ದಿನದ ಸುದ್ದಿ
ಅನುಚ್ಛೇದ 370 ರದ್ದು | ಒಂದು ವಿಶ್ಲೇಷಣೆ : ಮಿಸ್ ಮಾಡ್ದೆ ಈ ಲೇಖನ ಓದಿ..!

ಅನುಚ್ಛೇದ 370 ರದ್ದು ಪಡಿಸಿರುವುದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಕೊನೆಯಿಲ್ಲದ್ದು. ನನಗೆ ತಿಳಿದಿರುವಷ್ಟು ಮಟ್ಟಿಗೆ ಅನುಚ್ಛೇದ 370 ಹಾಗೂ 35A ರದ್ದಾದ ಕೂಡಲೇ ಜಮ್ಮು-ಕಾಶ್ಮೀರಕ್ಕೆ ಭಾರತದೊಂದಿಗಿರುವ ಸಂವಿಧಾನಾತ್ಮಕ ಸಂಬಂಧ ಕಡಿದು ಹೋಗುವುದಿಲ್ಲ. ಯಾಕೆಂದರೆ ಅನುಚ್ಛೇದ 370 ಬರುವ ಮೊದಲೇ ಜಮ್ಮು-ಕಾಶ್ಮೀರ ಸ್ವತಂತ್ರ ಭಾರತದ ಭಾಗವೆಂದು ಗುರುತಿಸಲ್ಪಟ್ಟಿತ್ತು. ನೆನಪಿರಲಿ ಸ್ವಾತಂತ್ರ್ಯ ನಂತರ ದೇಶದಲ್ಲಿದ್ದ ರಾಜ-ಮಹಾರಾಜರುಗಳ ಸಂಸ್ಥಾನ, ರಾಜ್ಯಗಳೆಲ್ಲಾ ಭಾರತದಲ್ಲಿ ವಿಲೀನವಾದ ಮಾದರಿಯಲ್ಲೇ ಜಮ್ಮು-ಕಾಶ್ಮೀರ ಕೂಡಾ ವಿಲೀನವಾಗಿತ್ತು. ಮೈಸೂರು ಸಂಸ್ಥಾನ, ಮಣಿಪುರ, ತೆಹ್ರಿ ಘರ್ವಾಲ್, ಉದಯಪುರ ಮುಂತಾದ 140 ಸಂಸ್ಥಾನಗಳು ಕೂಡಾ ಭಾರತ ಸ್ವಾತಂತ್ರ್ಯ ಸಿಕ್ಕ ತಕ್ಷಣ ಭಾರತದ ರಾಜ್ಯಗಳಾಗಲಿಲ್ಲ. ಅದಕ್ಕಾಗಿ ಸ್ವತಂತ್ರ ಭಾರತದೊಂದಿಗೆ ಈ ಸಂಸ್ಥಾನಗಳು Instrument of Accession (ವಿಲೀನ ಪತ್ರ)ಗಳಿಗೆ ಸಹಿ ಮಾಡಿ, ಸ್ವತಂತ್ರ ಭಾರತವನ್ನು ಅಧಿಕೃತವಾಗಿ ಸೇರಿದ್ದವು. ಈ ಎಲ್ಲಾ ವಿಲೀನ ಪತ್ರಗಳು ಬಹುಷ ಇವತ್ತೂ ಗೃಹ ಇಲಾಖೆಯ ಕಡತಗಳಲ್ಲಿವೆ.
ದೆಹಲಿಯಲ್ಲಿ ನೆಲೆಸಿರುವ RTI ಕಾರ್ಯಕರ್ತ ಹಾಗೂ ಇತಿಹಾಸ ಸಂಶೋಧಕ ವೆಂಕಟೇಶ ನಾಯಕರು ಇದರ ಬಗ್ಗ್ಗೆ ಕೆಲ ವರುಷಗಳ ಹಿಂದೆ ದೀರ್ಘ ಸಂಶೋಧನೆಯೊಂದನ್ನು ಮಾಡಿ, RTI ಮೂಲಕ ಸ್ವಾತಂತ್ಯ ಸಮಯದಲ್ಲಿ ಸಹಿ ಮಾಡಲಾಗಿದ್ದ ಕೆಲ ವಿಲೀನ ಪತ್ರಗಳ ಪ್ರತಿ ಪಡೆದುಕೊಂಡಿದ್ದರು. ಅವರ ಪ್ರಕಾರ ಜಮ್ಮು-ಕಾಶ್ಮೀರ ಹಾಗೂ ಇತರ 140 ಸಂಸ್ಥಾನಗಳು ಸಹಿ ಮಾಡಿರುವ ವಿಲೀನ ಪತ್ರಗಳಲ್ಲಿ ಹೆಚ್ಚೇನು ವ್ಯತ್ಯಾಸವಿಲ್ಲ. ಈ ಎಲ್ಲಾ ಸಂಸ್ಥಾನಗಳು ಮೊದಲು ಕೇವಲ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ನಿರ್ಧಾರಗಳನ್ನು ದೇಶಕ್ಕೆ ಬಿಟ್ಟುಕೊಟ್ಟು, ಉಳಿದೆಲ್ಲಾ ಅಧಿಕಾರಗಳನ್ನು ತಮ್ಮಲ್ಲೇ ಇಟ್ಟುಕೊಂಡಿದ್ದವು. ವಿಲೀನ ಪತ್ರದೊಟ್ಟಿಗೆ ಹೆಚ್ಚಿನ ಸಂಸ್ಥಾನಗಳು ಭಾರತದೊಂದಿಗೆ ತಾಟಸ್ಥ್ಯ ಒಪ್ಪಂದಗಳನ್ನೂ ಮಾಡಿಕೊಂಡಿದ್ದವು. ಅಂದರೆ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ಅಧಿಕಾರಗಳ ಹೊರತು ಬೇರೆ ಯಾವುದೇ ವಿಷಯದಲ್ಲಿ ಭಾರತ ಸರ್ಕಾರ ಈ ಸಂಸ್ಥಾನಗಳ ಮೇಲೆ ತನ್ನ ಹಕ್ಕು ಚಲಾಯಿಸುವುದಿಲ್ಲವೆನ್ನೋದು ಈ ತಾಟಸ್ಥ್ಯ ಒಪ್ಪಂದದ ಹೂರಣವಾಗಿತ್ತು. ಹಾಗಾಗಿ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಹಣಕಾಸಿನ ವಿಷಯಗಳನ್ನು ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ಈ ಸಂಸ್ಥಾನಗಳಿಗೆ ಪೂರ್ಣ ಸ್ವಾಯತ್ತತೆ ಇತ್ತು, ಬರೀ ಜಮ್ಮು-ಕಾಶ್ಮೀರಕ್ಕೆ ಮಾತ್ರವಲ್ಲ. ಆದರೆ ಮುಂದೆ ಹೆಚ್ಚಿನ ಸಂಸ್ಥಾನಗಳು ತಮ್ಮ ಸ್ವ-ಇಚ್ಛೆಯಿಂದಲೇ ಭಾರತದೊಂದಿಗೆ ಪೂರ್ಣ ಪ್ರಮಾಣದಲ್ಲಿ ವಿಲೀನವಾಗಲು ಒಪ್ಪಂದಕ್ಕೆ ಸಹಿ ಹಾಕಿ ಸ್ವತಂತ್ರ ಭಾರತದ ಪರಿಪೂರ್ಣ ಭಾಗವಾದರು.
