ದಿನದ ಸುದ್ದಿ
ಕೇಂದ್ರ ಬಜೆಟ್ 2019 | ರೈತರಿಗೆ ಬಂಪರ್ ಕೊಡುಗೆ..!

ಸುದ್ದಿದಿನ,ನವದೆಹಲಿ : ಕೇಂದ್ರ ಸರ್ಕಾರ 2019-20 ನೇ ಸಾಲಿನ ಬಜೆಟ್ ಅನ್ನು ಮಂಡನೆ ಮಾಡಿದ್ದು, ರೈತರಿಗೆ ಬಂಪರ್ ಕೊಡುಗೆಯನ್ನು ನೀಡಿದೆ.
ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಅವರು ಸಣ್ಣ ಹಿಡುವಳಿದಾರರಿಗಾಗಿ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
ಹಾಗೇ ಪಶುಸಂಗೋಪನೆ,ಮೀನುಗಾರಿಕೆ ಕ್ಷೇತ್ರಗಳಿಗೆ ಉತ್ತಮಯೋಜನೆಗಳನ್ನು ಘೋಷಿಸಲಾಗಿದ್ದು, ಗೋವುಗಳ ರಕ್ಷಣೆಗೋಸ್ಕರ ‘ರಾಷ್ರ್ಟೀಯ ಕಾಮಧೇನು’ ಯೋಜನೆಯನ್ನು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಣೆಯಾದ ಅನುದಾನ ಹಾಗು ಯೋಜನೆಗಳ ವಿವರಗಳು ಈ ರೀತಿ ಯಾಗಿದೆ.

ಪ್ರಧಾನಮಂತ್ರಿ ‘ಕಿಸಾನ್ ಸಮ್ಮಾನ್’ಯೋಜನೆಯ ಬಗೆಗೆ ನೀವು ತಿಳಿಯ ಬೇಕಾದದ್ದು
ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಎರಡು (2)ಹೆಕ್ಟೇರ್ ಹಾಗೂ ಅದಕ್ಕಿಂತ ಕಡಿಮೆಯಿರುವ ಸಣ್ಣ ಹಿಡುವಳಿದಾರರಿಗೆ ಪ್ರತಿವರ್ಷ ಆರು (6) ಸಾವಿರ ರೂಪಾಯಿ (ತಿಂಗಳಿಗೆ 500 ರೂ )ನೇರವಾಗಿ ರೈತರ ಖಾತೆಗೆ ಜಮಾ ಆಗಲಿದೆ.
- 2018 ರ ಡಿಸೆಂಬರ್ ನಿಂದಲೇ ಜಾರಿ ಪೂರ್ವಾನ್ವಯ
- ಪಶುಪಾಲನೆ ಹಾಗೂ ಮೀನುಗಾರಿಕರ ಯೋಜನೆಗೆ 750ಕೋಟಿ ಮೀಸಲು.
- 6 ಸಾವಿರ ರೂಪಾಯಿಯನ್ನು, ಪ್ರತಿಬಾರಿ 2ಸಾವಿರ ರೂಪಾಯಿಯಂತೆ ವರ್ಷದಲ್ಲಿ ಮೂರು ಕಂತುಗಳ ಮೂಲಕ ಹಣ ವರ್ಗಾವಣೆ ಮಾಡಲಾಗುವುದು.
- ಸಕಾಲದಲ್ಲಿ ಸಾಲ ಮರುಪಾವತಿ ಮಾಡುವಂತಹ ರೈತರಿಗೆ ಶೇ.3ರಷ್ಟು ಬಡ್ಡಿ ವಿನಾಯಿತಿ ನೀಡಲಾಗುವುದು.
- ನೈಸರ್ಗಿಕ ವಿಕೋಪ ಪಕ್ಕೆ ಒಳಗಾಗಿ ಬೆಳೆಹಾನಿಯಾದ ರೈತರಿಗೆ ಶೇ.2ರಷ್ಟು ಬಡ್ಡಿ ರಿಯಾಯಿತಿ ಕೊಡಲಾಗುವುದು.
- ಒಟ್ಟಾರೆ ಈ ಯೋಜನೆಯಿಂದ 12 ಕೋಟಿ ರೈತರಿಗೆ ಲಾಭವಾಗಲಿದ್ದು, ಈ ಯೋಜನೆಗಾಗಿ 75 ಸಾವಿರ ಕೋಟಿ ರೂ ಮೀಸಲಿಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ನಿರುದ್ಯೋಗಿಗಳಿಗೆ ಉಚಿತ ವಸತಿಯುತ ತರಬೇತಿ

