ರಾಜಕೀಯ
ಬಿಜೆಪಿಯೂ ಮತ್ತು ಭ್ರಷ್ಟಾಚಾರವೂ..!

- ಬಿಂದು ಗೌಡ
ಇತ್ತೀಚೆಗೆ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್ ಅವರನ್ನು ರಾಜಕೀಯ ದ್ವೇಷದಿಂದ 4 ದಿನಗಳ ವಿಚಾರಣೆ ನಡೆಸಿದ ಇಡಿ ಸಂಸ್ಥೆ ಬಂಧಿಸಿತು. ರಾಜ್ಯಾದಾದ್ಯಂತ ಪ್ರತಿಕಾರದ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಯಿತು ಈಗಲೂ ಪ್ರತಿಭಟನೆ ಮುಂದುವರೆದಿದೆ. ಈ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳಿಗೆ ಅವಾಚ್ಯ, ಅವಹೇಳನಕಾರಿ ಪದಗಳಿಂದ ನಿಂದಿಸಲು ಪ್ರೋತ್ಸಾಹ ನೀಡುವ ತನ್ನ ಪವಿತ್ರವಾದ ವೃತ್ತಿಗೆ ಅವಮಾನ ಮಾಡುವ ಮಹಿಳೆಯೊಬ್ಬರು ವಿಡಿಯೋ ಒಂದನ್ನು ಮಾಡಿದ್ದಾರೆ. ಅವರಿಗೆ ತಾವು ಸಮರ್ಥಿಸುವ ಬಿಜೆಪಿ ಪಕ್ಷದ ಎಡಿಯೂರಪ್ಪ ಬಂಧನವಾಗಿದ್ದು ಲೋಕಾಯುಕ್ತ ನ್ಯಾಯಾಲಯದಲ್ಲಿ ವಕೀಲರೊಬ್ಬರು CRPC ಸೆಕ್ಷನ್ 200 ರ ಪ್ರಕಾರ ಸಲ್ಲಿಸಿದ ಖಾಸಗಿ ದೂರನ್ನ ಆಧರಿಸಿ ಅಕ್ರಮ ಡಿನೋಟಿಫಿಕೇಷನ್ ಆರೋಪದಲ್ಲಿ ಎಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿದ್ದು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರೇ ಹೊರತು ಆಗಿನ UPA ಸರ್ಕಾರ ಅಲ್ಲ.
ಇನ್ನು ಆಧುನಿಕ ಕೃಷ್ಣ ದೇವರಾಯನ ಹಾಗೆ ಬಿಂಬಿಸಿಕೊಳ್ಳುತ್ತಿದ್ದ ಜನಾರ್ಧನ ರೆಡ್ಡಿ ಜೈಲಿಗೆ ಹೋಗಲು ಕಾರಣ ಅಂದಿನ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಹಾಗೂ ಪ್ರಾಮಾಣಿಕ ಅಧಿಕಾರಿ ಯು.ವಿ. ಸಿಂಗ್ ಅವರು ಅಕ್ರಮ ಗಣಿಗಾರಿಕೆ ವರದಿ ಆಧಾರದ ಮೇಲೆ ಲೋಕಾಯುಕ್ತ ಸಂಸ್ಥೆ ಪ್ರಕರಣ ದಾಖಲಿಸಿಕೊಂಡ ಕಾರಣ ರಾಜ್ಯದಲ್ಲಿ ಆಡಳಿತದಲ್ಲಿದ್ದಿದ್ದು ಬಿಜೆಪಿ ಸರ್ಕಾರ ಎಂಬುದನ್ನು ಮರೆಯಬೇಡಿ. ಇನ್ನೂ ಗಣಿಗಾರಿಕೆ ಕುರಿತು ವರದಿ ತಯಾರಿಸಲು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮತ್ತು ಯು.ವಿ ಸಿಂಗ್ ಇಬ್ಬರಿಗೂ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗಣಿ ಪ್ರದೇಶಗಳಿಗೆ ತೆರಳದಂತೆ ರೆಡ್ಡಿ ಅಂಡ್ ಟೀಮ್ ಜೀವ ಬೆದರಿಕೆ ಹಾಕಿದ್ದನ್ನು ಮರೆತು ಬಿಟ್ರ ಕ್ರಿಮಿನಲ್ ಗಳ ಸಮರ್ಥಕಿ. ಬೇಲೆಕೇರಿ ಬಂದರಿನಲ್ಲಿ ಲೋಕಾಯುಕ್ತ
ಮುಟ್ಟುಗೋಲು ಹಾಕಿಕೊಂಡಿದ್ದ 5 ಲಕ್ಷ ಮೆಟ್ರಿಕ್ ಟನ್ ಅದಿರನ್ನ ರಾತ್ರೋರಾತ್ರಿ ವಿದೇಶಕ್ಕೆ ಮಾರಿದ ಲೂಟಿಕೊರ ರೆಡ್ಡಿ ಗ್ಯಾಂಗ್ ವಿರುದ್ಧ CBI ತನಿಖೆ ಮಾಡದೆ ನೀವು ಮಾನಸಿಕ ಅಸ್ವಸ್ಥರಿಗೆ ಮಾಡಿದಂತೆ ಕರೆದು ಸನ್ಮಾನ ಮಾಡಬೇಕಿತ್ತ ವಕೀಲರೆ?