ಆದರೆ ಜಮ್ಮು-ಕಾಶ್ಮೀರದ ಅಂದಿನ ಯುವರಾಜ, ರಾಜ್ಯದ ಮಹಾರಾಜ ಹರಿಸಿಂಗ್ ತನಗೆ ಕೊಟ್ಟ ಅಧಿಕಾರವನ್ನು ಉಪಯೋಗಿಸಿ, ನವೆಂಬರ್ 25, 1949ರಂದು ಒಂದು ಪ್ರಕಟನೆ ಮಾಡಿ, ಶೀಘ್ರದಲ್ಲೇ ಜಾರಿಯಾಗಲಿದ್ದ ಸಂವಿಧಾನ ಎಷ್ಟು ಹಾಗೂ ಯಾವ ಮಟ್ಟಿಗೆ ಜಮ್ಮು-ಕಾಶ್ಮೀರದಲ್ಲಿ ಯುಕ್ತವಾಗಬಹುದೆಂದು ಘೋಷಿಸಿದರು. ಹೀಗಾಗಯೇ ಅನುಚ್ಛೇದ 370 (ಅಂದು ಅನುಚ್ಛೇದ 309) ಜಾರಿಗೆ ಬಂತು. ಇದೆಲ್ಲಾ ಭಾಷಾವಾರು ರಾಜ್ಯಗಳು ಆಗುವ ಮೊದಲು. ಈ ವಿಲೀನ ಪ್ರಕ್ರಿಯೆಯಿಂದಲೇ ಮುಂದೆ ವಿಂಧ್ಯಾ ಪ್ರದೇಶ, ಮತ್ಸ್ಯ ಒಕ್ಕೂಟ, ಪಟಿಯಾಲಾ ಹಾಗೂ ಪೂರ್ವ ಪಂಜಾಬ್ ರಾಜ್ಯಗಳ ಒಕ್ಕೂಟ, ತಿರು-ಕೊಚ್ಚಿ (United State of Travancore and Cochin) ಮುಂತಾದ ದೊಡ್ಡ ಒಕ್ಕೂಟಗಳ ಉದಯವಾಗಿತ್ತು. ಭಾಷಾವಾರು ಪ್ರಾಂತ್ಯಗಳ ರಚನೆಯ ಸಂಧರ್ಭದಲ್ಲಿ ಈ ರಾಜ್ಯಗಳ ಒಕ್ಕೂಟಗಳು ರದ್ದಾದವು.

ಹಾಗಾಗಿ ಅನುಚ್ಛೇದ 370 ರದ್ದಾದ ಮಾತ್ರಕ್ಕೆ ಜಮ್ಮು-ಕಾಶ್ಮೀರ ಭಾರತದ ಕೈತಪ್ಪಿ ಹೋಗುವುದಿಲ್ಲ. ಅದು ಇನ್ನೂ ಭಾರತ ಒಕ್ಕೂಟದ ಅವಿಭಾಜ್ಯ ಅಂಗ ಯಾಕೆಂದರೆ ಜಮ್ಮು-ಕಾಶ್ಮೀರಕ್ಕೆ ಭಾರತ ಒಕ್ಕೂಟದೊಂದಿಗೆ ಅಧಿಕೃತ ಸಂಬಂಧ ಬೆಸೆದಿದ್ದು ಅನುಚ್ಛೇದ 370ದಿಂದಾಗಿ ಅಲ್ಲ ಬದಲಾಗಿ 1947ರಲ್ಲಿ ಸಹಿ ಮಾಡಿದ Instrument of Accessionನಿಂದಾಗಿ. ಆದರೆ ಅನುಚ್ಛೇದ 370 ರದ್ದಾಗಿರುವುದರಿಂದ ಬಿಜೆಪಿಯವರು, ಸಂಘ ಪರಿವಾರ ಹೇಳುವಂತೆ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿರುವ ವಿಶೇಷ ಸ್ಥಾನಮಾನ, ಸ್ವಾಯತ್ತತೆ ಸಂಪೂರ್ಣವಾಗಿ ರದ್ದಾಗಿ, ಅದು ಕೂಡಾ ಇತರ ರಾಜ್ಯಗಳಂತೆಯೇ ಆಗುತ್ತದೆಯೆನ್ನುವುದು ಸತ್ಯವಲ್ಲ. ಯಾಕೆಂದರೆ ಅನುಚ್ಛೇದ 370 ರದ್ದಾದರೆ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಬೆಸೆಯಲು ಉಳಿಯುವ ಏಕೈಕ ಕೊಂಡಿಯೆಂದರೆ 1947ರಲ್ಲಿ ಸಹಿ ಮಾಡಿದ Instrument of Accession. ಈ Instrument of Accession ಪ್ರಕಾರ ಭಾರತ ಸರಕಾರಕ್ಕೆ ಜಮ್ಮು-ಕಾಶ್ಮೀರದಲ್ಲಿ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಹಣಕಾಸಿನ ವಿಷಯಗಳನ್ನು ಹೊರತುಪಡಿಸಿ ಇತರೆ ವಿಷಯಗಳಲ್ಲಿ ಯಾವುದೇ ಹಕ್ಕಿಲ್ಲ.
