Connect with us

ದಿನದ ಸುದ್ದಿ

‘ಏರ್ ಸ್ಟ್ರೈಕ್‍‌’ ನಲ್ಲಿ ನಿಜಕ್ಕೂ ಉಗ್ರರು ಸತ್ತಿದ್ದಾರ? : ಸಾಕ್ಷಿ ಕೇಳಿದ ವಿಪಕ್ಷ ನಾಯಕರು

Published

on

ಸುದ್ದಿದಿನ ಡೆಸ್ಕ್ : ಭಾರತೀಯ ವಾಯುಪಡೆಯ ಏರ್ ಸ್ಟ್ರೈಕ್ ಬಗ್ಗೆ ಅನುಮಾನ ಮೂಡಿದ್ದು, 300 ಉಗ್ರರು ಸತ್ತಿದ್ದಾರೆ ಎಂದು ಹೇಳಿದವರಾರು? ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್​ ಹಿರಿಯ ನಾಯಕ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.

ಏರ್​ ಚೀಫ್ ಮಾರ್ಷಲ್​ ಸಾವಿನ ಸಂಖ್ಯೆ ಹೇಳಲು ನಿರಾಕರಿಸಿದ್ದಾರೆ. ಯಾವುದೇ ಹಾನಿ ಉಂಟಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.ಹೀಗಿರುವಾಗ 300-350 ಜನ ಸತ್ತಿದ್ದಾರೆ ಎನ್ನುವ ಲೆಕ್ಕ ಹೇಳಿದವರಾರು? ಎಂದು ಗುಡುಗಿದ್ದಾರೆ.

ದಿಗ್ವಿಜಯ್ ಸಿಂಗ್

ಏರ್ ಸ್ಟ್ರೈಕ್‍ ಪುರಾವೆ ಎಲ್ಲಿ? ಉಗ್ರರ ಮೇಲಿನ ದಾಳಿಯ ಬಗ್ಗೆ ಪ್ರತಿಪಕ್ಷಗಳು ಪುರಾವೆ ಕೇಳ್ತಿವೆ ಎಂದು ಕೇಂದ್ರ ಸರ್ಕಾರಕ್ಕೆ ‘ಏರ್ ಸ್ಟ್ರೈಕ್‍’ ಸಾಕ್ಷಿ ಕೇಳಿದ್ದಾರೆ ದಿಗ್ವಿಜಯ್‍ ಸಿಂಗ್. ಬಿನ್‍ ಲಾಡೆನ್‍ ಹತ್ಯೆಗೈದ ಅಮೆರಿಕಾ ಜಗತ್ತಿನ ಮುಂದೆ ಸಾಕ್ಷಿ ಇಟ್ಟಿತ್ತು,‌ನಾವು ಕೂಡಾ ದಾಳಿಯ ಬಗ್ಗೆ ಜಗತ್ತಿಗೆ ಸಾಕ್ಷಿ ತೋರಿಸಬೇಕು ಎಂದಿದ್ದಾರೆ.

ನವಜೋತ್ ಸಿಂಗ್ ಸಿದ್ದು

ನೆಲಸಮ ಮಾಡಿದ್ದು ಉಗ್ರರನ್ನೋ? ಮರಗಳನ್ನೋ? ನೀವು ನೆಲಸಮ ಮಾಡಿರುವುದು ಉಗ್ರರನ್ನೋ ಅಥವಾ ಮರಗಳನ್ನೋ? ದಾಳಿಯಲ್ಲಿ ಮೃತಪಟ್ಟಿರುವವರ ಸಂಖ್ಯೆ ಎಷ್ಟು? ಕೇಂದ್ರ ಸರ್ಕಾರದ ವಿರುದ್ಧ ನವಜೋತ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಇದರ ಉದ್ದೇಶವೇನು? ಇದು ಚುನಾವಣಾ ಗಿಮಿಕ್ ಅಲ್ಲವೇ? ಶತ್ರುಗಳ ವಿರುದ್ಧ ಹೋರಾಡುವಲ್ಲಿ ನಮ್ಮ ನಾಡಿಗೆ ಮೋಸವಾಗಿದೆ. ಸೈನ್ಯವನ್ನು ರಾಜಕೀಯಕ್ಕೆ ಒಳಪಡಿಸುವುದನ್ನು ನಿಲ್ಲಿಸಿ.ಸಿದ್ದು ಟ್ವೀಟ್ ನಲ್ಲಿ ಯಡಿಯೂರಪ್ಪ, ಅಹ್ಲುವಾಲಿಯಾ ಹೇಳಿಕೆ ಪ್ರಸ್ತಾಪಿಸಿದ್ದಾರೆ.

