ದಿನದ ಸುದ್ದಿ
ಕೆಲವು ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ‘ವಿದ್ಯಾರ್ಥಿ ಪಾಸ್’ ಗಳಿಗೆ ಮಾನ್ಯತೆ ಇಲ್ಲವೆ..?

ಸುದ್ದಿದಿನ, ವಿಜಯಪುರ: ಇಂಡಿ ತಾಲ್ಲೂಕಿನ ಹೀರೆರೂಗಿ, ಬೊಳೆಗಾವಂ, ತಡವ್ಲಗಾ, ಗುಂಡುತಾಂಡಾ, ಅಥರ್ಗಾ, ನಾಗಠಾಣ, ಹಾಗೂ ಅಲೀಯಾಬಾದದ ವಿದ್ಯಾರ್ಥಿಗಳು, ಜೀಲ್ಲಾ ಮಟ್ಟದಲ್ಲಿ ಉನ್ನತ ಗುಣಮಟ್ಟದ ವಿದ್ಯಾಭ್ಯಾಸ ಮಾಡಬೇಕೆಂದು ಬಯಸುವವರು ಪ್ರತಿದಿನದ ರೊದನೆ ಅನುಭವಿಸುವಂತಾಗಿದೆ.
ನಮ್ಮ ಘನ ಸರ್ಕಾರ ವಿದ್ಯಾರ್ಥಿಗಳಿಗಾಗಿಯೆ ವಿಶೇಷ ಕ್ರಮಗಳನ್ನು ಜಾರಿಗೆಗೊಳ್ಳಿಸುತ್ತಿದೆ. ವಿದ್ಯಾರ್ಥಿಗಳು ದೂರದ ಶಾಲಾ-ಕಾಲೇಜಿಗೆ ಹೋಗಿ ತಮ್ಮ ಶಿಕ್ಷಣವನ್ನು ಮುಂದುವರಿಬೇಕೆಂದು ಕಡಿಮೆ ದರದಲ್ಲಿ ವಿದ್ಯಾರ್ಥಿಪಾಸ್ ಗಳನ್ನು ಕಲ್ಪಿಸ ಬೇಕೆಂದು ಆದೇಶ ನೀಡಿದೆ, ವಿದ್ಯಾರ್ಥಿ ಪಾಸ್ ಎಲ್ಲ ಬಸ್ ಗಳಲ್ಲಿ ಅನುಮತಿ ಇದೆ ಎಂದು ಹೇಳಿದೆ. ಆದರೆ ಇಂಡಿ ವಿಜಯಪುರ ಮಾರ್ಗವಾಗಿ ಸಂಚರಿಸುವ ಏಷ್ಟೊ ಬಸ್ಗಳಲ್ಲಿ ವಿದ್ಯಾರ್ಥಿ ಪಾಸ್ ಗಳಿಗೆ ಅನುಮತಿ ಇಲ್ಲ.
ಯಾಕೆಂದರೆ ಬಸ್ ಗಳಲ್ಲಿ ಭೀಮಾ ಸಾರಿಗೆ (ವಿದ್ಯಾರ್ಥಿಗಳ ಪಾಸಿಗೆ ಅನುಮತಿ ಇಲ್ಲ) ಎನ್ನುವ ನಾಮಫಲಕಗಳೆ ರಾರಾಜಿಸುತ್ತಿವೆ. ಇದರ ವಿಷಯವಾಗಿ ಬಸ್ ನಿರ್ವಾಹರನ್ನು ವಿಚಾರಿಸಿದರೆ ಕೇಲವರು ಎಲ್ಲಾ ಬಸ್ ಗಳಲ್ಲಿವು ವಿದ್ಯಾರ್ಥಿಪಾಸ್ ಗಳಿಗೆ ಅನುಮತಿ ಇವೆ ಅಂದರೆ, ಇನ್ನೂ ಕೇಲವರು ವ್ಯಂಗ್ಯವಾಗಿ ಮಾತನಾಡಿ, ಅಸಭ್ಯವಾಗಿ ವರ್ತಿಸುತ್ತಾರೆ, ಸ್ವತಃ ಚಕರ್ ಹೇಳಿರುವ ಹೇಳಿಕೆ ಇದು. ತೆರಿಗೆ ಕಟ್ಟಬೇಕು ಆದ ಕಾರಣ ಭೀಮಾ ಸಾರಿಗೆ ನಾಮಫಲಕಗಳನ್ನು ಹಾಕಿದ್ದೇವೆ ಅಂದರು.
