ದಿನದ ಸುದ್ದಿ
ಅಮೆರಿಕಾಕ್ಕೆ ‘ಹುವಾವೇ’ ಬಗ್ಗೆ ಯಾಕಿಷ್ಟು ಭಯ..?

ಚೀನಾವು ತನ್ನ ದೇಶಿಯ ಮಾರುಕಟ್ಟೆಯನ್ನು ರಕ್ಷಿಸಲು ಮತ್ತು ಹುವಾವೇ ಯಂತಹ ತನ್ನ ‘ಚಾಂಪಿಯನ್ ಕಂಪನಿ’ ಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಲು, ಯುಎಸ್ ನ ಮತ್ತು ಅದರ ಮಿತ್ರರ ಆಕ್ರಮಣಗಳನ್ನು ಪ್ರತಿರೋಧಿಸಲು, ಶಕ್ತವಾಗುವ ತಾಂತ್ರಿಕ ಸಾರ್ವಭೌಮತ್ವವನ್ನು ಅಭಿವೃದ್ಧಿ ಪಡಿಸಿಕೊಂಡಿದೆ.
ಯುಎಸ್ ನ ಯಾವುದೇ ತಾಂತ್ರಿಕ ಸಮರವನ್ನು ಎದುರಿಸಲು, ಸಾಮ್ರಾಜ್ಯಶಾಹಿ ಅಜೆಂಡಾ ಹಾಗೂ ಯುಎಸ್ ನ ತಂತ್ರಜ್ಞಾನ ಅಧಿಪತ್ಯವನ್ನು ಹಿಮ್ಮೆಟ್ಟಿಸಲು ಚೀನಾವು ಸಜ್ಜಾಗುತ್ತಿದೆ. ಇದೇ ಯು.ಎಸ್. ಸರಕಾರ ಹುವಾವೇ ಬಗ್ಗೆ ಇಷ್ಟು ಆತಂಕಕ್ಕೆ ಕಾರಣ. ಅಮೆರಿಕದ ಜಾಗತಿಕ ಅಧಿಪತ್ಯದೊಂದಿಗೆ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯ ಅಧಿಪತ್ಯವೂ ತಳುಕು ಹಾಕಿಕೊಂಡಿದೆ
ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾದ “ಹುವಾವೇ” ಎಂಬ ಟೆಲಿಕಾಂ ಕಂಪನಿಯು 5ಜಿ ನೆಟ್ವರ್ಕ್ ಕ್ಷೇತ್ರದಲ್ಲಿ ಪ್ರಮುಖ ಕಂಫನಿಯಾಗಿ ಹೊಮ್ಮಿದೆ. ಹುವಾವೇಯ 5ಜಿ ನೆಟ್ವರ್ಕ್ ಉಪಕರಣಗಳ ಜಾಗತಿಕ ಮಾರುಕಟ್ಟೆಗೆ ವಿಸ್ತರಣೆಯನ್ನು ನಿಬರ್ಂಧಿಸಲು ಅಮೆರಿಕಾವು ಅನೇಕ ಉಗ್ರ ಕ್ರಮಗಳನ್ನು ಇತ್ತೀಚೆಗೆ ಕೈಗೊಂಡಿದೆ. 5ಜಿ ನೆಟ್ವರ್ಕ್ ಉಪಕರಣಗಳ ತಯಾರಿಗೆ ಅಗತ್ಯವಾದ ಪ್ರಮುಖವಾದ ಬಿಡಿಭಾಗಗಳು ಮತ್ತು ಸಾಪ್ಟ್ವೇರ್ ಗಳನ್ನು ನಿರಾಕರಿಸುವ ಪ್ರಯತ್ನಗಳನ್ನು ಮಾಡುವ ಮೂಲಕ ಹುವಾವೇಯ ಮುಖ್ಯ ವ್ಯವಹಾರವನ್ನು ಪರಿಣಾಮಕಾರಿಯಾಗಿ ದುರ್ಬಲಗೊಳಿಸಲು ಅಮೆರಿಕಾ ಕಾರ್ಯ ಪ್ರವೃತ್ತವಾಗಿದೆ. ಹಿಂದೆನೂ ಹುವಾವೇ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿತ್ತು. ಅವು ಪ್ರಮುಖವಾಗಿ ವಿವಿಧ ದೇಶಗಳಲ್ಲಿ ಹುವಾವೇ ಪ್ರವೇಶವನ್ನು ನಿಬರ್ಂಧಿಸುವ ಗುರಿಯನ್ನು ಹೊಂದಿದ್ದವು. ಹುವಾವೇ ಕಂಪನಿಯ ವಿರುದ್ದ ಅಮೆರಿಕದ ಕ್ರಮಗಳಿಂದ ಚೀನಾದ ಮೇಲೆ ಅದು ತಾಂತ್ರಿಕ ಸಮರವನ್ನೇ ಸಾರಿದಂತಾಗಿದೆ.
