ದಿನದ ಸುದ್ದಿ
ಶಿವಮೊಗ್ಗ | ಸಹ್ಯಾದ್ರಿ ಉತ್ಸವಕ್ಕೆ ಸಂಭ್ರಮದ ಚಾಲನೆ
ಸುದ್ದಿದಿನ,ಶಿವಮೊಗ್ಗ: ಸಾಂಸ್ಕøತಿಕ ಚಟುವಟಿಕೆಗಳಿಗೆ ಪ್ರಾಮುಖ್ಯತೆ ದೊರೆಯುವಂತಹ ಪಠ್ಯಕ್ರಮ ಮತ್ತು ಶಿಕ್ಷಣ ಪದ್ಧತಿಯನ್ನು ಭಾರತದಲ್ಲಿಯೂ ಆರಂಭಿಸಿದಲ್ಲಿ ನಮ್ಮ ಸ್ಥಳೀಯ ಸಂಸ್ಕøತಿ ಉಳಿಸಿ ಬೆಳಸಲು ಸಾಧ್ಯ ಎಂದು ನಟಿ ಮಾನ್ವಿತಾ ಕಾಮತ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಪಠ್ಯೇತರ ಚಟುವಟಿಕೆಗಳ ಘಟಕವು ಅಕ್ಟೋಬರ್ 03ರಿಂದ 5ರವರೆಗೆ ಮೂರು ದಿನಗಳ ಕಾಲ ಆಯೋಜಿಸಿರುವ ಅಂತರ್-ಕಾಲೇಜುಗಳ ಸಾಂಸ್ಕøತಿಕ ಸ್ಪರ್ಧೆ ಸಹ್ಯಾದ್ರಿ ಉತ್ಸವ 2019ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಕೇವಲ ಪಠ್ಯಾಧರಿತ ಶಿಕ್ಷಣವೇ ಮಹತ್ವ ಪಡೆಯುತ್ತಿದ್ದು, ನಮ್ಮ ನೆಲದ ಸಂಸ್ಕøತಿ ಉಳಿಸಲು ಇದು ಬದಲಾಗುವುದು ಅಗತ್ಯ ಎಂದರು.
ಪ್ರತಿಯೊಬ್ಬ ವ್ಯಕ್ತಿಯೂ ಸ್ವಂತ ಕನಸಿನ ಮೂಲಕ ಗುರಿ ನಿರ್ಧರಿಸಿಕೊಳ್ಳಬೇಕು. ದೃಡತೆಯೊಂದಿಗೆ ಈ ಹಾದಿಯಲ್ಲಿ ನಡೆಯುವಾಗ ಆಧುನಿಕ ಸವಲತ್ತುಗಳಾದ ಜಾಲತಾಣಗಳು, ಮೊಬೈಲ್ವ್ಯಸನ, ಪಬ್ಜಿಯಂತಹ ಅಲ್ಪಕಾಲದ ಆಕರ್ಷಣೆಗಳಿಂದ ವಿಚಲಿತರಾಗದೇ ಮುನ್ನಡೆದಲ್ಲಿ ಮಾತ್ರ ಗುರಿ ತಲುಪುವುದು ಸಾಧ್ಯ. ಎಂದು ವಿದ್ಯಾರ್ಥಿಗಳಿಗೆ ಸಲಹೆಯಿತ್ತರು.
