ಕ್ರೀಡೆ
ಅಂತರಾಷ್ಟ್ರೀಯ ಕಬಡ್ಡಿ ಲೀಗ್ ಆಟಗಾರರ ಆಯ್ಕೆ ಪ್ರಕ್ರಿಯೆ

ಸುದ್ದಿದಿನ, ಬೆಂಗಳೂರು: ಪ್ರೊ ಕಬಡ್ಡಿಗೆ ಪರ್ಯಾಯವಾಗಿ ರೂಪುಗೊಂಡಿರುವ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ನ ಆಲ್ ಇಂಡಿಯಾ ಆಯ್ಕೆ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯ ಸೇರಿದಂತೆ ಎಲ್ಲಾ ಇತರ ಜಿಲ್ಲೆಗಳಿಂದಲೂ ಆಟಗಾರರು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ ಸರ್ಕಾರಿ ಇಲಾಖೆಗಳ ಆಟಗಾರರು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.
ಇಲ್ಲಿನ ವಿದ್ಯಾನಗರ ಕ್ರೀಡಾ ಹಾಸ್ಟೆಲ್ ಆವರಣದಲ್ಲಿ ಬುಧವಾರ ನಡೆದ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 300 ಆಟಗಾರರು ಭಾಗವಹಿಸಿದ್ದರು. ಒಟ್ಟಾರೆ 200 ಆಟಗಾರರನ್ನು ಆಯ್ಕೆ ಮಾಡಲಾಗುವುದು. ಇದರಲ್ಲಿ 150 ಆಟಗಾರರು ಲೀಗ್ನಲ್ಲಿನ 8 ತಂಡಗಳಲ್ಲಿ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದ 50 ಯುವ ಆಟಗಾರರಿಗೆ ಹೆಚ್ಚಿನ ತರಬೇತಿಯನ್ನು ನೀಡಲು ನ್ಯೂ ಕಬಡ್ಡಿ ಫೆಡರೇಷನ್ ನಿರ್ಧರಿಸಿದೆ.
ಆಟಗಾರರ ಆಯ್ಕೆಯನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ. ‘ಎ’. ‘ಬಿ’ ಹಾಗೂ ‘ಸಿ’ ಎಂದು ೩ ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ವಿಭಾಗಗಳಲ್ಲಿ ಆಯ್ಕೆಯಾದ ಆಟಗಾರರಿಗೆ ಕ್ರಮವಾಗಿ 10.8ಲಕ್ಷ ಹಾಗೂ 6ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಇನ್ನೂ 50 ಯುವ ಆಟಗಾರರಿಗೆ 4.3 ಲಕ್ಷಹಾಗೂ 2 ಲಕ್ಷ ರು.ಗಳನ್ನು ನೀಡಲಾಗುತ್ತಿದೆ ಎಂದು ನ್ಯೂ ಕಬಡ್ಡಿ ಫೆಡರೇಷನ್ನ ಕಾರ್ಯದರ್ಶಿ ಪ್ರಸಾದ್ ಬಾಬು ಹೇಳಿದ್ದಾರೆ.
12 ಆಯ್ಕೆಗಾರರು
ಆಟಗಾರರ ಆಯ್ಕೆ ಸಮಿತಿಯಲ್ಲಿ 12 ಮಾಜಿ ಅಂತಾರಾಷ್ಟ್ರೀಯ ಆಟಗಾರರು ಹಾಗೂ ಅರ್ಜುನ ಪ್ರಶಸ್ತಿ ವಿಜೇತರು ಇದ್ದಾರೆ. ಆಯ್ಕೆ ಪಾರದರ್ಶಕ ವಾಗಿರಲೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೆ ತಜ್ಞ ಕಬಡ್ಡಿ ಆಟಗಾರರ ಸಮ್ಮುಖದಲ್ಲಿ ಆಯ್ಕೆ ನಡೆಸಲಾಗುತ್ತಿದೆ.
18 ಪ್ರೊ ಕಬಡ್ಡಿ ಆಟಗಾರರು?
ಇಂಡೋ ಇಂಟರ್ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ ರಾಜ್ಯಗಳಿಂದ 18 ಪ್ರೊ ಕಬಡ್ಡಿ ಆಟಗಾರರು ಭಾಗವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಕರ್ನಾಟಕ ರಾಜ್ಯದಿಂದ ಯಾವೊಬ್ಬ ಪ್ರೊ ಕಬಡ್ಡಿ ಆಟಗಾರರು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ರೈಲ್ವೇಸ್, ಪೊಲೀಸ್, ಆರ್ಮಿ ಇಲಾಖೆಯ ಕಬಡ್ಡಿ ಆಟಗಾರರು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ರಾಜ್ಯದಿಂದ 30 ಆಟಗಾರರು
ಕರ್ನಾಟಕ ರಾಜ್ಯದಿಂದ 30ಕ್ಕೂ ಹೆಚ್ಚು ಆಟಗಾರರು ಆಲ್ ಇಂಡಿಯಾ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಈ ಹಿಂದೆ ಮೊದಲೇ ಹೇಳಿದಂತೆ ಪ್ರತಿ ತಂಡವೊಂದರಲ್ಲಿ 5 ರಿಂದ 6 ಆಟಗಾರರು ರಾಜ್ಯದವರಾಗಿರುತ್ತಾರೆ ಎಂದು ಹೇಳಲಾಗಿತ್ತು. ಅದರಂತೆ 8 ತಂಡಗಳ 18ಆಟಗಾರರ ಪೈಕಿ ಕರ್ನಾಟಕವರು 6 ಆಟಗಾರರು ಇರಲಿದ್ದಾರೆ.
3 ದಿನಗಳ ಪ್ರಕ್ರಿಯೆ
ಪ್ರೊ ಕಬಡ್ಡಿಗೆ ಪರ್ಯಾಯವಾಗಿ ರೂಪುಗೊಂಡಿರುವ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ 3 ದಿನಗಳ ಕಾಲ ನಡೆಯುತ್ತಿದೆ. ಮಂಗಳವಾರ ಹಾಗೂ ಬುಧವಾರ ಆಟಗಾರರ ನೋಂದಾಣಿ ಕಾರ್ಯ ನಡೆಯಿತು. ಗುರುವಾರ ಆಟಗಾರರ ಅಂತಿಮ ಆಯ್ಕೆ ನಡೆಯಲಿದೆ. ಜೊತೆಯಲ್ಲಿ ಪ್ರಾಂಚೈಸಿಗಳನ್ನು ಅಂತಿಮಗೊಳಿಸಲಾಗುತ್ತದೆ. ಪ್ರತಿ ತಂಡವು 18 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿದೆ.
ಪ್ರಕ್ರಿಯೆಯಲ್ಲಿ 100 ರೆಫ್ರಿಗಳು
ಸುಮಾರು 100 ಮಂದಿ ರೆಫ್ರಿಗಳು ಪಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ 27 ರೆಫ್ರಿಗಳು ಕರ್ನಾಟಕದವರಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986815401

