ದಿನದ ಸುದ್ದಿ
ಮೈಸೂರು ಭಾಗದ ಜನಪದರು ಹೇಳುವಂತೆ ‘ನವರಾತ್ರಿ ಆಯುಧ ಪೂಜೆ ದಸರಾ ಗುಪ್ತ ಹಿನ್ನಲೆ’..!

- ಹ.ರಾ.ಮಹಿಶ
ಆರ್ಯ ವೈದಿಕ ಬ್ರಾಹ್ಮಣ ಪುರುಷರು ನಡೆಸುತ್ತಿದ್ದ “ಗೋಯಜ್ಞ”ಗಳಿಂದ ಬೇಸಾಯ ಯೋಗ್ಯವಾಗಿರುತ್ತಿದ್ದ ಸಾವಿರಾರು ಗೋವುಗಳು ನಿತ್ಯವೂ ಬಲಿಯಾಗುತ್ತಿದ್ದವು..! ಎಷ್ಟೆಂದರೆ ಬರುಬರುತ್ತಾ ಹೊಲಗದ್ದೆಗಳಲ್ಲಿ ಒಕ್ಕಲುತನ ಮಾಡುವ ಒಕ್ಕಲಿಗ ರೈತರಿಗೆ ಉಳಲು ಬಿತ್ತಲು ಮತ್ತು ಗಾಡಿಗೆ ಕಟ್ಟಲು ದನಗಳೇ ಸಿಗದಷ್ಟು ಗೋವುಗಳನ್ನು ಯಜ್ಞದ ಹೆಸರಿನಲ್ಲಿ ತಿಂದುಹಾಕುತ್ತಿದ್ದರು..! ಒಕ್ಕಲಿಗರು ತಮ್ಮ ರಾಜನಾದ ಮಹಿಶನಿಗೆ ಈ ಕುರಿತು ದೂರನ್ನು ನೀಡಿ ತಮ್ಮ ಅಳಲನ್ನು ತೋಡಿಕೊಂಡರು. ರೈತಪರನಾದ ಮಹಿಶಮಹಾರಾಜರು ಪ್ರಾಣಿಗಳ ಮಾರಣಹೋಮವಾಗುತ್ತಿದ್ದ ಯಜ್ಞಯಾಗಗಳನ್ನು ನಿಷೇಧಿಸಿದರು. ಮತ್ತು ಬ್ರಾಹ್ಮಣಪುರುಷರು ಹೊಟ್ಟೆಪಾಡಿಗಾಗಿ ಬೇರೇನಾದರೂ ನ್ಯಾಯಯುತವಾದ ಮಾರ್ಗದಿಂದ ದುಡಿದು ತಿನ್ನುವಂತೆ ಅಪ್ಪಣೆ ಹೊರಡಿಸಿದರು. ನಾಡಿನರೈತರು ಸಮಾಧಾಮದಿಂದ ನಿಟ್ಟುಸಿರು ಬಿಟ್ಟರು..!
ಮುಗ್ಧಜನರ ಮೆದುಳಿಗೆ ಮೌಢ್ಯ ತುಂಬಿ ತೊಟ್ಟು ಬೆವರುಸುರಿಸದೆ ನಿರಾಯಾಸವಾಗಿ ಬದುಕಿಕೊಂಡಿದ್ದ ಆರ್ಯವೈದಿಕ ಬ್ರಾಹ್ಮಣ ಪುರುಷರು ಇದರಿಂದ ಕುದಿಕುದಿದುಕುಪಿತಗೊಂಡರು..! ತಮ್ಮ ಹೊಟ್ಟೆಯ ಮೇಲೆ ಹೊಡೆದ ಮಹಿಶಾಸುರ ಮಹಾರಾಜನನ್ನು ಕೊಲ್ಲಲು ತೀರ್ಮಾನಿಸಿದರು..! ಸ್ವತಃ ಮಹಾಶೂರಧೀರ ಮಹಾಧೈತ್ಯದಾನವನಾದ ಮತ್ತು ಸದಾ ಅಂಗರಕ್ಷಕರೊಂದಿಗಿರುವ ಮಹಾರಾಜರನ್ನು ಕೊಲ್ಲುವುದು ಅಷ್ಟು ಸುಲಭಸಾಧ್ಯವಾಗಿರಲಿಲ್ಲ. ಅಗ್ರಹಾರದೊಳಗೆ ಒಂಭತ್ತು ರಾತ್ರಿಗಳು ರಾಜನನ್ನು ಶಕ್ತಿಯಿಂದಲ್ಲದೆ ಯುಕ್ತಿಯಿಂದ ಕೊಲ್ಲುವುದು ಹೇಗೆಂದು ಗುಪ್ತಸಭೆ ಚರ್ಚೆಗಳು ನಡೆದವು ಅದರ ನೆನಪಿಗೇ ಇಂದು ನವರಾತ್ರಿ(ಒಂಭತ್ತು ರಾತ್ರಿ) ಆಚರಣೆ..!!