ಮಲೆನಾಡಿನ ಸೊಗಡಿರುವ ಇಲ್ಲಿನ ವಿದ್ಯಾರ್ಥಿಗಳಲ್ಲಿ ನಗರದವರಿಗಿಂತ ಉತ್ತಮ ಸಂಸ್ಕøತಿ, ಸಾಂಸ್ಕøತಿಕ ಅರಿವು ಇದೆ ಹಾಗೂ ಸಾಧನೆಯ ಹಾದಿಯಲ್ಲಿ ಆಕರ್ಷಣೆಗಳ ಅಡ್ಡಿಗಳಿಲ್ಲದಿರುವುದು ಖುಷಿ ತರುವ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಮಾತನಾಡಿ, ಸಾಂಸ್ಕøತಿಕ ಚಟುವಟಿಕೆಗಳು ಪಠ್ಯ ಚಟುವಟಿಕೆಗಳಷ್ಟೇ ಮುಖ್ಯ. ಮಲೆನಾಡಿನ ಸಂಸ್ಕøತಿಯ ಅನಾವರಣಕ್ಕೆ ವಿದ್ಯಾರ್ಥಿಗಳಿಗೆ ಮಹತ್ತರ ವೇದಿಕೆಯಾಗಿ ಉತ್ಸವವು ಕಾರ್ಯನಿರ್ವಹಿಸುತ್ತದೆ. ಉತ್ತಮ ಧ್ಯೇಯೋದ್ದೇಶಗಳೊಂದಿಗೆ ಮುನ್ನಡೆವ ವಿದ್ಯಾರ್ಥಿಗಳಿಗೆ ವಿವಿ ಎಲ್ಲ ಸಹಕಾರ ನೀಡಲಿದೆ ಎಂದು ಅವರು ತಿಳಿಸಿದರು.
ಹಳೆಯ ಘಟಿಕೋತ್ಸವ ಸಭಾಂಗಣದಲ್ಲಿ ನಡೆದ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಎಸ್.ಎಸ್. ಪಾಟೀಲ್, ಪ್ರೊ. ವೆಂಕಟೇಶ್ವರುಲು, ಪ್ರೊ. ಹಿರೇಮಣಿನಾಯ್ಕ್, ಡಾ. ಮಂಜುನಾಥ್ ಹಾಗೂ ವಿವಿಧ ಕಾಲೇಜುಗಳ ಸಾವಿರಕ್ಕೂ ಅಧಿಕ ಸ್ಪರ್ಧಾಳುಗಳು ಹಾಜರಿದ್ದರು.
ಉತ್ಸವದಲ್ಲಿ ಸುಮಾರು 60 ಕಾಲೇಜುಗಳು ಭಾಗವಹಿಸಿದ್ದು, ಜಾನಪದ ನೃತ್ಯ, ಏಕಾಂಕ ನಾಟಕ, ಗಾಯನ, ಮಿಮಿಕ್ರಿ ಸೇರಿದಂತೆ 23 ವಿವಿಧ ಸಾಂಸ್ಕøತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ. ಇವರೆಲ್ಲರಿಗೂ ವಿಶೇಷ ಭೋಜನ ಹಾಗೂ ವಸತಿಯ ಸೌಲಭ್ಯವನ್ನು ವಿವಿಯು ಕಲ್ಪಿಸಿದೆ.
ಭಾಷೆ, ಸಂಸ್ಕøತಿ, ಸಮಸ್ಯೆಗಳನ್ನು ತೆರೆದಿಟ್ಟ ಪಥಸಂಚಲನ
ಕುವೆಂಪು ವಿಶ್ವವಿದ್ಯಾಲಯದ ಅಂತರಕಾಲೇಜುಗಳ ಸಾಂಸ್ಕøತಿಕ ಸ್ಪರ್ಧೆ ಸಹ್ಯಾದ್ರಿ ಉತ್ಸವ 2019ರ ಉದ್ಘಾಟನೆಗೂ ಮುನ್ನ ಭಾಗವಹಿಸಲು ಆಗಮಿಸಿದ ತಂಡಗಳ ಪಥಸಂಚಲನ ಜಾಥಾ ನಡೆದಿದ್ದು, ನಟಿ ಮಾನ್ವಿತಾ ಮತ್ತು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಚಾಲನೆ ನೀಡಿದರು.
39 ಕಾಲೇಜುಗಳ ಪಾಲ್ಗೊಂಡ ಪಥಸಂಚಲನದಲ್ಲಿ ವೈವಿಧ್ಯಮಯ ವೇಷಭೂಷಣಗಳೊಂದಿಗೆ ಪಾಲ್ಗೊಂಡು ಉತ್ಸವಕ್ಕೆ ಮೆರಗು ನೀಡುವ ಜೊತೆಗೆ ಭಾಷೆ, ಮಲೆನಾಡ ಸಂಸ್ಕøತಿ, ಸೇನೆ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಮತ್ತು ಶಂಕರಘಟ್ಟ, ತಾವರಘಟ್ಟ ಜನರೆದುರು ತೆರೆದಿಟ್ಟರು.