ಕ್ರೀಡೆ
ದಾವಣಗೆರೆ | ಮಹಿಳಾ ಸೇವಾ ಸಮಾಜ ಪ್ರೌಢ ಶಾಲೆ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆ

ಸುದ್ದಿದಿನ, ದಾವಣಗೆರೆ : 2022-23 ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಮಹಿಳಾ ಸೇವಾ ಸಮಾಜ ಪ್ರೌಢಶಾಲೆಯ ವಿದ್ಯಾರ್ಥಿ ಮಣಿಕಂಠ ಆರ್. ಅವರು 100 ಮೀ ಫ್ರೀ ಸ್ಟೈಲ್ 200ಮೀ ಫ್ರೀ ಸ್ಟೈಲ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗ ಆಡಳಿತ ಮಂಡಳಿ ಹಾಗೂ ಶಾಲಾ ಸಿಬ್ಬಂದಿವರ್ಗ ಅಭಿನಂದನ ಸಲ್ಲಿಸಿದ್ದಾರೆ.
ಜಿಲ್ಲಾಮಟ್ಟಕ್ಕೆ ಆಯ್ಕೆ
2022-23 ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ತಾಲ್ಲೂಕುಮಟ್ಟದ ಕ್ರೀಡಾಕೂಟಗಳಲ್ಲಿ ಮಹಿಳಾ ಸೇವಾ ಸಮಾಜ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ಣಿಮ ಎಂ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕುಮಾರಿ ಬಂಗಾರಿ ಅಂಜಲಿ 3 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹಾಗೂ ಶಾಲಾ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಭಾರತೀಯ ಒಲಂಪಿಕ್ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷೆ ಪಿ.ಟಿ. ಉಷಾ ಅವರನ್ನು ಅಭಿನಂದಿಸಿದ ರಾಜ್ಯಸಭಾ ಸಭಾಪತಿ

