ದಿನದ ಸುದ್ದಿ
ಮೈಸೂರು ದಸರಾ | ಮೆರವಣಿಗೆಯಲ್ಲಿ ಸಾಗುವ ಸ್ತಬ್ಧ ಚಿತ್ರಗಳ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ..!

ಸುದ್ದಿದಿನ,ಮೈಸೂರು : ಚಾಮುಂಡಿಬೆಟ್ಟದ ಸನ್ನಿಧಿಯಿಂದ ಹೊರ ಬಂದ ಉತ್ಸವ ಮೂರ್ತಿ ತೆರೆದ ವಾಹನದಲ್ಲಿ ಅರಮನೆಯತ್ತ ಹೊರಟಿದೆ ಉತ್ಸವ ಮೂರ್ತಿ. ಭಕ್ತರಿಂದ ಜೈ ಚಾಮುಂಡಿ ಘೋಷಣೆಗಳು ಮೊಳಗುತ್ತಿವೆ.ಚಾಮುಂಡಿಬೆಟ್ಟದಲ್ಲಿ ಭಕ್ತರ ಸಾಗರೇ ಸೇರಿದೆ.
ಶುಕ್ರವಾರದಂದೇ ವಿಜಯ ದಶಮಿ ಆಚರಣೆ ಹಿನ್ನೆಲೆ ಭಕ್ತರಿಂದ ತುಂಬಿದೆ ಚಾಮುಂಡಿ ಸನ್ನಿಧಿ.
ನಾಡ ದೇವಿ ದರ್ಶನಕ್ಕಾಗಿ ಭಕ್ತರ ಸಾಲು,ಸಾಲು.
ಬೆಳಗ್ಗೆಯಿಂದಲೇ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ ಸಹಸ್ರಾರು ಭಕ್ತರು.
ಈ ಹಿನ್ನೆಲೆಯಲ್ಲಿ ಇಂದು ಮೈಸೂರು ದಸರಾ ಮೆರವಣಿಗೆಯಲ್ಲಿ ಸಾಗುವ ಸ್ತಬ್ಧ ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ.
- 1.ಬಾಗಲಕೋಟೆ ಸ್ತಬ್ದ ಚಿತ್ರ-ಪಟ್ಟದ ಕಲ್ಲು ಕಾಯಕವೇ ಕೈಲಾಸ-ಕೂಡಲಸಂಗಮ
- 2 ಬೆಂಗಳೂರು ಗ್ರಾಮಾಂತರ ಜಿಲ್ಲೆ ಸ್ತಬ್ಧ ಚಿತ್ರ-ಐತಿಹಾಸಿಕ ಘಾಟಿ ಸುಬ್ರಹ್ಮಣ್ಯ ದೇವಾಲಯ ಹಾಗೂ ದೇವನಹಳ್ಳಿ ಕೋಟೆ
- 3.ಬೆಂಗಳೂರು ನಗರ ಜಿಲ್ಲೆಯ ಸ್ತಬ್ಧಚಿತ್ರ-ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ
- 4.ಎನ್.ಸಿ.ಸಿ. ಸ್ತಬ್ಧಚಿತ್ರ-ಪ್ರವಾಹ ಸಂತ್ರಸ್ತರಿಗೆ ನೆರವು ಹಾಗೂ ಕ್ರೀಡೆಗಳು
- 5. ಉನ್ನತ ಶಿಕ್ಷಣ ಇಲಾಖೆ ಸ್ತಬ್ಧಚಿತ್ರ-ವಿದ್ಯಾ ನಿಲಯಗಳು ನಡೆದುಬಂದ ಹಾದಿ
- 6 ಬೆಳಗಾವಿ ಜಿಲ್ಲೆಯ ಸ್ತಬ್ಧಚಿತ್ರ-ಕಿತ್ತೂರಿನ ವೈಭವ
- 7.ಬಳ್ಳಾರಿ ಜಿಲ್ಲೆ ಸ್ತಬ್ಧಚಿತ್ರ-ತುಂಗಾಭದ್ರಾ ಜಿಲ್ಲೆ.
