ರಾಜಕೀಯ
ಮೋದಿ ಅಮೆರಿಕದ ಮುಂದೆ ತೆಪ್ಪಗೆ ತಲೆಬಾಗುತ್ತಿದ್ದಾರೆ

- ಮಹಾನ್ ರಾಷ್ಟ್ರೀಯವಾದಿ ಎಂದು ಬಿಂಬಿಸಲಾಗಿರುವ ನರೇಂದ್ರ ಮೋದಿ, ಒಂದಾದ ಮೇಲೆ ಒಂದರಂತೆ ಅಮೆರಿಕದ ಆದೇಶಗಳ ಎದುರು ಮಂಡಿಯೂರುತ್ತಿದ್ದಾರೆ.ಮೋದಿ ಸರಕಾರ ತನ್ನನ್ನು ಒಂದು ಅಡಿಯಾಳು ಮಿತ್ರನಾಗಿ ಕಟ್ಟಿಸಿಕೊಂಡಿರುವುದರಿಂದಾಗಿಯೇ ಅಮೆರಿಕವನ್ನು ಪ್ರತಿರೋಧಿಸಿ ನಿಲ್ಲಲು ಅಸಮರ್ಥವಾಗಿರುವುದು. ಟ್ರಂಪ್ ಆಡಳಿತದ ಭಂಡ ಆಗ್ರಹಗಳಿಗೆ ಮೋದಿ ಸರಕಾರದ ಹಲ್ಲುಗಿಂಜುವ ಇದುವರೆಗಿನ ಧೋರಣೆಯನ್ನು ಗಮನಿಸಿದರೆ ಅದು ಅಮೆರಿಕದ ಕಿರಿಯ ಮಿತ್ರನ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ ಎಂಬುದು ಗೋಚರಿಸುತ್ತದೆ.ಭಾರತದ ರಾಷ್ಟ್ರೀಯ ಹಿತಗಳನ್ನು ಸಾಮ್ರಾಜ್ಯಶಾಹಿ ಸೂಪರ್ ಪವರ್ನ ಹಿತಾಸಕ್ತಿಗಳಿಗೆ ಒತ್ತೆಯಿಡಲಾಗುವುದು.
ಮೋದಿ ಸರಕಾರದ ಎರಡನೇ ಅವಧಿಯು ಅಮೆರಿಕದ ಕಿರಿಯ ಪಾಲುದಾರನಾಗಿ ಭಾರತದ ಪಾತ್ರವನ್ನು ಇನ್ನಷ್ಟು
ಗಟ್ಟಿಗೊಳಿಸುವಂತದ್ದಾಗುತ್ತದೆ ಎನ್ನುವುದಕ್ಕೆ ಆಗಲೇ ಎಲ್ಲ ಸುಳಿವುಗಳು ಸಿಕ್ಕಿವೆ. ಪರಿಣಾಮವಾಗಿ ಇದು ನವ-ಉದಾರವಾದಿ ಅಜೆಂಡಾದ ಅನುಷ್ಠಾನವನ್ನು ಇನ್ನಷ್ಟು ತ್ವರಿತಗೊಳಿಸುತ್ತದೆ, ಮತ್ತು ಅದರಿಂದಾಗಿ ಜನತೆಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
2014-2019ರ ಅವಧಿಯಲ್ಲಿ ಮೋದಿ ಸರಕಾರವು ಭಾರತವನ್ನು ಅಮೆರಿಕದೊಂದಿಗೆ ವ್ಯೂಹಾತ್ಮಕವಾಗಿಯೂ ಮತ್ತು ಮಿಲಿಟರಿ ಕ್ಷೇತ್ರದಲ್ಲಿ ಮತ್ತಷ್ಟು ಜೋಡಿಸಿಕೊಳ್ಳಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು. ಮಿಲಿಟರಿ ಸಾಗಾಣಿಕೆ ಬೆಂಬಲ ಮತ್ತು ಸೇನಾ ಸಂಪರ್ಕ ಸಾಧನಗಳನ್ನು ಸಮಗ್ರೀಕರಿಸುವ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಜಪಾನ್, ಆಸ್ಟ್ರೇಲಿಯಾ, ಭಾರತ ಮತ್ತು ಅಮೆರಿಕ ಒಳಗೊಂಡ ಚತುಷ್ಪಕ್ಷೀಯ ಮೈತ್ರಿಕೂಟ ಮಾಡಿಕೊಳ್ಳುವ ಬಗ್ಗೆ ಅಮೆರಿಕ ಮಾಡಿದ್ದ ಪ್ರಸ್ತಾವನೆಗೆ ಭಾರತವೂ ಕೈಜೋಡಿಸಿತ್ತು.
