ಕ್ರೀಡೆ
ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ, ಕ್ರೀಡಾಶಾಲೆ-ಕ್ರೀಡಾ ನಿಲಯಗಳಿಗೆ ಆಯ್ಕೆ ಪ್ರಕ್ರಿಯೆ

ಸುದ್ದಿದಿನ,ದಾವಣಗೆರೆ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆಸುತ್ತಿರುವ ಕ್ರೀಡಾಶಾಲೆ ಹಾಗೂ ಕ್ರೀಡಾ ನಿಲಯಗಳಿಗೆ 2019-20ನೇ ಸಾಲಿನಲ್ಲಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ, ವಿವಿಧ ಹಂತಗಳಲ್ಲಿ ಕ್ರೀಡಾಶಾಲೆ/ನಿಲಯಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.
ದಾವಣಗೆರೆ ಕ್ರೀಡಾ ಶಾಲೆಗೆ ಆಯ್ಕೆಗೊಳ್ಳಲು ಕಿರಿಯರ ವಿಭಾಗದಲ್ಲಿ ಕಬಡ್ಡಿ-ಬಾಲಕರು, ಕುಸ್ತಿ-ಬಾಲಕರು, ಅಥ್ಲೆಟಿಕ್-ಬಾಲಕರು ಪಾಲ್ಗೊಳ್ಳಬಹುದಾಗಿದ್ದು 2020 ರ ಜೂನ್ 01 ಕ್ಕೆ 11 ವರ್ಷ ಮೀರಿರಬಾರದು ಮತ್ತು 5ನೇ ತರಗತಿಗೆ ಸೇರಲು ಅರ್ಹತೆ ಹೊಂದಿರಬೇಕು.
ಖೋ-ಖೊ-ಬಾಲಕರು 2020 ರ ಜೂನ್ 01 ಕ್ಕೆ 12 ವರ್ಷ ಮೀರಿರಬಾರದು ಮತ್ತು 6ನೇ ತರಗತಿಗೆ ಸೇರಲು ಅರ್ಹತೆ ಹೊಂದಿರಬೇಕು.
ಕಿರಿಯರ ವಿಭಾಗ (ಮೊದಲನೆ ಹಂತ)
ಕ್ರೀಡೆಗಳು: ಜೂಡೋ, ಕುಸ್ತಿ, ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೆಟ್ಬಾಲ್, ಫುಟ್ಬಾಲ್, ವಾಲಿಬಾಲ್, ಜಿಮ್ನಾಸ್ಟಿಕ್, ಈಜು(ಬಾಲಕ/ಬಾಲಕಿಯರು), ಕಬಡ್ಡಿ ಮತ್ತು ಖೋ-ಖೋ (ಬಾಲಕರು) ಈ ವಿಭಾಗದಲ್ಲಿ ಪ್ರವೇಶ ಬಯಸುವ ಕ್ರೀಡಾಪಟುಗಳು 2020 ರ ಜೂನ್ 01 ಕ್ಕೆ 14 ವರ್ಷ ಮೀರಿರಬಾರದು ಮತ್ತು 8ನೇ ತರಗತಿಗೆ ಸೇರಲು ಅರ್ಹತೆ ಹೊಂದಿರಬೇಕು.
ಹಿರಿಯರ ವಿಭಾಗ : ಜೂಡೋ, ಕುಸ್ತಿ, ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೆಟ್ಬಾಲ್, ಫುಟ್ಬಾಲ್,ವಾಲಿಬಾಲ್, ಜಿಮ್ನಾಸ್ಟಿಕ್ (ಬಾಲಕ/ಬಾಲಕಿಯರು), ಕಬಡ್ಡಿ ಮತ್ತು ಖೋ-ಖೋ (ಬಾಲಕರು) ಈ ವಿಭಾಗದಲ್ಲಿ ಪ್ರವೇಶ ಬಯಸುವ ಬಾಲಕ/ಬಾಲಕಿಯರು 2020 ರ ಜೂನ್ 01 ಕ್ಕೆ 19 ವರ್ಷ ಮೀರಿರಬಾರದು ಮತ್ತು ಪ್ರಥಮ ಪಿ.ಯು.ಸಿ ಗೆ ಸೇರಲು ಅರ್ಹತೆ ಹೊಂದಿರಬೇಕು. ಜನ್ಮ ದಿನಾಂಕ ದೃಢೀಕರಣ ಪತ್ರದೊಂದಿಗೆ ಹಾಜರಾಗಬೇಕು.
ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಆಯ್ಕೆ ನಡೆಯುವ ಸ್ಥಳ ಮತ್ತು ದಿನಾಂಕ ವಿವರ
ಡಿ.27 ರಂದು ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮ ಮತ್ತು ಡಿ.28 ರಂದು ತಾಲ್ಲೂಕು ಕ್ರೀಡಾಂಗಣ, ಜಗಳೂರು ಮೊ.ಸಂ: 7019565606. ಡಿ.30 ರಂದು ಸರ್ಕಾರಿ ಪದವಿಪೂರ್ವ ಕಾಲೇಜು ನ್ಯಾಮತಿ ಮೊ.ಸಂ: 9448977066, ಡಿ.31 ರಂದು ತಾಲ್ಲೂಕು ಕ್ರೀಡಾಂಗಣ ಹೊನ್ನಾಳಿ ದೂ.ಸಂ: 8762435467. ಡಿ.30 ಸರ್ಕಾರಿ ಪದವಿಪೂರ್ವ ಕಾಲೇಜು ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಮೊ.ಸಂ: 9741839790. ಡಿ.31 ರಂದು ತಾಲ್ಲೂಕು ಕ್ರೀಡಾಂಗಣ ಚನ್ನಗಿರಿ ಮೊ.ಸಂ: 9480796263. 2020 ರ ಜನವರಿ 02 ರಂದು ಸರ್ಕಾರಿ ಪದವಿಪೂರ್ವ ಕಾಲೇಜು ಹರಿಹರ ತಾಲ್ಲೂಕು ಕುಂಬಳೂರು ಗ್ರಾಮ ಮತ್ತು 2020 ರ ಜನವರಿ 03 ರಂದು ತಾಲ್ಲೂಕು ಕ್ರೀಡಾಂಗಣ ಹರಿಹರ ಮೊ.ಸಂ: 94486 67255.
2020 ರ ಜನವರಿ 06 ರಂದು ಶ್ರೀಹ್ಯಾಳ್ಯಾದ ವೀರಪ್ಪ ಶಿವಲಿಂಗಪ್ಪ ಸಂಯುಕ್ತ ಪದವಿಪೂರ್ವ ವಿದ್ಯಾಲಯ ದಾವಣಗೆರೆ ತಾಲ್ಲೂಕು ಅಣಜಿ ಮೊ.ಸಂ: 9448667255. 2020 ರ ಜನವರಿ 08 ರಂದು ಜಿಲ್ಲಾ ಕ್ರೀಡಾಂಗಣ ದಾವಣಗೆರೆ ದೂ.ಸಂ: 08192-237480 ನ್ನು ಸಂಪರ್ಕಿಸಬಹುದು. ಜಿಲ್ಲಾ ಮಟ್ಟದ ಆಯ್ಕೆಯು 2020 ರ ಜನವರಿ 08 ರಂದು ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ದೂ.ಸಂ: 08192-237480 ಇಲ್ಲಿ ನಡೆಯಲಿದೆ.
ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ತಾಲ್ಲೂಕಿನ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ಅಥವಾ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆ ಕಚೇರಿ ದೂ.ಸಂ: 08192-237480 ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ದಾವಣಗೆರೆ | ಮಹಿಳಾ ಸೇವಾ ಸಮಾಜ ಪ್ರೌಢ ಶಾಲೆ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆ

ಸುದ್ದಿದಿನ, ದಾವಣಗೆರೆ : 2022-23 ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಮಹಿಳಾ ಸೇವಾ ಸಮಾಜ ಪ್ರೌಢಶಾಲೆಯ ವಿದ್ಯಾರ್ಥಿ ಮಣಿಕಂಠ ಆರ್. ಅವರು 100 ಮೀ ಫ್ರೀ ಸ್ಟೈಲ್ 200ಮೀ ಫ್ರೀ ಸ್ಟೈಲ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗ ಆಡಳಿತ ಮಂಡಳಿ ಹಾಗೂ ಶಾಲಾ ಸಿಬ್ಬಂದಿವರ್ಗ ಅಭಿನಂದನ ಸಲ್ಲಿಸಿದ್ದಾರೆ.
