Connect with us

ಭಾವ ಭೈರಾಗಿ

ಕವಿತೆ | ಯಾವುದು ಪ್ರಸಾದವಯ್ಯ?

Published

on

 

ದೇವರಿಲ್ಲದ ಗುಡಿಯಲ್ಲಿ ಕೊಟ್ಟಿದ್ದು
ಪ್ರಸಾದವಲ್ಲವಯ್ಯ
ನಮಗೆಂದೇ ಮನೆಯಲ್ಲಿ ಮಾಡಿದ್ದು
ಪ್ರಸಾದವಯ್ಯ

ತುಂಬಿದ ಹೊಟ್ಟೆಗೆ ತುಂಬಿ ಕೊಳ್ಳೋದು
ಪ್ರಸಾದವಲ್ಲವಯ್ಯ
ಹಸಿದ ಹೊಟ್ಟೆಗೆ ಅನ್ನ ನೀಡಿದ್ದು
ಪ್ರಸಾದವಯ್ಯ

ಬೆವರಿಲ್ಲದ ಬಿಟ್ಟಿಊಟ
ಪ್ರಸಾದವಲ್ಲವಯ್ಯ
ಉತ್ತು ಬಿತ್ತಿ ಬೆಳೆದು ಉಂಡದ್ದು
ಪ್ರಸಾದವಯ್ಯ

ಗಿಡದಿಂದ ಕಿತ್ತು ದೇವರಿಗಿಟ್ಟ ಹೂ
ಪ್ರಸಾದವಲ್ಲವಯ್ಯ
ಎಲೆ ಚಿಗುರಿ ಹೂ ಬಿಟ್ಟದ್ದು
ಪ್ರಸಾದವಯ್ಯ

ಕಲ್ಲು ಸಕ್ಕರೆ ಕುಟ್ಟಿ ರಸಾಯನ ಮಾಡಿದ್ದು
ಪ್ರಸಾದವಲ್ಲವಯ್ಯ
ಜೇನು ಕಟ್ಟಿ ಸಿಹಿ ಬಿಟ್ಟಿದ್ದು
ಪ್ರಸಾದವಯ್ಯ

ಉಂಡು ಉಳಿಸಿದ್ದು
ಪ್ರಸಾದವಲ್ಲವಯ್ಯ
ಉಣ್ಣದೆ ಬಿಸಾಡಿದ್ದು
ಪ್ರಸಾದವಯ್ಯ

ದೇವರಿಗೆಂದು ನಾವು ಮಾಡಿದ್ದು
ಪ್ರಸಾದವಲ್ಲವಯ್ಯ
ನಮಗೆಂದು ದೇವರು ಮಾಡಿದ ಪ್ರತಿ ತುತ್ತು
ಪ್ರಸಾದವಯ್ಯ

ಇಂಥೆಲ್ಲಾ ಪ್ರಸಾದಕ್ಕೆ ವಿಷವಿಟ್ಟರೆ…
ಮುಂದೆಲ್ಲಾ ಈ ಜಗತ್ತು
ಸುಡುಗಾಡು ನೋಡಯ್ಯ…!

ಡಾ. ಗಿರೀಶ್ ಮೂಗ್ತಿಹಳ್ಳಿ
ಚಿಕ್ಕಮಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಭಾವ ಭೈರಾಗಿ

ಆಗಾಗ ನೆನ್ಪಾಗ್ತವೆ ಆ ದಿನಗಳು

Published

on

ಕವಯಿತ್ರಿ : ಭೂಮಿಕಾ ಮಾದಾಪುರ
  • ಭೂಮಿಕಾ ಮಾದಾಪುರ

ರೆತರೂ ಮತ್ತೆ ಮತ್ತೆ ನೆನಪಾಗುವ
ಆ ದಿನಗಳು
ನೆನೆದಾಗಾಲೆಲ್ಲಾ ಅದೇನೋ ಫುಳಕ
ಮನಸ್ಸಲ್ಲೊಂಥರಾ ರೋಮಾಂಚನ..
ಮತ್ತೆಂದಿಗೂ ಮರಳಿ ಬಾರದ ಆ ದಿನಗಳನ್ನು ನೆನೆದರೆ ಕಣ್ತುಂಬಿಕೊಳ್ಳುತ್ತೆ..