ಈ ವ್ಯೂಹಾತ್ಮಕ ಅಪ್ಪುಗೆಯು ಏಷ್ಯಾ-ಶಾಂತಸಾಗರ ವಲಯದಲ್ಲಿ ಅಮೆರಿಕದ ಭೌಗೋಳಿಕ-ರಾಜಕೀಯ ಹಿತಗಳಿಗೆ ಸಂಪೂರ್ಣವಾಗಿ ಅನುಕೂಲಕರವಾದ ಒಂದು ವಿದೇಶಾಂಗ ನೀತಿಯನ್ನು ಭಾರತವು ಅನುಸರಿಸುವಂತೆ ಮಾಡಿತು.
ಈ ಹಿಂದೆ ರಷ್ಯಾ ಭಾರತಕ್ಕೆ ಶಸ್ತ್ರಾಸ್ತ್ರಗಳ ಮತ್ತು ಸಾಧನಗಳ ಪ್ರಮುಖ ಪೂರೈಕೆದಾರನಾಗಿತ್ತು. ಈಗ ಅಮೆರಿಕದ ಒತ್ತಡಕ್ಕೆ ಮಣಿದು ರಷ್ಯಾವನ್ನು ಬಿಟ್ಟು ಅಮೆರಿಕದಿಂದ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ಖರೀದಿಸುವ ಪ್ರಕ್ರಿಯೆಗೆ ಭಾರತ ವೇಗವನ್ನು ನೀಡಿತು. ಆಂತರಿಕ ನೀತಿಗಳ ಬಗ್ಗೆ ಹೇಳುವುದಾದರೆ, ಮೋದಿ ಸರಕಾರವು ಅಮೆರಿಕದ ಬಹುರಾಷ್ಟ್ರೀಯ ಕಾರ್ಪೊರೇಟ್ಗಳು ಮತ್ತು ಹಣಕಾಸು ಹಿತಗಳಿಗೆ ನೆರವಾಗುವ ಅನೇಕ ಕ್ರಮಗಳನ್ನು ಕೈಗೊಂಡಿತು.
ಡೊನಾಲ್ಡ್ ಟ್ರಂಪ್ 2018ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಟ್ರಂಪ್ರ ಅಮೆರಿಕ ಮೊದಲು ಹಾಗೂ ಸ್ವರಕ್ಷಣಾತ್ಮಕ ನೀತಿಗಳಿಗೆ ಅನುಗುಣವಾಗಿ ಭಾರತದ ಮೇಲೆ ಅನೇಕ ಒತ್ತಡಗಳನ್ನು ಹೇರಲಾಯಿತು.
250 ಬಿಲಿಯ ಡಾಲರ್ ಮೌಲ್ಯದ ವಸ್ತುಗಳ ಮೇಲೆ ಸುಂಕವನ್ನು ಹೆಚ್ಚಿಸುವ ಮೂಲಕ ಹಾಗೂ ಇನ್ನೂ 325 ಬಿಲಿಯ ಡಾಲರ್ ವಸ್ತುಗಳಿಗೆ ಹಾಗೇ ಮಾಡುವುದಾಗಿ ಬೆದರಿಸುವ ಮೂಲಕ ಚೀನಾದ ವಿರುದ್ಧ ಟ್ರಂಪ್ ವಾಣಿಜ್ಯ ಸಮರವನ್ನು ಸಾರಿದರು. ಚೀನಾದ ಮಾರುಕಟ್ಟೆಯಲ್ಲಿ ಹೆಚ್ಚು ಅವಕಾಶಗಳನ್ನು ನೀಡಬೇಕು ಹಾಗೂ ಅಮೆರಿಕದ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ರಕ್ಷಣೆಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.
