ರಾಜಕೀಯ
NRC, CAB ಮತ್ತು ವಲಸಿಗರು

NRC ಹಾಗೂ CABನ್ನು ಸರಳೀಕರಿಸಿ ಹೇಳುವುದಾದರೆ ಅಸ್ಸಾಂನ ಉದಾಹರಣೆ ತೆಗೆದುಕೊಳ್ಳಬೇಕು. ಅಸ್ಸಾಂನಲ್ಲಿ ಹೀಗೋ ಹಾಗೋ NRC ಮುಗಿದಿದೆ. ಬಿಜೆಪಿಯ ಪ್ರಕಾರ ಅಸ್ಸಾಂನಲ್ಲಿ ಒಂದು ಕೋಟಿ ಅಕ್ರಮ ಮುಸ್ಲೀಮ್ ಬಾಂಗ್ಲಾದೇಶಿಗರಿದ್ದರು. ಹಾಗಾಗಿ NRC ನಡೆಯಿತು. NRCಯ ಮೊದಲ ಕರಡುಪ್ರತಿಯ ಪ್ರಕಾರ ಅಕ್ರಮ ಬಾಂಗ್ಲಾದೇಶಿಗಳ ಸಂಖ್ಯೆ ಒಂದು ಕೋಟಿಯಿದ್ದದ್ದು ನಲವತ್ತು ಲಕ್ಷಕ್ಕಿಳಿಯಿತು.
ಈ ಕರಡು NRCಯ ಫೈನಲ್ ಆದಾಗ ಭಾರತದಲ್ಲಿ ತಮ್ಮ ಇರುವಿಕೆಯ, ಬಾಳ್ವೆಯ ದಾಖಲೆಗಳನ್ನು ಕೊಡಲಾಗದೆ ಉಳಿದದ್ದು ಬರೀ ಹತ್ತೊಂಬತ್ತು ಲಕ್ಷ ಜನ. ಇದಾಗುವಾಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು ಎನ್ನುವುದನ್ನು ಮರೆಯಬಾರದು. ಕೊನೆಗೆ ಉಳಿದ ಹತ್ತೊಂಬತ್ತು ಲಕ್ಷ ಜನರಲ್ಲಿ NRC ಪ್ರಕಾರ ಹನ್ನೆರಡು ಲಕ್ಷ ಹಿಂದೂಗಳೆಂದಾಯಿತು. ಯಾವಾಗ ದಾಖಲೆ ಕೊಡಲಾಗದ ವಲಸಿಗರಲ್ಲಿ ಮುಸ್ಲೀಮರ ಸಂಖ್ಯೆ ಕಡಿಮೆಯಾಗಿ ಹಿಂದೂಗಳ ಸಂಖ್ಯೆ ಜಾಸ್ತಿಯಾಯಿತೋ, ಆವಾಗ ಸ್ವತ: ಅಸ್ಸಾಂ ಬಿಜೆಪಿ NRC ಬಗ್ಗೆ ಉಲ್ಟಾ ಹೊಡೆಯಿತು. NRCಯನ್ನೇ ತಿರಸ್ಕರಿಸಿ ಅದನ್ನು ಒಂದು ರದ್ದಿ ಪೇಪರ್ ಎಂದು ಬಣ್ಣಿಸಿತು.
ಇದು NRC ಮಹಾತ್ಮೆಯಾದರೆ ಈವಾಗ CABಯನ್ನು ತಂದು ಭಾರತದಲ್ಲಿ ತಮ್ಮ ಬಾಳ್ವೆಯ ಸೂಕ್ತ ದಾಖಲೆಗಳನ್ನು ಕೊಡಲಾಗದ ಈ ಹನ್ನೆರಡು ಲಕ್ಷ ಹಿಂದೂಗಳನ್ನು ಭಾರತದ ಪೌರರನ್ನಾಗಿ ಮಾಡುತ್ತಾರೆ. ಉಳಿದ ಏಳು ಲಕ್ಷ ಮುಸ್ಲೀಮರನ್ನು ಏನು ಮಾಡುತ್ತಾರೆ? ಅವರನ್ನು ಹೊರಹಾಕಲು ಆಗುವುದಿಲ್ಲ. ಅವರು ತಮ್ಮ ಅನರ್ಹತೆಯನ್ನು NRC Tribunalನಲ್ಲಿ ಪ್ರಶ್ನಿಸಬಹುದು.