ಇತರ ಎಲ್ಲಾ ವಿಷಯಗಳನ್ನೂ ಜಮ್ಮು-ಕಾಶ್ಮೀರಕ್ಕೆ ಸಂಪೂರ್ಣ ಸ್ವಾಯತ್ತತೆ ಇದೆ. ಅಂದರೆ ಕೇವಲ ಅನುಚ್ಛೇದ 370ವನ್ನು ರದ್ದು ಮಾಡಿದರೆ ಜಮ್ಮು-ಕಾಶ್ಮೀರಕ್ಕೆ ಸದ್ಯಕ್ಕಿರುವುದಕ್ಕಿಂತಲೂ ಹೆಚ್ಚಿನ ಸ್ವಾಯತ್ತತೆ ಸಿಗುತ್ತದೆ. ಇದರ ಪರಿಣಾಮಗಳನ್ನು ಊಹಿಸಲೂ ಅಸಾಧ್ಯ. ಅದರಿಂದಾಗಿಯೇ ಕೇಂದ್ರ ಸರಕಾರ ಕೇವಲ ಅನುಚ್ಛೇದ 370ವನ್ನು ರದ್ದು ಮಾಡುವ ದುಸ್ಸಾಹಸಕ್ಕೆ ಕೈಹಾಕಿಲ್ಲ ಬದಲಾಗಿ ಅನುಚ್ಛೇದ 370ನ್ನು ರದ್ದು ಮಾಡಿ, ಜಮ್ಮು-ಕಾಶ್ಮೀರವನ್ನು ವಿಭಜಿಸಿ ಲಡಾಖ್ ಕೇಂದ್ರಾಡಾಳಿತ ಪ್ರದೇಶ ಹಾಗೂ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಿಂದು ಘೋಷಿಸಿದೆ. ಇದು ರಾಜ್ಯಸಭೆ, ಲೋಕಸಭೆಯಲ್ಲಿ ಪಾಸಾದರೂ ನ್ಯಾಯಾಂಗ ಹಾಗೂ ಸಂವಿಧಾನದ ಪರೀಕ್ಷೆಗೆ ಒಳಪಡುವುದಂತೂ ಗ್ಯಾರಂಟಿ. ಅನುಚ್ಛೇದ 370 ಎಂದರೆ ಬರೀ ಸ್ವಾಯತ್ತತೆ ಮಾತ್ರವಲ್ಲ. ಅದರಲ್ಲಿ ಅನೇಕ ವಿಸ್ತ್ರತವಾದ ವಿಷಯಗಳು ಅಡಕವಾಗಿವೆ ಹಾಗೂ ಈ ಎಲ್ಲಾ ವಿಷಯಗಳ ವಿಸ್ತ್ರತ ಪರೀಕ್ಷೆ ಸಂವಿಧಾನದ ಪೂರ್ಣ ಪೀಠದ ನೆರಳಿನಲ್ಲಿಯೇ ನಡೆಯಬೇಕು.
ಇದು ಇಷ್ಟಾದರೆ, ನಕಲಿ ರಾಷ್ಟ್ರೀಯವಾದಿಗಳಿಗೆ ಆರ್ಟಿಕಲ್ 370 ಎಂದರೆ ಬರೀ ಜಮ್ಮು-ಕಾಶ್ಮೀರಿಗಳನ್ನು ಹೊರತುಪಡಿಸಿ ದೇಶದ ಬೇರೆ ರಾಜ್ಯದ ಯಾರೂ ಅಲ್ಲಿ ಜಮೀನನ್ನು ಕೊಳ್ಳುವಂತಿಲ್ಲ ಎಂಬುವುದಕ್ಕೆ ಸೀಮಿತ. ಹೋಗ್ಲಿ ಬಿಡಿ. ನಮ್ಮಿಂದ ಮೂರು ಸಾವಿರಕ್ಕಿಂತಲೂ ಹೆಚ್ಚು ಕಿಲೋಮೀಟರ್ ದೂರವಿರುವ ರಾಜ್ಯದಲ್ಲಿ ಜಮೀನು ಖರೀದಿಸುವ ತುರ್ತು ಹಾಗೂ ಜರೂರತ್ತು ಯಾರಿಗೆ, ಯಾಕಿದೆ ಅಂತಾ ಇನ್ನೊಂದು ಚರ್ಚೆ. ಅಲ್ಲಿ ಆರ್ಟಿಕಲ್ 370 ಇದ್ದಾಗಲೂ ನಮ್ಮಂಥ ಸಾಮಾನ್ಯ ನಾಗರಿಕರಿಗೆ ಏನೂ ತೊಂದರೆಯಾಗಿದ್ದಿಲ್ಲ, ಈವಾಗ ಅದು ರದ್ದಾದರೂ ದೇಶದ ಸಾಮಾನ್ಯ ನಾಗರಿಕರಿಗೆ ಯಾವುದೇ ಲಾಭನೂ ಇಲ್ಲ. ಹಾಗಾಗಿ ಆರ್ಟಿಕಲ್ 370 ರದ್ದಾದ ಕೂಡಲೇ ಅಲ್ಲಿ ಹೊರ ರಾಜ್ಯದ ಎಷ್ಟು ಮಂದಿ ಹೋಗಿ ಜಮೀನನ್ನು ಕೊಂಡುಕೊಳ್ಳುತ್ತಾರೋ ನೋಡೋಣ.
