Connect with us

ದಿನದ ಸುದ್ದಿ

ನಿರುದ್ಯೋಗಿ ‘ಎಸ್‌.ಎಂ.ಕೆ’ ಗೆ ಕೆಲ್ಸ ಕೊಡಿ..!

Published

on

17 ಮಂದಿಬುದ್ಧಿವಂತ’ರಿಂದ ರಾಜಿನಾಮೆ ಕೊಡಿಸಿ ಮೈತ್ರಿ ಸರ್ಕಾರ ಕಿತ್ತುಹಾಕುವ ‘ಪುಣ್ಯ’ದ ಕೆಲಸದಲ್ಲಿ ಎಸ್ಸೆಂರವರು ತಮ್ಮ ಪಾತ್ರವನ್ನು ತಾವೇ ಕೊಂಡಾಡಿದ್ದಾರೆ.ಇವರಈ ಅನುಭವಕ್ಕೆ ಈಗ ಮಹಾರಾಷ್ಟ್ರದಲ್ಲಿ ಬಹಳ ಬೇಡಿಕೆ ಇರಬಹುದು.ಆದರೆಇಲ್ಲಿಕರ್ನಾಟಕದ 17 ಮತಕ್ಷೇತ್ರಗಳಲ್ಲಿ ಮತದಾನಮಾಡಲು ಸಜ್ಜಾಗುತ್ತಿರುವ ಪ್ರಜ್ಞಾವಂತ ಮತದಾರರು ಕೃಷ್ಣರವರ ಮಾತುಗಳಿಂದ ಪ್ರಜ್ಞಾಹೀನರಾಗದೆಜವಾಬ್ದಾರಿಯಿಂದ ಮತದಾನ ಮಾಡಬೇಕೆಂದು ಮನವಿ ಮಾಡುತ್ತೇವೆ.

ಕರ್ನಾಟಕದ 17 ಮಂದಿ ‘ಬುದ್ಧಿವಂತ ಶಾಸಕರ ರಾಜಿನಾಮೆ ಕೊಡಿಸುವುದರಲ್ಲಿ ನನ್ನ ಪಾತ್ರವೂ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣಹೇಳಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.ಇದು ನಿಜವೇ ಆಗಿದ್ದರೆ ಅವರನ್ನು ಬಿಜೆಪಿ ಪಕ್ಷದವರು ತುರ್ತಾಗಿ ಮಹಾರಾಷ್ಟ್ರಕ್ಕೆ ಕಳುಹಿಸುವುದುಒಳ್ಳೆಯದು. ಕಾಂಗ್ರೆಸ್‌ನಲ್ಲಿದ್ದು ಪಡೆಯ ಬಹುದಾದ ಎಲ್ಲ ಸ್ಥಾನಮಾನ, ಅಧಿಕಾರ ಅಂತಸ್ತು ಪಡೆದುಅವರು ಅವೆಲ್ಲವನ್ನು ಮತ್ತೆ ಎರಡನೇ ಬಾರಿಗೆ ಪಡೆಯಲು ಸಾಧ್ಯವೇ ಎಂದು ಪರೀಕ್ಷೆ ಮಾಡಲುಕಮಲದ ಪಾರ್ಟಿಗೆ ಬಂದಿರುವ ಹಿರಿಯ ರಾಜಕೀಯ ಮುತ್ಸದ್ಧಿಗೆ ಕಂಪೆನಿ ಮಾಲೀಕರಾದ ಮೋದಿಶಾ ರಿಂದ ಇನ್ನೂ ಏನೂ ಸಿಕ್ಕಂತೆ ಕಾಣುವುದಿಲ್ಲ. ಹಾಗಾಗಿ ಕೃಷ್ಣರವರು ಆ ಎರಡು ಹೆಡೆಯನಾಯಕತ್ವದ ಗಮನ ಸೆಳೆಯಲು ಆಗಾಗ ಹೀಗೆ ಅರಚುತ್ತಿರುತ್ತಾರೆ.