ಅಲ್ಲೂ ಅವರು ಸೂಕ್ತ ದಾಖಲೆ ಕೊಟ್ಟಿಲ್ಲವೆಂದರೆ? ಅವರು ಭಾರತದವರಲ್ಲ ಬದಲಾಗಿ ಬಾಂಗ್ಲಾದೇಶದಿಂದ ಬಂದವರು ಎಂದು ಹೇಳಲು ದಾಖಲೆಗಳಿರಬೇಕಲ್ವಾ? ಹಾಗೆ ದಾಖಲೆಗಳಿಲ್ಲವೆಂದರೆ ಬಾಂಗ್ಲಾದೇಶವೂ ಅವರನ್ನು ಬರಮಾಡಿಕೊಳ್ಳುವುದಿಲ್ಲ. ಅಲ್ಲಿಗೆ ಈ ದಾಖಲೆಗಳಿಲ್ಲದ ಅಷ್ಟೂ ಮಂದಿಯನ್ನು ಜೈಲಿಗಾಗಬೇಕು ಇಲ್ಲಾಂದ್ರೆ Detention Centreಗಳಿಗೆ ಹಾಕಬೇಕು. ಅಸ್ಸಾಂನಲ್ಲಿ ಸದ್ಯಕ್ಕೆ ತಲಾ ಐವತ್ತು ಕೋಟಿ ವೆಚ್ಚದಲ್ಲಿ ಹನ್ನೊಂದು Detention Centreಗಳನ್ನು ಕಟ್ಟಲಾಗುತ್ತಿದೆ. ಸದ್ಯಕ್ಕೆ ಒಂದು Detention Centre ತಯಾರಾಗಿದೆಯಷ್ಟೇ. ಪ್ರತೀ Detention Centreನಲ್ಲಿ ಮೂರು ಸಾವಿರ ಅಕ್ರಮ ವಲಸಿಗರನ್ನು ಇಡಬಹುದು. ಈ ಹನ್ನೊಂದು Detention Centreಗಳ ಹೊರತಾಗಿ ಅಸ್ಸಾಂನ ಆರು ಜಿಲ್ಲಾ ಕಾರಾಗ್ರಹಗಳಲ್ಲಿ ಸಣ್ಣ Detention Centreಗಳಿವೆ. ಈ Detention Centreಗಳಿಗೆ ಸೇರಿಸಿದ ಅಕ್ರಮ ವಲಸಿಗರನ್ನು ಸಂಪೂರ್ಣವಾಗಿ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಹಾಗೂ ಕೇಂದ್ರ ಸರಕಾರದ್ದು.
ಇದುವರೆಗೂ ಕೂಲಿನಾಲಿ ಮಾಡಿ ಬದುಕುತ್ತಿದ್ದ ಇವರು ಈವಾಗ ಸಂಪೂರ್ಣವಾಗಿ ಸರಕಾರದ ಜವಾಬ್ದಾರಿ. ಇವರ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿನೂ ಸರಕಾರದ ಮೇಲೆ, ಇವರೆಲ್ಲರ ಊಟ, ಆರೋಗ್ಯ ಎಲ್ಲಾ ಜವಾಬ್ದಾರಿನೂ ಸರಕಾರದ ಮೇಲೆ. ಸರಕಾರದ ಮೇಲೆ ಎಂದರೆ ನಮ್ಮ ಮೇಲೆ. ಪರವಾಗಿಲ್ಲ. ನಮ್ಮಲ್ಲಿ ಪೆಟ್ರೋಲಿಗೆ ಇನ್ನೂರು ರೂಪಾಯಿಯಾದರೆ ಬೈಕನ್ನು ತಲೆಮೇಲೆ ಹೊತ್ತುಕೊಂಡು ಹೋಗುವವರು, ಈರುಳ್ಳಿಗೆ ನೂರ ಐವತ್ತು ರೂಪಾಯಿಯಾದರೆ ಈರುಳ್ಳಿಯನ್ನೇ ತ್ಯಜಿಸುವವರಿದ್ದಾರೆ. ಅವರು ಉಳಿಸಿದ ದುಡ್ಡನ್ನು ಈ Detention Centreಗಳ ವಾಸಿಗಳ ಅಭ್ಯುದಯಕ್ಕೆ ಬಳಸಬಹುದು.