ಆದರೆ ಇಂಥದೊಂದು ನಿಯಮ ಬರೀ ಜಮ್ಮು-ಕಾಶ್ಮೀರದಲ್ಲಿ ಮಾತ್ರ ಇದೆ ಎಂದು ಭಕ್ತರು ಮಾತ್ರವಲ್ಲ, ತೊಂಬತ್ತು ಪರ್ಸೆಂಟ್ ಭಾರತನೇ ಎಂದುಕೊಂಡಿದೆ. ಯಾಕೆಂದರೆ ಅವರಿಗೆ ಸಂವಿಧಾನದ ಆರ್ಟಿಕಲ್ 371G, 371A ಹಾಗೂ ಇತರ ಅನುಚ್ಛೇದಗಳ ಬಗ್ಗೆ ಬಗ್ಗೆ ಎಳ್ಳಷ್ಟೂ ಪರಿಜ್ಞಾನವಿಲ್ಲವೆನ್ನೋದು ಸಾರ್ವಕಾಲಿಕ ಸತ್ಯ. ಸದ್ಯಕ್ಕೆ ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಸಿಕ್ಕಿಂ ಮುಂತಾದ ರಾಜ್ಯಗಳಲ್ಲೂ ಹೊರಗಿನವರು ಜಮೀನನ್ನು ಖರೀದಿಸುವಂತಿಲ್ಲ ಅಥವಾ ಅಲ್ಲಿನವರು ಹೊರಗಿನವರಿಗೆ ಜಮೀನನ್ನು ಮಾರುವಂತಿಲ್ಲ. ಮೇಘಾಲಯ, ಮಣಿಪುರಗಳ ಹೆಚ್ಚಿನ ಭೂಪ್ರದೇಶದಲ್ಲೂ ಇಂಥದೊಂದು ಕಾನೂನು ಅನ್ವಯವಾಗುತ್ತೆ. ಆದರೆ ಈ ರಾಜ್ಯಗಳ ಬಗ್ಗೆ ಮಾತಾನಾಡಿದರೆ ಮತಗಳು ಸಿಗೋಲ್ಲ. ಸಿಗಬೇಕಾದರೆ ಜಮ್ಮು-ಕಾಶ್ಮೀರದ ಬಗ್ಗೆ ಮಾತಾನಾಡಬೇಕು ಯಾಕೆಂದರೆ ಅದು ಮುಸ್ಲೀಮರ ರಾಜ್ಯ (ವಾಟ್ಸಾಪ್ ಯೂನಿವರ್ಸಿಟಿಯ ಪ್ರಕಾರ). ದೇಶದಲ್ಲಿ ಹಿಂದೂಗಳ ಪರವಾಗಿ ಮಾತಾನಾಡುವುದಕ್ಕಿಂತ, ಮುಸ್ಲೀಮರ ವಿರುದ್ದ ಮಾತಾನಾಡಿದರೆ ಹೆಚ್ಚು ಮತಗಳು ಸಿಗಬಲ್ಲವೆನ್ನೋದು ಕಳೆದ ಮೂರು ದಶಕಗಳಲ್ಲಿ ಈ ದೇಶ ಕಂಡುಕೊಂಡಿರುವ ಸತ್ಯ.
ಹಾಗಾಗಿ ನಾವಿವತ್ತು ಅನುಚ್ಛೇದ 370 ಹಾಗೂ 35A ರದ್ದು ಮಾಡಿರುವ ಬಗ್ಗೆ ಹಾಗೂ ಅದರ ಉದ್ದೇಶಗಳ ಬಗ್ಗೆ ಮಾತಾನಾಡುವುದಕ್ಕಿಂತ ಹೆಚ್ಚಾಗಿ ಮಾತಾನಾಡಬೇಕಾಗಿರುವುದು ಇದನ್ನು ರದ್ದು ಮಾಡಿರುವ ರೀತಿ. ಇದೊಂದು Majoritarian Tyranny (ಬಹುಸಂಖ್ಯಾತ ನಿರಂಕುಶ ಪ್ರಭುತ್ವ) ತನ್ನ ಸುಪರ್ಧಿಯಲ್ಲಿರುವ ಅಗಾಧ Brutal Force ಉಪಯೋಗಿಸಿ ತನಗೆ ಬೇಕಾದುದನ್ನು ಮಾಡಬಲ್ಲದೆನ್ನುವುದಕ್ಕೆ ಕ್ಲಾಸಿಕ್ ಉದಾರಹರಣೆ. ಅನುಚ್ಛೇದ 370 ಹಾಗೂ 35A ರದ್ದು ಮಾಡಬೇಕಿತ್ತೇ? ಅದನ್ನು ಸಾಂವಿಧಾನಿಕ ರೀತಿಯಲ್ಲಿ ಮಾಡಬಹುದಿತ್ತು. ಆದರೆ ಈ ಸರಕಾರಕ್ಕೆ ಅನುಚ್ಛೇದ 370 ಹಾಗೂ 35A ರದ್ದು ಮಾಡುವುದಕ್ಕಿಂತ ಹೆಚ್ಚಾಗಿ ದೇಶದ ಅಲ್ಪಸಂಖ್ಯಾತ ಸಮುದಾಯಕ್ಕೊಂದು ಎಚ್ಚರಿಕೆ ಕೊಡಬೇಕೆನ್ನುವ ಆಸೆಯಿದ್ದಂತೆ ತೋರುತ್ತಿದೆ. ಅಂದರೆ ಈ ದೇಶದಲ್ಲಿ ನಾವು ಬಹುಸಂಖ್ಯಾತರು, ನಮ್ಮ ಸಂಖ್ಯಾಬಲ ಶಾಸನಸಭೆಗಳಲ್ಲಿ ಇದ್ದರೆ, ಈ ಸಂಖ್ಯಾಬಲವನ್ನು ಉಪಯೋಗಿಸಿ, ನಾವು ಅಲ್ಪಸಂಖ್ಯಾತರಾದ ನಿಮ್ಮ ಸಲಹೆ, ಅನುಮತಿಯಿಲ್ಲದೆ ನಮಗೆ ಬೇಕಾದ ಕಾನೂನುಗಳನ್ನು ತರಬಲ್ಲೆವು ಎಂದು ತೋರಿಸಲೇಬೇಕೆಂದು ಪಣತೊಟ್ಟಂತಿದೆ ಈ ಸರಕಾರ. ಉಗ್ರವಾದ, ಪಾಕೀಸ್ಥಾನ ಮುಂತಾದವುಗಳೆಲ್ಲಾ ಸಬೂಬು ಮಾತ್ರ.