ಸುದ್ದಿದಿನ ಡೆಸ್ಕ್ : ಭಾರತೀಯ ಒಲಂಪಿಕ್ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ ಅವರನ್ನು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅಭಿನಂದಿಸಿದ್ದಾರೆ.
ಸದನ ಇಂದು ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿಯವರು ಮಾತನಾಡಿ, ದೇಶದಲ್ಲಿ ಮನೆಮಾತಾಗಿರುವ ಪಿ.ಟಿ. ಉಷಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಅತ್ಯುನ್ನತ ಅರ್ಜುನ ಮತ್ತು ಪದ್ಮಶ್ರೀ ಪುರಸ್ಕೃತರಾದ ಅವರು ಸದ್ಯ ಕ್ರೀಡೆಗಳನ್ನು ಮತ್ತು ಕ್ರೀಡಾ ಶಿಕ್ಷಣವನ್ನು ಉತ್ತೇಜಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
Thank you Hon, Chairman Sir and all my fellow Rajya Sabha members for the kind words, and the good wishes. I look forward to the responsibilities at hand with utmost sincerity! 🙏🏽 https://t.co/6qb1NcaCgD
— P.T. USHA (@PTUshaOfficial) December 12, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್ ಶಿಪ್ ; ಕರ್ನಾಟಕ ರಾಜ್ಯ ತಂಡಕ್ಕೆ ದಾವಣಗೆರೆ ಜಿಲ್ಲೆಯಿಂದ ಎನ್. ಜಿತೇಂದ್ರ ತೋಳಹುಣಸೆ ಆಯ್ಕೆ

ಸುದ್ದಿದಿನ,ದಾವಣಗೆರೆ : ಇದೇ ನವೆಂಬರ್ 17 ರಿಂದ 20 ರ ವರೆಗೆ ನಡೆಯಲಿರುವ ಉತ್ತರಕಾಂಡ ರಾಜ್ಯದ ಹರಿದ್ವಾರದಲ್ಲಿ 48ನೇ ಬಾಲಕರ ವಿಭಾಗದ ಜೂನಿಯರ್ ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್ ಶಿಪ್ಗೆ ಕರ್ನಾಟಕ ರಾಜ್ಯ ತಂಡಕ್ಕೆ ದಾವಣಗೆರೆ ಜಿಲ್ಲೆಯಿಂದ ಎನ್. ಜಿತೇಂದ್ರ ತೋಳಹುಣಸೆ ಇವರು ಆಯ್ಕೆಯಾಗಿರುತ್ತಾರೆ.
ಇವರಿಗೆ ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಯು ಆದ ಎಂ ನಾಗರಾಜ್ ಮತ್ತು ಚೇರ್ಮನ್ ಬಿ.ಜಿ .ಅಜಯ್ ಕುಮಾರ್ .ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷರು ಎಚ್. ನಿಜಗುಣ, ಗೌರವಾಧ್ಯಕ್ಷರು ಹಾಗೂ ಸೈಯದ್ ನಿಸಾರ್ ತರಬೇತುದಾರರಾದ ಬೇತುರೊಡಿ ನ ಡಿ .ರಾಜು ಹಾಗೂ ಸಿ.ಎಚ್ .ಪುಟ್ಟರಾಜ. ಕಬಡ್ಡಿಯ ಕ್ರೀಡಾಪಟುಗಳು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