ಟ್ರಂಪ್ ಭಾರತವನ್ನು ಕೂಡ ಬಿಡಲಿಲ್ಲ. ಭಾರತದೊಂದಿಗಿನ ವಾಣಿಜ್ಯ ಕೊರತೆಯನ್ನು ತಿರುಗು-ಮುರುಗು ಮಾಡಬೇಕು ಹಾಗೂ ಭಾರತವು ಸುಂಕಗಳನ್ನು ಇಳಿಸಬೇಕು ಮತ್ತು ಅಮೆರಿಕದ ವಸ್ತುಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಈ ವಿಷಯದಲ್ಲಿ ಮೊದಲ ಹೆಜ್ಜೆಯಾಗಿ ಅವರು ಅಮೆರಿಕ ಆಮದು ಮಾಡಿಕೊಳ್ಳುತ್ತಿದ್ದ ಭಾರತದ ಅಲ್ಯುಮಿನಿಯಮ್ ಮತ್ತು ಉಕ್ಕಿನ ಮೇಲಿನ ಸುಂಕಗಳನ್ನು ಹೆಚ್ಚಿಸಿದರು. ಅದರ ಬೆನ್ನಲ್ಲೇ ಸುಂಕಗಳಿಲ್ಲದೆ ಭಾರತವು ಅನೇಕ ವಸ್ತುಗಳನ್ನು ರಫ್ತು ಮಾಡಲು ಅವಕಾಶ ನೀಡುವ ಪ್ರಾಶಸ್ತ್ಯದ ವ್ಯಾಪಾರ ಎಂದು ಪರಿಗಣಿಸುವುದನ್ನು ಕೊನೆಗೊಳಿಸಲು ಅವರು ನಿರ್ಧರಿಸಿದರು. ಈ ವ್ಯವಸ್ಥೆಯನ್ನು ತೆಗೆದು ಹಾಕಿದ್ದರಿಂದ ಭಾರತದಿಂದ ರಫ್ತಾಗುವ 1900 ವಸ್ತುಗಳಿಗೆ ಈಗ ಕಸ್ಟಮ್ಸ್ ಸುಂಕ ತೆರಬೇಕಾಗಿದೆ.
ಮಾರ್ಚ್ ಆರಂಭದಲ್ಲಿ ಅಮೆರಿಕ ಈ ಪ್ರಕಟಣೆಯನ್ನು ಮಾಡಿತು ಹಾಗೂ 60 ದಿನಗಳ ನಂತರ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿತು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಆದಾಗ್ಯೂ ಈ ಪ್ರತಿಕೂಲ ಕ್ರಮವನ್ನು ನಿಲ್ಲಿಸಲು ಮೋದಿ ಸರಕಾರ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಅಥವಾ ಪ್ರತಿ-ಕ್ರಮಗಳಿಗೂ ಮುಂದಾಗಲಿಲ್ಲ. ಸುಂಕ ಹೇರಿದ್ದನ್ನು ಚೀನಾ ಯಾವ ರೀತಿಯಲ್ಲಿ ನಿರ್ವಹಿಸಿತು ಎನ್ನುವುದಕ್ಕೆ ಪೂರ್ತಿ ವ್ಯತಿರಿಕ್ತವಾದ ನಡೆ ಭಾರತದ್ದಾಗಿದೆ. ಚೀನಾವನ್ನು ಪ್ರವೇಶಿಸುವ ಅಮೆರಿಕದ ವಸ್ತುಗಳ ಮೇಲೆ ಸುಂಕವನ್ನು ಹೇರುವ ಮೂಲಕ ಚೀನಾ ತಿರುಗೇಟು ನೀಡಿತು.
ಮೋದಿ ಸರಕಾರ ತನ್ನನ್ನು ಒಂದು ಅಡಿಯಾಳು ವ್ಯೂಹಾತ್ಮಕ ಮಿತ್ರನಾಗಿ ಕಟ್ಟಿಸಿಕೊಂಡಿರುವುದರಿಂದಾಗಿಯೇ ಅಮೆರಿಕವನ್ನು ಪ್ರತಿರೋಧಿಸಿ ನಿಲ್ಲಲು ಅಸಮರ್ಥವಾಗಿರುವುದು.
ಮಹಾನ್ ರಾಷ್ಟ್ರೀಯವಾದಿ ಎಂದು ಬಿಂಬಿಸಲಾಗಿರುವ ನರೇಂದ್ರ ಮೋದಿ, ಒಂದಾದ ಮೇಲೆ ಒಂದರಂತೆ ಅಮೆರಿಕದ ಆದೇಶಗಳಿಗೆ ಮಂಡಿಯೂರುತ್ತಿದ್ದಾರೆ. ಇರಾನ್ನಿಂದ ತೈಲ ಆಮದು ಮಾಡಿಕೊಳ್ಳದಂತೆ ಭಾರತಕ್ಕೆ ಅಮೆರಿಕ ಆದೇಶಿಸಿತು. ಅದನ್ನು ಶಿರಸಾವಹಿಸಿ ಪಾಲಿಸಲಾಯಿತು. ಇದರಿಂದಾಗಿ ಭಾರತಕ್ಕೆ ತುಂಬಾ ನಷ್ಟವಾಗಲಿದೆ. ಯಾಕೆಂದರೆ ಅಂತಾರ್ರಾಷ್ಟ್ರೀಯ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಇರಾನ್ನಿಂದ ಎಣ್ಣೆಯನ್ನು ತರಿಸಿಕೊಳ್ಳಲಾಗುತ್ತಿತ್ತು. ಅದಾದ ನಂತರ, ವೆನಿಜುವೆಲಾ ವಿರುದ್ಧದ ಆರ್ಥಿಕ ಸಮರದ ಭಾಗವಾಗಿ ಅಮೆರಿಕವು ವೆನಿಜುವೆಲಾದಿಂದ ತೈಲ ಆಮದು ನಿಲ್ಲಿಸುವಂತೆ ಭಾರತಕ್ಕೆ ಒತ್ತಾಯಿಸಿತು. ಮೋದಿ ಸರಕಾರ ಇದನ್ನು ಕೂಡ ತಡ ಮಾಡದೆ ಪಾಲಿಸಿತು.