ಈ ಕಾರಣದಿಂದಾಗಿಯೇ ಇವತ್ತು ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿದ ರೀತಿ ಪ್ರಶ್ನಾರ್ಹ. ರಾಜ್ಯದ ಮೂವರು ಮುಖ್ಯಮಂತ್ರಿಗಳು ಹಾಗೂ ಇತರ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಿ, ಮನೆಗೊಬ್ಬ್ರರಂತೆ ಸೈನಿಕರನ್ನು ನೇಮಿಸಿ, ಕರ್ಫ್ಯೂ ಹಾಕಿ, ಮಾಧ್ಯಮ, ಅಂತರ್ಜಾಲ, ಮೊಬೈಲ್ಗಳನ್ನು ನಿಷೇಧಿಸಿ, ತುರ್ತು ಪರಿಸ್ಥಿತಿಯನ್ನು ನಿರ್ಮಿಸಿ, ಲೋಕಸಭೆ, ರಾಜ್ಯಸಭೆಯಲ್ಲಿ ಚರ್ಚೆ ಕೂಡಾ ಮಾಡದೇ, ವಿರೋಧ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೆ ಇಂಥದೊಂದು ನಿರ್ಧಾರ ಕೈಗೊಂಡಿದ್ದಾರೆಂದರೆ ಅದರ ಹಿಂದಿನ ಉದ್ದೇಶಗಳೂ ಅನುಮಾನಸ್ಪದ ಹಾಗೂ ಪ್ರಶ್ನಾರ್ಹವೇ. ಇದನ್ನು ರದ್ದು ಮಾಡಲು ಜಮ್ಮು-ಕಾಶ್ಮೀರದ ವಿಧಾನಸಭೆಯ ಅನುಮತಿ ಕೂಡಾ ಅಗತ್ಯವೆಂದು ಸಂವಿಧಾನವೇ ಹೇಳಿದೆ. ಆದರೆ ರಾಜ್ಯ ಸರ್ಕಾರವನ್ನು ಮೊದಲೇ ಬರ್ಖಾಸ್ತುಗೊಳಿಸಿ, ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತಂದು, ಇವತ್ತು ರಾಜ್ಯಪಾಲರ ಪತ್ರವೇ ವಿಧಾನಸಭೆಯ ಅನುಮತಿಯೆಂದು ಹೇಳಿ, ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿರುವ ನಿರ್ಧಾರ ಎಷ್ಟು ಸರಿ ಹಾಗೂ ಎಷ್ಟು ತಪ್ಪೆಂದು ಮುಂದಿನ ದಿನಗಳಲ್ಲಿ ಈ ದೇಶದ ಸಂವಿಧಾನವೇ ನಿರ್ಧರಿಸಲಿದೆ. ಅನುಚ್ಛೇದ 370 ಹಾಗೂ 35A ಇದ್ದರೆ ಅಥವಾ ರದ್ದಾದರೆ ಅದರ ಹೆಚ್ಚಿನ ಪರಿಣಾಮಗಳನ್ನು ಅನುಭವಿಸುವವರು, ಲಾಭವನ್ನು ಪಡೆಯುವವರು ಇಲ್ಲ ನಷ್ಟ ಅನುಭವಿಸುವವರು ಆ ರಾಜ್ಯದ ಜನರು. ಹಾಗಾಗಿ ಅನುಚ್ಛೇದ 370 ಹಾಗೂ 35A ರದ್ದು ಮಾಡುವ ಮೊದಲು ಅವರ ಜನಮತ ಸಂಗ್ರಹವಾಗಬೇಕಿತ್ತು. ಅದಾಗಲಿಲ್ಲ ಯಾಕೆಂದರೆ ಈ ನಿರ್ಧಾರ ಅಲ್ಲಿನ ಪ್ರಜೆಗಳ ಒಳಿತಿಗಲ್ಲ ಬದಲಾಗಿ ದೆಹಲಿಯಲ್ಲಿ ಸರ್ಕಾರ ನಡೆಸುವವರ ಹಾಗೂ ಅವರ ರಿಮೋಟ್ ಕಂಟ್ರೋಲ್ ಇಟ್ಟುಕೊಂಡಿರುವವರ ಒಳಿತಿಗಾಗಿ. ಇಂಥದೊಂದು Majoritarian Tyranny ಹಾಗೂ Brutal Force ಇಟ್ಟುಕೊಂಡು, ಅಲ್ಲಿನ ಜನರನ್ನು, ನಾಯಕರನ್ನು ಗನ್ಪಾಯಿಂಟ್ನಲ್ಲಿಟ್ಟುಕೊಂಡು ಅನುಚ್ಛೇದ 370 ಹಾಗೂ 35Aನ್ನು ಹಿಂದಿನ ಯಾವುದೇ ಸರ್ಕಾರನೂ ಮಾಡಬಹುದಿತ್ತು. ಅವರು ಮಾಡಲಿಲ್ಲ ಯಾಕೆಂದರೆ ಅದು ಅಸಾಂವಿಧಾನಿ ಅಷ್ಟೇ ಅಲ್ಲ ಪ್ರಜಾಪ್ರಭುತ್ವ ವಿರೋಧಿ ಕೂಡಾ. ಇವತ್ತು ನಾವು ಪ್ರಶ್ನಿಸಬೇಕಾಗಿರುವುದು ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿರುವುದಲ್ಲ ಬದಲಾಗಿ ಅದನ್ನು ರದ್ದು ಮಾಡಿದ ಅಸಾಂವಿಧಾನಿಕ, ನಿರಂಕುಶ, ಸರ್ವಾಧಿಕಾರಿ ರೀತಿ.