ಹುವಾವೇ ವಿಶ್ವದಲ್ಲೇ ಅತಿ ದೊಡ್ಡ (ನಂಬರ್ 1) ಟೆಲಿಕಾಂ ಉಪಕರಣಗಳ ತಯಾರಕ ಮತ್ತು ಮೊಬೈಲ್ ಎರಡನೆಯ ಅತಿ ದೊಡ್ಡ ಮೊಬೈಲ್ ಪೋನ್ ಗಳ ತಯಾರಕ ಸಂಸ್ಥೆಯಾಗಿದೆ. ಇದು 5ಜಿ ತಂತ್ರಜ್ಞಾನದಲ್ಲಿ ಜಾಗತಿಕ ನಾಯಕ ಮತ್ತು ಟೆಕ್ ವಲಯದಲ್ಲಿ ಅಮೆರಿಕಾದ ಅಧಿಪತ್ಯಕ್ಕೆ ಗಮನಾರ್ಹ ಸವಾಲನ್ನು ಒಡ್ಡುವ ಸಂಸ್ಥೆಯಾಗಿ ಬೆಳೆದಿದೆ. ಆದ್ದರಿಂದಲೇ, ಇದನ್ನು ಅಮೆರಿಕಾಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಏಕೆಂದರೆ, 5 ಜಿ ನೆಟ್ವರ್ಕ್ ಜಗತ್ತಿನ ಜನಜೀವನದ ಪ್ರತಿಯೊಂದು ವಿಚಾರ ಮತ್ತು ಅಂಶಗಳ ಮೇಲೂ ತನ್ನ ಅಪಾರ ಪ್ರಭಾವ ಬೀರಲಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ತನ್ನ ಪಾರಮ್ಯವನ್ನು ಸ್ಫಾಪಿಸುವುದು ಅದರ ಸಾಮ್ರಾಜ್ಯಶಾಹಿ ಕಾರ್ಯಸೂಚಿಯ ಅಗತ್ಯದ ಭಾಗವಾಗಿದೆ. ಅದಕ್ಕೆ ಹುವಾವೇ ಸಂಸ್ಥೆಯು ಈ ಕ್ಷೇತ್ರದಲ್ಲಿ ಅಡ್ಡವಾಗಿ ನಿಲ್ಲುತ್ತದೆ. ಹೀಗಾಗಿ ಚೀನಾದ ಈ ಹುವಾವೇ ಟೆಕ್ ದೈತ್ಯ ಸಂಸ್ಥೆಯ ಅಭಿವೃದ್ಧಿಯನ್ನು ಅಮೆರಿಕಾ ಎಂದಿಗೂ ಸಹಿಸುವುದಿಲ್ಲ. ಇದನ್ನು ನೆಲ ಸಮ ಮಾಡಲೇ ಬೇಕೆಂದು ಎಲ್ಲಾ ತರದ ಒಳಸಂಚುಗಳ ಸಮರವನ್ನು ನಡೆಸಲು ಆರಂಭಿಸಿದೆ.
ಪ್ರಮುಖ ವಾಗಿ ಹುವಾವೇ ವಿರುದ್ದ ಎರಡು ರೀತಿಯಲ್ಲಿ ತನ್ನ ಆಕ್ರಮಣವನ್ನು ನಡೆಸಲು ಸಜ್ಜಾಗಿದೆ. ಇತ್ತೀಚೆಗೆ, ಅಮೆರಿಕಾದ ವಾಣಿಜ್ಯ ಇಲಾಖೆಯು ಎರಡು ಬಗೆಯ ಉಗ್ರವಾದ ನಿಬರ್ಂಧ ಕ್ರಮಗಳನ್ನು ಹುವಾವೇ ವಿರುದ್ದ ಘೋಷಿಸಿದೆ.