ದೇವರು: ವಿಶ್ವವಿದ್ಯಾಲಯ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ನವದುರ್ಗೆಯ ವೇಷವನ್ನು ಧರಿಸಿ ನೆರೆದವರಲ್ಲಿ ಭಕ್ತಿರಸ ಮೂಡುವಂತೆ ಮಾಡಿದರೆ, ರಿಪ್ಪನ್ಪೇಟೆ ಜಿ.ಎಫ್.ಜಿ.ಸಿ. ವಿದ್ಯಾರ್ಥಿಗಳು ದೇವನೊಬ್ಬ ನಾಮಹಲವು ಎಂಬ ಸಂದೇಶ ಸಾರುವ ಚಿತ್ರ ಫಲಕಗಳನ್ನು ತೋರಿದರು. ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಚಾಮುಂಡೇಶ್ವರಿ ತಾಯಿ ಮತ್ತು ಅಂಬಾರಿಯ ಪ್ರತಿಕೃತಿ ಪ್ರದರ್ಶಿಸಿ ಅದ್ಧೂರಿತನ ಮೆರೆದರು.
ಸಂಸ್ಕøತಿ: ಶಿಕಾರಿಪುರದ ಜಿ.ಎಫ್.ಜಿ.ಸಿ. ವಿದ್ಯಾರ್ಥಿಗಳು ವಿಶ್ವಮಾನವ ರಥದೊಂದಿಗೆ ಪೂರ್ಣಕುಂಭ ಮತ್ತು ಡೊಳ್ಳು ಕುಣಿತ ಪ್ರದರ್ಶನ ನೀಡಿದರು. ಶಿರಾಳಕೊಪ್ಪ ಜಿ.ಎಫ್.ಜಿ.ಸಿ. ವಿದ್ಯಾರ್ಥಿಗಳು ಕಾಡುಜನರ ವೇಷಭೂಷಣ ಮತ್ತು ಕೋಲ ನೃತ್ಯ ಪ್ರಸ್ತುತಪಡಿಸಿದರು. ವಿವಿಧತೆ ಮತ್ತು ಶಿವಮೊಗ್ಗದ ಡಿ.ವಿ.ಎಸ್ ಕಾಲೇಜು ವಿದ್ಯಾರ್ಥಿಗಳು ಭಾರತದ ಎಲ್ಲ ರಾಜ್ಯಗಳ ವೇಷಭೂಷಣದೊಂದೆಗೆ ವಿವಿಧತೆಯಲ್ಲಿ ಏಕತೆ ಎಂಬ ಭಾರತದ ಸಂದೇಶ ಸಾರಿದರು. ಸರ್ಕಾರಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು ಕೊಡಗಲಸರ ತಂಡದವರು ದಕ್ಷಿಣ ಕನ್ನಡ ಸಂಸ್ಕøತಿಯಾದ ಯಕ್ಷಗಾನ, ಕೋ¯, ಹುಲಿಕುಣಿತ, ಕೊರಗಜ್ಜ ನೃತ್ಯ ನೋಡುಗರ ಗಮನ ಸೆಳೆದರು.
ಕಳಸ ಪ್ರಥಮ ದರ್ಜೆ ಕಾಲೇಜಿನವರು ದೇಶ ಕಾಯುವ ಯೋಧರ ವೇಷಭೂಷಣ ಹಾಗೂ ಸೈನಿಕ ಆಭಿನಂದನ್ನೊಡನೆ ಯುದ್ಧ ವಿಮಾನದ ಮಾದರಿಯೊಂದಿಗೆ ಶಿಸ್ತಿನಿಂದ ಹೆಜ್ಜೆ ಹಾಕಿದ್ದು ಸೈನಿಕರ ಬಗ್ಗೆ ಗೌರವ ಭಾವವನ್ನು ತರಿಸುವಂತಿತ್ತು.