ಡಿಕೆಶಿ ರವರ ಮೇಲೆ ರೆಡ್ಡಿ ಮೇಲಿರುವ ಅರಣ್ಯ ಭೂಮಿಯನ್ನು ಬಗೆದು ಸರ್ವನಾಶ ಮಾಡಿದ ಗಂಭೀರ ಆರೋಪ ಇಲ್ಲ. ಎಡಿಯೂರಪ್ಪ ಹಾಗೂ ಜನತಾ ಬಜಾರ್ ಸೋಮಣ್ಣರಂತೆ ಸರ್ಕಾರಿ ಭೂಮಿಗಳನ್ನು ಕಬಳಿಸಿ ಡಿನೋಟಿಫಿಕೇಷನ್ ಮಾಡಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಆರೋಪ ಡಿಕೆಶಿ ಮೇಲೆ ಇಲ್ಲ.
ಅಂದು ಎಡ್ಡಿ , ರೆಡ್ಡಿ , ಸೋಮಣ್ಣ , KGF ಸಂಪಂಗಿ, ಕಟ್ಟ ಸುಬ್ರಮಣ್ಯ ನಾಯ್ಡು ಇವರೆಲ್ಲರನ್ನು ಕೇಂದ್ರದಲ್ಲಿ ಆಡಳಿತದಲ್ಲಿ ಇದ್ದ UPA ಸರ್ಕಾರ IT , ED , CBI ಸಂಸ್ಥೆಗಳನ್ನು ಈಗ ದುರುಪಯೋಗ ಮಾಡಿಕೊಂಡಂತೆ ಮಾಡಿ ಇವರನ್ನು ಜೈಲಿಗೆ ಪಾಲು ಮಾಡಿಲ್ಲ, ಬದಲಾಗಿ ನಮ್ಮ ರಾಜ್ಯದ ಪ್ರಾಮಾಣಿಕ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮತ್ತು ಲೋಕಾಯುಕ್ತ ನ್ಯಾಯಾಲಯದ ನ್ಯಾಯಮೂರ್ತಿಗಳು ಈ ಭ್ರಷ್ಟರನ್ನು ಜೈಲಿಗೆ ಕಳಿಸಿದ್ದು.
ಸಂತೋಷ್ ಹೆಗ್ಡೆ ವಿರುದ್ಧ ಪ್ರತಿಭಟನೆ ಮಾಡುವ ನೈತಿಕತೆ ನಿಮ್ಮ ಬಿಜೆಪಿಗರಿಗೆ ಇದೆಯೇ ?
ಇವತ್ತು ಡಿಕೆಶಿ ಅವರ ವಿಚಾರದಲ್ಲಿ ಅವರು ಮಾಡಿದ ಘೋರ ಅಪರಾಧ ನಿಮ್ಮ ಡಿಸಿಎಂ ಕಾರಜೋಳ ಹೇಳಿದಂತೆ ಗುಜುರಾತ್ ಶಾಸಕರನ್ನ ರಾಜ್ಯ ಸಭಾ ಚುನಾವಣೆ ವೇಳೆ ಬೆಂಗಳೂರಿನಲ್ಲಿ ಮೋದಿ ಮತ್ತು ಅಮಿತ್ ಶಾ ರವರ ಒತ್ತಡದಿಂದ ಬಚಾವ್ ಮಾಡಿದ್ದು. ರಾಜ್ಯದ ಶಾಸಕರನ್ನು ಮುಂಬೈನಲ್ಲಿ ಬಚ್ಚಿಟ್ಟಿದ್ದರ ವಿರುದ್ಧ ಬಂಡೆಯಂತೆ ಅಡ್ಡ ನಿಂತಿದ್ದು. ದೇಶದ ಸಂವಿಧಾನದ ಪ್ರಕಾರ ಆಸ್ತಿ ಮಾಡುವುದು ತಪ್ಪಲ್ಲ , ಅದೇ ಬಿಜೆಪಿ ಯ ಎಡ್ಡಿ ರೆಡ್ಡಿ ಗ್ಯಾಂಗ್ಗಳು ಮಾಡಿದಂತೆ ಸರ್ಕಾರದ ಬೊಕ್ಕಸವನ್ನು, ನೆಲದ ಸಂಪತ್ತನ್ನು ಲೂಟಿ ಮಾಡುವುದು ಅಪರಾಧ.