ನಮ್ಮ ಪಿರಮಂಡೆಪೆಟ್ ಭಕ್ತರ ಪ್ರಕಾರ ಮೋದಿ, ಶಾ ಅಕ್ರಮ ವಲಸಿಗ ಮುಸ್ಲೀಮರನ್ನು ದೇಶದ ಹೊರಗೆ ಕಳುಹಿಸುತ್ತಾರೆ. ಆದರೆ ಎಲ್ಲಿ, ಯಾರಪ್ಪನ ಮನೆಗೆ? ಬಾಂಗ್ಲಾದೇಶ ಆಗಲಿ, ಪಾಕೀಸ್ಥಾನ ಆಗಲಿ, ಅಫ್ಘನಿಸ್ಥಾನ ಆಗಲಿ ಅವರನ್ನು ತಮ್ಮವರೆಂದು ಒಪ್ಪಿಕೊಂಡು ವಾಪಾಸ್ ತೆಗೆದುಕೊಳ್ಳುವುದಿಲ್ಲ. ಅವರು ಈ ದೇಶದವರೆಂದು ರುಜು ಮಾಡುವ ಜವಾಬ್ದಾರಿ ಭಾರತದ್ದು. ಈ ಏಳು ಲಕ್ಷ ಮಂದಿ ತಮ್ಮ ಅನರ್ಹತೆಯನ್ನು NRC ಟ್ರಿಬ್ಯೂನಲ್ನಲ್ಲಿ ಪ್ರಶ್ನಿಸಬಹುದು. ಆದರೆ ಅದಕ್ಕೆ ಪ್ರತೀ ವ್ಯಕ್ತಿಗೆ ಲಾಯರ್ ಫೀಸ್, ದಾಖಲೆ ಸಂಗ್ರಹ, ಸಾಕ್ಷಿಗಳನ್ನು ಹಿಯರಿಂಗ್ಗಳಿಗೆ ಕರೆದುಕೊಂಡು ಹೋಗುವುದು ಇತ್ಯಾದಿಯೆಂದು ಕನಿಷ್ಟ Rs 75000-100000 ಖರ್ಚು ಮಾಡಬೇಕಾಗುತ್ತದೆ.
ಆದರೆ ಇವರಲ್ಲಿ ಹೆಚ್ಚಿನವರು ಬಡವರು. ದಿನಕ್ಕೆ ಎರಡೊತ್ತಿನ ಊಟಕ್ಕೂ ಪರದಾಡುವವರು. ಅವರು ಎಲ್ಲಿಂದ ಈ ಹಣವನ್ನು ಜೋಡಿಸುವುದು? ಹಾಗಾಗಿ ಅವರು NRC ದಾಖಲೆಗಳನ್ನು ಪ್ರಶ್ನಿಸದೇ ಜೈಲು ಇಲ್ಲವೇ Detention Centreಗೆ ಹೋಗುತ್ತಾರೆ. ಪಾಕೀಸ್ಥಾನಕ್ಕೂ ಹೋಗುವುದಿಲ್ಲ, ಬಾಂಗ್ಲಾದೇಶಕ್ಕೂ ಹೋಗುವುದಿಲ್ಲ. ಯಾಕೆಂದರೆ ಹೆಚ್ಚಿನವರು ಅಲ್ಲಿನವರೇ ಅಲ್ಲ. ಇಲ್ಲೇ ಹುಟ್ಟಿ ಬೆಳೆದವರು. ಅವರ ಪೂರ್ವಜರಲ್ಲಿ ಯಾರೋ ಒಬ್ಬರು ಬಾಂಗ್ಲಾದೇಶ/ಪಾಕೀಸ್ಥಾನದವರು ಆಗಿರಬಹುದು. ಅದರೆ ಅವರು ಒಮ್ಮೆ ಭಾರತಕ್ಕೆ ಬಂದನಂತರ ಬಾಂಗ್ಲಾ/ಪಾಕೀಸ್ಥಾನದಲ್ಲೂ ಅವರಿಗೆ ಯಾರೂ ಇಲ್ಲ, ಯಾವ ದಾಖಲೆಗಳೂ ಇಲ್ಲ. ಹಾಗಾಗಿ ಅವರು ಎಲ್ಲಿಯೂ ಹೋಗುವುದಿಲ್ಲ. ಇಲ್ಲೇ ಇರುತ್ತಾರೆ ನಮ್ಮದೇ ದೇಶದಲ್ಲಿ ಸರಕಾರದ ಅತಿಥಿಗಳಾಗಿ. ಇದು ಮೂರುವರೆ ಕೋಟಿ ಜನಸಂಖ್ಯೆಯ ಒಂದು ರಾಜ್ಯದ ಪರಿಸ್ಥಿತಿ.