ಯಾಕೆಂದರೆ ಇವತ್ತು ಜಮ್ಮು-ಕಾಶ್ಮೀರದಲ್ಲಾಗಿರುವುದು ನಾಳೆ ಕರ್ನಾಟಕದಲ್ಲೂ ಆಗಬಹುದು. ಕೇಂದ್ರ ಸರಕಾರ ತನಗೆ ಬೇಕಾದ ಯಾವುದೋ ಒಂದು ನಿರ್ಧಾರವನ್ನು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ರಾಜ್ಯ ಸರಕಾರವನ್ನು ಬರ್ಖಾಸ್ತುಗೊಳಿಸಿ, ತಮ್ಮದೇ ಕೈಗೊಂಬೆಯಾಗಿರುವ ರಾಜ್ಯಪಾಲರ ಅನುಮತಿ ಪಡೆದು, ರಾಷ್ಟ್ರಪತಿಯವರ ಅದೇಶದ ಮೂಲಕ ನಮ್ಮ ಮೇಲೆ ಹೇರಬಹುದು. ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ. ಆದರೆ ಇಂಥ ಪ್ರಶ್ನೆಗಳನ್ನು ಕೇಳುವವರೆಲ್ಲಾ ದೇಶದ್ರೋಹಿಗಳು, ಪಾಕೀಸ್ಥಾನಿಗಳು, ಜಿಹಾದಿಗಳೆಂದು ಮೊದಲೇ ಫರ್ಮಾನು ಹೊರಡಿಸಲಾಗಿರುವುದರಿಂದ, ಪ್ರಶ್ನೆ ಕೇಳುವವರೂ ತಡವರಿಸುವುದಂತೂ ಗ್ಯಾರಂಟಿ.
–Almeida Gladson
(Facebook post)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ವ್ಯಾಪಕ ಮಳೆ; ತುರ್ತು ಪರಿಹಾರಕ್ಕೆ 200 ಕೋಟಿ ರೂಪಾಯಿ ಬಿಡುಗಡೆ

ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraja Bommai) ಶನಿವಾರ ರಾಜ್ಯದ ( Karnataka ) ವಿವಿಧ ಜಿಲ್ಲೆಗಳಲ್ಲಿನ ಮಳೆ ಪರಿಸ್ಥಿತಿ ಕುರಿತು ( Havy Rain ) ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ( Vedio Conferences ) ನಡೆಸಿದರು.
ಮಳೆ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ 21 ಜಿಲ್ಲೆಗಳಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ.
ಬಳ್ಳಾರಿ, ಧಾರವಾಡ, ಚಿತ್ರದುರ್ಗ, ಗದಗ, ಚಾಮರಾಜನಗರ, ಕೋಲಾರ, ಹಾವೇರಿ, ವಿಜಯನಗರ ಹಾಗೂ ಕೋಲಾರ ಜಿಲ್ಲೆಗಳಿಗೆ ತಲಾ 5 ಕೋಟಿ ರೂಪಾಯಿ, ಚಿಕ್ಕಮಗಳೂರು, ಕೊಪ್ಪಳ, ಚಿಕ್ಕಬಳ್ಳಾಪುರ, ಮಂಡ್ಯ, ರಾಯಚೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ 10 ಕೋಟಿ ರೂಪಾಯಿ ಹಾಗೂ ದಾವಣಗೆರೆ, ಹಾಸನ, ಉಡುಪಿ, ಮೈಸೂರು ಜಿಲ್ಲೆಗಳಿಗೆ ತಲಾ 15 ಕೋಟಿ ರೂಪಾಯಿ, ದಕ್ಷಿಣ ಕನ್ನಡ ಜಿಲ್ಲೆಗೆ 20 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಹಣ ಬಳಕೆಯಲ್ಲಿ ಯಾವುದೇ ಲೋಪವಾದಲ್ಲಿ ಆಯಾ ಜಿಲ್ಲಾಧಿಕಾರಿಯನ್ನು ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೇರಳದ ವೈನಾಡು ಸೇರಿದಂತೆ ಕಬಿನಿ ನದಿ ಪಾತ್ರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಪಿಲಾ ನದಿ ತುಂಬಿ ಹರಿಯುತ್ತಿದೆ ಮಳೆಯಿಂದಾಗಿ ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಸುಮಾರು 30 ರಿಂದ 35 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಹಣದುಬ್ಬರ, ಕೋವಿಡ್ ನಿಭಾಯಿಸುವ ಭಾರತೀಯ ಮಾದರಿಗೆ ವಿಶ್ವದ ಆರ್ಥಿಕ ತಜ್ಞರ ಪ್ರಶಂಸೆ: ಗೃಹ ಸಚಿವ ಅಮಿತ್ ಶಾ

ಸುದ್ದಿದಿನ ಡೆಸ್ಕ್ : ಆರ್ಥಿಕ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ( Narendra Modi ) ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಪರಿಣಾಮಕಾರಿ ಕ್ರಮಗಳಿಂದಾಗಿ ಆರ್ಥಿಕ ಅಭಿವೃದ್ಧಿ ದರದಲ್ಲಿ ( GDP) ಭಾರತ ಜಾಗತಿಕವಾಗಿ ಮುಂಚೂಣಿಯಲ್ಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ( Amit Shah) ಹೇಳಿದ್ದಾರೆ.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ( Banglore) ನಿನ್ನೆ ನಡೆದ ’ಸಂಕಲ್ಪದಿಂದ ಸಿದ್ಧಿ’ ( Sankalp Se Siddhi )
ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಪ್ರಸ್ತುತ ಭಾರತದ ಅಭಿವೃದ್ಧಿ ದರ ಶೇಕಡ 7.4ರಷ್ಟಿದ್ದು, ಚೀನಾ ಶೇಕಡ 3.3ಮತ್ತು ಬ್ರೆಜಿಲ್ ಶೇಕಡ 1.7ರಷ್ಟು ಅಭಿವೃದ್ಧಿ ದರ ಹೊಂದಿವೆ ಎಂದು ತಿಳಿಸಿದರು.
ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾನವೀಯ ಮುಖವಿರುವ ಆರ್ಥಿಕತೆಯನ್ನು ಪರಿಚಯಿಸಿದ್ದು, ಸಮಾಜದ ಕಟ್ಟಕಡೆಯ ಜನರ ಏಳಿಗೆಗೆ ಹಲವಾರು ಕಲ್ಯಾಣ ಕ್ರಮಗಳನ್ನು ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರದಿಂದ ಬಡವರಿಗೆ ಮನೆ, ಶೌಚಾಲಯ, ವಿದ್ಯುತ್, ಆರೋಗ್ಯ ವಿಮೆ, ನೀರಿನ ಸಂಪರ್ಕ ಮತ್ತು ಉಚಿತ ಪಡಿತರವನ್ನು ಒದಗಿಸುವ ಪ್ರಯತ್ನಗಳು ಮುಂದುವರೆದಿವೆ ಎಂದು ಅಮಿತ್ ಶಾ ತಿಳಿಸಿದರು.

ಕೋವಿಡ್ ಮತ್ತು ಹಣದುಬ್ಬರವನ್ನು ನಿಭಾಯಿಸುವ ಭಾರತೀಯ ಮಾದರಿಯನ್ನು ವಿಶ್ವದಾದ್ಯಂತ ಅರ್ಥಶಾಸ್ತ್ರಜ್ಞರು ಪ್ರಶಂಸೆ ಮಾಡಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.
ಇದನ್ನೂ ಓದಿ | ಆಕಾಶವಾಣಿ, ಎಫ್ಎಂ, ದೂರದರ್ಶನ ಚಾನಲ್ಗಳಿಗೆ ಅತಿ ಹೆಚ್ಚು ಜನ ಮನ್ನಣೆ: ಕೇಂದ್ರ ವಾರ್ತಾ ಸಚಿವ ಅನುರಾಗ್ ಸಿಂಗ್ ಠಾಕೂರ್
ಇತರ ದೇಶಗಳು ಉದ್ಯಮಗಳಿಗೆ ಬೇಡಿಕೆಯನ್ನು ಹೆಚ್ಚಿಸುವ ಮತ್ತು ಪ್ಯಾಕೇಜ್ಗಳನ್ನು ಘೋಷಿಸುವತ್ತ ಗಮನಹರಿಸಿದಾಗ, ಪ್ರಧಾನಮಂತ್ರಿಗಳು ಪರಿಹಾರವನ್ನು ಹುಡುಕುವತ್ತ ಗಮನಹರಿಸಿದರು ಮತ್ತು ಲಸಿಕೆಯನ್ನು ಕಂಡುಹಿಡಿಯಲು ವಿಜ್ಞಾನಿಗಳನ್ನು ಪ್ರೋತ್ಸಾಹಿಸಿದರು ಎಂದು ಸಚಿವ ಅಮಿತ್ ಶಾ ತಿಳಿಸಿದರು.
ದೇಶದಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದ್ದು, ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ್ ಭಾರತ್ ಅಭಿಯಾನಗಳ ಮೂಲಕ ಸ್ವದೇಶಿ ಸ್ವಾವಲಂಬನೆಗೆ ಒತ್ತು ನೀಡಲಾಗಿದೆ ಎಂದು ಅಮಿತ್ ಶಾ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಕಾಶವಾಣಿ, ಎಫ್ಎಂ, ದೂರದರ್ಶನ ಚಾನಲ್ಗಳಿಗೆ ಅತಿ ಹೆಚ್ಚು ಜನ ಮನ್ನಣೆ: ಕೇಂದ್ರ ವಾರ್ತಾ ಸಚಿವ ಅನುರಾಗ್ ಸಿಂಗ್ ಠಾಕೂರ್

ಸುದ್ದಿದಿನ ಡೆಸ್ಕ್ : ಆಕಾಶವಾಣಿ (AIR) ಮತ್ತು ಆಕಾಶವಾಣಿಯ ಎಫ್ಎಂ ಚಾನಲ್ಗಳನ್ನು ( FM Channel) ಅತಿ ಹೆಚ್ಚು ಶ್ರೋತೃಗಳು ಆಲಿಸುತ್ತಿದ್ದಾರೆ.
ಖಾಸಗಿ ಎಫ್ಎಂ ಚಾನಲ್ಗಳಿಗೆ ಹೋಲಿಸಿದರೆ ಆಕಾಶವಾಣಿಯ ಎಫ್ಎಂ ಚಾನಲ್ ಅತಿ ಹೆಚ್ಚು ಜನಪ್ರಿಯವಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ( Anurag Singh thakur ) ತಿಳಿಸಿದ್ದಾರೆ.