ಕಪಿಲ್ ಸಿಬಲ್

ವೆಬ್ ಸೈಟ್ ಗಳು ಸುಳ್ಳು ಹೇಳ್ತಾವಾ?
ಉಗ್ರಗಾಮಿ ಸತ್ತಿಲ್ಲ ಎಂದು ಕೆಲ ವೆಬ್ ಸೈಟ್ ಗಳು ವರದಿ ಮಾಡಿದ್ದು,ಉಗ್ರರು ಸತ್ತಿರುವ ಯಾವುದೇ ಪುರಾವೆ ಇಲ್ಲವೆಂದು ಹೇಳಿವೆ.
ಅಂತರಾಷ್ಟ್ರೀಯ ವೆಬ್ ಸೈಟ್ ಸುಳ್ಳು ಹೇಳುತ್ತವೆಯೆ?‌ ಎಂದು ಸಾಕ್ಷಿ ಕೇಳಿದ್ದಾರೆ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್.

ನೀವು ಭಯೋತ್ಪಾದನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದೀರಿ. ಉಗ್ರರ ಸಾವಿನ ಪುರಾವೆ ನೀಡುವಂತೆ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.

ಮನೋಜ್ ತಿವಾರಿ

ಅಮಿತ್ ಶಾಗೆ ಮಾಹಿತಿ ಎಲ್ಲಿಂದ ಸಿಕ್ತು ?
ಏರ್ ಚೀಫ್ ಮಾರ್ಷಲ್ ಸಾವಿನ ಸಂಖ್ಯೆ ಗೊತ್ತಿಲ್ಲ ಎಂದಿದ್ದಾರೆ. ಆದರೆ ಅಮಿತ್ ಶಾ ಸಾವಿನ ಸಂಖ್ಯೆ 250 ಅಂತಾ ಹೇಳಿದ್ದಾರೆ.ಅಮಿತ್ ಶಾಗೆ ಮಾಹಿತಿ ಎಲ್ಲಿಂದ ಸಿಕ್ತು ?ಕಾಂಗ್ರೆಸ್ ಮುಖಂಡ ಮನೋಜ್ ತಿವಾರಿ ಪ್ರಶ್ನೆ
ಬಿಜೆಪಿ ರಾಷ್ಟ್ರಧ್ಯಕ್ಷರು ಈ ಬಗ್ಗೆ ಉತ್ತರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ

ಎಲ್ಲಿ,ಎಷ್ಟು ಬಾಂಬ್‍ಗಳನ್ನು ಹಾಕಲಾಗಿದೆ?
ಏರ್‌ಸ್ಟ್ರೈಕ್ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಕೊಡುವಂತೆ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ಯಾವ ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ? ಎಷ್ಟು ಬಾಂಬ್‍ಗಳನ್ನು ಉಗ್ರರ ಮೇಲೆ ಹಾಕಲಾಗಿದೆ? ಏರ್ ಸ್ಟ್ರೈಕ್ ನಲ್ಲಿ ಎಷ್ಟು ಉಗ್ರರು ಸಾವನ್ನಪ್ಪಿದ್ದಾರೆ? ವಿದೇಶಿ ಮಾಧ್ಯಮಗಳಲ್ಲಿ ಯಾರು ಮೃತಪಟ್ಟಿಲ್ಲ ಎಂದು ವರದಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿ ಎಂದಿದ್ದಾರೆ ಮಮತಾ ಬ್ಯಾನರ್ಜಿ.

ಮೆಹಬೂಬ

ಮಾಹಿತಿ ತಿಳಿದುಕೊಳ್ಳುವುದು ನಮ್ಮ ಹಕ್ಕು
ಏರ್‌ಸ್ಟ್ರೈಕ್ ಬಗ್ಗೆ ನಮಗೆ ಸಂಪೂರ್ಣವಾದ ಮಾಹಿತಿ ಕೊಡಿ. ಮಾಹಿತಿ ತಿಳಿದುಕೊಳ್ಳುವುದು ನಮ್ಮ ಹಕ್ಕು. ಏರ್‌ಸ್ಟ್ರೈಕ್ ಮಾಹಿತಿ ನೀಡಿ ಎಂದಿದ್ದಾರೆ ಮುಫ್ತಿ ,ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ.