ಸುದ್ದಿದಿನ, ದಾವಣಗೆರೆ : 2022-23ನೇ ಸಾಲಿನಲ್ಲಿ ಗ್ರಾಮಾಂತರ ಕೈಗಾರಿಕಾ ವಿಭಾಗ ( Rural Industrial Department ) , ದಾವಣಗೆರೆ ( Davangere ) ಕಚೇರಿಯ ಜಿಲ್ಲಾ ಉದ್ಯಮ ಕೇಂದ್ರ ಲೆಕ್ಕಶೀರ್ಷಿಕೆಯಡಿ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ( unemployeds ) 1) ಮೊಬೈಲ್ ರಿಪೇರಿ, 2) ಮೋಟಾರ್ ರೀವೈಂಡಿಂಗ್, 3) ಗೃಹ ಎಲೆಕ್ಟ್ರಿಕಲ್ ವೈರಿಂಗ್ ತಾಂತ್ರಿಕ ವಿಷಯಗಳ ಕುರಿತು ಕೆನರಾ ಬ್ಯಾಂಕ್ನ ಆರ್-ಸೆಟಿ ತರಬೇತಿ ಸಂಸ್ಥೆ, ತೋಳಹುಣಸೆ, ದಾವಣಗೆರೆ ತಾ. ಮೂಲಕ ಸಂಪೂರ್ಣ ಉಚಿತ ಹಾಗೂ ವಸತಿಯುತ ತರಬೇತಿ ( Free Training ) ನೀಡಿ, ಪ್ರತಿ ಅಭ್ಯರ್ಥಿಗೆ ರೂ. 5,000/- ಮೊತ್ತದ ಉಚಿತ ಉಪಕರಣಗಳ ಕಿಟ್ನ್ನು ಸಹ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ನ ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪ ನಿರ್ದೇಶಕರು(ಖಾಗ್ರಾ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಯುಕ್ತ ಆಸಕ್ತ ಅಭ್ಯರ್ಥಿಗಳು ತರಬೇತಿಗಾಗಿ ಆರ್-ಸೆಟಿ ತರಬೇತಿ ಸಂಸ್ಥೆ, ತೋಳಹುಣಸೆ, ದಾವಣಗೆರೆ ತಾ. ಅಥವಾ ಉಪ ನಿರ್ದೇಶಕರು(ಖಾಗ್ರಾ), ಗ್ರಾಮೀಣ ಕೈಗಾರಿಕಾ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಡಿ.ಸಿ. ಕಚೇರಿ ಪಕ್ಕ, ದಾವಣಗೆರೆ ಇಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ತರಬೇತಿಯು 30 ದಿನಗಳ ವಸತಿಯುತ ತರಬೇತಿಯಾಗಿದ್ದು, ದಾವಣಗೆರೆ ಜಿಲ್ಲೆಯ ಗ್ರಾಮೀಣ ಅಭ್ಯರ್ಥಿಗಳಿಗೆ ಮಾತ್ರ (18 ರಿಂದ 45 ವರ್ಷ ವಯಸ್ಸಿನವರಿಗೆ ಮಾತ್ರ) ಅನ್ವಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ದೂರವಾಣಿ ಸಂ. : 9448929717, 9845691958, 7019980484, 9964111314.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಹದಡಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನ

ಸುದ್ದಿದಿನ,ದಾವಣಗೆರೆ : ದಾವಣಗೆರೆ ( Davangere ) ತಾಲ್ಲೂಕಿನ ಹದಡಿ (Hadadi) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ “ಹರ್ ಘರ್ ತಿರಂಗಾ” ( Har Ghar Tiranga ) ಅಭಿಯಾನದಲ್ಲಿ (Campaign) ವಿದ್ಯಾರ್ಥಿಗಳು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿ ಭಾಗವಹಿಸಿದ್ದರು, ಇದೇ ವೇಳೆ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Big Breaking | ಜಮ್ಮು ಮತ್ತು ಕಾಶ್ಮೀರದ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ; 3 ಯೋಧರು ಹುತಾತ್ಮ