ಅದಕ್ಕೆ ವಿದ್ಯಾರ್ಥಿಗಳು 103,ಮತ್ತು105 ಎರಡೆ ಬಸ್ ಗಳಿಗೆ ಮಾತ್ರ ಪಾಸ್ ಅನುಮತಿ ಇಲ್ಲ ಅಂತ ಗೋತ್ತು, ಆದರು ಬೇರೆ ಬಸ್ ಗಳಿಗೆ ಭೀಮಾ ಸಾರಿಗೆ ಎಂಬ ನಾಮಫಲಕಗಳು ಯಾಕೆ ಅಂತ ವಿದ್ಯಾರ್ಥಿಗಳು ಪ್ರಶ್ನೇ ಮಾಡಿದರೆ, ಅದಕ್ಕೆ ನೀವು ವಿದ್ಯಾರ್ಥಿಗಳು ಓದುವದನ್ನು ಮೋದಲು ಮಾಡಿ ಅದನ್ನು ಬಿಟ್ಟು ಬೇರೆ ಕೆಲಸ ಮಾಡ ಬೇಡಿ, ನಮ್ಮ ಕೆಲಸ ನಮಗೆ ತಿಳಿದಿದೆ ನೀವು ಹೇಳುವ ಅವಶ್ಯಕತೆ ಇಲ್ಲ ಎಂದು ವ್ಯಂಗ್ಯವಾಗಿ ಚಕರ್ ಮಾತನಾಡಿದರು.
ಚಕರ್ ಹೀಗೆ ಮಾತನಾಡಿದರು ಅಂತ ಕೇಂದ್ರ ಬಸ್ ನಿಲ್ದಾಣದ ಅಧೀಕಾರಿಯಾದ ಬಿಸ್ನಾಳರಿಗೆ ತಿಳಿಸಿದರೆ, ವಿದ್ಯಾರ್ಥಿ ಪಾಸ್ ಗಳು ಎಲ್ಲ ಬಸ್ ಗಳಿಗು ಅನುಮತಿ ಇದೆ, ಯಾರು ಅನುಮತಿ ಇಲ್ಲ ಅನ್ನುವರೋ ಅವರನ್ನು ಬಸ್ ನ ಜೋತೆಗೆ ಕರೆದುಕೊಂಡು ಹೋಗಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿರಿ ಎಂದು ಅವರು ಹೇಳುತ್ತಾರೆ. ದೂರು ದಾಖಲಿಸುವುದು ದೊಡ್ಡಸ್ಥೀಕೆ ಅಲ್ಲ. ಅದರಲ್ಲು ಹಳ್ಳಿಯ ಜನರು ಕೇಸು, ಕೋರ್ಟುಗಳಿಗೆಲ್ಲ ಭಯಪಡುತ್ತಾರೆ. ಆದ ಕಾರಣ ಯಾರು ಏನು ಹೇಳುತ್ತಿಲ್ಲ. ವಿದ್ಯಾರ್ಥಿಗಳು ಕೇಳಿದರೆ ವ್ಯಂಗ್ಯವಾಗಿ, ಅಸಬ್ಯವಾಗಿ ವರ್ತಿಸುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳು ಬೇಸತ್ತಿದ್ದಾರೆ.
ಪ್ರತಿ ದಿನವು 9ಗಂಟೆಗೆಲ್ಲ ಶಾಲಾ-ಕಾಲೇಜಿನಲ್ಲಿ ಇರಬೇಕು, ಇಲ್ಲವಾದರೆ ಶಾಲೆ-ಕಾಲೇಜುಗಳಲ್ಲಿ ಗುರುಗಳ ಕಡೆಯಿಂದ ಬೈಯಿಸಿಕೊಳ್ಳ ಬೇಕು, ಅವರು ಕೋಡುವ ಶಿಕ್ಷೆನಾ ಅನುಭವಿಸ ಬೇಕು.ಕೇಲವೊಂದು ದಿನ ಪರೀಕ್ಷೆಗಳು, ಶಾಲಾ-ಕಾಲೇಜುಗಳಲ್ಲಿ ಪ್ರಮುಖವಾದ ಕಾರ್ಯಕ್ರಮಗಳು, ಹಾಗೂ ವಿಶೇಷವಾದ ತರಗತಿಗಳು ಇರುತ್ತವೆ. ತಡವಾಗಿ ಹೋಗಬೇಕಾಗುತ್ತದೆ. ಹೀಗೆ ಮಾಡಿದರೆ ಅವುಗಳಿಂದ ಹಿಂದೆ ಉಳಿಯ ಬೇಕಾಗುತ್ತದೆ.