ನಿಂಬೆ ಹಣ್ಣು ಮಾರುತ್ತಿದ್ದ ಎಡ್ಡಿ , LIC ಏಜೆಂಟ್ ಆಗಿದ್ದ ಶೋಭಾ ಕರಂದ್ಲಾಜೆ , ಜನತಾ ಬಜಾರ್ ನ D ಗ್ರೂಪ್ ನೌಕರ ಸೋಮಣ್ಣ , ಇವರೆಲ್ಲ ಇವತ್ತು ಶಿಕ್ಷಣ ಸಂಸ್ಥೆಗಳನ್ನು , ಕಾಫಿ ತೋಟವನ್ನು ಕಾನೂನು ಪ್ರಕಾರ ಸಂಪಾದಿಸಿದ್ದ? ಭ್ರಷ್ಟಾಚಾರಿಗಳು ಇವತ್ತು ಹಗಲು ದರೋಡೆ ಮೂಲಕ ಬೇರೆ ಪಕ್ಷದ ಶಾಸಕರನ್ನು ಖರೀದಿಸಿ ಅಧಿಕಾರ ಹಿಡಿದಿದ್ದಾರೆ, ಮಂತ್ರಿ ಪದವಿ ಸಿಗದ ಕಾರಣಕ್ಕೆ ಶ್ರೀರಾಮುಲು , ಜಗದೀಶ್ ಶೆಟ್ಟರ್ ಬೆಂಬಲಿಗರು ಸಾರ್ವಜನಿಕರ ಆಸ್ತಿಯನ್ನ ಸುಟ್ಟು ಹಾಕಿದಾಗ ತಾವ್ಯಾಕೆ ಮೌನವಾಗಿ ಇದ್ದಿರಿ? ಮಹದಾಯಿ , ಕಾವೇರಿ , ರೈತರ ಮತ್ತು ನೆರೆ ಸಂತ್ರಸ್ತರ ಪರವಾಗಿ ಹೋರಾಟ ಮಾಡಿರುವುದು ಕಾಂಗ್ರೆಸ್ ಪಕ್ಷ ಮತ್ತು ಆ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದು ಇಲ್ಲಿನ ಪ್ರಾದೇಶಿಕ ಪಕ್ಷ JDS.
ಆದರೆ ಮಹದಾಯಿ ವಿಚಾರವನ್ನ ಮೋದಿ ಬಗೆಹರಿಸಲಿಲ್ಲ. ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲಿಲ್ಲ ಆದರೂ ತಾವೆಲ್ಲ ಮೋದಿ ಭಜನೆ ಮಾಡುವುದನ್ನ ನಿಲ್ಲಿಸಲಿಲ್ಲ, ರಾಜ್ಯದ ಹಿತಾಸಕ್ತಿಗೆ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಸದಾಕಾಲ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಕೆಶಿ ಮೇಲೆ ಕೇಂದ್ರ ಸರ್ಕಾರ ದ್ವೇಷದಿಂದ IT ಮತ್ತು ED ಇಲಾಖೆಯನ್ನು ಬಳಸಿಕೊಳ್ಳುತ್ತಿದೆ. 8 ಕೋಟಿ ಸಿಕ್ಕಿದ್ರೆ ಅದರ ಆದಾಯದ ಮೂಲವನ್ನು ಪರಿಶೀಲಿಸಿ ಅಕ್ರಮ ಕಂಡು ಬಂದ್ರೆ ದಂಡ ವಿಧಿಸಬಹುದು, ಅದನ್ನ ಬಿಟ್ಟು ಜೈಲಲ್ಲಿ ಇಟ್ಟು ಮುಂಬರುವ ಉಪ ಚುನಾವಣೆಯಲ್ಲಿ ಅವರು ಪಕ್ಷದ ಪರ ಕೆಲಸ ಮಾಡಬಾರದೆನ್ನುವ ದುರುದ್ದೇಶ ಇದರ ಹಿಂದೆ ಇದೆ.
ಒಟ್ಟಾರೆ ಭ್ರಷ್ಟರಾದ ಬಿಜೆಪಿಯ ಬೆಂಬಲಿಗರೇ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದು ಹಾಸ್ಯಾಸ್ಪದ. ಬ್ಲೂ ಫಿಲ್ಮ್ ನೋಡಿದವರು DCM , 800 ಕೋಟಿ ಬಿಬಿಎಂಪಿ ಹಗರಣ ಮಾಡಿದ ಅಶ್ವಥ್ ನಾರಾಯಣ್ ಮತ್ತೊಬ್ಬ ಡಿಸಿಎಂ , ಸರ್ಕಾರಿ ಜಮೀನು ಡಿನೋಟಿಫಿಕೇಷನ್ ಮೂಲಕ ಕಬಳಿಸಿದ ಮತ್ತೊಬ್ಬ ಮಹಾನ್ ಭ್ರಷ್ಟ ರಾಜ್ಯದ ಮುಖ್ಯಮಂತ್ರಿ ಇಂತವರನ್ನ ನಿಮ್ಮ ಮೋದಿ ಅಧಿಕಾರದಿಂದ ಹೊರ ಇಟ್ಟು ನೈತಿಕತೆ ತೋರಿಸಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