ಇಡೀ ದೇಶಕ್ಕೆ ಇದು ಅನ್ವಯವಾಗುವಾಗ ಎಂಥ ದಯನೀಯ ಪರಿಸ್ಥಿತಿ ಉಂಟಾಗುತ್ತೆಯೆಂದು ಊಹಿಸುವುದೂ ಕಷ್ಟ. ಅಸ್ಸಾಂನ NRCಗೆ ಖರ್ಚಾಗಿರುವ ಹಣ Rs 1600 ಕೋಟಿಯೆಂದು ಸರಕಾರಿ ದಾಖಲೆಗಳು ಹೇಳುತ್ತಿವೆ. ಇದರ ಜೊತೆ Detention Centre ಕಟ್ಟಲು ತಗಲುವ ಖರ್ಚು ಬೇರೆ. ಪ್ರತಿಯೊಂದೂ Detention Centre ಕಟ್ಟಲು ತಗಲುವ ಖರ್ಚು Rs 45-50 ಕೋಟಿ. ಇಡೀ ದೇಶದಲ್ಲಿ CAB ಆಗಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವ ಇಲ್ಲವೇ ತಮ್ಮ ಇರುವಿಕೆಯ ದಾಖಲೆ ಕೊಡಲಾಗದ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಹಾಗೂ ಪಾರ್ಸಿಗಳಿಗೆ ಭಾರತದ ಪೌರತ್ವ ಸಿಗುತ್ತೆ. ಅಂದರೆ ಈ ಆರು ಸಮುದಾಯಗಳು ಹಾಗೂ ಮುಸ್ಲೀಮರದ್ದು ಒಂದೇ ಕಥೆ. ಯಾರಲ್ಲೂ ತಾವು ಭಾರತದಲ್ಲಿ ಯಾವತ್ತಿನಿಂದ ನೆಲೆಸಿದ್ದೇವೆ, ನಾವು ಭಾರತೀಯರೇ ಎನ್ನುವ ದಾಖಲೆಗಳಿಲ್ಲ. ಹಾಗಾಗಿ ಎಲ್ಲರೂ ‘ಅಕ್ರಮ’ಗಳು.
ಆದರೆ ಈ ಎಲ್ಲಾ ‘ಅಕ್ರಮ’ಗಳಲ್ಲಿ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಹಾಗೂ ಪಾರ್ಸಿಗಳು ಯಾವುದೇ ಶ್ರಮವಿಲ್ಲದೆ ‘ಸಕ್ರಮ’ಗಳಾದರೆ, ಅವರಂತೆಯೇ ದಾಖಲೆಗಳಿಲ್ಲದ ಮುಸ್ಲೀಮರು ಅತಂತ್ರರಾಗುತ್ತಾರೆ. ಆದರೆ ನಮ್ಮ ಭಕ್ತರ ಪ್ರಕಾರ ಇದು ತಾರತಮ್ಯ ಅಲ್ಲ ಶೋಷಣೆನೂ ಅಲ್ಲ ಮುಸ್ಲೀಮ್ ದ್ವೇಷವೂ ಅಲ್ಲ. ಹೋಗ್ಲಿ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುವಷ್ಟು ಬ್ರೈನು ಅವರಿಗಿಲ್ಲ. ಇರುವ ಸಣ್ಣದೊಂದು ತುಂಡು ನಾಗ್ಪುರದ ಬ್ಲಡಿ ಬ್ಯಾಂಕ್ನಲ್ಲಿ ಅಡವಿಟ್ಟಾಗಿದೆ.