ಆದ ಕಾರಣ ನಮ್ಮ ವಿಜಯಪುರ ಜಿಲ್ಲೆಯ ಮಾನ್ಯ ಜೀಲ್ಲಾಧೀಕಾರಿಗಳು ವಿದ್ಯಾರ್ಥಿಗಳ ಮೇಲೆ ಪ್ರೀತಿ, ಕಾಳಜಿ, ಧಯೆ, ಕರುಣೆ ಇಟ್ಟು, ವಿದ್ಯಾರ್ಥಿಗಳಿಗೆ ತೋಂದರೆ, ಮೋಸ ಆಗದಂತೆ ಸರಿಯಾದ ರೀತಿಯಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳ ಬೇಕಾಗಿ ಕಳಕಳಿಯಿಂದ ಇಂಡಿ ತಾಲ್ಲೂಕು ಹಾಗೂ ಇಂಡಿ ತಾಲ್ಲೂಕಿನ ಹೀರೆರೂಗಿ, ಬೊಳೆಗಾವಂ, ತಡವ್ಲಗಾ, ಗುಂಡುತಾಂಡಾ, ಅಥರ್ಗಾ, ನಾಗಠಾಣ, ಹಾಗೂ ಅಲೀಯಾಬಾದ ಗ್ರಾಮದ ಮಾರ್ವಗವಾಗಿ ಸಂಚರಿಸುವ ಎಲ್ಲಾ ವಿದ್ಯಾರ್ಥಿಗಳು ಕೇಳಿಕೊಳ್ಳುತ್ತಿದ್ದಾರೆ.
ಹೇಳಿಕೆಗಳು
“ನಾನು ಅಥರ್ಗಾ ಗ್ರಾಮದ ವಿದ್ಯಾರ್ಥಿನಿ ನಾನು ಪಿ.ಯು.ಸಿಯಿಂದನು ಅಂದರೆ ಸತತವಾಗಿ 4ವರ್ಷಗಳಿಂದಾನು ಅಥರ್ಗಾ ವಿಜಯಪುರದ ಮಾರ್ಗವಾಗಿ ಸಂಚರಿಸುತ್ತಿದ್ದೆನೆ ಪ್ರತಿ ದಿನವು ಇದೆ ರೀತಿಯ ಗೋಳ್ಳಾಟ ನಡೆದಿದೆ. ಪ್ರತಿ ದಿನ ಬೆಳ್ಳಗೆ 6ರಿಂದ 7:30 ರ ವರೆಗೆ ಮಾತ್ರ ಬಿಡುವಿಲ್ಲದ ಹಾಗೆ ಭೀಮಾಸಾರಿಗೆ ನಾಮಫಲಕಗಳು ರಹಿತ ಬಸ್ ಗಳು ಸಂಚರಿಸುತ್ತವೆ. ಕೇಲವು ಬಾರಿ ಸ್ವಲ್ಪ ತಡಮಾಡಿದರೆ 7:30ರ ಬಸ್ ಹೋರಟು ಹೋಗಿರುತ್ತದೆ. ನಂತರ 7:30 ರಿಂದ 8:15 ವರೆಗೆ ಬಸ್ ಗಳಿಲ್ಲ. ಇದ್ದರು ಸತತವಾಗಿ 3 ಬಸ್ ಗಳು ಭೀಮಾ ಸಾರಿಗೆ ನಾಮಫಲಕಗಳೊಂದಿಗೆ ಬರುತ್ತವೆ. ಆದ್ದ ಕಾರಣ ಇದಕ್ಕೆ ಸಂಭಂದ ಪಟ್ಟ ಅಧೀಕಾರಿಗಳು ಅಥವಾ ಮಾನ್ಯ ಜೀಲ್ಲಾಧೀಕಾರಿಗಳು ಈ ಸಮಸ್ಯೆಯನ್ನು ಬಗೆ ಹರಿಸುತ್ತಾರೆ ಎಂದು ನಂಬಿದ್ದೇವೆ.