ಗುಂಡೂರಾವ್

ಸೂಕ್ಷ್ಮತಾ ವಿಚಾರಗಳನ್ನು ಬಿಟ್ಟು ಉಳಿದ ವಿಷಯ ಬಹಿರಂಗಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ನಮ್ಮ ಸೈನಿಕರ ಕಾರ್ಯ ವೈಖರಿ ಬಗ್ಗೆ ಹೆಮ್ಮೆಯಿದೆ,ಗೌರವವಿದೆ.ಏರ್ ಸ್ಟ್ರೈಕ್ ಕುರಿತು ಮಾಧ್ಯಮಗಳಲ್ಲಿ ಹಲವು ಪ್ರಶ್ನೆಗಳು ಎದ್ದಿವೆ.
ಉಗ್ರರ ಮೇಲಿನ ದಾಳಿ ಬಗ್ಗೆ ಪ್ರಶ್ನೆ ಕೇಳುವುದರಲ್ಲಿ ತಪ್ಪಿಲ್ಲ.ಕುತೂಹಲದಿಂದ ಈ ಪ್ರಶ್ನೆ ಕೇಳಲಾಗುತ್ತಿದೆ‌ ಎಂದಿದ್ದಾರೆ.

ಈ ಎಲ್ಲ ವಿದ್ಯಾಮಾನಗಳ ಹಿನ್ನೆಲೆಯಲ್ಲಿ, ನಾವು ನಮ್ಮ ಗುರಿ ತಲುಪಿದ್ದೀವಿ.ನಿಗದಿ ಪಡಿಸಿದ್ದ ಗುರಿಗಳ ಮೇಲೆ ನಾವು ನಿಖರವಾಗಿ ದಾಳಿ ಮಾಡಿದ್ದೇವೆ‌ ಎಂದು
ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಸ್ಪಷ್ಟನೆ ನೀಡಿದೆ.

ಸಾವು-ನೋವುಗಳ ಲೆಕ್ಕಾಚಾರ ನಮ್ಮ ಕೆಲಸವಲ್ಲ. ಸಾವು-ನೋವುಗಳ ಲೆಕ್ಕಾಚಾರ ಕೇಂದ್ರ ಸರ್ಕಾರ ನೀಡುತ್ತದೆ. ‌ಅರಣ್ಯದ ಖಾಲಿ ಜಾಗದಲ್ಲಿ ಬಾಂಬ್ ಹಾಕಿಲ್ಲ. ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ದರೆ ಅವರೇಕೆ ಇಷ್ಟು ಗಂಭೀರವಾಗುತ್ತಿದ್ರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ನಟ ಮನದೀಪ್‌ ರಾಯ್‌ ನಿಧನ

Published

on

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್‌ ರಾಯ್‌ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್‌ ರಾಯ್‌ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್‌ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವ್‌ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.

ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

Published

on

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.

ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.

ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980336243

Continue Reading
Advertisement

Title

ದಿನದ ಸುದ್ದಿ1 week ago

ನಟ ಮನದೀಪ್‌ ರಾಯ್‌ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್‌ ರಾಯ್‌ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ. ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ...

ದಿನದ ಸುದ್ದಿ1 week ago

ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ...

ದಿನದ ಸುದ್ದಿ2 weeks ago

ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ...

ನಿತ್ಯ ಭವಿಷ್ಯ2 weeks ago

ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ

ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ.. ಸೋಮವಾರ- ರಾಶಿ ಭವಿಷ್ಯ ಜನವರಿ-23,2023 ಸೂರ್ಯೋದಯ: 06.46 AM, ಸೂರ್ಯಾಸ್ತ : 06.16 PM...

ನಿತ್ಯ ಭವಿಷ್ಯ2 weeks ago

ಭಾನುವಾರ ರಾಶಿ ಭವಿಷ್ಯ -ಜನವರಿ-22,2023 ಈ ರಾಶಿಯವರ ಕೈ ಹಿಡಿದ ಕೆಲಸಗಳು ಸಕ್ಸಸ್,

ಈ ರಾಶಿಯವರ ತುಂಬಾ ದಿವಸದ ಪ್ರೀತಿ ಹೂವಾಗಿ ಅರಳುವುದು, ಈ ರಾಶಿಯವರ ಕೈ ಹಿಡಿದ ಕೆಲಸಗಳು ಸಕ್ಸಸ್, ಭಾನುವಾರ ರಾಶಿ ಭವಿಷ್ಯ -ಜನವರಿ-22,2023 ಸೂರ್ಯೋದಯ: 06.46 AM,...

ನಿತ್ಯ ಭವಿಷ್ಯ2 weeks ago

ನಿಮಗೆ ಸಂತಾನದ ಸಮಸ್ಯೆ ಕಾಡುತ್ತಿದೆಯೇ? “ತಮ್ಮ ಜನ್ಮ ಜಾತಕದಲ್ಲಿ( ಕುಂಡಲಿ) ಸಂತಾನಯೋಗ ಫಲ ಮತ್ತು ಪರಿಹಾರ”

ನಿಮಗೆ ಸಂತಾನದ ಸಮಸ್ಯೆ ಕಾಡುತ್ತಿದೆಯೇ? “ತಮ್ಮ ಜನ್ಮ ಜಾತಕದಲ್ಲಿ( ಕುಂಡಲಿ) ಸಂತಾನಯೋಗ ಫಲ ಮತ್ತು ಪರಿಹಾರ” ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403...