ಹೀಗೆ ದಾಖಲೆಗಳಿಲ್ಲದ ಮುಸ್ಲೀಮರನ್ನು NRCಯಡಿಯಲ್ಲಿ ತರುತ್ತಾರೆ. ಎಷ್ಟು ಮುಸ್ಲೀಮರು ಸಿಗುತ್ತಾರೋ ಎಂದು ತಿಳಿಯೋಲ್ಲ. ಆದರೆ ಸಿಕ್ಕ ಒಬ್ಬನೇ ಒಬ್ಬ ದಾಖಲೆಗಳಿಲ್ಲದ ಮುಸ್ಲೀಮರನ್ನು ದೇಶದ ಗಡಿ ಹೊರಗೆ ಕಳುಹಿಸಲಾಗುವುದಿಲ್ಲ ಬಾಂಗ್ಲಾ, ಪಾಕೀಸ್ಥಾನಗಳು ಅವರನ್ನು ಬರಮಾಡಿಕೊಳ್ಳದೆ. ಅಂದರೆ ದೇಶದೆಲ್ಲೆಡೆ ಎಷ್ಟು Detention Centreಗಳನ್ನು ಕಟ್ಟಬೇಕೋ? ಇದು ತಿಳಿಯುವ ಹೊತ್ತಿಗೆ ತಲೆಗೇರಿದ ಧರ್ಮದ ಅಫೀಮು ಇಳಿದು, ಮನುಷ್ಯ ರೂಪಕ್ಕೆ ಬರುತ್ತಾರೆ.
–Almedia Gladson
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದಲ್ಲಿ ಈ ವರ್ಷ ಜನಪರ ರಾಜ್ಯ ಬಜೆಟ್ ಮಂಡನೆ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿದಿನ, ಹಾವೇರಿ : ಕರ್ನಾಟಕದಲ್ಲಿ ಮುಂದಿನ ತಿಂಗಳು ಮಂಡಿಸಲಾಗುತ್ತಿರುವ ಈ ವರ್ಷದ ರಾಜ್ಯ ಬಜೆಟ್ ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ ಮತ್ತು ಜನಪರವಾಗಿರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವ್ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರುತ್ತವೆ ಎಂದರು.
ಕರ್ನಾಟಕ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ಕಳೆದ ವರ್ಷ ನಾನು ಅಧಿಕಾರ ವಹಿಸಿಕೊಂಡಾಗ 5 ಸಾವಿರ ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳಿದರು.
ಕೋವಿಡ್ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯ ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆ ; ಇದೇ 30ರಂದು ಸರ್ವಪಕ್ಷಗಳ ಸಭೆ

ಸುದ್ದಿದಿನ ಡೆಸ್ಕ್ : ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ 30ರಂದು ಸರ್ವಪಕ್ಷಗಳ ಸಭೆಯನ್ನು ಕರೆದಿದೆ. ಸಂಸತ್ ಭವನದ ಸಂಕೀರ್ಣದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರು ಮತ್ತು ಸಂಸತ್ತಿನ ಎರಡೂ ಸದನಗಳನ್ನು ಪ್ರತಿನಿಧಿಸುವ ಸದನ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸರ್ಕಾರ ಸಂಸತ್ತಿನ ಉಭಯ ಸದನಗಳ ಸುಗಮ ಕಲಾಪಕ್ಕೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರವನ್ನು ಕೋರಲಿದೆ. ಸಂಸತ್ತಿನ ಬಜೆಟ್ ಅಧಿವೇಶನ ಇದೇ 31ರಿಂದ ಆರಂಭವಾಗಲಿದೆ. ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು.