|ಅಥರ್ಗಾ ಗ್ರಾಮದ ನೊಂದ ವಿದ್ಯಾರ್ಥಿನಿ
“ನಮ್ಮ ಮಗಳು ಶಿಕ್ಷಣಕ್ಕಾಗಿ ಇಂಡಿಗೆ ಹೋಗುತ್ತಾಳೆ. ಕೇಲವು ದಿನಗಳ ಹಿಂದೆ ಶಾಲೆಯಿಂದ ಮರಳಿ ಬರುವಾಗ ಗೋತ್ತಿಲ್ಲದೆ ಭೀಮಾ ಸಾರಿಗೆ ಎರಿದ್ದಳು, ಎರುವಾಗ ಸುಮ್ಮನಿದ್ದ ನಿರ್ವಾಹಕ ರಸ್ತೆಯ ಮಧ್ಯದಲ್ಲಿ ಇಳಿಸಿದರು. ಆ ದಿನ ರಸ್ತೆ ಮಧ್ಯದಲ್ಲಿ ಇಳಿಸಿದಕ್ಕಾಗಿ ಮತ್ತೆ ನಡೆದು ಕೊಂಡು ಇಂಡಿಗೆ ಹೋಗಿ ಬೇರೆ ಬಸ್ ಹಿಡಿದು ಬರಬೇಕಾದರೆ ರಾತ್ರೆ 8:30 –ಕ್ಕೂ ಅಧಿಕ ಸಮಸವಾಗಿತ್ತು. ನಂತರ ಮರುದಿನ ಇಂಡಿ ಡೀಪುಗೆ ಹೋಗಿ ವಿಚಾರಣೆ ಮಾಡಿದೆವು. ಅಂದಿನಿಂದ ನಮ್ಮ ಮಗಳು ವಿದ್ಯಾರ್ಥಿಗಳ ನಿಲಯದಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.
|ಅಥರ್ಗಾ ಗ್ರಾಮದ ಪೋಷಕರು
–ಕಾಂಚನಾ. ಬಸವರಾಜ. ಪೂಜಾರಿ
ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ
ಪತ್ರಿಕೊಧ್ಯಮ ಮತ್ತು ಸಮೂಹ ಸಂವಹನ ವಿಭಾಗ
ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ತೊರವಿ, ವಿಜಯಪುರ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಓಬವ್ವ ಆತ್ಮ ರಕ್ಷಣಾ ಕಲೆ ಕರಾಟೆ ಯೋಜನೆಗೆ 18 ಕೋಟಿ ರೂಪಾಯಿ ಮೀಸಲು

ಸುದ್ದಿದಿನ,ಯಾದಗಿರಿ : ರಾಜ್ಯ ವಸತಿ ಶಾಲೆಗಳ ಹೆಣ್ಣು ಮಕ್ಕಳ ಆತ್ಮರಕ್ಷಣೆಗಾಗಿ ರೂಪಿಸಿರುವ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಯೋಜನೆಯ ಅನುಷ್ಠಾನಕ್ಕಾಗಿ 18 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಕರಾಟೆ ಪ್ರದರ್ಶನ ವೀಕ್ಷಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಕಲೆ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಯೋಜನೆಯನ್ನು ರಾಜ್ಯದ ಎಲ್ಲ ವಸತಿ ಶಾಲೆಗಳಲ್ಲಿ ಆರಂಭಿಸಿದೆ. ಈಗಾಗಲೇ ಒಂದು ಸಾವಿರ ಕರಾಟೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮಕ್ಕಳ ಕರಾಟೆ ಕಲೆ ಹಾಗೂ ಸಮವಸ್ತ್ರಕ್ಕಾಗಿ 18 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಡವರು, ಆರ್ಥಿಕವಾಗಿ ಹಿಂದುಳಿದವರು, ಅಲೆಮಾರಿಗಳ ಮಕ್ಕಳೇ ವಿಶೇಷವಾಗಿ ಈ ವಸತಿ ಶಾಲೆಗಳಿಗೆ ದಾಖಲಾಗುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ವಸತಿ ಶಾಲೆಗಳನ್ನು ಮತ್ತುಷ್ಟು ಬಲಪಡಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