ನಿತ್ಯ ಭವಿಷ್ಯ2 weeks ago

ಶನಿವಾರ ರಾಶಿ ಭವಿಷ್ಯ -ಜನವರಿ-21,2023 : ಈ ರಾಶಿಯವರಿಗೆ ಶುಭ ಘಳಿಗೆ ಪ್ರಾರಂಭ

ಈ ರಾಶಿಯವರಿಗೆ ಶುಭ ಘಳಿಗೆ ಪ್ರಾರಂಭ ಶನಿವಾರ ರಾಶಿ ಭವಿಷ್ಯ -ಜನವರಿ-21,2023 ಅಮವಾಸೆ ಸೂರ್ಯೋದಯ: 06.46 AM, ಸೂರ್ಯಾಸ್ತ : 06.15 PM ಶಾಲಿವಾಹನ ಶಕೆ1944, ಶುಭಕೃತ...

ನಿತ್ಯ ಭವಿಷ್ಯ2 weeks ago

ಶುಕ್ರವಾರ- ರಾಶಿ ಭವಿಷ್ಯಜನವರಿ-20,2023 : ಈ ರಾಶಿಯವರಿಗೆ ಆಕಸ್ಮಿಕ ಕಂಕಣ ಬಲ, ಧನಪ್ರಾಪ್ತಿ ಮತ್ತು ಉದ್ಯೋಗ ಪ್ರಾಪ್ತಿ

ಈ ರಾಶಿಯವರಿಗೆ ಆಕಸ್ಮಿಕ ಕಂಕಣ ಬಲ, ಧನಪ್ರಾಪ್ತಿ ಮತ್ತು ಉದ್ಯೋಗ ಪ್ರಾಪ್ತಿ. ಶುಕ್ರವಾರ- ರಾಶಿ ಭವಿಷ್ಯಜನವರಿ-20,2023 ಸೂರ್ಯೋದಯ: 06.46 AM, ಸೂರ್ಯಾಸ್ತ : 06.15 PM  ...

ನಿತ್ಯ ಭವಿಷ್ಯ3 weeks ago

ಬುಧವಾರ- ರಾಶಿ ಭವಿಷ್ಯ ಜನವರಿ-18,2023 : ಈ ರಾಶಿಯ ಆಭರಣ ವಿನ್ಯಾಸಗಾರರಿಗೆ, ಇಂಟೀರಿಯರ್ ಡಿಸೈನರ್ಗಾರರಿಗೆ ಬಹು ಬೇಡಿಕೆ

ಈ ರಾಶಿಯ ಆಭರಣ ವಿನ್ಯಾಸಗಾರರಿಗೆ, ಇಂಟೀರಿಯರ್ ಡಿಸೈನರ್ಗಾರರಿಗೆ ಬಹು ಬೇಡಿಕೆ, ಈ ರಾಶಿಯ ಕನ್ನೇಗೆ ಬಹು ಬೇಡಿಕೆ, ಬುಧವಾರ- ರಾಶಿ ಭವಿಷ್ಯ ಜನವರಿ-18,2023 ಷಟ್ತಿಲಾ ಏಕಾದಶಿ ಸೂರ್ಯೋದಯ:...

ನಿತ್ಯ ಭವಿಷ್ಯ3 weeks ago

ಮಂಗಳವಾರ- ರಾಶಿ ಭವಿಷ್ಯ ಜನವರಿ-17,2023 : ಈ ರಾಶಿಯವರು ಮದುವೆಗೆ ಮಂಡತನ, ಈ ರಾಶಿಯವರು ಹೊಸ ಉದ್ಯೋಗ ಪ್ರಾರಂಭಿಸಲು ಸೂಕ್ತ

ಈ ರಾಶಿಯವರು ಮದುವೆಗೆ ಮಂಡತನ, ಈ ರಾಶಿಯವರು ಹೊಸ ಉದ್ಯೋಗ ಪ್ರಾರಂಭಿಸಲು ಸೂಕ್ತ, ಮಂಗಳವಾರ- ರಾಶಿ ಭವಿಷ್ಯ ಜನವರಿ-17,2023 ಸೂರ್ಯೋದಯ: 06.46AM, ಸೂರ್ಯಾಸ್ತ : 06.13 ಪಿಎಂ...

Trending