ರಷ್ಯಾದ ಟ್ರೈಯಂಫ್ ಎಸ್-400 ಕ್ಷಿಪಣಿಗಳನ್ನು ಖರೀದಿಸಿದ್ದಕ್ಕೆ ದಿಗ್ಬಂಧನಗಳನ್ನು ಹೇರದಂತೆ ಅಮೆರಿಕಕ್ಕೆ ಭಾರತ ಅಂಗಲಾಚುತ್ತಿದೆ. ಆದರೆ ಭಾರತದ ವಿರುದ್ಧ ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಬೆದರಿಕೆ ಹಾಕುತ್ತಲೇ ಇದೆ. ಪರಿಹಾರವಾಗಿ ಅಮೆರಿಕದಿಂದ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವಂತೆ ಒತ್ತಡ ಹೇರುವುದು ಇದರ ಉದ್ದೇಶವಾಗಿದೆ.
ಲಾಕ್ಹೀಡ್ ನಿರ್ಮಿತ ಎಫ್-21 ಯುದ್ಧ ವಿಮಾನಗಳನ್ನು ಖರೀದಿಸುವಂತೆ ಭಾರತದ ಮೇಲೆ ಅಪಾರ ಒತ್ತಡ ಹೇರಲಾಗುತ್ತಿದೆ. 110 ಯುದ್ಧ ವಿಮಾನಗಳ ಖರೀದಿಗೆ (ರಫೇಲ್ ಯುದ್ಧ ವಿಮಾನ ಖರೀದಿಯನ್ನು 36ಕ್ಕೆ ಇಳಿಸಿದ ನಂತರ) ಭಾರತದ ಒಂದು ಟೆಂಡರ್ ಪ್ರಕಟಿಸಿದೆ. ಬಿಲಿಯಗಟ್ಟಲೆ ಡಾಲರ್ ಮೌಲ್ಯದ ಈ ಗುತ್ತಿಗೆಯನ್ನು ಪಡೆಯಲು ಅಮೆರಿಕ ಭಾರತವನ್ನು ಪೀಡಿಸುತ್ತಿದೆ.
ಅಮೆರಿಕದ ವಿದೇಶ ಸಚಿವ ಮೈಕ್ ಪಾಂಪಿಯೊ ಜೂನ್ ಮೂರನೇ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮೋದಿ ಅಧಿಕಾರಕ್ಕೆ ಮರಳಿದ ನಂತರದ ಮೊದಲ ಭೇಟಿಯಿದು. ವಾಣಿಜ್ಯ ವಿಚಾರದಲ್ಲಿ ಕಠಿಣ ಮಾತು, ರಷ್ಯಾದ ಕ್ಷಿಪಣಿಗಳನ್ನು ಖರೀದಿಸಿದ್ದಕ್ಕೆ ಪರಿಹಾರವಾಗಿ ಅಮೆರಿಕದ ಹೆಚ್ಚು ಶಸ್ತ್ರಾಸ್ತ್ರಗಳನ್ನು ಖರೀದಿಸುವಂತೆ ಒತ್ತಾಯಿಸುವುದು, ಚೀನಾದ ಬೃಹತ್ ಕಂಪೆನಿಯಾದ ಹುವೈ ಭಾರತದಲ್ಲಿ ನಡೆಯುವ 5ಜಿ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನಿಷೇಧಿಸುವುದು- ಇವೆಲ್ಲ ಪಾಂಪಿಯೊ ಭೇಟಿ ವೇಳೆ ಇರಲಿರುವ ಕಾರ್ಯಸೂಚಿಯಾಗಿದೆ.
ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಇದೀಗ ಮೋದಿ ಸರಕಾರದ ಹೊಸ ವಿದೇಶ ಸಚಿವರು. ಒಬ್ಬ ವೃತ್ತಿನಿರತ ರಾಜತಾಂತ್ರಿಕನನ್ನು ನೇರವಾಗಿ ಸಚಿವ ಸಂಪುಟಕ್ಕೆ ಬಡ್ತಿ ನೀಡಿದ್ದು ಇದೇ ಮೊದಲ ಸಲವಾಗಿದೆ. ಅಮೆರಿಕ-ಪರ ಚಟುವಟಿಕೆಗಳಿಗೆ ಜೈಶಂಕರ್ ಖ್ಯಾತರು. ವಿದೇಶ ವ್ಯವಹಾರಗಳ ಸಚಿವಾಲಯದಲ್ಲಿನ ಹಾಗೂ ವಿದೇಶಾಂಗ ಕಾರ್ಯದರ್ಶಿಯಾಗಿ ಅವರ ಕಾರ್ಯಗಳ ದಾಖಲೆಗಳು ಹೇಗೆ ಅವರು ಅಮೆರಿಕದೊಂದಿಗೆ ನಿಕಟ ವ್ಯೂಹಾತ್ಮಕ ಮೈತ್ರಿಗೆ ಒತ್ತು ನೀಡಿದ್ದರು ಎನ್ನುವುದನ್ನು ತೋರಿಸುತ್ತವೆ.
ಟ್ರಂಪ್ ಆಡಳಿತದ ಭಂಡ ಆಗ್ರಹಗಳಿಗೆ ಮೋದಿ ಸರಕಾರದ ಹಲ್ಲುಗಿಂಜುವ ಇದುವರೆಗಿನ ಧೋರಣೆಯನ್ನು ಗಮನಿಸಿದರೆ ಅದು ಅಮೆರಿಕದ ಕಿರಿಯ ಮಿತ್ರನ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ ಎಂಬುದು ಗೋಚರಿಸುತ್ತದೆ. ಭಾರತದ ರಾಷ್ಟ್ರೀಯ ಹಿತಗಳನ್ನು ಸಾಮ್ರಾಜ್ಯಶಾಹಿ ಸೂಪರ್ ಪವರ್ನ ಹಿತಾಸಕ್ತಿಗಳಿಗೆ ಒತ್ತೆಯಿಡಲಾಗುವುದು.
ಇರಾನ್ನಿಂದ ತೈಲ ಆಮದು ಮಾಡಿಕೊಳ್ಳದಂತೆ ಭಾರತಕ್ಕೆ ಅಮೆರಿಕ ಆದೇಶಿಸಿತು. ಅದನ್ನು ,ದೇಶಕ್ಕೆತುಂಬಾನಷ್ಟವಾಗುತ್ತಿದ್ದರೂಶಿರಸಾವಹಿಸಿ ಪಾಲಿಸಲಾಯಿತು. ನಂತರ, ವೆನಿಜುವೆಲಾ ವಿರುದ್ಧದ ಆರ್ಥಿಕ ಸಮರದ ಭಾಗವಾಗಿ ಅಮೆರಿಕವು ವೆನಿಜುವೆಲಾದಿಂದ ತೈಲ ಆಮದು ನಿಲ್ಲಿಸುವಂತೆ ಭಾರತಕ್ಕೆ ಒತ್ತಾಯಿಸಿತು. ಮೋದಿ ಸರಕಾರ ಇದನ್ನು ಕೂಡ ತಡ ಮಾಡದೆ ಪಾಲಿಸಿತು. ರಷ್ಯಾದ ಟ್ರೈಯಂಫ್ ಎಸ್-೪೦೦ ಕ್ಷಿಪಣಿಗಳನ್ನು ಖರೀದಿಸಿದ್ದಕ್ಕೆ ದಿಗ್ಬಂಧನಗಳನ್ನು ಹೇರದಂತೆ ಅಮೆರಿಕಕ್ಕೆ ಭಾರತ ಅಂಗಲಾಚುತ್ತಿದೆ. ಆದರೆ ಭಾರತದ ವಿರುದ್ಧ ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಬೆದರಿಕೆ ಹಾಕುತ್ತಲೇ ಇದೆ. ಪರಿಹಾರವಾಗಿ ಅಮೆರಿಕದಿಂದ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವಂತೆ ಒತ್ತಡ ಹೇರುವುದು ಇದರ ಉದ್ದೇಶವಾಗಿದೆ.
–ಪ್ರಕಾಶ್ ಕಾರಟ್
ಅನು: ವಿಶ್ವ
(ಕೃಪೆ : ಜನಶಕ್ತಿ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