- 8.ಬೀದರ್ ಜಿಲ್ಲೆಯ ಸ್ತಬ್ಧಚಿತ್ರ-ಅನುಭವ ಮಂಟಪ
- 9.ಪ್ರವಾಸೋದ್ಯಮ ಇಲಾಖೆ ಸ್ತಬ್ಧ ಚಿತ್ರ-ಒಂದು ರಾಜ್ಯ ಹಲವು ಜಗತ್ತುಗಳು
- 10.ವಿಜಯಪುರ ಸ್ತಬ್ಧ ಚಿತ್ರ-ಗೋಲಗುಮ್ಮಟ
- 11.ಚಾಮರಾಜನಗರ ಜಿಲ್ಲೆ ಸ್ತಬ್ಧ ಚಿತ್ರ-ಅರಣ್ಯ ಸಂಪತ್ತಿನೊಳಗಿನ ಅಧ್ಯಾತ್ಮಿಕ ಕ್ಷೇತ್ರಗಳು
- 12. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ತಬ್ಧ ಚಿತ್ರ-ಕರ್ನಾಟಕದ ನವರತ್ನಗಳು
- 13. ಚಿತ್ರದುರ್ಗ ಜಿಲ್ಲೆ ಸ್ತಬ್ಧಚಿತ್ರ-ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು-ನಾಯಕಹಟ್ಟಿ ಪುಣ್ಯಕ್ಷೇತ್ರ
- 14. ಚಿಕ್ಕಮಗಳೂರು ಜಿಲ್ಲೆ ಸ್ತಬ್ಧಚಿತ್ರ-ಭೂತಾಯಿ ಕಾಫಿ ಕನ್ಯೆ
- 15.ವಿಧುರಾಶ್ವಥ್ಧ ಪುಣ್ಯಕ್ಷೇತ್ರ ಸ್ತಬ್ಧಚಿತ್ರ
- 16. ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸ್ತಬ್ಧಚಿತ್ರ-ಕಾನೂನು ಸೇವೆಗಳು
- 17. ದಾವಣಗೆರೆ ಜಿಲ್ಲೆಯ ಸ್ತಬ್ಧಚಿತ್ರ-ಸ್ಮಾರ್ಟ್ ಸಿಟಿಯತ್ತ
- 18.ದಕ್ಷಿಣ ಕನ್ನಡ ಜಿಲ್ಲೆಯ ಸ್ತಬ್ಧ ಚಿತ್ರ-ಕೋಟಿ ಚೆನ್ನಯ್ಯ ತುಳು ನಾಡ ವೀರರು
- 19. ಧಾರವಾಡ ಜಿಲ್ಲೆ ಸ್ತಬ್ಧ ಚಿತ್ರ-ದ.ರಾ. ಬೇಂದ್ರೆ ಕಂಡ ಸಾಂಸ್ಕೃತಿಕ ನಗರಿ
- 20. ವಾರ್ತಾ ಇಲಾಖೆ ಸ್ತಬ್ಧ ಚಿತ್ರ-ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ
- 21. ಗದಗ ಜಿಲ್ಲೆ ಸ್ತಬ್ಧ ಚಿತ್ರ-ಮರಗಳ ಮರು ನೆಡುವಿಕೆ
- 22. ಕಲ್ಬುರ್ಗಿ ಜಿಲ್ಲೆ ಸ್ತಬ್ಧ ಚಿತ್ರ-ಕಲ್ದುರ್ಗಿಯ ವಿಮಾನ ನಿಲ್ದಾಣ
- 23.ಹಾಸನ ಜಿಲ್ಲೆ ಸ್ತಬ್ಧ ಚಿತ್ರ-ಹೊಯ್ಸಳ ನಾಡಿನ ಬೇಲೂರು ಶಿಲ್ಪಗಳ 900ರ ಸಂಭ್ರಮ
- 24. ಕಾವೇರಿ ನೀರಾವರಿ ನಿಗಮದ ಸ್ತಬ್ಧಚಿತ್ರ-ನಾವು ಜಲವನ್ನು ಉಳಿಸಿದರೆ ಜಲವು ನಮ್ಮನ್ನು ಉಳಿಸುವುದು
- 25. ಹಾವೇರಿ ಜಿಲ್ಲೆ ಸ್ತಬ್ಧ ಚಿತ್ರ-ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ-ಭಂಕಾಪುರ ನವಿಲುಧಾಮ
- 26. ಕೋಲಾರ ಜಿಲ್ಲೆ ಸ್ತಬ್ಧ ಚಿತ್ರ-ಜಿಲ್ಲಾ ಪಂಚಾಯತ್ ನಡೆ ಗ್ರಾಮದ ಅಭಿವೃದ್ಧಿ ಕಡೆ