ಇತ್ತೀಚೆಗೆ ಕರ್ನಾಟಕದಲ್ಲಿ ಒಂದು ಪ್ರವೃತ್ತಿ ಆರಂಭವಾಗಿದೆ. ಹಗರಣಗಳಲ್ಲಿ ಹೆಸರು ಪಡೆದಬಿಜೆಪಿಯೇತರ ರಾಜಕಾರಣಿಗಳು ಏಕಾಏಕಿಯಾಗಿ ಬಿಜೆಪಿ ಸೇರುತ್ತಿದ್ದಾರೆ. ಐಟಿ, ಇಡಿ ಇಲಾಖಾದಾಳಿಗಳಿಗೆ ಹೆದರಿ ಅವರು ಹೀಗೆ ಮಾಡುತ್ತಿರಬಹುದೇ ಎಂದು ಜನ ಅನುಮಾನ ಪಡುತ್ತಿದ್ದಾರೆ.ಕೃಷ್ಣಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಯಾಕಿರಬಹುದು ಎಂದು ಪ್ರಶ್ನಿಸುತ್ತಾರೆ.

2018 ರ ಕರ್ನಾಟಕದ ಪರಿಸ್ಥಿತಿ ಈಗ ಮಹಾರಾಷ್ಟ್ರದಲ್ಲಿದೆ. ಅಲ್ಲೊಂದು ಮೈತ್ರಿ ಸರ್ಕಾರಅಧಿಕಾರಕ್ಕೆ ಬಂದಿದೆ. ಎಸ್ಸೆಂ ಕೃಷ್ಣರವರ ವಿಶ್ಲೇಷಣೆ ಪ್ರಕಾರ ನೋಡುವುದಾದರೆ ಮಹಾರಾಷ್ಟ್ರದಲ್ಲೂಕರ್ನಾಟಕದಂತಹ ಅನಿಷ್ಟಪರಿಸ್ಥಿತಿ ನಿರ್ಮಾಣವಾಗಿದೆ. ಪರಸ್ಪರ ದೂಷಣೆ ಮಾಡಿಕೊಂಡಪಕ್ಷಗಳು ಸೇರಿಕೊಂಡು ಸರ್ಕಾರ ರಚಿಸಿವೆ. ದೊಡ್ಡ ಪಕ್ಷವಾಗಿ ಬಿಜೆಪಿಹೊರಹೊಮ್ಮುವಂತಾಗಿದ್ದರೂ ಬಿಜೆಪಿಗೆ ಅಧಿಕಾರ ದಕ್ಕಿಲ್ಲ. ಕೃಷ್ಣರವರ ಪ್ರಕಾರ ಇದೊಂದು ಅನಿಷ್ಟ ಪರಿಸ್ಥಿತಿ!.

ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಉರಳಿಸುವುದರಲ್ಲಿ ಬಿಜೆಪಿಯ ಪಾತ್ರ ಈಗಾಗಲೇಪ್ರಕಟಗೊಂಡಿದೆ,ಖಾತ್ರಿಯಾಗಿದೆ.ಎಸ್ಸೆಂರವರ ಹೇಳಿಕೆ ಇನ್ನೊಂದು ಬಲವಾದ ಸಾಕ್ಷಿಯನ್ನುಒದಗಿಸಿದೆ. 17 ಮಂದಿಬುದ್ಧಿವಂತರಿಂದ ರಾಜಿನಾಮೆ ಕೊಡಿಸಿ ಮೈತ್ರಿ ಸರ್ಕಾರ ಕಿತ್ತುಹಾಕುವ‘ಪುಣ್ಯ’ದ ಕೆಲಸದಲ್ಲಿ ಎಸ್ಸೆಂರವರು ತಮ್ಮ ಪಾತ್ರವನ್ನು ತಾವೇ ಕೊಂಡಾಡಿದ್ದಾರೆ. ಹೀಗೆ ಅಕ್ರಮವಾಗಿಸರ್ಕಾರಗಳನ್ನು ಉರುಳಿಸುವುದರಲ್ಲಿ ತಾವು ಪರಿಣಿತರು ಎಂದು ಎಸ್ಸೆಂ ಒಪ್ಪಿಕೊಂಡಿದ್ದಾರೆ. ಇವರಅನುಭವಕ್ಕೆ ಈಗ ಮಹಾರಾಷ್ಟ್ರದಲ್ಲಿ ಬಹಳ ಬೇಡಿಕೆ ಇರಬಹುದು. ಇವರನ್ನು ಬಿಜೆಪಿಯವರುಆದಷ್ಟುಬೇಗ ಮಹಾರಾಷ್ಟ್ರಕ್ಕೆ ರಫ್ತು ಮಾಡುವುದು ಅವರಿಗೂ ಕರ್ನಾಟಕಕ್ಕೂ ಶ್ರೇಯಸ್ಕರ! ಆನಂತರ ಅವರು ‘ಮಹಾರಾಷ್ಟ್ರಸಮ್ಮಿಶ್ರ ಸರ್ಕಾರವನ್ನು ಉರುಳಿಸುವುದರಲ್ಲಿ ನನ್ನ ಪಾತ್ರವೂ ಇತ್ತುಎಂದು ಹೆಮ್ಮೆಯಿಂದ ಅಂದುಕೊಳ್ಳಬಹುದು, ಅಲ್ಲವೆ?