ಅದರಲ್ಲಿ, ಮೊದಲನೆಯದು, ಹುವಾವೇ ತಯಾರು ಮಾಡುವ ಮೊಬೈಲ್ ಗಳು ಮತ್ತು 5ಜಿ ನೆಟ್ ವರ್ಕ್ ಉಪಕರಣಗಳಿಗೆ, ಯುಎಸ್ ನ ಟೆಕ್ ಸಂಸ್ಥೆ ಗಳು ಸರಬರಾಜು ಮಾಡುವ ಎಲ್ಲಾ ಬಗೆಯ ಬಿಡಿ ಭಾಗಗಳನ್ನು (ಮೂಲ ‘ಚಿಪ್ ಸೆಟ್’ ಗಳು ಮತ್ತಿತರ ಹಾರ್ಡ್ವೇರ್, ಸಾಫ್ಟ್ ವೇರ್) ತಡೆಗಟ್ಟುವುದು. ಎರಡನೆಯದು, ಕೆಲವು ದಿನಗಳ ಹಿಂದೆಯಷ್ಟೇ, ಆಂಡ್ರಾಯ್ಡ್ ಸಾಫ್ಟ್ವೇರ್ ಮತ್ತು ಇದಕ್ಕೆ ಸಂಬಂಧಿಸಿದ ಮತ್ತಿತರ ಗೂಗಲ್ ಸೇವೆಗಳನ್ನು ಹುವಾವೇ ಮೊಬೈಲುಗಳಲ್ಲಿ ಬಳಸಲು ನಿಬರ್ಂಧಗಳನ್ನು ಹೇರುವ ಘೋಷಣೆಯನ್ನು ಗೂಗಲ್ ಮೂಲಕ ಮಾಡಿರುವುದು. ಇದರಿಂದಾಗಿ, ಆಂಡ್ರಾಯ್ಡ್ ಮತ್ತು ಇತರ ಗೂಗಲ್ ಸೇವೆಗಳಿಗೆ ಪರ್ಯಾಯ ಪರಿಸರ ವ್ಯವಸ್ಥೆಯನ್ನು ಹುವಾವೇ ಮಾಡಿಕೊಳ್ಳಬೇಕಾಗಿದೆ. ಈ ಎರಡೂ ಕ್ರಮಗಳು ಹುವಾವೇ ಮೊಬೈಲ್ ಗಳು ಮತ್ತು 5ಜಿ ನೆಟ್ ವರ್ಕ್ ಉಪಕರಣಗಳ ಉತ್ಪಾದನೆ, ಪೂರೈಕೆ ಮತ್ತು ಮಾರುಕಟ್ಟೆ ವಿಸ್ತರಣೆಗೆ ತೀವ್ರ ಸವಾಲೊಡ್ಡಲಿವೆ.
ಕಳೆದ ಡಿಸೆಂಬರ್ ನಲ್ಲಿ ಹುವಾವೇ ಸಿ.ಎಫ್.ಒ. ಮೆಂಗ್ ವನ್ಝೌ ರನ್ನು ಯುಎಸ್ ಅಧಿಕಾರಿಗಳ ಆಜ್ಞೆಯ ಮೇರೆಗೆ ಕೆನಡಾದಲ್ಲಿ ಬಂಧಿಸಲಾಗಿತ್ತು. ಇರಾನ್ ಮೇಲೆ ಇತ್ತೀಚೆಗೆ ಯು.ಎಸ್. ತೆಗೆದು ಕೊಂಡ ನಿಬರ್ಂಧಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಚೀನಾದ ಮೇಲೆ ಒತ್ತಡ ಹೇರಲು ಅಮೆರಿಕಾ ಕೈಗೊಂಡಿರುವ ಕ್ರಮ ಇದಾಗಿರಬಹುದೆಂದು ಅನೇಕ ವಿಶ್ಲೇಷಕರ ಅಭಿಪ್ರಾಯವಾಗಿತ್ತು.