ನಿಶ್ಕಲ್ಮಷವಾದ ನಡತೆ, ಮುದ್ದಾದ ಮಾತುಗಳು,
ಮನೆ ಮುಂದೆ , ಸಾಲಿ ಮುಗ್ದ್ಮೇಲ್ ಆಡಿದಾಟ
ಹೊತ್ತೋತ್ತಿಗೆ ಕೈತ್ತುತ್ತು , ಅತಿಯಾದ ಪ್ರೀತಿ..

ಬೆಳಿಗ್ಗೆ ಎದ್ದೇಳ್ಬೆಕಾದ್ರೆ ಇರೋ ಸೋಂಬೆರಿತನ
ಸಾಲಿಗೋದ್ ಕೂಡ್ಲೆ ಮಂಗ್ಮಾಯ..
ತೊಡಿ ಮ್ಯಾಲ್ ಒಂದ್ ಸಣ್ ಟವಲ್ ಹಾಕೋಂಡ್
ಸಾಲ್ಯಾಗ್ line ಹಚ್ ಕುಂತು ಸಹನಾವವತು ಹೇಳ್ತಾ
ಆಹಾ! ಅದೆಷ್ಟ್ ಮುದ್ದಾಗಿದ್ವಲ್ಲಾ ನಾವೆಲ್ಲಾ..

ಬಿಡಪ್ಪ ದೃಷ್ಠಿ ಆಗ್ತತಿ..

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ಮತ್ತೊಮ್ಮೆ ಗಾಂಧಿ

Published

on

  • ದಿವಾಕರ್. ಡಿ ಮಂಡ್ಯ

ತ್ತೊಮ್ಮೆ ಗಾಂಧಿ
ನೆನಪಿಗೆ ಬಂದ
ಅಹಿಂಸೆಯೇ ಗೆಲುವೆಂದ;
ಬೆತ್ತಲಿನ ಮಡಿಯ ಅಚ್ಚ
ಬಿಳುಪಿನ ವಸ್ತ್ರದ ನೊಡೋಕೆ ಚಂದ;

ದಟ್ಟ ದರಿದ್ರರ ಬಾಳಿಗೆ
ಹೊಸ ಆಶಾಕಿರಣ ತಂದ
ನಾವೆಲ್ಲರೂ ಸಮಾನರೆಂದ;
ಸಕಲರನ್ನು ಗೌರವಿಸಿ ಶತೃಗಳನ್ನು
ಕ್ಷಮಿಸಿ ಸಹೃದತೆಯ ಮೆರೆಯಿರೆಂದ;

ದೀನ ದಲಿತರ ಅಸೂಯಗೆ
ಕೊನೆಯೇ ಇಲ್ಲವೆಂದು
ಅಸ್ಪೃಶ್ಯತೆ ಶಾಪವೆಂದ;
ನಾವೆಲ್ಲರೂ ಭಾರತೀಯರು
ಧರ್ಮ ಜಾತಿ ಮೇಲು ಕೀಳು
ಕೊನೆಗಾಣಿಸಬೇಕೆಂದ:

ಬುದ್ಧ- ಬಸವಣ್ಣ, ಗಾಂಧಿ- ಅಂಬೇಡ್ಕರ್ ಸಮಾನತೆಯ
ಹರಿಕಾರರೆಂದ, ಹರಿದು ಹಂಚಿ
ಹೋದ ಮನುಜರೆದೆಯಲಿ
ಮಾನವೀಯತೆ ಬೆಳೆಯಲಿ ಎಂದ;

ದೇಶದಲ್ಲಿ ಅಬಲೆಯರ ಕಗ್ಗೊಲೆ
ಸಹಿಸದಿರಿ ಎಂದ ಸರ್ಕಾರವೇ ಕಣ್ಮುಚ್ಚಿ ಕುಳಿತರೇ ಬಾಯಿ
ಮುಚ್ಚಿಕೊಂಡಿರದಿರಿ ಎಂದ
ಹಿಂಸೆಗೆ ಪ್ರತಿಹಿಂಸೆ ಔಷದವಲ್ಲವೆಂದ;

ಮತ್ತೊಮ್ಮೆ ಗಾಂಧಿ ನೆನಪಿಗೆ
ಬಂದ ಹಿಂಸೆಯ ಆರಾಧಕರ
ಶುಭಾಶಯ ಕೇಳೋದೆ ಚಂದ;
ಹಾರ ತುರಾಯಿ ಸಮಾಧಿ ಮೇಲೆ
ಕಪಟಿ ದ್ಯಾನಸಕ್ತನಂತೆ ಕೈ ಮುಗಿಯೋದು ನೋಡೋಕೆ ಚಂದ;