ಅದೇ ದಿನವೇ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗುವುದು. ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಲಿದ್ದಾರೆ.
ಬಜೆಟ್ ಅಧಿವೇಶನ ಏಪ್ರಿಲ್ 6ವರೆಗೆ ನಡೆಯಲಿದ್ದು, ಸುಮಾರು 66 ದಿನಗಳಲ್ಲಿ 27 ಕಲಾಪಗಳು ನಡೆಯಲಿದೆ. ಮೊದಲ ಅವಧಿಯಲ್ಲಿ ಅಧಿವೇಶನ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರವರೆಗೆ ಅಧಿವೇಶನಕ್ಕೆ ಬಿಡುವು ಇರಲಿದೆ ಆನಂತರ ಮಾರ್ಚ್ 13ರಿಂದ ಆರಂಭವಾಗುವ ಅಧಿವೇಶನ ಏಪ್ರಿಲ್ 6ಕ್ಕೆ ಕೊನೆಗೊಳ್ಳಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980336243

ದಿನದ ಸುದ್ದಿ
ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ : ಭವ್ಯ ನರಸಿಂಹಮೂರ್ತಿ

ಸುದ್ದಿದಿನ, ಬೆಂಗಳೂರು : ರಾಷ್ಟ್ರೀಯ ಯುವ ದಿನದ ಪ್ರಯುಕ್ತ ನಾಳೆ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು ಸ್ವಾಮಿ ವಿವೇಕಾನಂದರ 160ನೇ ಜನ್ಮದಿನದ ಅಂಗವಾಗಿ ಅವರ ತತ್ವ ಆದರ್ಶಗಳು ಹಾಗೂ ಯುವ ಜನತೆಗೆ ನೀಡಿರುವ ಸಂದೇಶಗಳನ್ನು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನತೆಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಭವ್ಯ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ರ್ಯಾಲಿ ಬೆಳಿಗ್ಗೆ 09-00 ಕ್ಕೆ ರಾಜಾಜಿನಗರ Entrance Bridge ಇಂದ ಪ್ರಾರಂಭವಾಗಿ ನವರಂಗ ಚಿತ್ರಮಂದಿರ – ಶಂಕರ್ ಮಠ – ಹಾವನೂರ್ ಸರ್ಕಲ್ – ಹೌಸಿಂಗ್ ಬೋರ್ಡ್ – ಕಾಮಾಕ್ಷಿಪಾಳ್ಯ ಬಸ್ ಸ್ಟಾಂಡ್ – ಹಾವನೂರ್ – ಅಕ್ಷಯ ಉಪಹಾರ – ಮೋದಿ ಹಾಸ್ಪಿಟಲ್ – ನವರಂಗ ಬ್ರಿಡ್ಜ್ – ಗಿರಿಯಾಸ್ ಸಿಗ್ನಲ್ – 6th ಬ್ಲಾಕ್ – ಕೊನೆಯದಾಗಿ 12 ಗಂಟೆಗೆ ಭಾಷ್ಯಮ್ ಸರ್ಕಲ್ ನಲ್ಲಿ ಕೊನೆಗೊಳ್ಳುತ್ತದೆ.
ದಾರಿಯಲ್ಲಿ 4 ಕಡೆ ಸ್ವಾಮಿ ವಿವೇಕಾನಂದರಿಗೆ ಪೂಜೆ ಹಮ್ಮಿಕೊಳ್ಳಲಾಗಿದೆ. ಪೂಜೆಯ ನಂತರ ವಿವೇಕಾನಂದರ ತತ್ವ ಆದರ್ಶಗಳನ್ನೊಳಗೊಂಡ ಹತ್ತು ಸಾವಿರ ಪುಸ್ತಕಗಳನ್ನು ಕ್ಷೇತ್ರದಾದ್ಯಂತ ಉಚಿತವಾಗಿ ಹಂಚಲಾಗುವುದು ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿರುತ್ತದೆ ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