- 27. ಕೊಪ್ಪಳ ಜಿಲ್ಲೆ ಸ್ತಬ್ಧಚಿತ್ರ-ಶ್ರೀ ಕನಕಾಂಚಲ ದೇವಸ್ಥಾನ ಮತ್ತು ಐತಿಹಾಸಿಕ ಬಾವಿ ಕನಕಗಿರಿ
- 28. ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ಸ್ತಬ್ಧಚಿತ್ರ-ನಮ್ಮ ಮತ ನಮ್ಮ ಹಕ್ಕು
- 29. ಮಂಡ್ಯ ಜಿಲ್ಲೆ ಸ್ತಬ್ಧಚಿತ್ರ-ಮಂಡ್ಯ ಜಿಲ್ಲೆಗೆ ನಾಲ್ವಡಿಯವರ ಪ್ರಮುಖ ಕೊಡುಗೆ (ಕೆ.ಆರ್.ಎಸ್. ಅಣೆಕಟ್ಟೆ)
- 30. ಮೈಸೂರು ಜಿಲ್ಲೆ ಸ್ತಬ್ಧಚಿತ್ರ-ಗೋಲ್ಡನ್ ಟೆಂಪಲ್ ಬೈಲಕುಪ್ಪೆ
- 31. ರಾಯಚೂರು ಜಿಲ್ಲೆ ಸ್ತಬ್ಧ ಚಿತ್ರ-ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ
- 32. ರಾಮನಗರ ಜಿಲ್ಲೆ ಸ್ತಬ್ಧ ಚಿತ್ರ-ಭಕ್ತಿ, ನಂಬಿಕೆ, ಕರಕುಶಲ ಇತಿಹಾಸಗಳ ಸಂಗಮ
- 33. ಶಿವಮೊಗ್ಗ ಜಿಲ್ಲೆ ಸ್ತಬ್ಧ ಚಿತ್ರ-ಬಿದನೂರು ಶಿವಪ್ಪ ನಾಯಕ ಸಾಧನೆ
- 34. ತುಮಕೂರು ಜಿಲ್ಲೆ ಸ್ತಬ್ಧಚಿತ್ರ-ಶತಮಾನ ಕಂಡ ಮಹಾಸಂತ ಡಾ. ಶ್ರೀ ಶಿವಕುಮಾರಸ್ವಾಮಿಗಳು
- 35 ಸ್ತಬ್ಧಚಿತ್ರ ಉಪಸಮಿತಿಯ ಸ್ತಬ್ಧಚಿತ್ರ-ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ವಿಕೇಂದ್ರೀಕರಣ
- 36. ಉಡುಪಿ ಜಿಲ್ಲೆ ಸ್ತಬ್ಧ ಚಿತ್ರ-ಪರಶುರಾಮ ಸೃಷ್ಟಿಯ ತುಳುನಾಡು
- 37.ಉತ್ತರ ಕನ್ನಡ ಜಿಲ್ಲೆ ಸ್ತಬ್ಧ ಚಿತ್ರ-ಸಿದ್ಧಿ ಜನಾಂಗ ಹಾಗೂ ಪ್ರವಾಸಿ ತಾಣ, ಯಾಣ
- 38 ಯಾದಗಿರಿ ಜಿಲ್ಲೆ ಸ್ತಬ್ಧ ಚಿತ್ರ-ಬಂಜಾರ ಸಂಸ್ಕೃತಿ
- 39. ಆರೋಗ್ಯ ಇಲಾಖೆ ಸ್ತಬ್ಧ ಚಿತ್ರ-ಆರೋಗ್ಯ ಇಲಾಖೆಯ ಸೇವೆಗಳು
- 40.ಅಲ್ಪಸಂಖ್ಯಾತ ಇಲಾಖೆ ಸ್ತಬ್ಧ ಚಿತ್ರ-ಇಲಾಖಾ ಕಾರ್ಯಕ್ರಮಗಳು.
- 41. ಶಿಕ್ಷಣ ಇಲಾಖೆ ಸ್ತಬ್ಧ ಚಿತ್ರ-ಇಲಾಖಾ ಕಾರ್ಯಕ್ರಮಗಳು
- 42. ಕೊಡಗು ಜಿಲ್ಲೆ ಸ್ತಬ್ಧ ಚಿತ್ರ-ಪ್ರವಾಸೋದ್ಯಮ
ಇವಿಷ್ಟು ಸ್ತಬ್ದ ಚಿತ್ರ ಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

-
ನಿತ್ಯ ಭವಿಷ್ಯ7 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ4 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ13 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ12 hours ago
ನಟ ಮನದೀಪ್ ರಾಯ್ ನಿಧನ