ಮತ್ತೊಮ್ಮೆ ಗಾಂಧಿ
ನೆನಪಿಗೆ ಬಂದ;
ಮುಂದಿನ ಹುಟ್ಟು ಹಬ್ಬಕ್ಕಾದರೂ
ಭಾರತೀಯರ ಬದುಕನ್ನು ಸಿಹಿ ಮಾಡಿರೆಂದು ಹೋದ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ಹಾರುವ ಹೂವು

Published

on

ಕವಯಿತ್ರಿ | ಪಲ್ಲವಿ ಶೆಟ್ಟಿ
  • ಪಲ್ಲವಿ ಶೆಟ್ಟಿ

ಚಂದಾಗಿ ಮೊಳೆತು
ನವಿರಾದ ಚಿಗುರಾಗಿದ್ದೆ
ಪಲ್ಲವಿಸಿ ಅರಳಿ ಘಮ ಚೆಲ್ಲುವ ಹೂವೂ ಆದೆ
ಒಲವಿನ ಹೆಚ್ಚಾಸೆಯಿಂದ ಬಾಗಿದೆ
ನೀನೂ ನನ್ನಂತೆ ಕೋಮಲವೆಂದನಿಸಿ…!

ನೀನೇಕೋ ನನ್ನ ಬಂಧನವನು ಜರೂರು ಮಾಡಿಬಿಟ್ಟೆ
ಬಂಧಿಯಾದರೂ ಸುಖಿಸುತ್ತಿರುವ ಭಾಸದಿಂದ ನಿನ್ನ ನವಿರಿಗೆ ನಾ ಬೇಡಿಕೆಯಿಡಲಿಲ್ಲ
ಹೇಗೋ ಗಡುಸುತನಕ್ಕೆ ಒಗ್ಗಿ ನಿಲ್ಲಲು ಶುರು ಮಾಡಿದೆ!
ನೀ ನೂಕಿದೆ…!

ಸಂಪೂರ್ಣವಾಗಲ್ಲದಿದ್ದರೂ ಕೊಂಚವಾದರೂ ನಾ ಬಳಲಿದ್ದೆ
ಹೂವು ನಾನಾಗಿರಲಿಲ್ಲ
ಇನ್ನೊಮ್ಮೆ ನಗಬೇಕೆನಿಸಿ ಹಾರುವ ಚಿಟ್ಟೆಯಾಗಿದ್ದೇನೆ
ಆಗಾಗ ನೀ ಕಂಡರೂ ಒಮ್ಮೆ ಜೇನು ಹೀರಿ ಆನಂದಿಸುವ ದುರಾಸೆ
ಬೇಗ ಬಳಲಿ ಬಾಡಿಬಿಡು

ಇದ್ದೂ ಇದ್ದು ನನ್ನ ರೆಕ್ಕೆಯ ಕಟ್ಟಿಬಿಡಬೇಡ
ಮತ್ತೆ ನಿನ್ನೆಡೆಗೆ ಸೆಳೆಯುವ ದುರಾಸೆಯೇಕೆ
ಹಾರುವುದ ಕಲಿತಿದ್ದೇನೆ
ಮತ್ತೊಂದು ಹೂವಿಗಾಗಿ ಅಲ್ಲ
ಮತ್ತೆ ಹೂವಿಗೆ ಬಲಿಯಾಗದಿರಲೆಂದು

ಹಾರಲು ಬಿಟ್ಟು ಬಿಡು…

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ನಿತ್ಯ ಭವಿಷ್ಯ4 hours ago

ನಿಮಗೆ ಸಂತಾನದ ಸಮಸ್ಯೆ ಕಾಡುತ್ತಿದೆಯೇ?

ನಿಮಗೆ ಸಂತಾನದ ಸಮಸ್ಯೆ ಕಾಡುತ್ತಿದೆಯೇ? “ತಮ್ಮ ಜನ್ಮ ಜಾತಕದಲ್ಲಿ( ಕುಂಡಲಿ) ಸಂತಾನಯೋಗ ಫಲ ಮತ್ತು ಪರಿಹಾರ” ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403...