ಸರ್ಕಾರಗಳು ಶಾಶ್ವತವಲ್ಲ. ಅವು ಬದಲಾಗುತ್ತವೆ. ಬದಲಾಗುತ್ತಿರಬೇಕು. ಒಂದು ದಮನಕಾರಿಸರ್ಕಾರವನ್ನು ಜನ ಕ್ರಾಂತಿಕಾರಿ ಜನಹೋರಾಟದ ಮೂಲಕ ಪದಚ್ಯುತಗೊಳಿಸುತ್ತವೆ. ಮತದಾನದಮೂಲಕ, ಮತಪತ್ರ ಚಲಾವಣೆಯ ಮೂಲಕ ಸಹ ಒಂದು ಅಧಿಕಾರರೂಢ ಸರ್ಕಾರವನ್ನು ಕೆಳಗಿಳಿಸಲುಸಾಧ್ಯವಿದೆ. ಆದರೆ ಅಕ್ರಮಗಳ ಮೂಲಕ, ಪಿತೂರಿಯ ಮೂಲಕ ಒಂದು ಸರ್ಕಾರ ಬಹುಮತಕಳೆದುಕೊಂಡಂತೆ ಮಾಡುವುದು ಆದರ್ಶವಲ್ಲ. ಎಸ್ಸೆಂರವರು ಮಾನ ಮರ್ಯಾದೆ ಎಲ್ಲವನ್ನು ಬಿಟ್ಟುತನ್ನನ್ನು ತಾನೇ ಈ ದುಷ್ಟಕಾರ್ಯದಲ್ಲಿ ತನ್ನ ಪಾತ್ರವೂ ಇದೆ ಎಂದು ಹೊಗಳಿಕೊಂಡಿದ್ದಾರೆ.