ಜಿಲ್ಲಾಮಟ್ಟಕ್ಕೆ ಆಯ್ಕೆ
2022-23 ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ತಾಲ್ಲೂಕುಮಟ್ಟದ ಕ್ರೀಡಾಕೂಟಗಳಲ್ಲಿ ಮಹಿಳಾ ಸೇವಾ ಸಮಾಜ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ಣಿಮ ಎಂ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಕುಮಾರಿ ಬಂಗಾರಿ ಅಂಜಲಿ 3 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹಾಗೂ ಶಾಲಾ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ಭಾರತೀಯ ಒಲಂಪಿಕ್ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷೆ ಪಿ.ಟಿ. ಉಷಾ ಅವರನ್ನು ಅಭಿನಂದಿಸಿದ ರಾಜ್ಯಸಭಾ ಸಭಾಪತಿ

ಸುದ್ದಿದಿನ ಡೆಸ್ಕ್ : ಭಾರತೀಯ ಒಲಂಪಿಕ್ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ ಅವರನ್ನು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅಭಿನಂದಿಸಿದ್ದಾರೆ.
ಸದನ ಇಂದು ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿಯವರು ಮಾತನಾಡಿ, ದೇಶದಲ್ಲಿ ಮನೆಮಾತಾಗಿರುವ ಪಿ.ಟಿ. ಉಷಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಅತ್ಯುನ್ನತ ಅರ್ಜುನ ಮತ್ತು ಪದ್ಮಶ್ರೀ ಪುರಸ್ಕೃತರಾದ ಅವರು ಸದ್ಯ ಕ್ರೀಡೆಗಳನ್ನು ಮತ್ತು ಕ್ರೀಡಾ ಶಿಕ್ಷಣವನ್ನು ಉತ್ತೇಜಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
Thank you Hon, Chairman Sir and all my fellow Rajya Sabha members for the kind words, and the good wishes. I look forward to the responsibilities at hand with utmost sincerity! 🙏🏽 https://t.co/6qb1NcaCgD
— P.T. USHA (@PTUshaOfficial) December 12, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್ ಶಿಪ್ ; ಕರ್ನಾಟಕ ರಾಜ್ಯ ತಂಡಕ್ಕೆ ದಾವಣಗೆರೆ ಜಿಲ್ಲೆಯಿಂದ ಎನ್. ಜಿತೇಂದ್ರ ತೋಳಹುಣಸೆ ಆಯ್ಕೆ

ಸುದ್ದಿದಿನ,ದಾವಣಗೆರೆ : ಇದೇ ನವೆಂಬರ್ 17 ರಿಂದ 20 ರ ವರೆಗೆ ನಡೆಯಲಿರುವ ಉತ್ತರಕಾಂಡ ರಾಜ್ಯದ ಹರಿದ್ವಾರದಲ್ಲಿ 48ನೇ ಬಾಲಕರ ವಿಭಾಗದ ಜೂನಿಯರ್ ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್ ಶಿಪ್ಗೆ ಕರ್ನಾಟಕ ರಾಜ್ಯ ತಂಡಕ್ಕೆ ದಾವಣಗೆರೆ ಜಿಲ್ಲೆಯಿಂದ ಎನ್. ಜಿತೇಂದ್ರ ತೋಳಹುಣಸೆ ಇವರು ಆಯ್ಕೆಯಾಗಿರುತ್ತಾರೆ.
ಇವರಿಗೆ ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಯು ಆದ ಎಂ ನಾಗರಾಜ್ ಮತ್ತು ಚೇರ್ಮನ್ ಬಿ.ಜಿ .ಅಜಯ್ ಕುಮಾರ್ .ಪ್ರಧಾನ ಕಾರ್ಯದರ್ಶಿ ಎಂ. ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷರು ಎಚ್. ನಿಜಗುಣ, ಗೌರವಾಧ್ಯಕ್ಷರು ಹಾಗೂ ಸೈಯದ್ ನಿಸಾರ್ ತರಬೇತುದಾರರಾದ ಬೇತುರೊಡಿ ನ ಡಿ .ರಾಜು ಹಾಗೂ ಸಿ.ಎಚ್ .ಪುಟ್ಟರಾಜ. ಕಬಡ್ಡಿಯ ಕ್ರೀಡಾಪಟುಗಳು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