ಆದಾಗ್ಯೂ, ಹುವಾವೇ ಮತ್ತು ಚೀನಾದ ಇನ್ನಿತರೆ ಟೆಲಿಕಾಂ ಕಂಪನಿಗಳ ವಿರುದ್ದ ಯುಎಸ್ ನ ನಿಬರ್ಂಧಗಳು, ಡೊನಾಲ್ಡ್ ಟ್ರಂಪ್ ನ ಇರಾನ್ ಮೇಲಿನ ನ್ಯೂಕ್ಲಿಯರ್ ಒಪ್ಪಂದ ದಿಂದ ಹೊರ ಬರುವ ನಿರ್ಧಾರದ ಬಹಳ ಮೊದಲೇ ಆರಂಭವಾಗಿವೆ. ಅನೇಕ ವರ್ಷಗಳಿಂದ, ಟೆಲಿಕಾಂ ಕ್ಷೇತ್ರದಲ್ಲಿ, ವಿಶೇಷವಾಗಿ 5ಜಿ ನೆಟ್ವರ್ಕ್ ತಂತ್ರಜ್ಞಾನದಲ್ಲಿ, ಹುವಾವೇ ಯುಎಸ್ ಕಂಪನಿಗಳಿಗಿಂತ ಮುಂದೆ ಇದ್ದವು. ಈ ಹಿಂದೆ, ಅಮೆರಿಕದ ಒತ್ತಡಕ್ಕೆ ಮಣಿದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಹುವಾವೇ ಯನ್ನು 5ಜಿ ನೆಟ್ವರ್ಕ್ ಉಪಕರಣಗಳ ಪ್ರವೇಶವನ್ನು ನಿಬರ್ಂಧಿಸಲಾಗಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕು. ಆದಾಗ್ಯೂ, ಇದೀಗ ಚೀನಾದ ಈ ದೈತ್ಯ ಹುವಾವೇ ಯ ತಂತ್ರಜ್ಞಾನ ಜಗತ್ತಿನಲ್ಲಿ ಹರಡುತ್ತಿರುವುದು ಅಮೆರಿಕಾದ ಆಂತಕಕ್ಕೆ ಮೂಲ ಕಾರಣವಾಗಿದೆ.
ಹುವಾವೇ ತಂತ್ರಜ್ಞಾನವು “ಭದ್ರತಾ ದೃಷ್ಟಿಯಿಂದ ಅಪಾಯಕಾರಿ” ಎಂದು ಯುಎಸ್ ವಾದಿಸುತ್ತದೆ.. ಆದರೆ ಸಿಸ್ಕೊ ನಂತಹ ಯು.ಎಸ್. ಕಂಪನಿಗಳು ತಯಾರಿಸಿದ ನೆಟ್ವರ್ಕ್ ಉಪಕರಣಗಳ ಹಿಂಬಾಗಿಲಿನಿಂದ, ನಿರಂತರವಾಗಿ ಅಮೆರಿಕ ಗುಪ್ತ ಮಾಹಿತಿಗಳನ್ನು ಪಡೆಯುತ್ತಿತ್ತು ಎಂದು ಎಡ್ವರ್ಡ್ ಸ್ನೋಡೆನ್ನ್ ಬಯಲು ಮಾಡಿದ್ದು ಇಲ್ಲಿ ನೆನಪಿಸಿಕೊಂಡರೆ, ಅಮೆರಿಕ ಈ ಬಗ್ಗೆ ದೂರುವುದು ಜೋಕ್ ಎನ್ನಬಹುದು.
ಹುವಾವೇ ಪ್ರಾಬಲ್ಯವನ್ನು ತಡೆಹಿಡಿಯುವ ಯುಎಸ್ ಯೋಜಿಸಿರುವ ನಿಬರ್ಂಧಗಳಿಂದ, ಅದರ ಚಿಪ್ ತಯಾರಿಕಾ ಮತ್ತು ಇತರ ಕಂಪನಿಗಳಿಗೆ ವಾರ್ಷಿಕವಾಗಿ ರಫ್ತು ಆದಾಯದಲ್ಲಿ 11 ಬಿಲಿಯನ್ ಡಾಲರ್ ನಷ್ಟು ನಷ್ಟ ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ.