ರಾಜ್ಯಸಭೆಗೆ ಲಿಖಿತ ಉತ್ತರ ಮೂಲಕ ಮಾಹಿತಿ ನೀಡಿದ ಸಚಿವರು, ಭಾಷೆ, ಸಂಸ್ಕೃತಿ, ಪ್ರಾದೇಶಿಕತೆ, ಸ್ಥಳೀಯ ಮಾಹಿತಿ, ಸಂಪ್ರದಾಯಗಳಿಗೆ ಒತ್ತು ನೀಡುವ ಮೂಲಕ ಆಕಾಶವಾಣಿ ಜನರ ಮನದಲ್ಲಿ ಸ್ಥಾನ ಪಡೆದಿದೆ. ನಿರಂತರವಾಗಿ ಉತ್ತರ ಮಾಹಿತಿಯನ್ನು ನೀಡುವ ಮೂಲಕ ಶ್ರೋತೃಗಳಿಗೆ ಹತ್ತಿರವಾಗಿದೆ ಎಂದು ತಿಳಿಸಿದರು.

ಇದಲ್ಲದೇ ದೂರದರ್ಶನದ ಚಾನಲ್ಗಳು ಕೂಡ ಕಳೆದ ಕೆಲವು ವರ್ಷಗಳಿಂದ ಬಾರ್ಕ್ ರೇಟಿಂಗ್ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಪಡೆದುಕೊಂಡಿದೆ. ದೂರದರ್ಶನ ಎಂದಿಗೂ ಗುಣಮಟ್ಟದ ಹಾಗೂ ಖಚಿತ ಮಾಹಿತಿ ನೀಡುವ ಮೂಲಕ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಇದರ ಜಾಲ ಕೂಡ ಇಡೀ ದೇಶಾದ್ಯಂತ ಹರಡಿದೆ. ಅತ್ಯಾಧುನಿಕ ಗುಣಮಟ್ಟ ನೀಡಲು ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿವೆ ಎಂದು ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ಆನ್ಲೈನ್ ಬೆಟ್ಟಿಂಗ್ಗಳ ಕುರಿತ ಜಾಹಿರಾತುಗಳನ್ನು ಪ್ರಸಾರ ಮಾಡಬಾರದೆಂದು ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸಲಹೆ ನೀಡಿದೆ.
2019ರ ಗ್ರಾಹಕ ಸುರಕ್ಷಾ ಕಾಯ್ದೆ, 1995ರ ಕೇಬಲ್ ಮತ್ತು ಟೆಲಿವಿಷನ್ ಜಾಲ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ಪತ್ರಿಕಾ ಮಂಡಳಿ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಆನ್ಲೈನ್ ಬೆಟ್ಟಿಂಗ್ ಪ್ಲಾಟ್ಫಾರಂ ಕುರಿತ ಜಾಹಿರಾತುಗಳನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳಿಗೆ ಸೂಚನೆ ನೀಡಿರುವುದಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಸಿಂಗ್ ಠಾಕೂರ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಜನರಿಗೆ ತಪ್ಪು ಮಾಹಿತಿ ನೀಡುವ ಅಥವಾ ದಿಕ್ಕು ತಪ್ಪಿಸುವ ಆನ್ಲೈನ್ ಬೆಟ್ಟಿಂಗ್ ಜಾಹಿರಾತುಗಳನ್ನು ಪ್ರಕಟಿಸುವಂತಿಲ್ಲ ಎಂದು ಅವರು ಮೇಲ್ಮನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ಮಳೆ ಅವಾಂತರ | ನವಿಲೇಹಾಳಿನಲ್ಲಿ ನಾಲ್ಕು ಮನೆಗಳು ನೆಲಸಮ
-
ಕ್ರೀಡೆ6 days ago
ಕಾಮನ್ ವೆಲ್ತ್ ಕ್ರೀಡಾಕೂಟ ; ಪುರುಷರ 73 ಕೆ.ಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಅಚಿಂತಾ ಶೆಯಿಲಿಗೆ ಸ್ವರ್ಣ ಪದಕ
-
ನಿತ್ಯ ಭವಿಷ್ಯ7 days ago
ಸೋಮವಾರ ರಾಶಿ ಭವಿಷ್ಯ-ಆಗಸ್ಟ್-1,2022 : ಈ ರಾಶಿಯವರಿಗೆ ತುಂಬಾ ಇಷ್ಟಪಟ್ಟವರು ನಿಲುಕದ ನಕ್ಷತ್ರ!
-
ದಿನದ ಸುದ್ದಿ6 days ago
ಹರಿಯಾಣದ ಚಾಂಡಿಮಂದಿರದಲ್ಲಿ ಇಂದಿನಿಂದ ಇದೇ 20ರವರೆಗೆ ಭಾರತ – ವಿಯೆಟ್ನಾಂ ಸೇನಾ ಸಮರಾಭ್ಯಾಸ
-
ದಿನದ ಸುದ್ದಿ6 days ago
ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ; ಮೇಲ್ವಿಚಾರಣೆಗೆ ಕಾರ್ಯಪಡೆ ರಚನೆ
-
ಕ್ರೀಡೆ6 days ago
ಸೇಂಟ್ ಕಿಟ್ಸ್ ನಲ್ಲಿಂದು ಭಾರತ – ವೆಸ್ಟ್ ಇಂಡೀಸ್ ನಡುವಣ 2ನೇ ಟಿ-20 ಕ್ರಿಕೆಟ್ ಪಂದ್ಯ
-
ದಿನದ ಸುದ್ದಿ6 days ago
ಕೋಲಾರ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಇಂದು ಸಂಜೆ ಪ್ರತಿಭಟನೆ
-
ದಿನದ ಸುದ್ದಿ6 days ago
ಮಂಕಿಪಾಕ್ಸ್ ಕುರಿತಂತೆ ನಾಳೆ ಮಹತ್ವದ ಸಭೆ : ಸಿ.ಎಂ ಬಸವರಾಜ್ ಬೊಮ್ಮಾಯಿ