತಿಯಿಂದ ಜೀವನ್ಮರಣ. ಅಂತರಂಗದ ಶುದ್ದತೆ ಬಹಿರಂಗದಲ್ಲಿ ಸಾತ್ವಿಕತೆ ಸಾಧಿಸುವುದೇ ಬದುಕಿನ ಬದ್ದತೆ ಎನ್ನುವಂತಹ ಘೋಷವಾಕ್ಯಗಳನ್ನು ಕೂಗುತ್ತ ಜಾತವು ಸಾಗಿತು.
ನಂತರ ಅನುಭವಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಮಾತನಾಡಿದಡಾ.ಶಿವಮೂರ್ತಿಮುರುಘಾಶರಣರು, ಸರ್ವಜನಾಂಗದ ಶಾಂತಿಯ ತೋಟ ಎಂಬುವ ರೀತಿಯಲ್ಲಿ ಶ್ರೀಮಠವು ನಡೆಯುತ್ತ ಸಾಗಿದೆ. ಇಂದು ಚಿತ್ರರಂಗದ ಕಲಾವಿದರು ಆಗಮಿಸಿ ನಮ್ಮ ಸೌಹಾರ್ಧ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಶರಣ ಸಂಸ್ಕøತಿ ಉತ್ಸವಕ್ಕೆ ಮೆರಗು ತಂದಿದೆ ಎಂದು ನುಡಿದರು.
ಚಿತ್ರನಟ ಹಾಗು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾತನಾಡಿ ಇಂತಹ ಒಂದು ಅನುಭವ ವಿಶೇಷವಾದದ್ದು . ದಸರ ಉತ್ಸವವನ್ನು ಇಡೀ ನಾಡೆನೆಲ್ಲೆಡೆ ಆಚರಿಸುತ್ತಾರೆ. ಚಿತ್ರರಂಗದವರಿಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡಲು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.. ಜಾತಿ ಮತ ಯಾವುದನ್ನು ನೋಡದೆ ನಾವೆಲ್ಲರು ಒಂದೇ ಎಂದು ಸಾರುವ ಮಠ ಶ್ರೀಮಠವು ಆಗಿದೆ. ಚಿತ್ರರಂಗದಲ್ಲಿ ನಾವೆಲ್ಲರೂ ಒಂದೊಂದು ಪಾತ್ರ ಮಾಡುತ್ತ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಪ್ರಯತ್ನ ಮಾಡುತ್ತೇವೆ. ಹಲವು ವಿಧವಾದ ಅನುಭವಗಳಾಗಿವೆ. ಇಂದು ಮುರುಘಾಶರಣರ ಪಾದದಲ್ಲಿರುವುದು ನನ್ನ ಅದೃಷ್ಟವಾಗಿದೆ. ಈ ಸಂಧರ್ಭವನ್ನು ನನ್ನ ಜೀವನದಲ್ಲಿ ಎಂದು ಮರೆಯುವುದಿಲ್ಲ ಎಂದು ತಿಳಿಸಿದರು.
ಹಿರಿಯ ಚಿತ್ರನಟ ದೊಡ್ಡಣ್ಣ ಮಾತನಾಡಿ, ಜನಿಸಿದ ಸಕಲ ಜೀವರಾಶಿಗಳಿಗೆ ಆಹಾರವೇ ಮುಖ್ಯ, ಜಗತ್ತಿನಲ್ಲಿ ಅನ್ನ ದೊಡ್ಡದು. ಜಗತ್ತಿನಲ್ಲಿ ತಾಯಿ ಸತ್ತರೆ ಬದುಕುವರು, ಆದರ ಅನ್ನವಿಲ್ಲದೇ ಯಾವ ಜೀವರಾಶಿಯು ಬದುಕುವುದಿಲ್ಲ. ಶರಣರು ಅನ್ನದಾಸೋಹವನ್ನು ಶ್ರೀಮಠದಲ್ಲಿ ಉಚಿತವಾಗಿ ನೀಡುವಂತಹ ಕಾರ್ಯವನ್ನು ಮಾಡುತ್ತಿರುತ್ತಾರೆ, ಅದು ನಮ್ಮೆಲ್ಲರ ಪುಣ್ಯ ಹಾಗು ಭಾಗ್ಯವೆನ್ನಬೇಕು ಎಂದು ನುಡಿದರು.
ಸಾಹಿತಿ ಬಿ.ಎಲ್.ವೇಣು ಮಾತನಾಡಿ, ನಾನು ನಿಮ್ಮೂರಿನ ಮಗ, ನನ್ನ ಬೆಳವಣ ಗೆಯಲ್ಲಿ ಈ ಮಠದ ಪಾತ್ರ ಮಹತ್ವದ್ದಾಗಿದೆ. ಆದಿಕವಿ ಪಂಪ ಹೇಳಿರುವಂತೆ ಮಾನವ ಜಾತಿ ತಾನೊಂದೆ ವಲಂ ಎನ್ನುವಂತೆ ಶರಣರು ಸಹ ಇದನ್ನೆ ಹೇಳುತ್ತ ಪಾಲಿಸುತ್ತಿದ್ದಾರೆ. ಅವರ ಆಶೀರ್ವಾದವು ಸದಾ ನಮ್ಮಗಳ ಮೇಲಿರಲೆಂದು ನುಡಿದರು.
ಕಾರ್ಯಕ್ರಮದಲ್ಲಿ ಶರಣ ಸಂಸ್ಕøತಿ ಉತ್ಸವ 2018ರ ಗೌರಾಧ್ಯಕ್ಷರಾದ ಮಧುರೆ ಹೊಸದುರ್ಗದ ಶ್ರೀ ಭಗೀರಥ ಪೀಠದ ಜ.ಶ್ರೀ.ಪುರುಷೋತ್ತಮನಂದಪುರಿ ಮಹಾಸ್ವಾಮಿಗಳು, ಕಾರ್ಯಧ್ಯಕ್ಷರಾದ ಪಟೇಲ್ ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಜಯಮ್ಮ ಬಾಲರಾಜ್, ಚಿತ್ರದುರ್ಗದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟ ಶ್ರೀನಿವಾಸ್ ಮೂರ್ತಿ, ಎಸ್.ಜೆ.ಎಮ್.ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಾಹಕ ನಿರ್ದೇಶಕರುಗಳಾದಡಾ.ಈ.ಚಿತ್ರಶೇಖರ್,ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಾಹಣಾಧಿಕಾರಿ ದೊರೆಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ವಚನಗೀತೆ ಪ್ರಾರ್ಥಿಸಿ,ಪ್ರದೀಪ್ಕುಮಾರ್.ಜಿ.ಟಿ. ಸ್ವಾಗತಿಸಿ, ಪ್ರೊ.ಸಾಲಿಮಠ್ ನಿರೂಪಿಸಿ ವಂದಿಸಿದರು.

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

-
ನಿತ್ಯ ಭವಿಷ್ಯ7 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ5 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ19 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ18 hours ago
ನಟ ಮನದೀಪ್ ರಾಯ್ ನಿಧನ