ನಿತ್ಯ ಭವಿಷ್ಯ4 hours ago

ಸೋಮವಾರ ರಾಶಿ ಭವಿಷ್ಯ-ಡಿಸೆಂಬರ್-5,2022 : ಈ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಬಗ್ಗೆ ಜಾಗೃತಿ ಇರಲಿ!

ಈ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಬಗ್ಗೆ ಜಾಗೃತಿ ಇರಲಿ! ಸೋಮವಾರ ರಾಶಿ ಭವಿಷ್ಯ-ಡಿಸೆಂಬರ್-5,2022 ಹನುಮಾನ ಜಯಂತಿ ಸೂರ್ಯೋದಯ: 06:32 ಏ ಎಂ, ಸೂರ್ಯಾಸ್ತ : 05:41...

ನಿತ್ಯ ಭವಿಷ್ಯ1 day ago

ಜನ್ಮ ಜಾತಕ ಗ್ರಹಗಳ ಆಧಾರಮೇಲೆ ಸರಕಾರಿ ಕೆಲಸ

ಜನ್ಮ ಜಾತಕ ಗ್ರಹಗಳ ಆಧಾರಮೇಲೆ ಸರಕಾರಿ ಕೆಲಸ ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ರಾಶಿ ಹರಳು ಪರಿಣಿತರು. Mob.9353488403 ಸರ್ಕಾರಿ ಕೆಲಸ ಅವುಗಳಲ್ಲಿ ನೂರಾರು ಇಲಾಖೆಗಳಿವೆ. ತುಂಬಾ...

ನಿತ್ಯ ಭವಿಷ್ಯ1 day ago

ಭಾನುವಾರ- ರಾಶಿ ಭವಿಷ್ಯ ಡಿಸೆಂಬರ್-4,2022 :ಈ ರಾಶಿಯ ಹೆಣ್ಣು ಮಕ್ಕಳಿಗೆ ನೀವು ಮದುವೆಯಾದರೆ ನಿಮ್ಮ ಮನೆ ಬೆಳಕಾಗುವುದು…

ಈ ರಾಶಿಯ ಹೆಣ್ಣು ಮಕ್ಕಳಿಗೆ ನೀವು ಮದುವೆಯಾದರೆ ನಿಮ್ಮ ಮನೆ ಬೆಳಕಾಗುವುದು… ಭಾನುವಾರ- ರಾಶಿ ಭವಿಷ್ಯ ಡಿಸೆಂಬರ್-4,2022 ಸೂರ್ಯೋದಯ: 06:32 ಏ ಎಂ, ಸೂರ್ಯಾಸ್ತ : 05:41...

ನಿತ್ಯ ಭವಿಷ್ಯ2 days ago

ಮದುವೆ ನಿಶ್ಚಿತಾರ್ಥ ಮಾಡಿದ್ದು ಮುರಿದು ಬೀಳಲು ಕಾರಣವೇನು?

ಮದುವೆ ನಿಶ್ಚಿತಾರ್ಥ ಮಾಡಿದ್ದು ಮುರಿದು ಬೀಳಲು ಕಾರಣವೇನು? ಮದುವೆ ಮಾತುಕತೆಗೆ ಯಾರು ಬರುತ್ತಿಲ್ಲವೇ? ಜ್ಯೋತಿಷ್ಯಶಾಸ್ತ್ರ ಏನು ತಿಳಿಸುತ್ತದೆ? ಇಲ್ಲಿದೆ ತಮಗೆ ಮಾಹಿತಿ… ತಮ್ಮ ಜಾತಕ ನೋಡಿ (ಒಂದು...

ನಿತ್ಯ ಭವಿಷ್ಯ2 days ago

ಶನಿವಾರ ರಾಶಿ ಭವಿಷ್ಯ -ಡಿಸೆಂಬರ್-3,2022 : ಈ ರಾಶಿಯವರು ಮದುವೆಗೆ ರೆಡಿ

ಈ ರಾಶಿಯವರು ಮದುವೆಗೆ ರೆಡಿ.. ಶನಿವಾರ ರಾಶಿ ಭವಿಷ್ಯ -ಡಿಸೆಂಬರ್-3,2022 ಸೋಮಶೇಖರ ಗುರೂಜಿ B. Sc ಜ್ಯೋತಿಷ್ಯ ಶಾಸ್ತ್ರ, ವಾಸ್ತು ಶಾಸ್ತ್ರಮತ್ತು ಸಂಖ್ಯಾಶಾಸ್ತ್ರ ಪರಿಣಿತರು. MOB. 93534...