ಎಸ್ಸೆಂ ಕೃಷ್ಣರವರು ಸತ್ಯವನ್ನು ಬಾಯ್ಬಿಟ್ಟು ಹೇಳಿದ್ದನ್ನು ನಾವು ಸ್ವಾಗತಿಸಬಹುದು. ಆದರೆಅವರು ಪ್ರತಿಪಾದಿಸುತ್ತಿರುವ ವಿಚಾರ ಆಕ್ಷೇಪಾರ್ಹವಾಗಿದೆ. ಹಿರಿಯ ರಾಜಕಾರಣಿಯಾಗಿಕಿರಿಯರಿಗೆ ಅವರು ಈ ರೀತಿಯ ಭ್ರಷ್ಟರಾಜಕಾರಣದ ದೀಕ್ಷೆ ನೀಡಬಾರದು. ಬಿಜೆಪಿಯನ್ನು ಅಧಿಕಾರಕ್ಕೆತರಲು ಯಾವ ಅಕ್ರಮ ಮಾರ್ಗವನ್ನೂ ಅನುಸರಿಸಬಹುದೆಂಬ ವಾದವನ್ನು ಅವರು ಬಿಜೆಪಿಗೆಸೇರ್ಪಡೆಯಾದಂದಿನಿಂದ ಮೈಗೂಡಿಸಿಕೊಂಡಂತೆ ಕಾಣುತ್ತದೆ. ದೇಶದ ಸಂವಿಧಾನಕ್ಕೆ ಅವಮಾನಮಾಡುವ ಸರ್ಕಾರವನ್ನು, ದೇಶದಲ್ಲಿ ಕೋಮು ಗಲಭೆಗಳಿಗೆ ಕುಮ್ಮಕ್ಕು ನೀಡಿ ಪ್ರಜೆಗಳ ಐಕ್ಯತೆಯನ್ನುಧ್ವಂಸಗೊಳಿಸುವ ಸರ್ಕಾರವನ್ನು, ಮಹಿಳೆಯರಿಗೆ ರಕ್ಷಣೆ ನೀಡದ ಸರ್ಕಾರವನ್ನು, ದಲಿತರ ಹಕ್ಕುಗಳರಕ್ಷಣೆಗೆ ಗಮನ ನೀಡದ ಸರ್ಕಾರವನ್ನು, ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಪರಕೀಯ ಪ್ರಜ್ಞೆ, ಅವರವಿರುದ್ಧ ದ್ವೇಷವನ್ನು ಬೆಳೆಸುವ ಸರ್ಕಾರವನ್ನು ಕಿತ್ತುಹಾಕಲು ಪ್ರಜೆಗಳಿಗೆ ಹಕ್ಕಿದೆ. ಆದರೆ ‘ಆಪರೇಷನ್ ಕಮಲ’ ಎಂಬ ಹೆಸರಿನಲ್ಲಿ ಚುನಾಯಿತ ಸರಕಾರವನ್ನು ಉರಳಿಸಲು ಕರ್ನಾಟಕದಲ್ಲಿ ಆರಂಭಿಸಿರುವ ಪದ್ಧತಿ ಅತ್ಯಂತ ಅನಿಷ್ಟಪದ್ಧತಿ.

ಮಹಾರಾಷ್ಟ್ರದಲ್ಲಿ ಬಿಜೆಪಿಯ ಬಣ್ಣ ಬಯಲಾಗಿದೆ. ಮುಖವಾಡ ಕಳಚಿ ಬಿದ್ದಿದೆ. ಅದರಅಧಿಕಾರದಾಹಕ್ಕೆ ಎಲ್ಲೆ ಇಲ್ಲ ಎಂದು ಸಾಬೀತಾಗಿದೆ. ಅಧಿಕಾರಕ್ಕಾಗಿ ಬಿಜೆಪಿ ಏನು ಬೇಕಾದರೂಮಾಡಲು ಸಿದ್ಧ ಎನ್ನುವುದನ್ನು ಮಹಾರಾಷ್ಟ್ರದಲ್ಲಿ ಅದು ಎಳ್ಳಷ್ಟುಮಾನ ಮರ್ಯಾದೆ ಇಲ್ಲದೆವರ್ತಿಸಿ ಈಗ ಮುಖಭಂಗಕ್ಕೆ ಒಳಗಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ದೇಶವಾಸಿಗಳುದೇಶಾದ್ಯಂತ ತಿರಸ್ಕರಿಸುವುದು ದೂರವಿಲ್ಲ.

ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸರ್ಕಾರ ಅದರ ಆಂತರಿಕ ವೈರುಧ್ಯಗಳಕಾರಣದಿಂದ ಬೇಗನೇ ಕುಸಿದು ಬೀಳಬಹುದು. ಆದರೆ ಅದು ಮುಖ್ಯವಲ್ಲ. ಬಿಜೆಪಿ ಎಂಬಕೋಮುವಾದಿ, ಸರ್ವಾಧಿಕಾರಿ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರುವುದನ್ನು ಎಲ್ಲ ಪ್ರತಿಪಕ್ಷಗಳು ಒಟ್ಟಾಗಿತಡೆದಿರುವುದು ಗಮನಾರ್ಹವಾಗಿದೆ. ಒಂದು ರಾಷ್ಟ್ರೀಯ ವಿಪತ್ತು ಹರಡುವುದನ್ನು ತಡೆಯಲುಸಾಧ್ಯವಾಗಿರುವುದು ಹೆಮ್ಮೆಯ ವಿಷಯ. ಅದೇ ರೀತಿಯ ಪ್ರಯೋಗ ಆಗಿದ್ದು ಜೆಡಿಎಸ್ ನಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ. ಗಲಭೆಕೋರ ಬಿಜೆಪಿಯನ್ನು ಹೊರಗಿಡಲು ಸಾಧ್ಯವಾಗಿತ್ತು. ಮಹಾರಾಷ್ಟ್ರದಲ್ಲಿಯೂ ಅಂತಹ ಪ್ರಯೋಗ ನಡೆಯಲುಬಿಡಬೇಕು. ಕೃಷ್ಣರವರ ಇಂತಹ ಹೇಳಿಕೆಗಳಿಂದ ಅವರೊಬ್ಬ ಆದರ್ಶ ರಾಜಕಾರಣಿ ಎಂಬ ಹೆಸರುಅವರಿಗೆ ಪ್ರಾಪ್ತ ಆಗಲಾರರು. ಒಂದು ಸರ್ಕಾರವನ್ನು ಬುಡಮೇಲು ಮಾಡುವ ಉದ್ದೇಶದಿಂದಕೆಲವು ಮಂದಿ ಶಾಸಕರನ್ನು ರಾಜಿನಾಮೆ ಕೊಡಿಸಿ, ಜನರ ಮೇಲೆ ಅನಗತ್ಯ
ಉಪಚುನಾವಣೆಗಳನ್ನುಹೇರಿ, ಹಣ ಬಲ, ಜಾತಿ ಬಲ, ತೋಳ್ಬಲ ಬಳಸಿ ಅವರನ್ನು ಗೆಲ್ಲಿಸಿ, ಒಂದು ಪಕ್ಷದ ಸಂಖ್ಯಾಬಲವನ್ನು ಹೆಚ್ಚಿಸಿ, ಒಂದು ಸರ್ಕಾರವನ್ನು ಕೆಡವಿ ಇನ್ನೊಂದು ಸರ್ಕಾರವನ್ನು ಅಧಿಕಾರಕ್ಕೆ ತರುವಪ್ರಯತ್ನವನ್ನು ಯಾರೂ ಬೆಂಬಲಿಸಬಾರದು.

ಮಹಾರಾಷ್ಟ್ರದ ಬೆಳವಣಿಗೆಯಿಂದ ನಾವು ಕರ್ನಾಟಕದ 17 ಮತಕ್ಷೇತ್ರಗಳಲ್ಲಿ ಮತದಾನಮಾಡಲು ಸಜ್ಜಾಗುತ್ತಿರುವ ಪ್ರಜ್ಞಾವಂತ ಮತದಾರರು ಕೃಷ್ಣರವರ ಮಾತುಗಳಿಂದಪ್ರಜ್ಞಾಹೀನರಾಗದೆಜವಾಬ್ದಾರಿಯಿಂದ ಮತದಾನ ಮಾಡಬೇಕೆಂದು ಮನವಿ ಮಾಡುತ್ತೇವೆ.

(ಈ ವಾರದ ಜನಶಕ್ತಿ ಸಂಪಾದಕೀಯ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Advertisement

ದಿನದ ಸುದ್ದಿ

ನಟ ಮನದೀಪ್‌ ರಾಯ್‌ ನಿಧನ

Published

on

ಸುದ್ದಿದಿನ ಡೆಸ್ಕ್ : ಹಿರಿಯ ಚಿತ್ರನಟ ಮನದೀಪ್‌ ರಾಯ್‌ (74 ವರ್ಷ) ಇಂದು ಬೆಳಗಿನ ಜಾವ ಅಗಲಿದ್ದಾರೆ.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮನದೀಪ್‌ ರಾಯ್‌ ಹವ್ಯಾಸಿ ರಂಗಭೂಮಿ ಹಿನ್ನೆಲೆಯ ಕಲಾವಿದ. ನಟ – ನಿರ್ದೇಶಕ ಶಂಕರನಾಗ್‌ ಅವರ ಆತ್ಮೀಯ ಒಡನಾಡಿ. ಪೋಷಕ ಪಾತ್ರ, ಹಾಸ್ಯ ನಟರಾಗಿ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published

on

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವ್‌ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.

ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.

ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

Published

on

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.

ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.

ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980336243

Continue Reading

Trending