ಮಹಿಶಾಸುರನ ಕುಟುಂಬಕ್ಕೆ ನಂಬುಗೆಯ ಆಪ್ತಳಾಗಿದ್ದ ಚಾಮುಂಡಿ ಎಂಬ ಮಹಿಳೆಯಿಂದ ಅಂಗರಕ್ಷರಿಲ್ಲದ ಬೆಳಗಿನ ಸೂರ್ಯನಮಸ್ಕಾರದ ವೇಳೆ ಹಾಲಿಗೆ ಮತ್ತು ಬರುವ ವಿಷಬೆರೆಸಿ ಕುಡಿಸುವಂತೆಯೂ ಹಿಂದಿನರಾತ್ರಿಯೇ ನದೀತೀರದಲ್ಲಿ ಕತ್ತಲಿನಲ್ಲಿ ಸುತ್ತಲೂ ಬಗೆಬಗೆ ಆಯುಧಸಮೇತ ಅವಿತು ಕೂತು ಮೂರ್ಛೆಗೊಂಡ ಮಹಿಷನನ್ನು ಕೊಚ್ಚಿ ಕೊಲ್ಲುವಂತೆಯೂ ಈ ಮಹಾಕಾರ್ಯಕ್ಕಾಗಿ ಚಾಮುಂಡಿಯನ್ನು ದೇವತೆಯಂತೆ ಬಿಂಬಿಸಿ ರಾಣಿಯಾಗಿ ಮಾಡುವುದಾಗಿಯೂ ಗುಪ್ತ ಒಪ್ಪಂದವಾಯಿತು..! ಹಾಗಾಗಿ ಆ ಹಿಂದಿನ ರಾತ್ರಿಯೇ ಅಗ್ರಹಾರದಲ್ಲಿದ್ದ ಬ್ರಾಹ್ಮಣರ ಮನೆಯ ಆಯುಧಗಳು ಮಹಿಶಾಸುರನನ್ನು ಕೊಲ್ಲಲು ಪೂರಕವಾಗಿ ಪೂಜೆಗೊಳಗಾದವು..! ಅದರ ನೆನಪಿಗೇ “ಆಯುಧಪೂಜೆ” ಆಚರಣೆ..!!
ಬ್ರಾಹ್ಮಣರ ಮತ್ತು ಚಾಮುಂಡಿ ನಡುವಿನ ಗುಪ್ತಯೋಜನೆಯಂತೆ ಮರುದಿನ ಮುಂಜಾನೆಯೇ ಮಹಿಷಾಸುರಮಹಾರಾಜರನ್ನು ಮೋಸದಿಂದ ಕ್ರೂರವಾಗಿ ಕೊಲ್ಲಲಾಯಿತು..! ರೈತರು ಜನಸಾಮಾನ್ಯ ಪ್ರಜೆಗಳು ತಮ್ಮ ಪ್ರಜಾಪಿತರಾಜರನ್ನು ಕಳೆದುಕೊಂಡು ಅನಾಥರಾದರು..!
ಬ್ರಾಹ್ಮಣರು ವಿಜಯ ಸಾಧಿಸಿದರು. ಆ ಹತ್ತನೇ(ದಶ)ದಿನದ ವಿಜಯ ನೆನಪೇ ಮೈಸೂರು ‘ದಸ’ರಾ..!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ಮನದೀಪ್ ರಾಯ್ ನಿಧನ

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್ ರಾಯ್ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.
ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್ ರಾಯ್ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243