ಸುದ್ದಿದಿನ,ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ(Jammu-Kashmir) ರಾಜೌರಿಯಲ್ಲಿ (Rajouri) ಇಂದು ಮುಂಜಾನೆ ಇಬ್ಬರು ಉಗ್ರರು (Terrorist) ಸೇನಾ ಶಿಬಿರದೊಳಗೆ (Army Camp) ನುಸುಳಲು ಯತ್ನಿಸಿದ ಪರಿಣಾಮ ಮೂವರು ಯೋಧರು (Soldiers) ಹುತಾತ್ಮರಾಗಿದ್ದಾರೆ (Killed ). ಎನ್ಕೌಂಟರ್ನಲ್ಲಿ (Encounter) ಇಬ್ಬರೂ ಉಗ್ರರು ಹತರಾಗಿದ್ದಾರೆ. ರಾಜೌರಿಯ ದರ್ಹಾಲ್ನಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ನಡೆದಿದೆ.
“ಭಯೋತ್ಪಾದಕರು ಪರ್ಗಲ್ನಲ್ಲಿರುವ ಸೇನಾ ಶಿಬಿರದ ಬೇಲಿಯನ್ನು ದಾಟಲು ಪ್ರಯತ್ನಿಸಿದರು. ಸೆಂಟ್ರಿ ಸವಾಲು ಹಾಕಿದರು ಮತ್ತು ಗುಂಡಿನ ಚಕಮಕಿ ನಡೆಯಿತು” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ – ADGP) ಮುಖೇಶ್ ಸಿಂಗ್ ಹೇಳಿದ್ದಾರೆ.
ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅವರು ಹೇಳಿದರು. ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರಿಗೂ ಗಾಯಗಳಾಗಿವೆ.

One Officer is also among the injured Army personnel in the terrorist attack and has been rushed for medical treatment. 16 Corps Commander Lt Gen Manjinder Singh is constantly monitoring the situation on the ground. The area is being sanitised: Indian Army officials https://t.co/pXJONGqwm2
— ANI (@ANI) August 11, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಚನ್ನಗಿರಿ | ಸರ್ಕಾರಿ ಹುದ್ದೆಗಳ ಅಕ್ರಮ ನೇಮಕಾತಿ ; ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ
-
ನಿತ್ಯ ಭವಿಷ್ಯ7 days ago
ಶನಿವಾರ ರಾಶಿ ಭವಿಷ್ಯ-ಆಗಸ್ಟ್-6,2022 : ಈ ರಾಶಿಯವರ ನಿಮ್ಮೆಲ್ಲ ಕನಸು ನನಸಾಗುವ ದಿನ ಬಂದಿದೆ!
-
ದಿನದ ಸುದ್ದಿ5 days ago
ಪ್ರತೀ ಮಗುವಿನ ಭವಿಷ್ಯವೂ ಮುಖ್ಯ: ಶಾಸಕ ರಿಜ್ವಾನ್ ಅರ್ಷದ್
-
ದಿನದ ಸುದ್ದಿ3 days ago
ಹದಡಿ ಕೆರೆ ಏರಿ ದುರಸ್ತಿಗೆ 1.70 ಕೋಟಿ ಮಂಜೂರು : ಸಚಿವ ಬೈರತಿ ಬಸವರಾಜ್
-
ನಿತ್ಯ ಭವಿಷ್ಯ6 days ago
ಭಾನುವಾರ- ರಾಶಿ ಭವಿಷ್ಯ ಆಗಸ್ಟ್-7,2022 : ಈ ರಾಶಿಯವರ ಪ್ರಯತ್ನಿಸಿದ ಕೆಲಸ ಕಾರ್ಯರೂಪಕ್ಕೆ ಬರಲಿದೆ! ಈ ರಾಶಿಯವರು ಇನ್ಮುಂದೆ ಆರ್ಥಿಕ ಸಂಕಷ್ಟದಿಂದ ಮುಕ್ತಿ!
-
ದಿನದ ಸುದ್ದಿ6 days ago
ಕರ್ನಾಟಕದಲ್ಲಿ ವ್ಯಾಪಕ ಮಳೆ; ತುರ್ತು ಪರಿಹಾರಕ್ಕೆ 200 ಕೋಟಿ ರೂಪಾಯಿ ಬಿಡುಗಡೆ
-
ನಿತ್ಯ ಭವಿಷ್ಯ5 days ago
ಸೋಮವಾರ ರಾಶಿ ಭವಿಷ್ಯ-ಆಗಸ್ಟ್-8,2022 : ಈ ರಾಶಿಯವರ ಜೊತೆ ಮದುವೆಯಾದರೆ ಸುಖವಾಗಿ ಇರಬಹುದು! ಈ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ನಿಮ್ಮ ಕಷ್ಟ ಪರಿಹಾರ!
-
ದಿನದ ಸುದ್ದಿ3 days ago
ಎನ್ಇಪಿ-2020ರ ಯಶಸ್ಸಿನಲ್ಲಿ ಗ್ರಂಥಪಾಲಕರ ಪಾತ್ರ ಮಹತ್ವದ್ದು : ಪ್ರೊ. ಪಿ ಎಸ್ ಯಡಪಡಿತ್ತಾಯ