ದಿನದ ಸುದ್ದಿ3 days ago

ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ಗೆ ’ವರ್ಷದ ಬ್ಯಾಂಕರ್‌ಗಳ ಬ್ಯಾಂಕ್’ ಪ್ರಶಸ್ತಿ

ಸುದ್ದಿದಿನ ಡೆಸ್ಕ್ : ಲಂಡನ್‌ನಲ್ಲಿ ಕಳೆದ ತಿಂಗಳ 29ರಿಂದ ಈ ತಿಂಗಳ 1 ರವರೆಗೆ ನಡೆದ ಜಾಗತಿಕ ಬ್ಯಾಂಕಿಂಗ್ ಸಮಾವೇಶದಲ್ಲಿ ಭಾರತೀಯ ವಿಭಾಗದಡಿ ಸಾರ್ವಜನಿಕ ವಲಯದ ಕೆನರಾ...

ದಿನದ ಸುದ್ದಿ3 days ago

ನಾಳೆ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಕ್ವಿಜೇಬಲ್ಡ್‌ – ವಿಶೇಷ ಕ್ವಿಜ಼್ ಕಾರ್ಯಕ್ರಮ

ಸುದ್ದಿದಿನ, ಬೆಂಗಳೂರು : ವಿಶ್ವ ಅಂಗವಿಕಲರ ದಿನಾಚರಣೆಯ ಅಂಗವಾಗಿ ಕ್ವಿಜೇಬಲ್ಡ್‌ – ವಿಶೇಷ ಕ್ವಿಜ಼್ ಕಾರ್ಯಕ್ರಮವನ್ನು ಸೇವಾ-ಇನ್‌-ಆಕ್ಷನ್‌(SiA) ಸಂಸ್ಥೆಯು ನಾಳೆ (ಡಿಸೆಂಬರ್.3ರಂದು) ಬೆಂಗಳೂರಿನ ಬಿ ಎಂ ಎಸ್‌...

ನಿತ್ಯ ಭವಿಷ್ಯ3 days ago

ಯಾವ ರಾಶಿಗಳ ಜೊತೆ ಮದುವೆ ಹೊಂದಾಣಿಕೆ ಮಾಡಿಕೊಂಡರೆ ಶುಭ ಫಲಪ್ರದ

ಯಾವ ರಾಶಿಗಳ ಜೊತೆ ಮದುವೆ ಹೊಂದಾಣಿಕೆ ಮಾಡಿಕೊಂಡರೆ ಶುಭ ಫಲಪ್ರದ… ಜನ್ಮ ಕುಂಡಲಿಯಲ್ಲಿ ( ಜಾತಕ )ಯಾವ ಮನೆಯಲ್ಲಿ ಶನಿ ಸ್ವಾಮಿಇದ್ದರೆ ವಿವಾಹ ವಿಳಂಬಕ್ಕೆ ಕಾರಣ ವಾಗುತ್ತದೆ?...

ನಿತ್ಯ ಭವಿಷ್ಯ3 days ago

ಶುಕ್ರವಾರ ರಾಶಿ ಭವಿಷ್ಯ -ಡಿಸೆಂಬರ್-2,2022 : ಇನ್ನು ಮುಂದೆ ಈ ರಾಶಿಯವರಿಗೆ ಶುಕ್ರದಶೆ ಪ್ರಾರಂಭ ಮುಟ್ಟಿದ್ದೆಲ್ಲಾ ಚಿನ್ನ ಚಿನ್ನ… ಪ್ರಯತ್ನಿಸಿದ ಕಾರ್ಯ ಯಶಸ್ವಿ

ಇನ್ನು ಮುಂದೆ ಈ ರಾಶಿಯವರಿಗೆ ಶುಕ್ರದಶೆ ಪ್ರಾರಂಭ ಮುಟ್ಟಿದ್ದೆಲ್ಲಾ ಚಿನ್ನ ಚಿನ್ನ… ಪ್ರಯತ್ನಿಸಿದ ಕಾರ್ಯ ಯಶಸ್ವಿ ಯಶಸ್ವಿ …..   ಶುಕ್ರವಾರ ರಾಶಿ ಭವಿಷ್ಯ -ಡಿಸೆಂಬರ್-2,2022 ಸೂರ್ಯೋದಯ:...

Trending