ಇದು ಪ್ರಪಂಚದಾದ್ಯಂತ 5 ಜಿ ನೆಟ್ ವರ್ಕ್ ನ ತಂತ್ರಜ್ಞಾ£ದ ಒಟ್ಟಾರೆ ಅಭಿವೃದ್ಧಿಯ ಮೇಲೆ ಅಗಾಧವಾದ ದುಷ್ಪರಿಣಾಮ ಬೀರುತ್ತದೆ. ಆದಾಗ್ಯೂ, ತನ್ನ ಮಿತ್ರ ರಾಷ್ಟಗಳ ಮಾರುಕಟ್ಟೆಗಳಲ್ಲಿ, ಪ್ರಮುಖವಾಗಿ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳಲ್ಲಿ, ಹುವಾವೇಯ ಉತ್ಕøಷ್ಟ 5ಜಿ ತಂತ್ರಜ್ಞಾನದ ಬೇರೂರುವ ಸಾದ್ಯತೆಯ ಬಗ್ಗೆ ಯುಎಸ್ ಹೆಚ್ಚು ಚಿಂತಿತ ಗೊಂಡಿದೆ. ಪಶ್ಚಿಮ ರಾಷ್ಟ್ರಗಳು ತಮ್ಮತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು, ಬಡ ರಾಷ್ಟಗಳಿಗೆ ಮಾತ್ರ ಬೋಧಿಸುವ ತಮ್ಮ ಮುಕ್ತ ವ್ಯಾಪಾರ ನಿಯಮಗಳನ್ನು ಉಲ್ಲಂಘನೆ ಮಾಡಲು ಹಿಂಜರಿಯುವುದಿಲ್ಲ ಎಂಬುದನ್ನು ಮತ್ತೆ ಇಲ್ಲಿ ಯುಎಸ್ ಸಾಬೀತು ಪಡಿಸುತ್ತಿದೆ.
ಆದರೆ, ಇತ್ತೀಚಿನ ಗೂಗಲ್ ಕ್ರಮಗಳಿಗೂ “ರಾಷ್ಟ್ರೀಯ ಭದ್ರತಾ” ಅಂಶಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ಆದರೆ, ಹುವಾವೇ ಸಂಸ್ಥೆಯಲ್ಲಿ ತಯಾರಿಸಿದ ಮೊಬೈಲ್ ಪೋನ್ಗಳನ್ನು ಇನ್ನಿತರೆ ದೇಶಗಳಲ್ಲಿ ದುರ್ಬಲಗೊಳಿಸುವ ಸಲುವಾಗಿಯೇ, ಗೂಗಲ್ ಕ್ರಮಗಳ ಮೂಲಕ ಯುಎಸ್ ಪ್ರಯತ್ನ ಮಾಡುತ್ತಿದೆ.
ಗೂಗಲ್ ಕ್ರಮಗಳು ಎಂದರೆ, ಹುವಾವೇ ಪೋನ್ ಗಳನ್ನು ಖರೀದಿಸುವ ವರು ಮತ್ತು ಪ್ರಸ್ತುತ ಮಾಲೀಕರು ಸಹಾ, ಗೂಗಲ್ ನ ಉತ್ಪನ್ನಗಳು ಮತ್ತು ಭದ್ರತಾ ನವೀಕರಣಗಳಿಗೆ ಪ್ರವೇಶವನ್ನು ನಿರಾಕರಿಸಲು ಅಮೆರಿಕಾ ಒತ್ತಾಯ ಹೇರುತ್ತಿದೆ. ಇದರಿಂದಾಗಿ ಆಂಡ್ರಾಯ್ಡ್ ಓಎಸ್, ಜಿ-ಮೇಲ್ ಮತ್ತು ಗೂಗಲ್ ಸ್ಟೋರ್ ನಂತಹ ಉತ್ಪನ್ನ ಗಳ ಮೂಲಕ, ಪ್ರಪಂಚದಾದ್ಯಂತ ಇರುವ ಗೂಗಲ್ ನ ಲಕ್ಷಾಂತರ ಬಳಕೆದಾರ ಹೊಂದಿರುವ ವ್ಯಾಪ್ತಿ ಮತ್ತು ಈ ಹಂತದ ಬೆಳವಣಿಗೆಯಲ್ಲಿ ಹುವಾವೇ ಮೊಬೈಲ್ ಪೋನ್ ವ್ಯವಹಾರಕ್ಕೆ ಭಾರಿ ಹಿನ್ನಡೆಯಾಗುವಂತೆ ಮಾಡುವುದು ಅದರ ಉದ್ದೇಶ.