ಸುರಕ್ಷತೆ: ಶಿವಮೊಗ್ಗದ ಮೈತ್ರಿ ಕಾಲೇಜಿನ ವಿದ್ಯಾರ್ಥಿನಿಯರು ರಸ್ತೆ ಸುರಕ್ಷತೆ ಸಂಬಂಧಿ ಭಿತ್ತಿಚಿತ್ರ ಹಾಗೂ ಸುರಕ್ಷತಾ ಕ್ರಮಗಳ ಅಣಕು ಪ್ರದರ್ಶನ ನೀಡಿದರು. ಚಿಕ್ಕಮಗಳೂರಿನ ಸಂತ ಜೋಸೆಫರ ಕಾಲೇಜು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಿಂದ ಆಗುತ್ತಿರುವ ತೊಂದರೆ ಹಾಗೂ ಅಧ್ಯಯನ ಪ್ರವೃತ್ತಿ ಕೊರತೆ ಬಗ್ಗೆ ಫಲಕಗಳು ಹಾಗೂ ಪುಸ್ತಕದ ಶವಯಾತ್ರೆ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ರೈತ, ವಿದ್ಯಾರ್ಥಿ ಮತ್ತು ಭಾಷಾ ಸಮಸ್ಯೆ: ನೆರೆ-ಬರಗಳಿಂದಾಗಿ ರೊಸಿಹೋದ ರೈತ ಹೇಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬ ವಿಷಯ ಕುರಿತು ರೈತನ ಅಣುಕು ಶವಯಾತ್ರೆಯನ್ನು ಪ್ರದರ್ಶಿಸಿ ಸಂಕಷ್ಟ ತಿಳಿಸಿದರು.
ಚಿಕ್ಕಮಗಳೂರಿನ ಸೆಂಟ್ ಜೋಸೆಫ್ ಕಾಲೇಜ್ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಪುಸ್ತಕ ಸಂಸ್ಕøತಿ ಸಾಯುತ್ತಿದೆ ಎಂದು ಪುಸ್ತಕದ ಶವಯಾತ್ರೆ ಹಾಗೂ ಫಲಕಸಹಿತ ವೇಷಭೂಷಣಗಳನ್ನು ಧರಿಸಿ ಜಾಗೃತಿ ಮೂಡಿಸಿದರು.
ಕುವೆಂಪು ಶತಮಾನೋತ್ಸವ ಶಿವಮೊಗ್ಗದ ವಿದ್ಯಾರ್ಥಿಗಳು ಕನ್ನಡದ ಮೇಲೆ ಇತರೆ ಭಾಷೆ ಮತ್ತು ಸಂಸ್ಕøತಿಗಳಿಂದಾಗುತ್ತಿರುವ ದಬ್ಬಾಳಿಕೆ ಮತ್ತು ರಕ್ಷಣೆ ಕುರಿತು ಕನ್ನಡಾಂಬೆಯ ರಕ್ಷಣೆ ಹಾಗೂ ಅದರ ಪರಿಹಾರವಾಗಿ ಕರ್ನಾಟಕದ ಶಿಕ್ಷಣ ವ್ಯವಸ್ಥೆ, ಕಾಲೇಜು ಮತ್ತು ವಿವಿಗಳ ಮಾಹಿತಿ ಮತ್ತು ಚಿತ್ರಗಳನ್ನು ಪ್ರದರ್ಶಿಸಿದರು.
ಇದಲ್ಲದೇ ಪಥಸಂಚಲನದಲ್ಲಿ ಡೊಳ್ಳುಕುಣಿತ, ಹೆಣ್ಣುಮಕ್ಕಳ ವೀರಗಾಸೆ, ಕಾಡುಜನರ ನೃತ್ಯ, ಹಳ್ಳಿಜನರ ಕಂಬಳಿ ಸೊಬಗು, ಸ್ಮಶಾನ ಕಾಯುವ ವೇಷ, ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಮುಂತಾದ ವಿಷಯಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳು ನೋಡುಗರಲ್ಲಿ ಸಂಸ್ಕøತಿ ಮತ್ತು ಸಮಸ್ಯೆಗಳೆರಡರ ಅರಿವು ಮೂಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