ಹುವಾವೇ ಸವಾಲುಗಳನ್ನು ಎದುರಿಸಲು ಸಿದ್ದವಾಗಿದೆ. ಕಂಪನಿಯ ಸಂಸ್ಥಾಪಕ ರೆನ್ ಝೆಂಗ್ಛೀ ಯವರು ನಿಬರ್ಂಧಗಳು ಕಂಪನಿಯ ಮುಖ್ಯ ವ್ಯವಹಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ವಿಶ್ವಾಸ ಹೊಂದಿದ್ದಾರೆ. ನಮ್ಮ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಮುಂದುವರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಿಪ್ ಸೆಟ್ ಗಳನ್ಜು ಈಗಾಗಲೇ ಸಾಕಷ್ಟು ಸಂಗ್ರಹಿಸಲಾಗಿದೆ. ಹಾಗೆಯೇ, ಗೂಗಲ್ ಪರಿಸರ ವ್ಯವಸ್ಥೆಗೆ ಪರ್ಯಾಯ ಉತ್ಪನ್ನ ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಹೊಸ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಆದಾಗ್ಯೂ, ಈಗಿರುವ ಬಳಕೆದಾರರ ಮೂಲವನ್ನು ಉಳಿಸಿಕೊಳ್ಳಲು ಹುವಾವೇ ಕಾರ್ಯತಂತ್ರಗಳನ್ನು ನಿಯೋಜಿಸಲು ಪ್ರಯತ್ನಗಳನ್ನು ಕೈಗೊಂಡಿದೆ. ಇದು ಹುವಾವೇ
ವಾಣಿಜ್ಯದ ಮೇಲೆ ಯು.ಎಸ್ ಮತ್ತು ಚೀನಾ ಒಪ್ಪಂದದ ಭಾಗವಾಗಿ, ಹುವಾವೇ ವಿರುದ್ದದ ನಿಬರ್ಂಧ ಕ್ರಮಗಳನ್ನು ಅಮೆರಿಕಾ ಹಿಂಪಡೆಯಬಹುದು ಅಥವಾ ಮುಂದೂಡಬಹುದು ಎಂಬ ಸಾಧ್ಯತೆಗಳು ಇವೆಯಾದಾರೂ ಖಂಡಿತವಾಗಿಯೂ ಇವೆರಡೂ ರಾಷ್ಟಗಳ ನಡುವಿನ ವಾಣಿಜ್ಯ ಸಮರವಂತೂ ನಿಲ್ಲುವುದಿಲ್ಲ ಎನ್ನಲಾಗಿದೆ.
ಪ್ರಸ್ತುತ ಮುಖಾಮುಖಿ ಯಲ್ಲಿ ಇಬ್ಬರು ಹಲವಾರು ಪಾಠಗಳನ್ನು ಕಲಿಯ ಬೇಕಾಗಿದೆಯಾದರೂ,. ಮೊದಲಿಗೆ, ಅಮೆರಿಕಾದ ಆರ್ಥಿಕತೆಯ ಮೇಲೆ ಹಾನಿ ಉಂಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ, ಚೀನಾವು ಹುವಾವೇ ಟೆಲಿಕಾಂ ತಂತ್ರಜ್ಞಾನದಲ್ಲಿ ಅಮೆರಿಕಾಕ್ಕೆ ಬೆದರಿಕೆಯನ್ನು ಒಡ್ಡಿದೆ ಎಂಬುದು ಸ್ಪಷ್ಟಗೊಂಡಿದೆ. 5ಜಿ ತಂತ್ರಜ್ಞಾನದ ಜೊತೆಗೆ ಆರ್ಟಿಫಿಶಿಲ್ ಇಂಟಲಿಜೆನ್ಸ್ ನಂತಹ ಕ್ಷೇತ್ರಗಳಲ್ಲೂ ಚೀನಾವು ಅಮೆರಿಕಾಕ್ಕಿಂತ ಹೆಚ್ಚಿನ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ. ಇದು ಅಮೆರಿಕಾದ ಆತಂಕವನ್ನು ಹೆಚ್ಚಿಸಿದೆ. ಚೀನಾ ಈ ತಂರ್ರಜ್ಞಾನದ ಮುನ್ನಡೆ ಹಾಗೂ ಬೆಲ್ಟ್ ಮತ್ತು ರೋಡ್ ಪೋರಂ ಬಳಸಿ ವ್ಯಾಪಾರ ಪಾಲುದಾರಿಕೆಯನ್ನು ಹೆಚ್ಚಿಸುತ್ತಿರುವುದು ಅಮೆರಿಕಾಕ್ಕೆ ಮತ್ತೊಂದು ಆತಂಕ..
ಚೀನಾವು ತನ್ನ ದೇಶಿಯ ಮಾರುಕಟ್ಟೆಯನ್ನು ರಕ್ಷಿಸಲು ಮತ್ತು ಹುವಾವೇ ಯಂತಹ ತನ್ನ ‘ಚಾಂಪಿಯನ್ ಕಂಪನಿ’ ಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಲು, ಯುಎಸ್ ನ ಮತ್ತು ಅದರ ಮಿತ್ರರ ಆಕ್ರಮಣಗಳನ್ನು ಪ್ರತಿರೋಧಿಸಲು, ಶಕ್ತವಾಗುವ ತಾಂತ್ರಿಕ ಸಾರ್ವಭೌಮತ್ವವನ್ನು ಅಭಿವೃದ್ಧಿ ಪಡಿಸಿಕೊಂಡಿದೆ. ಯುಎಸ್ ನ ಯಾವುದೇ ತಾಂತ್ರಿಕ ಸಮರವನ್ನು ಎದುರಿಸಲು, ಸಾಮ್ರಾಜ್ಯಶಾಹಿ ಅಜೆಂಡಾ ಹಾಗೂ ಯುಎಸ್ ನ ತಂತ್ರಜ್ಞಾನ ಅಧಿಪತ್ಯವನ್ನು ಹಿಮ್ಮೆಟ್ಟಿಸಲು ಚೀನಾವು ಸಜ್ಜಾಗುತ್ತಿದೆ.
ಇದೇ ಯು.ಎಸ್. ಸರಕಾರ ಹುವಾವೇ ಬಗ್ಗೆ ಇಷ್ಟು ಆತಂಕಕ್ಕೆ ಕಾರಣ. ಅಮೆರಿಕದ ಜಾಗತಿಕ ಅಧಿಪತ್ಯದೊಂದಿಗೆ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯ ಅಧಿಪತ್ಯವೂ ತಳುಕು ಹಾಕಿಕೊಂಡಿದೆ. ಗೂಗಲ್, ಆಪಲ್, ಫೇಸ್ ಬುಕ್ ನಂತಹ ಕಂಪನಿಗಳ ಮೂಲಕ ಇಂಟರ್ನೆಟ್ ಮತ್ತು ಆ ಮೂಲಕ ಇಡೀ ಜಗತ್ತಿನ ಮಾಹಿತಿ ಮತ್ತು ಆರ್ಥಿಕದ ಜಾಲವನ್ನು ನಿಯಂತ್ರಣದಲ್ಲಿಟ್ಟಿರುವ ಅದರ ಯೋಜನೆಗೂ ಚೀನಾದಿಂದ ಸವಾಲು ಬರಬಹುದು ಎಂಬ ಆತಂಕದಿಂದಾಗಿಯೇ ಗೂಗಲ್ ಸಹ ಯು.ಎಸ್. ಸರಕಾರದ ಈ ನಿರ್ಧಾರದೊಂದಿಗೆ ಇಷ್ಟು ಆಸಕ್ತಿಯಿಂದ ತೊಡಗಿಸಿಕೊಂಡಿದೆ.
ಚೀನಾದ ತಂತ್ರಜ್ಞಾನದ ಸಾರ್ವಭೌಮತೆಯ ಸ್ವಾವಲಂಬನೆಯ ಪರಿಕಲ್ಪನೆ ಭಾರತಕ್ಕೂ ಮಾದರಿಯಾಗಬೇಕು.
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
– ನಾಗರಾಜ ನಂಜುಂಡಯ್ಯ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

-
ನಿತ್ಯ ಭವಿಷ್ಯ7 days ago
ಸೋಮವಾರ- ರಾಶಿ ಭವಿಷ್ಯ ಜನವರಿ-23,2023 : ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ
-
ದಿನದ ಸುದ್ದಿ5 days ago
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ
-
ದಿನದ ಸುದ್ದಿ20 hours ago
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-
ದಿನದ ಸುದ್ದಿ19 hours ago
ನಟ ಮನದೀಪ್ ರಾಯ್ ನಿಧನ